Tag: Dhruvanarayan

  • ಅಗ್ನಿಪಥ್ ಜಾರಿಯಿಂದ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತೆ: ಧೃವನಾರಾಯಣ್

    ಅಗ್ನಿಪಥ್ ಜಾರಿಯಿಂದ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತೆ: ಧೃವನಾರಾಯಣ್

    ಮಡಿಕೇರಿ: ಅಗ್ನಿಪಥ್ ಜಾರಿಯಿಂದ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತೆ. ಅಗ್ನಿಪಥ್ ಜಾರಿಗೆ ತರುವ ಮುನ್ನ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಯೋಜನೆಯ ಆಗುಹೋಗುಗಳ ಬಗ್ಗೆ ಚರ್ಚೆಯ ನಡೆಸಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಭಾರತ ಸೇನೆ ಪ್ರಪಂಚದಲ್ಲಿ ಹೆಸರುವಾಸಿಯಾದ ಸೇನಾಪಡೆಯಾಗಿದೆ. ಅಗ್ನಿಪಥ್ ಜಾರಿ ಮಾಡುವ ಬಗ್ಗೆ ಆಗುಹೋಗುಗಳ ಬಗ್ಗೆ ಸರ್ವ ಪಕ್ಷಗಳ ಜೊತೆ ಸಭೆ ನಡೆಸಿ, ಈ ಯೋಜನೆಯಿಂದ ಯಾವ ರೀತಿಯಲ್ಲಿ ಪರಿಣಾಮ ಇದೆ ಪ್ಲಸ್-ಮೈನಸ್ ಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕಿತ್ತು. ಏಕಾಏಕಿ ಈ ಒಂದು ಸ್ಕೀಮ್ ಜಾರಿಗೆ ತಂದು ದೇಶದಲ್ಲಿ ಯುವಕರು ಅಕ್ರೋಶಗೊಂಡಿದ್ದಾರೆ. ಇಡೀ ಪ್ರಪಂಚದಲ್ಲಿ ಇಂಡಿಯನ್ ಆರ್ಮಿಗೆ ಒಳ್ಳೆಯ ಹೆಸರು ಇದೆ. ಅಗ್ನಿಪಥ್ ಜಾರಿಯಿಂದ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತೆ ಎಂದು ಹೇಳಿದ್ರು. ಇದನ್ನೂ ಓದಿ: ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ: ಲಕ್ಷ್ಮೀ ಹೆಬ್ಬಾಳ್ಕರ್ 

    ಪ್ರಾಧಾನಿ ಮೋದಿ ಅವರು ಮೈಸೂರಿಗೆ ವಿಚಾರವಾಗಿ ಮಾತಾನಾಡಿದ ಅವರು, ಈ ಬಾರಿ ನಡೆದ ಎಂಎಲ್‍ಸಿ ಎಲೆಕ್ಷನ್ ನಲ್ಲಿ ಅಭ್ಯರ್ಥಿ ಸೋಲಿಸಿ ಮೋದಿಗೆ ಬಿಜೆಪಿ ಗಿಫ್ಟ್ ಕೊಟ್ಟಿದೆ. ಆ ಗಿಫ್ಟ್ ಸ್ವೀಕಾರಕ್ಕೆ ಪ್ರಧಾನಿ ಮೋದಿ ಮೈಸೂರಿಗೆ ಬರುತ್ತಿದ್ದಾರೆ. ಮೋದಿ ಬರುತ್ತಾರೆ ಅಂತ ಬಿಜೆಪಿಯವರು ಪದವೀಧರರ ಬಳಿ ಮತ ಕೇಳಿದ್ರು. ಆದರೆ ಚುನಾವಣೆಯಲ್ಲಿ ಮಧು ಜಿ ಮಾದೇಗೌಡರನ್ನ ಜನ ಗೆಲ್ಲಿಸಿದ್ದಾರೆ ಎಂದು ಹೇಳುವ ಮೂಲಕ ಮೋದಿ ಮೈಸೂರು ಪ್ರವಾಸದ ಬಗ್ಗೆ ವ್ಯಂಗ್ಯವಾಡಿದ್ರು.

    Live Tv

  • ಬಿಜೆಪಿ ಬಳಿ ಯಾವುದೇ ಅಸ್ತ್ರ ಇಲ್ಲದೆ ಮತ್ತೆ ಹಿಜಬ್ ಸಂಘರ್ಷ ಹುಟ್ಟು ಹಾಕಿದೆ: ಧ್ರುವನಾರಾಯಣ್

    ಬಿಜೆಪಿ ಬಳಿ ಯಾವುದೇ ಅಸ್ತ್ರ ಇಲ್ಲದೆ ಮತ್ತೆ ಹಿಜಬ್ ಸಂಘರ್ಷ ಹುಟ್ಟು ಹಾಕಿದೆ: ಧ್ರುವನಾರಾಯಣ್

    ಚಾಮರಾಜನಗರ: ಬಿಜೆಪಿ ಬಳಿ ಯಾವುದೇ ಅಸ್ತ್ರ ಇಲ್ಲದೆ ಮತ್ತೆ ಹಿಜಬ್ ಸಂಘರ್ಷ ಹುಟ್ಟು ಹಾಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಆರೋಪಿಸಿದರು.

    ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆ. ಜನರಲ್ಲಿ ಸಾಮರಸ್ಯ ಮೂಡಿಸುವುದು ಸರ್ಕಾರದ ಕರ್ತವ್ಯವಾಗಿದೆ. ಕಾನೂನು ಸುವ್ಯವಸ್ಥೆ ಸರಿಯಾಗಿ ಕಾಪಾಡಬೇಕು. ಧರ್ಮ-ಧರ್ಮಗಳ ನಡುವೆ ಕಂದಕ ಮೂಡಿಸಬಾರದು. ಎಂಇಎಸ್ ಪುಂಡಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪುಡಾಂಟಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕನ್ನಡಿಗರ ರಕ್ಷಣೆ ಸರ್ಕಾರದ ಜವಾಬ್ದಾರಿ. ಈ ಸರ್ಕಾರವೇನು ಮಲಗಿದಿಯಾ? ಗೃಹ ಸಚಿವರು ಏನ್ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ 

    ಕರ್ನಾಟಕದಲ್ಲಿ ಕನ್ನಡಿಗರ ರಕ್ಷಣೆ ಇಲ್ಲ ಅಂದ್ರೆ ಹೇಗೆ? ಯಾರೂ ಗಲಾಟೆ ಮಾಡ್ತಾರೋ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಐಟಿ, ಇಡಿ, ಸಿಬಿಐಗಳು ಬಿಜೆಪಿಯ ಅಂಗಸಂಸ್ಥೆಗಳಾಗಿದ್ದು, ಇವುಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಸದೆ ಬಡಿಯುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದನ್ನೆಲ್ಲ ಕಾನೂನಾತ್ಮಕವಾಗಿ ಎದುರಿಸುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಹುದ್ದೆಗೆ 2,500 ಕೋಟಿ ರೂ. ಕೊಡಬೇಕು. ಈಗಿನ ಮಂತ್ರಿಮಂಡಲದಲ್ಲಿ ಮಂತ್ರಿಯೊಬ್ಬರು 100 ಕೋಟಿ ರೂ. ಕೊಟ್ಟಿದ್ದಾರೆ. ಅಂದ್ರು ಮೊದಲು ಅವರಿಗೆ ನೋಟಿಸ್ ಕೊಡಬೇಕಿತ್ತು, ತನಿಖೆ ಮಾಡಬೇಕಿತ್ತು. ಈ ಬಗ್ಗೆ ಮಾತ್ರ ಯಾರೂ ಚಕಾರ ತೆಗೆಯುವುದಿಲ್ಲ. ಪ್ರಿಯಾಂಕಾ ಖರ್ಗೆ ಪಿಎಸ್‍ಐ ಪರೀಕ್ಷೆ ಅಕ್ರಮ ಬಯಲಿಗೆಳೆದರು ಅಂತ ಅವರಿಗೆ ನೋಟೀಸ್ ಕೊಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:  ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: ಮೃತಪಟ್ಟ 7 ಯೋಧರು ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್‍ಗೆ ಸಪೋರ್ಟ್ ಮಾಡಿದವರ ಮನೆ ಮೇಲೆ ದಾಳಿ ಮಾಡ್ತಾರೆ. ಚುನಾವಣೆಯಲ್ಲಿ ಅವರನ್ನು ಬಗ್ಗು ಬಡಿಯುವ ಕೆಲಸವಾಯ್ತು. ಬಿಜೆಪಿ, ವಿರೋಧ ಪಕ್ಷದವರನ್ನ ಗುರಿಯಾಗಿಸಿಕೊಂಡು ಈ ರೀತಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಹೀಗೆಲ್ಲ ಮಾಡಿರಲಿಲ್ಲ ಇದೊಂದು ದೊಡ್ಡ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಸಂಪೂರ್ಣ ವಿಫಲ: ಧ್ರುವನಾರಾಯಣ್

    ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಸಂಪೂರ್ಣ ವಿಫಲ: ಧ್ರುವನಾರಾಯಣ್

    ಶಿವಮೊಗ್ಗ: ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ನಿಯಂತ್ರಣ ಮಾಡಲು ಪ್ರಯತ್ನ ಮಾಡಲಿಲ್ಲ. ಮುಖ್ಯಮಂತ್ರಿ ಆದ ನಂತರ ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ; ಹಣ ಇದ್ದವರು ಮಾತ್ರ ಸಿಎಂ ಆಗ್ತಾರೆ ಅನ್ನೋದು ಇತಿಹಾಸದಲ್ಲೇ ಇಲ್ಲ – ಯತ್ನಾಳ್‍ಗೆ ಶ್ರೀರಾಮುಲು ತಿರುಗೇಟು

