Tag: Diganth

  • ನಾನು ಚೇತರಿಸಿಕೊಂಡಿದ್ದೇನೆ: ಸರ್ಜರಿ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ದಿಗಂತ್

    ನಾನು ಚೇತರಿಸಿಕೊಂಡಿದ್ದೇನೆ: ಸರ್ಜರಿ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ದಿಗಂತ್

    ಗೋವಾದಲ್ಲಿ ಸಮ್ಮರ್ ಶಾರ್ಟ್ಸ್ ಸ್ಟಂಟ್ ಮಾಡುವ ವೇಳೆ ಗಂಭೀರ ಗಾಯಗೊಂಡಿದ್ದ ನಟ ದಿಗಂತ್, ಶಸ್ತ್ರಚಿಕಿತ್ಸೆಗಾಗಿ ಗೋವಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಆಗಿದ್ದರು. ಇದೀಗ ಚೇತರಿಸಿಕೊಂಡಿರುವ ದಿಗಂತ್, ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಕಷ್ಟದ ಕಾಲದಲ್ಲಿ ಸಹಾಯ ಮಾಡಿದವರಿಗೆ ಧನ್ಯವಾದ ಹೇಳಿದ್ದಾರೆ.

    ವೀಡಿಯೋ ಮೂಲಕ ತಮ್ಮ ಚೇತರಿಕೆಯ ಬಗ್ಗೆ ತಿಳಿಸಿರುವ ದಿಗಂತ್, ಮೊನ್ನೆ ನಡೆದ ಘಟನೆಯಿಂದ ಒಂದು ಸಣ್ಣ ಸರ್ಜರಿ ಆಯ್ತು. ಈ ನಿಟ್ಟಿನಲ್ಲಿ ನಾನು ಒಂದಷ್ಟು ಜನರಿಗೆ ಧನ್ಯವಾದ ಹೇಳಬೇಕಿತ್ತು. ವೆಂಕಟ್ ನಾರಾಯಣ್ ಅವರು ಮಾಡಿದ ಸಹಾಯವನ್ನು ನಾನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. ಗೋವಾದ ಸಿಎಂ ಪ್ರಮೋದ್ ಸಾವಂತ್ ನನಗೆ ಏರ್‌ಲಿಫ್ಟ್ ಮಾಡಲು ಸಹಾಯ ಮಾಡಿದ್ರು. ಗೋವಾ ಹಾಗೂ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗಳು ನನಗೆ ಸಾಕಷ್ಟು ಸಹಾಯ ಮಾಡಿವೆ ಎಂದು ಸ್ಮರಿಸಿಕೊಂಡರು. ಇದನ್ನೂ ಓದಿ: ಹಾಸ್ಯ ನಟ ಚಿಕ್ಕಣ್ಣ ಆರೋಗ್ಯವಾಗಿದ್ದಾರೆ, ಅದು ಸುಳ್ಳು ಸುದ್ದಿ

     

    View this post on Instagram

     

    A post shared by Aindrita Ray (@aindrita_ray)

    ಎಲ್ಲದಕ್ಕೂ ಮುಖ್ಯವಾಗಿ ಡಾ. ವಿದ್ಯಾಧರ್ ಅವರು ನನಗೆ ದೇವರ ರೂಪದಲ್ಲಿ ಬಂದು ಸರ್ಜರಿ ಮಾಡಿದ್ರು. ಒಂದು ದೊಡ್ಡ ದುರ್ಘಟನೆ ನಡೆಯಬಹುದಾಗಿತ್ತು. ಆದರೆ ಒಂದು ಸಿಂಪಲ್ ಸರ್ಜರಿ ಮೂಲಕ ನನ್ನನ್ನು ಗುಣಪಡಿಸಿದ್ದಾರೆ ಎಂದು ತಿಳಿಸಿದರು.

    ನನ್ನನ್ನು ಇಷ್ಟ ಪಡುವ ಎಲ್ಲಾ ಅಭಿಮಾನಿಗಳು, ಇಂಡಸ್ಟ್ರಿ ಸ್ನೇಹಿತರು, ಹಿತೈಷಿಗಳು, ಕುಟುಂಬದವರು, ಎಲ್ಲರೂ ತಮ್ಮ ತಮ್ಮ ಪ್ರಾರ್ಥನೆಗಳ ಮೂಲಕ ನನ್ನನ್ನು ನೆನೆಸಿಕೊಂಡಿದ್ದೀರಿ. ನಿಮ್ಮೆಲ್ಲರ ಪ್ರಾರ್ಥನೆಯಿಂದಲೇ ನಾನು ಕೇವಲ 1 ವಾರದಲ್ಲಿ ಗುಣಮುಖನಾಗಿದ್ದೇನೆ. ಇನ್ನು ಕೇವಲ 2 ವಾರಗಳಲ್ಲಿ ಸಂಪೂರ್ಣ ಗುಣಮುಖನಾಗಿ, ನನ್ನ ವೃತ್ತಿಯ ಕಡೆ ಗಮನಹರಿಸುತ್ತೇನೆ ಎಂದರು. ಇದನ್ನೂ ಓದಿ: ನಟ ಶಿವರಾಜ್ ಕುಮಾರ್ ಅವರಿಗೂ ಬಿಡಲಿಲ್ಲ ಟ್ರೋಲ್ ಕಾಟ

    ಎಲ್ಲಾ ಮಾಧ್ಯಮ ಮಿತ್ರರಿಗೂ ಧನ್ಯವಾದ ತಿಳಿಸಿದ ದಿಗಂತ್, ನೀವೆಲ್ಲಾ ಕಷ್ಟಪಟ್ಟು ನನ್ನ ಅಪಘಾತದ ಸುದ್ದಿಯನ್ನು ಎಲ್ಲರಿಗೂ ತಲುಪಿಸಿದ್ದೀರಿ ಎಂದು ನೆನಪಿಸಿಕೊಂಡರು.

    Live Tv

  • ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ‘ಗಾಳಿಪಟ 2’ ತಂಡದಿಂದ ಹಾಡಿನ ಉಡುಗೊರೆ

    ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ‘ಗಾಳಿಪಟ 2’ ತಂಡದಿಂದ ಹಾಡಿನ ಉಡುಗೊರೆ

    ಜುಲೈ 2 ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ. ಇದರ ಸವಿನೆನಪಿಗಾಗಿ “ಗಾಳಿಪಟ ೨” ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಿದೆ. ಜಯಂತ ಕಾಯ್ಕಿಣಿ ಅವರು ಬರೆದಿರುವ “ನಾನಾಡದ ಮಾತೆಲ್ಲವ ಕದ್ದಾಲಿಸು” ಎಂಬ ಹಾಡನ್ನು ಸೋನು ನಿಗಮ್ ಸುಶ್ರಾವ್ಯವಾಗಿ ಹಾಡಿದ್ದಾರೆ . “ಗಾಳಿಪಟ” ಮೊದಲ ಭಾಗದ “ಮಿಂಚಾಗಿ ನೀನು ಬರಲು” ಹಾಡು ಕೂಡ ಜಯಂತ ಕಾಯ್ಕಿಣಿ, ಸೋನು ನಿಗಮ್, ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಬಂದು ಭರ್ಜರಿ ಯಶಸ್ಸು ಕಂಡಿತ್ತು. ಈಗ “ಗಾಳಿಪಟ ೨” ಚಿತ್ರದ ಈ ಹಾಡು ಕೂಡ ಅದೇ‌ ರೀತಿ ಯಶಸ್ಸು ಕಾಣಲಿದೆ.

    ನಮ್ಮ ಚಿತ್ರದ ನಾಯಕ ಗಣೇಶ್ ಅವರ ಹುಟ್ಟುಹಬ್ಬದ ಸಂದರ್ಭ. ಈ ಸುಂದರ ಕ್ಷಣಕ್ಕೆ ನಮ್ಮ ಹಾಡಿನ ಉಡುಗೊರೆ. ಜುಲೈ 2 ಗಣೇಶ್  ಹುಟ್ಟುಹಬ್ಬ. ಅಂದು ಅವರು ಊರಿನಲ್ಲಿರದ ಕಾರಣ ಈಗ ಮಾಧ್ಯಮ ಮಿತ್ರರ ಮುಂದೆ ಈ ಹಾಡು ಬಿಡುಗಡೆ ಮಾಡಿದ್ದೇವೆ. ಜುಲೈ 2 ರಂದು ಆನಂದ್ ಆಡಿಯೋ ಮೂಲಕ ಈ ಹಾಡು ಎಲ್ಲರಿಗೂ ತಲುಪಲಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದರು ಹಾಗೂ ಹಾಡಿನ  ಪದಪದದ ಅರ್ಥ ವಿವರಿಸಿ, ಹಾಡು ಬರೆದಿರುವ  ಜಯಂತ ಕಾಯ್ಕಿಣಿ ಕಾಯ್ಕಿಣಿ, ಹಾಡಿರುವ ಸೋನು ನಿಗಂ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಧನ್ಯವಾದ ಹೇಳಿದರು. ಇದನ್ನೂ ಓದಿ:ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ರಾಮ್ ಪೋತಿನೇನಿ

    ಮತ್ತೆ ಕೋವಿಡ್ ಹೆಚ್ಚುತ್ತಿರುವ ಕಾರಣ, ನಾನು ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿಲ್ಲ. ನಾನು ಅಂದು ಬೆಂಗಳೂರಿನಲ್ಲಿ ಇರುವುದಿಲ್ಲ. ಈ ಹಾಡನ್ನು ಕೇಳಿ ಮತ್ತೆ ಹದಿನೈದು ವರ್ಷಗಳ ಹಿಂದೆ ಹೋದೆ. ಅದೇ ಕಾಂಬಿನೇಷನ್ ನಲ್ಲಿ ಮತ್ತೆ ಇಂಪಾದ ಹಾಡು ಬಂದಿದೆ. ಅಷ್ಟೇ ಜನಪ್ರಿಯವಾಗಲಿದೆ ಎಂಬ ಭರವಸೆಯಿದೆ. ನನ್ನ ಹುಟ್ಟುಹಬ್ಬಕ್ಕೆ ಇದೊಂದು ವಿಶೇಷ ಉಡುಗೊರೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ಯಾವುದಕ್ಕೂ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕುದುರೆಮುಖದಲ್ಲಿ ಸುಮಾರು 200 ಜನರ ತಂಡ ಇದ್ದೆವು. ಕಲಾ ನಿರ್ದೇಶಕ‌ ಪಂಡಿತ್ ಅವರಂತೂ ಅದ್ಭುತ ಸೆಟ್ ಹಾಕಿದ್ದರು. ಯೋಗರಾಜ್ ಸರ್ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನೀರಿನಲ್ಲಿ ಐರನ್ ಬಾಕ್ಸ್ ಇಟ್ಟು ಹೊಗೆ ಬರೆಸಿದ್ದಾರೆ ಅವರು.  ಇದರ ಬಗ್ಗೆ ಕೇಳಿದಾಗ ಹುಡುಗ ಹೀಟ್ ಆಗಿರುತ್ತಾನೆ. ಇದು ಅದರ ಸಂಕೇತವೆಂದರು. ಧನು ಮಾಸ್ಟರ್ ಸುಂದರವಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ ಎಂದರು ನಾಯಕ ಗಣೇಶ್.

    ಹಾಡು ಚೆನ್ನಾಗಿದೆ. ಈ ಹಾಡಿಗೆ ಬಳಿಸಿದ ವಸ್ತುಗಳನ್ನು ನೆನಪಿಗಾಗಿ ನಮ್ಮ ಮನೆಯ ಬಳಿ ತರಿಸಿಟ್ಟುಕೊಂಡಿದ್ದೀನಿ. ಈ ಹಾಡನ್ನು ನನ್ನ ಮಗಳು ದಿನ ಕೇಳುತ್ತಿರುತ್ತಾಳೆ. ಬಿಡುಗಡೆ ಮುಂಚೆಯೇ ಈ ಹಾಡು ಗೆದ್ದಿದೆ ಎನ್ನಬಹುದು. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

    Live Tv

  • ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ

    ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ

    ಗೋವಾ ಟ್ರಿಪ್‌ಗೆ ಹೋಗಿ ಸೊಮರ್ ಸಾಲ್ಟ್‌ನಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದ ದಿಗಂತ್ ಅವರ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ. ನಿನ್ನೆ ಅವರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಅವರನ್ನು ಐಸಿಯುನಲ್ಲಿ ಇಡಲಾಗಿತ್ತು. ನಿನ್ನೆ ರಾತ್ರಿ ನಟ ದಿಗಂತ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾಜ್ ಮಾಡಿದ ಬೆನ್ನಲ್ಲೇ ನಟಿ ಐಂದ್ರಿತಾ ರೇ ಅಭಿಮಾನಿಗಳಿಗೆ, ಚಿತ್ರರಂಗದ ಸ್ನೇಹಿತರಿಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

    ಕುಟುಂಬದ ಜತೆ ಗೋವಾ ಟ್ರಿಪ್‌ಗೆ ಹೋಗಿದ್ದ ನಟ ದಿಗಂತ್ ಸೊಮರ್ ಸಾಲ್ಟ್ ಮಾಡಲು ಹೋಗಿ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದರು. ಬಳಿಕ ಏರ್‌ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೀಗ ಆರೋಗ್ಯದಲ್ಲಿ ನಟ ದಿಗಂತ್ ಸ್ಥಿರವಿರುವ ಕಾರಣ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಇದೀಗ ದಿಗಂತ್ ಆರೋಗ್ಯದ ಅಪ್‌ಡೇಟ್ ಕೊಡುವುದರ ಜತೆಗೆ ಅಭಿಮಾನಿಗಳಿಗೆ, ಹಿತೈಷಿಗಳಿಗೆ ನಟಿ ಐಂದ್ರಿತಾ ರೇ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಆರೋಗ್ಯದಲ್ಲಿ ಚೇತರಿಕೆ, ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ನಿನ್ನೆಯಷ್ಟೇ ದಿಗಂತ್ ಶಸ್ತ್ರ ಚಿಕಿತ್ಸೆ ನಡೆದಿದೆ. ಆರೋಗ್ಯದಲ್ಲಿ ಚೇತರಿಕೆಯಿದೆ ಎಂದು ಹೇಳಲು ಖುಷಿಯಾಗುತ್ತಿದೆ. ಮತ್ತಷ್ಟು ರಿಕವರಿ ಆಗುವ ಹಾದಿಯಲ್ಲಿದ್ದಾರೆ. ಈ ವೇಳೆ ನಮ್ಮ ಅಭಿಮಾನಿಗಳಿಗೆ, ಮಾಧ್ಯಮ ಸ್ನೇಹಿತರಿಗೆ ಮತ್ತು ಚಿತ್ರರಂಗದ ಹಿತೈಷಿಗಳಿಗೆ ನಿಮ್ಮ ಹಾರೈಕೆಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಇನ್ನು ದಿಗಂತ್ ಕೂಡ ಆದಷ್ಟು ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.

    Live Tv

  • ಆರೋಗ್ಯದಲ್ಲಿ ಚೇತರಿಕೆ, ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಆರೋಗ್ಯದಲ್ಲಿ ಚೇತರಿಕೆ, ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಗೋವಾ ಟ್ರಿಪ್‌ಗೆ ಹೋಗಿ ಸೊಮರ್ ಸಾಲ್ಟ್‌ನಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದ ದಿಗಂತ್ ಅವರ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ. ನಿನ್ನೆ ಅವರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು. ಇಂದು ಅವರನ್ನು ಐಸಿಯುನಲ್ಲಿ ಇಡಲಾಗಿತ್ತು. ಇದೀಗ ನಟ ದಿಗಂತ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾಜ್ ಮಾಡಲಾಗಿದೆ.

