Tag: diganth marriage

  • ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸಿದ್ದೇನೆ: ರಾಗಿಣಿ

    ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸಿದ್ದೇನೆ: ರಾಗಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನ ಮನಸಾರೆ ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ಅವರು ತನ್ನ ದೊಡ್ಡ ಜವಾಬ್ದಾರಿಯೊಂದನ್ನು ನಿಭಾಯಿಸಲು ದಿಗಂತ್ ಗೆ ಹಸ್ತಾಂತರಿಸಿದ್ದೇನೆ ಅಂತ ಹೇಳಿದ್ದಾರೆ.

    ದಿಗಂತ್- ಐಂದ್ರಿತಾ ಮದುವೆಯ ಬಗ್ಗೆ ಟ್ವೀಟ್ ಮಾಡಿದ ತುಪ್ಪದ ಬೆಡಗಿ, ನಾನು ಯಾವತ್ತೂ ನಿನ್ನ ಹಿಂದೆ ಇರುತ್ತೇನೆ ಬೇಬಿ. ಇಂದು ನೀನು ನಿನ್ನ ಜೀವನದ ಒಂದು ವಿಶೇಷ ಘಟ್ಟಕ್ಕೆ ಕಾಲಿಡುತ್ತಿದ್ದಿಯಾ. ಇದಕ್ಕೆ ನಾನು ತುಂಬು ಹೃದಯದಿಂದ ಶುಭ ಕೋರುತ್ತಿದ್ದೇನೆ ಅಂತ ತಿಳಿಸಿದ್ದಾರೆ.

    ಅಲ್ಲದೇ ನೀನೊಬ್ಬಳು ಉತ್ತಮ ಮಗಳು, ನಟಿ ಹಾಗೂ ಇಂದಿನಿಂದ ಅತ್ಯುತ್ತಮ ಪತ್ನಿಯಾಗಲಿದ್ದಿ. ಒಟ್ಟಿನಲ್ಲಿ ಇಂದಿನವರೆಗೆ ನಾನು ನಿನ್ನ ಬಾಡಿಗಾರ್ಡ್ ಆಗಿದ್ದೆ. ಆದ್ರೆ ಇಂದು ನನ್ನ ಜವಾಬ್ದಾರಿಯನ್ನು ದಿಗಂತ್ ಗೆ ಹಸ್ತಾಂತರಿಸುತ್ತಿದ್ದೇನೆ ಅಂತ ಬರೆದುಕೊಂಡಿದ್ದಾರೆ.

    ಸ್ಯಾಂಡಲ್‍ವುಡ್‍ನ ಹಾಟ್ ಪೇರ್‍ಗಳ ಸಾಲಿನಲ್ಲಿ ಮೊದಲಿಗೆ ಕೇಳಿ ಬರುವ ಹೆಸರು ದೂದ್‍ಪೇಡಾ ನಟ ದಿಗಂತ್ ಹಾಗೂ ಬೆಂಗಾಲಿ ಚೆಲುವೆ ಐಂದ್ರಿತಾ ರೇ. `ಮನಸಾರೆ’ ಅವರು ಇಷ್ಟಪಟ್ಟು ಲವ್ ಮಾಡಲು ಆರಂಭಿಸಿದ ಬರೋಬ್ಬರಿ 8 ವರ್ಷದ ಬಳಿಕ ಮದುವೆಯಾಗುತ್ತಿದ್ದಾರೆ.

    ನಂದಿಬೆಟ್ಟದ ತಪ್ಪಲಲ್ಲಿರುವ ಡಿಸ್ಕವರಿ ವಿಲೇಜ್‍ನಲ್ಲಿ ಮಂಗಳವಾರ ಅರಿಶಿಣ ಶಾಸ್ತ್ರ ನೆರವೇರಿದೆ. ಐಂದ್ರಿತಾ ಅವರ ಮನೆಯಂಗಳದಲ್ಲೇ ಬೆಳೆದಿರುವ ಅರಿಶಿಣದಿಂದ ಮದ್ವೆ ಶಾಸ್ತ್ರ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಎರಡೂ ಕುಟುಂಬಗಳ ಸದಸ್ಯರು ಮತ್ತು ಸ್ಟಾರ್‍ಪೇರ್‍ನ ಆಪ್ತರಷ್ಟೇ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಮಧುಮಗಳು ಐಂದ್ರಿತಾ ಮಿಂಚಿದರೆ, ನೀಲಿ ಶಾಲು, ಬಿಳಿಪಂಚೆಯಲ್ಲಿ ದಿಗಂತ್ ಕಂಗೊಳಿಸಿದ್ದರು.

    ಇಂದು ಸಂಜೆ ನಂದಿಬೆಟ್ಟದ ತಪ್ಪಲಿನಲ್ಲಿ ಐಂದ್ರಿತಾ, ದಿಗಂತ್ ಜೋಡಿ ಸಪ್ತಪದಿ ತುಳಿಯಲಿದೆ. ಕುಟುಂಬದವರು ಮತ್ತು ಚಿತ್ರರಂಗದ ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣ ಕೊಟ್ಟಿದ್ದಾರೆ. ಶೇರ್‍ಚಾಟ್ ಸಂಸ್ಥೆ ಐಂದ್ರಿತಾ, ದಿಗಂತ್ ಜೋಡಿಯ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv