Tag: Dialog

  • ವೈಲೆನ್ಸ್.. ವೈಲೆನ್ಸ್ ಡೈಲಾಗ್ ಹೊಡೆದು ರಾಕಿಭಾಯ್ ನೆನೆದ ಶಿಲ್ಪಾ ಶೆಟ್ಟಿ

    ವೈಲೆನ್ಸ್.. ವೈಲೆನ್ಸ್ ಡೈಲಾಗ್ ಹೊಡೆದು ರಾಕಿಭಾಯ್ ನೆನೆದ ಶಿಲ್ಪಾ ಶೆಟ್ಟಿ

    ನ್ಯಾಷನಲ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್-2’ ಚಿತ್ರವು ವಿಶ್ವದಾದ್ಯಂತ ಭಾರೀ ಜನ ಮನ್ನಣೆ ಗಳಿಸಿದೆ. ಸಿನಿಮಾರಂಗದಲ್ಲಿಯೇ ಅಚ್ಚಳಿಯದ ಇತಿಹಾಸ ಸೃಷ್ಟಿಸುತ್ತಿರುವ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲೂ ಸಖತ್ ಸದ್ದು ಮಾಡಿದೆ. ರೀಲಿಸ್ ಆದ 2 ವಾರದಲ್ಲಿ ಅಂದಾಜು 800 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಬಾಕ್ಸ್ ಆಫೀಸ್ ವಿಮರ್ಶಕರು ವರದಿ ಮಾಡಿದ್ದಾರೆ. ಬಾಕ್ಸ್ ಆಫಿಸ್ ಅಷ್ಟೇ ಅಲ್ಲದೇ ಚಿತ್ರದಲ್ಲಿರುವ ರಾಕಿಭಾಯ್ ಡೈಲಾಗ್‍ಗಳಿಗೆ ಹಲವು ಬಾಲಿವುಡ್ ತಾರೆಯರು ಕೂಡಾ ಫಿದಾ ಆಗಿದ್ದಾರೆ.

    ಚಿತ್ರದ ಡೈಲಾಗ್‍ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದೂ, ಅದರಲ್ಲೂ ರಾಕಿಭಾಯ್ ಯಶ್ ಅವರ ವೈಲೆನ್ಸ್ ವೈಲೆನ್ಸ್.. ಡೈಲಾಗಂತೂ ಇನ್‍ಸ್ಟಾಗ್ರಾಮ್‍ನ ರಿಲ್ಸ್‌ಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಬಾಲಿವುಡ್‍ನ ಬಳಕುವ ಬಳ್ಳಿ ಶಿಲ್ಪಾ ಶೆಟ್ಟಿ ಕೂಡಾ ಕೆಜಿಎಫ್-2 ಚಿತ್ರವನ್ನು ನೋಡಿ ನಮ್ಮ ರಾಕಿಭಾಯ್ ವೈಲೆನ್ಸ್ ವೈಲೆನ್ಸ್.. ಡೈಲಾಗ್ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದಾರೆ.

    ಮುಂಬೈನ ಚಿತ್ರಮಂದಿರವೊಂದರಲ್ಲಿ ಫ್ಯಾಮಿಲಿಯೊಂದಿಗೆ ಕುಳಿತುಕೊಂಡು ಚಿತ್ರವನ್ನು ವೀಕ್ಷಿಸಿ, ಚಿತ್ರಮಂದಿರದಿಂದ ಹೊರಬರುತ್ತಿದ್ದ ಶಿಲ್ಪಾಗೆ ಕೆಜಿಎಫ್-2ರಲ್ಲಿ ನಿಮಗೆ ಬಹಳ ಇಷ್ಟವಾದ ಡೈಲಾಗ್ ಯಾವುದು ಎಂದು ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ರಾಕಿಭಾಯ್‍ನ ಸ್ಟೈಲ್‍ನಲ್ಲಿಯೇ ವೈಲೆನ್ಸ್ ವೈಲೆನ್ಸ್ ಡೈಲಾಗ್ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಸದ್ಯ ವೀಡಿಯೋ 60,000ಕ್ಕೂ ಹೆಚ್ಚು ವಿವ್ಸ್ ಪಡೆದುಕೊಂಡು ನೆಟ್ಟಿಗರ ಮನಗೆದ್ದಿದೆ. ಕನ್ನಡತಿಯ ಬಾಯಲ್ಲಿ ನಮ್ಮ ಕನ್ನಡದ ಹೆಮ್ಮೆ ಕೆಜಿಎಫ್ ಚಾಪ್ಟರ್ 2ನ ಡೈಲಾಗ್ ಕೇಳಿ ಕರ್ನಾಟಕದ ಫ್ಯಾನ್ಸ್ ಖುಷ್ ಆಗಿದ್ದಾರೆ.

     

  • ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ

    ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ

    ಮುಂಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಐಪಿಎಲ್ 2022ರ ಆವೃತ್ತಿಯಲ್ಲಿ ಅತ್ಯಂತ ಕಳಪೆ ಆಟವನ್ನು ಪ್ರದರ್ಶಿಸುತ್ತಿದೆ.

    ಹಾಲಿ ಚಾಂಪಿಯನ್ ತಂಡವು ಈಗಾಗಲೇ ಸತತ ಆರು ಸೋಲುಗಳನ್ನು ಕಂಡು ಐಪಿಎಲ್ ಪಾಯಿಂಟ್ಸ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೀಮ್ಸ್‌ಗಳು ಹರಿದಾಡುತ್ತಿದ್ದು, ರೋಹಿತ್ ಪಡೆಯು ಟ್ರೋಲ್‍ಗೆ ಗುರಿಯಾಗಿದೆ. ಇದನ್ನೂ ಓದಿ: ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ

    ಕನ್ನಡದ ಹೆಮ್ಮೆ ಕೆಜಿಎಫ್ ಚಾಪ್ಟರ್-2 ಚಿತ್ರದ ಯಶ್ ಅವರ ವೈಲೆನ್ಸ್.. ವೈಲೆನ್ಸ್.. ಎಂಬ ಜನಪ್ರಿಯ ಡೈಲಾಗ್ ಬದಲು ನೆಟ್ಟಿಗರು ಸೋಲು ಸೋಲು ಸೋಲು ಎಂದು ಬರೆದು ಮುಂಬೈ ತಂಡಕ್ಕೆ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: 2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್

    ದಾಖಲೆಯ 5 ಬಾರಿಯ ಐಪಿಎಲ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದ ಮುಂಬೈ ತಂಡವು ಈ ಬಾರಿ ಆವೃತ್ತಿಯಲ್ಲಿ ಆಡಿರುವ ಆರಕ್ಕೆ ಆರೂ ಪಂದ್ಯಗಳಲ್ಲಿ ಸೋಲುಂಡಿದೆ. ಹೀಗಾಗಿ ಕನಿಷ್ಠ ಪಕ್ಷ ಒಂದು ಪಂದ್ಯವನ್ನಾದರು ಮುಂಬೈ ತಂಡ ಗೆಲ್ಲಲಿ ಎಂದು ನೆಟ್ಟಿಗರೊಬ್ಬರು ಅಪಹಾಸ್ಯ ಮಾಡಿದ್ದಾರೆ.

    ನಾಯಕ ರೋಹಿತ್ ಶರ್ಮಾ ಅವರ ಯೋಜನೆಗಳೆಲ್ಲವೂ ವಿಫಲವಾಗಿವೆ. ಬ್ಯಾಟಿಂಗ್‍ನಲ್ಲಿ ಅತ್ಯಂತ ಕಳಪೆ ಆಟವನ್ನು ತೋರುತ್ತಿರುವ ಎಮ್‍ಐ ತಂಡವು ಬೌಲಿಂಗ್‍ನಲ್ಲೂ ಸಹ ಅಷ್ಟೇ ಕಳಪೆ ಆಟವನ್ನು ತೋರುತ್ತಿದೆ. ಇದರ ನಡುವೆಯೂ ಮುಂಬೈ ತಂಡದ ಅಭಿಮಾನಿಗಳು ತಂಡದ ಮೇಲಿನ ಅಭಿಮಾನವನ್ನು ಕಳೆದುಕೊಂಡಿಲ್ಲ.

  • ಪ್ರಿಯಾಂಕ ಎಂಟ್ರಿಯಾಗ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ಶಮಂತ್!

    ಪ್ರಿಯಾಂಕ ಎಂಟ್ರಿಯಾಗ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ಶಮಂತ್!

    ಬಿಗ್‍ಬಾಸ್ ಶೋನಲ್ಲಿ ದಿನೇ ದಿನೆ ಕಾಂಪಿಟೇಷನ್ ಹೆಚ್ಚಾಗುತ್ತಿದೆ. ಕಳೆದ ವಾರ ಬಿಗ್‍ಬಾಸ್ ಮನೆಗೆ ವೈಲ್ಡ್‍ಕಾರ್ಡ್ ಮೂಲಕ ಚಕ್ರವರ್ತಿ ಚಂದ್ರಚೂಡರವರು ಆಗಮಿಸಿದ್ದರು. ಇದೀಗ ದೊಡ್ಮನೆ ಸ್ಪರ್ಧಿಗಳಿಗೆ ಕಾಂಪಿಟೇಷನ್ ನೀಡಲು ಮತ್ತೋರ್ವ ಹೊಸ ಸ್ಪರ್ಧಿ ಎಂಟ್ರಿ ಕೊಟ್ಟಿದ್ದಾರೆ.

    ಇಷ್ಟು ದಿನ ಎಷ್ಟೇ ಟ್ರೈ ಮಾಡಿದರೂ ಒಂದು ಹುಡುಗಿಯೂ ಬೀಳದ ಶಮಂತ್ ಇನ್ನೂ ಸೈಲೆಂಟ್ ಆಗಿದ್ದರೆ ನಡೆಯುವುದಿಲ್ಲ ಎಂದು ನಿನ್ನೆ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ವಾಯ್ಸ್ ರೈಸ್ ಮಾಡಿದ್ದಾರೆ. ಹೌದು ಶಮಂತ್, ನಿನ್ನೆ ಮನೆಗೆ ಬಂದ ಪ್ರಿಯಾಂಕಗೆ ಎಲ್ಲರ ಮುಂದೆ ನಿಮ್ಮ ಊಟ ಆಯಿತಾ? ಎಂದು ಕೇಳುತ್ತಾರೆ. ಆಗ ಇಲ್ಲ ಎಂದು ಪ್ರಿಯಾಂಕ ಹೇಳಿದಾಗ, ಡಿಫರೆಂಟ್ ಅಂದರೆ ‘ಚಿಕ್ಕು ಚಿಕನ್’ ಎರಡು ಮನೆಗೆ ಬಂದಿದ್ದಾರೆ ಎಂದು ಡೈಲಾಗ್ ಹೊಡೆದಿದ್ದಾರೆ.

    ಆನ್ ದಿ ಸ್ಪಾರ್ಟ್ ಶಮಂತ್ ಹೊಡೆದ ಪಂಚಿಂಗ್ ಡೈಲಾಗ್ ಕೇಳಿ ಅಚ್ಚರಿಗೊಂಡ ಮನೆಯ ಮಂದಿ ಕಮಾನ್ ಶಮಂತ್, ಕಮಾನ್ ಶಮಂತ್ ಎಂದು ಎದ್ದು ನಿಂತು ಜೋರಾಗಿ ಚಪ್ಪಾಳೆ ಹೊಡೆಯುತ್ತಾ ಹಾಸ್ಯ ಮಾಡಿದ್ದಾರೆ.

