Tag: dhruva sarja

  • ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ: ಧ್ರುವ ಸರ್ಜಾ ಹೇಳಿದ್ಯಾರಿಗೆ?

    ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ: ಧ್ರುವ ಸರ್ಜಾ ಹೇಳಿದ್ಯಾರಿಗೆ?

    – ಭಾರತದಲ್ಲಿ ಇರುವವರು ದೇಶವನ್ನು ಪ್ರೀತಿಸಿ.. ಇಲ್ಲದಿದ್ರೆ ನಿಮ್ಮನ್ನೂ ಹೊರಹಾಕುತ್ತೇವೆಂದ ನಟ

    ಭಾರತ ಸೇನೆಯ ‘ಆಪರೇಷನ್ ಸಿಂಧೂರ’ (Operation Sindoora) ಕಾರ್ಯಾಚರಣೆಯ ಬಗ್ಗೆ ಧ್ರುವ ಸರ್ಜಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾರತ ದೇಶದಲ್ಲಿರುವ ಹಿತಶತ್ರುಗಳಿಗೆ ನಟ ಎಚ್ಚರಿಕೆ ನೀಡಿದ್ದಾರೆ. ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ ಆಗುತ್ತೀರಿ. ಭಾರತಕ್ಕೆ ದ್ರೋಹಿಗಳಾಗಬೇಡಿ ಎಂದು ಧ್ರುವ ಸರ್ಜಾ (Dhruva Sarja) ಹೇಳಿದ್ದಾರೆ. ಇದನ್ನೂ ಓದಿ:ಸಿಂಧೂರ ಕೇವಲ ಸಂಪ್ರದಾಯವಲ್ಲ, ಅದು ಸಂಕೇತ- ಭಾರತೀಯ ಸೇನೆ ಕೊಂಡಾಡಿದ ಮೋಹನ್ ಲಾಲ್

    ಭಾರತದಲ್ಲಿ ವಾಸಿಸುವ ಪಾಕಿಸ್ತಾನಿಗರೇ, ನೀವು ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ ಆಗುತ್ತೀರಿ. ಭಾರತಕ್ಕೆ ದ್ರೋಹಿಗಳಾಗಬೇಡಿ. ಭಾರತದಲ್ಲಿರುವವರು ಮೊದಲು ಭಾರತವನ್ನು ನಂಬಿ, ನೀವು ವಾಸಿಸುವ ದೇಶವನ್ನು ಪ್ರೀತಿಸಿ ಎಂದು ನಟ ತಿಳಿಸಿದ್ದಾರೆ. ಇಲ್ಲದಿದ್ದರೆ ಶೀಘ್ರದಲ್ಲೇ ನಾವು ನಿಮ್ಮನ್ನು ಭಾರತದಿಂದ ಹೊರಹಾಕುತ್ತೇವೆ ಎಂದು ಧ್ರುವ ಸರ್ಜಾ ಎಚ್ಚರಿಕೆ ನೀಡಿದ್ದಾರೆ. ಜೈ ಹಿಂದ್, ಜೈ ಶ್ರೀರಾಮ್, ಜೈ ಹನುಮಾನ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ ಕೇವಲ ಒಂದು ಧ್ಯೇಯವಲ್ಲ ಇದು ಪವಿತ್ರ ಪ್ರತಿಜ್ಞೆ: ಸುದೀಪ್

    ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

  • ನಟ ಧ್ರುವ ಸರ್ಜಾ ಟೆಂಪಲ್ ರನ್

    ನಟ ಧ್ರುವ ಸರ್ಜಾ ಟೆಂಪಲ್ ರನ್

    ಟ ಧ್ರುವ ಸರ್ಜಾ (Dhruva Sarja) ಕುಟುಂಬ ಸಮೇತರಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:‘ಜೈ ಪಾಕಿಸ್ತಾನ’ ಎಂದ ರಾಖಿ ಸಾವಂತ್- ನಟಿಯನ್ನು ದೇಶ ಬಿಟ್ಟು ಓಡಿಸಲು ಆಗ್ರಹ

    ಸಿನಿಮಾ ಕೆಲಸಗಳಿಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಪತ್ನಿ ಪ್ರೇರಣಾ ಜೊತೆ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ದೇವಸ್ಥಾನ ಹಾಗೂ ಉಜಿರೆಯ ಸೂರ್ಯ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ, ಧ್ರುವ ದಂಪತಿಗೆ ದವಳದ ವತಿಯಿಂದ ಗೌರವಿಸಲಾಗಿದೆ. ಇದನ್ನೂ ಓದಿ:ನಿರ್ದೇಶಕರಿಗೆ ನಾನು ಸಂಪೂರ್ಣ ಶರಣಾಗ್ತೇನೆ – ಕೇತಿಕಾ ಶರ್ಮಾ ಹೀಗೆ ಹೇಳಿದ್ದೇಕೆ ಗೊತ್ತಾ?

    ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ರಿಲೀಸ್‌ಗೆ ಧ್ರುವ ಎದುರು ನೋಡಿದ್ದಾರೆ. ಇತ್ತೀಚೆಗೆ ತೆರೆಕಂಡ ಈ ಚಿತ್ರದ ಹಾಡು ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಸಾಂಗ್ ಹಿಟ್ ಆಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಉಗ್ರರ ದಾಳಿ ಸ್ಥಳದಲ್ಲೇ ಮಾರ್ಟಿನ್ ಸಿನಿಮಾ ಶೂಟಿಂಗ್ ನಡೆದಿತ್ತು, ಆಗ ಸೆಕ್ಯೂರಿಟಿ ಚೆನ್ನಾಗಿತ್ತು: ಧ್ರುವ ಸರ್ಜಾ

    ಉಗ್ರರ ದಾಳಿ ಸ್ಥಳದಲ್ಲೇ ಮಾರ್ಟಿನ್ ಸಿನಿಮಾ ಶೂಟಿಂಗ್ ನಡೆದಿತ್ತು, ಆಗ ಸೆಕ್ಯೂರಿಟಿ ಚೆನ್ನಾಗಿತ್ತು: ಧ್ರುವ ಸರ್ಜಾ

    – ಟೆರರಿಸ್ಟ್‌ಗಳಿಗೆ ಬಾಸ್ಟರ್ಡ್ ಎಂದ ನಟ

    ಏ.22 ರಂದು ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿಯ ಕುರಿತು ನಟ ಧ್ರುವ ಸರ್ಜಾ  (Dhruva Sarja) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದಾಳಿ ನಡೆದ ಸ್ಥಳದಲ್ಲೇ ಮಾರ್ಟಿನ್ ಚಿತ್ರೀಕರಣ ನಡೆದಿತ್ತು. ಆದರೆ ಆಗ ಸೆಕ್ಯೂರಿಟಿ ಚೆನ್ನಾಗಿತ್ತು. ಈಗ ಈ ದಾಳಿ ನಡೆಸಿರೋ ಬಾಸ್ಟರ್ಡ್‌ಗಳ  ಬಗ್ಗೆ ಏನು ಮಾತಾಡೋದು? ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ನಮ್ಮ ಧರ್ಮ ಯಾರನ್ನ ಕೊಲ್ಲಲೂ ಅನುಮತಿಸಲ್ಲ – ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಮರ ಒತ್ತಾಯ

    ಟೆರರಿಸ್ಟ್‌ಗಳಿಗೆ ಬಾಸ್ಟರ್ಡ್ ಎಂದು ಬೈದು ಮಾತನಾಡಿದ ಅವರು, ಆ ಬಾಸ್ಟರ್ಡ್‌ಗಳ ಬಗ್ಗೆ ಮಾತಾಡೋಕೆ ಏನಿದೆ? ಅವರಿಗೆ ಅರ್ಥ ಆಗುವ ಭಾಷೆಯಲ್ಲೇ ನಮ್ಮ ಭಾರತೀಯ ಸೇನೆ ಉತ್ತರ ಕೊಟ್ಟೆ ಕೊಡುತ್ತಾರೆ. ಈಗ ಸಿಂಧೂ ನೀರನ್ನು ಬಂದ್ ಮಾಡಿದ್ದಾರೆ. ನಮ್ಮ ಭಗವತ್ ಗೀತೆಯಲ್ಲೇ ಇದೆ ತಾಳ್ಮೆಯಿಂದ ಇರಬೇಕು ಅಂತ, ಬೇಗ ಉತ್ತರ ಕೊಡುತ್ತಾರೆ, ದೇವರ ರೂಪದಲ್ಲಿ ಇಂಡಿಯನ್ ಆರ್ಮಿ ಶಿಕ್ಷೆ ಕೊಡುತ್ತಾರೆ ಎಂದಿದ್ದಾರೆ.

