Tag: dhruva sarja

  • ಆ್ಯಕ್ಷನ್ ಪ್ರಿನ್ಸ್ ಧ್ರುವ ಚಲಿಸುತ್ತಿದ್ದ ಕಾರು ಅಪಘಾತ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಚಲಿಸುತ್ತಿದ್ದ ಕಾರು ಅಪಘಾತ

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಳ್ಳಾರಿಯಿಂದ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರುಳುವಾಗ ಮಾರ್ಗದ ಮಧ್ಯೆ ಅವರು ಕಾರು ಅಪಘಾತಕ್ಕೀಡಾಗಿದೆ.

    ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಹಾನಿ ಉಂಟಾಗಿಲ್ಲ. ಧ್ರುವ ಸರ್ಜಾ ಕಾರಿನ ಹಿಂದಿನ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

    ಅಪಘಾತದ ವೇಳೆ ಕಾರಿನಲ್ಲಿ ಧ್ರುವ ಅವರ ಜೊತೆಗೆ ಕೆಲವು ಸ್ನೇಹಿತರು ಕೂಡ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ‘ಪೊಗರು’ ಚಿತ್ರದ ಚಿತ್ರೀಕರಣಕ್ಕಾಗಿ ಧ್ರುವ ಸರ್ಜಾ ಅವರು 15 ದಿನಗಳಿಂದ ಬಳ್ಳಾರಿಯಲ್ಲಿ ಬೀಡು ಬಿಟ್ಟಿದ್ದಾರೆ.

    ಪೊಗರು ರೊಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು, ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ಮಿಸುತ್ತಿದ್ದು, ಬಿ.ಕೆ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.

  • ಪೊಗರು ಸೆಟ್‍ನಲ್ಲಿ ಅಗ್ನಿ ಅನಾಹುತ – ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ ಪಾರು

    ಪೊಗರು ಸೆಟ್‍ನಲ್ಲಿ ಅಗ್ನಿ ಅನಾಹುತ – ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ ಪಾರು

    ಹೈದರಾಬಾದ್: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಪೊಗರು ಶೂಟಿಂಗ್ ಸೆಟ್‍ನಲ್ಲಿ ಅಗ್ನಿ ಅನಾಹುತವಾಗಿದ್ದು ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ ಪಾರಾಗಿದ್ದಾರೆ.

    ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತಿದ್ದು ಬೃಹತ್ ಸೆಟ್ ಹಾಕಲಾಗಿತ್ತು. ಫೈಟಿಂಗ್ ಶೂಟ್ ನಡೆಯುತ್ತಿದ್ದಾಗ ಅಗ್ನಿ ಅನಾಹುತ ಸಂಭವಿಸಿದ್ದು, ಸೆಟ್ ಬಹುತೇಕ ಸುಟ್ಟು ಕರಕಲಾಗಿದೆ. ಇದನ್ನೂ ಓದಿ:ಧ್ರುವ ಸರ್ಜಾ ಅಭಿನಯದ ಪೊಗರು ತಡವಾಗಲು ಅಸಲೀ ಕಾರಣ!

    ರಗಡ್ ಸೀನ್‍ಗಾಗಿ ವಿದೇಶಿ ದೈತ್ಯ ಬಾಡಿಬಿಲ್ಡರ್ಸ್ ಕರೆತರಲಾಗಿತ್ತು. ನಂದಕಿಶೋರ್ ನಿರ್ಮಾಣದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಶಾನ್ವಿ ಶ್ರೀವಾತ್ಸವ್ ಅಭಿನಯಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.

    ಚಿತ್ರದಲ್ಲಿ ಮಾಜಿ ಡಬ್ಲೂ ಡಬ್ಲೂ ಎಫ್ ಆಟಗಾರ ಮೋರ್ಗನ್ ಆಸ್ಟೆ ಸುಮಾರು 49 ದಿನಗಳ ಕಾಲ ಧೃವ ಸರ್ಜಾಗೆ ಟ್ರೈನಿಂಗ್ ಕೊಡಲಿದ್ದಾರೆ. ಆಟಗಾರನ ಜೊತೆಯಿದ್ದ ಖುಷಿಯನ್ನು ಧ್ರುವ ಸರ್ಜಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

     

    ರೊಮ್ಯಾಂಟಿಕ್ ಆಕ್ಷನ್ ಚಿತ್ರ ಇದಾಗಿದ್ದು, ಧ್ರುವ ಸರ್ಜಾ ಅವರು 8ನೇ ತರಗತಿಯ ಹುಡುಗನಾಗಿ ಕಾಣಿಸಿಕೊಂಡಿರುವುದು ವಿಶೇಷ. ಈ ಪಾತ್ರಕ್ಕಾಗಿ ಕಠಿಣ ದೈಹಿಕ ಕಸರತ್ತು ನಡೆಸಿದ್ದ ಧ್ರುವಾ ಸರ್ಜಾ ಎರಡೇ ತಿಂಗಳಿನಲ್ಲಿ 30 ಕೆಜಿ ತೂಕ ಇಳಿಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಅರ್ಜುನ್ ಜನ್ಯ ಸಂಗೀತ, ಎಸ್ ವೈದ್ಯ ಅವರ ಛಾಯಾಗ್ರಹಣವಿದ್ದು, ಬಿ.ಕೆ. ಗಂಗಾಧರ್ ಬಂಡವಾಳ ಹೂಡಿದ್ದಾರೆ.

    ಈ ಫೆಬ್ರವರಿಯಲ್ಲಿ ಧುವ ಸರ್ಜಾ, ಪೊಗರು ಚಿತ್ರದ ಎರಡನೇ ಹಂತದ ಶೂಟಿಂಗ್ ಆರಂಭವಾಗುತ್ತಿದೆ. ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಕ್ಕೆ ಆಶೀರ್ವಾದ ಮಾಡಿದಂತೆ ಈ ಚಿತ್ರಕ್ಕೂ ಆಶೀರ್ವಾದ ಮಾಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು.

    https://twitter.com/KaiGreene/status/1165648075941134336

  • ಇನ್‍ಸ್ಟಾಗೆ ಆ್ಯಕ್ಷನ್ ಪ್ರಿನ್ಸ್ ಎಂಟ್ರಿ- ಒಂದೇ ದಿನಕ್ಕೆ 1 ಲಕ್ಷ ಫಾಲೋವರ್ಸ್

    ಇನ್‍ಸ್ಟಾಗೆ ಆ್ಯಕ್ಷನ್ ಪ್ರಿನ್ಸ್ ಎಂಟ್ರಿ- ಒಂದೇ ದಿನಕ್ಕೆ 1 ಲಕ್ಷ ಫಾಲೋವರ್ಸ್

    ಬೆಂಗಳೂರು: ಸ್ಯಾಂಡಲ್‍ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇನ್‍ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಾರೆ. ಖಾತೆ ತೆರೆದ ಒಂದೇ ದಿನಕ್ಕೆ 1 ಲಕ್ಷ ಮಂದಿ ಅವರನ್ನು ಫಾಲೋ ಮಾಡಲು ಶುರು ಮಾಡಿದ್ದಾರೆ.

    ಧ್ರುವ ಸರ್ಜಾ ಈಗಾಗಲೇ ಟ್ವಿಟ್ಟರ್ ಖಾತೆಯನ್ನು ಹೊಂದಿದ್ದಾರೆ. ಈಗ ಅವರು ಇನ್‍ಸ್ಟಾಗ್ರಾಂ ಖಾತೆ ತೆರೆದಿದ್ದು, ವಿಡಿಯೋ ಪೋಸ್ಟ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಧ್ರುವ ಖಾತೆ ತೆರೆದ ಒಂದೇ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಫಾಲೋ ಮಾಡುತ್ತಿದ್ದಾರೆ.

    ವಿಡಿಯೋದಲ್ಲಿ ಮಾತನಾಡಿದ ಅವರು, “ನಾನು ಕೊನೆಗೂ ಇನ್‍ಸ್ಟಾಗ್ರಾಂಗೆ ಬಂದಿದ್ದೇನೆ. ನಾನು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯನಾಗಿ ಇರುವುದಿಲ್ಲ. ಈಗ ಸಕ್ರಿಯನಾಗಿ ಇರಬೇಕು ಎಂದು ಇನ್‍ಸ್ಟಾಗ್ರಾಂಗೆ ಬಂದಿದ್ದೇನೆ. ನನ್ನ ಮುಂದಿನ ಸಿನಿಮಾ ಹೆಸರು ‘ಪೊಗರು’. ಈ ಚಿತ್ರದ ಪ್ರತಿಯೊಂದು ಅಪ್ಡೇಟ್‍ಗಳ ಬಗ್ಗೆ ನಾನು ಈ ಪೇಜ್‍ನಲ್ಲಿ ಪೋಸ್ಟ್ ಮಾಡುತ್ತಿರುತ್ತೇನೆ. ಎಲ್ಲರೂ ಈ ಪೇಜ್ ಫಾಲೋ ಮಾಡಿ ಆಶೀರ್ವಾದ ಮಾಡಿ. ಜೈ ಆಂಜನೇಯ” ಎಂದು ಹೇಳಿದ್ದಾರೆ.

     

    View this post on Instagram

     

    ಜೈ ಆಂಜನೇಯ ????????

    A post shared by Dhruva Sarja (@dhruva_sarjaa) on

    ಧ್ರುವ ಸರ್ಜಾ ಇನ್‍ಸ್ಟಾಗ್ರಾಂಗೆ ಬರುತ್ತಿದ್ದಂತೆ ಅವರ ಮಾವನ ಮಗಳು ಅಂದರೆ ಅರ್ಜುನ ಸರ್ಜಾ ಅವರ ಮಗಳು ಐಶ್ವರ್ಯಾ ಸ್ವಾಗತ ಕೋರಿದ್ದಾರೆ. ಐಶ್ವರ್ಯಾ ಅವರು ಧ್ರುವ ಸರ್ಜಾ ಅವರ ಜೊತೆ ಇರುವ ಬಾಲ್ಯದ ಫೋಟೋವನ್ನು ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ “ಇನ್‍ಸ್ಟಾಗ್ರಾಂಗೆ ಸ್ವಾಗತ ಧ್ರುವ” ಎಂದು ಬರೆದು ಅಪ್ಲೋಡ್ ಮಾಡಿದ್ದಾರೆ.

    ಜುಲೈ 4ರಂದು ಧ್ರುವ ಸರ್ಜಾ ಇನ್‍ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ಸದ್ಯಕ್ಕೆ ಧ್ರುವ ಇನ್‍ಸ್ಟಾಗ್ರಾಂನಲ್ಲಿ ಯಾರನ್ನು ಫಾಲೋ ಮಾಡುತ್ತಿಲ್ಲ. ಆದರೆ ಅವರು ಖಾತೆ ತೆರೆದ ಒಂದೇ ದಿನಕ್ಕೆ 1 ಲಕ್ಷ 65 ಸಾವಿರಕ್ಕೂ ಹೆಚ್ಚು ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ.

  • ಗ್ರೇಟ್ ಅರ್ಜುನ್ – ಈ ಗುಣಕ್ಕೆ ಏನೆಂದು ನಾ ಹೇಳಲಿ: ಸರ್ಜಾರನ್ನು ಹೊಗಳಿದ ಶಂಕರ್ ಅಶ್ವಥ್

    ಗ್ರೇಟ್ ಅರ್ಜುನ್ – ಈ ಗುಣಕ್ಕೆ ಏನೆಂದು ನಾ ಹೇಳಲಿ: ಸರ್ಜಾರನ್ನು ಹೊಗಳಿದ ಶಂಕರ್ ಅಶ್ವಥ್

    ಬೆಂಗಳೂರು: ಹಿರಿಯ ನಟ ಶಂಕರ್ ಅಶ್ವಥ್ ಅವರು ನಟ ಅರ್ಜುನ್ ಸರ್ಜಾ ಅವರನ್ನು ಹೊಗಳಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಇತ್ತೀಚೆಗೆ ಶಂಕರ್ ಅಶ್ವಥ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ ‘ಪೊಗರು’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಇಬ್ಬರು ಮಾತುಕತೆ ನಡೆಸುವಾಗ ಅರ್ಜುನ್ ಸರ್ಜಾ ಅವರ ಬಗ್ಗೆ ಮಾತನಾಡಿದ್ದಾರೆ. ಧ್ರುವ ಜೊತೆ ಮಾತನಾಡಿದ ಬಳಿಕ ಶಂಕರ್ ಅಶ್ವಥ್ ಅವರು ತಮ್ಮ ಅನುಭವವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಹಂಚಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಗ್ರೇಟ್ ಅರ್ಜುನ್ ಸರ್ಜಾ – ಈ ಗುಣಕ್ಕೆ ಏನೆಂದು ನಾ ಹೇಳಲಿ. ಇದು ಸತ್ಯ ನಾನು ಹೈದರಾಬಾದ್ ನಲ್ಲಿ ಪೊಗರು ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ನಡೆದ ನೈಜಸಂಗತಿ ಇದರಲ್ಲಿ ಯಾವ ಉಪ್ಪು ಸೊಪ್ಪು ಬೆರತಿಲ್ಲ. ನಾಯಕ ನಟರಾದ ಧೃವ ಸರ್ಜಾ “ನಾನು ಚಿಕ್ಕವನಿದ್ದಾಗ ನಿಮ್ಮ ಮನೆಗೆ ಮಾಮ ಅರ್ಜುನ್ ಸರ್ಜಾ ಜೊತೆಯಲ್ಲಿ ಬಂದಿದ್ದೆ” ಅಂದಾಗ ನನಗೆ ಜ್ಞಾಪಕ ಬರಲಿಲ್ಲ. ಅದಕ್ಕೆ “ನಾಳೆ ನೀವು ಇರ್ತೀರಾ ಮಾಮನೂ ಇಲ್ಲಿ ಬೇರೆ ಚಿತ್ರೀಕರಣಕ್ಕೆ ಬಂದಿದ್ದಾರೆ ಅವರ ಹತ್ತಿರ ಆ ಫೋಟೋ ಇದೆ ತೋರಿಸ್ತೇನೆ” ಎಂದಾಗ ಇಲ್ಲಾ ನಾನು ಬೇರೆ ಚಿತ್ರೀಕರಣಕ್ಕೆ ಕೋಲಾರಕ್ಕೆ ಹೋಗಬೇಕೆಂದೆ. ಆಗ ತಕ್ಷಣವೇ ಅರ್ಜುನ್ ಸರ್ಜಾಗೆ ಫೋನ್ ಮಾಡಿ ಅವರ ಮೊಬೈಲ್ ನಲ್ಲಿದ್ದ ಈ ಫೋಟೋ ತರಿಸಿಕೊಂಡು ನನಗೆ ಕಳುಹಿಸಿದರು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ 2006ನೇ ಇಸವಿಯಲ್ಲಿ ನಮ್ಮ ತಂದೆಯನ್ನು ನೋಡಲು ಬಂದಾಗ ತೆಗೆದ ಈ ಫೋಟೋ 13 ವರ್ಷಗಳ ನಂತರವೂ ಅರ್ಜುನ್ ಸರ್ಜಾರ ಮೊಬೈಲ್ ನಲ್ಲಿದೆ ಎಂದರೆ ಆತ ನನ್ನ ತಂದೆಗೆ ಎಷ್ಟು ಗೌರವ ಕೊಡುತ್ತಾರೆ, ಎಂತಹ ದೊಡ್ಡ ಮನುಷ್ಯ ಎಂದು ಬರೆದು ಹಾಕಿದ್ದಾರೆ.

    ಸಿನಿಮಾ ಅವಕಾಶ ಇಲ್ಲದೇ ಕ್ಯಾಬ್ ಚಾಲಕರಾಗಿದ್ದ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಅವಕಾಶಗಳು ಸಿಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ ‘ಯಜಮಾನ’ ಚಿತ್ರದಲ್ಲಿ ಶಂಕರ್ ಅಶ್ವಥ್ ನಟಿಸಿದ್ದರು. ಈಗ ಅವರು ಧ್ರುವ ನಟನೆಯ ‘ಪೊಗರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಂಡಿಯನ್ಸ್ ಮೈಯಾಗ್ ಎಷ್ಟ್ ಪೊಗರ್ ಐತೆ ಅಂತ ಚೆಕ್ ಮಾಡಾಕ್  ಬರ್ಬೇಡಾ: ಧ್ರುವ ಸರ್ಜಾ

    ಇಂಡಿಯನ್ಸ್ ಮೈಯಾಗ್ ಎಷ್ಟ್ ಪೊಗರ್ ಐತೆ ಅಂತ ಚೆಕ್ ಮಾಡಾಕ್ ಬರ್ಬೇಡಾ: ಧ್ರುವ ಸರ್ಜಾ

    ಬೆಂಗಳೂರು: ಭಾರತೀಯ ಯೋಧರನ್ನು ಬಲಿಪಡೆದಿದ್ದ ಪಾಕಿಸ್ತಾನದ ವಿರುದ್ಧ ಭಾರತ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಸಿನಿಮಾ ಸ್ಟಾರ್ಸ್ ಸೇರಿದಂತೆ ದೇಶಾದ್ಯಂತ ಭಾರತೀಯ ವಾಯುಸೇನೆಯ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಹೌದು..ಸ್ಯಾಂಡಲ್‍ವುಡ್ ನಟರು ಮಾತ್ರವಲ್ಲದೇ ಬಾಲಿವುಡ್ ನಟರು ಕೂಡ ಸೇನೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಟ ಧ್ರವಾ ಸರ್ಜಾ ಅವರು, “ಭಾರತೀಯರ ಮೈಯಾಗ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕ್ ಬರಬೇಡಾ..ಮಕ್ಳಾ ಬ್ಲಾಸ್ಟ್ ಆಗೋಯ್ತಿರಾ. ಭೋಲೋ ಭಾರತ್ ಮಾತಾ ಕಿ ಜೈ.. ಜೈ ಆಂಜನೇಯ” ಎಂದು ಟ್ವೀಟ್ ಮಾಡಿ ಪಾಕಿಸ್ತಾನದವರಿಗೆ ಭಾರತೀಯರ ಪೊಗರಿನ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

    ನಟ ಗಣೇಶ್ ಅವರು, “ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದಕರ ಕ್ಯಾಂಪಸ್‍ಗಳನ್ನು ನಾಶ ಮಾಡಿದೆ. ನಮ್ಮ ಭಾರತೀಯ ವಾಯುಸೇನೆಯ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನೂ ನಟಿ ಕಾಜಲ್, “ಪಾಕಿಸ್ತಾನಕ್ಕೆ ಭಾರತ ಹಿಂತಿರುಗಿಸಿ ಉತ್ತರ ಕೊಟ್ಟಿದೆ. ನಮ್ಮ ಧೈರ್ಯವಂತ ಹೀರೋಗಳಾದ ಭಾರತೀಯ ವಾಯುಪಡೆಗೆ ದೊಡ್ಡ ಸೆಲ್ಯೂಟ್” ಎಂದು ಹೇಳಿದ್ದಾರೆ. “ನಮ್ಮ ದೇಶ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಟ್ಟಿದೆ. ಭಾರತೀಯ ವಾಯುಪಡೆಗೆ ಸೆಲ್ಯೂಟ್” ಎಂದು ಜೂ.ಎನ್.ಟಿ.ಆರ್ ಹೇಳಿದ್ದಾರೆ.

    ಭಾರತೀಯ ವಾಯುಪಡೆಯ ಕಾರ್ಯಕ್ಕೆ ಮೆಚ್ಚಿ ನಟ ಅಕ್ಷಯ್ ಕುಮಾರ್, ನಟಿ ಕಾಜಲ್ ಅಗರ್ವಾಲ್, ಮಹೇಶ್ ಬಾಬು, ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿವಮೊಗ್ಗದಲ್ಲಿ ಧ್ರುವ ಸರ್ಜಾ- ಕಿಕ್ಕಿರಿದ ಅಭಿಮಾನಿಗಳು

    ಶಿವಮೊಗ್ಗದಲ್ಲಿ ಧ್ರುವ ಸರ್ಜಾ- ಕಿಕ್ಕಿರಿದ ಅಭಿಮಾನಿಗಳು

    ಶಿವಮೊಗ್ಗ: ಜಿಲ್ಲೆಯ ನವೀಕೃತ ಜೋಯಾಲುಕ್ಕಾಸ್ ಮಳಿಗೆಯನ್ನು ಖ್ಯಾತ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಿಕ್ಕಿರಿದ ಅಭಿಮಾನಿಗಳ ನಡುವೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜಾಯ್ ಅಲುಕ್ಕಾಸ್ ಇನ್ನಿತರರು ಉಪಸ್ಥಿತರಿದ್ದರು.

    ಧ್ರುವ ಸರ್ಜಾ ಮಳಿಗೆ ಉದ್ಘಾಟಿಸಿ ಚಿನ್ನಾಭರಣ, ವಜ್ರ, ವಾಚ್ ಇನ್ನಿತರ ವಿಭಾಗಗಳಿಗೆ ಭೇಟಿ ನೀಡಿ ವೈವಿಧ್ಯಮಯ ಶ್ರೇಣಿ ಹಾಗೂ ವಿನ್ಯಾಸಗಳಿಗೆ ಮೆಚ್ಚುಗೆ ಸೂಚಿಸಿದರು. ಈ ಮಳಿಗೆಯಲ್ಲಿನ ಪ್ರಾಚೀನ ಸಂಗ್ರಹಗಳನ್ನು ಒಳಗೊಂಡ ಹರಳುಗಳ ವಿಭಾಗ ಅಪೂರ್ವ ಸೇರಿದಂತೆ ವಿವಿಧ ವಿಭಾಗಗಳಲ್ಲಿನ ವಿವಿಧತೆಗೆ ಸಂತಸ ವ್ಯಕ್ತಪಡಿಸಿದರು.

    ನವೀಕೃತ ಮಳಿಗೆ ಆರಂಭಗೊಂಡ ಬೆನ್ನಲ್ಲೇ ಜೋಯಾಲುಕ್ಕಾಸ್ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ. ಪ್ರತಿ ಖರೀದಿಯ ಮೇಲೆ ಖಚಿತವಾದ ಗೃಹ ಬಳಕೆ ವಸ್ತುಗಳನ್ನು ಉಚಿತವಾಗಿ ಪಡೆಯಲಿದ್ದಾರೆ. ಬೆಳಗ್ಗಿನಿಂದಲೇ ತಮ್ಮ ಪ್ರೀತಿಯ ನಟ ಧ್ರುವ ಸರ್ಜಾ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.

    ವೇದಿಕೆ ಮೇಲೆ ಬಂದ ಧ್ರುವ ಸರ್ಜಾ ಶಿವಮೊಗ್ಗ ಅಭಿಮಾನಿಗಳಿಗಾಗಿ ಸಿನಿಮಾ ಡೈಲಾಗ್ ಹೇಳಿ ರಂಜಿಸಿದರು. ಅಲ್ಲದೇ ಜೋಯಾಲುಕ್ಕಾಸ್ ಮಳಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧ್ರುವ ಸರ್ಜಾ ಹಿಂತಿರುಗುವಾಗ ಅವರಿಗೆ ಅಡ್ಡಲಾದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಸ್ತು ದೋಷಕ್ಕೆ ಹೆದರಿ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಧ್ರುವ ಶಿಫ್ಟ್?

    ವಾಸ್ತು ದೋಷಕ್ಕೆ ಹೆದರಿ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಧ್ರುವ ಶಿಫ್ಟ್?

    ಬೆಂಗಳೂರು: ಶೀಘ್ರವೇ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಾಸ್ತು ದೋಷಕ್ಕೆ ಹೆದರಿ ಮನೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಈಗ ಸ್ಯಾಂಡಲ್‍ವುಡ್‍ನಲ್ಲಿ ಹರಿದಾಡುತ್ತಿದೆ.

    ನಟ ಧ್ರುವ ಸರ್ಜಾ ಬನಶಂಕರಿಯ ಕೆ.ಆರ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಈಗ ವಾಸ್ತು ದೋಷದಿಂದ ಬನಶಂಕರಿಯ ಕೆ.ಆರ್ ರಸ್ತೆಯಿಂದ ಸದಾಶಿವನಗರದಲ್ಲಿರುವ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಎಂಟ್ರಿಯಾಗಲಿದ್ದಾರೆ. ಡಿಸೆಂಬರ್ 9ರ ನಿಶ್ಚಿತಾರ್ಥದ ನಂತರ ಧ್ರುವ ತಮ್ಮ ಮನೆ ಶಿಫ್ಟ್ ಮಾಡಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: `ದ್ರಾಕ್ಷಿ’, `ಗೋಡಂಬಿ’ ಒಟ್ಟಿಗೆ ಬೇಕೆಂದ ಪ್ರಥಮ್ – ಆಸೆ ಈಡೇರಿಸಿದ ಧ್ರುವ ಸರ್ಜಾ

    ಧ್ರುವ ಹಾಗೂ ಪ್ರೇರಣಾ ತುಂಬಾ ಸಿಂಪಲ್ ಆಗಿ ಹಿಂದೂ ಸಂಪ್ರದಾಯದಂತೆ ಡಿಸೆಂಬರ್ ಮೊದಲ ವಾರದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ.

    ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಅವರ ನಿಶ್ಚಿತಾರ್ಥದಲ್ಲಿ ಅರುಣ್ ಸಾಗರ್ ಆಂಜನೇಯನ ಮೂರ್ತಿಯ ಸೆಟ್ ಹಾಕಲಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ದ್ರಾಕ್ಷಿ’, `ಗೋಡಂಬಿ’ ಒಟ್ಟಿಗೆ ಬೇಕೆಂದ ಪ್ರಥಮ್ – ಆಸೆ ಈಡೇರಿಸಿದ ಧ್ರುವ ಸರ್ಜಾ

    `ದ್ರಾಕ್ಷಿ’, `ಗೋಡಂಬಿ’ ಒಟ್ಟಿಗೆ ಬೇಕೆಂದ ಪ್ರಥಮ್ – ಆಸೆ ಈಡೇರಿಸಿದ ಧ್ರುವ ಸರ್ಜಾ

    ಬೆಂಗಳೂರು: ಸ್ಯಾಂಡಲ್‍ವುಡ್ ಆಕ್ಷನ್ ಪ್ರಿನ್ಸ್, ಧ್ರುವ ಸರ್ಜಾ ಅವರ ಮದುವೆ ಸುದ್ದಿ ಕೇಳುತ್ತಿದಂತೆ ಸಂತಸಗೊಂಡಿದ್ದ ಅಭಿಮಾನಿಗಳು ಇಬ್ಬರನ್ನ ಒಟ್ಟಿಗೆ ನೋಡಲು ಕಾತುರದಿಂದ ಕಾಯುತ್ತಿದ್ದರು. ಇದರ ನಡುವೆ ನಟ, ಒಳ್ಳೆ ಹುಡುಗ ಪ್ರಥಮ್ ಇಬ್ಬರು ಒಟ್ಟಿಗೆ ಇರುವ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ತಮ್ಮ ಹುಟ್ಟುಹಬ್ಬ ದಿನದಂದು ಧ್ರುವ ಸರ್ಜಾ ಮದುವೆ ಆಗುತ್ತಿರುವ ವಿಷಯ ಬಿಚ್ಚಿಟ್ಟಿದ್ದರು. ಧ್ರುವ ಸರ್ಜಾ ಯಾವ ಹುಡುಗಿಯನ್ನು ಮದುವೆಯಾಗುತ್ತಾರೆ ಎಂದು ತಿಳಿದುಕೊಳ್ಳಲು ಪ್ರೇರಣಾರ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಪ್ರಥಮ್, ಧ್ರುವ ಸರ್ಜಾರೊಂದಿಗೆ ಪ್ರೇರಣಾ ಅವರನ್ನು ಭೇಟಿ ಮಾಡಿದ್ದು, ಈ ಕುರಿತು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಧೃವ ಸರ್ಜಾ ಅವರ ಬಳಿ ಒಂದೇ ಹಠ ನನ್ನದು. ನನಗೆ ಬರೀ ಗೋಡಂಬಿ ಬೇಡ. ದ್ರಾಕ್ಷಿ-ಗೋಡಂಬಿ ಒಟ್ಟಿಗೆ ಬೇಕು ಎಂದು. ನಿಮ್ಮ ಜೊತೆ ಪ್ರೇರಣಾ ಅವರನ್ನು ಭೇಟಿ ಮಾಡಬೇಕು ಎಂದು ಹೇಳಿದೆ. ಬುಧವಾರ ರಾತ್ರಿ 10:30 ರ ಸಮಯದಲ್ಲಿ ಪ್ರೀತಿಯ ಸೋದರ ಧೃವ ಅವರೇ ಕಾರು ಡ್ರೈವ್ ಮಾಡಿಕೊಂಡು ಪ್ರೇರಣಾ ಅವರ ಮನೆಗೆ ಕರೆದುಕೊಂಡು ಹೋದರು.

    ಒಂದು ವಿಷಯ ಹೇಳುತ್ತೇನೆ. ಪ್ರೇರಣಾ ಸಕ್ಕತ್ ಲಕ್ಕಿ ಎಂದು ಎಲ್ಲಾ ಮಾತನಾಡುತ್ತಿದ್ದರು. ಧ್ರುವ ಅವರು ಕೂಡ ಲಕ್ಕಿ. ಅವರ ಮನೆಯಲ್ಲಿ ನಿನ್ನೆ ಅಪ್ಪ-ಅಮ್ಮ ಎಲ್ಲಾ ಇದ್ದರು, ಸಕ್ಕತ್, ತರ್ಲೆ ತಮಾಷೆ ಇತ್ತು. ದಯಾನಂದ ಕಾಲೇಜಲ್ಲಿ ಲೆಕ್ಚರರ್ ಆಗಿರುವ ಪ್ರೇರಣಾ ಅವರು ಧ್ರುವ ಅವರಿಗೆ ಏನು ಪಾಠ ಮಾಡಿರುತ್ತಾರೆ ನೋಡೋಣ ಎಂದು ಹೋಗಿದ್ದೆ. ನಿಜಕ್ಕೂ she is a wonderful soul.

    ಪ್ರೇರಣಾ ಅವರಿಗೆ ಪಬ್ಲಿಸಿಟಿ, ಮೀಡಿಯಾ ಇದು ಯಾವುದು ಇಷ್ಟ ಆಗಲ್ಲ. ಸಿಂಪಲ್ ಲೈಫ್ ಅನ್ನು ಸಖತಾಗಿ ಲೀಡ್ ಮಾಡುತ್ತಿದ್ದಾರೆ. ನನ್ನ ಒತ್ತಡಕ್ಕೆ ಮಣಿದು ಧ್ರುವ ಅವರೇ ಕಾರು ಡ್ರೈವ್ ಮಾಡಿಕೊಂಡು ಕರೆದುಕೊಂಡು ಹೋದರು. ಒಂದು ಮಾತು ನಿಜ. ಒಳ್ಳೆ ಜೋಡಿ ಮೇಡ್ ಫಾರ್ ಇಚ್ ಆದರ್ ನಾನು ಎಷ್ಟೇ ಕಾಲು ಎಳೆದರೂ ನಗುತ್ತಾ ಆರಾಮಾವಾಗಿದ್ದರು. ಅತಿ ಶೀಘ್ರ ಡಿಸೆಂಬರ್ 9 ರಂದು ನಿಶ್ಚಿತಾರ್ಥ. ಉಳಿದ ಎಲ್ಲಾ ವಿಷಯ ಅವರು ಅತಿ ಶೀಘ್ರದಲ್ಲಿ ಮಾಧ್ಯಮದ ಮುಂದೆ ಬಹಿರಂಗವಾಗಿ ಮದುವೆ ಆಮಂತ್ರಣ ಕೊಡುತ್ತಾರೆ. ಅಲ್ಲಿಯವರೆಗೂ ಆರಾಮವಾಗಿ ಇರಲಿ ಬಿಡಿ ಈ ಜೋಡಿ.

    ಬಟ್ ಪ್ರೇರಣಾ ಅವವರ ಪೋಷಕರಿಗೆ ಧ್ರುವ ಸರ್ಜಾ ಅಂದರೆ ಸಖತ್ ಹೆಮ್ಮೆ. ಆಕ್ಚುವಲಿ ಅಳಿಯಾ ಅಲ್ಲ, ಗೆಳೆಯ ಅವರಿಗೆ ಅಷ್ಟು ಆಪ್ತರು. ಲಾಸ್ಟ್ ಒಂದು ಇಂಟರೆಸ್ಟಿಂಗ್ ವಿಷಯ ಹೇಳುತ್ತೇನೆ. ಪ್ರೇರಣಾ ಅವರ ತಂದೆ ಶಂಕರ್ ಮತ್ತು ಅರ್ಜುನ್ ಸರ್ಜಾ ಅವರು ಕೂಡ ಬೆಸ್ಟ್ ಫ್ರೆಂಡ್ಸ್ ಗೊತ್ತಾ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಧ್ರುವ ಸರ್ಜಾರಿಂದ ಭಾವಿ ಪತ್ನಿಯ ಬಾಲ್ಯದ ಫೋಟೋ ರಿವೀಲ್

    ಧ್ರುವ ಸರ್ಜಾರಿಂದ ಭಾವಿ ಪತ್ನಿಯ ಬಾಲ್ಯದ ಫೋಟೋ ರಿವೀಲ್

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಮದುವೆ ಫಿಕ್ಸ್ ಆಗಿದ್ದು, ಈ ಬೆನ್ನಲ್ಲೇ ಇದೀಗ ಅವರು ತಮ್ಮ ಭಾವಿ ಪತ್ನಿಯ ಬಾಲ್ಯದ ಫೋಟೋ ರಿವೀಲ್ ಮಾಡಿದ್ದಾರೆ.

    ಧ್ರುವ ಸರ್ಜಾ ಮಕ್ಕಳ ಜೊತೆಗಿರುವ ಬ್ಲಾಕ್ ಎಂಡ್ ವೈಟ್ ಗ್ರೂಪ್ ಫೋಟೋ ಹಾಕಿ, ಅಲ್ಲಿ ತಮ್ಮ ಮತ್ತು ಪ್ರೇರಣಾ ಮುಖಕ್ಕೆ ಬಣ್ಣಗಳಲ್ಲಿ ಹೈಲೈಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಧ್ರುವ ಸರ್ಜಾ ಗ್ರೂಪ್ ಫೋಟೋ ಅಪ್ಲೋಡ್ ಮಾಡಿ, “ಪ್ರೇರಣಾ ಶಂಕರ್ ಎಂದು ಹೆಸರು ನಮೂದಿಸಿ ನಿಮ್ಮೆಲ್ಲರ ಆಶೀರ್ವಾದವಿರಲಿ ಜೈ ಆಂಜನೇಯ” ಎಂದು ಬರೆದಿದ್ದಾರೆ. ಧ್ರುವ ಪೋಸ್ಟ್ ಮಾಡಿದ ಫೋಟೋ ಮಾರ್ಚ್ 24, 1997ರಲ್ಲಿ ಕ್ಲಿಕ್ಕಿಸಿದ್ದು ಎನ್ನಲಾಗಿದೆ.

    ಮುಂದಿನ ತಿಂಗಳು 9 ರಂದು ಬಾಲ್ಯದ ಗೆಳತಿ ಪ್ರೇರಣಾ ಜೊತೆ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಇದೀಗ ಟ್ಟೀಟ್ ಮಾಡುವ ಮೂಲಕ ತಮ್ಮ ಭಾವೀ ಸಂಗಾತಿಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

    ಧ್ರುವ ಹಾಗೂ ಪ್ರೇರಣಾ ತುಂಬಾ ಸಿಂಪಲ್ ಆಗಿ ಹಿಂದೂ ಸಂಪ್ರದಾಯದಂತೆ ಡಿಸೆಂಬರ್ ಮೊದಲ ವಾರದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ.

    ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಅವರ ನಿಶ್ಚಿತಾರ್ಥದಲ್ಲಿ ಅರುಣ್ ಸಾಗರ್ ಆಂಜನೇಯನ ಮೂರ್ತಿಯ ಸೆಟ್ ಹಾಕಲಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮದ್ವೆ ವಿಚಾರ ಹೇಳ್ತಿದ್ದಂತೆ ನಟ ಧ್ರುವ  ಕಂಗಾಲು..!

    ಮದ್ವೆ ವಿಚಾರ ಹೇಳ್ತಿದ್ದಂತೆ ನಟ ಧ್ರುವ ಕಂಗಾಲು..!

    ಬೆಂಗಳೂರು: ಆ್ಯಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಮದುವೆ ಸುದ್ದಿ ಹರಿದಾಡುತ್ತಿದ್ದಂತೆ ಸರ್ಜಾ ಅಭಿಮಾನಿಗಳು ಸಂತಸ ಪಡುವ ಬದಲು ಹುಡುಗಿಯರು ತಮ್ಮ ನೆಚ್ಚಿನ ನಟನ ಮೇಲೆ ಮುನಿಸಿಕೊಂಡಿದ್ದಾರೆ.

    ಹೌದು. ಇತ್ತೀಚೆಗೆ ಧ್ರುವ ಅವರ ಬರ್ತ್ ಡೇ ಆಚರಣೆ ನಡೆದಿದ್ದು, ಇದೇ ದಿನ ಅವರು ತಾನು ಲವ್ ಮ್ಯಾರೇಜ್ ಆಗುವುದಾಗಿ ತಿಳಿಸಿದ್ದರು. ನಟನ ಹೇಳಿಕೆಯ ಬೆನ್ನಲ್ಲೇ ಮದುವೆಯಾಗುವ ಹುಡುಗಿಯ ಫೋಟೋ ರಿವೀಲ್ ಮಾಡಿದರು. ಫೋಟೋ ರಿವೀಲ್ ಮಾಡಿದ ದಿನದಿಂದ ಕೆಲ ಫ್ಯಾನ್ಸ್ ಗಳು ಕಾಟ ಕೊಡೋಕೆ ಶುರು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಧ್ರುವ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ದಿನದಿಂದ ಧ್ರುವಾಗೆ ಅನಾಮಧೇಯ ಹುಡುಗಿಯರ ಕರೆ ಬರೋಕೆ ಶುರುವಾಗಿದೆಯಂತೆ. ಕೆಲ ಹುಡುಗಿಯರು ಧ್ರುವ ಸ್ನೇಹಿತರಿಗೆ, ಇನ್ನೂ ಕೆಲವರು ಧ್ರುವಾಗೇ ಕರೆ ಮಾಡಿ ಮದುವೆಯಾದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ನಾನೂ ನಿಮ್ಮನ್ನ ತುಂಬಾ ಪ್ರೀತಿಸುತ್ತೇನೆ ನನ್ನೇ ಮದುವೆಯಾಗು ಅಂತ ಹೇಳಿದ್ದಾರೆ. ಇನ್ನೂ ಕೆಲವರು ನೀವು ಮದುವೆಯಾದರೆ ಮನೆ ಮುಂದೆ ಬಂದು ಧರಣಿ ಕೂರುತ್ತೇವೆ ಅಂತ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನಲಾಗಿದೆ.

    14 ವರ್ಷಗಳ ಅದ್ಧೂರಿ ಪ್ರೀತಿಗೆ ಧ್ರುವ ಮದುವೆ ಕೊಂಡಿ ಬೆಸೆಯೋಕೆ ಸಜ್ಜಾಗಿದ್ದಾರೆ. ಬಾಲ್ಯದ ಗೆಳತಿಯನ್ನ ಬಾಳ ಸಂಗಾತಿಯಾಗಿ ಸ್ವೀಕರಿಸಲು ಧ್ರುವಾ ಸಜ್ಜಾಗಿದ್ದು ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಾ ಬಂದಿರುವ ಪ್ರೇರಣಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಧ್ರುವ ಮನಸ್ಸು ಮಾಡಿದ್ದು, ಅತಿ ಶೀಘ್ರದಲ್ಲೇ ಈ ಜೋಡಿಯ ಮದುವೆಯ ದಿನಾಂಕವೂ ನಿಗದಿಯಾಗಲಿದೆ.

    ಸದ್ಯಕ್ಕಂತೂ ಧ್ರುವ ಕೆಲ ಲೇಡಿ ಫ್ಯಾನ್ಸ್ ಗಳ ಕಾಟಕ್ಕೆ ಕಂಗಾಲಾಗಿ ಕುಳಿತಿದ್ದಾರೆ. ಯಾವ ರೀತಿಯಲ್ಲಿ ನೊಂದ ಫ್ಯಾನ್ಸ್ ಗಳಿಗೆ ಸಮಾಧಾನ ಹೇಳುವುದು ಅನ್ನೋದೇ ಧ್ರುವ ಮುಂದಿರುವ ದೊಡ್ಡ ಸವಾಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews