Tag: dhruva sarja

  • ಪತಿ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ಫೋಟೋ ಜೊತೆ ಪ್ರೇರಣಾ ಲವ್ಲಿ ವಿಶ್ಸ್

    ಪತಿ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ಫೋಟೋ ಜೊತೆ ಪ್ರೇರಣಾ ಲವ್ಲಿ ವಿಶ್ಸ್

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾಗೆ(Dhruva Sarja) ಇಂದು ಹುಟ್ಟುಹಬ್ಬದ ಸಂಭ್ರಮ. ನಟ ಧ್ರುವ ಸರ್ಜಾಗೆ ಈ ವರ್ಷ ತುಂಬಾನೇ ಸ್ಪೆಷಲ್ ಆಗಿದ್ದು, ಇತ್ತೀಚೆಗಷ್ಟೇ ಮುದ್ದು ಮಗಳ ಆಗಮನ ಕೂಡ ಆಗಿದೆ. ಈ ಖುಷಿಯಲ್ಲಿ ಪತ್ನಿ ಪ್ರೇರಣಾ(Prerana Shankar) ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಆಗಿ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

    ಚಂದನವನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಧ್ರುವ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಇಂದು ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿರುವ ಧ್ರುವ ಸರ್ಜಾ ಸದ್ಯ ಮುದ್ದು ಮಗಳ ಆಗಮನದ ಖುಷಿಯಲ್ಲಿದ್ದಾರೆ. ಪತ್ನಿ ಮತ್ತು ಮಗಳ ಆರೋಗ್ಯದ ಹಿತದೃಷ್ಟಿಯಿಂದ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಆಗಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಸೇರುವುದು ಸೂಕ್ತವಲ್ಲ ಎಂದು ಬರ್ತ್‌ಡೇ ಅನ್ನು ಅಭಿಮಾನಿಗಳ ಜೊತೆ ಧ್ರುವ ಸೆಲೆಬ್ರೇಟ್ ಮಾಡುತ್ತಿಲ್ಲ. ಇನ್ನೂ ಪತ್ನಿ ಪ್ರೇರಣಾ, ಪತಿ ಧ್ರುವ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಗೊಬ್ಬರಗಾಲ ಮೈ ಮೇಲೆ ದೆವ್ವ: ಹೆದರಿ ಓಡಿದ ನವಾಜ್, ರೂಪೇಶ್ ರಾಜಣ್ಣ

     

    View this post on Instagram

     

    A post shared by Prerana Shankar (@shankar.prerana)

    ನಿಮಗೆ ಜನ್ಮ ದಿನದ ಶುಭಾಶಯಗಳು, ಪ್ರೀತಿಯ ಪತಿ ಮತ್ತು ತಂದೆ. ನನಗೆ ಗೊತ್ತು ಈ ಬಾರಿ ನಾನು ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆಯನ್ನ ನೀಡಿದ್ದೇನೆ ಎಂದು ಪ್ರೇರಣಾ ಸಾಮಾಜಿಕ ಜಾಲತಾಣದಲ್ಲಿ ಲವ್ಲಿ ವಿಶ್ ಜೊತೆ ರೊಮ್ಯಾಂಟಿಕ್ ಫೋಟೋ ಪೋಸ್ಟ್ ಮಾಡಿದ್ದಾರೆ. ಪ್ರೇರಣಾ ಪೋಸ್ಟ್ ಪತಿ ಧ್ರುವ ಕೂಡ, ಮಗಳ ಆಗಮನ ʻಬೆಸ್ಟ್ ಗಿಫ್ಟ್ʼ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ನೆಚ್ಚಿನ ನಟನಿಗೆ ಅಭಿಮಾನಿಗಳ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

     

    View this post on Instagram

     

    A post shared by Dhruva Sarja (@dhruva_sarjaa)

    ಇನ್ನೂ ಧ್ರುವ ಹುಟ್ಟುಹಬ್ಬದಂದು ಧ್ರುವ ಸರ್ಜಾ ನಟನೆಯ `ಮಾರ್ಟಿನ್'(Martin Film) ಚಿತ್ರದ ಸ್ಪೆಷಲ್ ಪೋಸ್ಟ್‌ ಅನ್ನು ಚಿತ್ರತಂಡ ರಿಲೀಸ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಹಾರೈಸಿದೆ. ಧ್ರುವ ಗನ್ ಹಿಡಿದು ರಾ ಲುಕ್‌ನಲ್ಲಿ ರಗಡ್ ಆಗಿ ಮಿಂಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಆಗಮನದ ಖುಷಿಯಲ್ಲಿ ಮೇಘನಾ ರಾಜ್

    ಮಗಳ ಆಗಮನದ ಖುಷಿಯಲ್ಲಿ ಮೇಘನಾ ರಾಜ್

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಪ್ರೇರಣಾ ಧ್ರುವ ಸರ್ಜಾ(Prerana sarja) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಆಗಮನದ ಖುಷಿಯಲ್ಲಿರುವ ಮೇಘನಾ ರಾಜ್ ಮುದ್ದು ಮಗಳ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಮನೆಯಲ್ಲಿ ಆಗಲೇ ಮಗನಿದ್ದಾನೆ. ಮಗಳು ಬಂದಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ.

    ಗಾಂಧಿ ಜಯಂತಿ ದಿನ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿರುವ ಪ್ರೇರಣಾನ ನೋಡಲು ಮೇಘನಾ ರಾಜ್ (Meghana Raj) ಕೆ.ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಂಗಿ ಮತ್ತು ಮಗಳನ್ನು ನೋಡಲು ಬಂದಿರುವ ಮೇಘನಾ, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಮನೆಯವರೆಲ್ಲಾ ಇದ್ದಾರೆ. ಮಗನಾಗಿ ರಾಯನ್ (Rayan)  ಆಗಲೇ ಇದ್ದಾನೆ ಮಗಳು ಬಂದಿರುವುದಕ್ಕೆ ಖುಷಿ ಇದೆ ಎಂದು ಮೇಘನಾ ರಾಜ್ ಈ ವೇಳೆ ಮಾತನಾಡಿದ್ದಾರೆ. ಇದನ್ನೂ ಓದಿ:ಯುವ ರಾಜ್‌ಕುಮಾರ್ ಸಿನಿಮಾದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ

    ಮನೆಗೆ ಹೆಣ್ಣು ಮಗು ಬೇಕು ಎಂಬುದು ಧ್ರುವಾ ಆಸೆಯಾಗಿತ್ತು. ಅದರಂತೆಯೇ ಮಗಳ ಆಗಮನವಾಗಿರುವುದು ಧ್ರುವಗೆ ಖುಷಿ ಕೊಟ್ಟಿದೆ. ಧ್ರುವ ತುಂಬಾ ಖುಷಿಯಲ್ಲಿ ತೇಲುತ್ತಿದ್ದಾರೆ ಎಂದು ಈ ವೇಳೆ ಮೇಘನಾ ರಾಜ್ ಕೂಡ ಖುಷಿಯ ಕ್ಷಣವನ್ನ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • BREAKING: ಹೆಣ್ಣು ಮಗುವಿಗೆ ತಂದೆಯಾದ ಧ್ರುವ ಸರ್ಜಾ

    BREAKING: ಹೆಣ್ಣು ಮಗುವಿಗೆ ತಂದೆಯಾದ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ (Dhruva Sarja) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೆಣ್ಣು ಮಗುವಿಗೆ ಧ್ರುವ ಸರ್ಜಾ ತಂದೆಯಾಗಿದ್ದಾರೆ.

    ನಟ ಧ್ರುವ ಸರ್ಜಾ ಮನೆಯಲ್ಲಿ ಸಂತಸ ಮನೆ ಮಾಡಿದೆ. ಧ್ರುವ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬನಶಂಕರಿಯ ಅಕ್ಷ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ವಿನೋದ್ ಗೊಬ್ಬರಗಾಲ ಅವರ ಮೊದಲ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ

    ಈ ಶುಭ ಸುದ್ದಿಯನ್ನ ಇನ್ಸ್ಟಾಗ್ರಾಂ ಖಾತೆಯ ಮೂಲಕ ಧ್ರುವ ಸರ್ಜಾ ತಿಳಿಸಿದ್ದಾರೆ. ಧ್ರುವ ಸರ್ಜಾ ಅವರ ಆಸೆಯಂತೆ ಪುಟ್ಟ ಮಗಳ ಎಂಟ್ರಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva sarja) ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಣ್ಣ ಚಿರು ಮತ್ತು ಅಜ್ಜಿಯ ಸಾವಿನ ಶಾಕ್ ನಂತರ ಮತ್ತೆ ಚಿತ್ರಗಳಲ್ಲಿ ಆಕ್ಟೀವ್ ಆಗಿದ್ದಾರೆ. `ಮಾರ್ಟಿನ್’ (Martin) ಸಿನಿಮಾ ಮುಗಿಯುತ್ತಿದ್ದಂತೆ ಸ್ಟಾರ್ ಡೈರೆಕ್ಟರ್ ಪ್ರೇಮ್ ಜೊತೆ ಸಿನಿಮಾ ಮಾಡೋಕೆ ಧ್ರುವ ರೆಡಿಯಾಗಿದ್ದಾರೆ. ಇದರ ಜೊತೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಅಂದ್ರೆ ಪ್ರಿನ್ಸ್ ಮುಂದೆ ಅಬ್ಬರಿಸಲು ಅಧೀರ ಸಂಜಯ್ ದತ್ (Sanjay dutt) ಎಂಟ್ರಿ ಕೊಡ್ತಿದ್ದಾರೆ.

