Tag: dhruva sarja

  • ಚಿರು ಹುಟ್ಟುಹಬ್ಬದ ದಿನವೇ ಜೂ.ಚಿರು ಜನನದ ಸುಳಿವು ನೀಡಿದ ಧ್ರುವ- ಸ್ಪೆಷಲ್ ವಿಡಿಯೋ

    ಚಿರು ಹುಟ್ಟುಹಬ್ಬದ ದಿನವೇ ಜೂ.ಚಿರು ಜನನದ ಸುಳಿವು ನೀಡಿದ ಧ್ರುವ- ಸ್ಪೆಷಲ್ ವಿಡಿಯೋ

    – ಕುಟುಂಬದ ವಿಶೇಷ ವಿಡಿಯೋ ಮಾಡಿದ ಸರ್ಜಾ ಕುಟುಂಬ

    ಬೆಂಗಳೂರು: ನಟ ದಿವಂಗತ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಸರ್ಜಾ ತುಂಬು ಗರ್ಭಿಣಿ ಎಂಬುದು ತಿಳಿದಿರುವ ವಿಚಾರ, ಇನ್ನೇನು ಕೆಲವೇ ದಿನಗಳಲ್ಲಿ ಜೂನಿಯರ್ ಚಿರುಗೆ ಜನ್ಮವನ್ನು ಸಹ ನೀಡಲಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಮತ್ತೊಂದು ಸರ್ಪ್ರೈಸ್ ಸಿಕ್ಕಿದ್ದು, ಚಿರು ಹುಟ್ಟಿದ ದಿನವೇ ಜೂನಿಯರ್ ಚಿರುವಿನ ಆಗಮನವಾಗಲಿದೆ ಎಂಬ ಕುರಿತು ಸುಳಿವು ಸಿಕ್ಕಿದೆ.

    ನಟ ಧ್ರುವ ಸರ್ಜಾ ವಿಡಿಯೋ ಮೂಲಕ ಈ ಬಗ್ಗೆ ಸುಳಿವು ನೀಡಿದ್ದು, ಜೂನಿಯರ್ ಚಿರು ಆಗಮನದ ಕುರಿತು ತಿಳಿಸಿದ್ದು, ಸ್ವಾಗತಕ್ಕಾಗಿ ವಿಡಿಯೋವನ್ನು ಸಹ ಮಾಡಿದ್ದಾರೆ. ಇದರಲ್ಲಿ ಸರ್ಜಾ ಕುಟುಂಬದ ವಿವಿಧ ಹಿರಿಯರು ಹಾಗೂ ಗಣ್ಯರನ್ನು ಸಹ ತೋರಿಸಲಾಗಿದ್ದು, ಹ್ಯಾಪಿ ವೆಲ್ ಕಮ್ ಚಿರು ಎಂದು ಅರ್ಜುನ್ ಸರ್ಜಾ ಹೇಳುತ್ತಿರುವುದನ್ನು ಗಮನಿಸಬಹುದಾಗಿದೆ. ಮಾತ್ರವಲ್ಲ ಮೇಘನಾರಾಜ್ ಸೀಮಂತ ಕಾರ್ಯದ ಕೆಲ ಚಿತ್ರಣವನ್ನು ಸಹ ನೀಡಲಾಗಿದೆ. ಧ್ರುವ ಜನ್ಮದಿಂದ ಮಾಡಿರುವ ವೀಡಿಯೋವನ್ನು ಹಂಚಿಕೊಂಡಿರುವ ಕುರಿತು ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಚಿರು ಮತ್ತೆ ಉದಯಿಸ್ತಿದ್ದಾರೆ – ಅಭಿಮಾನಿಗಳಿಗೆ ಮೇಘನಾರಿಂದ ಗುಡ್‍ನ್ಯೂಸ್

    ಅಕ್ಟೋಬರ್ 17 ರಂದು ಚಿರು ಹುಟ್ಟುಬ್ಬದ ದಿನವಾಗಿದ್ದು, ಹೀಗಾಗಿ ನಾಳೆಯೇ ಮೆಘನಾ ಜೂನಿಯರ್ ಚಿರುಗೆ ಜನ್ಮ ನೀಡಲಿದ್ದಾರಾ ಎಂಬ ಪ್ರಶ್ನೆ ಧ್ರುವ ಹಂಚಿಕೊಂಡ ವಿಡಿಯೋ ಬಳಿಕ ಮೂಡಿದೆ. ವಿಡಿಯೋ ಪೋಸ್ಟ್ ಮಾಡಿ ಸಾಲುಗಳನ್ನು ಬರೆದಿರುವ ಧ್ರುವ, ಹ್ಯಾಪಿ ಬರ್ತ್ ಡೇ ಚಿರು ಎಂದು ಹಾರ್ಟ್ ಸಿಂಬಲ್ ಹಾಕಿದ್ದಾರೆ. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್ ನ್ನು ಸರ್ಜಾ ಕುಟುಂಬದ ಬಹುತೇಕರಿಗೆ ಟ್ಯಾಗ್ ಮಾಡಲಾಗಿದ್ದು, ಕೊನೆಗೆ ಜೈ ಹನುಮಾನ್ ಎಂದಿದ್ದಾರೆ. ಇದನ್ನೂ ಓದಿ: ಕಷ್ಟದಲ್ಲಿ ನನ್ನ ಜೊತೆ ನಿಂತಂತೆ ನಾನು ಎಂದಿಗೂ ನಿನ್ನ ಪಕ್ಕದಲ್ಲೇ ನಿಲ್ಲುವೆ – ಮೇಘನಾ

    ಇತ್ತೀಚೆಗೆ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಸರ್ಜಾ ವಿಶೇಷವಾಗಿ ಶುಭ ಕೋರಿದ್ದರು. ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದರು. ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದ ಮೇಘನಾ, `ನನ್ನ ಕಷ್ಟದ ಸಮಯದಲ್ಲಿ ನೀನು ಹೇಗೆ ನನ್ನ ಜೊತೆಯಲ್ಲಿ ಗಟ್ಟಿಯಾಗಿ ನಿಂತಿದ್ದೆ. ಹಾಗೆಯೇ ನಾನು ಕೂಡ ಶಾಶ್ವತವಾಗಿ ನಿನ್ನ ಪಕ್ಕ ನಿಲ್ಲುತ್ತೇನೆ. ಪ್ರಾಮಿಸ್ ಬರ್ತ್ ಡೇ ಬಾಯ್. ಸದಾ ನೀನು ಖುಷಿಯಾಗಿರು ಎಂದು ಆಶೀಸುತ್ತೇನೆ. ನಮ್ಮ ಚಿರು ನಕ್ಕಂತೆ ನೀನು ನಗುತ್ತಿರು. ಹ್ಯಾಪಿಯೆಸ್ಟ್ ಬರ್ತ್ ಡೇ ಬಿಲ್ ಎಂದು ಬರೆದುಕೊಂಡಿದ್ದರು.

    ಅಕ್ಟೋಬರ್ 4ರಂದು ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು.

  • ಕಷ್ಟದಲ್ಲಿ ನನ್ನ ಜೊತೆ ನಿಂತಂತೆ ನಾನು ಎಂದಿಗೂ ನಿನ್ನ ಪಕ್ಕದಲ್ಲೇ ನಿಲ್ಲುವೆ – ಮೇಘನಾ

    ಕಷ್ಟದಲ್ಲಿ ನನ್ನ ಜೊತೆ ನಿಂತಂತೆ ನಾನು ಎಂದಿಗೂ ನಿನ್ನ ಪಕ್ಕದಲ್ಲೇ ನಿಲ್ಲುವೆ – ಮೇಘನಾ

    – ನಮ್ಮ ಚಿರು ನಕ್ಕಂತೆ ನುಗುತ್ತಿರು ಬಿಲ್

    ಬೆಂಗಳೂರು: ಕಷ್ಟದಲ್ಲಿ ನೀನು ನನ್ನ ಜೊತೆ ನಿಂತಂತೆ ನಾನು ಎಂದಿಗೂ ನಿನ್ನ ಜೊತೆಯಲ್ಲೇ ನಿಲ್ಲುವೆ ಎಂದು ಹೇಳುವ ಮೂಲಕ ನಟಿ ಮೇಘನಾ ರಾಜ್ ಅವರು ಮೈದುನ ಧ್ರುವ ಸರ್ಜಾ ಅವರಿಗೆ ಹುಟ್ಟುಹಬ್ಬದ ವಿಶ್ ತಿಳಿಸಿದ್ದಾರೆ.

    ಇಂದು ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ಇಂದು ಧ್ರುವ ಅಣ್ಣ ಇಲ್ಲದ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಧ್ರುವ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಅತ್ತಿಗೆ ಮೇಘನಾ ಅವರು, ನಿನ್ನ ಅಣ್ಣ ಚಿರುವಿನ ಹಾಗೇ ಸದಾ ನಗುತ್ತಿರು ಎಂದು ಆಶೀರ್ವಾದ ಮಾಡಿದ್ದಾರೆ.

    https://www.instagram.com/p/CGAJEahHR59/?igshid=5m0foogura94

    ಧ್ರುವ ಹುಟ್ಟುಹಬ್ಬದ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿರುವ ಮೇಘನಾ, ನನ್ನ ಕಷ್ಟದ ಸಮಯದಲ್ಲಿ ನೀನು ಹೇಗೆ ನನ್ನ ಜೊತೆಯಲ್ಲಿ ಗಟ್ಟಿಯಾಗಿ ನಿಂತಿದ್ದೆ ಹಾಗೆಯೇ ನಾನು ಕೂಡ ಶಾಶ್ವತವಾಗಿ ನಿನ್ನ ಪಕ್ಕ ನಿಲ್ಲುತ್ತೇನೆ. ಪ್ರಾಮಿಸ್ ಬರ್ತ್‍ಡೇ ಬಾಯ್. ಸದಾ ನೀನು ಖುಷಿಯಾಗಿರು ಎಂದು ಆಶೀಸುತ್ತೇನೆ. ನಮ್ಮ ಚಿರು ನಕ್ಕಂತೆ ನೀನು ನಗುತ್ತಿರು. ಹ್ಯಾಪಿಸ್ಟ್ ಬರ್ತ್‍ಡೇ ಬಿಲ್ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಕೇವಲ ಮೂರು ಸಿನಿಮಾ ಮಾಡಿ ಚಂದನವನದಲ್ಲಿ ಬಿಗ್ ಸ್ಟಾರ್ ಆಗಿ ಬೆಳೆದು ನಿಂತ ಧ್ರುವ, ಅಣ್ಣನನ್ನು ಕಳೆದುಕೊಂಡು ದುಃಖದಲ್ಲಿ ಇದ್ದಾರೆ. ಈ ಕಾರಣದಿಂದಲೇ ಈ ವರ್ಷ ಧ್ರುವ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿಲ್ಲ. ಜೊತೆಗೆ ಕೊರೊನಾ ಕೂಡ ರಾಜ್ಯದಲ್ಲಿ ಅಬ್ಬರಿಸುತ್ತಿದೆ. ಈ ಕಾಣದಿಂದ ಹೆಚ್ಚು ಜನ ಸೇರುವುದು ಬೇಡ ಎಂಬ ನಿಟ್ಟಿನಲ್ಲಿ ಧ್ರುವ ಸರ್ಜಾ ಅವರು ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಇದನ್ನು ಓದಿ: ಮೇಘನಾ ಕೈ ಹಿಡಿದು ಹೆಜ್ಜೆ ಹಾಕಿದ ಚಿರು – ಕಲಾವಿದನ ಕಲೆಗೆ ನೆಟ್ಟಿಗರು ಫಿದಾ

