Tag: dhruva sarja

  • ಥಿಯೇಟರ್ ಸಮಸ್ಯೆ ಬಗ್ಗೆ ಡೈರೆಕ್ಟರ್ ಪ್ರೇಮ್ ಓಪನ್ ಟಾಕ್

    ಥಿಯೇಟರ್ ಸಮಸ್ಯೆ ಬಗ್ಗೆ ಡೈರೆಕ್ಟರ್ ಪ್ರೇಮ್ ಓಪನ್ ಟಾಕ್

    ಡೈರೆಕ್ಟರ್ ಪ್ರೇಮ್ (Director Prem) ಮತ್ತು ಕಾಂಬಿನೇಷನ್ ‘ಕೆಡಿ’ (KD Film) ಸಿನಿಮಾ ಈ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡಿದೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಕೆಡಿ ಚಿತ್ರದ ಕಥೆ, ಆಡಿಯೋ ರೈಟ್ಸ್ ವಿಚಾರ ಸೇರಿದಂತೆ ಥಿಯೇಟರ್ ಸಮಸ್ಯೆ ಬಗ್ಗೆ ಕೂಡ ನಿರ್ದೇಶಕ ಪ್ರೇಮ್ ಮಾತನಾಡಿದ್ದಾರೆ.

    ‘ಕೆಡಿ’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. `ಕೆಡಿ’ ರೆಟ್ರೋ ಸ್ಟೈಲ್ ಸಿನಿಮಾ. ಹಾಗಾಗಿ ಚಿತ್ರತಂಡ ಕೂಡ ಅದೇ ಲುಕ್‌ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಈ ವೇಳೆ, ಅಪ್ಪು ಮತ್ತು ಶಿವಣ್ಣನನ್ನು ಧ್ರುವನಲ್ಲಿ (Dhruva Sarja) ನೋಡಿದೆ ಎಂದು ಪ್ರೇಮ್ ಮಾತನಾಡಿದ್ದಾರೆ.

    ಲಾಂಗು ಹಿಡಿದಿರುವ ಸಿನಿಮಾ ಹಿಟ್ ಅಂತಲ್ಲ. ದರ್ಶನ್, ಶಿವಣ್ಣ, ಧ್ರುವ ಲಾಂಗ್ ಹಿಡಿದಿದ್ದಾರೆ ಅವರವರ ಸ್ಟೈಲ್ ಬೇರೆ ಆಗಿರುತ್ತದೆ. ಆನ್ ಟೈಮ್‌ಗೆ ಸೆಟ್‌ನಲ್ಲಿ ಹಾಜರಿ ಹಾಕುತ್ತಿದ್ದರು. ಶೂಟಿಂಗ್ ಇಲ್ಲದೆ ಇದ್ದರು ಅವರು ಭಾಗಿಯಾಗುತ್ತಿದ್ದರು. 108 ಕೆಜಿ ಇದ್ದ ಧ್ರುವ ಕೆಡಿ ಸಿನಿಮಾಗಾಗಿ 80 ಕೆಜಿ ತೂಕ ಇಳಿಸಿಕೊಂಡರು ಎಂದು ಧ್ರುವ ಡೆಡಿಕೇಷನ್ ಬಗ್ಗೆ ಪ್ರೇಮ್ ಹಾಡಿ ಹೊಗಳಿದ್ದಾರೆ.

    ಸಿನಿಮಾಗಳು ಇಲ್ಲದೇ ಥಿಯೇಟರ್ ಬಂದ್ ಬಗ್ಗೆ ಮತ್ತು ಯಾಕೆ ನಮ್ಮ ಸಿನಿಮಾಗಳು ತಡ ಆಗುತ್ತಿದೆ ಎಂದು ಮುಕ್ತವಾಗಿ ಡೈರೆಕ್ಟರ್ ಪ್ರೇಮ್ ಮಾತನಾಡಿದ್ದಾರೆ. ಸಿನಿಮಾಗಳಿಲ್ಲದೇ ಥಿಯೇಟರ್ ಮುಚ್ಚಬೇಕಿದೆ. ಆದರೆ ಇಂದಿನ ದಿನಗಳಲ್ಲಿ ಕ್ವಾಲಿಟಿ ಸಿನಿಮಾ ಮಾಡಬೇಕಾಗಿದೆ. ಚಿತ್ರದ ಗ್ರಾಫಿಕ್ಸ್ ವರ್ಕ್, ಸಿಜಿ ವರ್ಕ್ ಕೆಲಸ ತುಂಬಾ ಇದೆ ಆದ್ರಿಂದ ಸಿನಿಮಾ ಟೈಂ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.