    ಈ ಕುರಿತು ಮೋದಿಯವರು ಮುಂದೆ ಯಾವ ನಿರ್ಧಾರ ತೆಗೆದುಕೊಳಬಹುದು ಎಂದ ಪ್ರಶ್ನೆಗೆ, ನಾನು ಮೋದಿಯವರ ಪಿಎ ನಾ? ಫ್ಯಾಮಿಲಿ ನೋಡುತ್ತಿರುತ್ತಾರೆ, ನಮ್ಮ ಬಾಯಲ್ಲಿ ಬೇರೆ ರೀತಿ ಮಾತು ಬಂದರೆ ತಪ್ಪಾಗುತ್ತದೆ. ಇದನ್ನು ಡೈವರ್ಟ್ ಮಾಡೋದು ಬೇಡ, ಯಾವತ್ತಿದ್ದರೂ ಜಮ್ಮು ಮತ್ತು ಕಾಶ್ಮೀರ ನಮ್ಮ ಕಿರೀಟ. ನಾವು ಇನ್ನು ಯುದ್ಧ ಪ್ರಾರಂಭ ಮಾಡಿಲ್ಲ ಅಷ್ಟೇ ಎಂದು ಹೇಳಿದ್ದಾರೆ.ಇದನ್ನೂ ಓದಿ: ಪಾಕ್ ಪ್ರಜೆಗಳನ್ನು ಕಳುಹಿಸಲು ಕೇಂದ್ರದಿಂದ ಅಡ್ವೈಸರಿ, ಪತ್ತೆಹಚ್ಚಲು ಎಸ್‌ಪಿಗಳಿಗೆ ಸೂಚನೆ: ಪರಮೇಶ್ವರ್

  • ಭಾರತಾಂಬೆಯ ಕಳಶದಂತಿರುವ ಜಮ್ಮು, ಕಾಶ್ಮೀರ ಎಂದಿಗೂ ನಮ್ಮದೆ: ಉಗ್ರರ ದಾಳಿ ಖಂಡಿಸಿದ ಧ್ರುವ ಸರ್ಜಾ

    ಭಾರತಾಂಬೆಯ ಕಳಶದಂತಿರುವ ಜಮ್ಮು, ಕಾಶ್ಮೀರ ಎಂದಿಗೂ ನಮ್ಮದೆ: ಉಗ್ರರ ದಾಳಿ ಖಂಡಿಸಿದ ಧ್ರುವ ಸರ್ಜಾ

    ಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಉಗ್ರರ ಅಟ್ಟಹಾಸಕ್ಕೆ 27 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಅವರ ನೀಚ ಕ್ರೌರ್ಯದ ಬಗ್ಗೆ ಸಿನಿಮಾ ಸ್ಟಾರ್‌ಗಳು ಖಂಡಿಸಿದ್ದಾರೆ. ಇದೀಗ ಭಾರತಾಂಬೆಯ ಕಳಶದಂತಿರುವ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ ಎಂದು ನಟ ಧ್ರುವ ಸರ್ಜಾ (Dhruva Sarja) ಎಂದು ಉಗ್ರರ ದಾಳಿ ಬಗ್ಗೆ ಖಡಕ್‌ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ

    ಭಾರತಾಂಬೆಯ ಕಳಶದಂತಿರುವ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ. ಪಹಲ್ಗಾಮ್‌ನಲ್ಲಿ ಉಗ್ರರು, ಅಮಾಯಕರ ಮೇಲೆ ನಡೆಸಿದಂತ ಕೃತ್ಯ ಎಂದಿಗೂ ಯಾರೂ ಕ್ಷಮಿಸಲಾಗದು. ಎಲ್ಲಾ ಧರ್ಮದ ಸಾರ ಪ್ರೀತಿ ಹಾಗೂ ಅಹಿಂಸೆ. ಪ್ರೀತಿಯಿಂದ ಸಾಧಿಸಲಾಗದ್ದು, ಹಿಂಸೆ ಹಾಗೂ ದ್ವೇಷದಿಂದ ಸಾಧಿಸಲು ಸಾಧ್ಯವೇ ಇಲ್ಲ. ಪ್ರಾಣ ಬಿಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕಳೆದುಕೊಂಡವರ ಕುಟುಂಬಗಳಿಗೆ ದೇವರು ಧೈರ್ಯ ಕರುಣಿಸಲಿ ಎಂದು ಧ್ರುವ ಸರ್ಜಾ (Dhruva Sarja) ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜೈ ಹಿಂದ್, ಜೈ ಭಾರತ, ಜೈ ಆಂಜನೇಯ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮುಗ್ಧರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ: ಪಹಲ್ಗಾಮ್‌ ಉಗ್ರರ ದಾಳಿ ಬಗ್ಗೆ ಯಶ್ ರಿಯಾಕ್ಷನ್

    ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ. ದೇಶದ ಶಕ್ತಿಯ ಮೇಲೆ ಮಾಡಲಾದ ದಾಳಿ. ಇದು ಸುಮ್ಮನಿರುವ ಸಮಯವಲ್ಲ. ಈ ಘಟನೆಗೆ ಪ್ರತಿಕ್ರಿಯೆ ಕೊಡಲೇಬೇಕು. ಈ ಹೀನ ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ಧ ತಕ್ಷಣ ಕ್ರಮ ವಹಿಸಿ ಅಂತಾ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್‌ಗೆ ಎಕ್ಸ್‌ನಲ್ಲಿ ಮೂಲಕ ಸುದೀಪ್ (Sudeep) ಮಾಡಿದ್ದಾರೆ.

    ಯಶ್ (Yash) ಎಕ್ಸ್‌ನಲ್ಲಿ ಪಹಲ್ಗಾಮ್‌ನಲ್ಲಿ ಮುಗ್ಧ ಜನರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ. ಮುಗ್ಧ ಜನರ ಮೇಲಿನ ದಾಳಿಯನ್ನು ಊಹಿಸಲು ಸಾಧ್ಯವಿಲ್ಲ. ಈ ಭೀಕರ ದುರಂತದಲ್ಲಿ ಸಂತ್ರಸ್ತರ ಕುಟುಂಬಗಳು ಮತ್ತು ರಾಷ್ಟçದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ಬರೆದುಕೊಂಡಿದ್ದಾರೆ.

    ಮುಗ್ಧ ಜೀವಗಳು ಪಹಲ್ಗಾಮ್‌ನಲ್ಲಿ ಬಲಿಯಾಗಿರೋದು ಕೇಳಿ ಆಘಾತವಾಗಿದೆ. ಈ ದುರಂತದಲ್ಲಿ ದುಃಖದಲ್ಲಿರುವ ಕುಟುಂಬಕ್ಕೆ ನನ್ನ ಪ್ರಾರ್ಥನೆಗಳು ಎಂದು ನಟಿ ರಾಧಿಕಾ ಪಂಡಿತ್ (Radhika Pandit) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ ಎಂದು ಶಿವಣ್ಣ (Shivanna) ಪ್ರತಿಕ್ರಿಯೆ ನೀಡಿದ್ದಾರೆ.

    ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ರಿಯಾಕ್ಟ್ ಮಾಡಿ, ನನ್ನ ಹೃದಯ ಒಡೆದಿದೆ ಎಂದು ಇನ್ಸ್ಟಾಗ್ರಾಂ ಬರೆದುಕೊಂಡಿದ್ದಾರೆ.

    ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ನೋವಾಗಿದೆ. ಅವರ ಕುಟುಂಬಗಳಿಗೆ ಹೃದಯಪೂರ್ವಕ ಪ್ರಾರ್ಥನೆ ಮತ್ತು ಸಂತಾಪಗಳು. ಇದು ಎಂದಿಗೂ ಮರೆಯಲಾಗದ ಘೋರ ದಾಳಿ ಎಂದು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

