ಸಿನಿಮಾ ಕೆಲಸ ನಡುವೆ ಇಂದು (ಸೆ.12) ಅರ್ಜುನ ಅವಧೂತ ಗುರೂಜಿ ಅವರ ನಿವಾಸಕ್ಕೆ ಧ್ರುವ ಕೊಟ್ಟಿದ್ದಾರೆ. ನಟ ಗುರೂಜಿಯ ಆಶೀರ್ವಾದ ಪಡೆದಿದ್ದಾರೆ. ಧ್ರುವಗೆ ಗುರೂಜಿ ಸನ್ಮಾನ ಮಾಡಿ ಗೌರವಿಸಿದ್ದಾರೆ.
ಇನ್ನೂ ಧ್ರುವ ನಟನೆಯ ‘ಮಾರ್ಟಿನ್’ (Martin) ಮತ್ತು ‘ಕೆಡಿ’ (KD Film) ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿದೆ. ಎಪಿ ಅರ್ಜುನ್ ಜೊತೆಗಿನ ‘ಮಾರ್ಟಿನ್’ ಮತ್ತು ಜೋಗಿ ಪ್ರೇಮ್ ಜೊತೆಗಿನ ‘ಕೆಡಿ’ ಸಿನಿಮಾಗಳ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.
ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ (Prashanth Poojari) ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ (Dhruva Sarja) ಮ್ಯಾನೇಜರ್ ಅಶ್ವಿನ್‌ರನ್ನು (Manager Ashwin) ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗಾಗಿ ಶಕ್ತಿದೇವತೆಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ
ಮೇ.26 ರಂದು ರಾತ್ರಿ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆದಿತ್ತು. ಹರ್ಷ ಮತ್ತು ಸುಭಾಷ್ ಎಂಬುವವರು ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿಸಿದ್ದು ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ. ಧ್ರುವಗೆ ನಾಗೇಂದ್ರ ಚಾಲಕನಾಗಿಯೂ ಕೆಲಸ ಮಾಡಿಕೊಂಡಿದ್ದರು. ಹಲ್ಲೆಗೆ ಧ್ರುವ ಮ್ಯಾನೇಜರ್ ಅಶ್ವಿನ್ ನಾಗೇಂದ್ರಗೆ ಸಾಥ್ ಕೊಟ್ಟಿದ್ದ ಎಂದು ತಿಳಿದು ಬಂದಿದೆ.
ಪ್ರಶಾಂತ್ ಪೂಜಾರಿ ಅವರು ಧ್ರುವ ಸರ್ಜಾಗೆ ಆಪ್ತರಾಗಿದ್ದರು. ಧ್ರುವಗೆ ಜಿಮ್‌ನಲ್ಲಿ ತರಬೇತಿ ನೀಡುತ್ತಿದ್ದುದ್ದು ಇದೇ ಪ್ರಶಾಂತ್. ಇಬ್ಬರ ನಡುವಿನ ಆಪ್ತತೆಯನ್ನು ನಾಗೇಂದ್ರ ಹಾಗೂ ಅಶ್ವಿನ್‌ಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಹಲ್ಲೆಗೆ ಪ್ಲ್ಯಾನ್ ರೂಪಿಸಿದರು. ತಾವೇ ಹಲ್ಲೆ ಮಾಡಿದರೆ ಗೊತ್ತಾಗುತ್ತದೆ ಎಂದು ಸ್ನೇಹಿತರ ಕೈಯಲ್ಲಿ ಹಲ್ಲೆ ಮಾಡಿಸಿದ್ದರಂತೆ. ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಅವರನ್ನು ಮುಂದಕ್ಕೆ ಬಿಟ್ಟು ಅಶ್ವಿನ್ ಹಲ್ಲೆ ಮಾಡಿಸಿದ್ದರು. ತನಿಖೆ ವೇಳೆ ಅಶ್ವಿನ್ ಪಾತ್ರ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಅಶ್ವಿನ್ ಬಂಧಿಸಲಾಗಿತ್ತು. ಆದರೆ ಕಳೆದ 10 ದಿನಗಳ ಹಿಂದೆ ವಿಚಾರಣೆ ಎದುರಿಸಿ ಜಾಮೀನು ಪಡೆದು ಅಶ್ವಿನ್ ಹೊರ ಬಂದಿದ್ದಾರೆ.
ಕಳೆದ ವರ್ಷ ಅಶ್ವಿನ್ ಹುಟ್ಟುಹಬ್ಬಕ್ಕೆ ಧ್ರುವ ಸರ್ಜಾ ಅವರು ದುಬಾರಿ ಫಾರ್ಚೂನರ್ ಕಾರನ್ನು ಗಿಫ್ಟ್ ಮಾಡಿದ್ದರು.