    ದರ್ಶನ್, ಯಶ್, ಸುದೀಪ್, ದರ್ಶನ್, ಶಿವಣ್ಣ, ಉಪ್ಪಿ ಸರ್ ಎಲ್ಲರೂ ಇದ್ದಾರೆ. ವರ್ಷಕ್ಕೆ ಒಂದೊಂದು ಸಿನಿಮಾ ಮಾಡಿದ್ದರೆ ಆಗುತ್ತದೆ. ಸಿಂಗಲ್ ಸ್ಕ್ರೀನ್ ಮುಚ್ಚುತ್ತಿದೆ ಅಂತ ಹೇಳ್ತಿದ್ದಿರಲ್ವಾ? ಕಪಾಲಿ ಥಿಯೇಟರ್ ಕ್ಲೋಸ್ ಆಯ್ತು ಅಲ್ಲಿ ಎಷ್ಟು ಸ್ಕ್ರೀನ್ ಬರುತ್ತೆ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ ಪ್ರೇಮ್. ಹಲವು ವರ್ಷಗಳ ಹಿಂದೆ ಬರುತ್ತಿದ್ದ ಸಿನಿಮಾಗಳಿಗೂ ಇವತ್ತಿನ ಸಿನಿಮಾಗಳಿಗೂ ತುಂಬಾ ಡಿಫರೆನ್ಸ್ ಇದೆ. ಇವತ್ತಿನ ಜನರೇಷನ್ ಪ್ರೇಕ್ಷಕರಿಗೆ ಕ್ವಾಲಿಟಿ ಕೊಡಬೇಕಾಗುತ್ತಿದೆ. ಜೊತೆಗೆ ಬೇರೇ ಭಾಷೆಗಳ ಸಿನಿಮಾಗೂ ನಾವು ಪೈಪೋಟಿ ಕೊಡಬೇಕಾದರೆ ಕ್ಲಾಲಿಟಿಯಲ್ಲಿ ಕಾಂಪ್ರಮೈಸ್ ಆಗಬಾರದು. ಕಾಲಕ್ಕೆ ತಕ್ಕಂತೆ ಸಿನಿಮಾ ಕೊಡಬೇಕಿದೆ ಹಾಗಾಗಿ ತಡವಾಗುತ್ತಿದೆ ಎಂದು ಪ್ರೇಮ್ ಮಾತನಾಡಿದ್ದಾರೆ.

    ಈ ಸಿನಿಮಾದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಹಲವು ನಟಿಸಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ‘ಕೆಡಿ’ ಸಿನಿಮಾ ರಿಲೀಸ್ ಆಗಲಿದೆ.

  • ದುಬಾರಿ ಮೊತ್ತಕ್ಕೆ ‘ಕೆಡಿ’ ಚಿತ್ರದ ಆಡಿಯೋ ರೈಟ್ಸ್ ಸೇಲ್

    ದುಬಾರಿ ಮೊತ್ತಕ್ಕೆ ‘ಕೆಡಿ’ ಚಿತ್ರದ ಆಡಿಯೋ ರೈಟ್ಸ್ ಸೇಲ್

    ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ (KD Film) ಸಿನಿಮಾ ಇದೇ ಡಿಸೆಂಬರ್‌ಗೆ ತೆರೆಗೆ ಅಪ್ಪಳಿಸಲಿದೆ. ಇದರ ನಡುವೆ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾ ರಿಲೀಸ್ ಮುನ್ನವೇ ದುಬಾರಿ ಮೊತ್ತಕ್ಕೆ ‘ಕೆಡಿ’ ಚಿತ್ರದ ಆಡಿಯೋ ರೈಟ್ಸ್ ರಿಲೀಸ್ ಆಗಿದೆ. ಇದನ್ನೂ ಓದಿ:ರೇವ್‌ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ ಪರ ನಿಂತ ವಿಷ್ಣು ಮಂಚು

    ‘ಕೆಡಿ’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ‘ಕೆಡಿ’ ರೆಟ್ರೋ ಸ್ಟೈಲ್ ಸಿನಿಮಾ. ಹಾಗಾಗಿ ಚಿತ್ರತಂಡ ಕೂಡ ಅದೇ ಲುಕ್‌ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಕನ್ನಡ ಚಿತ್ರರಂಗದಲ್ಲೇ ದಾಖಲೆ ಮೊತ್ತಕ್ಕೆ ‘ಕೆಡಿ’ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಚಿತ್ರತಂಡ ಹೇಳಿದೆ. ಆನಂದ್ ಆಡಿಯೋ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. 17.70 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎಂದು ತಿಳಿಸಿದ್ದಾರೆ.

