Tag: dhruva sarja

  • ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದ ಬಗ್ಗೆ ಗುಡ್ ನ್ಯೂಸ್- ಏನದು?

    ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದ ಬಗ್ಗೆ ಗುಡ್ ನ್ಯೂಸ್- ಏನದು?

    ಧ್ರುವ ಸರ್ಜಾ ಸದ್ಯ ‘ಕೆಡಿ’ (KD) ಮತ್ತು ‘ಮಾರ್ಟಿನ್’ (Martin) ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿದೆ. ಅದರಲ್ಲಿ ‘ಮಾರ್ಟಿನ್’ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಹೊರಬೀಳಲಿದೆ. ಇದನ್ನೂ ಓದಿ:ರಾಮ್ ಪೋತಿನೇನಿ ಜೊತೆ ಕುಣಿದು ಕುಪ್ಪಳಿಸಿದ ಹಾಟ್ ಬೆಡಗಿ ಕಾವ್ಯಾ ಥಾಪರ್

    ‘ಪೊಗರು’ ಸಿನಿಮಾದ ನಂತರ ಧ್ರುವ ಸರ್ಜಾ (Dhruva Sarja) ನಟಿಸಿರುವ ಸಿನಿಮಾ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ. 3 ವರ್ಷಗಳಿಂದ ನಟನ ದರ್ಶನ ಸಿಗದೇ ಬೇಸರದಲ್ಲಿದ್ದಾರೆ. ಇದರ ನಡುವೆ ಅಭಿಮಾನಿಗಳು ಖುಷಿಪಡುವಂತಹ ಸುದ್ದಿಯೊಂದನ್ನು ‘ಮಾರ್ಟಿನ್’ ಚಿತ್ರತಂಡ ಕೊಟ್ಟಿದೆ.

    ‘ಮಾರ್ಟಿನ್’ ಸಿನಿಮಾ ಕುರಿತು ಇಂದು (ಜು.18) ಸಂಜೆ 5:55ಕ್ಕೆ ಬಿಗ್ ಅನೌನ್ಸ್‌ಮೆಂಟ್ ಹೊರಬೀಳಲಿದೆ. ಸಿನಿಮಾ ಬಗ್ಗೆ ಅಪ್‌ಡೇಟ್ ಏನಿರಬಹುದು ಎಂದು ಕಾದುನೋಡಬೇಕಿದೆ. ಸದ್ಯ ಈ ಸುದ್ದಿ ತಿಳಿದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿನಿಮಾ ಬಗೆಗಿನ ಗುಡ್‌ ನ್ಯೂಸ್‌ಗಾಗಿ ಕಾಯುತ್ತಿದ್ದಾರೆ.

    ಎಪಿ ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಸಿನಿಮಾದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ. ಇದೇ ಅಕ್ಟೋಬರ್ 11ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

  • ರೇಣುಕಾಸ್ವಾಮಿ ಕುಟುಂಬಕ್ಕೆ ಧನ ಸಹಾಯ ಮಾಡಿದ ಧ್ರುವ ಸರ್ಜಾ ಫ್ಯಾನ್ಸ್

    ರೇಣುಕಾಸ್ವಾಮಿ ಕುಟುಂಬಕ್ಕೆ ಧನ ಸಹಾಯ ಮಾಡಿದ ಧ್ರುವ ಸರ್ಜಾ ಫ್ಯಾನ್ಸ್

    ರೇಣುಕಾಸ್ವಾಮಿ ಕೊಲೆ (Renukaswamy Murder Case) ವಿಚಾರವಾಗಿ ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಮನೆ ಮಗನನ್ನು ಕಳೆದುಕೊಂಡು ಅವರ ಕುಟುಂಬ ಸಂಕಟಪಡ್ತಿದ್ದಾರೆ. ಇದೀಗ ಅವರ ಕುಟುಂಬಕ್ಕೆ ಧ್ರುವ ಸರ್ಜಾ (Dhruva Sarja Fans) ಅಭಿಮಾನಿಗಳು ಧನ ಸಹಾಯ ಮಾಡಿದ್ದಾರೆ.

    ರೇಣಾಕಾಸ್ವಾಮಿ ನಿಧನದಿಂದ ಅವರ ಕುಟುಂಬಕ್ಕೆ ಆಘಾತವಾಗಿದೆ. ಅವರ ಕುಟುಂಬದ ಪರ ಧ್ರುವ ಫ್ಯಾನ್ಸ್ ಬೆಂಬಲಕ್ಕೆ ನಿಂತಿದ್ದಾರೆ. ಧ್ರುವ ಅಭಿಮಾನಿ ಸಂಘದ ಅಧ್ಯಕ್ಷ ಮಹಾನ್ & ಟೀಮ್ ಇದೀಗ ರೇಣುಕಾಸ್ವಾಮಿ ಕುಟುಂಬಸ್ಥರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ:Drugs Case: ನನ್ನ ಮೇಲೆ ಬೇಕಂತಲೇ ಟಾರ್ಗೆಟ್ ಮಾಡಿದರು- ಕಣ್ಣೀರಿಟ್ಟ ಸಂಜನಾ ಗಲ್ರಾನಿ

    ಈ ವೇಳೆ, ನಟ ಧ್ರುವ ಸರ್ಜಾ (Dhruva Sarja) ಕೂಡ ಕರೆ ಮಾಡಿ ಮಾತನಾಡಿ, ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ನಿಮ್ಮೊಂದಿಗೆ ಸದಾ ನಾವು ಇರುತ್ತೇವೆ. ಏನೇ ಇದ್ದರೂ ತಿಳಿಸಿ ಎಂದು ರೇಣುಕಾಸ್ವಾಮಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ ಧ್ರುವ ಸರ್ಜಾ.