  • ಬ್ಯಾಂಕ್‌ ಜನಾರ್ಧನ್ ಸಾವಿನ ಸುದ್ದಿ ಕೇಳಿ ಶಾಕ್ ಆಯ್ತು: ಧ್ರುವ ಸರ್ಜಾ

    ಬ್ಯಾಂಕ್‌ ಜನಾರ್ಧನ್ ಸಾವಿನ ಸುದ್ದಿ ಕೇಳಿ ಶಾಕ್ ಆಯ್ತು: ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮಕ್ಕೆ ಮಾತನಾಡಿ, ಸಾವಿನ ವಿಚಾರ ಕೇಳಿ ಶಾಕ್ ಆಯ್ತು ಎಂದಿದ್ದಾರೆ ಧ್ರುವ ಸರ್ಜಾ. ಇದನ್ನೂ ಓದಿ:ಬ್ಯಾಂಕ್‌ ಜನಾರ್ಧನ್‌ ಅದ್ಭುತ ಅಭಿನಯದಿಂದ ನನ್ನ ಸಿನಿಪಯಣದಲ್ಲಿ ಯಶಸ್ವಿ ಹೆಜ್ಜೆ ಇಟ್ಟೆ: ಉಪೇಂದ್ರ

    ಬ್ಯಾಂಕ್ ಜನಾರ್ಧನ್ (Bank Janardhan) ಅವರನ್ನು ನಾವು ಚಿಕ್ಕವರಿಂದ ನೋಡಿಕೊಂಡು ಬೆಳೆದಿದ್ದೇವೆ. ನಮ್ಮ ಕಿಶೋರ್ ಅಂಕಲ್ (Kishore Sarja) ಅವರ ಕ್ಲೋಸ್ ಫ್ರೆಂಡ್ ಆಗಿದ್ರು. ಇವತ್ತು ಅವರು ನಮ್ಮ ಜೊತೆಯಿಲ್ಲ ಎಂಬುದನ್ನು ಕೇಳಿ ಶಾಕ್ ಆಯ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಧೈರ್ಯ ಕೊಡಲಿ ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ. ಇದನ್ನೂ ಓದಿ:ನಟ ಬ್ಯಾಂಕ್ ಜನಾರ್ಧನ್ ವಿಧಿವಶ – ನಿವಾಸದಲ್ಲೇ ಸಂಜೆ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಪೋಷಕ ನಟ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಜನಾರ್ಧನ್ ಅವರು ಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಅಲ್ಲದೇ, ಕಿರುತೆರೆ ಹಾಗೂ ರಂಗಭೂಮಿಯಲ್ಲೂ ಛಾಪು ಮೂಡಿಸಿದ್ದಾರೆ.

    80, 90ರ ದಶಕದ ಬಹುಬೇಡಿಕೆ ಹೊಂದಿದ್ದ ಹಾಸ್ಯನಟರಲ್ಲಿ ಒಬ್ಬರಾದ ಜನಾರ್ಧನ್ ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಮಣ್ಯ, ಕೌರವ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರ ನಿರ್ವಹಿಸಿದ್ದಾರೆ. ಮಾಂಗಲ್ಯ, ರೋಬೋ ಫ್ಯಾಮಿಲಿ, ಪಾಪ ಪಾಂಡು, ಜೋಕಾಲಿ ಸೇರಿದಂತೆ ಸಾಲು ಸಾಲು ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.

  • ‘ಸೀತಾ ಪಯಣ’ ಸಿನಿಮಾದಲ್ಲಿ ಧ್ರುವ ಸರ್ಜಾ- ಫಸ್ಟ್ ಲುಕ್ ಔಟ್

    ‘ಸೀತಾ ಪಯಣ’ ಸಿನಿಮಾದಲ್ಲಿ ಧ್ರುವ ಸರ್ಜಾ- ಫಸ್ಟ್ ಲುಕ್ ಔಟ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ (KD) ಚಿತ್ರದ ರಿಲೀಸ್‌ಗೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದರ ನಡುವೆ ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಸಿನಿಮಾದಲ್ಲಿ ಧ್ರುವ ನಟಿಸಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ. ಇದನ್ನೂ ಓದಿ:ರಾಮ್ ಚರಣ್ ‘ಪೆದ್ದಿ’ ಚಿತ್ರದ ಗ್ಲಿಂಪ್ಸ್ ಔಟ್‌- ನಟನ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಫಿದಾ

    ಧ್ರುವ ಸರ್ಜಾ ಅವರು ‘ಸೀತಾ ಪಯಣ’ (Seetha Payana) ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರವಾಗಿದ್ದರೂ ಕಥೆಯಲ್ಲಿ ಟ್ವಿಸ್ಟ್ ಕೊಡೋ ಪಾತ್ರ ಅವರದ್ದಾಗಿದೆ. ಈ ಚಿತ್ರದಲ್ಲಿ ಧ್ರುವ ಜಬರ್‌ದಸ್ತ್ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಎಂಬ ಪಾತ್ರಕ್ಕೆ ಧ್ರುವ ಜೀವ ತುಂಬಿದ್ದಾರೆ. ಸದ್ಯ ರಿವೀಲ್ ಅವರ ಖಡಕ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾ ರಿಲೀಸ್‌ಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ಪಾರ್ಶ್ವವಾಯುವಿಗೆ ತುತ್ತಾಗಿ ‘ವಿಕ್ರಾಂತ್ ರೋಣ’ ನಟಿ ಜಾಕ್ವೆಲಿನ್ ತಾಯಿ ನಿಧನ

     

    View this post on Instagram

     

    A post shared by Dhruva Sarja (@dhruva_sarjaa)

    ಇನ್ನೂ ‘ಸೀತಾ ಪಯಣ’ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ನಾಯಕಿಯಾಗಿ ಐಶ್ವರ್ಯಾ ಸರ್ಜಾ ನಟಿಸಲಿದ್ದಾರೆ. ಈ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿಯೂ ಮೂಡಿ ಬರಲಿದೆ.

  • ಕಣ್ಣಿನಲ್ಲಿ ಪೊರೆ ಬೆಳೆದ ಮಗುವಿನ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ ಧ್ರುವ ಸರ್ಜಾ

    ಕಣ್ಣಿನಲ್ಲಿ ಪೊರೆ ಬೆಳೆದ ಮಗುವಿನ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ ಧ್ರುವ ಸರ್ಜಾ

    ಟ ಧ್ರುವ ಸರ್ಜಾ (Dhruva Sarja) ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಇದೀಗ ಪುಟ್ಟ ಮಗುವಿನ ಸಂಕಷ್ಟಕ್ಕೆ ಧ್ರುವ ಸಾಥ್‌ ನೀಡಿದ್ದಾರೆ. ಕಣ್ಣಿನಲ್ಲಿ ಪೊರೆ ಬೆಳೆದ ಪುಟ್ಟ ಕಂದಮ್ಮನ ಟ್ರೀಟ್‌ಮೆಂಟ್‌ಗೆ ನಟ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ:ಮತ್ತೆ ಪ್ರಭಾಸ್‌ಗೆ ಜೊತೆಯಾದ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ

    ಪುಟ್ಟ ಮಗು ಚಿರಂಜೀವಿಗೆ ಎರಡು ಕಣ್ಣಿನಲ್ಲೂ ಪೊರೆ ಬೆಳೆದ ಹಿನ್ನೆಲೆ ಟ್ರೀಟ್‌ಮೆಂಟ್‌ಗಾಗಿ ಧ್ರುವ ಸಹಕರಿಸಿದ್ದಾರೆ. ಮಂಜುನಾಥ ನೇತ್ರಾಲಯದ ವೈದ್ಯರ ಬಳಿ ಮಾತನಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗಾಗಿ ಪುಟ್ಟ ಮಗುವಿಗೆ ಯಶಸ್ವಿಗಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮೂಲಕ ಗಾರೆ ಕೆಲಸ ಮಾಡುವ ತಂದೆಯ ಬೆನ್ನಿಗೆ ನಿಂತಿದ್ದಾರೆ. ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಉಮಾಶ್ರೀ

    ಅಂದಹಾಗೆ, ನಿನ್ನೆ (ಮಾ.31) ಸುದೀಪ್ (Sudeep) ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮ ಕೀರ್ತನಾ ಚಿಕಿತ್ಸೆಗೆ ಸಹಾಯ ಮಾಡಿದ್ದರು. ಇದರ ಚಿಕಿತ್ಸೆಗೆ 16 ಕೋಟಿ ರೂ. ಬೇಕಿರೋದ್ರಿಂದ ಸುದೀಪ್, ನಾನು ನನ್ನ ಕೈಲಾದ ಸಹಾಯ ಮಾಡಿದ್ದೀನಿ, ನೀವೆಲ್ಲರೂ ಕೈಜೋಡಿಸಿ ಎಂದು‌ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಧ್ರುವ ಸರ್ಜಾ ಕೂಡ ಮತ್ತೊಂದು ಪುಟ್ಟ ಮಗುವಿನ ಬಾಳಿಗೆ ಬೆಳಕಾಗಿರೋದನ್ನು ನೋಡಿ ಫ್ಯಾನ್ಸ್‌ ಶ್ಲಾಘಿಸಿದ್ದಾರೆ.