    ಈಗಾಗಲೇ ಧ್ರುವ ಅವರ ಬಹು ನೀರಿಕ್ಷಿತ ಚಿತ್ರ ಪೊಗರು ಬಿಡುಗಡೆಗೆ ತಯಾರಿಯಾಗುತ್ತಿದೆ. ಚಿತ್ರದ ಬಹುತೇಕ ಸಿನಿಮಾದ ಶೂಟಿಂಗ್ ಮುಗಿದ್ದಿದ್ದು, ಕೊರೊನಾ ಕಾರಣದಿಂದ ನಿಂತಿದ್ದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಈ ನಡುವೆ ಧ್ರುವ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಚಿತ್ರ ಘೋಷಣೆಯಾಗಿದ್ದು, 2012ರಲ್ಲಿ ಅದ್ಧೂರಿ ಎಂಬ ಸೂಪರ್ ಹಿಟ್ ಲವ್ ಸಿನಿಮಾ ನೀಡಿದ್ದ ಧ್ರುವ ಹಾಗೂ ಎಪಿ ಅರ್ಜುನ್ ಜೋಡಿ ಮತ್ತೆ ಒಂದಾಗಿದೆ.

    ಭಾನುವಾರವಷ್ಟೇ ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು.

  • ಅತ್ತಿಗೆಯ ಸೀಮಂತದ ಬೆನ್ನಲ್ಲೇ ಅಭಿಮಾನಿಗಳಲ್ಲಿ ಧ್ರುವ ಮನವಿ

    ಅತ್ತಿಗೆಯ ಸೀಮಂತದ ಬೆನ್ನಲ್ಲೇ ಅಭಿಮಾನಿಗಳಲ್ಲಿ ಧ್ರುವ ಮನವಿ

    ಬೆಂಗಳೂರು: ಕೊರೊನಾ ಕಾರಣದಿಂದ ಸ್ಯಾಂಡಲ್‍ವುಡ್‍ನ ಅನೇಕರು ತಮ್ಮ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಇದೀಗ ನಟ ಧ್ರುವ ಸರ್ಜಾ ಅಹ ತಮ್ಮ ಹುಟ್ಟುಹಬ್ಬದ ಆಚರಣೆ ಬೇಡ ಎಂದಿದ್ದಾರೆ. ಇದನ್ನೂ ಓದಿ: ಚಿರು ಫೋಟೋ ಇಟ್ಟು ಮೇಘನಾಗೆ ಸೀಮಂತ ಶಾಸ್ತ್ರ

    ಅಕ್ಟೋಬರ್ 6 ರಂದು ಅಂದರೆ ನಾಳೆ ಧ್ರುವ ಸರ್ಜಾರ ಹುಟ್ಟುಹಬ್ಬ ಇದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಇಂದು ರಾತ್ರಿಯೇ ಮನೆಯ ಬಳಿ ಶುಭಾಶಯ ಕೋರಲು ಬರುತ್ತಾರೆ ಎಂದು ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನವೇ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ ಸರ್ಜಾ, “ಅಭಿಮಾನಿಗಳೇ ನಮ್ಮ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನ ವರ್ಣನಾತೀತ. ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ, ಎಲ್ಲೂ ಸಂಭ್ರಮವಿಲ್ಲ. ಆದರೆ ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈ ಆಂಜನೇಯ” ಎಂದು ಬರೆದುಕೊಂಡಿದ್ದಾರೆ.

    ಪ್ರತಿವರ್ಷ ಅಭಿಮಾನಿಗಳು ದೊಡ್ಡ ದೊಡ್ಡ ಕಟೌಟ್ ಮಾಡಿಸಿಕೊಂಡು ಅವರ ಮನೆಯ ಬಳಿ ಜಮಾಯಿಸುತ್ತಿದ್ದರು. ಅಲ್ಲದೇ ಕೇಕ್ ಕಟ್ ಮಾಡಿಸಿ, ಹೂವಿನ ಮಾಲೆ ಹಾಕಿ ಸಂಭ್ರಮಿಸುತ್ತಿದ್ದರು. ಧ್ರುವ ಸರ್ಜಾ ಕೂಡ ಅಭಿಮಾನಿಗಳ ಜೊತೆ ಬರ್ತ್ ಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಅಭಿಮಾನಿಗಳನ್ನು ಮನೆಯ ಬಳಿ ಬರಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

    ಭಾನುವಾರವಷ್ಟೇ ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು.

  • 1.5 ಕೋಟಿಯ ದುಬಾರಿ ಸೆಟ್‍ನಲ್ಲಿ ‘ಪೊಗರು’ ಟೈಟಲ್ ಸಾಂಗ್‍ನ ಶೂಟಿಂಗ್

    1.5 ಕೋಟಿಯ ದುಬಾರಿ ಸೆಟ್‍ನಲ್ಲಿ ‘ಪೊಗರು’ ಟೈಟಲ್ ಸಾಂಗ್‍ನ ಶೂಟಿಂಗ್

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಕ್‍ಡೌನ್ ಅವಧಿಯನ್ನು ಮುಗಿಸಿ ಮತ್ತೆ ಚಿತ್ರೀಕಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಸದ್ಯಕ್ಕೆ ಧ್ರುವ ಬಹು ನಿರೀಕ್ಷೆಯ ‘ಪೊಗರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಈಗ ಮತ್ತೊಂದು ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

    ಚಿತ್ರತಂಡ ‘ಪೊಗರು’ ಸಿನಿಮಾದ ಟೈಟಲ್ ಸಾಂಗ್ ಸೆರೆಹಿಡಿಯುತ್ತಿದೆ. ಈ ಹಾಡನ್ನು ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಲಾಗುತ್ತಿದೆ. ಅಲ್ಲದೇ ‘ಪೊಗರು’ ಚಿತ್ರದ ಟೈಟಲ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 1.50 ಕೋಟಿಯ ಸೆಟ್ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದೆ. ಒಟ್ಟು ಆರು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ.

    ದುಬಾರಿಯ ಸೆಟ್‍ನಲ್ಲಿ ಧ್ರುವ ಹಲವಾರು ನೃತ್ಯಗಾರ ಜೊತೆ ಡ್ಯಾನ್ಸ್ ಮಾಡಲಿದ್ದಾರೆ. ‘ಪೊಗರು ಅಣ್ಣನಿಗೆ ಪೊಗರು’ ಎನ್ನುವ ಸಾಲುಗಳಿಂದ ಈ ಹಾಡು ಪ್ರಾರಂಭವಾಗುತ್ತದೆ. ಈಗಾಗಲೇ ಸಿನಿಮಾದ ಶೀರ್ಷಿಕೆ ಗೀತೆಯನ್ನು ಸೆರೆಹಿಡಿಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಒಂದು ಅದ್ಧೂರಿ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಈ ಹಾಡಿನ ಚಿತ್ರೀಕರಣ ಸೆಪ್ಟಂಬರ್ 24ರಿಂದ ಅಂದರೆ ನಾಳೆಯಿಂದ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

    ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಪೊಗರು’ ಕೂಡ ಮೊದಲ ಸಾಲಿನಲ್ಲಿದೆ. ಈಗಾಗಲೇ ಚಿತ್ರದಿಂದ ‘ಖರಾಬು’ ಹಾಡು ರಿಲೀಸ್ ಆಗಿದ್ದು, ದಾಖಲೆ ನಿರ್ಮಿಸಿದೆ. ಲಾಕ್‍ಡೌನ್ ಸಮಯದಲ್ಲಿ ಅಂದರೆ ಏಪ್ರಿಲ್‍ನಲ್ಲಿ ರಿಲೀಸ್ ಆದ ಈ ಹಾಡು ವೀಕ್ಷಣೆಯಲ್ಲಿ ಮತ್ತು ಟ್ರೆಂಡಿಂಗ್‍ನಲ್ಲಿ ಮೊದಲ ಸ್ಥಾನದಲ್ಲಿದೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರುತ್ತಿದೆ.

  • ನಮಗೆ ತುಂಬಾನೇ ನೋವಾಗಿದೆ: ಇಂದ್ರಜಿತ್ ವಿರುದ್ಧ ಧ್ರುವ ಬೇಸರ

    ನಮಗೆ ತುಂಬಾನೇ ನೋವಾಗಿದೆ: ಇಂದ್ರಜಿತ್ ವಿರುದ್ಧ ಧ್ರುವ ಬೇಸರ

    ಬೆಂಗಳೂರು: ಚಿರಂಜೀವಿ ಸರ್ಜಾ ಅವರ ಸಾವಿನ ಕುರಿತು ಪ್ರಶ್ನೆ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಧ್ರುವ ಸರ್ಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪ್ರಶಾಂತ್ ಸಂಬರಗಿ ಜೊತೆ ಧ್ರುವ ಸರ್ಜಾ ಅವರು ವಾಟ್ಸಪ್ ಮೂಲಕ ಮಾತನಾಡಿದ್ದು, ಅಣ್ಣ ಚಿರು ಸರ್ಜಾ ಸಾವಿನ ಬಗ್ಗೆ ಮಾತಾಡಿದ್ದ ಇಂದ್ರಜಿತ್ ವಿರುದ್ಧ ಬೇಸರ ಮಾಡಿಕೊಂಡಿದ್ದಾರೆ. ನೀವು ಚಿರು ಪರ ರಕ್ಷಣೆಗೆ ನಿಂತಿದ್ದು ನೋಡಿದೆ. ನಿಮಗೆ ನಮ್ಮ ಕುಟುಂಬದ ವತಿಯಿಂದ ಧನ್ಯವಾದಗಳು. ಆದರೆ ನಮಗೆ ಈ ವಿಚಾರದಿಂದ ಬಹಳ ನೋವಾಗಿದೆ ಎಂದು ಧ್ರುವ ಬೇಸರದಿಂದ ಮೆಸೇಜ್ ಮಾಡಿದ್ದಾರೆ. ಇದನ್ನೂ ಓದಿ: ಟಿವಿಯಲ್ಲಿ ಚಿರು ಫೋಟೋ ನೋಡಿದ್ರೆ ಕಣ್ಣೀರು ಬರುತ್ತೆ – ಇಂದ್ರಜಿತ್ ಆರೋಪಕ್ಕೆ ಮೇಘನಾ ಮಾತು

    ಇಂದ್ರಜಿತ್ ಅವರು ಇತ್ತೀಚಿಗೆ ಮೃತಪಟ್ಟ ನಟನ ಮರಣೋತ್ತರ ಪರೀಕ್ಷೆ ಬಗ್ಗೆ ಮಾತನಾಡಿದ್ದರು. ಅಲ್ಲದೇ ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ ಎಂದು ಇಂದ್ರಜಿತ್ ಪ್ರಶ್ನಿಸಿದ್ದರು. ಇದರಿಂದ ಧ್ರುವ ಸರ್ಜಾ ಇಂದ್ರಜಿತ್ ಲಂಕೇಶ್ ವಿರುದ್ಧ ಸಿಟ್ಟಾಗಿದ್ದಾರೆ.

    ಚಿರು ಸಾವಿನ ಬಗ್ಗೆ ಇಂದ್ರಜಿತ್ ಲಂಕೇಶ್ ಮಾತಿಗೆ ಪ್ರಶಾಂತ್ ಸಂಬರಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾವಿನ ನೋವಿನಲ್ಲಿರುವ ಸರ್ಜಾ ಫ್ಯಾಮಿಲಿಗೆ ಇಂದ್ರಜಿತ್ ಮತ್ತಷ್ಟು ನೋವು ಕೊಡುವ ಕೆಲಸ ಮಾಡಿದ್ದಾರೆ. ತುಂಬು ಗರ್ಭಿಣಿ ಮೇಘನಾಗೆ ಈ ವಿಚಾರ ಆಘಾತ ಉಂಟು ಮಾಡಿದೆ. ಈ ವಿಚಾರ ತಿಳಿದು ಮೇಘನಾ ಕಣ್ಣೀರು ಹಾಕಿದ್ದಾರೆ. ಡ್ರಗ್ ಮಾಫಿಯಾದಲ್ಲಿ ಅಣ್ಣನ ಹೆಸರು ಬಂದಿರುವುಕ್ಕೆ ಧ್ರುವ ಸರ್ಜಾ ಅವರಿಗೆ ಬೇಸರ ತಂದಿದೆ ಎಂದಿದ್ದಾರೆ.

  • ನನ್ನ ಅಣ್ಣನ ಆಶೀರ್ವಾದದಿಂದ ನನಗೂ, ನನ್ನ ಪತ್ನಿಗೂ ಕೊರೊನಾ ನೆಗೆಟಿವ್ ಬಂದಿದೆ: ಧ್ರುವ

    ನನ್ನ ಅಣ್ಣನ ಆಶೀರ್ವಾದದಿಂದ ನನಗೂ, ನನ್ನ ಪತ್ನಿಗೂ ಕೊರೊನಾ ನೆಗೆಟಿವ್ ಬಂದಿದೆ: ಧ್ರುವ

    ಬೆಂಗಳೂರು: ನನ್ನ ಅಣ್ಣನ ಆಶೀರ್ವಾದಿಂದ ನನಗೂ, ನನ್ನ ಪತ್ನಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ನಟ ಧ್ರುವ ಸರ್ಜಾ ಅವರು ಟ್ವೀಟ್ ಮಾಡಿದ್ದಾರೆ.

    ಜುಲೈ 15ರಂದು ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕೊರೊನಾಗೆ ದೃಢವಾಗಿತ್ತು. ತಕ್ಷಣ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ತಮ್ಮ ಜೊತೆ ಸಂಪರ್ಕ ಹೊಂದಿದ್ದವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಇಬ್ಬರಿಗೂ ಕೊರೊನಾ ಗುಣಲಕ್ಷಣ ಕಡಿಮೆ ಇದ್ದುದ್ದರಿಂದ ವೈದ್ಯರು ಮನೆಯಲ್ಲಿಯೇ ಕ್ವಾರಂಟೈನ್ ಆಗುವಂತೆ ಸೂಚಿಸಿದ್ದರು. ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಇಬ್ಬರು ಮನೆಯಲ್ಲಿದ್ದರು.

    ಇಂದು ಈ ವಿಚಾರವಾಗಿ ಟ್ವೀಟ್ ಮಾಡಿರುವ ಧ್ರುವ ಸರ್ಜಾ ಅವರು, ಇಂದು ಮಾಡಿದ ಕೊರೊನಾ ಪರೀಕ್ಷೆಯಲ್ಲಿ ನನಗೂ ಮತ್ತು ನನ್ನ ಪತ್ನಿ ನೆಗೆಟಿವ್ ಫಲಿತಾಂಶ ಬಂದಿದೆ. ನನ್ನ ಅಣ್ಣ ಚಿರಂಜೀವಿ ಸರ್ಜಾ ಅವರ ಆಶೀರ್ವಾದಿಂದ ನಮಗೆ ನೆಗೆಟಿವ್ ಬಂದಿದೆ. ನಮ್ಮ ಆರೋಗ್ಯದ ವಿಚಾರವಾಗಿ ದೇವರ ಬಳಿ ಬೇಡಿಕೊಂಡ ಎಲ್ಲರಿಗೂ ಧನ್ಯವಾದ. ಜೊತೆಗೆ ನನ್ನ ಎಲ್ಲ ಕಷ್ಟದ ಸಮಯದಲ್ಲೂ ನನ್ನ ಪರವಾಗಿ ನಿಲ್ಲುವ ಅರ್ಜುನ್ ಸರ್ಜಾ ಅಂಕಲ್‍ಗೆ ಧನ್ಯವಾದಗಳು. ವಿಶೇಷವಾಗಿ ಡಾ. ಸುರ್ಜಿತ್ ಪಾಲ್ ಸಿಂಗ್ ಮತ್ತು ಮೆಡಿಕಲ್ ಸಹಾಯ ಮಾಡಿದ ರಾಜ್‍ಕುಮಾರ್ ಅವರಿಗೆ ಥಾಂಕ್ಯೂ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅರ್ಜುನ್ ಸರ್ಜಾ ಮಗಳು ಐಶ್ವರ್ಯಾಗೆ ಕೊರೊನಾ ಪಾಸಿಟಿವ್

    ಇತ್ತೀಚೆಗೆ ಕೊರೊನಾ ವಿಚಾರವಾಗಿಯೇ ಲೈವ್ ಬಂದು ಮಾತನಾಡಿದ್ದ ಧ್ರುವ, ನಾನು ಮತ್ತು ಪ್ರೇರಣಾ ಆರೋಗ್ಯವಾಗಿದ್ದೇವೆ. ಕ್ಯಾಲರಿ ಕರಗಿಸಬೇಕಾಗಿದೆ ಮನೆಯಲ್ಲಿಯೇ ಟ್ರೆಡ್‍ಮಿಲ್ ಇತ್ತು ಹಾಗಾಗಿ ವರ್ಕೌಟ್ ಮಾಡುತ್ತಿದ್ದೇನೆ. ಆರಂಭದಲ್ಲಿ ಸ್ವಲ್ಪ ಸುಸ್ತಾಗುತ್ತೆ ಅಷ್ಟೆ. ಪ್ರೇರಣಾ ಅವರಿಗೂ ವರ್ಕೌಟ್ ಮಾಡಿಸಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಅತ್ತಿಗೆ ಮೇಘನಾ ಬಗ್ಗೆಯೂ ಮಾತನಾಡಿ, ಮೇಘನಾ ಕೂಡ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಡಿ. ನಾವು ಬೇಗ ಗುಣಮುಖರಾಗಿ ಮನೆಯಿಂದ ಹೊರಗೆ ಬರುತ್ತೇವೆ ಎಂದು ತಿಳಿಸಿದ್ದಾರೆ.

    ಈ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಾಗೃತರಾಗಿರಿ ಎಂದು ಅಭಿಮಾನಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದರು. “ತಪ್ಪದೆ ಪ್ರತಿದಿನ ಬಿಸಿ ನೀರು ಕುಡಿಯಿರಿ. ಸಾಧ್ಯವಾದಷ್ಟು ವರ್ಕೌಟ್ ಮಾಡಿ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಎಲ್ಲರೂ ಖುಷಿಯಾಗಿ ಇರಬೇಕು ಅಷ್ಟೇ. ಈ ಕೊರೊನಾವನ್ನು ಒಟ್ಟಾಗಿ ಸೇರಿ ಓಡಿಸೋಣ” ಎಂದು ಧ್ರುವ ಸರ್ಜಾ ಹೇಳಿದ್ದಾರೆ.

  • ‘ತಪ್ಪದೆ ಬಿಸಿ ನೀರು ಕುಡಿಯಿರಿ’ – ಆಸ್ಪತ್ರೆಯಿಂದ ಬಂದು ಅಭಿಮಾನಿಗಳಿಗೆ ಧ್ರುವ ಕಿವಿಮಾತು

    ‘ತಪ್ಪದೆ ಬಿಸಿ ನೀರು ಕುಡಿಯಿರಿ’ – ಆಸ್ಪತ್ರೆಯಿಂದ ಬಂದು ಅಭಿಮಾನಿಗಳಿಗೆ ಧ್ರುವ ಕಿವಿಮಾತು

    ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಇದೀಗ ಆಸ್ಪತ್ರೆಯಿಂದ ಮನೆಗೆ ಬಂದ ಧ್ರುವ ಸರ್ಜಾ ಲೈವ್‍ಗೆ ಬಂದು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

    ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಜುಲೈ 15 ರಂದು ಗೊತ್ತಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದ ಅವರು ಎರಡು ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರಿಗೂ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಇದೀಗ ಮನೆಯಲ್ಲಿ ವರ್ಕೌಟ್ ಮಾಡುತ್ತಿರುವಾಗ ಇನ್‍ಸ್ಟಾಗ್ರಾಂ ಮೂಲಕ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.

    ಮನೆಯಲ್ಲಿ ಟ್ರೆಡ್‍ಮೀಲ್ ಮೇಲೆ ನಡೆಯುತ್ತಾ ಲೈವ್‍ನಲ್ಲಿ ಮಾತನಾಡಿದ ಧ್ರುವ ಸರ್ಜಾ, ನಾನು ಮತ್ತು ಪ್ರೇರಣಾ ಆರೋಗ್ಯವಾಗಿದ್ದೇವೆ. ಕ್ಯಾಲರಿ ಕರಗಿಸಬೇಕಾಗಿದೆ ಎಂದ ಧ್ರುವ ಸರ್ಜಾ ಮನೆಯಲ್ಲಿಯೇ ಟ್ರೆಡ್‍ಮಿಲ್ ಇತ್ತು ಹಾಗಾಗಿ ವರ್ಕೌಟ್ ಮಾಡುತ್ತಿದ್ದೀನಿ. ಆರಂಭದಲ್ಲಿ ಸ್ವಲ್ಪ ಸುಸ್ತಾಗುತ್ತೆ ಅಷ್ಟೆ. ಪ್ರೇರಣಾ ಅವರಿಗೂ ವರ್ಕೌಟ್ ಮಾಡಿಸಬೇಕು ಎಂದು ಹೇಳಿದ್ದಾರೆ.

    ಇದೇ ವೇಳೆ ಅತ್ತಿಗೆ ಮೇಘನಾ ಬಗ್ಗೆಯೂ ಮಾತನಾಡಿ, ಮೇಘನಾ ಕೂಡ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಡಿ. ನಾವು ಬೇಗ ಗುಣಮುಖರಾಗಿ ಮನೆಯಿಂದ ಹೊರಗೆ ಬರುತ್ತೇವೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

    ಈ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಾಗೃತರಾಗಿರಿ ಎಂದು ಅಭಿಮಾನಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. “ತಪ್ಪದೆ ಪ್ರತಿದಿನ ಬಿಸಿ ನೀರು ಕುಡಿಯಿರಿ. ಸಾಧ್ಯವಾದಷ್ಟು ವರ್ಕೌಟ್ ಮಾಡಿ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಎಲ್ಲರೂ ಖುಷಿಯಾಗಿ ಇರಬೇಕು ಅಷ್ಟೇ. ಈ ಕೊರೊನಾವನ್ನು ಒಟ್ಟಾಗಿ ಸೇರಿ ಓಡಿಸೋಣ” ಎಂದು ಧ್ರುವ ಸರ್ಜಾ ಹೇಳಿದರು.

  • ನಟ ಧ್ರುವ ಸರ್ಜಾ, ಪ್ರೇರಣಾ ಆಸ್ಪತ್ರೆಯಿಂದ ಡಿಸ್ಚಾರ್ಜ್

    ನಟ ಧ್ರುವ ಸರ್ಜಾ, ಪ್ರೇರಣಾ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರಿಗೂ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಇಬ್ಬರಿಗೂ ನಿನ್ನೆ ಕೊರೊನಾ ಸೋಂಕು ಇರುವುದು ದೃಢ ಪಟ್ಟಿತ್ತು.

    ಕೊರೊನಾ ಸೋಂಕು ದೃಢ ಪಟ್ಟಿರುವ ಬಗ್ಗೆ ಟ್ವೀಟ್ ಮಾಡಿ ಧ್ರುವ ಸರ್ಜಾ ಮಾಹಿತಿ ನೀಡಿದ್ದರು. ಆದರೆ ಕೊರೊನಾ ಸೋಂಕಿನ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿದ್ದ ಅವರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ನಿನ್ನೆ ಈ ಬಗ್ಗೆ ಮಾಹಿತಿ ನೀಡಿದ್ದ ಧ್ರುವ ಸರ್ಜಾ, ಕೊರೊನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದೆ. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಶೀಘ್ರವೇ ಗುಣಮುಖರಾಗಿ ಹೊರಬರುತ್ತೇವೆ ಎಂದಿದ್ದರು. ಅಲ್ಲದೇ ನಮ್ಮ ಜೊತೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.

    ಈ ಹಿಂದೆ ಧ್ರುವ ಸರ್ಜಾ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆ. ಲೋ ಬಿಪಿಯಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಈ ಎಲ್ಲಾ ಗಾಸಿಪ್ ಗಳಿಗೆ ಧ್ರುವ ಆಪ್ತ ವಲಯ ಉತ್ತರ ಕೊಟ್ಟಿತ್ತು. ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆರಾಮಾಗಿದ್ದಾರೆ. ತಂದೆ, ತಾಯಿ ಕೂಡ ಆರಾಮಾಗಿದ್ದಾರೆ ಅಂತ ಧ್ರುವ ಆಪ್ತವಲಯ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿತ್ತು.

  • ನಟ ಧ್ರುವ ಸರ್ಜಾ, ಪತ್ನಿಗೆ ಕೊರೊನಾ ಪಾಸಿಟಿವ್

    ನಟ ಧ್ರುವ ಸರ್ಜಾ, ಪತ್ನಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ, ನನಗೆ ಹಾಗೂ ನನ್ನ ಪತ್ನಿಗೆ ಕೊರೊನಾ ಸೋಂಕು ದೃಢವಾಗಿದೆ. ಸದ್ಯ ಕೊರೊನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಶೀಘ್ರವೇ ಗುಣಮುಖರಾಗಿ ಹೊರಬರುತ್ತೇವೆ ಎಂದಿದ್ದಾರೆ.

    ಅಲ್ಲದೆ ನಮ್ಮ ಜೊತೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ.

    ಈ ಹಿಂದೆ ಧ್ರುವ ಸರ್ಜಾ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆ. ಲೋ ಬಿಪಿಯಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಈ ಎಲ್ಲಾ ಗಾಸಿಪ್ ಗಳಿಗೆ ಧ್ರುವ ಆಪ್ತ ವಲಯ ಉತ್ತರ ಕೊಟ್ಟಿತ್ತು. ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆರಾಮಾಗಿದ್ದಾರೆ. ತಂದೆ, ತಾಯಿ ಕೂಡ ಆರಾಮಾಗಿದ್ದಾರೆ ಅಂತ ಧ್ರುವ ಆಪ್ತವಲಯ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿತ್ತು.

     

    ಕಳೆದ ತಿಂಗಳು ಚಿರು ಸಾವು ಕುಟುಂಬ ವರ್ಗಕ್ಕೆ ಭರಿಸಲಾಗದ ನೋವು ತಂದುಕೊಟ್ಟಿದೆ. ಸದ್ಯ ಅರ್ಜುನ್ ಸರ್ಜಾ ಕುಟುಂಬ ಸದಸ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

  • ‘ನಾನು ನಗಲು ಕಾರಣ ಚಿರು’- ಮೇಘನಾರ ಭಾವನಾತ್ಮಕ ಮಾತು

    ‘ನಾನು ನಗಲು ಕಾರಣ ಚಿರು’- ಮೇಘನಾರ ಭಾವನಾತ್ಮಕ ಮಾತು

    – ನಗುವಿನ ಮೂಲಕ ಸ್ನೇಹಿತರಿಂದ ಗೌರವ ನಮನ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ದೈಹಿಕವಾಗಿ ದೂರವಾಗಿ ಇಂದಿಗೆ ಒಂದು ತಿಂಗಳು ಆಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬದವರು, ಆಪ್ತ ಸ್ನೇಹಿತರು ವಿಶೇಷವಾಗಿ ಚಿರುವನ್ನು ಸ್ಮರಿಸಿಕೊಳ್ಳುವ ಮೂಲಕ ವಂದನೆ ಸಲ್ಲಿಸಿದ್ದಾರೆ.

    ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ಹೃದಯಾಘಾತವಾಗಿ ಮೃತಪಟ್ಟಿದ್ದರು. ಸಹೋದರ ಧ್ರುವ ಸರ್ಜಾ ತಮ್ಮ ಆಸೆಯಂತೆ ಅಣ್ಣ ಚಿರಂಜೀವಿಯ ಅಂತ್ಯಕ್ರಿಯೆಯನ್ನು ಕನಕಪುರದಲ್ಲಿರುವ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ನೆರವೇರಿಸಿದ್ದರು. ಚಿರಂಜೀವಿ ಸರ್ಜಾ ಅವರು ದೈಹಿಕವಾಗಿ ದೂರವಾಗಿ ಇಂದಿಗೆ ತಿಂಗಳು ಕಳೆಯಲಿದೆ.

    https://www.instagram.com/p/CCU9lSsnXuA/?igshid=yk5kvzczrj6c

    ನಗುಮೊಗದ ಯುವ ಪ್ರತಿಭೆ ಚಿರು, ಇವರು ಸದಾ ನಗುತ್ತಿದ್ದರು. ಹೀಗಾಗಿ ಅವರ ಕುಟುಂಬಸ್ಥರು ಮತ್ತು ಆಪ್ತರು ಚಿರುವಿನ ನಗುವನ್ನು ಚಿರಾಯುವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಅವರಿಗೆ ನಗುವಿನ ಮೂಲಕ ಗೌರವ ಸಲ್ಲಿಸಿದ್ದಾರೆ. ಚಿರಂಜೀವಿ ಸರ್ಜಾ ಮೃತಪಟ್ಟು ಒಂದು ತಿಂಗಳ ಕಳೆದ ಹಿನ್ನೆಲೆಯಲ್ಲಿ ಆಪ್ತರು, ಮನೆಯವರೆಲ್ಲರೂ ಒಂದುಗೂಡಿದ್ದಾರೆ. ಈ ವೇಳೆ ಅವರೆಲ್ಲರೂ ಚಿರಂಜೀವಿ ಫೋಟೋ ಮುಂದೆ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರತಿಯೊಬ್ಬರು ನಗುವ ಮೂಲಕ ಚಿರುವಿಗೆ ಗೌರವ ಸಲ್ಲಿಸಿದ್ದಾರೆ.

    https://www.instagram.com/p/CCU9nh7n_KJ/?igshid=dtxe3dq150j1

    ಚಿರು ಪತ್ನಿ ಮೇಘನಾ ರಾಜ್ ಚಿರುವಿನ ಫೋಟೋ ಮತ್ತು ಸ್ನೇಹಿತರು, ಆಪ್ತರು ನಗು ಮುಖದಿಂದ ತೆಗೆಸಿಕೊಂಡಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ “ನನ್ನ ಪ್ರೀತಿಯ ಚಿರು…ಚಿರು ಒಂದು ಸೆಲೆಬ್ರೇಷನ್ ಆಗಿದೆ. ಈ ಆಚರಣೆ ಯಾವಾಗಲೂ ಇರುತ್ತದೆ. ಈಗಲೂ ಮತ್ತು ಮುಂದೆಯೂ ಇರುತ್ತದೆ. ಬೇರೆ ಯಾವ ರೀತಿಯನ್ನು ನೀನು ಇಷ್ಟಪಡುವುದಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ನಾನು ನಗಲು ಕಾರಣ ಚಿರು” ಎಂದು ಚಿರುವಿನ ನಗುವಿನ ಬಗ್ಗೆ ನೋವಿನಿಂದ ಬರೆದುಕೊಂಡಿದ್ದಾರೆ.

    https://www.instagram.com/p/CCU9fvdn22q/?igshid=1k7j82646wclx

    ಅಷ್ಟೇ ಅಲ್ಲದೇ “ಅವರು ನನಗೆ ಕೊಟ್ಟಿದ್ದು ಅತ್ಯಂತ ಅಮೂಲ್ಯವಾದುದ್ದು ನನ್ನ ಕುಟುಂಬ…ನಾವು ಮಾತ್ರವೇ. ನಾವು ಯಾವಾಗಲೂ ಒಟ್ಟಿಗೆ ಇರುತ್ತೇವೆ ಬೇಬಿಮಾ. ಪ್ರತಿ ದಿನವೂ ನೀವು ಇಷ್ಟಪಡುವ ರೀತಿಯಲ್ಲಿಯೇ ಇರುತ್ತೇವೆ. ಪ್ರೀತಿ, ನಗು, ಕುಚೇಷ್ಟೇಗಳು, ಪ್ರಾಮಾಣಿಕತೆ ಮತ್ತು ಮುಖ್ಯವಾಗಿ ಒಗ್ಗಟ್ಟಿನಿಂದ ಒಟ್ಟಾಗಿರುತ್ತೇವೆ. ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ ಬೇಬಿಮಾ” ಎಂದು ಮೇಘನಾ ಹೇಳಿದ್ದಾರೆ.

    ಕಳೆದ ದಿನ ಕುಟುಂಬ ಸದಸ್ಯರು ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟು ಚಿರಂಜೀವಿ ಸರ್ಜಾ ತಿಂಗಳ ಕಾರ್ಯ ಮಾಡಿದ್ದಾರೆ. ಚಿರು ಸ್ಮಾರಕಕ್ಕೆ ಸೋದರ ಧ್ರುವ ಸರ್ಜಾ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅರ್ಜುನ್ ಸರ್ಜಾ, ಮೇಘನಾ ರಾಜ್, ಚಿರು ಅಪ್ಪ, ಅಮ್ಮ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಚಿರಂಜೀವಿ ಸರ್ಜಾ ಅವರನ್ನು ನೆನೆದು ಕುಟುಂಬ ಸದಸ್ಯರು ಕಣ್ಣೀರಿಟ್ಟಿದ್ದರು.