Tag: Diesel theft

  • ಡೀಸೆಲ್ ಕದಿಯಲು ಬಂದವರ ಕಾಲಿಗೆ ಪೊಲೀಸರಿಂದ ಗುಂಡೇಟು

    ಡೀಸೆಲ್ ಕದಿಯಲು ಬಂದವರ ಕಾಲಿಗೆ ಪೊಲೀಸರಿಂದ ಗುಂಡೇಟು

    ಬೆಂಗಳೂರು: ಲಾರಿಗಳಲ್ಲಿ ಡೀಸೆಲ್ ಕದಿಯುತ್ತಿದ್ದ ಕಳ್ಳರ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಜಿಗಣಿ ಕೈಗಾರಿಕಾ ಪ್ರದೇಶದ ಕೆಇಬಿ ಸರ್ಕಲ್ ಬಳಿ ನಡೆದಿದೆ.

    ಭಾನುವಾರ ಬೆಳಗ್ಗಿನ ಜಾವ ಪೊಲೀಸರು ಡೀಸೆಲ್ ಕದಿಯಲು ಬಂದಿದ್ದ ಬಳ್ಳಾರಿ ಮೂಲದ ವ್ಯಕ್ತಿ ಶ್ರೀನಿವಾಸ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಮತ್ತೋರ್ವ ಸಹಚರ ಕಲಬುರಗಿ ಮೂಲದ ಚಾಲಕ ಮಲ್ಲನಗೌಡನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಗ MLA- ತಾಯಿ ಸರ್ಕಾರಿ ಶಾಲೆಯಲ್ಲಿ ಸ್ವೀಪರ್

    ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಜಿಗಣಿ ಠಾಣೆ ಇನ್ಸ್ಪೆಕ್ಟರ್ ಸುದರ್ಶನ್ ಗಸ್ತು ತಿರುಗುತ್ತಿದ್ದ ವೇಳೆ ಟಾಟಾ ಸುಮೋ ಕಾರೊಂದು ಅನುಮಾನಾಸ್ಪದವಾಗಿ ಜಿಗಣಿ ರಿಂಗ್ ರೋಡ್ ಡಿಎಲ್‌ಫ್ ರಸ್ತೆ ಬಳಿ ಕಂಡಿದೆ. ಲಾರಿಯಿಂದ ಕ್ಯಾನ್ ಮೂಲಕ ಡೀಸೆಲ್ ತೆಗೆಯುವುದನ್ನು ಇನ್ಸ್ಪೆಕ್ಟರ್ ಕಣ್ಣಾರೆ ಕಂಡಿದ್ದರು. ಪೊಲೀಸರನ್ನು ಕಂಡ ತಕ್ಷಣ ಆರೋಪಿಗಳು ಅಲ್ಲಿಂದ ಓಟಕ್ಕಿತ್ತಿದ್ದಾರೆ.

    ಟಾಟಾ ಸುಮೋ ಮೂಲಕ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದು, ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಪೊಲೀಸರು ಚೇಸ್ ಮಾಡಿದ್ದು, ಜಿಗಣಿ ಕೆಇಬಿ ಸರ್ಕಲ್ ಬಳಿ ಅಡ್ಡಗಟ್ಟಿದ್ದಾರೆ. ಚಾಲಕ ಮಲ್ಲನಗೌಡನನ್ನು ಹಿಡಿಯಲು ಹೋದ ಪೊಲೀಸ್ ಪೇದೆ ಕೊಟೇಶ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಸುದರ್ಶನ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಹಾಲಿ ಎಂಎಲ್‍ಸಿ ಅರುಣ್ ಶಹಾಪುರ ವಿರುದ್ಧ ಅಸಮಾಧಾನ ಸ್ಪೋಟ…!

    ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಟಾಟಾ ಸುಮೋ ಟೈರ್‌ಗಳಿಗೆ ಗುಂಡು ಹೊಡೆದಿದ್ದಾರೆ. ಬಳಿಕ ಕಾರಿಂದ ಇಳಿದು ಓಡಲು ಮುಂದಾದಾಗ ಕಾಲಿಗೆ ಗುಂಡೇಟು ಹೊಡೆದು ಆರೋಪಿ ಶ್ರೀನಿವಾಸ್‌ನನ್ನು ವಶಕ್ಕೆ ಪಡೆದಿರುವುದಾಗಿ ಬೆಂಗಳೂರು ಗ್ರಾಮಾಂತರ ಅಡಿಶನಲ್ ಎಸ್ಪಿ ಲಕ್ಷ್ಮಿ ಗಣೇಶ್ ತಿಳಿಸಿದ್ದಾರೆ. ಇನ್ನು ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • 1.80 ಲಕ್ಷ ಲೀಟರ್ ಡೀಸೆಲ್ ಕಳ್ಳತನ – ಮೂವರ ಬಂಧನ

    1.80 ಲಕ್ಷ ಲೀಟರ್ ಡೀಸೆಲ್ ಕಳ್ಳತನ – ಮೂವರ ಬಂಧನ

    ಜೈಪುರ: ಬರೋಬ್ಬರಿ 1.80 ಲಕ್ಷ ಲೀಟರ್ ಡೀಸೆಲ್ ಕಳ್ಳತನದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡೀಸೆಲ್ ದರೋಡೆಯಿಂದ 1.45 ಕೋಟಿ ರೂ. ನಷ್ಟವಾಗಿದೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಆರೋಪಿಗಳಾದ ಕಾಲು ಖಾನ್ (50), ವಿಜೇಂದ್ರ ಮೀನಾ (25) ಹಾಗೂ ರಾಜು ಕುಮಾವತ್ (35) ಪೆಟ್ರೋಲ್ ಪಂಪ್ ಹಾಗೂ ರೈಲ್ವೆಗಳಿಗೆ ತೈಲ ಸಾಗಿಸುವ ಟ್ರಂಕ್‍ಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದರು. ಇದರ ಬಗ್ಗೆ ಪೊಲೀಸರು ಹಲವು ಬಾರಿ ದೂರುಗಳನ್ನು ದಾಖಲಿಸಿಕೊಂಡಿದ್ದು, ಇದೀಗ ಕಳ್ಳತನದ ಗ್ಯಾಂಗ್‍ನಿಂದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಚ್ಚಾ ಬದಾಮ್ ಹಾಡಿ ಟ್ರೋಲಾದ ರಾನು ಮಂಡಲ್

    POLICE JEEP

    ಡೀಸೆಲ್ ದರೋಡೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಹೊಟೇಲ್‍ನಿಂದ ಟ್ಯಾಂಕರ್‌ವೊಂದರ ಡೀಸೆಲ್ ಕದಿಯುತ್ತಿದ್ದ ಆರೋಪಿಯೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಆರೋಪಿ ಕದ್ದಿರುವ 1,700 ಲೀಟರ್ ಡೀಸೆಲ್, ಎರಡು ವಾಹನ ಹಾಗೂ ಅನೇಕ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಯುವಕನ ದಾರುಣ ಅಂತ್ಯ!

    ಒಬ್ಬ ಆರೋಪಿಯ ಬಂಧನದ ಬಳಿಕ ಪೊಲೀಸರು ತನಿಖೆ ತೀವ್ರಗೊಳಿಸಿ ಇನ್ನಿಬ್ಬರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.