ರಾಷ್ಟ್ರದಾದ್ಯಂತ ಗಣೇಶ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿದೆ. ವಿಘ್ನವಿನಾಶಕ, ಪಾರ್ವತಿ ಪುತ್ರ ಗಣಪನ ಆರಾಧನೆ ಮಾಡಲಾಗ್ತಿದೆ. ಪ್ರತಿ ಮನೆ ಮನಗಳಲ್ಲಿ ಗೌರಿ ಹಾಗೂ ಗಣೇಶನ ಆಗಮನವಾಗಿದೆ. ವಿಶೇಷವಾಗಿ ಅಲಂಕರಿಸಿ ವಿವಿಧ ರೀತಿಯಲ್ಲಿ ಅದ್ಧೂರಿಯಾಗಿ ಪೂಜೆ ಪುನಸ್ಕಾರಗಳನ್ನ ಮಾಡಲಾಗ್ತಿದೆ. ಇನ್ನು ಸ್ಯಾಂಡಲ್‌ವುಡ್ ಇದಕ್ಕೆ ಹೊರತಾಗಿಲ್ಲ. ಸೆಲೆಬ್ರಿಟಿಗಳು ತುಂಬಾನೇ ವಿಶೇಷವಾಗಿ ಗಣೇಶ ಹಬ್ಬವನ್ನ (Ganeshotsava) ಆಚರಿಸಿದ್ದಾರೆ.
ರಿಯಲ್‌ಸ್ಟಾರ್ ಉಪೇಂದ್ರ (Upendra) ತಮ್ಮ ಮನೆಯಲ್ಲಿ ಗೌರಿ ಗಣೇಶನನ್ನ ಕೂರಿಸಿ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಕುಟುಂಬಸ್ಥರು ಗೌರಿ ಗಣೇಶ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಕುಟುಂಬಸ್ಥರೆಲ್ಲ ಒಟ್ಟಾಗಿ ಗಣೇಶ ಚತುರ್ಥಿ ಆಚರಿಸಿದ ಕ್ಷಣವನ್ನ ಫೋಟೋದಲ್ಲಿ ಸೆರೆಹಿಡಿಯಲಾಗಿದೆ. ಸದ್ಯ ರಿಯಲ್‌ಸ್ಟಾರ್ ನಟಿಸಿ, ನಿರ್ದೇಶನ ಮಾಡಿರೋ `ಯುಐ’ ಸಿನಿಮಾಗಾಗಿ ಫ್ಯಾನ್ಸ್ ವೇಟ್ ಮಾಡ್ತಿದ್ದಾರೆ.
`ಕೆಡಿ’ ಸಿನಿಮಾ ತಂಡದಿಂದ ಗೌರಿ ಗಣೇಶ ಹಬ್ಬದ ಆಚರಣೆ ಮಾಡಲಾಗಿದೆ. ನಾಯಕ ಧ್ರುವ ಸರ್ಜಾ (Dhruva Sarja), ನಾಯಕಿ ರೀಷ್ಮಾ ನಾಣಯ್ಯ, ನಿರ್ದೇಶಕ ಪ್ರೇಮ್ ಹಾಗೂ ಇಡೀ ಚಿತ್ರತಂಡ ಗಣೇಶ ಚತುರ್ಥಿಯಲ್ಲಿ ಭಾಗಿಯಾಗಿದೆ. `ಕೆಡಿ’ ಸಿನಿಮಾತಂಡ ಶ್ವೇತ ವಸ್ತçಧಾರಿಗಳಾಗಿ ಪೂಜೆಯಲ್ಲಿ ಭಾಗಿಯಾಗಿದ್ದು, ವಿಶೇಷವಾಗಿ ಗಮನಸೆಳೆದಿದೆ. ಆ್ಯಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ನಟನೆಯ `ಮಾರ್ಟಿನ್’ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಗೆ ಬರೋಕೆ ಸಿದ್ಧವಾಗಿದೆ.
ನಟಿ ಶ್ವೇತಾ ಚಂಗಪ್ಪ ಕೂಡಾ ತಮ್ಮ ಮನೆಯಲ್ಲಿ ವಿಘ್ನೇಶ್ವರನನ್ನ ಕೂರಿಸಿ ವಿಶೇಷವಾಗಿ ಪೂಜೆ ಮಾಡಿದ್ದಾರೆ. ಗಣೇಶನ ಮುಂದೆ ಕುಳಿತು ನಾಡಿನ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ. ನಟಿ ಕವಿತಾ ಗೌಡ ಕೂಡಾ ಮನೆಯಲ್ಲಿ ಗಣೇಶನ ಕೂರಿಸಿ ವಿಶೇಷವಾಗಿ ಪೂಜೆ ಮಾಡಿದ್ದಾರೆ. ಕವಿತಾ ಹಾಗೂ ಚಂದನ್ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಅವರು ಕೋಲ್ಕತ್ತಾ ಟ್ರೈನಿ ವೈದ್ಯೆ (Kolkata Rape Murder Case) ಅತ್ಯಾಚಾರದ ಬಗ್ಗೆ ಧ್ವನಿಯೆತ್ತಿದ್ದಾರೆ. ಅತ್ಯಾಚಾರ ಎಸಗಿರೋರನ್ನು ನಡು ರಸ್ತೆಯಲ್ಲಿ ಸುಟ್ಟಾಕಬೇಕು ಎಂದು ಧ್ರುವ ಸರ್ಜಾ (Actor Dhruva Sarja) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ
‘ಎಲ್ಲರಿಗೂ ನಮಸ್ಕಾರ. ನಾನು ಮಾರ್ಟಿನ್ ಸಿನಿಮಾದ ಪ್ರಚಾರದಲ್ಲಿ ಇದ್ದೇನೆ ಎಂಬುದು ಹೌದು. ಮಾರ್ಟಿನ್ ಸಿನಿಮಾವನ್ನು ಒಂದು ನಿಮಿಷ ಪಕ್ಕಕ್ಕೆ ಇಟ್ಟುಬಿಡೋಣ. ಇವತ್ತು ವಿಡಿಯೋ ಮಾಡುತ್ತಿರುವ ಉದ್ದೇಶ, 2024ರ ಆಗಸ್ಟ್ 14ರ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ 16 ನಿಮಿಷಕ್ಕೆ ಒಂದು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಎಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ, ಗೌರವ ಇರುವುದಿಲ್ಲವೋ ಅಲ್ಲಿ ಭಗವಂತನೇ ಇರುವುದಿಲ್ಲ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಗಂಡು ಮಕ್ಕಳನ್ನು ಬೆಳೆಸುವಾಗ ಅವರಿಗೆ 3 ವಿಷಯಗಳನ್ನು ಹೇಳಿ ಕೊಡಬೇಕು. ಮೊದಲು ಹೆಣ್ಣು ಮಕ್ಕಳನ್ನು ಹೇಗೆ ಸೇಫ್ ಆಗಿ ನೋಡಿಕೊಳ್ಳಬೇಕು. ಹೆಣ್ಣಿಗೆ ಬೆಂಬಲವಾಗಿ ನಿಲ್ಲಬೇಕು. ಆ ನಂತರ ಹೆಣ್ಣು ಮಗಳಿಗೆ ಹೇಗೆ ಗೌರವಿಸಬೇಕು ಎಂಬುದನ್ನು ಹೇಳಿ ಕೊಡಬೇಕು ಎಂದಿದ್ದಾರೆ ನಟ ಧ್ರುವ.
ಈ ರೇಪಿಸ್ಟ್‌ಗಳು ಕಾನೂನು ಕೈಗೆ ಸಿಕ್ಕಿ ಕಾನೂನ್ಮತಕವಾಗಿ ಶಿಕ್ಷೆಯಾಗಲಿ ಎಂದು ಕೇಳಿಕೊಳ್ಳುತ್ತೇನೆ. ಅವರಿಗೆ ಈ ರೀತಿ ಶಿಕ್ಷೆ ಕೊಡುವುದರಿಂದ ತೃಪ್ತಿ ಅನ್ನೋದು ಆಗುವುದಿಲ್ಲ. ಇಂತಹವರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟು ಹಾಕಬೇಕು. ಅದು ಆದ್ರೂನು ತೃಪ್ತಿ ಅನ್ನೋದು ಆಗಲ್ಲ. ನಮ್ಮ ಮನೆಯಲ್ಲಿ ನನಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ. ಯಾರದ್ದೋ ಮನೆ ಮಗಳಿಗೆ ಅನ್ಯಾಯವಾಗಿದೆ ಎಂದಾಗ ನಾವು ಅವರ ಜೊತೆ ನಿಲ್ಲಬೇಕು. ಅತ್ಯಾಚಾರ ಆಗಿರುವ ವೈದ್ಯೆ ಹುಡುಗಿಗೆ ನ್ಯಾಯ ಸಿಗಬೇಕು. ನಾವೆಲ್ಲಾ ಒಗ್ಗಟಾಗಿ ನಿಲ್ಲಬೇಕು ಎಂದು ಧ್ರುವ ಸರ್ಜಾ ಕೋಲ್ಕತ್ತಾ ಪ್ರಕರಣದ ಬಗ್ಗೆ ಖಂಡಿಸಿ ಮಾತನಾಡಿದ್ದಾರೆ.
ಅಂದಹಾಗೆ, ಕೆಲ ದಿನಗಳ ಹಿಂದೆ ಕೋಲ್ಕತ್ತಾದ ಪ್ರಕರಣದ ಬಗ್ಗೆ ನಟಿ ಆಶಿಕಾ ರಂಗನಾಥ್ (Ashika Ranganath) ಕಿಡಿಕಾರಿದ್ದರು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಕ್ರೋಶ ಹೊರಹಾಕಿದ್ದರು.
‘ಕ್ರೆಡಿಟ್ ಕುಮಾರ’, ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿರುವ ಹೊಸ ಸಿನಿಮಾ. ‘ಬಾಂಡ್ ರವಿ’ ಖ್ಯಾತಿಯ ನಿರ್ದೇಶಕ ಪ್ರಜ್ವಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 2ನೇ ಸಿನಿಮಾ ಇದು. ಈ ಸಿನಿಮಾ ಮೂಲಕ ನಾಯಕನಾಗಿ ಹರೀಶ್ ಸೀನಪ್ಪ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 10ವರ್ಷಕ್ಕೂ ಅಧಿಕ ಸಮಯ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಹರೀಶ್ (Harish Senappa) ಇದೀಗ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಹೆಜ್ಜೆಯಾಗಿ ‘ಕ್ರೆಡಿಟ್ ಕುಮಾರ’ (Credit Kumar) ಚಿತ್ರಕ್ಕೆ ಮುಹೂರ್ತ ಮಾಡಿಕೊಳ್ಳುವ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja), ನಿರ್ದೇಶಕ ಎಸ್. ಮಹೇಂದರ್, ನಿರ್ಮಾಪಕ ಉದಯ್ ಮೆಹ್ತಾ, ಬಾಂಡ್ ರವಿ ಸ್ಟಾರ್ ಪ್ರಮೋದ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು ಶುಭಹಾರೈಸಿದರು.