    ಕುಟುಂಬದ ಜತೆ ಗೋವಾ ಟ್ರಿಪ್‌ಗೆ ಹೋಗಿ ಸೊಮರ್ ಸಾಲ್ಟ್ ಮಾಡಿದ ಪರಿಣಾಮ ಬೆಂಗಳೂರಿನ ಮಣಿಪಾಲ್ ಆಸ್ವತ್ರೆಗೆ ದಾಖಲಿಸಿ, ನಿನ್ನೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು. ಇದೀಗ ನಟನ ಆರೋಗ್ಯ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ನಟ ದಿಗಂತ್ ಅವರ ದಿಸ್ಚಾರ್ಜ್ ಮಾಡಿದ್ದಾರೆ. ಇದನ್ನೂ ಓದಿ:ಪತಿ ದಿಗಂತ್ ನೆನೆದು ಭಾವುಕರಾದ ನಟಿ ಐಂದ್ರಿತಾ ರೇ : ಈಗ ಹೇಗಿದ್ದಾರೆ ನಟ ದಿಗಂತ್?

    ಗೋವಾದ ಕಡಲ ತೀರದಲ್ಲಿ ಸೊಮರ್ ಸಾಲ್ಟ್ ಜಂಪ್ ಮಾಡಲು ಹೋಗಿ ಸ್ಪೈಲನ್‌  ಕಾರ್ಡ್‌ಗೆ ಗಾಯ ಮಾಡಿಕೊಂಡಿದ್ರು. ಬಳಿಕ ಏರ್‌ಲಿಫ್ಟ್ ಮಾಡಿ ದಿಗಂತ್‌ರನ್ನ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮೂರು ಗಂಟೆಗಳ ಕಾಲ ಆಪರೇಷನ್ ಮಾಡಿದ್ದರು. ಆರೋಗ್ಯದಲ್ಲಿ ಸ್ಥಿರವಿರುವ ಕಾರಣ ನಟ ದಿಗಂತ್ ಅವರನ್ನು ಮನೆಯಲ್ಲಿಯೇ ಮೂರು ತಿಂಗಳು ಬೆಡ್ ರೆಸ್ಟ್‌ ಮಾಡಲು ಡಾ.ವಿಧ್ಯಾಧರ್ ತಿಳಿಸಿದ್ದಾರೆ.

    Live Tv

  • ಓಡಾಡುವಾಗ ಬೀಳೋದು ಸಹಜ, ಆತಂಕ ಬೇಡ: ದಿಗಂತ್ ತಂದೆ

    ಓಡಾಡುವಾಗ ಬೀಳೋದು ಸಹಜ, ಆತಂಕ ಬೇಡ: ದಿಗಂತ್ ತಂದೆ

    ಸ್ಯಾಂಡಲ್‌ವುಡ್ ನಟ ದಿಗಂತ್ ಮಂಚಾಲೆ ಸ್ಪೈನಲ್ ಮೈನರ್ ಇಂಜುರಿ ಆಗಿದೆ ಎಂದು ದಿಗಂತ್ ತಂದೆ ತಂದೆ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ. ಇದೀಗ ದಿಗಂತ್ ಆರೋಗ್ಯ ಸ್ಥಿತಿಯ ಕುರಿತು ಮಾಧ್ಯಮಕ್ಕೆ ದಿಗಂತ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.

    ನಟ ದಿಗಂತ್ ತಮ್ಮ ಕುಟುಂಬ ಸಮೇತ ಗೋವಾ ಪ್ರವಾಸದಲ್ಲಿದ್ದರು. ಅಂತೆಯೇ ಬೀಚ್‌ನಲ್ಲಿ ಸ್ಟಂಟ್ ಮಾಡಲು ಹೋಗಿ ಕುತ್ತಿಗೆಗೆ ಏಟು ಮಾಡಿಕೊಂಡಿದ್ದಾರೆ. ಕೂಡಲೇ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿರುವ ನಟನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಕರೆತರಲಾಗಿದೆ. ಸದ್ಯ ನಟ ಚಿಕಿತ್ಸೆ ಪಡೆಯುತ್ತಿರುವುದರ ಬಗ್ಗೆ ದಿಗಂತ್ ತಂದೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.‌ ಇದನ್ನೂ ಓದಿ: ದಿಗಂತ್‌ಗೆ ಆಗಿರೋದು ಸಣ್ಣ ಗಾಯ, ಗಾಬರಿಪಡುವ ಅಗತ್ಯವಿಲ್ಲ: ಯೋಗರಾಜ್ ಭಟ್

    ಡಾಕ್ಟರ್ ಹೇಳಿದ್ದಾರೆ ಏನೂ ಆಗಲ್ಲ ಅಂತ. ಒಂದೆರಡು ದಿನಗಳಲ್ಲಿ ಎದ್ದು ಓಡಾಡ್ತಾನೆ ಅಂತ ಹೇಳಿದ್ದಾರೆ. ಇನ್ಸಿಡೆಂಟ್ ಬಗ್ಗೆ ನಾನು ನೋಡಿಲ್ಲ. ಓಡಾಡುವಾಗ ಬೀಳೋದು ಸಹಜ. ಇದೀಗ ಚೆನ್ನಾಗಿ ಮಾತನಾಡ್ತಿದ್ದಾನೆ. ದಿಗಂತ್‌ನನ್ನು ಆಪರೇಷನ್ ಕರೆದುಕೊಂಡು ಹೋಗಿದ್ದಾರೆ. ಮೈನರ್ ಇಂಜುರಿ ಆಗಿರೋದ್ರಿಂದ ಈಗಲೇ ಆಪರೇಷನ್ ಮಾಡ್ತೀವಿ ಅಂತ ಕರೆದುಕೊಂಡು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಾರದು ಅಂತ ಈಗಲೇ ಆಪರೇಷನ್ ಮಾಡಲಿದ್ದಾರೆ. ಇನ್ನು ಡಾ.ವಿಧ್ಯಾದರ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ 3 ಗಂಟೆಗಳ ಕಾಲ ನಡೆಯಲಿದೆ ಅಂತಾ ದಿಗಂತ್ ತಂದೆ ಶ್ರೀ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.

    Live Tv

  • ದಿಗಂತ್‌ಗೆ ಆಗಿರೋದು ಸಣ್ಣ ಗಾಯ, ಗಾಬರಿಪಡುವ ಅಗತ್ಯವಿಲ್ಲ: ಯೋಗರಾಜ್ ಭಟ್

    ದಿಗಂತ್‌ಗೆ ಆಗಿರೋದು ಸಣ್ಣ ಗಾಯ, ಗಾಬರಿಪಡುವ ಅಗತ್ಯವಿಲ್ಲ: ಯೋಗರಾಜ್ ಭಟ್

    ಸ್ಯಾಂಡಲ್‌ವುಡ್ ನಟ ದಿಗಂತ್ ಮಂಚಾಲೆ ಸ್ಪೈನಲ್‌ ಮೈನರ್ ಇಂಜುರಿ ಆಗಿದೆ. ಈ ಹಿನ್ನಲೆ ನಟ ದಿಗಂತ್ ಅವರನ್ನು ನೋಡಲು ಬೆಂಗಳೂರಿನ ಆಸ್ಪತ್ರೆಗೆ ನಿರ್ದೇಶಕ ಯೋಗರಾಜ್ ಭಟ್ ಧಾವಿಸಿದ್ದಾರೆ. ಬಳಿಕ ದಿಗಂತ್ ಆರೋಗ್ಯದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ದಿಗಂತ್ ತಮ್ಮ ಕುಟುಂಬ ಸಮೇತ ಗೋವಾ ಪ್ರವಾಸದಲ್ಲಿದ್ದರು. ಅಂತೆಯೇ ಬೀಚ್‌ನಲ್ಲಿ ಸ್ಟಂಟ್ ಮಾಡಲು ಹೋಗಿ ಕುತ್ತಿಗೆಗೆ ಏಟು ಮಾಡಿಕೊಂಡಿದ್ದಾರೆ. ಕೂಡಲೇ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿರುವ ನಟನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಕರೆತಂದು ಸದ್ಯ ನಟನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ದಿಗಂತ್ ಮತ್ತು ಅವರ ಕುಟುಂಬದ ಭೇಟಿಯ ಬಳಿಕ ಮಾಧ್ಯಮದ ಜತೆ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿದ್ದಾರೆ. ಇದನ್ನೂ ಓದಿ: ಸ್ಪೈನಲ್‍ಗೆ ಮೈನರ್ ಇಂಜುರಿ ಆಗಿದ್ದು, ಆಪರೇಷನ್ ಆಗ್ಬೇಕಿದೆ: ದಿಗಂತ್ ಮಾವ

    ದಿಗಂತ್ ಮತ್ತು ಐಂದ್ರಿತಾ ತಂದೆ ಜೊತೆ ಮಾತನಾಡಿದೆ. ಅವರಿಗೆ ಯಾವುದೇ ತೊಂದರೆಯಿಲ್ಲ. ಕುತ್ತಿಗೆ ಏಟು ಮಾಡಿಕೊಂಡಿದ್ದಾನೆ. ಕಾಂಪ್ಲಿಕೇಷನ್ ಏನೂ ಇಲ್ಲ. ಗಾಬರಿ ಪಡುವ ಅವಶ್ಯಕತೆ ಇಲ್ಲ, ಇನ್ನು ಎರಡು, ಮೂರು ಗಂಟೆಯಲ್ಲಿ ದಿಗಂತ್‌ಗೆ ಆಪರೇಷನ್ ಆಗಲಿದೆ.
    ದೊಡ್ಡ ಆಘಾತಕಾರಿ ವಿಚಾರ ಏನೂ ಇಲ್ಲ. ಮಾನಸಿಕವಾಗಿ, ದೈಹಿಕವಾಗಿ ಸೈಕ್ಲಿಂಗ್ ಮಾಡಿ ಸದೃಡವಾಗಿದ್ದಾನೆ. ದಿಗಂತ್‌ಗೆ ಆಗಿರೋದು ಸಣ್ಣ ಗಾಯ ಅಷ್ಟೇ ಎಂದು ದಿಗಂತ್ ಆರೋಗ್ಯದ ಕುರಿತು ಯೋಗರಾಜ್ ಭಟ್ ಸ್ಪಷ್ಟನೆ ನೀಡಿದ್ದಾರೆ.

    Live Tv

  • ಸ್ಪೈನಲ್‍ಗೆ ಮೈನರ್ ಇಂಜುರಿ ಆಗಿದ್ದು, ಆಪರೇಷನ್ ಆಗ್ಬೇಕಿದೆ: ದಿಗಂತ್ ಮಾವ

    ಸ್ಪೈನಲ್‍ಗೆ ಮೈನರ್ ಇಂಜುರಿ ಆಗಿದ್ದು, ಆಪರೇಷನ್ ಆಗ್ಬೇಕಿದೆ: ದಿಗಂತ್ ಮಾವ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿಗಂತ್ ಮಂಚಾಲೆ ಸ್ಪೈನಲ್ ಮೈನರ್ ಇಂಜುರಿ ಆಗಿದೆ ಎಂದು ಪತ್ನಿ ಐಂದ್ರಿತಾ ರೇ ತಂದೆ ಡಾ. ರೇ ಮಾಹಿತಿ ನೀಡಿದ್ದಾರೆ.

    ಅಳಿಯನ ಆರೋಗ್ಯದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಏನಾಗಿದೆಯೋ ಗೊತ್ತಿಲ್ಲ. ನಾವೀಗ ಆಸ್ಪತ್ರೆಗೆ ಬಂದಿದ್ದೇವೆ. ಸಣ್ಣ ಪ್ರಮಾಣದಲ್ಲಿ ಪೆಟ್ಟಾಗಿದೆ ಎಂದು ತಿಳಿಸಿದರು.

    ಸೋಮವಾರ ಮಧ್ಯಾಹ್ನ 3 ಗಂಟೆಗೆ ಘಟನೆ ಸಂಭವಿಸಿದೆ. ಕತ್ತಿನ ಭಾಗಕ್ಕೆ ಪೆಟ್ಟು ಬಿದ್ದಿದೆ. ಗೋವಾದಲ್ಲಿ ಚಿಕಿತ್ಸೆ ಕೊಡಲಾಗಿದೆ. ಸ್ಲೈನಲ್ ಗೆ ಮೈನರ್ ಇಂಜುರಿ ಆಗಿದೆ. ಈಗ ಇಲ್ಲಿ ಒಂದು ಅಪರೇಷನ್ ಆಗಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದಿಗಂತ್‌ ಕುತ್ತಿಗೆಗೆ ಪೆಟ್ಟು- ಸ್ಟಂಟ್‌ ಮಾಸ್ಟರ್‌ ಹೇಳಿದ್ದೇನು?

    ನಟ ದಿಗಂತ್ ತಮ್ಮ ಕುಟುಂಬ ಸಮೇತ ಗೋವಾ ಪ್ರವಾಸದಲ್ಲಿದ್ದರು. ಅಂತೆಯೇ ಬೀಚ್‍ನಲ್ಲಿ ಸ್ಟಂಟ್ ಮಾಡಲು ಹೋಗಿ ಕುತ್ತಿಗೆಗೆ ಏಟು ಮಾಡಿಕೊಂಡಿದ್ದಾರೆ. ಕೂಡಲೇ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿರುವ ನಟನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಕರೆತರಲಾಗಿದೆ.‌ ಸದ್ಯ ನಟ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇತ್ತ ಆಸ್ಪತ್ರೆಗೆ ಕಿರುತೆರೆ ನಟರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಅಲ್ಲದೆ ಆಪ್ತ ಸಂಬಂಧಿಗಳು ಕೂಡ ಬರುತ್ತಿದ್ದಾರೆ.

    Live Tv

  • ದಿಗಂತ್‌ ಕುತ್ತಿಗೆಗೆ ಪೆಟ್ಟು- ಸ್ಟಂಟ್‌ ಮಾಸ್ಟರ್‌ ಹೇಳಿದ್ದೇನು?

    ದಿಗಂತ್‌ ಕುತ್ತಿಗೆಗೆ ಪೆಟ್ಟು- ಸ್ಟಂಟ್‌ ಮಾಸ್ಟರ್‌ ಹೇಳಿದ್ದೇನು?

    ಬೆಂಗಳೂರು: ದಿಗಂತ್‌ಗೆ ಜಿಮ್ನಾಸ್ಟಿಕ್ಸ್ ಗೊತ್ತು. ಇದರಿಂದಾಗಿ ಯಾವುದೇ ತೊಂದರೆ ಆಗಿಲ್ಲ ಎಂದು ಸ್ಟಂಟ್‌ ಮಾಸ್ಟರ್‌ ಡೆಫರೆಂಟ್‌ ಡ್ಯಾನಿ ತಿಳಿಸಿದರು.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ದಿಗಂತ್‌ ಅವರು ಬ್ಯಾಕ್‌ಲಿಫ್ಟ್‌ ಸೊಮಾರ್‌ ಸಾಲ್ಟ್‌ ಎಲ್ಲಾ ಮಾಡುತ್ತಿದ್ದರು. ಅವರ ಫಿಟ್‌ ಆಗಿ ಚೆನ್ನಾಗಿದ್ದರು. ಯಾವಾಗಲೂ ಅವರು ವ್ಯಾಯಾಮ, ಪ್ರ್ಯಾಕ್ಟಿಸ್‌ ಮಾಡುತ್ತಿದ್ದರು. ಇದರಿಂದಾಗಿ ಅಷ್ಟೇನೂ ತೊಂದರೆ ಇಲ್ಲ ಅನಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

    ಬೀಚ್‌ನಲ್ಲಿ, ಮರಳಿನಲ್ಲಿ  ಬ್ಯಾಕ್ ಸೊಮಾರ್‌ ಸಾಲ್ಟ್‌, ಫ್ರಂಟ್‌ ಸೊಮಾರ್‌ ಸಾಲ್ಟ್‌ ಮಾಡುವುದು ಕಾಮನ್‌ ಆಗಿದೆ. ಯಾವಾಗಲೂ ಮಾಡುತ್ತಿದ್ದರೆ ತೊಂದರೆ ಆಗುವುದಿಲ್ಲ. ಆದರೂ ಇದನ್ನು ತುಂಬಾ ದಿನದ ನಂತರ ಮಾಡಿರುವುದರಿಂದ ಈ ರೀತಿ ತೊಂದರೆ ಆಗಿದೆ ಅನಿಸುತ್ತದೆ. ಸೊಮಾರ್‌ ಸಾಲ್ಟ್‌ ಮಾಡುವಾಗ ಸ್ವಲ್ಪ ಎತ್ತರದಿಂದ ಮಾಡಿದರೆ ಏನೂ ಆಗುತ್ತಿರಲಿಲ್ಲ. ದಿಗಂತ ಅವರು ಸ್ವಲ್ಪ ಕೆಳಗಿನಿಂದ ಸೊಮಾರ್‌ ಸಾಲ್ಟ್‌ ಮಾಡಿದ್ದಾರೆ ಎನಿಸುತ್ತದೆ. ಅದಕ್ಕೆ ಈ ರೀತಿ ಆಗಿದೆ ಎಂದರು. ಇದನ್ನೂ ಓದಿ: ದಿಗಂತ್‌ಗೆ ಏನೂ ಆಗಿಲ್ಲ, ಆತಂಕ ಪಡಬೇಡಿ: ನಟನ ಕುಟುಂಬಸ್ಥರು

    ಸ್ಯಾಂಡಲ್‌ವುಡ್ ನಟ ದಿಗಂತ್ ಮಂಚಾಲೆ ಅವರ ಕುತ್ತಿಗೆಗೆ ಪೆಟ್ಟಾಗಿದ್ದು, ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ನಟ ತೆರಳಿದ್ದರು. ಸಮುದ್ರ ತಟದಲ್ಲಿ ಸೊಮರ್ ಸಾಲ್ಟ್ ಹೊಡೆಯುವ ವೇಳೆ ಮಿಸ್ಸಾಗಿ ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ.  ಕೂಡಲೇ ಗೋವಾದಲ್ಲಿಯೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಇದೀಗ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ಪತ್ನಿ ಐಂದ್ರಿತಾ ರೇ ಕೂಡ ದಿಗಂತ್‌ ಜೊತೆ ಇದ್ದಾರೆ.

    Live Tv

  • ಚಿತ್ರದ ಹಿನ್ನೆಲೆ ಸಂಗೀತ ಕೆಲಸದಲ್ಲಿ ನಿರತವಾದ ‘ಮಾರಿಗೋಲ್ಡ್’ ಚಿತ್ರತಂಡ

    ಚಿತ್ರದ ಹಿನ್ನೆಲೆ ಸಂಗೀತ ಕೆಲಸದಲ್ಲಿ ನಿರತವಾದ ‘ಮಾರಿಗೋಲ್ಡ್’ ಚಿತ್ರತಂಡ

    ಟ ದೂದ್ ಪೇಡಾ ದಿಗಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಮಾರಿಗೋಲ್ಡ್’ ಲಾಕ್‍ಡೌನ್ ನಿಂದ ನಿಂತಿದ್ದ ಚಿತ್ರೀಕರಣ ಅನ್‍ಲಾಕ್ ಬಳಿಕ ಆರಂಭವಾಗಿ ಈಗ ಚಿತ್ರೀಕರಣಕ್ಕೆ ಶುಭಂ ಹೇಳಿದೆ ಚಿತ್ರತಂಡ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಸಂಗೀತ ನಿರ್ದೇಶಕ ವೀರ್ ಸಮರ್ಥ್ ನಿರ್ದೇಶನದಲ್ಲಿ ಚಿತ್ರದ ಹಿನ್ನೆಲೆ ಸಂಗೀತದ ಕೆಲಸಗಳು ಭರದಿಂದ ನಡೆಯುತ್ತಿದೆ.


    ಚಿತ್ರೀಕರಣ, ಡಬ್ಬಿಂಗ್ ಕಾರ್ಯವನ್ನು ಮುಗಿಸಿರುವ ಚಿತ್ರತಂಡ ಹಿನ್ನೆಲೆ ಸಂಗೀತದ ಕೊನೆ ಹಂತದ ಕೆಲಸದಲ್ಲಿದೆ.  ಚಿತ್ರದ ಕೆಲಸಗಳು ಸರಾಗವಾಗಿ ನಡೆಯುತ್ತಿದ್ದು ಸದ್ಯದಲ್ಲೇ ಸೆನ್ಸಾರ್ ಅಂಗಳಕ್ಕೂ ಕಾಲಿಡಲಿದೆ. ಟೈಟಲ್ ನಿಂದಲೇ ಕ್ಯೂರಿಯಾಸಿಟಿ ಹುಟ್ಟು ಹಾಕಿರುವ ಚಿತ್ರ ಮಾರಿಗೋಲ್ಡ್ ಫಸ್ಟ್ ಲುಕ್ ಪೋಸ್ಟರ್ ಕೂಡ ಕುತೂಹಲ ಹುಟ್ಟು ಹಾಕುವುದರ ಜೊತೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ.

     

    ಕ್ರೈಂ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ದಿಗಂತ್ ಹೊಸ ಪಾತ್ರದಲ್ಲಿ ಮಿಂಚಿದ್ದಾರೆ. ದಿಗಂತ್ ಈವರೆಗಿನ ಸಿನಿಮಾಗಳಿಗಿಂತಲೂ ಈ ಚಿತ್ರ ವಿಭಿನ್ನವಾಗಿದ್ದು, ಡಿಫ್ರೆಂಟ್ ಲುಕ್ ಹಾಗೂ ಡಿಫ್ರೆಂಟ್ ಸ್ಟೈಲ್ ನಲ್ಲಿ ದೂದ್ ಪೇಡಾ ಇಲ್ಲಿ ಕಾಣಸಿಗಲಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸಂಗೀತ ಶೃಂಗೇರಿ ದಿಗಂತ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಾಘವೇಂದ್ರ ಎಂ.ನಾಯಕ್ ಕಥೆ, ಚಿತ್ರಕಥೆ ಬರೆದು ಮಾರಿಗೋಲ್ಡ್ ಚಿತ್ರ ನಿರ್ದೇಶನ ಮಾಡಿದ್ದಾರೆ. ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾ ಕೂಡ ಹೌದು. ಆರ್.ವಿ.ಕ್ರಿಯೇಷನ್ಸ್ ಮೂಲಕ ಸಿನಿಮಾ ನಿರ್ಮಾಣವಾಗಿದ್ದು, ತಿಮ್ಮರಾಯ, ಬದ್ರಿ, ಗುಣವಂತ, ಮಿಸ್ಟರ್ ಎಲ್.ಎಲ್.ಬಿ. ಚಿತ್ರಗಳನ್ನು ನಿರ್ದೇಶಿಸಿದ್ದ ರಘುವರ್ಧನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