    ಈ ವೇಳೆ ನಟ ಧ್ರುವ ಸರ್ಜಾ ಮಾತನಾಡಿ, ‘ಕೆಡಿ’ ಅಂದ್ರೆ ಕಾಳಿದಾಸ. ಈ ಸಿನಿಮಾದಲ್ಲಿ ಕಾಳಿದಾಸ ನಾನೇ. ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಅದು ಕೆವಿಎನ್ ಸಂಸ್ಥೆಯಿಂದ ಆರಂಭ ಆಯ್ತು. ಚಿತ್ರದ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದು, ತುಂಬಾ ಖುಷಿ ಆಗಿದೆ. ನನ್ನ ‘ಅದ್ಧೂರಿ’ ಸಿನಿಮಾ 4 ಕೋಟಿ ರೂ. ಖರ್ಚಿನಲ್ಲಿ ನಿರ್ಮಾಣವಾಗಿತ್ತು. ಆದರೆ ಈಗ ಕೆಡಿ ಸಿನಿಮಾದ ಆಡಿಯೋ ಹಕ್ಕು ಮಾತ್ರ 17.70 ಕೋಟಿ ರೂ. ಸೇಲ್ ಆಗಿದೆ. ಸಿನಿಮಾ ಕೂಡ ತುಂಬಾ ರಿಚ್ ಆಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ, ಶಾರುಖ್ ನಟನೆಯ ‘ಪಠಾಣ್’ ಚಿತ್ರಕ್ಕೆ 180 ಜನರನ್ನು ಬಳಸಿ, ಆರ್ಕೆಸ್ಟ್ರಾ ಮಾಡಿಸಲಾಗಿತ್ತು. ಆದರೆ ‘ಕೆಡಿ’ ಸಿನಿಮಾ ಅದನ್ನು ಮೀರಿಸಿದೆ. ಆ ಮೂಲಕ ಮೇಕಿಂಗ್ ಹಂತದಲ್ಲೇ ಸಿನಿಮಾ ಹೊಸ ದಾಖಲೆ ಬರೆದಿದೆ ಎಂದು ಮಾಹಿತಿ ನೀಡಿದ್ದಾರೆ.

  • ‘ಮಾರ್ಟಿನ್’ ಬೆನ್ನಲ್ಲೇ ‘ಕೆಡಿ’ ಚಿತ್ರದ ಬಗ್ಗೆ ಸಿಹಿಸುದ್ದಿ ಕೊಟ್ಟ ಧ್ರುವ ಸರ್ಜಾ

    ‘ಮಾರ್ಟಿನ್’ ಬೆನ್ನಲ್ಲೇ ‘ಕೆಡಿ’ ಚಿತ್ರದ ಬಗ್ಗೆ ಸಿಹಿಸುದ್ದಿ ಕೊಟ್ಟ ಧ್ರುವ ಸರ್ಜಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ‘ಮಾರ್ಟಿನ್’ ಸಿನಿಮಾ ರಿಲೀಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಬೆನ್ನಲ್ಲೇ ಇದೀಗ ‘ಕೆಡಿ’ (KD Film) ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಧ್ರುವ ಸಿನಿಮಾಗಳಿಗಾಗಿ ಕಾದು ಕುಳಿತವರಿಗೆ ಖುಷಿ ಸುದ್ದಿ ಸಿಕ್ಕಿದೆ. ಇದನ್ನೂ ಓದಿ:‘ಪುಷ್ಪ 2’ ಪೋಸ್ಟರ್ ಔಟ್ -ಖಡಕ್ ಲುಕ್‌ನಲ್ಲಿ ರಾವ್ ರಮೇಶ್

    ತೆಲಂಗಾಣದಲ್ಲಿ ಚಿತ್ರರಂಗದ ಚಿತ್ರಮಂದಿರ ಬಂದ್ ಆದ್ಮೇಲೆ ಕರ್ನಾಟಕದಲ್ಲಿ ಚಿತ್ರಮಂದಿರ ಬಂದ್ ಮಾಡುವ ಬಗ್ಗೆ ಅಪಸ್ವರ ಎದ್ದಿತ್ತು. ಯಾವುದೇ ಕಾರಣಕ್ಕೂ ಥಿಯೇಟರ್ ಬಂದ್ ಮಾಡಲ್ಲ ಎಂದು ಅಧಿಕೃತ ಘೋಷಣೆ ಮಾಡಲಾಯ್ತು. ಸ್ಟಾರ್ ನಟರ ಸಿನಿಮಾಗಳು ತಡ ಆಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಧ್ರುವ ನಟನೆಯ 2 ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.