ಸಿನಿಮಾಗೆ ಕ್ಲ್ಯಾಪ್ ಮಾಡಿ ಮಾತನಾಡಿದ ಧ್ರುವ ಸರ್ಜಾ, ‘ಹರೀಶ್ ಅವರಿಗೆ ಒಳ್ಳೆದಾಗಬೇಕು, ತುಂಬಾ ಕಷ್ಟಪಟ್ಟಿದ್ದಾರೆ’ ಎಂದರು. ಎಸ್, ಮಹೆಂದರ್ ಮಾತನಾಡಿ, ‘ಪಾಸಿಟಿವ್ ವೈಬ್ ಇದೆ. ಟೈಟಲ್ ತುಂಬಾ ಚೆನ್ನಾಗಿದೆ. ನಿರ್ದೇಶಕ ಪ್ರಜ್ವಲ್ ನಮ್ಮ ಹುಡುಗ. ನನ್ನ ಜೊತೆ ಕೆಲಸ ಮಾಡಿದ ಹುಡುಗ. ಸೆನ್ಸಿಬಲ್ ಇದಾರೆ. ಹರೀಶ್ ಕೂಡ ತುಂಬಾ ಸಮಯದಿಂದ ನೋಡಿದ ಹುಡುಗ. ನಿರ್ಮಾಪಕರಿಗೆ ನಾನು ಭರವಸೆ ನೀಡುತ್ತೇನೆ ಖಂಡಿತವಾಗಿಯೂ ಈ ಸಿನಿಮಾ ಚೆನ್ನಾಗಿ ಆಗುತ್ತೆ’ ಎಂದು ಹೇಳಿದರು. ನಟ ಪ್ರಮೋದ್ ಮಾತನಾಡಿ, ‘ನಿರ್ದೇಶಕ ಪ್ರಜ್ವಲ್ ಉತ್ತಮ ಕೆಲಸಗಾರ ಹಾಗೂ ಹರೀಶ್ ನನ್ನ ಗೆಳೆಯ ಒಳ್ಳೆದಾಗಲಿ’ ಎಂದರು.
ಕ್ರೆಡಿಟ್ ಕುಮಾರ ಒನ್ ಲೈನ್ ಸ್ಟೋರಿ ಹೇಳುವುದಾದರೆ ಸಾಲ ಮಾಡಿಕೊಂಡು ಒದ್ದಾಡುವ ಒಬ್ಬ ಕ್ಯಾಬ್ ಡ್ರೈವರ್ ನ ಕಥೆಯಾಗಿದೆ. ಕ್ರೆಡಿಟ್ ಕುಮಾರನಾಗಿ ಹರೀಸ್ ಸೀನಪ್ಪ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ ಪಾಯಲ್ ಚಂಗಪ್ಪ ಮಿಂಚುತ್ತಿದ್ದಾರೆ. ಕಿರು ಚಿತ್ರಗಳ ಮೂಲಕ ಖ್ಯಾತಿ ಗಳಿಸಿರುವ ಪಾಯಲ್ ಇದೀಗ ಮೊದಲ ಬಾರಿಗೆ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ಕ್ರೆಡಿಟ್ ಕುಮಾರ ಸಿನಿಮಾ ಮೂಲಕ ನಿರ್ಮಾಪಕರಾಗಿ ವಾಗೀಶ್ ಮುತ್ತಿಗೆ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ನಾಯಕಿ ಪಾಯಲ್ ಮಾತನಾಡಿ, ‘ಭೂಮಿ ಎನ್ನುವ ಪಾತ್ರದಲ್ಲಿ ಮಾಡುತ್ತಿದ್ದೇನೆ. ಶಾರ್ಟ್ ಸಿನಿಮಾ ಮಾಡಿದ್ದೇನೆ. ತುಂಬಾ ಪ್ರೀತಿ ಕೊಟ್ಟಿದ್ದೀರಾ. ಇವಾಗ ಸಿನಿಮಾ ಮಾಡುತ್ತಿದ್ದೇನೆ. ಎಲ್ಲರ ಪ್ರೀತಿ ಇರಲಿ. ಮಿಡ್ಲ್ ಕ್ಲಾಸ್ ಹುಡುಗಿ ಬ್ಯೂಟಿಶಿಯನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದರು. ನಿರ್ದೇಸಾಕ ಪ್ರಜ್ವಲ್ ಮಾತನಾಡಿ, ‘ಬಾಂಡ್ ರವಿ ಅಂತ ಸಿನಿಮಾ ಮಾಡಿದ್ದೆ. ಆ ಸಿನಿಮಾಗೆ ಸಿಕ್ಕ ಪ್ರಶಂಸೆಯಿಂದ ಈಗ ಮತ್ತೊಂದು ಸಿನಿಮಾ ಮಾಡುವಂತೆ ಆಗಿದೆ. ಸಾಲ ಮಾಡಿಕೊಂಡು ಬದುಕುವ ಒಬ್ಬ ಯುವಕನ ಕಥೆ. ಹರೀಶ್ ಅವರಿಗಂತನೇ ಈ ಕಥೆ ಮಾಡಿದ್ದು’ ಎಂದರು.
ನಾಯಕ ಹರೀಶ್ ಮಾತನಾಡಿ, ‘ಇಡೀ ಸಿನಿಮಾರಂಗ ಸಹಾಯ ಮಾಡಿದೆ. ಇದು ಮೊದಲ ಹೆಜ್ಜೆ. 2009ರಲ್ಲಿ ಮೊದಲು ಕೇಬಲ್ ಚಾನಲ್ ನಲ್ಲಿ ಕೆಲಸ ಮಾಡುವಾಗ ಬಣ್ಣ ಹಚ್ಚಿದ್ದು ಅವತ್ತು ಆರ್ಟಿಸ್ಟ್ ಆಗಬೇಕು ಅಂತ ಅಂದುಕೊಂಡಿದ್ದೆ. ಈಗ ಆ ಕನಸು ನನಸಾಗಿದೆ. ಈ ಅನುಭವ ನನಗೆ ಬೇಕಿತ್ತು, ಈ ಅನುಭವ ಇಲ್ಲ ಅಂದಿದ್ರೆ ನನ್ನ ಜೀವನ ಅಪೂರ್ಣ ಆಗುತ್ತಿತ್ತು’ ಎಂದರು. ಇನ್ನು ಈ ಸಿನಿಮಾಗೆ ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಹಾಡುಗಳು ಇರಲಿದ್ದು ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಮರುವಂತೆ ಹಾಗೂ ಭರ್ಜರಿ ಚೇತನ್ ಸಾಹಿತ್ಯ ಇರಲಿದೆ ಎಂದು ಧರ್ಮ ವಿಶ್ ಹೇಳಿದರು. ಸದ್ಯ ಮುಹೂರ್ತ ಮಾಡಿಕೊಂಡಿರುವ ಸಿನಿಮಾ ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ.
ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin Film) ಸಿನಿಮಾ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಇತ್ತೀಚೆಗೆ ಮಾರ್ಟಿನ್ ಸಿನಿಮಾ ವಿಷ್ಯವಾಗಿ ನಿರ್ದೇಶಕ ಎ.ಪಿ ಅರ್ಜುನ್ 50 ಲಕ್ಷ ಕಮಿಷನ್ ತೆಗೆದುಕೊಂಡಿದ್ದಾರೆ ಅನ್ನೋದು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಈ ಆರೋಪಕ್ಕೆಲ್ಲಾ ಎಪಿ ಅರ್ಜುನ್ (Ap Arjun) ಸ್ಪಷ್ಟನೆ ನೀಡಿದ್ದರು. ಇದೀಗ ಮತ್ತೊಮ್ಮೆ 50 ಲಕ್ಷ ಕಮಿಷನ್ ವಿಚಾರಕ್ಕೆ ನಿರ್ದೇಶಕ ಕ್ಲ್ಯಾರಿಟಿ ನೀಡಿದ್ದಾರೆ. ಇದನ್ನೂ ಓದಿ:ಪಿವಿ ಸಿಂಧು ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟ ಮೆಗಾಸ್ಟಾರ್ ಫ್ಯಾಮಿಲಿ
‘ಮಾರ್ಟಿನ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಎಪಿ ಅರ್ಜುನ್ ಮಾತನಾಡಿ, ನಮ್ಮದು ಹಾಗೂ ನಿರ್ಮಾಪಕ ಉದಯ್ ಮೆಹ್ತಾರದ್ದು ಒಪ್ಪಂದಗಳು ಏನಿವೆ ಅದು ಕಾನೂನಾತ್ಮಕವಾಗಿದೆ. ಬಾಯಿ ಮಾತಿನಲ್ಲಿ ಹೇಳಿದರೆ ಮಾತು ತಪ್ಪಬಹುದು. ಅದಕ್ಕೆ ಲೀಗಲ್ ಆಗಿಯೇ ಎಲ್ಲವೂ ನಡೆದಿದೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಬ್ಬರು 50 ಲಕ್ಷ ಅಂದರು, ಇನ್ನೊಬ್ಬರು ಒಂದು ಕೋಟಿ ಅಂದರೆ, ಮತ್ತೊಬ್ಬರು 20 ಕೋಟಿ ಅಂತ ಹೇಳುತ್ತಿದ್ದಾರಲ್ಲ. ನಾನು ಐದು ಸಾವಿರ ರೂಪಾಯಿ ಕಮಿಷನ್ ತೆಗೆದುಕೊಂಡಿದ್ದೇನೆ ಅಂತ ಹೇಳಿದರೆ, ನಾನು ಒಂದು ಕೋಟಿ ರೂಪಾಯಿ ಕೊಡುತ್ತೇನೆ ಎಂದು ಮಾಧ್ಯಮದ ಮುಂದೆ ಎಪಿ ಅರ್ಜುನ್ ಸವಾಲು ಹಾಕಿದ್ದಾರೆ.
ಇದೇ ವೇಳೆ ನಿರ್ಮಾಪಕ ಉದಯ್ ಮೆಹ್ತಾ (Uday Mehta) ಮಾತನಾಡಿ, ‘ಡಿಜಿಟಲ್ ಟರೇನ್’ ಅನ್ನೋ ಕಂಪನಿಯ ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಮೇಲೆ ಕಂಪ್ಲೇಟ್ ಕೊಟ್ಟಿದ್ದೇನೆ. ನಮ್ಮ ಟೀಂ ಅವರ ಮೇಲೆ ದೂರು ಕೊಟ್ಟಿಲ್ಲ. ಇಲ್ಲಿಯವರೆಗೂ ಯಾವ ಕಾಂಟ್ರವರ್ಸಿ ಇರಲಿಲ್ಲ, ಈಗಲೂ ಇಲ್ಲ. ಅಂದು ಎಪಿ ಅರ್ಜುನ್ ಪ್ರೇಸ್ ಮೀಟ್ ಮಾಡಿದಾಗ ನಾನು ಊರಲ್ಲಿ ಇರಲಿಲ್ಲ. ಎಷ್ಟೇ ಅಡೆತಡೆಯಾದ್ರೂ ಅಂದುಕೊಂಡಂತೆ ‘ಮಾರ್ಟಿನ್’ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ಮಾತನಾಡಿದ್ದಾರೆ.
ಬಾಲಿವುಡ್ ನಟ ಸಂಜಯ್ ದತ್ (Sanjay Dutt) ‘ಕೆಜಿಎಫ್ 2’ (KGF 2) ಚಿತ್ರದ ಸಕ್ಸಸ್ ನಂತರ ಕನ್ನಡದ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಿದ್ದಾರೆ. ಹೀಗಿರುವಾಗ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಕೆಡಿ’ ಸಿನಿಮಾದ ಲುಕ್ ರಿವೀಲ್ ಆಗಿದೆ. ‘ಢಾಕ್ ದೇವ’ನಾಗಿ ಅಧೀರ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ‘ಕೆಡಿ’ ಸಿನಿಮಾದಲ್ಲಿ (KD Film) ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಲೆಗೆ ಪೊಲೀಸ್ ಹ್ಯಾಟ್ ಧರಿಸಿ ವಿಭಿನ್ನ ಲುಕ್‌ನಲ್ಲಿ ನಟ ಢಾಕ್ ದೇವನಾಗಿ ಮಿಂಚಿದ್ದಾರೆ. ನಟನ ಲುಕ್‌ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅಂದಹಾಗೆ, 70ರ ದಶಕದ ಗ್ಯಾಂಗ್‌ಸ್ಟರ್ ಕುರಿತ ನೈಜ ಕಥೆಯನ್ನೇ ಸಿನಿಮಾ ರೂಪದಲ್ಲಿ ತಂದಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ರೆಟ್ರೋ ಲುಕ್‌ನಲ್ಲಿ ಈ ‘ಕೆಡಿ’ ಚಿತ್ರ ಮೂಡಿ ಬಂದಿದೆ.ಮಲ್ಟಿ ಸ್ಟಾರ್‌ಗಳು ಇರುವ ಈ ಸಿನಿಮಾ ಭಿನ್ನವಾಗಿ ಮೂಡಿ ಬಂದಿದೆ.
ಧ್ರುವ ಸರ್ಜಾ, ಸಂಜಯ್ ದತ್ ಜೊತೆ ರೀಷ್ಮಾ ನಾಣಯ್ಯ, ರವಿಚಂದ್ರನ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಬಹುಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದ್ದು, ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ.
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ʻಮಾರ್ಟಿನ್ʼ ಸಿನಿಮಾವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾಡಿರುವ ಈ ಸಿನಿಮಾ ದೇಶಾದ್ಯಂತ ಅಬ್ಬರಿಸಲಿದೆ ಎಂದೇ ಹೇಳಲಾಗುತ್ತಿದೆ. ಸಿನಿಮಾ ರಿಲೀಸ್‌ಗಾಗಿ ಧ್ರುವ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೀಗ ವಂಚನೆ ವಿಚಾರವಾಗಿ ‘ಮಾರ್ಟಿನ್’ ಸಿನಿಮಾ ವಿವಾದದ ಕೇಂದ್ರಬಿಂದುವಾಗಿದೆ. ʻಡಿಜಿಟಲ್ ಟೆರೆನ್ʼ ಎಂಬ ಸಂಸ್ಥೆ ವಿರುದ್ಧ ‘ಮಾರ್ಟಿನ್’ ನಿರ್ಮಾಪಕ ಉದಯ್ ಕೆ ಮೆಹ್ತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಮಧ್ಯೆ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧವೂ 50 ಲಕ್ಷ ರೂ. ಕಮಿಷನ್ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಎ.ಪಿ ಅರ್ಜುನ್ ಸ್ಪಷ್ಟನೆ ಕೊಟ್ಟಿದ್ದಾರೆ.
ನನ್ನನ್ನ ಪೊಲೀಸ್ ಸ್ಟೇಷನ್‌ಗೆ ಕರೆದಿದ್ದ ಉದ್ದೇಶ ಏನಂದರೆ, ಸತ್ಯಾ ರೆಡ್ಡಿ ಅನ್ನೋನು ನನ್ನ ಮೇಲೆ ಆರೋಪ ಮಾಡಿದ್ದಾನೆ. ಅದಕ್ಕೆ ಪೊಲೀಸರು ನಮ್ಮನ್ನೆಲ್ಲ ವಿಚಾರಣೆಗೆ ಕರೆದಿದ್ದರು. ನನ್ನ ಮೇಲೆ ಯಾಕೆ ಆರೋಪ ಮಾಡಿದ್ದಾನೆ ಅಂತ ಗೊತ್ತಿಲ್ಲ. ಆದರೆ, ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬುದು ಗೊತ್ತಾಗಿದೆ. ನನಗೆ ಅಷ್ಟೊಂದು ದುಡ್ಡು ಕೊಟ್ಟಿದ್ದರೆ, ಏನಾದರೂ ಒಂದು ದಾಖಲೆ ಇರಬೇಕಿತ್ತಲ್ಲವಾ? ಅಂತಾ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: Women’s Asia Cup: ಸ್ಮೃತಿ, ರೇಣುಕಾ ಶೈನ್ – ಬಾಂಗ್ಲಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ; ಫೈನಲ್ ಪ್ರವೇಶಿಸಿದ ಭಾರತ!
ನನಗೂ ಮಾಧ್ಯಮದ ಮೂಲಕ ವಿಷಯ ಗೊತ್ತಾಯ್ತು. 50 ಲಕ್ಷ ರೂ., 75 ಲಕ್ಷ ರೂ. ಕಮಿಷನ್ ತಗೊಂಡಿದ್ದೀನಿ ಅಂತ ಆರೋಪಿಸಿ ನನ್ನನ್ನ ಕಮಿಷನ್ ಡೈರೆಕ್ಟರ್ ಅಂತೆಲ್ಲಾ ಹೇಳಿದ್ರು. ಈ ಪ್ರಕರಣದಲ್ಲಿ ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಇಬ್ಬರೂ ಆರೋಪಿಗಳು. ಆ ಎಫ್‌ಐಆರ್‌ನಲ್ಲೂ ನನ್ನ ಹೆಸರು ಇರಲಿಲ್ಲ.. ನನ್ನ ಮೇಲಿನ ಆರೋಪ ಸುಳ್ಳು ಅಂತ ಒತ್ತಿ ಹೇಳಿದರಲ್ಲದೇ ಅತ್ಯರೆಡ್ಡಿ ರವಿಶಂಕರ್‌ಗೂ 10 ಲಕ್ಷ ರೂ. ಮೋಸ ಮಾಡಿದ್ದಾರೆ, ಕಾಟೇರ ಸಿನಿಮಾಗೂ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: 2028ರೊಳಗೆ ಮತ್ತೆ ರಾಮನಗರ ಅಂತ ಬರುತ್ತೆ – ರಾಮನ ಹೆಸರು ತೆಗೆಯಲು ಸಾಧ್ಯವಿಲ್ಲ: ಹೆಚ್‌ಡಿಕೆ ತಿರುಗೇಟು
ಇನ್ನೂ ನಿರ್ಮಾಪಕರ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ ಎಪಿ ಅರ್ಜುನ್, ʻದೊಡ್ಡ ಸಿನಿಮಾ ಅಂದ್ಮೇಲೆ ಜಗಳ, ಮನಸ್ತಾಪ ಇದ್ದೇ ಇರುತ್ತದೆ. ನನ್ನ ಮೇಲೆ ಮಾತ್ರ ಅವನು (ಸತ್ಯಾ ರೆಡ್ಡಿ) ಆರೋಪ ಮಾಡಿಲ್ಲ. ನಮ್ಮ ಕ್ಯಾಮರಾಮ್ಯಾನ್, ಎಡಿಟರ್ ಹಾಗೂ ಸಹಾಯಕ ನಿರ್ದೇಶಕನ ಮೇಲೂ ಆರೋಪ ಮಾಡಿದ್ದಾನೆ. ಪೊಲೀಸರ ಮುಂದೆ ನಾನು ಏನೇನು ಹೇಳಬೇಕಿತ್ತೋ, ಎಲ್ಲಾ ಹೇಳಿದ್ದೇನೆ. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ. ಅಕ್ಟೋಬರ್ 11 ರಂದು ‘ಮಾರ್ಟಿನ್’ ಪಕ್ಕಾ ರಿಲೀಸ್ ಆಗುತ್ತೆ’’ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಯಾವ ರಾಜ್ಯಕ್ಕೂ ಏನನ್ನೂ ನಿರಾಕರಿಸಿಲ್ಲ, ಹಣ ತರಬೇಕೆಂದು ತೆರಿಗೆ ಹೆಚ್ಚಿಸಿಲ್ಲ: ನಿರ್ಮಲಾ ಸೀತಾರಾಮನ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ ಮತ್ತು ‘ಕೆಡಿ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಇದರ ನಡುವೆ ಧ್ರುವ ಅಭಿಮಾನಿಗಳು ಖುಷಿಪಡುವ ಸುದ್ದಿಯೊಂದು ಸಿಕ್ಕಿದೆ. ಬಹುನಿರೀಕ್ಷಿತ ‘ಕೆಡಿ’ (KD Film) ಸಿನಿಮಾದ ಬಗ್ಗೆ ಜು.29ರಂದು ಅಪ್‌ಡೇಟ್ ಹೊರಬೀಳಲಿದೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗಾಗಿ ಚಂಡಿಕಾ ಯಾಗ ಮಾಡಿಸಿದ ಪತ್ನಿ ವಿಜಯಲಕ್ಷ್ಮಿ
