Tag: Dhruvan

  • ಡಾ.ರಾಜ್ ಸಂಬಂಧಿ ಧ್ರುವನ್ ತೀವ್ರ ಅಪಘಾತ : ಶಿವರಾಜ್ ಕುಮಾರ್ ಹಾಗೂ ಮತ್ತಿತರರು ಆಸ್ಪತ್ರೆಗೆ ಭೇಟಿ

    ಡಾ.ರಾಜ್ ಸಂಬಂಧಿ ಧ್ರುವನ್ ತೀವ್ರ ಅಪಘಾತ : ಶಿವರಾಜ್ ಕುಮಾರ್ ಹಾಗೂ ಮತ್ತಿತರರು ಆಸ್ಪತ್ರೆಗೆ ಭೇಟಿ

    ಪಾರ್ವತಮ್ಮ ರಾಜ್ ಕುಮಾರ್ (Parvathamma Rajkumar) ಸಹೋದರ, ನಿರ್ಮಾಪಕ ಎಸ್. ಎ ಶ್ರೀನಿವಾಸ್ ಪುತ್ರ ಹಾಗೂ ನಟ ಧ್ರುವನ್ (Dhruvan) ಅಲಿಯಾಸ್ ಸೂರಜ್ (Suraj) ನಿನ್ನೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮೊದಲ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಕಾಲು ಕತ್ತರಿಸುವ ಅನಿವಾರ್ಯತೆ ವೈದ್ಯರಿಗೆ ಬಂದಿರುವ ಕಾರಣದಿಂದಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

     

    ಅಪಘಾತ (Road Accident) ನಡೆದ ಸ್ಥಳದಲ್ಲೇ ಧ್ರುವನ್ ಬಲಗಾಲಿನ ಕೆಳ ಭಾಗ ಟ್ವಿಸ್ಟ್ ಆಗಿತ್ತು. ಅಲ್ಲದೇ ಮುಕ್ಕಾಲು ಭಾಗ ತುಂಡರಿಸಿತ್ತು. ಮಂಡಿಯ ಮೇಲ್ಭಾಗದಲ್ಲೂ ತೀವ್ರ ಪೆಟ್ಟಾಗಿತ್ತು. ಹಾಗಾಗಿ ಮಣಿಪಾಲ್ ಆಸ್ಪತ್ರೆಯ (Manipal Hospital) ವೈದ್ಯರು ಮಂಡಿಯ ಕೆಳಭಾಗವನ್ನು ಕತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ನಟ ಶಿವರಾಜ್ ಕುಮಾರ್ (Shivraj Kumar), ನಿರ್ಮಾಪಕ ಚಿನ್ನೇಗೌಡ ಮತ್ತು ಧ್ರುವನ್ ಸಿನಿಮಾದ ನಿರ್ದೇಶಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಘಟನೆ ವಿವರ :

    ನಟ ಸೂರಜ್ (ಧ್ರುವನ್) ನಿನ್ನೆ ಬುಲೆಟ್ ನಲ್ಲಿ ಊಟಿಗೆ ಪ್ರವಾಸಕ್ಕೆ ಹೋಗುತ್ತಿದ್ದರು. ಮಾರ್ಗಮಧ್ಯೆ ಟ್ರ್ಯಾಕ್ಟರ್ ಅನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಮುಂದಿನಿಂದ ಬಂದ ಟಿಪ್ಪರ್ ಸೂರಜ್ ಮೇಲೆ ಹರಿದಿದೆ ಎಂದು ಹೇಳಲಾಘುತ್ತಿದೆ. ಚಾಮರಾಜನಗರ ಬೇಗೂರು (ಗುಂಡ್ಲುಪೇಟೆ) ಸಮೀಪದ ಹಿರಿಕಾಟಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಬೈಕ್ ಸವಾರ ಸೂರಜ್ ತೀವ್ರವಾಗಿ ಗಾಯಗೊಂಡಿದ್ದರು

