ಕಲಬುರಗಿ: ರಸ್ತೆಯ ಡಿವೈಡರ್ ಬಳಿ ನಿಂತಿದ್ದ ವೃದ್ಧೆಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ವೃದ್ಧೆ ಸಾವನ್ನಪ್ಪಿರುವ ಘಟನೆ ನಗರದ ಬಸವೇಶ್ವರ ಆಸ್ಪತ್ರೆ ಸಮೀಪದ ಖರ್ಗೆ ಪೆಟ್ರೋಲ್ ಬಂಕ್ ಸಿಗ್ನಲ್ ಬಳಿ ಸಂಭವಿಸಿದೆ.
ಕಲಬುರಗಿಯ (Kalaburagi) ಕುಷ್ಠ ರೋಗಿಗಳ ಕಾಲೋನಿಯ ಮಲ್ಲಮ್ಮ ಸಾಯಬಣ್ಣ (65) ಮೃತಪಟ್ಟ ವೃದ್ಧೆ. ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದಾಗ ಡೀಸೆಲ್ ಟ್ಯಾಂಕರ್‌ವೊಂದು ವೃದ್ಧೆಗೆ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಅಡಿ ಸಿಲುಕಿ ವೃದ್ಧೆಯ ಎಡಗಾಲಿನ ತೊಡೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ವೃದ್ಧೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಚುನಾವಣೆಗಾಗಿ ಪದೇ ಪದೇ ಕಣ್ಣೀರು ಹಾಕೋದು ಸರಿಯಲ್ಲ: ಮಹದೇವಪ್ಪ
ಕಲಬುರಗಿ ಸಂಚಾರಿ ಠಾಣೆ-2 ರಲ್ಲಿ ಈ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇರೋವರೆಗೂ ಸಿಎಂ ಬದಲಾವಣೆ ಚರ್ಚೆ ಇಲ್ಲ: ಮಹದೇವಪ್ಪ