  • ಧ್ರುವ ಸರ್ಜಾ ನಟನೆಯ ‘ಬಹದ್ದೂರ್’ ರೀ ರಿಲೀಸ್

    ಧ್ರುವ ಸರ್ಜಾ ನಟನೆಯ ‘ಬಹದ್ದೂರ್’ ರೀ ರಿಲೀಸ್

    ರ್. ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್ ಶ್ರೀನಿವಾಸ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ, ಚೇತನ್ ಕುಮಾರ್ ನಿರ್ದೇಶನದ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ಹಾಗೂ ರಾಧಿಕಾ‌ ಪಂಡಿತ್ ನಾಯಕಿಯಾಗಿ ನಟಿಸಿದ್ದ ಸೂಪರ್ ಹಿಟ್ “ಬಹದ್ದೂರ್” ಚಿತ್ರ 2014 ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಹತ್ತು ವರ್ಷಗಳ ನಂತರ ಜೂನ್ 21 ರಂದು ಈ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಗೋಕುಲ್ ಫಿಲಂಸ್ ಅವರು ಅದ್ದೂರಿಯಾಗಿ ಅನೇಕ ಚಿತ್ರಮಂದಿರಗಳಲ್ಲಿ ಚಿತ್ರವನ್ನು ರೀ ರಿಲೀಸ್ ಮಾಡುತ್ತಿದ್ದಾರೆ.

    ‘ಬಹದ್ದೂರ್’ ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರು ಧ್ವನಿ ನೀಡಿದ್ದರು.‌ ಪುನೀತ್ ಅವರು ತಮ್ಮ ಅಭಿನಯದ ಚಿತ್ರವನ್ನು ಹೊರತುಪಡಿಸಿ ಧ್ವನಿ ನೀಡಿದ ಮೊದಲ ಚಿತ್ರ “ಬಹದ್ದೂರ್”. ಚಿತ್ರದ ಮೊದಲ ಸನ್ನಿವೇಶಕ್ಕೆ ರವಿಚಂದ್ರನ್ ಅವರು ಕ್ಲ್ಯಾಪ್ ಮಾಡಿ ಹಾರೈಸಿದ್ದರು. ಪುನೀತ್ ರಾಜಕುಮಾರ್ ಅವರೆ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದ್ದರು. ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಇಂದಿಗೂ‌ ಜನಪ್ರಿಯ. “ಬಹದ್ದೂರ್ ” ಬಿಡುಗಡೆಯಾದ ಹತ್ತು ವರ್ಷಗಳಲ್ಲಿ ನೂರಾರೂ ಸಲ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದೆ.

     

    ಈ ಚಿತ್ರ ಪ್ರಸಾರವಾದಗಲೆಲ್ಲ ಉತ್ತಮ ಟಿ.ಆರ್.ಪಿ ಬರುತ್ತಿರುವುದು ವಿಶೇಷ. ಧ್ರುವ ಸರ್ಜಾ ಹಾಗು ರಾಧಿಕಾ ಪಂಡಿತ್ ಅವರ ಅದ್ಭುತ ಅಭಿನಯ ಈ ಚಿತ್ರದ ಹೈಲೆಟ್. ಇದು ಧ್ರುವ ಸರ್ಜಾ ಅಭಿನಯದ ಎರಡನೇ ಚಿತ್ರ. ಹತ್ತು ವರ್ಷಗಳ ಮೇಲೆ ಈ ಚಿತ್ರ ಮರು ಬಿಡುಗಡೆಯಾಗುತ್ತಿರುವುದು ಸಂತೋಷವಾಗಿದೆ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.

  • ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಿದ್ರೆ ಚಂದನ್-ನಿವೇದಿತಾ ಒಂದಾಗಬಹುದು: ಪ್ರಥಮ್

    ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಿದ್ರೆ ಚಂದನ್-ನಿವೇದಿತಾ ಒಂದಾಗಬಹುದು: ಪ್ರಥಮ್

    ಮಂಡ್ಯ: ಚಂದನ್ ಶೆಟ್ಟಿ, ನಿವೇದಿತಾ ಗೌಡ ಮಧ್ಯೆ ನಟ ಧ್ರುವ ಸರ್ಜಾ (Dhruva Sarja) ಮಧ್ಯಸ್ಥಿಕೆ ವಹಿಸಿದರೆ ಎಲ್ಲವೂ ಸರಿಯಾಗುತ್ತದೆ. ಧ್ರುವ ಸರ್ಜಾ ಇಂತಹ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದು ನಟ ಪ್ರಥಮ್ (Actor Pratham) ಹೇಳಿದ್ದಾರೆ.

