Tag: diesel engine

  • ಪೆಟ್ರೋಲ್ ಬಂಕ್ ದೋಖಾ – ನೀರು ಮಿಶ್ರಿತ ಡೀಸೆಲ್‍ನಿಂದ ಕಾರುಗಳು ಸೀಜ್

    ಪೆಟ್ರೋಲ್ ಬಂಕ್ ದೋಖಾ – ನೀರು ಮಿಶ್ರಿತ ಡೀಸೆಲ್‍ನಿಂದ ಕಾರುಗಳು ಸೀಜ್

    ರಾಯಚೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಕೆಲ ಬಂಕ್ ಮಾಲೀಕರು ಕಳ್ಳಾಟವಾಡಲು ಪ್ರಾರಂಭಿಸಿದ್ದಾರೆ. ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನೀರು ಮಿಶ್ರಿತ ಡೀಸೆಲ್ ಹಾಕಿದ್ದರಿಂದ ಎರಡು ಕಾರುಗಳ ಇಂಜಿನ್ ಸೀಜ್ ಆಗಿದ್ದು, ಕಾರು ಚಾಲಕರು ಪೆಟ್ರೋಲ್ ಬಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಟ್ಟಣದ ಎಸ್‍ಆರ್ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್ ನಲ್ಲಿ ನೀರು ಮಿಶ್ರಿತ ಡೀಸೆಲ್ ಕಂಡು ಬಂದಿದೆ. ಎರಡು ಕಾರುಗಳಿಗೆ ಹಾಕಿಸಿದ್ದ ಡಿಸೇಲ್ ನಲ್ಲಿ ನೀರು ಪತ್ತೆಯಾಗಿದೆ. ಮುದಗಲ್ ನಿಂದ ರಾಯಚೂರಿಗೆ ಹೋಗುವಾಗ ಎರಡು ಕಾರುಗಳ ಇಂಜಿನ್ ಮಾರ್ಗಮಧ್ಯೆ ಸೀಜ್ ಆಗಿವೆ. ಎರಡು ಕಾರುಗಳ ಇಂಜಿನ್ ಸೀಜ್ ಆಗಿದ್ದರಿಂದ ಅನುಮಾನಗೊಂಡು ಪರೀಕ್ಷಿಸಿದಾಗ ಡಿಸೇಲ್‍ನಲ್ಲಿ ನೀರು ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಇಂದಿನಿಂದ ಮಂತ್ರಾಲಯ ಭಕ್ತರ ದರ್ಶನಕ್ಕೆ ಅವಕಾಶ

    ಪೆಟ್ರೋಲ್, ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ಗ್ರಾಹಕರಿಗೆ ವಂಚನೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎರಡು ಕಾರಗಳ ಇಂಜಿನ್ ಸೀಜ್ ಆಗಿದೆ ಎಂದು ವಾಹನಗಳ ಚಾಲಕರು ಪ್ರತಿಭಟನೆ ನಡೆಸಿ, ಇಂಜಿನ್ ಸೀಜ್ ಆದ ಕಾರುಗಳನ್ನು ಸರಿಪಡಿಸಿಕೊಡುವಂತೆ ಒತ್ತಾಯಿಸಿದ್ದಾರೆ.

  • ವಿಶ್ವದಲ್ಲೇ ಫಸ್ಟ್- ಡೀಸೆಲ್ ಎಂಜಿನನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತಿಸಿ ಇತಿಹಾಸ ಸೃಷ್ಟಿಸಿದ ಭಾರತೀಯ ರೈಲ್ವೆ

    ವಿಶ್ವದಲ್ಲೇ ಫಸ್ಟ್- ಡೀಸೆಲ್ ಎಂಜಿನನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತಿಸಿ ಇತಿಹಾಸ ಸೃಷ್ಟಿಸಿದ ಭಾರತೀಯ ರೈಲ್ವೆ

    ವಾರಣಾಸಿ: ಭಾರತೀಯ ರೈಲ್ವೆಯ ಉತ್ಪಾದಕ ಘಟಕವಾದ ವಾರಣಾಸಿಯ ದಿ ಡೀಸೆಲ್ ಲೋಕೋಮೋಟೀವ್ ವಕ್ರ್ಸ್(ಡಿಎಲ್‍ಡಬ್ಲ್ಯೂ) ಡೀಸೆಲ್ ಎಂಜಿನನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

    ಮೇಕ್ ಇನ್ ಇಂಡಿಯಾ ಅಡಿ ಸ್ಥಳೀಯ ತಂತ್ರಜ್ಞಾನವನ್ನ ಬಳಸಿಕೊಂಡು ಡೀಸೆಲ್ ಎಂಜಿನನ್ನು ವಿದ್ಯುತ್ ಎಂಜಿನ್ ಆಗಿ ಪರಿವರ್ತಿಸಲಾಗಿದೆ. ಈ ರೀತಿ ಎಂಜಿನನ್ನು ಡೀಸೆಲ್ ನಿಂದ ಎಲೆಕ್ಟ್ರಿಕ್ ಟ್ರ್ಯಾಕ್ಷನ್ ಆಗಿ ಪರಿವರ್ತಿಸಿರುವುದು ವಿಶ್ವದಲ್ಲೇ ಇದೇ ಮೊದಲು ಎಂದು ಡಿಎಲ್‍ಡಬ್ಲ್ಯೂ ಅಧಿಕಾರಿಗಳು ಹೇಳಿದ್ದಾರೆ.