    ಚಿರು ಮತ್ತು ಅಜ್ಜಿಯ ಸಾವಿನ ನಂತರ ಧ್ರುವಾ ಕೊಂಚ ಸೈಲೆಂಟ್ ಆಗಿದ್ದಾರೆ. ನೋವಿನ ನಡುವೆ ಇದೀಗ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ `ಮಾರ್ಟಿನ್’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರ ಮುಗಿಯುತ್ತಿದ್ದಂತೆ, ನಿರ್ದೇಶಕ ಪ್ರೇಮ್ ಜೊತೆ ಧ್ರುವ ಕೈ ಜೋಡಿಸಲಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಚಿತ್ರದಲ್ಲಿ ಧ್ರುವ ಸರ್ಜಾಗೆ ಟಕ್ಕರ್ ಕೊಡಲು ಸಂಜಯ್ ದತ್ ಸಜ್ಜಾಗಿದ್ದಾರೆ. ಇದನ್ನೂ ಓದಿ:ನಿನ್ನ ತಲೆಯ ಮೇಲೆ ತೆಂಗಿನಕಾಯಿ ಒಡೆದು ಬಿಗ್ ಬಾಸ್ ಮನೆಯಿಂದ ಹೋಗ್ತೀನಿ: ಸೋನುಗೆ ಗುರೂಜಿ ವಾರ್ನಿಂಗ್

    ಇತ್ತೀಚೆಗಷ್ಟೇ ಮುಂಬೈನಲ್ಲಿ ಸಂಜಯ್ ದತ್ ಅವರನ್ನ ನಿರ್ದೇಶಕ ಪ್ರೇಮ್ (Prem) ಭೇಟಿ ಮಾಡಿದ್ದಾರೆ. ಚಿತ್ರದ ಸ್ಟೋರಿ ಲೈನ್ ಕೇಳಿ, ಅಧೀರ ಫುಲ್ ಥ್ರಿಲ್ ಆಗಿ ಕಥೆಗೆ ಓಕೆ ಮಾಡಿದ್ದಾರೆ. `ಕೆಜಿಎಫ್ 2′ ಅಧೀರ ಪಾತ್ರದ ಸಕ್ಸಸ್ ನಂತರ ಹೆಚ್ಚೆಚ್ಚು ದಕ್ಷಿಣದ ಸಿನಿಮಾಗಳಲ್ಲೂ ನಟಿಸಲು ಸಂಜಯ್ ದತ್‌ಗೆ ಬುಲಾವ್ ಬರುತ್ತಿದೆ. ಪ್ರೇಮ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ.

    ʻಕೆವಿಎನ್‌ʼ ಪ್ರೊಡಕ್ಷನ್ ನಿರ್ಮಾಣದ 1970ರ ಕಾಲಘಟ್ಟದ ಕಥೆಯಲ್ಲಿ ಧ್ರುವ ಮತ್ತು ಸಂಜಯ್ ದತ್ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಇಂದು ಸೀಮಂತ ಕಾರ್ಯ : ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮ

    ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಇಂದು ಸೀಮಂತ ಕಾರ್ಯ : ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮ

    ಟ ಧ್ರುವ ಸರ್ಜಾ ಬಾಳಿನಲ್ಲಿ ಸಂಭ್ರಮ ತಂದಿದ್ದಾರೆ ಪತ್ನಿ ಪ್ರೇರಣಾ. ಸಹೋದರ ಚಿರುವನ್ನು ಕಳೆದುಕೊಂಡು ದುಃಖದಲ್ಲಿದ್ದ ಧ್ರುವ ಮತ್ತು ಸರ್ಜಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿದ್ದು, ಇಂದು ಪ್ರೇರಣಾ ಅವರಿಗೆ ಸೀಮಂತ ಕಾರ್ಯ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಸರ್ಜಾ ಕುಟುಂಬದ ಬಹುತೇಕರು ಹಾಜರಿದ್ದರು. ಮತ್ತು ಪ್ರೇರಣಾ ಕುಟುಂಬವೂ ಭಾಗಿ ಆಗಿತ್ತು.

    ಮೊನ್ನೆಯಷ್ಟೇ ಅಭಿಮಾನಿಗಳ ಜೊತೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದ ಧ್ರುವ ಸರ್ಜಾ, ಪುಟ್ಟ ಕಂದಮ್ಮನಿಗಾಗಿ ಹಾರೈಸಿ ಎಂದು ಮನವಿ ಮಾಡಿದ್ದರು. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ನಿಯ ಸೀಮಂತ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿರು ಅನುಪಸ್ಥಿತಿಯನ್ನೂ ನೆನೆದು ಬೇಸರಿಸಿಕೊಂಡಿದ್ದಾರೆ. ಚಿರುವನ್ನು ಬಿಟ್ಟು ಯಾವುದೇ ಕಾರ್ಯಕ್ರಮವನ್ನು ಮಾಡಿಕೊಂಡವರಲ್ಲ ಧ್ರುವ. ಹಾಗಾಗಿ ಸೀಮಂತ ಕಾರ್ಯದಲ್ಲಿ ಅಣ್ಣ ಇರಬೇಕಿತ್ತು ಎನ್ನುವುದು ಸಹಜ. ಇದನ್ನೂ ಓದಿ:ʻಬಿಗ್ ಬಾಸ್ʼ ಕನ್ನಡ ಸೀಸನ್ 9ಕ್ಕೆ ಕೌಂಟ್ ಡೌನ್ ಶುರು

    ಈಗಾಗಲೇ ಸರ್ಜಾ ಕುಟುಂಬದಲ್ಲಿ ಚಿರು ಪುತ್ರ ರಾಯನ್ ಲವಲವಿಕೆಗೆ ತಂದಿದ್ದು, ಇದೀಗ ಧ್ರುವ ಸರ್ಜಾ ಮಗು ಕೂಡ ಜೊತೆಯಾಗಲಿದೆ. ಎರಡೂ ಕಂದಮ್ಮಗಳು ಚಿರುವಿನ ನೋವನ್ನು ಸರ್ಜಾ ಕುಟುಂಬಕ್ಕೆ ಮರೆಸಲಿವೆ. ಸೀಮಂತ ಕಾರ್ಯದಲ್ಲಿ ಸಿನಿಮಾ ಉದ್ಯಮದ ಆಪ್ತರು, ಮೇಘನಾ, ಪ್ರೇರಣಾ ಹಾಗೂ ಸರ್ಜಾ ಕುಟುಂಬ ಸದಸ್ಯರು ಹಾಜರಿದ್ದು, ಪ್ರೇರಣಾಗೆ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ

    ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ

    ದಯ್ ಕೆ.ಮೆಹ್ತಾ ನಿರ್ಮಿಸುತ್ತಿರುವ, ಎ.ಪಿ.ಅರ್ಜುನ್ ಹಾಗೂ ಧ್ರುವಸರ್ಜಾ ಕಾಂಬಿನೇಶನ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ದ್ವಿತೀಯ ಚಿತ್ರ ಮಾರ್ಟಿನ್ ಬಿಡುಗಡೆಯ ದಿನಾಂಕ ಈಗ ಮುಂದಕ್ಕೆ ಹೋಗಿದೆ. ಈ ಹಿಂದೆ ಚಿತ್ರವನ್ನು ಸೆ.30ಕ್ಕೆ ರಿಲೀಸ್ ಮಾಡುವುದೆಂದು ನಿರ್ಧಾರವಾಗಿತ್ತು. ಅದಕ್ಕೆ ಎಲ್ಲಾ ರೀತಿಯ ಸಿದ್ದತೆಯೂ ನಡೆದಿತ್ತು, ಆದರೆ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.

    ಅರ್ಜುನ್ ಸರ್ಜಾ ಅವರ ತಾಯಿ ಹಾಗೂ ಧ್ರುವಸರ್ಜಾ ಅವರ ಅಜ್ಜಿಯೂ ಆದ ಲಕ್ಷ್ಮಿದೇವಮ್ಮ ಅವರು ನಿಧನಕ್ಕೂ ಮುನ್ನ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಸಮಯದಲ್ಲಿ ಆತಂಕದಲ್ಲಿದ್ದ ಧ್ರುವಸರ್ಜಾ ಬಾಕಿಯಿದ್ದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ, 10-12 ದಿನಗಳ ಕಾಲ ಶೂಟ್ ಮಾಡಬೇಕಿದ್ದ ಆ ಭಾಗವನ್ನು ಸದ್ಯದಲ್ಲೇ ಚಿತ್ರೀಕರಿಸಲು ತಂಡ ಸಿದ್ದತೆ ಮಾಡಿಕೊಂಡಿದೆ. ಅಲ್ಲದೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸ್ವಲ್ಪ ಬಾಕಿ ಇರುವುದರಿಂದ ಅಂದುಕೊಂಡ ದಿನಾಂಕದಲ್ಲಿ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ, ಸದ್ಯದಲ್ಲೇ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ನಿರ್ದೇಶಕ ಎಪಿ ಅರ್ಜುನ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಕ್ಯಾರೆ ಅನಬಾರದು ಎಂದು ಟಾಂಗ್ ಕೊಟ್ಟ ನಟಿ ಕರಿಷ್ಮಾ

    ಅದ್ಧೂರಿ ಚಿತ್ರದ ನಂತರ ಧ್ರುವ ಸರ್ಜಾ ಮತ್ತೊಮ್ಮೆ ಅದೇ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಚಿತ್ರ ಇದಾಗಿದ್ದು, ಪೊಗರು ಯಶಸ್ಸಿನ ಬಳಿಕ  ತೆರೆಗೆ ಬರುತ್ತಿರುವ ಈ ಚಿತ್ರದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡಮಟ್ಟದ ನಿರೀಕ್ಷೆಯಿದೆ. ಸ್ಯಾಂಡಲ್ವುಡ್‌ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಎನಿಸಿಕೊಂಡಿರುವ ಮಾರ್ಟಿನ್ ಚಿತ್ರದಲ್ಲಿ ಧ್ರುವಸರ್ಜಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಚಿತ್ರೀಕರಣವನ್ನು ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ನಡೆಸಲಾಗಿದೆ.

    ಉದಯ್ ಕೆ. ಮೆಹ್ತಾ ಅವರ ಬ್ಯಾನರ್ ನಲ್ಲೇ ದೊಡ್ಡ ಬಜೆಟ್  ಚಿತ್ರವಾಗಿ  ಮಾರ್ಟಿನ್ ಹೊರಬರುತ್ತಿದ್ದು, ಈ ಚಿತ್ರದಲ್ಲಿ ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಧ್ರುವಸರ್ಜಾಗೆ ಜೋಡಿಯಾಗಿ ಕಾಣಿಸಿ ಕೊಂಡಿದ್ದಾರೆ. ವಿಭಿನ್ನ ಪೋಸ್ಟರ್‌ನಿಂದಲೇ ಗಮನ ಸೆಳೆದಿರುವ ಮಾರ್ಟಿನ್ ಚಿತ್ರದ ಮೇಲೆಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಚಿತ್ರ ಯಾವಾಗ ಬರುತ್ತೋ ಅಂತ ಕಾಯ್ತಿದ್ದ ಅವರಿಗೆ ಕೊಂಚ ನಿರಾಸೆಯಾದರೂ ಪರಿಸ್ಥಿತಿಯನ್ನುಅರ್ಥಮಾಡಿಕೊಂಡು ಹೊಸ ರಿಲೀಸ್ ಡೇಟ್‌ಗಾಗಿ ಎದುರು ನೋಡುತ್ತಿದ್ದಾರೆ.

    ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು, ಇದರಜೊತೆಗೆ ಮಾತಿನಭಾಗ ಸೇರಿ ೧೬ ದಿನಗಳವರೆಗೆ ಕಾಶ್ಮೀರದಲ್ಲೇ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಅವರು ಹೊಸ ಮಾದರಿಯ ಮೇಕಿಂಗ್ ಟ್ರೈ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ  ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸತ್ಯಹೆಗಡೆ ಅವರ ಛಾಯಾಗ್ರಹಣ, ಮಹೇಶ್‌ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀದೇವಿ ನಿಧನ: ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ

    ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀದೇವಿ ನಿಧನ: ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ

    ನ್ನಡ ಸಿನಿಮಾ ರಂಗದ ಹಿರಿಯ ನಟ ಶಕ್ತಿ ಪ್ರಸಾದ್ ಪತ್ನಿ, ಖ್ಯಾತ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ, ಇಂದು ಮಧ್ಯಾಹ್ನ 12 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

    ಸರ್ಜಾ ಕುಟುಂಬದ ಬೆಳವಣಿಗೆಯಲ್ಲಿ ಲಕ್ಷ್ಮಿದೇವಿ ಅವರ ಪಾತ್ರದ ದೊಡ್ಡದು. ಪತಿಯು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದರೆ, ಮಕ್ಕಳನ್ನು ಬೆಳೆಸುವಲ್ಲಿ ಲಕ್ಷ್ಮಿದೇವಿ ಅವರೇ ಪ್ರಮುಖ ಪಾತ್ರ ವಹಿಸಿದವರು. ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳನ್ನು ಸಿನಿಮಾ ರಂಗದಲ್ಲೇ ಬೆಳೆಯುವಂತೆ ಮಾಡಿದ್ದರು. ಕಿಶೋರ್ ಸರ್ಜಾ ಮತ್ತು ಅರ್ಜುನ್ ಸರ್ಜಾ ಹಾಗೂ ಚಿರು ಸರ್ಜಾ ಅವರ ತಾಯಿ ಅಮ್ಮಾಜಿ ಇವರ ಮೂವರು ಮಕ್ಕಳು. ಮುಂದೆ ಮೊಮ್ಮಕ್ಕಳು ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ಅವರನ್ನು ಪ್ರೋತ್ಸಾಹಿಸಿದವರು.ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ಕಳೆದ ವರ್ಷವಷ್ಟೇ ಸರ್ಜಾ ಕುಟುಂಬ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದೆ. ಈಗ ಕುಟುಂಬದ ಹಿರಿಯ ಜೀವವನ್ನು ಕಳೆದುಕೊಂಡಿದೆ. ಅರ್ಜುನ್ ಸರ್ಜಾ ಸದ್ಯ ಬೆಂಗಳೂರಿನಲ್ಲೇ ಇದ್ದಾರೆ ಎಂಬ ಮಾಹಿತಿ ಇದೆ. ಧ್ರುವ ಸರ್ಜಾ ಶೂಟಿಂಗ್ ಗಾಗಿ ಹೈದರಾಬಾದ್ ಗೆ ತೆರಳಿದ್ದರು. ಅಲ್ಲಿಂದ ಈಗ ಹೊರಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • `ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ

    `ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ

    ಸ್ಯಾಂಡಲ್‌ವುಡ್‌ನ `ಪೊಗರು’ ಹೀರೋ ಧ್ರುವಾ ಸರ್ಜಾ ಸದ್ಯ `ಮಾರ್ಟಿನ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಎ.ಪಿ ಅರ್ಜುನ್ ಜತೆ ಆ್ಯಕ್ಷನ್ ಸಿಕ್ವೇನ್ಸ್ ಚಿತ್ರೀಕರಣಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

    ಎ.ಪಿ ಅರ್ಜುನ್ ನಿರ್ದೇಶನದ `ಅದ್ದೂರಿ’ ಚಿತ್ರದ ಮೂಲಕ ಧ್ರುವಾ ಸರ್ಜಾ ಎಂಟ್ರಿ ಕೊಟ್ಟಿದ್ದರು. ಮೊದಲ ಚಿತ್ರದಲ್ಲೇ ಭರ್ಜರಿ ಸಕ್ಸಸ್ ಕಂಡು ಗಾಂಧಿನಗರದ ಆ್ಯಕ್ಷನ್ ಪ್ರಿನ್ಸ್ ಆಗಿ ರಾರಾಜಿಸುತ್ತಿದ್ದಾರೆ. `ಪೊಗರು’ ಸೂಪರ್ ಹಿಟ್ ನಂತರ ಈಗ ಎ.ಪಿ ಜತೆ ಮತ್ತೆ ಧ್ರುವಾ ಸರ್ಜಾ ಕೈ ಜೋಡಿದ್ದಾರೆ. ಇದನ್ನೂ ಓದಿ:71,000 ರೂ. ಸೀರೆಯುಟ್ಟು ಬಂದ ಹನ್ಸಿಕಾ ಮೋಟ್ವಾನಿ

    ಮಾರ್ಟಿನ್‌ಗಾಗಿ ಒಂದಾಗಿರುವ ಧ್ರುವಾ ಮತ್ತು ಎ.ಪಿ ಅರ್ಜುನ್ ಸದ್ಯ ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣಕ್ಕೆ ಬಂದು ತಲುಪಿದೆ. ಸೆಪ್ಟೆಂಬರ್ ೩೦ಕ್ಕೆ ತೆರೆಗೆ ಬರಲಿರುವ ಈ ಚಿತ್ರದ ಆ್ಯಕ್ಷನ್ ಸಿಕ್ವೇನ್ಸ್ ಮತ್ತು ಎರಡು ಹಾಡು ಬಾಕಿಯಿದೆ. ಸ್ಟಂಟ್ ಮಾಸ್ಟರ್ ರವಿ ವರ್ಮಾ ಸಾರಥ್ಯದಲ್ಲಿ ಆ್ಯಕ್ಷನ್ ಸೀನ್ಸ್ ಮೂಡಿಬರಲಿದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಜತೆಗೆ ಜನಪ್ರಿಯ ಸ್ಟಂಟ್ ಮಾಸ್ಟರ್ಸ್‌ ರಾಮ ಲಕ್ಷ್ಮಣ   ಕೂಡ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ.

    ಧೃವಾ ಸರ್ಜಾಗೆ ನಾಯಕಿಯಾಗಿ ವೈಭವಿ ಕಾಣಿಸಿಕೊಂಡಿದ್ದು, ಬಾಲಿವುಡ್ ನಟ ನಿಕಿತ್, ಅನ್‌ವೇಷಿ ಜೈನ್ ಕೂಡ ಸಾಥ್ ನೀಡಿದ್ದಾರೆ. ಸದ್ಯದಲ್ಲೇ ಬಹುಭಾಷೆಗಳಲ್ಲಿ ಉದಯ್ ಕೆ ಮೆಹ್ತಾ ನಿರ್ಮಾಣದ `ಮಾರ್ಟಿನ್’ ಚಿತ್ರ ತೆರೆಗೆ ಅಬ್ಬರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾಗೆ ಈವರೆಗೂ ಖರ್ಚಾಗಿದ್ದು ಬರೋಬ್ಬರಿ 60 ಕೋಟಿ?

    ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾಗೆ ಈವರೆಗೂ ಖರ್ಚಾಗಿದ್ದು ಬರೋಬ್ಬರಿ 60 ಕೋಟಿ?

    ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ನಾನಾ ವಿಚಾರಗಳಿಂದಾಗಿ ಸಖತ್ ಸದ್ದು ಮಾಡುತ್ತಿದೆ. ಅಲ್ಲದೇ ಈ ಸಿನಿಮಾದ ಕುರಿತು ಸಾಕಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಈ ಚಿತ್ರದಲ್ಲಿದೆ. ಪೊಗರು ನಂತರ ಧ್ರುವ ಮಾಗಿದ್ದ ಕಾರಣದಿಂದಾಗಿ ಅಳೆದು-ತೂಗಿ ಮಾರ್ಟಿನ್‌ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಆಕ್ಷನ್ ಪ್ರಿನ್ಸ್. ಅಲ್ಲದೇ, ಅನೇಕ ಸಂಗತಿಗಳ ಕುರಿತು ಬೆಳಕು ಚೆಲ್ಲಿ ಮಾರ್ಟಿನ್‌ಗೆ ಬಣ್ಣಹಚ್ಚಿದ್ದಾರೆ. ಈಗ ಮಾರ್ಟಿನ್ ಸಿನಿಮಾದ ಶೂಟಿಂಗ್ ಫೈನಲ್ ಹಂತಕ್ಕೆ ತಲುಪಿದ್ದು, ಮುಂದಿನ ವಾರದಿಂದ ಹೈದರಾಬಾದ್‌ನಲ್ಲಿ ಫೈನಲ್ ಶೆಡ್ಯೂಲ್ ಪ್ಲಾನ್ ಆಗಿದೆಯಂತೆ.

    ಮಾರ್ಟಿನ್ ಧ್ರುವ ವೃತ್ತಿ ಜೀವನದ ದುಬಾರಿ ಬಜೆಟ್ ಸಿನಿಮಾ. ಮಾರ್ಟಿನ್‌ಗಾಗಿ ಇಲ್ಲಿವರೆಗೆ ಸುಮಾರು ೬೦ ಕೋಟಿ ಖರ್ಚು ಮಾಡಿದ್ದಾರಂತೆ ನಿರ್ಮಾಪಕ ಉದಯ್ ಮೆಹ್ತಾ. ನಿರ್ದೇಶಕ ಎ.ಪಿ ಅರ್ಜುನ್ ಪ್ರತಿ ಫ್ರೇಮ್‌ ಅನ್ನೂ ಸಖತ್ ರಿಚ್ಚಾಗಿ ಶೂಟ್ ಮಾಡಿದ್ದಾರಂತೆ. ಒಂದೂವರೆ ನಿಮಿಷದ ಒಂದು ಕಾರ್ ಛೇಸಿಂಗ್ ದೃಶ್ಯವನ್ನು 9 ದಿನ ಶೂಟ್ ಮಾಡಿದ್ದಾರೆ ಅಂದ್ರೆ ಮಾರ್ಟಿನ್ ವಿಶ್ಯುವಲ್ಸ್‌ಗೆ ಎಷ್ಟು ಮಹತ್ವವಿದೆ ಎನ್ನುವುದು ಈ ಮೂಲಕ ಗೊತ್ತಾಗಲಿದೆ.

    ಸಿನಿಮಾದಲ್ಲಿ ಹತ್ತು ಹಲವು ವಿಶೇಷತೆಗಳಿದ್ದು ತೆಲುಗು, ತಮಿಳಿನ ಸಿನಿರಂಗದ ಖ್ಯಾತನಾಮರು ಮಾರ್ಟಿನ್‌ಗಾಗಿ  ಬಣ್ಣ ಹಚ್ಚಲಿದ್ದಾರೆ ಅನ್ನುವುದು ಸದ್ಯದ ಅಪ್‌ಡೇಟ್. ಎಲ್ಲಾ ಭಾಷೆಯ ಎಲ್ಲಾ ವರ್ಗದ ಜನರು ಮಾರ್ಟಿನ್ ಮೆಚ್ಚಲಿದ್ದಾರೆ ಅನ್ನೊದು ಚಿತ್ರತಂಡ ನಂಬಿಕೆ. ಮಾರ್ಟಿನ್ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡದ ಮತ್ತೊಂದು ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆಯಲಿದೆ ಎನ್ನುವ ನಂಬಿಕೆ ಚಿತ್ರತಂಡದ್ದು. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಈವರೆಗೂ ಮಾರ್ಟಿನ್ ಮೋಷನ್ ಪೋಸ್ಟರ್ ಬಿಟ್ಟು ಬೇರೆನೂ ರಿವಿಲ್ ಮಾಡಿಲ್ಲ ಚಿತ್ರತಂಡ. ಫೈನಲ್ ಕಾಪಿ ಕೈಗೆ ಬರೋವರೆಗೆ ಏನೂ ರಿವಿಲ್ ಮಾಡೋದು ಬೇಡ ಅಂತ ಫಿಲಂ ಟೀಮ್ ತಿರ್ಮಾನ ಮಾಡಿದೆಯಂತೆ. ಈ ಸಿನಿಮಾದಲ್ಲಿ ಧ್ರುವ ಡಬಲ್ ರೋಲ್‌ನಲ್ಲಿ ಕಾಣಿಸಿದ್ದಾರೆ ಎನ್ನುವ ಸುದ್ದಿಯೂ ಆದೆ. ಆದ್ರೆ ಈ ಪ್ರಶ್ನೆಗೆ ಚಿತ್ರತಂಡದ ಸದಸ್ಯರು ಇನ್ನೂ ಸ್ವಲ್ಪ ದಿನ ಕಾದು ನೋಡಿ ಅಂತಿದ್ದಾರೆ. ಒಟ್ಟಾರೆ ಇದುವರೆಗೆ ಈ ಸಿನಿಮಾಗೆ ೬೦ ಕೋಟಿ ಖರ್ಚಾಗಿದ್ದು, ೧೦ ಫೈಟ್‌ಗಳಿಂದ ಈ ಚಿತ್ರ ಕೂಡಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ.

    Live Tv
    [brid partner=56869869 player=32851 video=960834 autoplay=true]

  • ಹೇಗಿದ್ದೀರಾ, ಚೆನ್ನಾಗಿದ್ದೀರಾ? ಎಂದು ಕೇಳುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ : ಧ್ರುವ ಸರ್ಜಾ

    ಹೇಗಿದ್ದೀರಾ, ಚೆನ್ನಾಗಿದ್ದೀರಾ? ಎಂದು ಕೇಳುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ : ಧ್ರುವ ಸರ್ಜಾ

    ಚಿರಂಜೀವಿ ಸರ್ಜಾ ಅಗಲಿ ಎರಡು ವರ್ಷಗಳು ಕಳೆದಿರುವ ಈ ಸಂದರ್ಭದಲ್ಲಿ ಎರಡನೇ ವರ್ಷದ ಕಾರ್ಯವನ್ನು ಇಂದು ಅವರ ಕುಟುಂಬ ಚಿರು ಸಮಾಧಿಗೆ ಪೂಜೆ ಸಲ್ಲಿಸುವುದರ ಮೂಲಕ ನೆರವೇರಿಸಿದೆ.  ಪೂಜಾ ವಿಧಿವಿಧಾನದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಚಿರು ಸಹೋದರ, ನಟ ಧ್ರುವ ಸರ್ಜಾ, ಸಹೋದರನೊಂದಿಗಿನ ನೆನಪುಗಳನ್ನು ಹಂಚಿಕೊಂಡರು.

    ಚಿರು ಅಗಲಿ ಎರಡು ವರ್ಷ ಆದರೂ, ನಾವೆಲ್ಲರೂ ಅವನ ನೆನಪಿನಲ್ಲೇ ಸಾಗುತ್ತಿದ್ದೇವೆ. ಯಾರಾದರು ಎದುರಿಗೆ ಸಿಕ್ಕಾಗ ಚೆನ್ನಾಗಿದ್ದೀರಾ..? ಹೇಗಿದ್ದೀರಾ ಅನ್ನುವ ಮಾತುಗಳನ್ನೇ ಆಡುವುದನ್ನು ನಿಲ್ಲಿಸಿಬಿಟ್ಟಿದ್ದೆ. ಅಷ್ಟರ ಮಟ್ಟಿಗೆ ಅಣ್ಣನ ಸಾವು ನನ್ನನ್ನು ಕಾಡಿತ್ತು. ಈಗ ದಿನದಿಂದ ದಿನಕ್ಕೆ ಅವನ ನೆನಪುಗಳು ಜಾಸ್ತಿ ಆಗುತ್ತಿವೆ. ಯಾಕೆಂದರೆ, ನಾನು ತಂದೆ-ತಾಯಿಗಿಂತ ಅಣ್ಣನ ಜೊತೆಯಲ್ಲಿ ಹೆಚ್ಚು ಸಮಯ ಕಳೆದಿದ್ದೇನೆ. ರಾಯನ್ ನೋಡಿದಾಗ ಅಣ್ಣ ಇದ್ದಿದ್ರೆ ಅವನನ್ನು ಇನ್ನೂ ಹೆಚ್ಚಾಗಿ ಮೆರೆಸ್ತಿದ್ದ ಅನಿಸುತ್ತದೆ” ಎಂದು ಸಹೋದರನ ಜೊತೆಗಿನ ಒಡನಾಟ ಹಂಚಿಕೊಂಡರು. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

    ಸದ್ಯ ಧ್ರುವ ಸರ್ಜಾ ಅವರು ಸಹೋದರ ಚಿರು ನಟಿಸಿರುವ ಕೊನೆಯ ಸಿನಿಮಾ ರಾಜ ಮಾರ್ತಾಂಡ ಸಿನಿಮಾದ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದಾರಂತೆ. ಈ ಕುರಿತು ಅವರು ಮಾತನಾಡಿ, ‘ಸದ್ಯ ನಾನು ರಾಜಮಾರ್ತಾಂಡ ಸಿನಿಮಾಗೆ ಡಬ್ಬಿಂಗ್ ಮಾಡ್ತಿದ್ದೀನಿ. ಅವನು ಹೇಳಿದ ಆ ಡೈಲಾಗ್‌ಗಳನ್ನು ಹೇಳ್ಬೇಕಾದ್ರೆ ಬಹಳ ಕಷ್ಟವಾಗುತ್ತದೆ. ಈಗ ಆ ವಿಡಿಯೋ ನೋಡಿದ್ರು ಬಹಳ ದುಃಖ ಆಗುತ್ತದೆ. ಚಿರುನ ವರ್ಣನೆ ಮಾಡೋಕ್ಕೆ ಕಷ್ಟ ಆಗುತ್ತಿದೆ’ ಎಂದು ಭಾವುಕರಾಗಿ ಮಾತನಾಡಿದರು.