    ಧ್ರುವ ನಟನೆಯ ‘ಮಾರ್ಟಿನ್’ (Martin Film) ಚಿತ್ರ ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಡೈರೆಕ್ಟರ್ ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಸಿನಿಮಾ ಕೆಡಿ ಸಿನಿಮಾಗೂ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಕೆಡಿ ಸಿನಿಮಾ ಇದೇ ಡಿಸೆಂಬರ್‌ನಲ್ಲಿ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

    ಈ ಚಿತ್ರದಲ್ಲಿ ಧ್ರುವಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ (Reeshma Nanaiah), ಶಿಲ್ಪಾ ಶೆಟ್ಟಿ (Shilpa Shetty), ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಸ್ಟಾರ್ ಕಲಾವಿದರ ದಂಡೇ ಇದೆ. ಈ ಚಿತ್ರವನ್ನು ಕೆವಿಎನ್‌ ಸಂಸ್ಥೆ ಅದ್ಧೂರಿಯಾಗಿ ನಿರ್ಮಾಣ ಮಾಡಿದೆ.

  • ಅಕ್ಟೋಬರ್‌ 11 ಕ್ಕೆ ‘ಮಾರ್ಟಿನ್’‌ ಸಿನಿಮಾ ತೆರೆಗೆ

    ಅಕ್ಟೋಬರ್‌ 11 ಕ್ಕೆ ‘ಮಾರ್ಟಿನ್’‌ ಸಿನಿಮಾ ತೆರೆಗೆ

    ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅಭಿಮಾನಿಗಳಿಗೆ ‘ಮಾರ್ಟಿನ್‌’ (Martin) ಚಿತ್ರತಂಡ ಗುಡ್‌ ನ್ಯೂಸ್‌ ಕೊಟ್ಟಿದೆ. ಇದೇ ಅಕ್ಟೋಬರ್‌ 11 ಕ್ಕೆ ಮಾರ್ಟಿನ್‌ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಬೆಂಗಳೂರಿನ ಸ್ಟಾರ್‌ ಹೋಟೆಲ್‌ವೊಂದರಲ್ಲಿ ಮಾರ್ಟಿನ್‌ ಸಿನಿಮಾದ ಸುದ್ದಿಗೋಷ್ಠಿ ಶುಕ್ರವಾರ ನಡೆಯಿತು. ಈ ವೇಳೆ ಚಿತ್ರತಂಡ ಬಿಗ್‌ ಅನೌನ್ಸ್‌ಮೆಂಟ್‌ ಮಾಡಿದೆ. ಇದನ್ನೂ ಓದಿ: ನನ್ನ ಫ್ಯಾನ್ಸ್ ಮನಸ್ಸು ನೋಯಿಸಲ್ಲ ಎನ್ನುತ್ತಲೇ ಮದುವೆ ಬಗ್ಗೆ ಪ್ರಭಾಸ್ ಸ್ಪಷ್ಟನೆ

    ಧ್ರುವ ಸರ್ಜಾ ಅಭಿನಯದ 5ನೇ ಚಿತ್ರ ಮಾರ್ಟಿನ್. ಎ.ಪಿ.ಅರ್ಜುನ್ ನಿರ್ದೇಶನದ ಮಾರ್ಟಿನ್ 5 ಭಾಷೆಯಲ್ಲಿ ರಿಲೀಸ್ ಆಗಲಿದೆ. ಆ ಮೂಲಕ 2024 ರ ಹೈವೋಲ್ಟೇಜ್ ಸಿನಿಮಾ ಇದಾಗಲಿದೆ.

    ಪೊಗರು ಸಿನಿಮಾ ಬಳಿಕ 3 ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ಧ್ರುವ ಸರ್ಜಾ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಚಾಮುಂಡೇಶ್ವರಿ ದರ್ಶನ ಪಡೆದ ಡಿಬಾಸ್