    ಕಡಿಮೆ ಅವಧಿಯಲ್ಲಿ ಇಂಥಹ ಸವಾಲಿನ ಸಾಧನೆಯನ್ನ ಮಾಡಲಾಗಿದೆ. 2017ರ ಡಿಸೆಂಬರ್ 22ರಂದು ಇದರ ಕೆಲಸ ಶುರು ಮಾಡಲಾಗಿತ್ತು. 2018ರ ಫೆಬ್ರವರಿ 28ರಂದು ಎಂಜಿನ್ ಯಶಸ್ವಿಯಾಗಿ ಹೊರಬಂದಿದೆ ಎಂದು ಡಿಎಲ್‍ಡಬ್ಲ್ಯೂ ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನಿತಿನ್ ಮೆಹ್ರೋತ್ರಾ ಹೇಳಿದ್ದಾರೆ. ಎಂಜಿನ್ ನ ಸುರಕ್ಷತೆಯ ಪರೀಕ್ಷೆ ಹಾಗೂ ಮತ್ತಷ್ಟು ಸುಧಾರಣೆಗಾಗಿ ಕಲಸ ಇನ್ನೂ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

    ರಿಸರ್ಚ್ ಡಿಸೈನ್ಸ್ ಅಂಡ್ ಸ್ಟಾಂಡಡ್ರ್ಸ್ ಆರ್ಗನೈಸೇಷನ್(ಆರ್‍ಡಿಎಸ್‍ಓ), ಚಿತ್ತರಂಜನ್ ಲೋಕೋಮೋಟೀವ್ ವಕ್ರ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಹೆಚ್‍ಇಎಲ್) ಹಾಗೂ ಡಿಎಲ್‍ಡಬ್ಲ್ಯೂ ನ ಎಂಜಿನಿಯರ್‍ಗಳ ತಂಡ ಡಿಎಲ್‍ಡಬ್ಲ್ಯೂ ನ ಮ್ಯಾನೇಜರ್ ರಶ್ಮಿ ಗೋಯಲ್ ಅವರ ನಾಯಕತ್ವ ಮತ್ತು ರೈಲ್ವೆ ಬೋರ್ಡ್ ಸದಸ್ಯ ಘನಶ್ಯಾಮ್ ಸಿಂಗ್ ಅವರ ಮಾರ್ಗದರ್ಶನದಡಿ ಕೆಲಸ ಮಾಡಿದ್ದಾರೆ.

    ಇಂತಹ ಮಹತ್ವದ ಕಾರ್ಯಕ್ಕಾಗಿ ಎಂಜಿನಿಯರ್‍ಗಳ ತಂಡ ಅತ್ಯಂತ ಕಠಿಣವಾದ ಟಾರ್ಗೆಟ್ ಹಾಕಿಕೊಂಡಿತ್ತು. ಅರ್ಧ ಆಯಸ್ಸು ಮುಗಿದಿರುವ ಎಂಜಿನ್‍ಗಳನ್ನೇ ಪರಿವರ್ತನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಎಂಜಿನ್ ಚಾಸಿಸ್, ಬೋಗಿಗಳು ಮತ್ತು ಟ್ರ್ಯಾಕ್ಷನ್ ಮೋಟಾರ್‍ಗಳನ್ನ ಹಾಗೇ ಉಳಿಸಿಕೊಂಡು ಎಂಜಿನ್‍ಗೆ ಒಂದು ಹೊಸ ಹೃದಯ ನೀಡುವ ಕಾರ್ಯ ಇದಾಗಿತ್ತು. ಸ್ಥಗಿತಗೊಳಿಸಲಾಗಿದ್ದ ಡಬ್ಲ್ಯೂಎಎಮ್4 ಕ್ಲಾಸ್ ಎಲೆಕ್ಟ್ರಿಕ್ ಎಂಜಿನ್ ನ ಸೈಡ್‍ವಾಲ್‍ಗಳು ಹಾಗೂ ಛಾವಣಿಯನ್ನ ಬಳಸಲು ತಂಡ ಪ್ರಯತ್ನಿಸಿತು. ಈ ಕೆಲಸಕ್ಕಾಗಿ ಜಗತ್ತಿನಲ್ಲೆಲ್ಲೂ ಪೂರ್ವನಿದರ್ಶನ ಹಾಗು ಅನುಭವ ಇಲ್ಲದ ಕಾರಣ ವಿಸ್ತøತವಾದ ಸಿಸ್ಟಮ್ ಎಂಜಿನಿಯರಿಂಗ್‍ನ ಅಗತ್ಯವಿತ್ತು. ಆರ್‍ಡಿಎಸ್‍ಓ ಉಪಕರಣಗಳ ವಿನ್ಯಾಸ ಮಾಡಿತು ಹಾಗೇ ಡಬ್ಲ್ಯೂಡಿಜಿ3ಎ ಚಾಸ್ಸಿಸ್‍ನ ಮಾರ್ಪಾಡಿಗಾಗಿ ಡಿಎಲ್‍ಡಬ್ಲ್ಯೂ ಚಿತ್ರಗಳನ್ನ ತಯಾರಿಸಿತು ಎಂದು ನಿತಿನ್ ಮೆಹ್ರೋತ್ರಾ ತಿಳಿಸಿದ್ದಾರೆ.