  • KD ಲೇಡಿ ರೀಷ್ಮಾಗೆ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎಂದ ಧ್ರುವ ಸರ್ಜಾ

    KD ಲೇಡಿ ರೀಷ್ಮಾಗೆ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎಂದ ಧ್ರುವ ಸರ್ಜಾ

    ಧ್ರುವ ಸರ್ಜಾ (Dhruva Sarja) ನಟನೆಯ ಪ್ಯಾನ್‌ ಇಂಡಿಯಾ ‘ಕೆಡಿ’ (KD) ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ರೀಷ್ಮಾ ನಾಣಯ್ಯಗೆ (Reeshma Nanaiah) ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎನ್ನುತ್ತಾ ಧ್ರುವ ಸರ್ಜಾ ಹೆಜ್ಜೆ ಹಾಕಿದ್ದಾರೆ. ಈ ಸಾಂಗ್ ಸಖತ್ ಕ್ರೇಜಿ ಆಗಿ ಮೂಡಿ ಬಂದಿದೆ. ಇದು ಫ್ಯಾನ್ಸ್ ಸಖತ್ ಇಷ್ಟ ಆಗಿದೆ.

    ‘ಕೆಡಿ’ ಸಿನಿಮಾದಲ್ಲಿ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಹಾಡಿಗೆ ಧ್ರುವ ಸರ್ಜಾ ಮತ್ತು ನಾಯಕಿ ರೀಷ್ಮಾ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಸಿನಿಮಾದಲ್ಲಿನ ರಿಯಲ್ ಲುಕ್ ರಿವೀಲ್ ಮಾಡದೆ ಇಬ್ಬರೂ ಟ್ರ್ಯಾಕ್‌ ಸೂಟ್‌ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಪ್ರೇಮ್ ಬರೆದಿರುವ ಕ್ಯಾಚಿ ಲಿರಿಕ್ಸ್‌ಗೆ ಮಿಕಾ ಸಿಂಗ್ ಸೊಗಸಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗೀನ ಜನರೇಷನ್‌ ಯೂತ್ಸ್‌ಗೆ ಹಾಡು ಕನೆಕ್ಟ್‌ ಆಗೋ ವಿಭಿನ್ನವಾಗಿ ಸಾಂಗ್‌ ಮಾಡಿದ್ದಾರೆ.

     

    View this post on Instagram

     

    A post shared by KVN Productions (@kvn.productions)

    ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ಜೊತೆ ಬಾಲಿವುಡ್ ನಟ ಸಂಜಯ್ ದತ್ (Sanjay Dutt), ಶಿಲ್ಪಾ ಶೆಟ್ಟಿ (Shilpa Shetty), ರವಿಚಂದ್ರನ್, ರಮೇಶ್ ಅರವಿಂದ್, ನೋರಾ ಫತೇಹಿ ನಟಿಸಿದ್ದಾರೆ. ಕೆವಿಎನ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಸದ್ಯದಲ್ಲೇ ರಿಲೀಸ್ ಡೇಟ್ ಬಗ್ಗೆ ಚಿತ್ರತಂಡ ರಿವೀಲ್ ಮಾಡಲಿದೆ.

  • Exclusive: ಧ್ರುವಗೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್

    Exclusive: ಧ್ರುವಗೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ‘ಕೆಡಿ’ (KD Film) ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಸಿನಿಮಾದಲ್ಲಿ ನಟಿಸಲು ಧ್ರುವ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ್‌, ಶರಣ್ಯ ಶೆಟ್ಟಿ

    ‘ಮಾರ್ಟಿನ್’ (Martin) ಸಿನಿಮಾ ಆದ್ಮೇಲೆ ‘ಕೆಡಿ’ ಚಿತ್ರದ ಕಡೆ ಧ್ರುವ ಗಮನ ವಹಿಸಿದ್ದಾರೆ. ಸದ್ಯದಲ್ಲೇ ‘ಕೆಡಿ’ ಚಿತ್ರದ ಬಗ್ಗೆ ಮಾಹಿತಿ ಸಿಗಲಿದೆ. ಹೀಗಿರುವಾಗ ಅವರ ಹೊಸ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್ ಸಿಕ್ಕಿದೆ. ಸೋದರ ಮಾವ ಅರ್ಜುನ್ ಸರ್ಜಾ (Arjun Sarja) ಜೊತೆ ಹೊಸ ಸಿನಿಮಾ ಮಾಡಲು ಧ್ರುವ ಸಾಥ್ ನೀಡುತ್ತಿದ್ದಾರೆ.