    ನಿನ್ನೆ ಬಿಗ್‍ಬಾಸ್ ಮನೆಗೆ ಚಿಕನ್ ಹಿಡಿದುಕೊಂಡು ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕ ತಿಮ್ಮೇಶ್ ಎಂಟ್ರಿ ನೀಡಿದ್ದಾರೆ. ಮೊದಲಿಗೆ ಬಂದ ಕೂಡಲೇ, ನನ್ನ ಹೆಸರು ಪ್ರಿಯಾಂಕ ತಿಮ್ಮೇಶ್, ನಾನು ಭದ್ರಾವತಿ ಹುಡುಗಿ. ನನ್ನ ವೃತ್ತಿ ಜೀವನ ಆರಂಭವಾಗಿದ್ದು ಪ್ರೀತಿಯಿಂದ ಸಿರಿಯಲ್‍ನಿಂದ ಬಳಿಕ ನಾನು ಮೊದಲ ಬಾರಿಗೆ ಗಣಪ ಸಿನಿಮಾದಲ್ಲಿ ಅಭಿನಯಿಸಿದೆ. ನಂತರ ಪಟಾಕಿ, ಭೀಮ ಸೇನಾ ನಳ ಮಹಾರಾಜ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಶುಗರ್ ಲೇಸ್ ಹಾಗೂ ಅರ್ಜುನ್ ಗೌಡ ನನ್ನ ಮುಂದಿನ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ ಎಂದು ಮನೆಯ ಸದಸ್ಯರೊಂದಿಗೆ ತಮ್ಮ ಪರಿಚಯ ಮಾಡಿಕೊಂಡರು.

    ನಿಮ್ಮೆಲ್ಲರನ್ನು ಇಷ್ಟು ದಿನ ನಾನು ಟಿವಿಯಲ್ಲಿ ನೋಡುತ್ತಿದ್ದೆ. ಇದೀಗ ಏಕ್ಸೈಟ್ ಆಗಿದ್ದೇನೆ. ಮುಂದೆ ಏನು ಎಂಬುವುದು ನನಗೆ ಗೊತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

  • ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ: ಯಶ್ ಖಡಕ್ ಡೈಲಾಗ್

    ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ: ಯಶ್ ಖಡಕ್ ಡೈಲಾಗ್

    – ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ, ವರ್ಲ್ಡ್  ಈಸ್ ಮೈ ಟೆರಿಟರಿ

    ಬೆಂಗಳೂರು: “ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ” ಎಂದು ಯಶ್ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಖಡಕ್ ಡೈಲಾಗ್ ಹೇಳುವ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಒಂದು ದೊಡ್ಡ ಉಡುಗೊರೆ ಕೊಟ್ಟಿದ್ದಾರೆ.

    ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿದ ನಂತರ ಮಾತನಾಡಿದ ಯಶ್, ‘ಕೆಜಿಎಫ್ 2’ ಚಿತ್ರದ ಒಂದು ಡೈಲಾಗ್ ನಿಮಗೋಸ್ಕರ ಹೇಳುತ್ತೇನೆ. ಸಿನಿಮಾದಲ್ಲಿ ನೋಡಿದ್ದರೆ ಮಜಾ ಬಂದಿರೋದು. ಆದರೆ ನಿಮಗೋಸ್ಕರ ಸಣ್ಣದಾಗಿ ಹೇಳುತ್ತೇನೆ ಎಂದು ಚಿತ್ರದ ಡೈಲಾಗ್ ಹೇಳಿದ್ದಾರೆ.