    ಚಂದನ್-ನಿವೇದಿತಾ ಡಿವೋರ್ಸ್ (Chandan Shetty-Niveditha Gowda Divorce) ವಿಚಾರವಾಗಿ ಮಂಡ್ಯದಲ್ಲಿ (Mandya) ಮಾತನಾಡಿದ ಅವರು, ಚಂದನ್, ನಿವೇದಿತಾ ಬೇರ್ಪಟ್ಟ ಮಾತ್ರಕ್ಕೆ ಅವರಿಬ್ಬರೂ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಆಗ್ತಾರಾ? ಒಂದು ಶೋ ಮುಖ್ಯನಾ ಜೀವನ ಮುಖ್ಯನಾ ಎಂದು ಯೋಚನೆ ಮಾಡಿದರೆ ಜೀವನವೇ ಮುಖ್ಯ, ಚೆನ್ನಾಗಿ ಬದುಕಬೇಕು. ಕೆರಿಯರ್ ಬಗ್ಗೆ ಯೋಚಿಸದೆ ಇಬ್ಬರು ಮದುವೆ ಆಗಿಲ್ಲಾ. ಎಲ್ಲವನ್ನು ಯೋಚಿಸಿಯೇ ಅವರು ಮದುವೆ ಆಗಿದ್ದಾರೆ. ಸುಂದರವಾದ ಬದುಕು, ಇಬ್ಬರು ಚೆನ್ನಾಗಿ ಬದುಕುಬೇಕು ಎಂದರು. ಇದನ್ನೂ ಓದಿ:‌ ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಮೊದಲ ಟಿಕೇಟ್ ‘ಕಿಚ್ಚ’ನಿಗೆ

    ಧ್ರುವ ಅವರ ಮಾತನ್ನು ಚಂದನ್ ಕೇಳುತ್ತಾರೆ. ನಿವೇದಿತಾ-ಚಂದನ್ ವಿಚ್ಛೇದನ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಲಿ. ಚಂದನ್‌ಗೆ ಒಳ್ಳೆಯದಾಗಲಿ ಎಂದು ಧ್ರುವ ಪೊಗರು ಸಿನೆಮಾದಲ್ಲಿ ಅವಕಾಶ ಕೊಟ್ಟರು. ಪ್ರೀತಿ ಇದ್ದರೆ ಚಂದನ್, ಧ್ರುವ ಮಾತನ್ನು ಕೇಳುತ್ತಾರೆ. ಮಿಲನಾ ಸಿನಿಮಾದಲ್ಲಿ ವಿಚ್ಛೇದನ ಬಳಿಕವೂ ಒಂದಾಗಲ್ವಾ? ಇಚ್ಛಾಶಕ್ತಿ ಬೇರಾವುದು ದೊಡ್ಡದಲ್ಲ. ನಾನು ಮಿಲನಾ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಚಂದನ್‌ಗೆ ಕಳುಹಿಸುತ್ತೇನೆ. ಅದನ್ನು ನೋಡಿಯಾದರೂ ಚಂದನ್ ಮನಸ್ಸು ಬದಲಾಗಲಿ ಎಂದು ಹೇಳಿದರು. ಇದನ್ನೂ ಓದಿ: ಡಿವೋರ್ಸ್ ವಿಚಾರ ಅಧಿಕೃತವಾಗಿ ಬಹಿರಂಗಪಡಿಸಿದ ಚಂದನ್- ನಿವೇದಿತಾ

    ಯುವ ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್ ಮಾಡಿದ್ದು ನನಗೆ ಎಫೆಕ್ಟ್ ಆಗಿತ್ತು. ಆ ಘಟನೆಯಿಂದ ಯುವ ದಸರಾ ವೇದಿಕೆಯಲ್ಲಿ ನನ್ನ ಸಿನಿಮಾ ಪ್ರೊಮೋಷನ್‌ಗೆ ಅವಕಾಶ ಸಿಗಲಿಲ್ಲ. ಅದರಿಂದ ಚಂದನ್ ಮೇಲೆ ಕೆಲದಿನ ಕೋಪ ಮಾಡಿಕೊಂಡಿದ್ದೆ. ಬಳಿಕ ಪರಸ್ಪರ ಮಾತನಾಡಿದಾಗ ನಾವಿಬ್ಬರು ಒಳ್ಳೆಯ ಸ್ನೇಹಿತರಾದೆವು. ಚಂದನ್‌ಗೆ ಕೇಳುವ ವಿವೇಚನೆ ಇದೆ. ಅರೇಂಜ್ ಮ್ಯಾರೇಜ್ ಆದರೆ ಕಂಟ್ರೋಲ್ ಇರುತ್ತದೆ. ಲವ್ ಮ್ಯಾರೇಜ್ ಆದರೆ ನಮ್ಮ ಜುಟ್ಟು ಅವರ ಕೈಯಲ್ಲಿರುತ್ತದೆ. ಈ ಹಿಂದೆ ಯಾವ ವಿಚ್ಛೇದನವೂ ಇರಲಿಲ್ಲ. ನಮ್ಮ ಹಿರಿಯರು ನೂರಾರು ಕಾಲ ದಾಂಪತ್ಯ ಜೀವನ ನಡೆಸಿಲ್ವಾ ಎಂದು ಉದಾಹರಣೆ ನೀಡಿದರು. ಇದನ್ನೂ ಓದಿ: ಜೂನ್‌ 21ರಿಂದ ಶುರುವಾಗಲಿದೆ ಅನಿಲ್ ಕಪೂರ್ ನಿರೂಪಣೆಯ ಬಿಗ್ ಬಾಸ್ ಒಟಿಟಿ