  • ಕೊನೆಗೂ ‘ಮಾರ್ಟಿನ್’ ಸಿನಿಮಾದ ಬಗ್ಗೆ ಸಿಹಿಸುದ್ದಿ ಕೊಟ್ಟ ಧ್ರುವ ಸರ್ಜಾ

    ಕೊನೆಗೂ ‘ಮಾರ್ಟಿನ್’ ಸಿನಿಮಾದ ಬಗ್ಗೆ ಸಿಹಿಸುದ್ದಿ ಕೊಟ್ಟ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಧ್ರುವ ಸಿನಿಮಾಗಾಗಿ ಕಾದು ಕುಳಿತ ಅಭಿಮಾನಿಗಳಿಗೆ ಈಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ‘ಮಾರ್ಟಿನ್’ (Martin) ಚಿತ್ರದ ಬಗ್ಗೆ ಧ್ರುವ ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಶಾರುಖ್ ಖಾನ್‌ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಎ.ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾದ ಶೂಟಿಂಗ್ ಮುಗಿದಿದೆ. ಈ ಚಿತ್ರಕ್ಕಾಗಿ ಕಳೆದ ಎರಡು ವರ್ಷಗಳಿಂದ ಧ್ರುವ ಬೆವರು ಹರಿಸಿದ್ದಾರೆ. ಆದರೆ ಸಿನಿಮಾದ ಬಗ್ಗೆ ಏನು ಅಪ್‌ಡೇಟ್ ಸಿಗದೇ ಇದ್ದಿದ್ದಕ್ಕೆ ಫ್ಯಾನ್ಸ್ ನಿರಾಸೆ ವ್ಯಕ್ತಪಡಿಸಿದ್ದರು.

    ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಬಗ್ಗೆ ಮೇ 24ಕ್ಕೆ ಸಿಹಿಸುದ್ದಿ ಸಿಗಲಿದೆ ಎಂದು ಸ್ವತಃ ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿದ್ದಾರೆ. ಚಿತ್ರದ ಟೀಸರ್ ಅಥವಾ ಟ್ರೈಲರ್ ರಿಲೀಸ್ ಮಾಡ್ತಾರಾ ಅಂದೇ ಸಮಯದಲ್ಲಿ ರಿಲೀಸ್ ಬಗ್ಗೆ ಮಾಹಿತಿ ಸಿಗುತ್ತಾ ಎಂದು ಕಾದುನೋಡಬೇಕಿದೆ.

    ‘ಮಾರ್ಟಿನ್’ ಹೀರೋ ಧ್ರುವಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ.

  • ಅಪ್ಪ ಮಗಳ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್

    ಅಪ್ಪ ಮಗಳ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್

    ‘ಸಿ’ ಅಂದ್ರೆ ಇಲ್ನೋಡಿ ಅಂತಲ್ಲ, ಹಾಗಂತ ಸಮುದ್ರದ ಬಗ್ಗೆ ಹೇಳ್ತಾ ಇದೀವಿ ಅಂತನೂ ಅಂದ್ಕೊಬೇಡಿ… ‘ಸಿ’ ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೆ ಸಿದ್ಧವಾಗಿರುವ ಹೊಸ ಸಿನಿಮಾ. ಈಗಾಲೇ ಚಂದನ ವನದಲ್ಲಿ ಶ್.. ಸೈ.. ಎ.. ಓಂ… ಹೀಗೆ ಒಂದೇ ಅಕ್ಷರದ ಹೆಸರಿನ ಮೂವಿಗಳನ್ನು ನೋಡಿದ್ದೀರಾ, ಇದೀಗ ಅದೇ ಸಾಲಿಗೆ ‘ಸಿ’ ಎನ್ನುವ ಮತ್ತೊಂದು ಸಿನಿಮಾ ಕೂಡ ಸೇರಿಕೊಳ್ಳುತ್ತಿರುವುದು ವಿಶೇಷ.

    ಕಿರಣ್ ಸುಬ್ರಮಣಿ (Kiran Subramani) ಚೊಚ್ಚಲ ನಿರ್ದೇಶನದ ‘ಸಿ’ ಸಿನಿಮಾ  ಶೂಟಿಂಗ್ ಮುಗಿಸಿ ಪ್ರಮೋಷನ್ ನಲ್ಲಿ ಬಿಜಿಯಾಗಿದೆ. ಎಲೆಕ್ಷನ್ ಬಿಸಿ ಕಮ್ಮಿಯಾಗುತ್ತಿದ್ದಂತೆ ಥಿಯೇಟರ್ ಗೆ ಲಗ್ಗೆ ಇಡಲು ಸಜ್ಜಾಗಿರುವ ‘ಸಿ’ ಸಿನಿಮಾ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ‘ಸಿ’ ಸಿನಿಮಾದ ಅಪ್ಪ ಮಗಳ ಬಾಂಧವ್ಯದ ಹಾಡು ಈಗ ಗಾನ ಪ್ರಿಯರ ಗಮನ ಸೆಳೆಯುತ್ತಿದೆ. ಕಿರಣ್ ಸುಬ್ರಮಣಿ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚಿದ್ದಾರೆ. ಅಪ್ಪ ಮಗಳ ಬಾಂಧವ್ಯದ ಹಾಡಿನಲ್ಲಿ ಕಿರಣ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡರೆ ಮಗಳಾಗಿಮಿಂಚಿದ್ದಾಳೆ.