    ಅರ್ಜುನ್ ಸರ್ಜಾ (Arjun Sarja) ನಿರ್ದೇಶನದ ‘ಸೀತಾ ಪಯಣ’ (Seetha Payana) ಸಿನಿಮಾದಲ್ಲಿ ಧ್ರುವ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವಾರ ಅವರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಚೆನ್ನೈನಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಅತಿಥಿ ಪಾತ್ರವಾಗಿದ್ದರೂ ಕೂಡ ಸಿನಿಮಾದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಈ ಚಿತ್ರದಲ್ಲಿ ಧ್ರುವ ಜಬರ್‌ದಸ್ತ್ ಆದ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಇನ್ನೂ ‘ಸೀತಾ ಪಯಣ’ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ನಾಯಕಿಯಾಗಿ ಐಶ್ವರ್ಯಾ ಅರ್ಜುನ್ ಸರ್ಜಾ ನಟಿಸಲಿದ್ದಾರೆ. ಈ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿಯೂ ಮೂಡಿ ಬರಲಿದೆ.

  • ಹುಟ್ಟೂರಿನ ರಥೋತ್ಸವದಲ್ಲಿ ತೇರು ಎಳೆದ ಅರ್ಜುನ್ ಸರ್ಜಾ, ಧ್ರುವ ಸರ್ಜಾ

    ಹುಟ್ಟೂರಿನ ರಥೋತ್ಸವದಲ್ಲಿ ತೇರು ಎಳೆದ ಅರ್ಜುನ್ ಸರ್ಜಾ, ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಅರ್ಜುನ್ ಸರ್ಜಾ (Arjun Sarja) ಹಾಗೂ ಧ್ರುವ ಸರ್ಜಾ (Dhruva Sarja) ಅವರು ಹುಟ್ಟೂರಿನ ರಥೋತ್ಸವದಲ್ಲಿ ಭಾಗಿಯಾಗಿ ತೇರು ಎಳೆದಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಜಕ್ಕೇನಹಳ್ಳಿಯಲ್ಲಿರುವ ಅಹೋಬಲ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಡೆಲ್ಲಿ ಅಂಗಳ ತಲುಪಿದ ನಟಿ ರನ್ಯಾ ರಾವ್ ಕೇಸ್: ಇಬ್ಬರು ಸಚಿವರು ಸೇಫ್

    ಇಂದು ಜಕ್ಕೇನಹಳ್ಳಿಯಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಅರ್ಜುನ್ ಸರ್ಜಾ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಮನೆ ದೇವರು ಅಹೋಬಲ ನರಸಿಂಹ ಸ್ವಾಮಿಯ ರಥ ಎಳೆದಿದ್ದಾರೆ. ಈ ವೇಳೆ, ಸ್ಟಾರ್ ನಟರಾದ ಅರ್ಜುನ್ ಸರ್ಜಾ ಮತ್ತು ಧ್ರುವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಫ್ಯಾನ್ಸ್ ಕಂಟ್ರೋಲ್‌ಗೆ ಪೊಲೀಸರು ಹರಸಾಹಸ ಮಾಡಿದ್ದಾರೆ.

    ಇನ್ನೂ ಅರ್ಜುನ್ ಸರ್ಜಾ ಅವರು ಮಗಳು ಐಶ್ವರ್ಯಾ ಮತ್ತು ನಿರಂಜನ್ ಸುಧೀಂದ್ರ ನಟನೆಯ ‘ಸೀತಾ ಪಯಣ’ ಸಿನಿಮಾಗೆ ನಿರ್ದೇಶನ ಮಾಡುತ್ತ ಬ್ಯುಸಿಯಾಗಿದ್ದಾರೆ. ಇತ್ತ ಧ್ರುವ ‘ಕೆಡಿ’ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.