Tag: dhruva sarja

  • ಭಜರಂಗಿ ಸಮ್ಮುಖದಲ್ಲಿ ಧ್ರುವ-ಪ್ರೇರಣಾ ಆರತಕ್ಷತೆ

    ಭಜರಂಗಿ ಸಮ್ಮುಖದಲ್ಲಿ ಧ್ರುವ-ಪ್ರೇರಣಾ ಆರತಕ್ಷತೆ

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಭಜರಂಗಿ ಸಮ್ಮುಖದಲ್ಲಿಯೇ ಆರತಕ್ಷತೆ ನಡೆಯುತ್ತಿದೆ.

    ನಟ ಧ್ರುವ ಸರ್ಜಾ ಹನುಮನ ಭಕ್ತ ಆಗಿರುವದರಿಂದ ವೇದಿಕೆ ಮಧ್ಯಭಾಗದಲ್ಲಿ ವಾಯುಪುತ್ರ ಆಂಜನೇಯ ಮೂರ್ತಿ ಸ್ಥಾಪನೆ ಮಾಡಲಾಗಿದೆ. ವೇದಿಕೆ ಕಾರ್ನೇಷಿಯಾ, ಆರ್ಕೆಡ್, ಬಿಳಿ ಮತ್ತು ಕೆಂಪು ಗುಲಾಬಿಗಳಿಂದ ಅಲಂಕೃತಗೊಳಿಸಲಾಗಿದೆ. ವಧು ಪ್ರೇರಣಾ ಸಬ್ಯಸಾಚಿ ವೆಡ್ಡಿಂಗ್ ಕಲೆಕ್ಷನ್ ಬಾಟಲ್ ಗ್ರೀನ್ ಲೆಹೆಂಗಾದಲ್ಲಿ ಮಿಂಚುತ್ತಿದ್ದಾರೆ. ಇತ್ತ ಧ್ರುವ ಸರ್ಜಾ ಇಟಲಿಯಿಂದ ತರಲಾಗಿರುವ ವೆಸ್ಟ್ ಕೋಟ್ ಮತ್ತು ಬ್ಲೇಸರ್ ಧರಿಸಿದ್ದಾರೆ.

    ಆರತಕ್ಷತೆ ಕಾರ್ಯಕ್ರಮಕ್ಕೆ ಚಂದನವನದ ತಾರೆಯರು ಸೇರಿದಂತೆ ರಾಜಕಾರಣಿಗಳು ಆಗಮಿಸಿ ವಧು-ವರರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸಚಿವ ಆರ್.ಅಶೋಕ್, ನಿರ್ಮಾಪಕ ಕೆ.ಮಂಜು, ಲಹರಿ ಸಂಸ್ಥೆಯ ಲಹರಿ ವೇಲು, ಸಾರಾ ಗೋವಿಂದ್ ಸೇರಿದಂತೆ ಹಲವು ಗಣ್ಯರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

  • ‘ಅದ್ದೂರಿ’ ಹುಡುಗನ ‘ಭರ್ಜರಿ’ ಮದುವೆ

    ‘ಅದ್ದೂರಿ’ ಹುಡುಗನ ‘ಭರ್ಜರಿ’ ಮದುವೆ

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಮದುವೆ ನೆರವೇರಿದ್ದು, ಅದ್ದೂರಿ ಹುಡುಗ ಭರ್ಜರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಬೆಳಗ್ಗೆ 7.15ರಿಂದ 7.45ಕ್ಕೆ ಶುಭ ಮೂಹೂರ್ತದಲ್ಲಿ ಧ್ರುವ ಸರ್ಜಾ ಪ್ರೇರಣಾ ಅವರನ್ನು ವರಿಸಿದ್ದಾರೆ. ವೃಶ್ಚಿಕ ಲಗ್ನದಲ್ಲಿ ನವಜೋಡಿ ಸಪ್ತಪದಿ ತುಳಿದಿದ್ದಾರೆ. ಜೆ.ಪಿ.ನಗರದ ಸಂಸ್ಕೃತ ಬೃಂದಾವನ ಕನ್ವೆನ್ಷನ್ ಹಾಲ್ ನಲ್ಲಿ ವಿವಾಹ ಮಹೋತ್ಸವ ನೇರವೇರಿದ್ದು, ಗೌಡ ಸಂಪ್ರದಾಯದಂತೆ ಧ್ರುವ ಹಾಗೂ ಪ್ರೇರಣಾ ಸಪ್ತಪದಿ ತುಳಿದಿದ್ದಾರೆ.

    ಇಂದು ಸಂಜೆ ಏಳು ಗಂಟೆಗೆ ರಿಸೆಪ್ಶನ್ ಇರಲಿದೆ. ನಾಳೆ ಅಭಿಮಾನಿಗಳಿಗಾಗಿ ಸರ್ಜಾ ಕುಟುಂಬ ವಿಶೇಷ ಔತಣ ಕೂಟ ಏರ್ಪಡಿಸಿದೆ. ಜೊತೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಇರಲಿವೆ.

    ಕಲ್ಯಾಣದ ಖುಷಿಯಲ್ಲಿ ಧ್ರುವ ಸರ್ಜಾ ಕುಟುಂಬ ಮನೆಯ ಮುಂದೆ ಇಡೀ ಬೀದಿಗೆ ಚಪ್ಪರ ಹಾಕಿ, ಬಾಳೆಕಂಬಗಳಿಂದ ‘ಅದ್ಧೂರಿ’ ಅಲಂಕಾರ ಮಾಡಿದ್ದರು. ವರಪೂಜೆ, ಚಪ್ಪರ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ಸರ್ಜಾ ಕುಟುಂಬದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಧ್ರುವ ಸರ್ಜಾ ಮತ್ತು ಪ್ರೇರಣಾ ಮನೆಯಲ್ಲಿ ಶಾಸ್ತ್ರೋಕ್ತವಾದ ನಡೆದ ಕಾರ್ಯಕ್ರಮ ಗುರು-ಹಿರಿಯರ ಸಂಮ್ಮುಖದಲ್ಲಿ ನೆರವೇರಿತ್ತು.

    ಶನಿವಾರ ನಡೆದ ಅರಿಶಿನ ಶಾಸ್ತ್ರದಲ್ಲಿ ಅರ್ಜುನ್ ಸರ್ಜಾ ಫ್ಯಾಮಿಲಿ, ನಟಿ ತಾರಾ ಅನುರಾಧ, ನಿರ್ದೇಶಕ ನಂದಕಿಶೋರ್, ನಿರ್ದೇಶಕ ಎ.ಪಿ ಅರ್ಜುನ್ ಭಾಗಿಯಾಗಿದ್ದರು. ಧ್ರುವ ಸರ್ಜಾಗೆ ಅರಿಶಿನವನ್ನು ಹಚ್ಚಿ ಸಂಭ್ರಮಿಸಿದ್ದರು. ಆ ಬಳಿಕ ಚಪ್ಪರಕ್ಕೆ ಧ್ರುವ ಪೂಜೆ ಸಲ್ಲಿಸಿದ್ದರು. ತಮ್ಮ ಕೈ ಮೇಲೆ ಹಾಕಿಕೊಂಡಿದ್ದ ಆಂಜನೇಯನ ಪ್ರತಿರೂಪವನ್ನು ಅಭಿಮಾನಿಗಳ ಮುಂದೆ ಪ್ರದರ್ಶಿಸಿದ್ದರು.

    ಮೆಹಂದಿ ಶಾಸ್ತ್ರದಲ್ಲಿ ವಧು-ವರದ ಎರಡೂ ಕುಟುಂಬದವರು ಸೇರಿ ಹಾಡಿ ಕುಣಿದು ಸಖತ್ ಎಂಜಾಯ್ ಮಾಡಿದ್ದರು. ನೂರಾರು ಅಭಿಮಾನಿಗಳಿಗೆ ತಾವೇ ಖುದ್ದಾಗಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿರೋದು ವಿಶೇಷವಾಗಿತ್ತು.

  • ಆ್ಯಕ್ಷನ್ ಪ್ರಿನ್ಸ್ ಮದುವೆ – ಇಡೀ ಬೀದಿಗೆ ಚಪ್ಪರ, ಇಂದು ಅರಿಶಿನ ಶಾಸ್ತ್ರ

    ಆ್ಯಕ್ಷನ್ ಪ್ರಿನ್ಸ್ ಮದುವೆ – ಇಡೀ ಬೀದಿಗೆ ಚಪ್ಪರ, ಇಂದು ಅರಿಶಿನ ಶಾಸ್ತ್ರ

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ.

    ಶುಕ್ರವಾರ ಚಪ್ಪರ ಪೂಜೆ ನೆರವೇರಿದ್ದು, ಇಡೀ ಬೀದಿಗೆ ಚಪ್ಪರ ಹಾಕಲಾಗಿದೆ. ಮನೆಯಂಗಳದಲ್ಲಿ ಚಪ್ಪರ ಹಾಗೂ ಬಾಳೆ ಕಂಬ ಮಿನುಗುತ್ತಿದೆ. ಇಂದು ಶಾಸ್ತ್ರೋಕ್ತವಾಗಿ ಅರಿಶಿನ ಶಾಸ್ತ್ರ ನಡೆಯಲಿದೆ. ಧ್ರುವ ಮದುವೆ ಸಂಭ್ರಮದಲ್ಲಿ ನಟಿ ತಾರಾ ಅನುರಾಧಾ ಅವರು ಪಾಲ್ಗೊಂಡಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ಧ್ರುವ ಮನೆಯಲ್ಲಿ ಯಾವುದೇ ಕಾರ್ಯ ಮಾಡಿದರು ಬಹಳ ಶಾಸ್ತ್ರೋಕ್ತವಾಗಿ ಮಾಡುತ್ತಾರೆ. ಈಗಾಗಲೇ ಮಂಟಪ ನೋಡಿರಬಹುದು ಅಡಿಕೆ ಮರ ಹಾಗೂ ತೆಂಗಿನ ಗರಿಯಿಂದ ಮಾಡಿದ್ದಾರೆ. ಧ್ರುವ ನಮ್ಮನೆ ಹುಡುಗ. ಅರಿಶಿನ ಶಾಸ್ತ್ರಕ್ಕೆ ಬರಲೇ ಬೇಕು ಎಂದು ಧ್ರುವ ಹೇಳಿದ್ದನು. ಹಾಗಾಗಿ ನಾನು ಬಂದೆ. ಇಂದು ಮನೆಯಲ್ಲಿ ಅರಿಶಿನ ಶಾಸ್ತ್ರ ನಡೆಯಲಿದೆ. ಬಳಿಕ ಸಂಜೆ ಕಲ್ಯಾಣ ಮಂಟಪದಲ್ಲಿ ಲಗ್ನ ಕಟ್ಟಿಸುವ ಶಾಸ್ತ್ರ ನಡೆಯಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಧ್ರುವಗೆ ಶಾಸ್ತ್ರೋಕ್ತ ಸಂಪ್ರದಾಯ ಎಂದರೆ ಬಹಳ ಇಷ್ಟ. ಅವನ ಆರಾಧ್ಯ ದೈವ ಆಂಜನೇಯ. ಅವನು ತನ್ನ ಕೈಯಲ್ಲೇ ಆಂಜನೇಯ ಬರೆಸಿಕೊಂಡಿದ್ದಾನೆ. ಆಂಜನೇಯನನ್ನು ಪ್ರಾರ್ಥನೆ ಮಾಡಿಕೊಂಡು ಅವನ ಮಾವ ಅರ್ಜುನ್ ಸರ್ಜಾ ಹಾಗೂ ಕುಟುಂಬಸ್ಥರು ಈಗಾಗಲೇ ಮನೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಎಲ್ಲ ಶಾಸ್ತ್ರಗಳನ್ನು ಮುಗಿಸಿಕೊಂಡು ಸಂಜೆ ಕಲ್ಯಾಣ ಮಂಟಪಕ್ಕೆ ಹೋಗುತ್ತಾರೆ. ನಂತರ ಎಲ್ಲ ಶಾಸ್ತ್ರಗಳನ್ನು ಮಾಡುತ್ತಾರೆ. 5 ದಿನದ ಹಿಂದೆನೇ ಎಲ್ಲ ಶಾಸ್ತ್ರ ನಡೆಯುತ್ತಿದೆ. ನಾನು 5 ದಿನ ಇರುವುದು ನನಗೆ ಖುಷಿಯಾಗಿದೆ ಎಂದು ಹೇಳಿದರು.

    ಧ್ರುವ ತಮ್ಮ ಬಹುಕಾಲದ ಗೆಳತಿ ಪ್ರೇರಣ ಶಂಕರ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಭಾನುವಾರ ಬೆಳ್ಳೆಗ್ಗೆ 7.15ರಿಂದ 7.45ಕ್ಕೆ ವಿವಾಹ ಮುಹೂರ್ತ ನಿಗಧಿಯಾಗಿದ್ದು, ಸಂಜೆ 7 ಗಂಟೆ ನಂತ್ರ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.

  • ಧ್ರುವ ಸರ್ಜಾ ಆಹ್ವಾನ ಪತ್ರಿಕೆಯಲ್ಲಿ ಬಾಸ್ ಇದ್ದಾರೆ, ಕೆಳಗಡೆ ಇಡುವಂತಿಲ್ಲ – ಪ್ರಥಮ್

    ಧ್ರುವ ಸರ್ಜಾ ಆಹ್ವಾನ ಪತ್ರಿಕೆಯಲ್ಲಿ ಬಾಸ್ ಇದ್ದಾರೆ, ಕೆಳಗಡೆ ಇಡುವಂತಿಲ್ಲ – ಪ್ರಥಮ್

    ಬೆಂಗಳೂರು: ಧ್ರುವ ಸರ್ಜಾ, ಪ್ರೇರಣ ಅವರ ಮದುವೆಯ ಆಹ್ವಾನ ಪತ್ರಿಕೆ ಪಠ್ಯ ಪುಸ್ತಕದಂತೆ ಇದೆ ಎಂದು ಪ್ರಥಮ್ ಬಣ್ಣಿಸಿದ್ದಾರೆ.

    ನಟ ಧ್ರುವ ಸರ್ಜಾ ಮದುವೆ ಇದೇ ತಿಂಗಳು ನಡೆಯಲಿದೆ. ಹೀಗಾಗಿ ಸದ್ಯಕ್ಕೆ ಕುಟುಂಬದವರು ಮದುವೆ ತಯಾರಿಯಲ್ಲಿ ಬ್ಯುಸಿಯಿದ್ದಾರೆ. ಇನ್ನೂ ಮದುವೆ ಹುಡುಗ ಧ್ರುವ ತಮ್ಮ ಆತ್ಮೀಯರಿಗೆ ಆಮಂತ್ರಣ ಪತ್ರಿಕೆಯನ್ನು ಕೊಡುತ್ತಿದ್ದಾರೆ. ಬುಧವಾರಷ್ಟೇ ಧ್ರುವ ನಟ ಪ್ರಥಮ್ ಮನೆಗೆ ಹೋಗಿ ವಿವಾಹಕ್ಕೆ ಆಹ್ವಾನಿಸಿದ್ದಾರೆ. ಆದರೆ ಪ್ರಥಮ್ ಆಮಂತ್ರಣ ಪತ್ರಿಕೆ ನೋಡಿ ಟೆಕ್ಸ್ಟ್ ಬುಕ್ ರೀತಿ ಇದೆ ಎಂದು ಕಮೆಂಟ್ ಮಾಡಿದ್ದಾರೆ.

