Tag: dhruva sarja

  • #MeToo ಪ್ರಕರಣ – ಧರ್ಮೋ ರಕ್ಷತಿ ರಕ್ಷಿತಃ ಎಂದ ಧ್ರುವ, ಜಂಟಲ್ ಮ್ಯಾನ್ ಅಂದ ಮೇಘನಾ

    #MeToo ಪ್ರಕರಣ – ಧರ್ಮೋ ರಕ್ಷತಿ ರಕ್ಷಿತಃ ಎಂದ ಧ್ರುವ, ಜಂಟಲ್ ಮ್ಯಾನ್ ಅಂದ ಮೇಘನಾ

    ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್‍ಗೆ ಹಿನ್ನೆಡೆ ಆಗಿದ್ದು, ಈ ಬಗ್ಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

    2018ರಲ್ಲಿ ನಟಿ ಶೃತಿಹರಿಹರನ್ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಸದ್ಯ ಈ ಪ್ರಕರಣ ಕುರಿತಂತೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆ ಪೊಲೀಸರು ಸೋಮವಾರ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇದರಿಂದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅರ್ಜುನ್ ಸರ್ಜಾಗೆ ಮೂರು ವರ್ಷಗಳ ಬಳಿಕ ಕ್ಲೀನ್ ಚಿಟ್ ಸಿಕ್ಕಿದಂತಾಗಿದೆ. ದನ್ನೂ ಓದಿ: #MeToo ಪ್ರಕರಣ – ನಟಿ ಶೃತಿ ಹರಿಹರನ್‌ಗೆ ನೋಟಿಸ್

    ಇದೇ ಖುಷಿಯಲ್ಲಿ ನಟ ಧ್ರುವ ಸರ್ಜಾ ಅವರು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೊಳ್ಳೆ ಬ್ಯಾಟ್‍ನಿಂದ ಸೊಳ್ಳೆಗಳನ್ನು ಸಾಯಿಸುತ್ತಿರುವ ಹಾಸ್ಯಕರವಾದ ವೀಡಿಯೋವೊಂದನ್ನು ಶೇರ್ ಮಾಡಿಕೊಂಡು ಸೊಳ್ಳೆ, ಕ್ರಿಮಿ, ಕೀಟ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು. ಜೊತೆಗೆ ಧರ್ಮೋ ರಕ್ಷತಿ ರಕ್ಷಿತಃ ಎಂದು ಸಹ ಬರೆದುಕೊಂಡಿದ್ದಾರೆ.

    ಮತ್ತೊಂದಡೆ ಅರ್ಜುನ್ ಸರ್ಜಾ ಅವರನ್ನು ಯಾವಾಗಲೂ ಜಂಟಲ್ ಮ್ಯಾನ್ ಎಂದು ಕರೆಯುವ ನಟಿ ಮೇಘನಾ ರಾಜ್ ಕೂಡ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಂಟಲ್ ಮ್ಯಾನ್ ಇಸ್ ಆಲ್‍ವೆಸ್ ಜಂಟಲ್ ಮ್ಯಾನ್ ಎಂದು ಬರೆದುಕೊಂಡಿದ್ದಾರೆ. ದನ್ನೂ ಓದಿ: ಅಸಹ್ಯವಾಗಿ ನೋಡಿ ಹಿಂಭಾಗದಿಂದ ಅಪ್ಪಿಕೊಂಡ್ರು- ಶೃತಿ ದೂರಿನಲ್ಲಿ ಬೆಚ್ಚಿ ಬೀಳೋ ಆರೋಪ

     

    ನವೆಂಬರ್ 2015ರಲ್ಲಿ ಹೆಬ್ಬಾಳ ಹಾಗೂ ದೇವನಹಳ್ಳಿಯಲ್ಲಿ ವಿಸ್ಮಯ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶೃತಿ ಹರಿಹರನ್ ಆರೋಪಿಸಿದ್ದರು. ಈ ಘಟನೆ ನಡೆದ ಎರಡು ವರ್ಷಗಳ ನಂತರ ಶೃತಿ ಹರಿಹರನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

  • ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ವಿಶೇಷವಾಗಿ ವಿಶ್ ಮಾಡಿದ ಧ್ರುವ

    ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ವಿಶೇಷವಾಗಿ ವಿಶ್ ಮಾಡಿದ ಧ್ರುವ

    ಬೆಂಗಳೂರು: ಚಂದನವನದ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಮದುವೆಯಾಗಿ ಇಂದಿಗೆ 2 ವರ್ಷ ತುಂಬಿದ್ದು, ಈ ವಿಶೇಷ ಸಂದರ್ಭದಲ್ಲಿ ಧ್ರುವ ತನ್ನ ಪತ್ನಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

    ಧ್ರುವ ಸರ್ಜಾ ಇಂದು ತಮ್ಮ 2ನೇ ವರ್ಷದ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ, ಒಟ್ಟಿಗೆ ನಾವು ಬಲಿಷ್ಠರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ನಾವಿಬ್ಬರು ಒಟ್ಟಿಗೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ರೀತಿ ಸಾಲುಗಳನ್ನು ಬರೆದುಕೊಂಡಿದ್ದು, ಪ್ರೇರಣಾ ಅವರ ಹಣೆಗೆ ಮುತ್ತಿಡುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಖಾಲಿ ಇರುವ 6 ಸಾವಿರ ಪೊಲೀಸ್ ಹುದ್ದೆಗಳನ್ನು ವಾರದೊಳಗೆ ಭರ್ತಿ ಮಾಡಿ: ಅಸ್ಸಾಂ ಸಿಎಂ

    ಧ್ರುವ ಸರ್ಜಾ ಮತ್ತು ಪ್ರೇರಣಾ ಇಬ್ಬರು ಬಾಲ್ಯದಿಂದಲ್ಲೇ ಪ್ರೀತಿಸುತ್ತಿದ್ದವರು. ಇವರು 14 ವರ್ಷಗಳ ಪ್ರೀತಿಗೆ 24 ನವೆಂಬರ್ 2019 ರಲ್ಲಿ ಮದುವೆ ಎಂಬ ಮುದ್ರೆಯನ್ನು ಒತ್ತಿದರು. ಈ ಮೂಲಕ ತಮ್ಮ ಹೊಸ ಜೀವನಕ್ಕೆ ಕಾಲಿಟ್ಟರು. ಇಬ್ಬರು ಮದುವೆಯಾದ ಬಳಿಕ ಹಲವು ಏಳುಬೀಳುಗಳನ್ನು ನೋಡಿದ್ದು, ಒಬ್ಬರಿಗೊಬ್ಬರು ಹೆಗಲು ಕೊಟ್ಟು ನಡೆದುಕೊಂಡು ಹೋಗುತ್ತಿದ್ದಾರೆ.

    ಕಳೆದ ವರ್ಷವು ಧ್ರುವ ಪ್ರೇರಣಾಗೊಸ್ಕರ ವಿಶೇಷವಾಗಿ ತಯಾರಿ ಮಾಡಿ ಸರ್ಪ್ರೈಸ್ ಕೊಟ್ಟಿದ್ದರು.

    ಧ್ರುವ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದು, ನಂದಕಿಶೋರ್ ನಿರ್ದೇಶನದ ‘ದುಬಾರಿ’ ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ. ಇನ್ನೂ ಪ್ರೇರಣಾ ಉಪನ್ಯಾಸಕಿಯಾಗಿ ತಮ್ಮ ವೃತ್ತಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

  • ಹುಟ್ಟುಹಬ್ಬದ ಶುಭಾಶಯಗಳು ಬಿಲ್ – ಮೇಘನಾ ರಾಜ್

    ಹುಟ್ಟುಹಬ್ಬದ ಶುಭಾಶಯಗಳು ಬಿಲ್ – ಮೇಘನಾ ರಾಜ್

    ಬೆಂಗಳೂರು: ಚಂದನವನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷದ ದಿನದಂದು ಮೈದುನನಿಗೆ ಮೇಘನಾ ವಿಶ್ ಮಾಡಿದ್ದಾರೆ.

    meghana raj

    ಚಂದನವನದ ನಟಿ ಮೇಘನಾ ರಾಜ್ ಧ್ರುವ ಹುಟ್ಟುಹಬ್ಬಕ್ಕೆ ಇನ್‍ಸ್ಟಾ ಸ್ಟೋರಿಯಲ್ಲಿ, ಹುಟ್ಟುಹಬ್ಬದ ಶುಭಾಶಯಗಳು ಬಿಲ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಚಿರು ಮೇಘನಾರನ್ನು ಅಗಲಿದ ನಂತರ, ಮೇಘನಾಗೆ ಒಂದು ಶಕ್ತಿಯಾಗಿ ನಿಂತಿದ್ದು ಧ್ರುವ. ಇವರಿಬ್ಬರು ಅತ್ತಿಗೆ ಮೈದುನ ಎನ್ನುವುದಕ್ಕಿಂತ ಒಳ್ಳೆಯ ಸ್ನೇಹಿತರು ಆಗಿದ್ದಾರೆ. ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ. ಈ ಹಿಂದೆ ಕೆಲವರು ಈ ಬಾಂಧವ್ಯವನ್ನು ಮುರಿದುಹಾಕಲು ಪ್ರಯತ್ನಿಸಿದ್ದರು. ಆದರೆ ಮೇಘನಾ ಮಗನ ನಾಮಕರಣದಲ್ಲಿ ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದರು. ಇದನ್ನೂ ಓದಿ:  ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ : ಧ್ರುವ ಸರ್ಜಾ 

    ಮೇಘನಾ ಪ್ರಸ್ತುತ ಮಗ ರಾಯನ್ ರಾಜ್ ಸರ್ಜಾ ಜೊತೆ ಕಾಲ ಕಳೆಯುತ್ತಿದ್ದು, ಮಗನ ಲಾಲನೆ, ಪಾಲನೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:  10 ವರ್ಷದ ಹಿಂದಿನ ಫೋಟೋ ಹಂಚಿಕೊಂಡು ಪತಿಗೆ ಪ್ರೇರಣಾ ವಿಶ್

    ಧ್ರುವ ಈ ಹಿಂದೆ ಇನ್‍ಸ್ಟಾಗ್ರಾಮ್ ನಲ್ಲಿ, ಅಕ್ಟೋಬರ್ 6ರಂದು ನನ್ನ ಹುಟ್ಟುಹಬ್ಬ ಇದೆ. ನಾನು ದೊಡ್ಡ ಸೆಲೆಬ್ರಿಟಿ ಅಲ್ಲ, ಆದರೂ ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಮನಸ್ಸು ನನಗಿಲ್ಲ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದರು. ಈ ಹಿನ್ನೆಲೆ ಇಂದು ಅವರ ಅಭಿಮಾನಿಗಳು ಅವರ ಮಾತಿಗೆ ಬೆಲೆ ಕೊಟ್ಟು ಯಾವುದೇ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಅದು ಅಲ್ಲದೇ ಧ್ರುವ ಇಂದು ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

  • 10 ವರ್ಷದ ಹಿಂದಿನ ಫೋಟೋ ಹಂಚಿಕೊಂಡು ಪತಿಗೆ ಪ್ರೇರಣಾ ವಿಶ್

    10 ವರ್ಷದ ಹಿಂದಿನ ಫೋಟೋ ಹಂಚಿಕೊಂಡು ಪತಿಗೆ ಪ್ರೇರಣಾ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಅವರ ಪತ್ನಿ ಪ್ರೇರಣಾ ಹಳೆಯ ಫೋಟೋವೊಂದನ್ನು ಹಂಚಿಕೊಂಡು ವಿಶ್ ಮಾಡಿರುವುದು ವಿಶೇಷವಾಗಿದೆ.

    ಇದು 10 ವರ್ಷಗಳ ಹಿಂದಿನ ಫೋಟೋ. ಹೆಂಡತಿಯಾಗಿ ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ. ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡು ಇಬ್ಬರು ಜೊತೆಗೆ ಇರುವ ಮುದ್ದಾದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:   ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ : ಧ್ರುವ ಸರ್ಜಾ

    ಧ್ರುವ ಅಭಿಮಾನಿಗಳು ಜೈ ಆಂಜನೇಯ, ಧ್ರುವ ಅಣ್ಣ, ಮಗುವಿನ ಮನಸಿರೋ ಮಹಾರಾಜ ಎಂದು ಕಾಮೆಂಟ್ ಮಾಡುತ್ತಾ ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ: ಶಾರೂಖ್ ಮನೆಗೆ ಭೇಟಿ ಕೊಟ್ಟ ಸಲ್ಮಾನ್ ಖಾನ್

     

    View this post on Instagram

     

    A post shared by Prerana Shankar (@shankar.prerana)

    ಪ್ರತಿವರ್ಷ ಅಕ್ಟೋಬರ್ 6ರಂದು ಸ್ನೇಹಿತರು ಹಾಗೂ ಅಭಿಮಾನಿಗಳೊಂದಿಗೆ ಬಹಳ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಕೋವಿಡ್ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಧ್ರುವ ಸರ್ಜಾ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ವೀಡಿಯೋವೊಂದನ್ನು ಹಂಚಿಕೊಂಡಿದ್ದರು.

    ವೀಡಿಯೋದಲ್ಲಿ ಇದೇ ಅಕ್ಟೋಬರ್ 6 ನೇ ತಾರಿಖು ನನ್ನ ಹುಟ್ಟುಹಬ್ಬ ಇದೆ. ನಾನು ದೊಡ್ಡ ಸೆಲೆಬ್ರಿಟಿ ಅಲ್ಲ, ಆದರೂ ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಮನಸ್ಸು ನನಗಿಲ್ಲ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದರು.

    33ನೇ ವಸಂತಕ್ಕೆ ಕಾಲಿಟ್ಟಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

  • ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ : ಧ್ರುವ ಸರ್ಜಾ

    ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ : ಧ್ರುವ ಸರ್ಜಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಆ್ಯಕ್ಷನ್ ಪ್ರಿನ್ಸ್  ಧ್ರುವ ಸರ್ಜಾ ಈ ಬಾರಿ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.

    ಪ್ರತಿವರ್ಷ ಅಕ್ಟೋಬರ್ 6ರಂದು ಸ್ನೇಹಿತರು ಹಾಗೂ ಅಭಿಮಾನಿಗಳೊಂದಿಗೆ ಬಹಳ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ ಅವರು, ಈ ಬಾರಿ ಕೋವಿಡ್ ಕಾರಣಾಂತರದಿಂದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಧ್ರುವ ಸರ್ಜಾ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಾರೂಖ್ ಮನೆಗೆ ಭೇಟಿ ಕೊಟ್ಟ ಸಲ್ಮಾನ್ ಖಾನ್

    ವೀಡಿಯೋದಲ್ಲಿ, ಇದೇ ಅಕ್ಟೋಬರ್ 6 ನೇ ತಾರಿಖು ನನ್ನ ಹುಟ್ಟುಹಬ್ಬ ಇದೆ. ನಾನು ದೊಡ್ಡ ಸೆಲಿಬ್ರೆಟಿ ಅಲ್ಲ, ಆದರೂ ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಮನಸ್ಸು ನನಗಿಲ್ಲ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ. ಇದನ್ನೂ ಓದಿ: ಸುಂದರ್ ರಾಜ್, ಸರ್ಜಾ ಫ್ಯಾಮಿಲಿ ಸದಾ ಒಂದಾಗಿರುತ್ತದೆ: ಧ್ರುವ ಸರ್ಜಾ

    ಕೋವಿಡ್ ಕಾರಣದಿಂದಾಗಿ ಹಾಗೂ ನಾನು ಊರಿನಲ್ಲಿ ಇರುವುದಿಲ್ಲ. ಶೂಟಿಂಗ್‍ಗಾಗಿ ವಿಶಾಖಪಟ್ಟಕ್ಕೆ ಹೋಗುತ್ತಿದ್ದೇನೆ. ಹೀಗಾಗಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನ ನಿಮ್ಮ ಮನೆಯ ಹುಡುಗ ಎಂದು ನನ್ನ ಎಲ್ಲಾ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಎಲ್ಲಾ ತಾಯಂದಿರು ಹೇಗೆ ಆಶೀರ್ವಾದ ಮಾಡಿದ್ದೀರಾ ಹಾಗೇ ಈ ಬಾರಿಯೂ ನನಗೆ ಆಶೀರ್ವಾದ ಮಾಡಿ. ಪ್ರೋತ್ಸಾಹ ಮತ್ತು ಬೆಂಬಲ ನನಗೆ ಶ್ರೀರಕ್ಷೆ ಎಂದು ಹೇಳಿದ್ದಾರೆ.

     

    View this post on Instagram

     

    A post shared by Dhruva Sarja (@dhruva_sarjaa)

    ಸದ್ಯ ಧ್ರುವ ಸರ್ಜಾ ಅವರು ನಿರ್ದೇಶಕ ಎ.ಪಿ ಅರ್ಜುನ್ ಆ್ಯಕ್ಷನ್ ಕಟ್ ಹೇಳಿದ್ದ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಈ ಸಿನಿಮಾ ಧ್ರುವ ಸರ್ಜಾ ಹಾಗೂ ಎ.ಪಿ ಅರ್ಜುನ್ ಕಾಂಬೀನೇಷನ್‍ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದ್ದು, ಈ ಮುನ್ನ ಎ.ಪಿ ಅರ್ಜುನ್ ನಿರ್ದೇಶಿಸಿದ್ದ ಅದ್ದೂರಿ ಸಿನಿಮಾದಲ್ಲಿ ಧ್ರುವ ನಟಿಸಿದ್ದರು. ಅಲ್ಲದೇ ಧ್ರುವ ಸರ್ಜಾ ಅವರು ನಿರ್ದೇಶಕ ಜೋಗಿ ಪ್ರೇಮ್ ಸಿನಿಮಾದಲ್ಲಿ ಕೂಡ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಗಾಂಧೀನಗರದಲ್ಲಿ ಹರಿದಾಡುತ್ತಿದೆ.

  • ನೀನಿಲ್ಲದೆ ಇರಲು ಸಾಧ್ಯವಿಲ್ಲ ಎಂದು ಅಣ್ಣನನ್ನ ನೆನೆದ ಧ್ರುವ

    ನೀನಿಲ್ಲದೆ ಇರಲು ಸಾಧ್ಯವಿಲ್ಲ ಎಂದು ಅಣ್ಣನನ್ನ ನೆನೆದ ಧ್ರುವ

    ಬೆಂಗಳೂರು: ನೀನಿಲ್ಲದೆ ಇರಲು ಸಾಧ್ಯವಿಲ್ಲ ಎಂದು ಚಂದನವನದ ನಟ ಧ್ರುವ ಸರ್ಜಾ ಅಣ್ಣ ಚಿರಂಜೀವಿ ಸರ್ಜಾನನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಮನಮಿಡಿಯುವಂತೆ ಪೋಸ್ಟ್ ಮಾಡಿದ್ದಾರೆ.

    ಚಿರು ಅಗಲಿ 1 ವರ್ಷವಾದರೂ ಅಣ್ಣನನ್ನು ಮರೆಯಲು ಧ್ರುವನಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಚಿರುವನ್ನು ನೆನೆದು ಇನ್‍ಸ್ಟಾಗ್ರಾಮ್ ನಲ್ಲಿ, ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನಿಲ್ಲದೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಬರೆದು ಚಿರು ಜೊತೆ ಕಳೆದ ಕ್ಷಣಗಳನ್ನು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಇವರ ಅಭಿಮಾನಿಗಳು ಧ್ರುವಗೆ ಧೈರ್ಯ ತುಂಬುವ ರೀತಿ ಕಮೆಂಟ್ ಮಾಡುತ್ತಿದ್ದು, ಅವರು ನಿಮ್ಮ ಜೊತೆಯಲ್ಲೇ ಇರುತ್ತಾರೆ, ಧೈರ್ಯವಾಗಿರಿ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ:  ಅಕ್ಷಯ್ ತಾಯಿಯ ಸಾವಿಗೆ ಮಿಡಿದ ಮೋದಿ ಹೃದಯ

     

    View this post on Instagram

     

    A post shared by Dhruva Sarja (@dhruva_sarjaa)

    ಈ ವೀಡಿಯೋದಲ್ಲಿ ಧ್ರುವ ಚಿರುಗೆ ಊಟ ಮಾಡಿಸುತ್ತಿವುದು, ಇಬ್ಬರು ಚೆಸ್ ಆಡುತ್ತಿರುವುದು ಮತ್ತು ಚಿರು ಧ್ರುವ ತಲೆಗೆ ಎಣ್ಣೆ ಹಚ್ಚುತ್ತಿರುವ ವೀಡಿಯೋ ಇದೆ. ಈಗೇ ಚಿಕ್ಕವಯಸ್ಸಿನಿಂದ ಚಿರು ಬದುಕಿರುವವರೆಗೂ ಕಳೆದ ಸಂತೋಷದ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗಣಪತಿಯ ಕುತ್ತಿಗೆಗೆ ಸುತ್ತಿಕೊಂಡ ನಾಗರ 

    ಇತ್ತೀಚೆಗಷ್ಟೇ ಚಿರು ಮತ್ತು ಮೇಘನಾ ರಾಜ್ ಮಗನ ನಾಮಕರಣ ನಡೆದಿದ್ದು, ಈ ವೇಳೆಯು ಧ್ರುವ ಸುದ್ದಿಗೋಷ್ಠಿಯಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದರು. ಈ ವೇಳೆ, ನಮ್ಮ ಅಣ್ಣನ ಮಗನ ಹೆಸರು ರಾಯನ್ ರಾಜ್ ಸರ್ಜಾ. ಆ ಒಂದು ಹೆಸರಿನಲ್ಲಿಯೇ ಸುಂದರ್ ರಾಜ್ ಅವರ ಫ್ಯಾಮಿಲಿ ಹಾಗೂ ಸರ್ಜಾ ಕುಟುಂಬ ಯಾವಾಗಲೂ ಒಂದಾಗಿಯೇ ಇರುತ್ತದೆ. ಕೆಲವು ಯೂಟ್ಯೂಬ್ ಅಥವಾ ಬೇರೆ ಯಾವುದಾದರ ಮೂಲಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ದಯವಿಟ್ಟು ಮಾಡಬೇಡಿ. ನಾವು ಯಾವತ್ತಿಗೂ ಭಿನ್ನಾಭಿಪ್ರಾಯಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ:  ನೀಟ್ ಪರೀಕ್ಷೆ – ಲಾಠಿ ಹಿಡಿದು ಪೋಷಕರನ್ನು ಚದುರಿಸಿದ ಪೊಲೀಸರು

  • ಸುಂದರ್ ರಾಜ್, ಸರ್ಜಾ ಫ್ಯಾಮಿಲಿ ಸದಾ ಒಂದಾಗಿರುತ್ತದೆ: ಧ್ರುವ ಸರ್ಜಾ

    ಸುಂದರ್ ರಾಜ್, ಸರ್ಜಾ ಫ್ಯಾಮಿಲಿ ಸದಾ ಒಂದಾಗಿರುತ್ತದೆ: ಧ್ರುವ ಸರ್ಜಾ

    ಬೆಂಗಳೂರು: ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ನಟ ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಇಂದು ಬಹಿರಂಗ ಪಡಿಸುವ ಮೂಲಕ ಮೇಘನಾ ರಾಜ್ ಸಿಹಿಸುದ್ದಿ ನೀಡಿದ್ದಾರೆ. ಈ ವೇಳೆ ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ, ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬ ಯಾವಾಗಲೂ ಒಂದಾಗಿರುತ್ತದೆ ಎಂದು ಹೇಳಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕುಟುಂಬಸ್ಥರೆಲ್ಲಾ ಸೇರಿ ಜ್ಯೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣಮಾಡಿದ್ದು, ಇದೇ ವೇಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಧ್ರುವ ಸರ್ಜಾ, ನಮ್ಮ ಅಣ್ಣನ ಮಗನ ಹೆಸರು ರಾಯನ್ ರಾಜ್ ಸರ್ಜಾ. ಆ ಒಂದು ಹೆಸರಿನಲ್ಲಿಯೇ ಸುಂದರ್ ರಾಜ್ ಅವರ ಫ್ಯಾಮಿಲಿ ಹಾಗೂ ಸರ್ಜಾ ಕುಟುಂಬ ಯಾವಾಗಲೂ ಒಂದಾಗಿಯೇ ಇರುತ್ತದೆ. ಕೆಲವು ಯೂಟ್ಯೂಬ್ ಅಥವಾ ಬೇರೆ ಯಾವುದಾದರ ಮೂಲಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ದಯವಿಟ್ಟು ಮಾಡಬೇಡಿ. ನಾವು ಯಾವತ್ತಿಗೂ ಭಿನ್ನಾಭಿಪ್ರಾಯಗಳನ್ನು ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’

    druva sarja

    ನಂತರ ಈ ಸಮಯದಲ್ಲಿ ನಾನು ನನ್ನ ಚಿಕ್ಕಪ್ಪ, ನನ್ನ ಅಣ್ಣನನ್ನು ನೆನಪಿಸಿಕೊಳ್ಳಲಿ ಇಚ್ಛಿಸುತ್ತೇನೆ. ಸುಂದರ್ ರಾಜ್, ಪ್ರಮೀಳಾ ಜೋಷಾಯ್ ಅವರು ಹಾಗೂ ನನ್ನ ಅತ್ತಿಗೆ ಎಲ್ಲರೂ ಸಂತಸದಿಂದ ಇದ್ದಾರೆ. ನಾನು ಕೂಡ ಖುಷಿಯಾಗಿದ್ದೇನೆ. ದಿನ ದಿನ ನಾವು ಎಲ್ಲವನ್ನು ಸುಧಾರಿಸಿಕೊಳ್ಳುತ್ತಿದ್ದೇವೆ. ರಾಯನ್‍ಗೆ ಎಲ್ಲರೂ ಆಶೀರ್ವಾದಮಾಡಿ. ರಾಯನ್ ಎಂದರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥ. ಅವನು ಯುವರಾಜ ಎಂದು ಹೆಸರಿಟ್ಟಿರುವುದಲ್ಲ. ಅವನು ಯುವರಾಜನಂತೆಯೇ ಇರುತ್ತಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜನೇ ರಾಯನ್: ಮೇಘನಾ ರಾಜ್

  • ಹೊಸ ಯುದ್ಧಕ್ಕೆ ಸಜ್ಜಾದ ಧ್ರುವ ಸರ್ಜಾ-ಪ್ರೇಮ್

    ಹೊಸ ಯುದ್ಧಕ್ಕೆ ಸಜ್ಜಾದ ಧ್ರುವ ಸರ್ಜಾ-ಪ್ರೇಮ್

    ಬೆಂಗಳೂರು: ಅದ್ಧೂರಿ ಹಿಟ್ ಬಳಿಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೆ ಚಿತ್ರೀಕರಣದಲ್ಲಿ ತೊಡಗಿದ್ದು, ಮಾರ್ಟಿನ್ ಬಳಿಕ ಇದೀಗ ಜೋಗಿ ಪ್ರೇಮ್ ಜೊತೆ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಈ ಕುರಿತು ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಮತ್ತೊಂದು ಸಿನಿಮಾಗೆ ತಯಾರಾಗುತ್ತಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ.

     

    View this post on Instagram

     

    A post shared by Dhruva Sarja (@dhruva_sarjaa)

    ಧ್ರುವ ಸರ್ಜಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡಿದ್ದು, ಪ್ರೇಮ್ ಜೊತೆಗಿರುವ ಫೋಟೋ ಸೇರಿದಂತೆ ಸೆಟ್‍ನಲ್ಲಿ ತೆಗೆದ ಚಿತ್ರಗಳಿರುವ ವೀಡಿಯೋವನ್ನು ಪೋಸ್ಟ್ ಮಾಡಿ. ನಿರ್ದೇಶಕ ಪ್ರೇಮ್ ಜೊತೆ ಕೈ ಜೋಡಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಧ್ರುವ ಸರ್ಜಾ ಅವರ 6ನೇ ಚಿತ್ರ ಇದಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ನಮ್ಮನ್ನು ಬಿಟ್ಟುಬಿಡಿ ಎಂದು ಕಣ್ಣೀರಿಟ್ಟ ಸಂಜನಾ ತಾಯಿ

    ಇತ್ತೀಚೆಗಷ್ಟೇ ಮಾರ್ಟೀನ್ ಚಿತ್ರಕ್ಕೆ ಸಹಿ ಹಾಕಿದ್ದ ಧ್ರುವ ಸರ್ಜಾ ಇದೀಗ ನಿರ್ದೇಶಕ ಪ್ರೇಮ್ ಜೊತೆ ಒಂದಾಗುತ್ತಿದ್ದಾರೆ. ಈ ಕುರಿತು ನಿದೇಶಕ ಪ್ರೇಮ್ ಸಹ ಟ್ವೀಟ್ ಮಾಡಿದ್ದು, ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, ನಿಮ್ಮ ಪ್ರೀತಿ, ಪ್ರೋತ್ಸಾಹ, ಅಭಿಮಾನ, ಆಶೀರ್ವಾದ ಸದಾ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಹಾಗೂ ಪ್ರೇಮ್ ಜೋಡಿ ಒಂದಾಗುತ್ತಿದ್ದು, ಯಾವ ರೀತಿ ಮ್ಯಾಜಿಕ್ ಮಾಡಲಿದ್ದಾರೆ ಕಾದುನೋಡಬೇಕಿದೆ.

    ಹೊಸ ಸಿನಿಮಾ ಕುರಿತ ವೀಡಿಯೋ ನೋಡಿದ ಬಳಿಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದ್ದು, ಸಿನಿಮಾ ಯಾವ ರೀತಿಯಾಗಿ ಮೂಡಿ ಬರಲಿದೆ ಎಂಬ ಕಾಡುತ್ತಿದೆ. ಹೊಸ ಸಿನಿಮಾ ಮಾತ್ರವಲ್ಲದೆ ಧ್ರುವ ಸರ್ಜಾ ಮಾರ್ಟಿನ್ ಹಾಗೂ ದುಬಾರಿ ಚಿತ್ರದಗಳ ಶೂಟಿಂಗ್‍ಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಸಖತ್ ಬ್ಯುಸಿಯಾಗಿದ್ದಾರೆ.

  • ಜೋಗಿ ಪ್ರೇಮ್ ಸಾರಥ್ಯದಲ್ಲಿ ಧ್ರುವ ಸಿನಿಮಾ!

    ಜೋಗಿ ಪ್ರೇಮ್ ಸಾರಥ್ಯದಲ್ಲಿ ಧ್ರುವ ಸಿನಿಮಾ!

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾಕ್ಕೆ ನಿರ್ದೇಶಕ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಇದೀಗ ಗಾಂಧಿನಗರದ ಗಲ್ಲಿಯೊಳಗೆ ಹರಿದಾಡುತ್ತಿದೆ.

    ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾವನ್ನು ಯಾರ ಜೊತೆಗೆ ತೆಗೆಯಬೇಕೆಂದು ಯೋಚಿಸುತ್ತಿದ್ದ ಪ್ರೇಮ್‍ಗೆ ಇದೀಗ ಧ್ರುವ ಸರ್ಜಾ ಕಣ್ಣಿಗೆ ಬಿದ್ದಿದ್ದಾರೆ. ಈಗಾಗಲೇ ಸಿನಿಮಾ ಕುರಿತಂತೆ ಪ್ರೇಮ್ ಮತ್ತು ಧ್ರುವ ಸರ್ಜಾ ಜೊತೆ ಚರ್ಚೆ ನಡೆಸಿದ್ದು, ಈ ಸಿನಿಮಾ ಸೆಟ್ಟೆರುವುದು ಬಹುತೇಕ ಖಚಿತ ಆಗಿದೆ. ಇನ್ನೂ ಈ ಸಿನಿಮಾಕ್ಕೆ ದೊಡ್ಡ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲು ಮುಂದಾಗಲಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

    ಸದ್ಯ ಪ್ರೇಮ್ ಪತ್ನಿ ರಕ್ಷಿತಾರವರ ಸಹೋದರ ರಾಣ ನಟಿಸಿರುವ ‘ಏಕ್ ಲವ್ ಯಾ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರದಲ್ಲಿ ರಾಣಾಗೆ ರೀಷ್ಮಾ ನಾಣಯ್ಯ ಹಾಗೂ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಇತ್ತ ಧ್ರುವ ಸರ್ಜಾ ಕೂಡ ನಿರ್ದೇಶಕ ಎ.ಪಿ ಅರ್ಜುನ್ ಜೊತೆ ಹೊಸ ಸಿನಿಮಾಕ್ಕೆ ಕೈ ಜೋಡಿಸಿದ್ದು, ಆ.15ರಂದು ಈ ಸಿನಿಮಾದ ಮೂಹೂರ್ತ ನೆರವೇರಲಿದೆ.

    ಒಟ್ಟಾರೆ ಈ ಎರಡು ಚಿತ್ರಗಳನ್ನು ಮುಗಿಸಿದ ನಂತರ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‍ನ ಹೊಸ ಚಿತ್ರಕ್ಕೆ ಒಟ್ಟಿಗೆ ಕೈ ಜೋಡಿಸಲಿದ್ದಾರೆ.  ಇದನ್ನೂ ಓದಿ:BB ಫಿನಾಲೆಗೂ ಮುನ್ನವೇ 2 ಲಕ್ಷ ಗೆಲ್ಲಬಹುದು

  • ಧ್ರುವ ಸರ್ಜಾ ನೋಡಲು ಬಂದ ಅಭಿಮಾನಿಯ ಬೈಕ್ ಕಳವು

    ಧ್ರುವ ಸರ್ಜಾ ನೋಡಲು ಬಂದ ಅಭಿಮಾನಿಯ ಬೈಕ್ ಕಳವು

    ಬೆಂಗಳೂರು: ನಟ ಧ್ರುವಸರ್ಜಾ ಅವರನ್ನು ನೋಡಲು ಬಂದ ಅಭಿಮಾನಿಯ ಬೈಕ್ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಗರದ ಕೆ.ಆರ್ ರೋಡ್ ನಲ್ಲಿ ನಡೆದಿದೆ.

    ತನ್ನ ನೆಚ್ಚಿನ ನಟನನ್ನು ನೋಡಲು ಅಭಿಮಾನಿ ಸುನಿಲ್ ಜುಲೈ 2ರಂದು ಟಾಟಾ ಸಿಲ್ಕ್ ಫೋರಂ ಕೆ.ಆರ್ ರೋಡ್ ನಲ್ಲಿರೋ ಧ್ರುವ ಸರ್ಜಾ ಅವರ ಮನೆಗೆ ಬಂದಿದ್ದಾರೆ. ಈ ವೇಳೆ ಧ್ರುವ ಸರ್ಜಾ ಮನೆಯಿಂದ ಕೂದಲೆಳೆ ದೂರದಲ್ಲಿ ಬೈಕ್ ಪಾರ್ಕ್ ಮಾಡಿ ಸುನೀಲ್ ಮನೆ ಬಳಿ ಹೋಗಿದ್ದಾರೆ.  ಇದನ್ನೂ ಓದಿ: ತನ್ನ ನೆಚ್ಚಿನ ಗುರುವನ್ನು ಪರಿಚಯಿಸಿ ಧನ್ಯವಾದ ಹೇಳಿದ ಧ್ರುವ ಸರ್ಜಾ

    ಸುನೀಲ್ ಧ್ರುವ ಸರ್ಜಾ ಮನೆ ಬಳಿ ಹೋಗಿ ಸರ್ಜಾರನ್ನು ಭೇಟಿ ಮಾಡಿ ಮಾತನಾಡಿಸಿಕೊಂಡು ಸೆಲ್ಫಿ ತೆಗೆಸಿಕೊಂಡು ಖುಷಿ, ಖುಷಿಯಾಗಿ ಆಚೇ ಬಂದಿದ್ದಾರೆ. ಹತ್ತಾರು ಬಾರಿ ಮೊಬೈಲ್ ನಲ್ಲಿ ಧೃವ ಸರ್ಜಾ ಜೊತೆ ತೆಗೆಸಿಕೊಂಡಿದ್ದ ಸೆಲ್ಫಿ ನೋಡಿಕೊಂಡು ಮನೆಗೆ ಹೊರಡಲು ಬೈಕ್ ನೋಡಿದ್ದಾರೆ. ಈ ವೇಳೆ ಪಾರ್ಕಿಂಗ್ ಮಾಡಿದ್ದ ಸ್ಥಳದಲ್ಲಿ ಬೈಕ್ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

    ಬೈಕ್ ಇಲ್ಲದೇ ಇರುವುದನ್ನು ಕಂಡ ಸುನೀಲ್ ಸುತ್ತಾಮುತ್ತ ಹುಡುಕಾಡಿ ಕೊನೆಗೆ ಬೈಕ್ ಸಿಗದೇ ಹೋದಾಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ಬೈಕ್ ಕದ್ದ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.