    ಇದೇ ವೇಳೆ ಬಸವರಾಜ್ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದರು. ಈ ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದರು. ಆದರೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಸಂಪೂರ್ಣ ವಿಫಲರಾಗಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ; ವಿಜಯಪುರ ಹೆಚ್ಚು ಕಡಿಮೆ ಪಾಕಿಸ್ತಾನ ಇದ್ದಂಗೆ ಇದೆ: ಯತ್ನಾಳ್‌

  • ಈಶ್ವರಪ್ಪ, ಮುತಾಲಿಕ್ ದೇಶದ ತಾಲಿಬಾನಿಗಳು: ಧ್ರುವನಾರಾಯಣ್

    ಈಶ್ವರಪ್ಪ, ಮುತಾಲಿಕ್ ದೇಶದ ತಾಲಿಬಾನಿಗಳು: ಧ್ರುವನಾರಾಯಣ್

    ಚಾಮರಾಜನಗರ: ಸಚಿವ ಈಶ್ವರಪ್ಪ, ಪ್ರಮೋದ್ ಮುತಾಲಿಕ್ ಇವರೆಲ್ಲರೂ ದೇಶದ ತಾಲಿಬಾನಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು. ಅವರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 326 ದೇಶದ್ರೋಹ ಪ್ರಕರಣ ದಾಖಲಾಗಿದೆ. ಸರ್ಕಾರದ ವಿರುದ್ಧ ಮಾತಾಡಿದರೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ಬಿಜೆಪಿಯವರು ಸ್ವಯಂ ಘೋಷಿತ ಹುಸಿ ದೇಶ ಭಕ್ತರು ಎಂದು ಟೀಕಿಸಿದರು. ಇದನ್ನೂ ಓದಿ: ಕಲಾಪ ಹಾಳು ಮಾಡುತ್ತಿರುವವರನ್ನು ಸದನದಿಂದ ಹೊರಹಾಕಿ: ಹೆಚ್‍ಡಿಕೆ

    ಬಿಜೆಪಿ ಅವರು ವಿಧಾನಸಭೆಯಲ್ಲಿ ನಿಮ್ಮಪ್ಪ ಎನ್ನುವ ಪದ ಉಪಯೋಗಿಸಿದ್ದಾರೆ. ಜೈಲಿಗೆ ಹೋಗಿದಿರಿ ಅಂತಿರಿ. ನಿಮ್ಮ ಪಕ್ಷದವರು ಜೈಲಿಗೆ ಹೋಗಿಲ್ವಾ? ಅಮಿತ್ ಶಾ ಎರಡು ವರ್ಷ ಜೈಲಿನಲ್ಲಿ ಇರಲಿಲ್ವಾ. ಡಿಕೆಶಿ ಒಬ್ರೇನೆ ಜೈಲಿನಲ್ಲಿದ್ರಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ಕಂಪನಿಗಳಿಗೆ ನಿರಾಣಿ ಆಹ್ವಾನ

    ಕೊಳಚೆ ಬಾಯಲ್ಲಿ ಸುಗಂಧ ಬರಲ್ಲ ದುರ್ವಾಸನೆಯೇ ಯಾವಾಗಲೂ ಬರೋದು ಎಂದು ಬಿಜೆಪಿಯನ್ನು ಕುಟುಕಿದ ಅವರು, ಈಶ್ವರಪ್ಪ ರಾಜೀನಾಮೆ ಕೊಡೋವರೆಗು ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

  • ವಿಶ್ವನಾಥ್ ಹಳ್ಳಿಹಕ್ಕಿ ಅಲ್ಲ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ – ಧ್ರುವನಾರಾಯಣ್ ವ್ಯಂಗ್ಯ

    ವಿಶ್ವನಾಥ್ ಹಳ್ಳಿಹಕ್ಕಿ ಅಲ್ಲ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ – ಧ್ರುವನಾರಾಯಣ್ ವ್ಯಂಗ್ಯ

    ಮೈಸೂರು: ಮೈತ್ರಿ ಸರ್ಕಾರದ ಪತನದ ಕುರಿತು ಎಚ್. ವಿಶ್ವನಾಥ್ ಪುಸ್ತಕ ಬರೆಯುವ ವಿವಾದಕ್ಕೆ ಮಾಜಿ ಸಂಸದ ಆರ್. ಧ್ರುವನಾರಾಯಣ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನು ಈಗಾಗಲೇ ಹೇಳಿದ್ದೇನೆ ವಿಶ್ವನಾಥ್ ಹಳ್ಳಿ ಹಕ್ಕಿಯಲ್ಲ. ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ ಎಂದು ವ್ಯಂಗ್ಯವಾಡಿದ್ದಾರೆ.

    ವಿಶ್ವನಾಥ್‍ಗೆ ಯಾವುದೇ ನೈತಿಕತೆಯಿಲ್ಲ. ಇದೊಂದು ಬ್ಲಾಕ್ ಮೇಲ್ ಮಾಡುವ ತಂತ್ರ. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನು ಕೊಟ್ಟಿತ್ತು. ಸಚಿವರನ್ನಾಗೂ ಕೂಡ ಮಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಜೆಡಿಎಸ್‍ಗೆ ಹೋಗಿದ್ದರು. ಜೆಡಿಎಸ್ ಪಕ್ಷ ಕೂಡ ಶಾಸಕರಾಗಿ ಮಾಡಿ, ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡಿತ್ತು. ಆದರೆ ಅವರಿಗೂ ಕೂಡ ಮೋಸ ಮಾಡಿ ಬಿಜೆಪಿಗೆ ಹೋದರು. ಈಗ ಬಿಜೆಪಿಯಿಂದ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಬಿಜೆಪಿಯವರಿಗೂ ಯಾವುದೇ ಸಿದ್ಧಾಂತಗಳಿಲ್ಲ. ಯಡಿಯೂರಪ್ಪರವರಿಗೆ ಉತ್ತಮ ಆಡಳಿತ ನೀಡಲು ಸುವರ್ಣ ಅವಕಾಶವಿದೆ. ಆದರೆ ಬಿಜೆಪಿ ಹೈಕಮಾಂಡ್ ಅದಕ್ಕೆ ಅವಕಾಶ ನೀಡುತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಲು ಕೂಡ ಅವರಿಗೆ ಸ್ವತಂತ್ರ ನೀಡುತ್ತಿಲ್ಲ ಎಂದರು.

  • ಧ್ರುವನಾರಾಯಣ್‍ಗಾಗಿ ಎಂಎಲ್‍ಸಿ ಸ್ಥಾನ ಬಿಟ್ಟು ಕೊಡಲು ಸಿದ್ಧ: ಧರ್ಮಸೇನಾ

    ಧ್ರುವನಾರಾಯಣ್‍ಗಾಗಿ ಎಂಎಲ್‍ಸಿ ಸ್ಥಾನ ಬಿಟ್ಟು ಕೊಡಲು ಸಿದ್ಧ: ಧರ್ಮಸೇನಾ

    ಮೈಸೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದು ಬಿಜೆಪಿ ಬಹುಮತ ಪಡೆಯುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಶುಕ್ರವಾರದಂದು ಹಾಸನದಲ್ಲಿ ಗೆಲುವು ಸಾಧಿಸಿರುವ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಇದೀಗ ಪರಿಷತ್ ಸದಸ್ಯ ಧರ್ಮಸೇನಾ ಅವರು ಚಾಮರಾಜನಗರದ ಮಾಜಿ ಸಂಸದ ಧ್ರುವನಾರಾಯಣ್ ಅವರಿಗಾಗಿ ತನ್ನ ಸ್ಥಾನವನ್ನು ಬಿಟ್ಟು ಕೊಡಲು ನಾನು ಸಿದ್ಧ ಎಂದು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧ್ರುವನಾರಾಯಣ್ ಅವರು, ಅಲ್ಪ ಮತಗಳಿಂದ ಸೋಲನ್ನ ಅನುಭವಿಸಿದ್ದಾರೆ. ಇದು ಸೋಲಲ್ಲ, ಹೋರಾಡಿ ಗೆದ್ದದ್ದು. ಧ್ರುವನಾರಾಯಣ್ ದೇಶದ ಉತ್ತಮ ಸಂಸದರು. ಧ್ರುವನಾರಾಯಣ್ ಅವರ ನಾಯಕತ್ವದ ಅವಶ್ಯಕತೆ ಇದೆ. ಇಂತಹ ವ್ಯಕ್ತಿಗಾಗಿ ನಾನು ನನ್ನ ಸ್ಥಾನ ನೀಡಲು ಸಿದ್ಧ. ಇದು ನನ್ನ ವೈಯಕ್ತಿಕವಾದ ನಿರ್ಧಾರ. ಈ ವಿಚಾರ ಇನ್ನು ಯಾರಿಗೂ ಹೇಳಿಲ್ಲ, ಆದರೆ ಈಗ ಮಾಧ್ಯಮದ ಮುಂದೆ ಹೇಳಿದ್ದೇನೆ ಎಂದು ತಿಳಿಸಿದರು.

    ನನ್ನ ಅವಶ್ಯಕತೆ ಇರಬಹುದು, ಆದರೆ ಅದಕ್ಕಿಂತ ಹೆಚ್ಚು ಧ್ರುವನಾರಾಯಣ್ ಅವರ ಅವಶ್ಯಕತೆಯಿದೆ. ನನ್ನ ಹುದ್ದೆ ಕೂಡ, ಮೈಸೂರು ಚಾಮರಾಜನಗರದ ಜನ ಆರಿಸುವಂತದ್ದು. ಇದು ಎರಡು ಜಿಲ್ಲೆಗಳ ಜನರಿಂದ ಆಯ್ಕೆಯಾಗುವಂತ ದೊಡ್ಡ ಸ್ಥಾನ. ಈ ವಿಚಾರದಲ್ಲಿ ಯಾವುದೇ ದುರುದ್ದೇಶ ಇಲ್ಲ. ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಲು ಧ್ರುವನಾರಾಯಣ್ ತರಹದ ನಾಯಕರು ಬೇಕು. ಸಂಕಷ್ಟದ ಸಮಯದಲ್ಲಿ ನಾನು ನೆರವಾಗಬೇಕೆಂದು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

    ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ 5,68,537 ಮತಗಳನ್ನು ಪಡೆದು 1,817 ಮತಗಳ ಅಂತರದಲ್ಲಿ ಧ್ರುವನಾರಾಯಣ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆರ್. ಧ್ರುವನಾರಾಯಣ್ 5,66,720 ಮತಗಳನ್ನು ಗಳಿಸಿದ್ದರೆ, ಬಿಎಸ್‍ಪಿ ಅಭ್ಯರ್ಥಿ ಡಾ.ಶಿವಕುಮಾರ್ 87,208 ಮತಗಳನ್ನು ಪಡೆದಿದ್ದಾರೆ.

  • ಚಾಮರಾಜನಗರ ಅಖಾಡದ ವಿಶೇಷತೆ ಏನು?

    ಚಾಮರಾಜನಗರ ಅಖಾಡದ ವಿಶೇಷತೆ ಏನು?

    – ಧ್ರುವನಾರಾಯಣ, ಶ್ರೀನಿವಾಸ್ ಪ್ರಸಾದ್ ಪ್ಲಸ್, ಮೈನಸ್ ಏನು?

    ಚಾಮರಾಜನಗರ: ಗುರು-ಶಿಷ್ಯರ ಯುದ್ಧ ನೆಲ ಚಾಮರಾಜನಗರ. ಗುರು ಅಲ್ಲ ಎಂದು ಧ್ರುವನಾರಾಯಣ್ ಅಖಾಡಕ್ಕೆ ಇಳಿದಿದ್ದಾರೆ. ಆದ್ರೆ ಶ್ರೀನಿವಾಸ್ ಪ್ರಸಾದ್ ಹಳೆಯ ರಾಜಕೀಯ ನೆಲ. 5 ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ನಾಲ್ಕು ಮೀಸಲು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವುದು ಈ ಕ್ಷೇತ್ರದ ವಿಶೇಷ.

    ಕಾಂಗ್ರೆಸ್ ನ ಆರ್.ಧ್ರುವನಾರಾಯಣ್ ಅವರು 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ಒಂದು ಮತದ ಅಂತರದಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಅಂದು ಸೋತಿದ್ದ ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ 2009 ಹಾಗು 2014ರ ಲೋಕಸಭಾ ಚುನಾವಣೆಗಳಲ್ಲೂ ಪರಸ್ಪರ ಎದುರಾಳಿಗಳಾಗಿದ್ರು. ಧ್ರುವನಾರಾಯಣ್ ಗೆಲುವು ಸಾಧಿಸಿದ್ರು. ಆದ್ರೆ ಅದೇ ಎ.ಆರ್.ಕೃಷ್ಣಮೂರ್ತಿ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

    ಚಾಮರಾಜನಗರ ಕ್ಷೇತ್ರದಲ್ಲಿ ಒಟ್ಟು 16,67,044 ಮತದಾರರಿದ್ದಾರೆ. ಇದರಲ್ಲಿ 8,34,392 ಮಂದಿ ಪುರುಷರಿದ್ದು, 8,32,541 ಮಹಿಳಾ ಮತದಾರರಿದ್ದಾರೆ.

    ಜಾತಿವಾರು ಪ್ರಾಬಲ್ಯ:
    ಜಾತಿವಾರು ಪ್ರಾಬಲ್ಯ ನೋಡೋದಾದ್ರೆ ಸುಮಾರು 4 ಲಕ್ಷದಷ್ಟು ಎಸ್ ಸಿ ಸಮುದಾಯದವರು ಈ ಕ್ಷೇತ್ರದಲ್ಲಿದ್ದಾರೆ. 3.75 ಲಕ್ಷ ಮಂದಿ ಲಿಂಗಾಯಿತರು, 2 ಲಕ್ಷದಷ್ಟು ಎಸ್‍ಟಿ, 1.50 ಲಕ್ಷ ಮಂದಿ ಉಪ್ಪಾರ, 1.25 ಲಕ್ಷ ಒಕ್ಕಲಿಗ, 90 ಸಾವಿರ ಕುರುಬರು, 70 ಸಾವಿರ ಮುಸ್ಲಿಮರು ಹಾಗೂ ಇತರೆ ಸಮುದಾಯದವರು ಸುಮಾರು 2.5 ಲಕ್ಷ ಮಂದಿ ಮತದಾರರು ಇದ್ದಾರೆ.

    2014ರ ಫಲಿತಾಂಶ:
    2014ರ ಚುನಾವಣೆಯಲ್ಲಿ 11,33,029 (72.83%) ಒಟ್ಟು ಮತಗಳು ಚಲಾವಣೆಯಾಗಿವೆ. ಇದರಲ್ಲಿ ಕಾಂಗ್ರೆಸ್‍ನ ಆರ್.ಧ್ರುವನಾರಾಯಣ್ 5,67,782(50.10%) ರಷ್ಟು ಮತಗಳು ಬಿದ್ದರೆ, ಬಿಜೆಪಿಯ ಎ.ಆರ್.ಕೃಷ್ಣಮೂರ್ತಿಯವರಿಗೆ 4,26,600 (37.64%) ರಷ್ಟು ಮತಗಳು ಬಿದ್ದಿತ್ತು. ಹಾಗೂ ಜೆಡಿಎಸ್ ನ ಎಂ.ಶಿವಣ್ಣ ಅವರಿಗೆ 58,760 (05.18%) ಮತಗಳು ಬಿದ್ದಿತ್ತು. ಒಟ್ಟಿನಲ್ಲಿ 2014 ರ ಚುನಾವಣೆಯಲ್ಲಿ ಧ್ರುವನಾರಾಯಣ್ ಅವರು 1,41,182 (12.30%) ಅಂತರದಲ್ಲಿ ಜಯದ ಮಾಲೆ ತಮ್ಮದಾಗಿಸಿಕೊಂಡಿದ್ದರು.

    ಲೋಕಸಭಾ ಕ್ಷೇತ್ರ ವ್ಯಾಪ್ತಿ:
    8 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕಾಂಗ್ರೆಸ್, 2 ಬಿಜೆಪಿ, 1 ಜೆಡಿಎಸ್, 1 ಬಿಎಸ್‍ಪಿ ಶಾಸಕರನ್ನು ಹೊಂದಿದ್ದು, ಚಾಮರಾಜನಗರ – ಪುಟ್ಟರಂಗಶೆಟ್ಟಿ(ಕಾಂಗ್ರೆಸ್), ಹೆಚ್.ಡಿ.ಕೋಟೆ – ಅನಿಲ್ ಚಿಕ್ಕಮಾದು(ಕಾಂಗ್ರೆಸ್), ವರುಣಾ-ಡಾ.ಯತೀಂದ್ರ(ಕಾಂಗ್ರೆಸ್), ಹನೂರು – ನರೇಂದ್ರ(ಕಾಂಗ್ರೆಸ್), ಗುಂಡ್ಲುಪೇಟೆ – ನಿರಂಜನ್ (ಬಿಜೆಪಿ), ನಂಜನಗೂಡು – ಹರ್ಷವರ್ಧನ್(ಬಿಜೆಪಿ), ಟಿ. ನರಸೀಪುರ – ಅಶ್ವಿನ್ ಕುಮಾರ್(ಜೆಡಿಎಸ್), ಕೊಳ್ಳೇಗಾಲ- ಎನ್.ಮಹೇಶ್ (ಬಿಎಸ್‍ಪಿ).

    ಪ್ರಮುಖ ಅಭ್ಯರ್ಥಿಗಳು:
    ಧ್ರುವನಾರಾಯಣ- ಕಾಂಗ್ರೆಸ್
    ಶ್ರೀನಿವಾಸಪ್ರಸಾದ್- ಬಿಜೆಪಿ

    > ಧ್ರುವನಾರಾಯಣ
    ಪ್ಲಸ್ ಪಾಯಿಂಟ್:
    ಕ್ಷೇತ್ರದ ಹೆದ್ದಾರಿಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ತಂದಿರೋದು ಹಾಗೂ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರ ಬಲ ಇರುವುದರಿಂದ ಈ ಬಾರಿ ಧ್ರುವನಾರಾಯಣ ಗೆಲುವಿನ ಪತಾಕೆ ಹಾರಿಸುವ ಸಾಧ್ಯಗಳಿವೆ. ಅಲ್ಲದೆ 5 ವರ್ಷದಲ್ಲಿ ಕ್ಷೇತ್ರದ ಜತೆ ನಿರಂತರ ಸಂಪರ್ಕ ಸಾಧಿಸಿರೋದು ಕೂಡ ಇವರಿಗೆ ಪ್ಲಸ್ ಆಗೋ ಸಾಧ್ಯತೆ ಹೆಚ್ಚಿದೆ. ಇಷ್ಟು ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿನ ಮೇಲೆ ಅಹಿಂದ ವೋಟು ಬೀಳುವ ಸಾದ್ಯತೆಗಳು ಕೂಡ ದಟ್ಟವಾಗಿದೆ.

    ಮೈನಸ್ ಪಾಯಿಂಟ್:
    ಕ್ಷೇತ್ರದ ಕೆಲವು ಕಡೆ ಆಡಳಿತ ವಿರೋಧಿ ಅಲೆ ಇರುವುದು. ಸ್ಥಳೀಯ ಮಟ್ಟದಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲ ಫೈಟ್ ಇರುವುದು ಹಾಗೂ ಕೊಳ್ಳೇಗಾಲದಲ್ಲಿ ಬಿಎಸ್‍ಪಿ ಹೆಚ್ಚು ಪ್ರಬಲ ಆಗಿರೋದರಿಂದ ಧ್ರುವನಾರಾಯಣ ಅವರಿಗೆ ಕೆಲವೊಂದು ಅಹಿಂದ ಮತ ಸಿಗದೇ ಇರಬಹುದಾದ ಸಾಧ್ಯಗಳು ಕೂಡ ಇವೆ.

    > ಶ್ರೀನಿವಾಸ್ ಪ್ರಸಾದ್
    ಪ್ಲಸ್ ಪಾಯಿಂಟ್:
    ಕ್ಷೇತ್ರದ ಬಗ್ಗೆ ಇಂಚಿಂಚೂ ಸೋಲು-ಗೆಲುವಿನ ಜಾಡು ಗೊತ್ತಿರುವುದು. ಪ್ರಧಾನಿ ನರೇಂದ್ರ ಮೋದಿ ಅಲೆ ಈ ಕ್ಷೇತ್ರದಲ್ಲೂ ವ್ಯಾಪಿಸಿರೋದು. ಹಾಗೂ ಈ ಬಾರಿ ಹಲವು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡಿರೋದು ಶ್ರೀನಿವಾಸ್ ಪ್ರಸಾದ್ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ಲಸ್ ಆಗುವ ಸಾಧ್ಯತೆಗಳಿವೆ.

    ಮೈನಸ್ ಪಾಯಿಂಟ್:
    ವಯಸ್ಸಿನ ಕಾರಣದಿಂದಾಗಿ ಹೆಚ್ಚು ಕಡೆ ಪ್ರಚಾರ ಸಾಧ್ಯವಾಗದಿರೋದು. ಕಡೇ ಕ್ಷಣದಲ್ಲಿ ಸ್ಪರ್ಧೆ ಮಾಡಲು ಒಪ್ಪಿಗೆ ಸೂಚಿಸಿದ್ದು ಮತ್ತು ಮೈತ್ರಿ ಪಕ್ಷಗಳ ಶಾಸಕರ ಬಲ ಹೆಚ್ಚಾಗಿರೋದು ಮೈನಸ್ ಅಂಶಗಳಾಗಿದೆ.

  • ನಾನು ಇಲ್ಲ ಅಂದಿದ್ರೆ ಧೃವನಾರಾಯಣ್ ಎಂಎಲ್‍ಎ ಕೂಡ ಆಗ್ತಿರಲಿಲ್ಲ: ಶ್ರೀನಿವಾಸ್ ಪ್ರಸಾದ್

    ನಾನು ಇಲ್ಲ ಅಂದಿದ್ರೆ ಧೃವನಾರಾಯಣ್ ಎಂಎಲ್‍ಎ ಕೂಡ ಆಗ್ತಿರಲಿಲ್ಲ: ಶ್ರೀನಿವಾಸ್ ಪ್ರಸಾದ್

    ಚಾಮರಾಜನಗರ: 2008ರಲ್ಲಿ ಕೊಳ್ಳೆಗಾಲದಿಂದ ನಾನೇ ಟಿಕೆಟ್ ಕೊಡಿಸಿದ್ದನ್ನು ಧೃವನಾರಾಯಣ್ ಮರೆತಿದ್ದು, ಮೊದಲ ದಿನಗಳನ್ನು ನೆನಪು ಮಾಡಿಕೊಳ್ಳಬೇಕು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಚುನಾವಣೆಯಲ್ಲಿ ಎಲ್ಲಾ ನನ್ನ ಕೈಯಲ್ಲಿ ಇತ್ತು. ಧೃವನಾರಾಯಣ್ ದಿನ ಬೆಳಗ್ಗೆ ಗೋಗರೆದು ನನ್ನ ಕಾಲು ಹಿಡಿಯಲು ಬರುತ್ತಿದ್ದರು. ನಾನು ಇಲ್ಲ ಅಂತ ಅಂದಿದ್ದರೆ ಅವರು ಪಾರ್ಲಿಮೆಂಟ್ ಅಲ್ಲ, ಶಾಸಕ ಸಹ ಆಗುತ್ತಿರಲಿಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ನನಗೆ ಚುನಾವಣೆಗೆ ನಿಲ್ಲು ಅಂತ ಹೇಳಿದ್ದರು. ಆಗ ನಾನು ಧೃವನಾರಾಯಣ್‍ಗೆ ಟಿಕೆಟ್ ಕೊಡಿಸಿದೆ. ಅದನ್ನೆಲ್ಲಾ ಅವರು ನೆನೆದುಕೊಳ್ಳಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ:ಶ್ರೀನಿವಾಸ್ ಪ್ರಸಾದ್ ನನ್ನ ಗುರುವೇ ಅಲ್ಲ – ಗುರು ವಿರುದ್ಧವೇ ತಿರುಗಿಬಿದ್ದ ಧೃವನಾರಾಯಣ್

    ಸಂತೇಮರಹಳ್ಳಿ ಕ್ಷೇತ್ರ ಕೊಳ್ಳೆಗಾಲಕ್ಕೆ ಸೇರ್ಪಡೆಯಾದಾಗ ಧೃವನಾರಾಯಣ್ ಎಲ್ಲಿಂದ ಸ್ಪರ್ಧೆ ಮಾಡಬೇಕೆಂಬ ಗೊಂದಲದಲ್ಲಿದ್ದರು. ಅಂದು ಕೊಳ್ಳೆಗಾಲದಲ್ಲಿ ಜಿ.ಎನ್.ನಂಜುಡಸ್ವಾಮಿ ಪ್ರಬಲ ಕಾಂಗ್ರೆಸ್ ಮುಖಂಡರಾಗಿದ್ದರೂ, ಧ್ರುವನಾರಾಯಣ್ ಅವರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದರ ಪರಿಣಾಮ ಟಿಕೆಟ್ ಸಿಕ್ಕಿತ್ತು. ನಮ್ಮ ಸಹಾಯವನ್ನು ನೆನದು ಧೃವನಾರಾಯಣ್ ಜವಬ್ದಾರಿಯುತವಾಗಿ ಮಾತನಾಡಬೇಕು ಎಂದು ಶ್ರೀನಿವಾಸ್ ಪ್ರಸಾದ್ ಆಕ್ರೋಶ ಹೊರಹಾಕಿದರು.

    ಧೃವನಾರಾಯಣ್ ಹೇಳಿದ್ದೇನು?:
    ನಾನು ಮೊದಲು ಶಾಸಕನಾದಾಗ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ಸಿನಲ್ಲಿ ಇರಲಿಲ್ಲ. ನಾನು ಸಂತೇಮರಹಳ್ಳಿ ಕ್ಷೇತ್ರದಲ್ಲಿ ಗೆದ್ದಾಗ ಅವರು ಜೆಡಿಎಸ್‍ನಲ್ಲಿ ಇದ್ದರು. ನನ್ನನ್ನು ರಾಜಕೀಯವಾಗಿ ರಾಜಶೇಖರಮೂರ್ತಿ ಅವರು ಬೆಳೆಸಿದ್ದಾರೆ. ನಾನು ಮೊದಲ ಬಾರಿ ಗೆದ್ದಾಗ ಇಡೀ ಜಿಲ್ಲೆಯಲ್ಲಿ ನಾನು ಒಬ್ಬನೇ ಕಾಂಗ್ರೆಸ್ ಶಾಸಕನಾಗಿದ್ದೆ. ನಾನು ಗೆದ್ದಾಗ ಅವರು ಕಾಂಗ್ರೆಸ್ಸಿನಲ್ಲಿ ಇರಲೇ ಇಲ್ಲ. ಪ್ರಸಾದ್ ಅವರು 2004 ಆದ ಮೇಲೆ ಕಾಂಗ್ರೆಸ್ಸಿಗೆ ಬಂದಿದ್ದಾರೆ ಎಂದು ಧೃವನಾರಯಣ್ ನೇರವಾಗಿ ಶ್ರೀನಿವಾಸ್ ಪ್ರಸಾದ್ ನನ್ನ ಗುರುವಲ್ಲ ಎಂದು ಹೇಳಿದ್ದರು.

    2014ರ ಫಲಿತಾಂಶ:
    2014ರಲ್ಲಿ ಚಾಮರಾಜನಗರ (ಎಸ್‍ಸಿ) ಲೋಕಸಭೆ ಕ್ಷೇತ್ರದಿಂದ ಧೃವನಾರಾಯಣ್ ಅವರು ಕಾಂಗ್ರೆಸ್‍ನಿಂದ ಸ್ಪರ್ಧಿಸಿ 5,67,782 ಮತಗಳನ್ನು ಪಡೆದು ಜಯಮಾಲೆ ಧರಿಸಿದ್ದರು. ಹಾಗೆಯೇ ಇವರ ವಿರುದ್ಧ ಬಿಜೆಪಿಯಿಂದ ಎ.ಆರ್.ಕೃಷ್ಣಮೂರ್ತಿ ಅವರು ಸ್ಪರ್ಧಿಸಿ 4,26,600 ಮತಗಳನ್ನು ಪಡೆದಿದ್ದರು. ಈ ವೇಳೆ ಎ.ಆರ್.ಕೃಷ್ಣಮೂರ್ತಿ ವಿರುದ್ಧ 1,41,182 ಮತಗಳ ಅಂತರದಲ್ಲಿ 12.60% ಮಾರ್ಜಿನ್‍ನಲ್ಲಿ ಧೃವನಾರಾಯಣ್ ಗೆಲುವನ್ನು ಸಾಧಿಸಿದ್ದರು.

    ಈ ಬಾರಿ ಚಾಮರಾಜನಗರ (ಎಸ್‍ಸಿ) ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಯಾಗಿ ಶ್ರೀನಿವಾಸ್ ಪ್ರಸಾದ್ ಅಭ್ಯರ್ಥಿಯಾಗಿದ್ದಾರೆ. ಅಲ್ಲದೆ ಅವರ ವಿರುದ್ಧವಾಗಿ ಕಾಂಗ್ರೆಸ್ಸಿನಿಂದ ಧೃವನಾರಾಯಣ್ ಕಣಕ್ಕಿಳಿದಿದ್ದಾರೆ.