    350 ಕಿ.ಮೀ ದೂರದಲ್ಲಿ ಕಾರ್ಯಕ್ರಮ ಇದ್ದರೂ ಮದುವೆ ದಿನ ನಮ್ಮ ಮನೆಗೆ ಬಂದು ಚಂದನ್ ವಿಶ್ ಮಾಡಿದ್ದರು. ಮದುವೆ, ತಾಳಿ ಬಗ್ಗೆ ಚಂದನ್‌ಗೆ ಗೌರವ ಇದೆ. ಯಾರೋ ಮಧ್ಯದಲ್ಲಿ ತೊಂದರೆ ಮಾಡಿದ್ದಾರೆ ಅಷ್ಟೇ. ಹಾಳಾದರೆ ಖುಷಿ ಪಡುವವರು ಸಾಕಷ್ಟು ಜನ ಇದ್ದಾರೆ. ನಾನು ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ನಿಮ್ಮ ನಿರ್ಧಾರ ಸರಿ ಎನ್ನುವವರು ಯಾರೂ ಕಷ್ಟದಲ್ಲಿ ಬರಲ್ಲ. ಹಾಳಾಗಲಿ ಎನ್ನುವವರ ಮಧ್ಯೆ ಚೆನ್ನಾಗಿ ಬದುಕು ಚಂದನ್. ಅವರಿಬ್ಬರನ್ನು ಒಂದು ಮಾಡುವಂತೆ ಜನರು ನನಗೆ ಮೆಸೆಜ್ ಮಾಡುತ್ತಿದ್ದಾರೆ. ನನ್ನ ಮಾತು ಕೇಳ್ತಾರಾ ಅವರು? ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ

  • ಚಿರು ಸರ್ಜಾ 4ನೇ ವರ್ಷದ ಪುಣ್ಯ ಸ್ಮರಣೆ- ಕುಟುಂಬಸ್ಥರಿಂದ ಪೂಜೆ

    ಚಿರು ಸರ್ಜಾ 4ನೇ ವರ್ಷದ ಪುಣ್ಯ ಸ್ಮರಣೆ- ಕುಟುಂಬಸ್ಥರಿಂದ ಪೂಜೆ

    ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ (Chiranjeevi Sarja) 4ನೇ ವರ್ಷದ ಪುಣ್ಯ ಸ್ಮರಣೆ ಇಂದು ನಡೆಯಿತು. ಕನಕಪುರ ರಸ್ತೆಯ ನೆಲಗುಳಿಯ ಫಾರಂಹೌಸ್‌ನಲ್ಲಿರುವ ಚಿರು ಸಮಾಧಿಗೆ ಧ್ರುವ ಸರ್ಜಾ (Dhruva Sarja) ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಗೇಲಿ ಮಾಡಿದ ಬಾಲಿವುಡ್ ಮುಂದೆ ಗೆದ್ದು ಬೀಗಿದ ಕಂಗನಾ

    ಚಿರಂಜೀವಿ ಸರ್ಜಾ 4ನೇ ವರ್ಷದ ಪುಣ್ಯ ಸ್ಮರಣೆ ನೆಲಗುಳಿಯ ಫಾರಂಹೌಸ್‌ನಲ್ಲಿ ಜರುಗಿದೆ. ಚಿರು ಸಮಾಧಿಗೆ ಸಹೋದರ ಧ್ರುವ ಸರ್ಜಾ ಪೂಜೆ ಸಲ್ಲಿಸಿದ್ದರು. ಈ ವೇಳೆ, ಪತ್ನಿ ಪ್ರೇರಣಾ, ಅತ್ತಿಗೆ ಮೇಘನಾ ರಾಜ್ (Meghana Raj), ಪುತ್ರ ರಾಯನ್, ಸುಂದರ ರಾಜ್ ದಂಪತಿ, ಚಿರಂಜೀವಿ ಸರ್ಜಾ ಪೋಷಕರು ಸೇರಿದಂತೆ ‘ಮಾರ್ಟಿನ್’ (Martin Film) ಚಿತ್ರತಂಡ ಕೂಡ ಭಾಗಿಯಾಗಿತ್ತು.