    “ಏನಂದೆ ಒಂದು ಹೆಜ್ಜೆ ಇಟ್ಕೊಂಡು ಬಂದೋನು ಅಂತ ಹೇಳ್ದ. ಕರೆಕ್ಟ್, ಗಡಿಯಾರದಲ್ಲಿ ಒಂದು ಗಂಟೆಯಾಗಬೇಕು ಅಂದರೆ ದೊಡ್ಡ ಮುಳ್ಳು 60 ಹೆಜ್ಜೆ ಇಡಬೇಕು. ಆದರೆ ಚಿಕ್ಕ ಮುಳ್ಳು ಒಂದು ಹೆಜ್ಜೆ ಇಟ್ಟರೆ ಸಾಕು. ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ. ಇನ್ಮೇಲೆಯಿಂದ ಆ ಟೆರಿಟರಿ ನಂದು, ಈ ಟೆರಿಟರಿ ನಿಂದು ಅನ್ನೋದೆಲ್ಲ ಬಿಟ್ಟುಬಿಡಿ, ವರ್ಲ್ಡ್ ಈಸ್ ಮೈ ಟೆರಿಟರಿ” ಎಂದು ಸಿನಿಮಾದ ಖಡಕ್ ಡೈಲಾಗ್ ಹೇಳಿದರು. ಈ ಡೈಲಾಗ್ ಹೇಳುತ್ತಿದ್ದಂತೆ ಅಭಿಮಾನಿಗಳು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.

    ನಟ ಯಶ್ ಹುಟ್ಟುಹಬ್ಬದ ದಿನ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿತ್ತು. ಆದರೆ ಕಾರಣಾಂತರದಿಂದ ಅದು ಸಾಧ್ಯವಾಗಿಲ್ಲ. ಇದರಿಂದ ಅಭಿಮಾನಿಗಳು ನಿರಾಸೆಯಾಗಿದ್ದರು. ಹೀಗಾಗಿ ಯಶ್ ತಮ್ಮ ಅಭಿಮಾನಿಗಳು ನಿರಾಸೆಯಾಗಬಾರದೆಂದು ‘ಕೆಜಿಎಫ್ 2’ ಚಿತ್ರ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳಿಗೆ ರಾಕಿಭಾಯ್ ಬರ್ತ್ ಡೇ ಗಿಫ್ಟ್ ಕೊಟ್ಟಿದ್ದಾರೆ.

    ಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್ ಬಳಿ ನಂದಿ ಲಿಂಕ್ ಗ್ರೌಂಡ್‍ನಲ್ಲಿ ನಡೆದ ಯಶ್ ಬರ್ತ್ ಡೇಗೆ 5000 ಸಾವಿರ ಕೆ.ಜಿ ಕೇಕ್ ತಯಾರು ಮಾಡಲಾಗಿತ್ತು. ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಆಗಮಿಸಿದ ನಟ ಯಶ್ 5000 ಕೆ.ಜಿ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

  • ಸಿದ್ದರಾಮಯ್ಯರನ್ನು ಭೇಟಿಯಾದ ಹೌದು ಹುಲಿಯಾ ಖ್ಯಾತಿಯ ಪೀರಪ್ಪ

    ಸಿದ್ದರಾಮಯ್ಯರನ್ನು ಭೇಟಿಯಾದ ಹೌದು ಹುಲಿಯಾ ಖ್ಯಾತಿಯ ಪೀರಪ್ಪ

    ಬೆಂಗಳೂರು: ಹೌದು ಹುಲಿಯಾ ಡೈಲಾಗ್ ಖ್ಯಾತಿಯ ಪಕೀರಪ್ಪ (ಪೀರಪ್ಪ) ಕಟ್ಟಿಮನಿ ಹುಲಿಯಾ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಆಶೀರ್ವಾದ ಪಡೆದು ಕುಶಾಲೋಪರಿ ವಿಚಾರಿಸಿದ್ದಾರೆ.

    ಉಪಚುನಾವಣೆ ಪ್ರಚಾರದ ವೇಳೆ ಫುಲ್ ವೈರಲ್ ಆದ ಡೈಲಾಗ್ ‘ಹೌದು ಹುಲಿಯಾ’. ಕಾಗವಾಡದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಪರ ಸಿದ್ದರಾಮಯ್ಯನವರು ಪ್ರಚಾರದ ಭಾಷಣ ಮಾಡುವ ವೇಳೆ ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು ಅಂದಾಗ ವೇದಿಕೆ ಮುಂದೆ ಕುಳಿತಿದ್ದ ಪಕೀರಪ್ಪ ಕಟ್ಟಿಮನಿ ಹೌದು ಹುಲಿಯಾ ಅಂತಾ ಜೋರಾಗಿ ಕೂಗಿ ಹೇಳಿದ್ದರು.

    ಕುಡಿದ ಮತ್ತಿನಲ್ಲಿ ಹೌದು ಹುಲಿಯಾ ಎಂದು ಹೇಳಿದ್ದು ಮಾತು ರಾಜ್ಯಾದ್ಯಂತ ಫೇಮಸ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಟಿಕ್ ಟಾಕ್ ಗಳಲ್ಲಿ ಎಲ್ಲಾ ಫುಲ್ ಬಳಕೆ ಮಾಡಿಕೊಂಡು ಡಬ್ ಸ್ಮ್ಯಾಶ್ ಮಾಡಿದ್ರು. ಇದಾದ ಬಳಿಕ ಡೈಲಾಗ್ ಹೇಳಿದ ಪಕೀರಪ್ಪ ಕಟ್ಟಿಮನಿ ಕೂಡ ಫುಲ್ ಫೇಮಸ್ ಆದರು. ಇದರ ಬೆನ್ನಲ್ಲೆ ಇಂದು ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ.

    ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಬಳಿಕ ಪಕೀರಪ್ಪ ಕಟ್ಟಿಮನಿ ಭೇಟಿಯಾಗಿದ್ದಾರೆ. ಈ ವೇಳೆ ಪಕೀರಪ್ಪ ಕಟ್ಟಿಮನಿ ಸಿದ್ದರಾಮಯ್ಯನವರ ಕಾಲಿಗೆ ಮುಗಿದು ನಮಸ್ಕರಿಸಿ ನೀವೆ ನಮ್ಮ ಒಡೆಯಾ ನೀವು ಕೊಟ್ಟ ಒಂದು ರೂಪಾಯಿ ಕೆ.ಜಿ ಅಕ್ಕಿ ತಿಂದು ಇವತ್ತು ಉದ್ಧಾರ ಆಗಿದ್ದೀವಿ ಒಡೆಯ ಅಂತಾ ಸಿದ್ದರಾಮಯ್ಯರಿಗೆ ನಮಸ್ಕರಿಸಿದ್ದಾರೆ.

    ಪಕೀರಪ್ಪ ಕಟ್ಟಿಮನಿ ಭೇಟಿಯಾದ ಬಳಿಕ ಸಿದ್ದರಾಮಯ್ಯ ನವರು ಪಕೀರಪ್ಪನನ್ನ ಮಾತನಾಡಿಸಿದ್ದು. ರಾಜ್ಯಾದ್ಯಂತ ನೀನು ಫೇಮಸ್ ಆದ್ಯಾಲಪ್ಲ ಅಂತಾ ಪಕೀರಪ್ಪನನ್ನ ಸಿದ್ದರಾಮಯ್ಯ ನವರು ಕೇಳಿದ್ರು ಆಗ ಪಕೀರಪ್ಪ ಏನು ಮಾತನಾಡದೇ ಸಿದ್ದರಾಮಯ್ಯ ಮುಂದೆ ನಿಂತು ಮೌನಕ್ಕೆ ಶರಣಾಗಿ ಮುಗುಳ್ನಗೆ ಬೀರಿದ್ದಾರೆ.

    ಪಕೀರಪ್ಪ ಭೇಟಿ ಮಾಡಿದ ಬಳಿಕ ಸಿದ್ದರಾಮಯ್ಯ ನವರು ಟ್ವೀಟ್ ಮಾಡಿದ್ದು ಕಾಗವಾಡದಲ್ಲಿ ನನ್ನ ಭಾಷಣದ ವೇಳೆ ಹೌದು ಹುಲಿಯಾ ಅಂತಾ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟಿಮನಿ. ಅಷ್ಟೇ ಪ್ರೀತಿಯಿಂದ ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಇತನೇ ನಿಜವಾದ ಹುಲಿಯಾ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.