    ಪ್ರಥಮ್ ಧ್ರುವ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಧ್ರುವ ಆಮಂತ್ರಣ ಪತ್ರಿಕೆ ಕೊಡುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಗೆ  “ಪ್ರೀತಿಯ ಧೃವ ಸರ್ಜಾರವರು ಇರೋದೇ ಹೀಗೇ. ಆಪ್ತರಿಗೆ ಹೆಗಲು ಕೊಡುತ್ತಾರೆ. ಸ್ನೇಹಿತರು ಅಂತ ಬಂದಾಗ ಇನ್ನು ಒಂದು ಹೆಜ್ಜೆ ಬಗ್ಗಿ ಜೊತೆ ನಿಲ್ಲುತ್ತಾರೆ. ಮದುವೆ ಆಮಂತ್ರಣ ಪತ್ರಿಕೆ ಕೊಡುವುದಕ್ಕೆ ಸಂಜೆ ನನ್ನ ಮನೆಗೆ ಬಂದಿದ್ದರು” ಎಂದು ಬರೆದಿದ್ದಾರೆ.

    ಪ್ರಥಮ್ ಪೋಸ್ಟ್ ಲ್ಲಿ ಏನಿದೆ?
    ಅಯ್ಯೋ ಬಿಡಿ.. ಅವರ ಗಡ್ಡಕ್ಕಿಂತ ದೊಡ್ಡದಾಗಿದೆ ಈಯಪ್ಪ ಮಾಡಿಸಿರುವ ಆನಂತ್ರಣ ಪತ್ರಿಕೆ. ಸೆಕೆಂಡ್ ಪಿಯುಸಿ ಕೆಮಿಸ್ಟ್ರಿ  ಟೆಕ್ಸ್ಟ್ ಬುಕ್‌ಗಿಂತ ದೊಡ್ಡದು. ಎಂಜಿನಿಯರಿಂಗ್ ಟೆಕ್ಸ್ಟ್ ಬುಕ್‌ಗಿಂತ ವಿಶಾಲವಾದದ್ದು, ಇವರ ಆಮಂತ್ರಣ ಅಕ್ಷತೆ, ಅರಿಶಿಣ, ಕುಂಕುಮ, ಬಳೆಗಳು ಇನ್ನು ಏನೇನಿಲ್ಲ ಕೇಳಿ ಅದ್ರಲ್ಲಿ. ಇವರು ಮಾಡಿಸಿರುವ ಆಮಂತ್ರಣ ಪತ್ರಿಕೆ ಮದುವೆ ಆದಮೇಲೂ ಸಹಿತ ನಮ್ಮ ಮನೆ ದೇವರ ಕೋಣೆಯಿಂದ ತೆಗೆಯುವ ಹಾಗಿಲ್ಲ. ನೆಲಕ್ಕಂತೂ ಸೋಗಿಸುವ ಹಾಗೇ ಇಲ್ಲ. ಯಾಕೆಂದರೆ ಮದುವೆ ಪತ್ರಿಕೆ ಸುತ್ತಲು ಇವರ ಬಾಸ್ ಆಂಜನೇಯ ಇದ್ದಾರೆ.

     

    View this post on Instagram

     

    ಪ್ರೀತಿಯ ಧೃವಸರ್ಜಾರವರು ಇರೋದೇ ಹೀಗೇ! ಆಪ್ತರಿಗೆ ಹೆಗಲು ಕೊಡ್ತಾರೆ.ಸ್ನೇಹಿತರು ಅಂತ ಬಂದಾಗ ಇನ್ನು ಒಂದು ಹೆಜ್ಜೆ ಬಗ್ಗಿ ಜೊತೆ ನಿಲ್ತಾರೆ!!!❤ ಸಂಜೆ ನನ್ ಮನೆಗೆ ಬಂದಿದ್ರು…! ಮದುವೆ invitation card ಕೊಡೋಕೆ… ( ಅಯ್ಯೋ ಬಿಡಿ…. ಅವ್ರ ಗಡ್ಡಕ್ಕಿಂತ ದೊಡ್ಡದಾಗಿದೆ ಈಯಪ್ಪ ಮಾಡ್ಸಿರೋ invitation card ????) 2nd PUC chemistry text book ಗಿಂತ ದೊಡ್ಡದು… Engineering Text book ಗಿಂತ ವಿಶಾಲವಾದದ್ದು ಇವ್ರ invitation card… ಅಕ್ಷತೆ, ಅರಿಶಿನ, ಕುಂಕುಮ,ಬಳೆಗಳು …ಇನ್ನು ಏನೇನಿಲ್ಲ ಕೇಳಿ ಅದ್ರಲ್ಲಿ ❤) ಇವ್ರ ಮಾಡ್ಸಿರೋ invitation card ನ ಮದುವೆ ಆದ್ಮೇಲೂ ಸಹಿತ ನಮ್ ಮನೆ ದೇವರ ಕೋಣೆಯಿಂದ ತಗೆಯೋ ಹಾಗಿಲ್ಲ…! ನೆಲಕ್ಕಂತೂ ಸೋಗಿಸುವ ಹಾಗೇ ಇಲ್ಲ….bcoz invitation card fully surrounded by ಇವ್ರ ಬಾಸ್ ಆಂಜನೇಯ! ಖುಷಿ ವಿಷಯ ಏನಂದ್ರೆ ಇವ್ರ ಲಕ್ಕಿ ಕಾರ್ ಲೇ ಬಂದಿದ್ರು…!ತುಂಬಾ ಹೊತ್ತು ಇದ್ರು…! ಈಗ್ಲೇ ಈ ಪುಣ್ಯಾತ್ಮರು ಕೈಗೆ ಸಿಗಲ್ಲ…! ಮದುವೆ ಆದ್ಮೇಲಂತೂ phone ಗೂ ಸಿಗಲ್ಲ…! ಪೊಗರು super hit ಆದ್ಮೇಲಂತೂ ಇಲ್ವೇಇಲ್ಲ…(ನಾವ್ ಬಿಡಬೇಕಲ್ಲಾ ????????) ಆದಷ್ಟು ಬೇಗ ಅಂಜನೇಯ ಸ್ವಾಮಿಗೆ ಇನ್ನೊಬ್ಬ ಭಕ್ತರನ್ನ ಇವ್ರ ಮನೆಯಿಂದನೇ ಕೊಡ್ಲಿ…. I mean junior @dhruva_sarjaa ರವರು ಬರ್ಲಿ… ಅಂತ ಆಶಿಸಿ ಮದುವೆ ಆದ್ಮೇಲೆ ವರ್ಷಕ್ಕೆ ಎರಡು ಸಿನಿಮಾ bro….ಗೊತ್ತಲ್ವಾ ಅಂದ್ರು…! ಅಣ್ಣಾ ಮದುವೆ ಆದ್ಮೇಲೆ ವರ್ಷಕ್ಕೆ ಒಂದು ಮಕ್ಕಳು ಮಿಸ್ ಮಾಡದೇ ಆಗ್ಲಿ…ಅದರ ಬಗ್ಗೆ ಗಮನಿಸಿ ಅಂತ ಹಾರೈಸಿ ಅದ್ಭುತವಾದ ಆಂಜನೇಯನ ಮೂರ್ತಿ ಕೊಟ್ಟು ನಮ್ ಪ್ರೇರಾಣಾ ಅವ್ರಿಗೂ ಒಳ್ಳೇದಾಗ್ಲಿ ಅಂತ ಹಾರೈಸಿ ಒಂದು ಅರ್ಧ ಗಂಟೆ ಗೋಳಿಕೊಂಡು ಆಮೇಲೆ ಹೀರೋ ನ ಕಳಿಸಿಕೊಟ್ಟೆ!!! ಹಾರೈಸೋ ಜವಾಬ್ದಾರಿ ನಿಮ್ಮದು…!

    A post shared by Olle Hudga Pratham (@olle_hudga_prathama) on

    ಖುಷಿ ವಿಷಯ ಏನಂದರೆ ಇವರ ಲಕ್ಕಿ ಕಾರಿನಲ್ಲೇ ಬಂದಿದ್ದರು. ಜೊತೆಗೆ ತುಂಬಾ ಹೊತ್ತು ಇದ್ದರು. ಈಗಲೇ ಈ ಪುಣ್ಯಾತ್ಮರು ಕೈಗೆ ಸಿಗಲ್ಲ. ಮದುವೆ ಆದ್ಮೇಲಂತೂ ಫೋನಿಗೂ ಸಿಗಲ್ಲ. ಪೊಗರು ಸೂಪರ್ ಹಿಟ್ ಆದಮೇಲಂತೂ ಇಲ್ವೇಇಲ್ಲ. ನಾವ್ ಬಿಡಬೇಕಲ್ಲಾ. ಆದಷ್ಟು ಬೇಗ ಅಂಜನೇಯ ಸ್ವಾಮಿಗೆ ಇನ್ನೊಬ್ಬ ಭಕ್ತರನ್ನ ಇವರ ಮನೆಯಿಂದನೇ ಕೊಡಲಿ. ಅಂದರೆ ಜೂನಿಯರ್ ಧ್ರುವ ಸರ್ಜಾ ಬರಲಿ ಅಂತ ಆಶಿಸಿ. ಮದುವೆ ಆದ ಮೇಲೆ ವರ್ಷಕ್ಕೆ ಎರಡು ಸಿನಿಮಾ ಬ್ರೋ ಗೊತ್ತಲ್ವಾ ಅಂದ್ರು. ಅಣ್ಣಾ ಮದುವೆ ಆದ ಮೇಲೆ ವರ್ಷಕ್ಕೆ ಒಂದು ಮಕ್ಕಳು ಮಿಸ್ ಮಾಡದೇ ಆಗಲಿ. ಅದರ ಬಗ್ಗೆ ಗಮನಿಸಿ ಅಂತ ಹಾರೈಸಿ ಅದ್ಭುತವಾದ ಆಂಜನೇಯನ ಮೂರ್ತಿ ಕೊಟ್ಟು ನಮ್ ಪ್ರೇರಾಣಾ ಅವರಿಗೂ ಒಳ್ಳೆದಾಗಲಿ ಅಂತ ಹಾರೈಸಿ. ಒಂದು ಅರ್ಧ ಗಂಟೆ ಗೋಳಿಕೊಂಡು ಆಮೇಲೆ ಹೀರೋನ ಕಳಿಸಿಕೊಟ್ಟೆ. ಹಾರೈಸೋ ಜವಾಬ್ದಾರಿ ನಿಮ್ಮದು ಎಂದು ಬರೆದುಕೊಂಡಿದ್ದಾರೆ.

  • ಆ್ಯಕ್ಷನ್ ಪ್ರಿನ್ಸ್ ಧ್ರುವ ಮದುವೆ ಆಮಂತ್ರಣ ಪತ್ರಿಕೆ ವೈರಲ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಮದುವೆ ಆಮಂತ್ರಣ ಪತ್ರಿಕೆ ವೈರಲ್

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಬಾಲ್ಯದ ಗೆಳತಿ ಜೊತೆ ಇದೇ ತಿಂಗಳು ಹಸೆಮಣೆ ಏರುತ್ತಿದ್ದಾರೆ. ಈಗಾಗಲೇ ಧ್ರುವ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ.

    ಧ್ರುವ ತಮ್ಮ ಬಾಲ್ಯದ ಗೆಳೆತಿ ಪ್ರೇರಣಾ ಜೊತೆಗೆ ಇದೇ ತಿಂಗಳು 24ರಂದು ಸಪ್ತಪದಿ ತುಳಿಯಲಿದ್ದಾರೆ. ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್‌ನಲ್ಲಿ ಸರ್ಜಾ ಕುಟುಂಬದವರು ವಿವಾಹ ಮಹೋತ್ಸವಕ್ಕೆ ಸ್ಥಳವನ್ನು ನಿಗದಿ ಮಾಡಿದ್ದು, ಸಿನಿರಂಗದ ಗಣ್ಯರಿಗೆ ಮತ್ತು ಸಂಬಂಧಿಕರಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚುವುದರಲ್ಲಿ ತೊಡಗಿಕೊಂಡಿದ್ದಾರೆ.

    ‘ಪೋಗರು’ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿರುವ ಧ್ರುವ ಸರ್ಜಾ ಕೂಡ ಮದುವೆಯ ಆಮಂತ್ರಣ ಪತ್ರಿಕೆ ಹಂಚುವುದರಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಧ್ರುವ ಸರ್ಜಾ ಅವರ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಅಕ್ಟೋಬರ್ 10ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬವಿದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದರು. ಈ ವೇಳೆ ಧ್ರುವ ನವೆಂಬರ್ 24 ಹಾಗೂ 25ರಂದು ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಅಧಿಕೃತವಾಗಿ ಅನೌನ್ಸ್ ಮಾಡಿದ್ದರು.

    2018ರ ಡಿಸೆಂಬರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿ ಈ ತಿಂಗಳಿನಲ್ಲಿ ಮದುವೆ ಆಗುತ್ತಿದ್ದಾರೆ. ಧ್ರುವ ಮತ್ತು ಪ್ರೇರಣಾ 14 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿ ಒಪ್ಪಿಗೆ ಪಡೆದುಕೊಂಡು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

  • ಡೈಲಾಗ್ ಟ್ರೋಲ್‌ಗೆ ರಶ್ಮಿಕಾ ಖಡಕ್ ಪ್ರತಿಕ್ರಿಯೆ

    ಡೈಲಾಗ್ ಟ್ರೋಲ್‌ಗೆ ರಶ್ಮಿಕಾ ಖಡಕ್ ಪ್ರತಿಕ್ರಿಯೆ

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿದ ಬಹುನಿರೀಕ್ಷಿತ ‘ಪೊಗರು’ ಚಿತ್ರದ ಡೈಲಾಗ್ ಟ್ರೈಲರ್ ಗುರುವಾರ ಬಿಡುಗಡೆಯಾಗಿದೆ. ಈ ಟ್ರೈಲರ್ ನಲ್ಲಿ ಧ್ರುವ, ನಟಿ ರಶ್ಮಿಕಾ ಮಂದಣ್ಣಗೆ ಹೇಳಿದ ಖಡಕ್ ಡೈಲಾಗ್ ವೈರಲ್ ಆಗಿದೆ. ಈ ಡೈಲಾಗ್ ಮೂಲಕ ಟ್ರೋಲ್ ಮಾಡುತ್ತಿದ್ದವರಿಗೆ ರಶ್ಮಿಕಾ ತಿರುಗೇಟು ನೀಡಿದ್ದಾರೆ.

    ಟ್ರೈಲರ್ ನಲ್ಲಿ ರಶ್ಮಿಕಾ ನಟ ಧ್ರುವನಿಗೆ ಇಂಗ್ಲಿಷ್ ಭಾಷೆಯಲ್ಲಿ ನಿಂದಿಸುತ್ತಾರೆ. ಈ ವೇಳೆ ಧ್ರುವ “ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು” ಎಂದು ಡೈಲಾಗ್ ಹೇಳಿದ್ದಾರೆ. ಈ ಡೈಲಾಗ್ ರಶ್ಮಿಕಾ ಅವರಿಗಾಗಿಯೇ ಬರೆದ ಹಾಗೆ ಇದೆ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

    ಇದರಿಂದ ರೊಚ್ಚಿಗೆದ್ದ ರಶ್ಮಿಕಾ, “ಈ ಡೈಲಾಗ್ ಅನ್ನು ಯಾಕೆ ಇಟ್ಟಿದ್ದೇವೆ ಎಂದು ನಾವು ಈಗ ಚರ್ಚೆ ಮಾಡುತ್ತಿದ್ದೇವೆ. ತುಂಬಾ ಜನರು ರಶ್ಮಿಕಾ ಮಂದಣ್ಣ (ಒಳ್ಳೆಯ ಅಥವಾ ಕೆಟ್ಟದರ) ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ರಶ್ಮಿಕಾ ಗೆದ್ದಳು ಎಂದು ಅರ್ಥ. ನನ್ನ ಬಗ್ಗೆ ಯೋಚಿಸಲು ನಿಮ್ಮ ಸಮಯವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು” ಎಂದು ವ್ಯಕ್ತಿಯೊಬ್ಬನ ಟ್ವೀಟ್‍ಗೆ ರೀ-ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದರು.

    ಪೊಗರು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು, ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ಮಿಸಿದ್ದು, ಬಿ.ಕೆ ಗಂಗಾಧರ್ ನಿರ್ಮಿಸಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

  • ಶಿವಾರ್ಜುನ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ

    ಶಿವಾರ್ಜುನ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ

    ಬೆಂಗಳೂರು: ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿರ್ಮಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ‘ಶಿವಾರ್ಜುನ’ ಚಿತ್ರದ ಫಸ್ಟ್ ಲುಕ್ ಟೀಸರ್ ಧ್ರುವಸರ್ಜಾ ಬಿಡುಗಡೆ ಮಾಡಿದರು.

    ಇತ್ತೀಚೆಗೆ ನಡೆದ ನಾಯಕ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ದಿನ ಈ ಫಸ್ಟ್ ಲುಕ್ ಟೀಸರ್ ಅನಾವರಣಗೊಂಡಿದೆ. ನಟಿ ತಾರಾ ವೇಣು, ಮೇಘನಾ ರಾಜ್, ನಿರ್ಮಾಪಕ ಉದಯ್ ಕೆ ಮೆಹ್ತಾ, ಚಿತ್ರತಂಡ ಹಾಗೂ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಈ ಫಸ್ಟ್ ಲುಕ್ ಟೀಸರ್ ಲೋಕಾರ್ಪಣೆಯಾಗಿದೆ.


    ಶಿವತೇಜಸ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಮಾತಿನ ಜೋಡಣೆ ಮುಕ್ತಾಯವಾಗಿದೆ. ಹೆಚ್.ಸಿ.ವೇಣು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರಾಗ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ವಿನೋದ್, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್ ಹಾಗೂ ಚೇತನ್ ಕುಮಾರ್ (ಬಹದ್ದೂರ್) ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

    ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಅಮೃತ, ಅಕ್ಷತ, ತಾರಾ, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧುಕೋಕಿಲ, ರವಿ ಕಿಶನ್, ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಮುಂತಾದವರಿದ್ದಾರೆ.

  • ಹುಟ್ಟುಹಬ್ಬದಂದೇ ಮದ್ವೆ ದಿನ ಅನೌನ್ಸ್ ಮಾಡಿದ ಧ್ರುವ

    ಹುಟ್ಟುಹಬ್ಬದಂದೇ ಮದ್ವೆ ದಿನ ಅನೌನ್ಸ್ ಮಾಡಿದ ಧ್ರುವ

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಹುಟ್ಟುಹಬ್ಬದ ದಿನವೇ ಮದುವೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

    ಇಂದು ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಧ್ರುವ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಧ್ರುವ ನವೆಂಬರ್ 24 ಹಾಗೂ 25ರಂದು ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ಸರ್ಜಾ ಕುಟುಂಬದಲ್ಲಿ ಮದುವೆ ಸಂಭ್ರಮಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದನ್ನೂ ಓದಿ: 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ್ಯಕ್ಷನ್ ಪ್ರಿನ್ಸ್

    2018ರ ಡಿಸೆಂಬರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿ ನವೆಂಬರ್ ನಲ್ಲಿ ಮದುವೆಯಾಗಲಿದ್ದಾರೆ. ಧ್ರುವ ಮತ್ತು ಪ್ರೇರಣಾ 14 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿ ಒಪ್ಪಿಗೆ ಪಡೆದುಕೊಂಡು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಈಗಾಗಲೇ ಇಬ್ಬರ ಮನೆಯಲ್ಲಿ ಮದುವೆ ತಯಾರಿಗಳು ಜೋರಾಗಿ ಸಾಗುತ್ತಿದ್ದು, ಧ್ರುವ ಸದ್ಯ ಪೊಗರು ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿ, ಬಳಿಕ ಮದುವೆಗಾಗಿ ತಮ್ಮ ಲುಕ್ ಬದಲಾಯಿಸಿಕೊಳ್ಳಲಿದ್ದಾರೆ. ತಮ್ಮ ನೆಚ್ಚಿನ ನಟನ ಮದುವೆ ವಿಷಯ ತಿಳಿದ ಅಭಿಮಾನಿಗಳು ಅವರಿಗೆ ಶುಭಾಷಯ ಕೋರುತ್ತಿದ್ದಾರೆ.

    ಧ್ರುವ ಶನಿವಾರ ತಮ್ಮ ಟ್ವಿಟ್ಟರಿನಲ್ಲಿ, “ಪೊಗರು ಚಿತ್ರದ ಪೋಸ್ಟರ್ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಅಕ್ಟೋಬರ್ 24ರಂದು ಡೈಲಾಗ್ ಟ್ರೈಲರ್ ಬಿಡುಗಡೆಯಾಗಲಿದೆ” ಎಂದು ಬರೆಯಲಾಗಿತ್ತು. ಈ ಫೋಟೋಗೆ ಧ್ರುವ “ಪೊಗರು ನಮ್ಮನ್ನು ಬೆಂಬಲಿಸಿ” ಎಂದು ಬರೆದುಕೊಂಡಿದ್ದರು.

    ಪೊಗರು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು, ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ಮಿಸುತ್ತಿದ್ದು, ಬಿ.ಕೆ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.

  • 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ್ಯಕ್ಷನ್ ಪ್ರಿನ್ಸ್

    31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ್ಯಕ್ಷನ್ ಪ್ರಿನ್ಸ್

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ.

    ಇಂದು ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿಯೇ ಧ್ರುವ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಅಲ್ಲದೆ ಅಭಿಮಾನಿಗಳು ಧ್ರುವ ಸರ್ಜಾ ನೆಚ್ಚಿನ ದೇವರು ಹನುಮಂತನ ಬ್ಯಾಕ್‍ಗ್ರೌಂಡ್‍ನಲ್ಲಿ ಸ್ಟೇಜ್ ನಿರ್ಮಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.

    ನಟ ಚಿರಂಜೀವಿ ಸರ್ಜಾ ಅವರು ತಮ್ಮ ಟ್ವಿಟ್ಟರಿನಲ್ಲಿ ಧ್ರುವ ಸರ್ಜಾ ಅವರ ಜೊತೆಯಿರುವ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. “ಹುಟ್ಟುಹಬ್ಬದ ಶುಭಾಶಯಗಳು ಧ್ರುವ ಸರ್ಜಾ. ದೇವರು ನಿನಗೆ ಆಶೀರ್ವದಿಸಲಿ. ಲವ್ ಯೂ ಮ್ಯಾಗ್ನಾ” ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.

    ಧ್ರುವ ಸರ್ಜಾ ಅವರು ಶನಿವಾರ ತಮ್ಮ ಟ್ವಿಟ್ಟರಿನಲ್ಲಿ, “ಪೊಗರು ಚಿತ್ರದ ಪೋಸ್ಟರ್ ಟ್ವೀಟ್ ಮಾಡಿದ್ದರು. ಅಲ್ಲದೆ ಈ ಫೋಟೋದಲ್ಲಿ ಅಕ್ಟೋಬರ್ 24ರಂದು ಡೈಲಾಗ್ ಟ್ರೈಲರ್ ಬಿಡುಗಡೆಯಾಗಲಿದೆ” ಎಂದು ಬರೆಯಲಾಗಿತ್ತು. ಈ ಫೋಟೋ ಟ್ವೀಟ್ ಮಾಡಿ ಧ್ರುವ “ಪೊಗರು ನಮ್ಮನ್ನು ಬೆಂಬಲಿಸಿ” ಎಂದು ಬರೆದುಕೊಂಡಿದ್ದರು.

    ಪೊಗರು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು, ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ಮಿಸುತ್ತಿದ್ದು, ಬಿ.ಕೆ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.

     

    View this post on Instagram

     

    ????????????ಜೈ ಆಂಜನೆಯ????????????. ????ಜೈ ಶ್ರೀ ರಾಮ್????

    A post shared by dhruva_sarja_fc ???? (@dhruva_sarja___fc) on

  • ನವೆಂಬರ್ ನಲ್ಲಿ ಹಸೆಮಣೆ ಏರಲು ತಯಾರಾದ ಧ್ರುವ ಸರ್ಜಾ

    ನವೆಂಬರ್ ನಲ್ಲಿ ಹಸೆಮಣೆ ಏರಲು ತಯಾರಾದ ಧ್ರುವ ಸರ್ಜಾ

    ಬೆಂಗಳೂರು: 2018ರ ಡಿಸೆಂಬರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್‍ವುಡ್ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಮತ್ತು ಪ್ರೇರಣಾ ಜೋಡಿ ಈ ವರ್ಷ ನವೆಂಬರ್ ನಲ್ಲಿ ಮದುವೆಯಾಗಲು ಸಿದ್ಧವಾಗಿದೆ.

    ಈ ಜೋಡಿ ನವೆಂಬರ್ 23 ಮತ್ತು 24ರಂದು ವಿವಾಹವಾಗುತ್ತಿದ್ದು, ದಿನಾಂಕವನ್ನು ಗುರುಹಿರಿಯರು ನಿಶ್ಚಯಿಸಿದ್ದಾರೆ. ಧ್ರುವ ಮತ್ತು ಪ್ರೇರಣಾ 14 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿ ಒಪ್ಪಿಗೆ ಪಡೆದುಕೊಂಡು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಈಗಾಗಲೇ ಇಬ್ಬರ ಮನೆಯಲ್ಲಿ ಮದುವೆ ತಯಾರಿಗಳು ಜೋರಾಗಿ ಸಾಗುತ್ತಿದ್ದು, ಧ್ರುವ ಸದ್ಯ ಪೊಗರು ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿ, ಬಳಿಕ ಮದುವೆಗಾಗಿ ತಮ್ಮ ಲುಕ್ ಬದಲಾಯಿಸಿಕೊಳ್ಳಲಿದ್ದಾರೆ. ಈ ಮೂಲಕ ಧ್ರುವ ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಕ್ಕಿದೆ.

    ಪೊಗರು ರೊಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು, ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ಮಿಸುತ್ತಿದ್ದು, ಬಿ.ಕೆ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.