    ಈ ಸುಂದರ ಹಾಡನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ರಿಲೀಸ್ ಮಾಡಿರುವುದು ವಿಶೇಷ. ಮುದ್ದು ಮಗಳ ಜೊತೆ ಸಂಭ್ರಮಿಸುತ್ತಿರುವ ಧ್ರುವ ಸಿ ಸಿನಿಮಾದ ಸುಂದರ ಹಾಡನ್ನು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಅಂದಹಾಗೆ ‘ಕಂದಾ…ಕಂದಾ..’ ಎನ್ನುವ ಸಾಲಿನಿಂದ ಪ್ರಾರಂಭವಾಗುವ ಈ ಹಾಡನ್ನು ಹೃದಯ ಶಿವ ಬರೆದಿದ್ದು, ಗಾಯಕ ವಾಸುಕಿ ವೈಭವ್  ಹಾಡಿದ್ದಾರೆ.

    ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಹಾಗಂತ ಸಿನಿಮಾರಂಗ ಏನು ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದೀಗ ಸಿ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವಾತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಈ ಸಿನಿಮಾ ತಂದೆ- ಮಗಳ ಬಾಂಧವ್ಯದ ಜೊತೆಗೆ ಮೆಡಿಕಲ್ ಮಾಫಿಯಾದ ಬಗ್ಗೆ ಇದೆ. ಎಜಿಎಸ್ ಪ್ರೊಡಕ್ಷನ್ ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ನಿರ್ಮಾಣ ಮಾಡಿದ್ದಾರೆ.

  • SSLC ಟಾಪರ್ ಅಂಕಿತಾಗೆ ರಿಷಬ್ ಶೆಟ್ಟಿ, ಧ್ರುವ ಸರ್ಜಾ ವಿಶ್

    SSLC ಟಾಪರ್ ಅಂಕಿತಾಗೆ ರಿಷಬ್ ಶೆಟ್ಟಿ, ಧ್ರುವ ಸರ್ಜಾ ವಿಶ್

    ರ್ನಾಟಕ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಅಂಕಿತಾ ಹೊರಹೊಮ್ಮಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ಮೆಳ್ಳಿಗೆರೆ ಮೊರಾರ್ಜಿ ದೇಸಾಯಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಅಂಕಿತಾಗೆ (Ankita Basappa)ಈಗ ‘ಕಾಂತಾರ’ ನಟ ರಿಷಬ್ ಶೆಟ್ಟಿ(Rishab Shetty), ಧ್ರುವ ಸರ್ಜಾ ಸೇರಿದಂತೆ ಅನೇಕರು ಶುಭಕೋರಿದ್ದಾರೆ. ಇದನ್ನೂ ಓದಿ:ಕನ್ನಡ ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಶೋ

     

    View this post on Instagram

     

    A post shared by Rishab Shetty (@rishabshettyofficial)

    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಅವರಿಗೆ ಮತ್ತು ಅವರ ಪೋಷಕರಿಗೆ ಅಭಿನಂದನೆಗಳು ಎಂದಿದ್ದಾರೆ. ಈ ಸಾಧನೆ ಹಲವಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರಿಷಬ್ ಶೆಟ್ಟಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ಹುಟ್ಟುಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ- ಕಾರಣ ಕೇಳಿದ ಫ್ಯಾನ್ಸ್

    625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ ಅಂಕಿತಾ ಕೊಣ್ಣೂರಗೆ ಬಾಗಲಕೋಟೆ ಜಿಲ್ಲೆಯ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾಳ ಸಾಧನೆ ನಾಡಿನ ಮಕ್ಕಳಿಗೆ ಸ್ಪೂರ್ತಿಯಾಗಲಿದೆ. 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾಡಿಗೆ ಪ್ರಥಮ ಸ್ಥಾನ ಗಳಿಸಿರುವ ಅಂಕಿತಾ ಕೊಣ್ಣೂರಗೆ ತುಂಬು ಹೃದಯದ ಅಭಿನಂದನೆಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಧ್ರುವ ಸರ್ಜಾ (Dhruva Sarja) ಕೂಡ ಶುಭ ಕೋರಿದ್ದಾರೆ.

    ಅಂದಹಾಗೆ, ‘ಕಾಂತಾರ ಪಾರ್ಟ್ 1’ರಲ್ಲಿ (Kantara 1) ರಿಷಬ್ ಶೆಟ್ಟಿ ಬ್ಯುಸಿಯಾಗಿದ್ರೆ, ‘ಮಾರ್ಟಿನ್’ (Martin) ಮತ್ತು ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ತೊಡಗಿಸಿಕೊಂಡಿದ್ದಾರೆ.

  • ತಾಯಿ, ಪತ್ನಿ ಜೊತೆ ಬಂದು ಮತದಾನ ಮಾಡಿದ ನಟ ಧ್ರುವ ಸರ್ಜಾ

    ತಾಯಿ, ಪತ್ನಿ ಜೊತೆ ಬಂದು ಮತದಾನ ಮಾಡಿದ ನಟ ಧ್ರುವ ಸರ್ಜಾ

    ನ್ನಡದ ಹೆಸರಾಂತ ನಟ ಧ್ರುವ ಸರ್ಜಾ (Dhruva Sarja) ಪತ್ನಿ ಪ್ರೇರಣಾ (Prerna) ಹಾಗೂ ತಾಯಿ ಜೊತೆ ಆಗಮಿಸಿ ಮತದಾನ (Voting) ಮಾಡಿದ್ದಾರೆ. ಬೆಂಗಳೂರಿನ ಕೆಆರ್ ರಸ್ತೆಯ ಶ್ರೀ ಶಾರದಾ ದೇವಿ ಹೊಲಿಗೆ ತರಬೇತಿ ಕೇಂದ್ರದಲ್ಲಿ ಕುಟುಂಬ ಸಮೇತ ಬಂದು ಮತಹಾಕಿದ್ದಾರೆ. ಜೊತೆಗೆ ಮತದಾನದ ಅರಿವನ್ನೂ ಅವರು ಮೂಡಿಸಿದ್ದಾರೆ.

    ಡೆವಿಲ್ ಸಿನಿಮಾದ ಚಿತ್ರೀಕರಣ ವೇಳೆ ಕೈಗೆ ಏಟು ಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ದರ್ಶನ್, ಇದೀಗ ಪತ್ನಿ ವಿಜಯಲಕ್ಷ್ಮಿ ಸಮೇತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಸರತಿಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ ದರ್ಶನ್ ಮತ್ತು ವಿಜಯಲಕ್ಷ್ಮಿ.

    ಕನ್ನಡದ ಹೆಸರಾಂತ ನಟಿ ರಚಿತಾ ರಾಮ್ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದರು. ಸಾಮಾನ್ಯರಂತೆ ಅರ್ಧ ಗಂಟೆಗೂ ಹೆಚ್ಚು ಕಾಲ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಅಭಿಮಾನಿಗಳು ರಚಿತಾ ಅವರ ಜೊತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಸಿದರು.

     

    ಮತದಾನದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಚಿತಾ, ‘ಮನೆಯಲ್ಲಿ ಕೂತು ಕಾಮೆಂಟ್ ಮಾಡೋದಕ್ಕಿಂದ ಬಂದು ವೋಟ್ ಮಾಡಿ. ವೋಟ್ ಮಾಡದೇ ಬ್ಲೇಮ್ ಮಾಡಬೇಡಿ, ನಮ್ಮ ನಾಯಕರ ಆಯ್ಕೆ ಮಾಡಲೇಬೇಕು. ಬಿಸಿಲು ಅಂತ ಮನೆಯಲ್ಲಿ ಕೂರಬೇಡಿ, ಸಂಜೆವರೆಗೂ ಟೈಂ ಇದೆ ಬಂದು ವೋಟ್ ಮಾಡಿ. ಹಿರಿಯನಾಗರೀಕರೆ ಉತ್ಸಾಹದಿಂದ ವೋಟ್ ಮಾಡುವಾಗ ಯುವಕರು ಯಾಕೆ ಮನೆಯಲ್ಲಿ ಕೂರಬೇಕು’ ಎಂದು ಅವರು ಪ್ರಶ್ನೆ ಮಾಡಿದರು.

  • ಕ್ರೂರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ನೇಹಾ ಸಾವಿನ ಬಗ್ಗೆ ಧ್ರುವ ಸರ್ಜಾ ಆಕ್ರೋಶ

    ಕ್ರೂರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ನೇಹಾ ಸಾವಿನ ಬಗ್ಗೆ ಧ್ರುವ ಸರ್ಜಾ ಆಕ್ರೋಶ

    ಹುಬ್ಬಳ್ಳಿ ಕಾಲೇಜುವೊಂದರಲ್ಲಿ ನಡೆದ ಕಾರ್ಪೊರೇಟರ್ ಮಗಳ ಬರ್ಬರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಹತ್ಯೆಗೆ ಇದೀಗ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಇದೀಗ ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಪ್ರತಿಕ್ರಿಯೆ ನೀಡಿದ್ದಾರೆ. ಕ್ರೂರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ನೇಹಾ ಪರ ಧ್ರುವ ಧ್ವನಿಯೆತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೇಹಾ ಸಾವಿನ ಬಗ್ಗೆ ಧ್ರುವ ಸರ್ಜಾ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ಗೆ ತಾರಕ್ ಪೊನ್ನಪ್ಪ ಗುಡ್ ಬೈ


    ಸಹೋದರಿ ನೇಹಾ ಹಿರೇಮಠ್ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್‌ನಲ್ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಹಾಗೂ ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ. ಕ್ರೂರಿಗೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏ.18ರಂದು ಹುಬ್ಬಳ್ಳಿ- ಧಾರಾವಾಡ ಮಹಾನಗರ ಪಾಲಿಕೆ ಕಾರ್ಪೊರೇಟರ್ ಅವರ ಪುತ್ರಿ ಹತ್ಯೆ ನಡೆದಿತ್ತು. ನೇಹಾ ಹತ್ಯೆಗೈದ ಆರೋಪಿ ಫಯಾಜ್ ಬಂಧನವೂ ಆಗಿದೆ. ನಗರದ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

  • ಧ್ರುವ ಸರ್ಜಾ ಸಿನಿಮಾದ ನಿರ್ಮಾಪಕ-ನಿರ್ದೇಶಕನ ಮಧ್ಯೆ ಕಿರಿಕ್: ಸ್ಪಷ್ಟನೆ ಏನು?

    ಧ್ರುವ ಸರ್ಜಾ ಸಿನಿಮಾದ ನಿರ್ಮಾಪಕ-ನಿರ್ದೇಶಕನ ಮಧ್ಯೆ ಕಿರಿಕ್: ಸ್ಪಷ್ಟನೆ ಏನು?

    ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin) ಸಿನಿಮಾದ ನಿರ್ಮಾಪಕ ಉದಯ್ ಕೆ ಮೆಹ್ತಾ (Uday K Mehta) ಹಾಗೂ ನಿರ್ದೇಶಕ ಎ.ಪಿ ಅರ್ಜುನ್ ಮಧ್ಯೆ ಕಿರಿಕ್ ಆಗಿ, ಈ ಜಗಳ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಏರಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ವಿಷಯ ವಿಸ್ತರಿಸುವ ಮುನ್ನ ಇಬ್ಬರೂ ಎಚ್ಚೆತ್ತುಕೊಂಡಿದ್ದಾರೆ. ಹಬ್ಬಿರೋದು ಗಾಸಿಪ್. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ಮೆಹ್ತಾ ಮತ್ತು ಅರ್ಜುನ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

    ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಮಾರ್ಟಿನ್  (Martin) ಚಿತ್ರಕ್ಕೆ ಲೂಪ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಚಿತ್ರದ ಬಿಡುಗಡೆಗಾಗಿ ಧ್ರುವ ಸರ್ಜಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಚಿತ್ರೀಕರಣದಲ್ಲೂ ಮಾರ್ಟಿನ್ ದಾಖಲೆ ಬರೆದಿದೆ. ಒಟ್ಟು 240 ದಿನಗಳ ಚಿತ್ರೀಕರಣ ನಡೆದಿದೆ. ಇನ್ನು ಚಿತ್ರದ ಆಡಿಯೋ ಹಕ್ಕನ್ನು ಅಧಿಕ ಮೊತ್ತ ನೀಡಿ  ಜನಪ್ರಿಯ ಆಡಿಯೋ ಸಂಸ್ಥೆಯಾದ ಸರೆಗಮಪ ಪಡೆದುಕೊಂಡಿದೆ. ಮಣಿ ಶರ್ಮ ಅವರ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದುರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

    ಸತ್ಯ ಹೆಗಡೆ ಛಾಯಾಗ್ರಹಣ , ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ರಾಮ್ ಲಕ್ಷ್ಮಣ್ ಅವರ  ಸಾಹಸ ನಿರ್ದೇಶನವಿರುವ ಮಾರ್ಟಿನ್ ಚಿತ್ರದ ತಾರಾಬಳಗದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಜಾರ್ಜಿಯ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಪಾಠಕ್ ಮುಂತಾದವರಿದ್ದಾರೆ.