    ಬೇಗೂರಿನಿಂದ ಹಿರಿಕಾಟಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಅದಾಗಿದ್ದು, ಮೈಸೂರು ಕಡೆಯಿಂದ ಬರುತ್ತಿದ್ದ ಸೂರಜ್ ಬುಲೆಟ್ ಬೈಕ್ ಗೆ ಡಿಕ್ಕಿ  ಹೊಡೆದಿದೆ. ವಿಷಯ ತಿಳಿದ ಬೇಗೂರು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳವನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್

    ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸೂರಜ್ ಆಪ್ತರು ನೀಡಿದ ಮಾಹಿತಿಯಂತೆ ನಿನ್ನೆಯೇ ಅವರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿದ್ದು, ಕಾಲಿಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಒಂದು ಕಾಲು ಕತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಅವರಿಗೆ ಪ್ರಜ್ಞೆ ಬಾರದೇ ಇರುವ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ.

     

    ಮೂಲ ಸೂರಜ್ ಅಂತಿದ್ದ ಹೆಸರನ್ನು ಧ್ರುವನ್ ಅಂತ ಬದಲಾಯಿಸಿಕೊಂಡು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರು. ಭಗವಾನ್ ಶ್ರೀಕೃಷ್ಣ ಪರಮಾತ್ಮ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

  • Breaking- ಡಾ.ರಾಜ್ ಕುಟುಂಬ ಕುಡಿ ನಟ ಧ್ರುವನ್ ಗಂಭೀರ ಅಪಘಾತ : ಐಸಿಯುನಲ್ಲಿ ಚಿಕಿತ್ಸೆ

    Breaking- ಡಾ.ರಾಜ್ ಕುಟುಂಬ ಕುಡಿ ನಟ ಧ್ರುವನ್ ಗಂಭೀರ ಅಪಘಾತ : ಐಸಿಯುನಲ್ಲಿ ಚಿಕಿತ್ಸೆ

    ಪಾರ್ವತಮ್ಮ ರಾಜ್ ಕುಮಾರ್ (, Pavarthamma Rajkumar) ಅವರ ಸಹೋದರನ ಪುತ್ರ, ನಟ ಸೂರಜ್ (ಧ್ರುವನ್) (Dhruvan) ಗೆ ಚಾಮರಾಜನಗರ ಬೇಗೂರು (ಗುಂಡ್ಲುಪೇಟೆ) ಸಮೀಪದ ಹಿರಿಕಾಟಿ ಗೇಟ್ ಬಳಿ ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸೂರಜ್ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

    ನಿನ್ನೆ ಬೇಗೂರಿನಿಂದ ಹಿರಿಕಾಟಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿಯೊಂದು ಮೈಸೂರು ಕಡೆಯಿಂದ ಬರುತ್ತಿದ್ದ ಬುಲೆಟ್ ಬೈಕ್ ಗೆ ಡಿಕ್ಕಿ  ಸಂಭವಿಸಿದ ಪರಿಣಾಮ   ಮೈಸೂರಿನ ಸರಸ್ವತಿಪುರಂ ನಿವಾಸಿ ಧ್ರುವನ್ (28) ತೀವ್ರವಾಗಿ ಗಾಯಗೊಂಡಿದ್ದಾರೆ  ವಿಷಯ ತಿಳಿದ ಬೇಗೂರು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳವನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಧ್ರುವನ್ ಆಪ್ತರು ನೀಡಿದ ಮಾಹಿತಿಯಂತೆ ನಿನ್ನೆಯೇ ಅವರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿದ್ದು, ಕಾಲಿಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಒಂದು ಕಾಲು ಕತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಅವರಿಗೆ ಪ್ರಜ್ಞೆ ಬಾರದೇ ಇರುವ ಹಿನ್ನೆಲೆಯಲ್ಲಿ ಐಸಿಯುನಲ್ಲಿ(ICU) ಚಿಕಿತ್ಸೆ ನೀಡಲಾಗುತ್ತಿದೆಯಂತೆ.

    ನಿನ್ನೆ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಮೂಲ ಸೂರಜ್ ಅಂತಿದ್ದ ಹೆಸರನ್ನು ಧ್ರುವನ್ ಅಂತ ಬದಲಾಯಿಸಿಕೊಂಡು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರು. ಭಗವಾನ್ ಶ್ರೀಕೃಷ್ಣ ಪರಮಾತ್ಮ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.