    ಕೆ.ಎಸ್. ಚಂದ್ರಶೇಖರ್ ಕ್ಯಾಮೆರಾ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಯೋಗರಾಜ್ ಭಟ್, ಕವಿರಾಜ್ ಮತ್ತು ವಿಜಯ್ ಭರಮಸಾಗರ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತಲಿನ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ತಾರಾಬಳಗದಲ್ಲಿ  ಸಂಪತ್‍ಕುಮಾರ್, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ, ಬಾಲ ರಾಜ್ವಾಡಿ, ಗಣೇಶ್‍ರಾವ್, ಭಾಸ್ಕರ್ ಪಾಂಡವಪುರ, ಮನಮೋಹನ್ ರೈ, ಮಹಾಂತೇಶ್ ಹೀರೆಮಠ, ಮಿಮಿಕ್ರಿ ಗೋಪಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

  • ದಿಗಂತ್ ಹುಟ್ಟುಹಬ್ಬಕ್ಕೆ ‘ಮಾರಿಗೋಲ್ಡ್’ ಫಸ್ಟ್ ಲುಕ್ ಗಿಫ್ಟ್

    ದಿಗಂತ್ ಹುಟ್ಟುಹಬ್ಬಕ್ಕೆ ‘ಮಾರಿಗೋಲ್ಡ್’ ಫಸ್ಟ್ ಲುಕ್ ಗಿಫ್ಟ್

    ಸ್ಯಾಂಡಲ್‍ವುಡ್ ದೂದ್ ಪೇಡಾ ನಟ ದಿಗಂತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 36ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದಿಗಂತ್‍ಗೆ ಚಿತ್ರರಂಗದ ಸ್ನೇಹಿತರು ಅಭಿಮಾನಿಗಳು ಶುಭ ಕೋರಿದ್ದಾರೆ. ದಿಗ್ಗಿ ಹುಟ್ಟು ಹಬ್ಬಕ್ಕೆ ‘ಮಾರಿಗೋಲ್ಡ್’ ಚಿತ್ರತಂಡ ಫಸ್ಟ್ ಲುಕ್ ಗಿಫ್ಟ್ ನೀಡುವ ಮೂಲಕ ಹುಟ್ಟು ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

    ‘ಮಾರಿಗೋಲ್ಡ್’ ದಿಗಂತ್ ಅಭಿನಯದ ಬಹು ನಿರೀಕ್ಷಿತ ಸಿನಿಮಾವಾಗಿದ್ದು, ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಫಸ್ಟ್ ಲುಕ್ ಸಖತ್ ಇಂಟರೆಸ್ಟಿಂಗ್ ಆಗಿದ್ದು, ದಿಗಂತ್ ಲುಕ್ ಗಮನ ಸೆಳೆಯುತ್ತಿದೆ. ‘ಮಾರಿಗೋಲ್ಡ್’ ಚಿತ್ರಕ್ಕೆ ರಾಘವೇಂದ್ರ ಎಂ.ನಾಯಕ್ ಆಕ್ಷನ್ ಕಟ್ ಹೇಳಿದ್ದು, ಕಥೆ, ಚಿತ್ರಕಥೆ ಕೂಡ ಇವರದ್ದೆ. ಇದೊಂದು ಕಾಮಿಡಿ, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರವಾಗಿದ್ದು, ಸಡನ್ನಾಗಿ ಗೋಲ್ಡ್ ಬಿಸ್ಕಟ್ ಸಿಕ್ಕಿದ್ರೆ ಏನಾಗುತ್ತೆ ಎಂಬ ಎಳೆಯ ಸುತ್ತಾ ಸಿನಿಮಾ ಹೆಣೆಯಲಾಗಿದೆ.

    ದೂದ್ ಪೇಡಾಗೆ ಇಲ್ಲಿ ಜೋಡಿಯಾಗಿ ಸಂಗೀತ ಶೃಂಗೇರಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಆರ್.ವಿ.ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ‘ಮಾರಿಗೋಲ್ಡ್’ ಚಿತ್ರ ನಿರ್ಮಾಣವಾಗಿದ್ದು, ರಘುವರ್ಧನ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ. ಚಿತ್ರಕ್ಕೆ ಕೆ.ಎಸ್ ಚಂದ್ರಶೇಖರ್ ಕ್ಯಾಮೆರಾ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಸಂಪತ್ ಕುಮಾರ್, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಸೇರಿದಂತೆ ಹಲವು ಕಲಾವಿದರು ಮಾರಿಗೋಲ್ಡ್ ತಾರಾಬಳಗದಲ್ಲಿದ್ದಾರೆ.

     

    View this post on Instagram

     

    A post shared by diganthmanchale (@diganthmanchale)