    ಅಂದಹಾಗೆ, ಅಭಿಮಾನಿಗಳಿಗೂ ಚಿರಂಜೀವಿ ಸಮಾಧಿ ದರ್ಶನ ಮಾಡೋಕೆ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿ ಚಿರು ಸಮಾಧಿ ದರ್ಶನ ಪಡೆದರು. ಇದನ್ನೂ ಓದಿ:ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ರಿಷಬ್ ಶೆಟ್ಟಿ ದಂಪತಿ

    2020ರಲ್ಲಿ ಜೂನ್ 7ರಂದು ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದರು. ಬಳಿಕ ಜ್ಯೂ.ಚಿರು ಹುಟ್ಟಿದ್ದು, ಸರ್ಜಾ ಕುಟುಂಬಕ್ಕೆ ಖುಷಿ ಕೊಟ್ಟಿತ್ತು. ಈಗ ಮಗನ ಪಾಲನೆಯಲ್ಲಿ ಮೇಘನಾ ರಾಜ್ ತೊಡಗಿಸಿಕೊಂಡಿದ್ದಾರೆ.

  • ಅಣ್ಣನ ನೆನೆದು ಮಿಸ್ಸಿಂಗ್ ಯೂ ಡ್ಯೂಡ್ ಎಂದ ಧ್ರುವ ಸರ್ಜಾ

    ಅಣ್ಣನ ನೆನೆದು ಮಿಸ್ಸಿಂಗ್ ಯೂ ಡ್ಯೂಡ್ ಎಂದ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ (Chiranjeevi Sarja) ಅಗಲಿ ಜೂನ್ 7ಕ್ಕೆ ನಾಲ್ಕು ವರ್ಷಗಳು ಕಳೆದಿವೆ. ಇಂದಿಗೂ ಚಿರು ಅಗಲಿಕೆ ನೋವನ್ನು ಅವರ ಕುಟುಂಬಕ್ಕಿದೆ. ಇದೀಗ ಚಿರಂಜೀವಿ ಪುಣ್ಯಸ್ಮರಣೆಯಂದು ಧ್ರುವ (Dhruva Sarja) ಭಾವುಕರಾಗಿದ್ದಾರೆ. ಅಣ್ಣನ ಕುರಿತು ಪೋಸ್ಟ್ ಮಾಡಿದ್ದಾರೆ.

    ಚಿರಂಜೀವಿ ಪುಣ್ಯಸ್ಮರಣೆಯಂದು ‘ಮಿಸ್ಸಿಂಗ್ ಯೂ ಡ್ಯೂಡ್’ ಎಂದು ಧ್ರುವ ಹೇಳಿದ್ದಾರೆ. ಅಣ್ಣನ ಫೋಟೋ ಶೇರ್ ಮಾಡಿ ಅಪ್ಪ, ಅಮ್ಮ ಮತ್ತು ನಾವೆಲ್ಲರೂ ನಿನ್ನನ್ನು ಮಿಸ್ ಮಾಡಿಕೊಳ್ತಿದ್ದೇವೆ ಎಂದು ಧ್ರುವ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಜನಿಕಾಂತ್‌ಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

    ಅಂದಹಾಗೆ, ಅಣ್ಣ ಚಿರು ಜೊತೆ ಧ್ರುವಗೆ ಉತ್ತಮ ಒಡನಾಟ ಇತ್ತು. ಕೆಲ ತಿಂಗಳುಗಳ ಹಿಂದೆ ಅಣ್ಣ ಚಿರು ಸಮಾಧಿ ಬಳಿ ಧ್ರುವ ನಿದ್ದೆ ಮಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಇದು ಚಿರು ಜೊತೆ ಧ್ರುವ ಒಡನಾಟ ಅದೆಷ್ಟರ ಮಟ್ಟಿಗೆ ಇತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು.

    ಚಿರಂಜೀವಿ ನಟಿಸಿದ ಕೊನೆಯ ‘ರಾಜ ಮಾರ್ತಾಂಡ’ ಚಿತ್ರಕ್ಕೂ ಧ್ರುವ ಅವರೇ ಅಣ್ಣ ಪಾತ್ರಕ್ಕೆ ವಾಯ್ಸ್ ಡಬ್ ಮಾಡಿದ್ದರು. ಜೊತೆಗೆ ರಿಲೀಸ್ ವೇಳೆ, ಚಿತ್ರತಂಡಕ್ಕೆ ಸಾಥ್ ನೀಡುತ್ತಲೇ ಬಂದಿದ್ದರು.

  • ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ಚಾಟ್ಸ್ ಸವಿದ ಧ್ರುವ ಸರ್ಜಾ

    ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ಚಾಟ್ಸ್ ಸವಿದ ಧ್ರುವ ಸರ್ಜಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ತೀರ ಸಿಂಪಲ್ ವ್ಯಕ್ತಿ. ಸ್ಟಾರ್ ಆಗಿದ್ರೂ ಅಹಂಕಾರ ತೋರಿಸದೇ ಪ್ರತಿಯೊಬ್ಬರ ಜೊತೆ ಧ್ರುವ ಬೆರೆಯುತ್ತಾರೆ. ಎಂದಿಗೂ ಅವರು ಸ್ಟಾರ್ ಡಮ್ ತಲೆಗೆ ಏರಿಸಿಕೊಂಡಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ನಿಂತು ಧ್ರುವ ತಿಂಡಿ ತಿಂದಿದ್ದಾರೆ.

    ಧ್ರುವ ಸರ್ಜಾ ಮೈಸೂರಿಗೆ (Mysore) ಭೇಟಿ ನೀಡಿದ್ದಾರೆ. ಈ ವೇಳೆ, ರೋಡ್ ಸೈಡ್ ಗಾಡಿ ಅಂಗಡಿಗೆ ಭೇಟಿ ನೀಡಿ ಸಾಮಾನ್ಯರಂತೆ ಸ್ನೇಹಿತರ ಜೊತೆ ತಟ್ಟೆ ಇಡ್ಲಿ, ಮತ್ತು ಚಾಟ್ಸ್ ಸವಿದಿದ್ದಾರೆ. ಬಳಿಕ ಅಭಿಮಾನಿಗಳ ಜೊತೆ ನಟ ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ವಿಶ್ವಕ್ ಸೇನ್ ಎಂಟ್ರಿ

    ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಫ್ಯಾನ್ಸ್‌ಗೆ ಧ್ರುವ ಗುಡ್ ನ್ಯೂಸ್ ನೀಡಿದ್ದರು. ‘ಮಾರ್ಟಿನ್’ (Martin) ಸಿನಿಮಾ ಇದೇ ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ. ‘ಕೆಡಿ’ (KD) ಸಿನಿಮಾ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ.

    ಇನ್ನೂ ‘ಪೊಗರು’ (Pogaru Film) ಚಿತ್ರ 3 ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಇದಾದ ಬಳಿಕ ಈಗ ‘ಮಾರ್ಟಿನ್’ ಮತ್ತು ‘ಕೆಡಿ’ ಚಿತ್ರದ ಮೂಲಕ ನಟ ಬರುತ್ತಿದ್ದಾರೆ. ಹಾಗಾಗಿ 2 ಚಿತ್ರಗಳ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ‘ಕೆಡಿ’ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಲುಕ್‍ ಸೂಪರ್: ಶೂಟಿಂಗ್‍ ಕಂಪ್ಲೀಟ್

    ‘ಕೆಡಿ’ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಲುಕ್‍ ಸೂಪರ್: ಶೂಟಿಂಗ್‍ ಕಂಪ್ಲೀಟ್

    ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕೆಡಿ ಸಿನಿಮಾದ ಶೂಟಿಂಗ್ ಗಾಗಿ ಮೈಸೂರಿನಲ್ಲಿ ಉಳಿದುಕೊಂಡಿದ್ದರು. ಇದೀಗ ತಮ್ಮ ಭಾಗದ ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ ಶಿಲ್ಪಾ. ಈಗ ಶಿಲ್ಪಾ ಶೆಟ್ಟಿ ಅವರ ಕೆಡಿ ಸಿನಿಮಾದ ಫೋಟೋವೊಂದು ರಿಲೀಸ್ ಆಗಿದ್ದು, ರೆಟ್ರೋ ಶೈಲಿಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

    ನಿನ್ನೆಯಷ್ಟೇ ತಮ್ಮ ಭಾಗದ ಶೂಟಿಂಗ್ ಮುಗಿದ ನಂತರ ಸೆಟ್ ನಲ್ಲಿ ನಿರ್ದೇಶಕ ಜೋಗಿ ಪ್ರೇಮ್ (Prem) ಜೊತೆ ತಮಾಷೆ ಮಾಡಿದ್ದಾರೆ. ಜೊತೆಗೆ ಈವರೆಗಿನ ಚಿತ್ರೀಕರಣದ ನೆನಪುಗಳನ್ನೂ ಅವರು ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ (KD Film) ಸಿನಿಮಾ ಇದೇ ಡಿಸೆಂಬರ್‌ಗೆ ತೆರೆಗೆ ಅಪ್ಪಳಿಸಲಿದೆ. ಇದರ ನಡುವೆ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾ ರಿಲೀಸ್ ಮುನ್ನವೇ ದುಬಾರಿ ಮೊತ್ತಕ್ಕೆ ‘ಕೆಡಿ’ ಚಿತ್ರದ ಆಡಿಯೋ ರೈಟ್ಸ್ ರಿಲೀಸ್ ಆಗಿದೆ.

    ‘ಕೆಡಿ’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ‘ಕೆಡಿ’ ರೆಟ್ರೋ ಸ್ಟೈಲ್ ಸಿನಿಮಾ. ಹಾಗಾಗಿ ಚಿತ್ರತಂಡ ಕೂಡ ಅದೇ ಲುಕ್‌ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಕನ್ನಡ ಚಿತ್ರರಂಗದಲ್ಲೇ ದಾಖಲೆ ಮೊತ್ತಕ್ಕೆ ‘ಕೆಡಿ’ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಚಿತ್ರತಂಡ ಹೇಳಿದೆ. ಆನಂದ್ ಆಡಿಯೋ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. 17.70 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎಂದು ತಿಳಿಸಿದ್ದಾರೆ.

     

    ಈ ವೇಳೆ ನಟ ಧ್ರುವ ಸರ್ಜಾ ಮಾತನಾಡಿ, ‘ಕೆಡಿ’ ಅಂದ್ರೆ ಕಾಳಿದಾಸ. ಈ ಸಿನಿಮಾದಲ್ಲಿ ಕಾಳಿದಾಸ ನಾನೇ. ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಅದು ಕೆವಿಎನ್ ಸಂಸ್ಥೆಯಿಂದ ಆರಂಭ ಆಯ್ತು. ಚಿತ್ರದ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದು, ತುಂಬಾ ಖುಷಿ ಆಗಿದೆ. ನನ್ನ ‘ಅದ್ಧೂರಿ’ ಸಿನಿಮಾ 4 ಕೋಟಿ ರೂ. ಖರ್ಚಿನಲ್ಲಿ ನಿರ್ಮಾಣವಾಗಿತ್ತು. ಆದರೆ ಈಗ ಕೆಡಿ ಸಿನಿಮಾದ ಆಡಿಯೋ ಹಕ್ಕು ಮಾತ್ರ 17.70 ಕೋಟಿ ರೂ. ಸೇಲ್ ಆಗಿದೆ. ಸಿನಿಮಾ ಕೂಡ ತುಂಬಾ ರಿಚ್ ಆಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ

  • ‘ಕೆಡಿ’ ಶೂಟಿಂಗ್ ಮುಗಿಸಿ ಜೋಗಿ ಪ್ರೇಮ್ ಜೊತೆ ಚಿಲ್ ಮಾಡಿದ ನಟಿ ಶಿಲ್ಪಾ ಶೆಟ್ಟಿ

    ‘ಕೆಡಿ’ ಶೂಟಿಂಗ್ ಮುಗಿಸಿ ಜೋಗಿ ಪ್ರೇಮ್ ಜೊತೆ ಚಿಲ್ ಮಾಡಿದ ನಟಿ ಶಿಲ್ಪಾ ಶೆಟ್ಟಿ

    ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕೆಡಿ ಸಿನಿಮಾದ ಶೂಟಿಂಗ್ ಗಾಗಿ ಮೈಸೂರಿನಲ್ಲಿ ಉಳಿದುಕೊಂಡಿದ್ದರು. ಇದೀಗ ತಮ್ಮ ಭಾಗದ ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ ಶಿಲ್ಪಾ. ಆನಂತರ ಸೆಟ್ ನಲ್ಲಿ ನಿರ್ದೇಶಕ ಜೋಗಿ ಪ್ರೇಮ್ (Prem) ಜೊತೆ ತಮಾಷೆ ಮಾಡಿದ್ದಾರೆ. ಜೊತೆಗೆ ಈವರೆಗಿನ ಚಿತ್ರೀಕರಣದ ನೆನಪುಗಳನ್ನೂ ಅವರು ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ (KD Film) ಸಿನಿಮಾ ಇದೇ ಡಿಸೆಂಬರ್‌ಗೆ ತೆರೆಗೆ ಅಪ್ಪಳಿಸಲಿದೆ. ಇದರ ನಡುವೆ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾ ರಿಲೀಸ್ ಮುನ್ನವೇ ದುಬಾರಿ ಮೊತ್ತಕ್ಕೆ ‘ಕೆಡಿ’ ಚಿತ್ರದ ಆಡಿಯೋ ರೈಟ್ಸ್ ರಿಲೀಸ್ ಆಗಿದೆ.

    ‘ಕೆಡಿ’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ‘ಕೆಡಿ’ ರೆಟ್ರೋ ಸ್ಟೈಲ್ ಸಿನಿಮಾ. ಹಾಗಾಗಿ ಚಿತ್ರತಂಡ ಕೂಡ ಅದೇ ಲುಕ್‌ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಕನ್ನಡ ಚಿತ್ರರಂಗದಲ್ಲೇ ದಾಖಲೆ ಮೊತ್ತಕ್ಕೆ ‘ಕೆಡಿ’ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಚಿತ್ರತಂಡ ಹೇಳಿದೆ. ಆನಂದ್ ಆಡಿಯೋ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. 17.70 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎಂದು ತಿಳಿಸಿದ್ದಾರೆ.

    ಈ ವೇಳೆ ನಟ ಧ್ರುವ ಸರ್ಜಾ ಮಾತನಾಡಿ, ‘ಕೆಡಿ’ ಅಂದ್ರೆ ಕಾಳಿದಾಸ. ಈ ಸಿನಿಮಾದಲ್ಲಿ ಕಾಳಿದಾಸ ನಾನೇ. ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಅದು ಕೆವಿಎನ್ ಸಂಸ್ಥೆಯಿಂದ ಆರಂಭ ಆಯ್ತು. ಚಿತ್ರದ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದು, ತುಂಬಾ ಖುಷಿ ಆಗಿದೆ. ನನ್ನ ‘ಅದ್ಧೂರಿ’ ಸಿನಿಮಾ 4 ಕೋಟಿ ರೂ. ಖರ್ಚಿನಲ್ಲಿ ನಿರ್ಮಾಣವಾಗಿತ್ತು. ಆದರೆ ಈಗ ಕೆಡಿ ಸಿನಿಮಾದ ಆಡಿಯೋ ಹಕ್ಕು ಮಾತ್ರ 17.70 ಕೋಟಿ ರೂ. ಸೇಲ್ ಆಗಿದೆ. ಸಿನಿಮಾ ಕೂಡ ತುಂಬಾ ರಿಚ್ ಆಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

     

    ಅಂದಹಾಗೆ, ಶಾರುಖ್ ನಟನೆಯ ‘ಪಠಾಣ್’ ಚಿತ್ರಕ್ಕೆ 180 ಜನರನ್ನು ಬಳಸಿ, ಆರ್ಕೆಸ್ಟ್ರಾ ಮಾಡಿಸಲಾಗಿತ್ತು. ಆದರೆ ‘ಕೆಡಿ’ ಸಿನಿಮಾ ಅದನ್ನು ಮೀರಿಸಿದೆ. ಆ ಮೂಲಕ ಮೇಕಿಂಗ್ ಹಂತದಲ್ಲೇ ಸಿನಿಮಾ ಹೊಸ ದಾಖಲೆ ಬರೆದಿದೆ ಎಂದು ಮಾಹಿತಿ ನೀಡಿದ್ದಾರೆ.

  • ಜಿಮ್ ಟ್ರೈನರ್ ಪ್ರಶಾಂತ್ ಮೇಲಿನ ಹಲ್ಲೆ ಬಗ್ಗೆ ಧ್ರುವ ಸರ್ಜಾ ರಿಯಾಕ್ಷನ್

    ಜಿಮ್ ಟ್ರೈನರ್ ಪ್ರಶಾಂತ್ ಮೇಲಿನ ಹಲ್ಲೆ ಬಗ್ಗೆ ಧ್ರುವ ಸರ್ಜಾ ರಿಯಾಕ್ಷನ್

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಜಿಮ್ ಟ್ರೈನರ್ ಪ್ರಶಾಂತ್ (Gym Trainer Prashanth) ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮೇ 26ರ ರಾತ್ರಿ ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪ್ರಶಾಂತ್ ಮೇಲಿನ ಹಲ್ಲೆ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ತಮಿಳು ನಟ ಸಿಂಬುಗೆ ಜಾನ್ವಿ ಕಪೂರ್ ನಾಯಕಿ

    ಪ್ರಶಾಂತ್ ಪರ್ಸನಲ್ ಏನಿದೆ ಎಂಬುದು ಗೊತ್ತಿಲ್ಲ. ಅವರಿಗೆ ಯಾರೋ ಮಚ್‌ನಲ್ಲಿ ಬಂದು ಹೊಡೆದಿದ್ದಾರೆ. ಯಾರು ಅಂತ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಅಕ್ಷಯ್‌ ಆಸ್ಪತ್ರೆಯಲ್ಲಿ ಪ್ರಶಾಂತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿ ಮೇಲೆ ಎಫ್‌ಐಆರ್ ಆಗಿದೆ. ಕಾನೂನು ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ ಧ್ರುವ. ಇತ್ತೀಚೆಗೆ ಮಂತ್ರಾಲಯಕ್ಕೆ ಹೋಗಿ ಬರುತ್ತೇನೆ ಅಂದ ಕಳಿಸಿಕೊಟ್ಟಿದ್ದೆ, ಮುಡಿನೂ ಕೊಟ್ಟಿದ್ದಾರೆ. ನಿನ್ನೆ ನನ್ನ ಜೊತೆನೇ ಇದ್ದರು ಎಂದಿದ್ದಾರೆ. ಇಂದು ಸಂಜೆಯೊಳಗೆ ಪ್ರಶಾಂತ್ ಡಿಸ್ಜಾರ್ಜ್ ಆಗುತ್ತಾರೆ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.

    ಪ್ರಶಾಂತ್ ನಮ್ ಹುಡುಗ. ಅವರ ಜೊತೆಗಿರುತ್ತೇನೆ. ಸದ್ಯ ಅವರು ಔಟ್ ಆಫ್ ಡೇಂಜರ್ ಎಂದು ಧ್ರುವ ತಿಳಿಸಿದ್ದಾರೆ. ಬೆಂಗಳೂರಲ್ಲಿ ಮಚ್ಚು ಹಿಡ್ಕೊಂಡು ಆರಾಮವಾಗಿ ಓಡಾಡುತ್ತಿದ್ದಾರೆ. ಒಬ್ಬ ಸಿಟಿಜನ್ ಆಗಿ ಹೇಳೋದಾದ್ರೆ ನಮ್ ಫ್ರೆಂಡ್ ಅಷ್ಟೇ ಅಲ್ಲ, ಬೇರೆ ಯಾರಿಗೂ ಹೀಗೆ ಆಗಬಾರದು ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.

    ಅಂದಹಾಗೆ, ಧ್ರುವ ಸರ್ಜಾ ಮನೆಯ ಪಕ್ಕದ ರೋಡ್‌ನಲ್ಲಿ ನಡೆದ ಘಟನೆ ಇದಾಗಿದ್ದು,‌ ಭಾನುವಾರ ರಾತ್ರಿ (ಮೇ 26) ನಂಬರ್ ಪ್ಲೇಟ್ ಇಲ್ಲದ ಗಾಡಿಯಲ್ಲಿ ಮುಖ ಮುಚ್ಚಿಕೊಂಡು ಪ್ರಶಾಂತ್ ಮೇಲೆ ಇಬ್ಬರು ಅಪರಿಚಿತರು ಬೈಕ್ ಮೇಲೆ ಬಂದು ದಾಳಿ ನಡೆಸಿದ್ದಾರೆ.