ಕೆವಿಎನ್ ಸಂಸ್ಥೆ ನಿರ್ಮಾಣದ, ಜೋಗಿ ಪ್ರೇಮ್ ನಿರ್ದೇಶನ ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ರೆಟ್ರೋ ಸ್ಟೈಲಿನಲ್ಲಿ ಮಿಂಚಿದ್ದಾರೆ. ವಿಭಿನ್ನ ಪಾತ್ರಕ್ಕೆ ಜೀವತುಂಬಿದ್ದಾರೆ. ಕೆಡಿ ಸಿನಿಮಾ ಬಗ್ಗೆ ಮಾಹಿತಿ ನೀಡೋದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಇದೇ ಜು.29ರಂದು ಬೆಳಗ್ಗೆ 10:05ಕ್ಕೆ ಚಿತ್ರದ ಬಗ್ಗೆ ಮೇಜರ್ ಅಪ್‌ಡೇಟ್ ಸಿಗಲಿದೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
‘ಕೆಡಿ’ ಸಿನಿಮಾ ಮಲ್ಟಿ ಸ್ಟಾರ್‌ಗಳು ನಟಿಸಿರುವ ಸಿನಿಮಾ ಇದಾಗಿದೆ. ಅವರ ಪಾತ್ರದ ಬಗ್ಗೆ ಮೇಜರ್ ಅಪ್‌ಡೇಟ್ ಅಥವಾ ಟ್ರೈಲರ್ ರಿಲೀಸ್ ಆಗಲಿದೆಯಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಅಭಿಮಾನಿಗಳ ಚರ್ಚೆ ಶುರುವಾಗಿದೆ. ಈ ಎಲ್ಲದಕ್ಕೂ ಉತ್ತರ ಜು.29ರಂದು ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.
ಅಂದಹಾಗೆ, ಧ್ರುವಗೆ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ನಟಿಸಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty), ರವಿಚಂದ್ರನ್, ಸಂಜಯ್ ದತ್, ರಮೇಶ್ ಅರವಿಂದ್ ಸೇರಿದಂತೆ ಹಲವರು ನಟಿಸಿದ್ದಾರೆ. ಕೆಡಿ ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ.
ರೇಣುಕಾಸ್ವಾಮಿ ಕೊಲೆ (Renukaswamy Murder Case) ವಿಚಾರವಾಗಿ ಜೈಲು ಪಾಲಾಗಿರುವ ದರ್ಶನ್ (Darshan) ಬಗ್ಗೆ ಹಲವು ನಟ, ನಟಿಯರು ಪ್ರತಿಕ್ರಿಯೆ ನೀಡಿದ್ದರು. ಶಿವಣ್ಣ, ಸುದೀಪ್, ರಮ್ಯಾ, ಧನ್ವೀರ್ ಗೌಡ ಸೇರಿದಂತೆ ಅನೇಕರು ತುಟಿ ಬಿಚ್ಚಿದ್ದರು. ಈಗ ಮೊದಲ ಬಾರಿಗೆ ದರ್ಶನ್ ಪ್ರಕರಣದ ಕುರಿತು ಧ್ರುವ ಸರ್ಜಾ (Dhruva Sarja) ಮಾತನಾಡಿದ್ದಾರೆ. ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದಿದ್ದಾರೆ.
ಕೇಸ್ ಕೋರ್ಟ್‌ನಲ್ಲಿದೆ. ಕಾನೂನು ಮುಂದೆ ಯಾರೂ ದೊಡ್ಡವರಲ್ಲ ಎಂದಿದ್ದಾರೆ. ನೋಡೋಣ ಈ ಕೇಸ್ ಮುಂದೆ ಏನಾಗುತ್ತೆ ಅಂತ ಎಂದು ಧ್ರುವ ಸರ್ಜಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಹೊಸ ಚಿತ್ರಕ್ಕೆ ನಾಯಕಿಯಾದ ಪಾಕಿಸ್ತಾನಿ ನಟಿ
ಅಂದಹಾಗೆ, ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಮತ್ತು ‘ಕೆಡಿ’ ಸಿನಿಮಾಗಳು ರಿಲೀಸ್ ರೆಡಿಯಿದೆ. ಮಾರ್ಟಿನ್ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಗಲಿದೆ.