Tag: dhruva sarja

  • ಧ್ರುವ ಸರ್ಜಾ ಸಿನಿಮಾಗಾಗಿ ಕಥೆ ಬರಯಲಿದ್ದಾರೆ ಬಾಲಿವುಡ್ ಕಥೆಗಾರ್ತಿ!

    ಧ್ರುವ ಸರ್ಜಾ ಸಿನಿಮಾಗಾಗಿ ಕಥೆ ಬರಯಲಿದ್ದಾರೆ ಬಾಲಿವುಡ್ ಕಥೆಗಾರ್ತಿ!

    ಬೆಂಗಳೂರು: ಧ್ರುವ ಸರ್ಜಾ ಅವರ ಭರ್ಜರಿ ಸಿನಿಮಾ ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಂಡಿದೆ. ಹೀಗಿರುವಾಗ ಬಾಲಿವುಡ್ ಸ್ಟಾರ್ ಚಿತ್ರ ಕಥೆಗಾರ್ತಿ ಶಗುಫ್ತಾ ರಫೀಕ್ ಅವರು ಧ್ರುವ ಸರ್ಜಾಗಾಗಿ ಒಂದು ಒಳ್ಳೆಯ ಚಿತ್ರಕಥೆಯನ್ನು ಬರೆಯುತ್ತಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

    ಧ್ರುವ ಸಿನಿಮಾಕ್ಕಾಗಿ ಶಗುಫ್ತಾ ಅವರನ್ನು ಕರೆ ತರಲು ಚಿತ್ರತಂಡ ಯೋಚಿಸಿದ್ದು, ಜಗ್ಗುದಾದ ಖ್ಯಾತಿಯಾ ನಿರ್ದೇಶಕ ರಾಘವೇಂದ್ರ ಹೆಗ್ಡೆ ನಿರ್ದೇಶನ ಮಾಡಲಿದ್ದಾರೆ. ಶಗುಪ್ತಾ ಅವರು ಹಮಾರಿ ಅದೂರಿ ಕಹಾನಿ, ಜಿಸ್ಮ್-2, ಮರ್ಡರ್-2, ಆಶಿಕಿ-2 ರಂತಹ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಕಥೆ ಬರೆದಿದ್ದು, ಈಗ ಕನ್ನಡ ಚಿತ್ರಕ್ಕಾಗಿ ಕಥೆ ಬರೆಯಲಿದ್ದಾರಂತೆ.

    ಚಿತ್ರತಂಡ ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈಗ ಧ್ರುವ ಅವರು ಪೊಗರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  • ಪೊಗರು ಸಿನಿಮಾದಲ್ಲಿ ನಟಿಸುತ್ತಿಲ್ಲ ಶೃತಿ ಹಾಸನ್

    ಪೊಗರು ಸಿನಿಮಾದಲ್ಲಿ ನಟಿಸುತ್ತಿಲ್ಲ ಶೃತಿ ಹಾಸನ್

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರ ಮುಂದಿನ `ಪೊಗರು’ ಸಿನಿಮಾದಲ್ಲಿ ನಾಯಕಿಯಾಗಿ ಶೃತಿ ಹಾಸನ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಆದರೆ ಅದೆಲ್ಲಾ ಸುಳ್ಳು ಸುದ್ದಿ ಎಂದು ಶೃತಿ ಹಾಸನ್ ಟ್ವೀಟ್ ಮಾಡಿದ್ದಾರೆ.

    ನಾನು ಸದ್ಯ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸುವ ಯೋಜನೆ ಇಲ್ಲ. ಈ ಬಗ್ಗೆ ಯಾರೂ ನನ್ನ ಜೊತೆ ಚರ್ಚಿಸಿಲ್ಲ ಹಾಗು ಇದೆಲ್ಲಾ ಸುಳ್ಳು ಸುದ್ದಿ ಎಂದು ಶೃತಿ ಹಾಸನ್ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

    ಕಳೆದ ಹಲವು ದಿನಗಳಿಂದ ಶೃತಿ ಕನ್ನಡದ ಪೊಗರು ಸಿನಿಮಾದಲ್ಲಿ ನಟಿಸುತ್ತಾರೆ. ಈ ಬಗ್ಗೆ ಮಾತುಕತೆಗಳು ಅಂತಿಮವಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂಬ ಸುದ್ದಿಗಳು ಕೇಳಿ ಬರತೊಡಗಿದ್ದವು. ಆದರೆ ಈ ವದಂತಿಗೆ ಈಗ ಸ್ವತಃ ಶೃತಿ ಬ್ರೇಕ್ ಹಾಕಿದ್ದಾರೆ.

    ಈಗ ಧೃವ ಸರ್ಜಾ ಜೊತೆ ಯಾವ ನಟಿ ನಟಿಸಲಿದ್ದಾರೆ ಎಂಬ ಕೂತುಹಲ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಧೃವ ಸರ್ಜಾ ಅಭಿನಯದ `ಭರ್ಜರಿ’ ಸಿನಿಮಾ ಬಿಡುಗಡೆಗೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ.

     

  • ಧೃವ ಸರ್ಜಾಗೆ 29ನೇ ಹುಟ್ಟುಹಬ್ಬ – ಅಭಿಮಾನಿಗಳ ಜೊತೆ ಭರ್ಜರಿ ಬರ್ತ್ ಡೇ ಆಚರಣೆ

    ಧೃವ ಸರ್ಜಾಗೆ 29ನೇ ಹುಟ್ಟುಹಬ್ಬ – ಅಭಿಮಾನಿಗಳ ಜೊತೆ ಭರ್ಜರಿ ಬರ್ತ್ ಡೇ ಆಚರಣೆ

    ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು 29ನೇ ಹುಟ್ಟುಹಬ್ಬ.

    ಬೆಂಗಳೂರಿನ ಕೆಆರ್ ರಸ್ತೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಧೃವ ಸರ್ಜಾ ಬರ್ತ್ ಡೇ ಆಚರಿಸಿಕೊಂಡ್ರು. ಈ ವೇಳೆ ಮಾತನಾಡಿದ ಧ್ರುವ, ಅಭಿಮಾನಿಗಳ ನಡುವೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋಕೆ ಸಂತೋಷವಾಗುತ್ತೆ ಅಂದ್ರು. ತಮ್ಮ ಮುಂದಿನ ಸಿನಿಮಾ ಪೊಗರು ಅಂತ ತಿಳಿಸಿದರು.

    ಇದೇ ವೇಳೆ ಧ್ರುವ ಅವರಿಗೆ ವಿಶ್ ಮಾಡಲು ಅಣ್ಣ ಚಿರಂಜೀವಿ ಸರ್ಜಾ ಕೂಡ ಬಂದಿದ್ರು. ಭರ್ಜರಿ ಸಿನಿಮಾದ ನಿರ್ದೇಶಕ ಚೇತನ್ ಕೂಡಾ ಸಂಭ್ರಮದಲ್ಲಿ ಭಾಗಿಯಾಗಿದ್ರು.