Tag: dhruva sarja

  • ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ಏಪ್ರಿಲ್ ನಲ್ಲಿ ರಿಲೀಸ್

    ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ಏಪ್ರಿಲ್ ನಲ್ಲಿ ರಿಲೀಸ್

    ಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿದ ನಟ ಚಿರಂಜೀವಿ ಸರ್ಜಾ (Chiranjeevi Sarja) ಚಿಕ್ಕ ವಯಸ್ಸಿನಲ್ಲೇ ವಿಧಿವಶರಾಗಿದ್ದು ನೋವಿನ ಸಂಗತಿ.  ‘ರಾಜಮಾರ್ತಂಡ’ (Rajamarthanda) ಚಿತ್ರದಲ್ಲಿ ಚಿರು ನಾಯಕರಾಗಿ ಅಭಿನಯಿಸಿದ್ದರು. ಚಿತ್ರೀಕರಣ ಕೂಡ ಮುಕ್ತಾಯವಾಗಿತ್ತು. ಡಬ್ಬಿಂಗ್ ಮುಗಿಸಬೇಕಿತ್ತು ಅಷ್ಟರಲ್ಲಿ ಯಾರು ನಿರೀಕ್ಷಿಸದ ಘಟನೆ ನಡೆದುಹೋಯಿತು.

    ಆನಂತರ ಈ ಚಿತ್ರವನ್ನು ಪೂರ್ಣ ಮಾಡಲು ಸಹಕಾರ ನೀಡಿದ್ದು ಮೇಘನಾರಾಜ್  (Meghana Raj), ಧ್ರುವ ಸರ್ಜಾ ಹಾಗೂ ಕುಟುಂಬದವರು. ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ (Dhruva Sarja) ಅವರೆ ಡಬ್ಬಿಂಗ್ ಮಾಡಿದರು. ಡಬ್ಬಿಂಗ್ ವೇಳೆ ಅಣ್ಣನ ನೆನೆದು ಧ್ರುವ ಭಾವುಕರಾಗುತ್ತಿದ್ದರು. ಇದನ್ನೂ ಓದಿ: ಅಪ್ಪು ಹೆಸರಿನಲ್ಲಿ ಅಂಬುಲೆನ್ಸ್ ವಿತರಣೆ: ನುಡಿದಂತೆ ನಡೆದುಕೊಂಡ ಯಶ್, ಪ್ರಕಾಶ್ ರಾಜ್

    ಈಗ ಸದ್ಯ ಚಿತ್ರಕ್ಕೆ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ‌.  ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರ ಬಿಡುಗಡೆ ವೇಳೆ ಮೇಘನರಾಜ್, ಧ್ರುವ ಸರ್ಜಾ, ಸುಂದರರಾಜ್ ಹಾಗೂ ಕನ್ನಡದ ಅನೇಕ ಹೆಸರಾಂತ ನಟರು ಚಿತ್ರತಂಡದೊಂದಿಗೆ ಇರುವುದಾಗಿ ಹೇಳಿದ್ದಾರೆ.

    ಈ ಹಿಂದೆ ಶಂಕರ್ ನಾಗ್ ಅವರ ಪಾತ್ರಕ್ಕೆ ಅನಂತನಾಗ್ ಅವರು, ಪುನೀತ್ ರಾಜಕುಮಾರ್ ಅವರ ಪಾತ್ರಕ್ಕೆ ಶಿವರಾಜಕುಮಾರ್ ಅವರು, ಈಗ ‘ರಾಜಮಾರ್ತಂಡ’ ಚಿತ್ರದ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಧ್ರುವ ಸರ್ಜಾ ಅವರು ಧ್ವನಿ ನೀಡಿದ್ದಾರೆ. ಈ ಸಹೋದರರ ಪ್ರೀತಿಯ ಬಗ್ಗೆ ಎಷ್ಟು ಹೇಳಿದರು ಕಡಿಮೆ ಎನ್ನುತ್ತಾರೆ ರಾಜಮಾರ್ತಾಂಡ ಚಿತ್ರದ ನಿರ್ಮಾಪಕ ಶಿವಕುಮಾರ್ ಹಾಗೂ ನಿರ್ದೇಶಕ ಕೆ. ರಾಮನಾರಾಯಣ್ (Ram Narayan).

    ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚತ್ರಕ್ಕಿದೆ. ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • KD Film: ಮತ್ತೆ ಕನ್ನಡಕ್ಕೆ ರಾಯಲ್ ಆಗಿ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ

    KD Film: ಮತ್ತೆ ಕನ್ನಡಕ್ಕೆ ರಾಯಲ್ ಆಗಿ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ

    ಬಾಲಿವುಡ್ (Bollywood) ಬ್ಯೂಟಿ ಕನ್ನಡತಿ ಶಿಲ್ಪಾ ಶೆಟ್ಟಿ (Shilpa Shetty) ಸತ್ಯವತಿಯಾಗಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. `ಕೆಡಿ’ (KD Film) ಧ್ರುವ ಜೊತೆ ಶಿಲ್ಪಾ ಶೆಟ್ಟಿ ಭಿನ್ನ ಪಾತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ರಾಯಲ್‌ ಲುಕ್‌ನಲ್ಲಿ ಮಿಂಚಿದ್ದಾರೆ.

    ಡೈರೆಕ್ಟರ್ ಪ್ರೇಮ್ (Prem) ತಮ್ಮ ಪ್ರತಿ ಸಿನಿಮಾದಲ್ಲಿಯೂ ಹೊಸ ಕಾನ್ಸೆಪ್ಟ್ ಮೂಲಕ ಬರುತ್ತಾರೆ. ಈಗ ಧ್ರುವಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸೌಂಡ್ ಮಾಡ್ತಿದ್ದಾರೆ. ಈಗಾಗಲೇ `ಕೆಜಿಎಫ್ 2′ ಅಧೀರ ಸಂಜಯ್ ದತ್ (Sanjay Dutt)ಎಂಟ್ರಿ ಕೊಟ್ಟ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಕೂಡ ಸದ್ದಿಲ್ಲದೇ ತಮ್ಮ ಭಾಗದ ಚಿತ್ರೀಕರಣ ಮಾಡಿ ಮುಗಿಸಿ ಕೊಟ್ಟಿದ್ದರು. ಇದನ್ನೂ ಓದಿ:`ಸಾಮಿ ಸಾಮಿ’ ಹಾಡಿಗೆ ಸ್ಟೆಪ್ ಹಾಕಿ ಎಂದ ಅಭಿಮಾನಿಗೆ ನೋ ಎಂದ ರಶ್ಮಿಕಾ ಮಂದಣ್ಣ

    ಇದೀಗ ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಪವರ್‌ಫುಲ್ ಸತ್ಯವತಿ ಪಾತ್ರದ (Sathyavathi) ಲುಕ್‌ನ ಚಿತ್ರತಂಡ ರಿವೀಲ್ ಮಾಡಿದ್ದಾರೆ. ಸತ್ಯವತಿಯಾಗಿ ಕರಾವಳಿ ನಟಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಶಿಲ್ಪಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಲುಕ್ ರಿವೀಲ್ ಆಗ್ತಿದ್ದಂತೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಶಿಲ್ಪಾ ಶೆಟ್ಟಿ 17 ವರ್ಷಗಳ ನಂತರ ಇದೀಗ `ಕೆಡಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರೀತ್ಸೋದ್ ತಪ್ಪಾ? ಆಟೋ ಶಂಕರ್, `ಒಂದಾಗೋಣ ಬಾ’ ಸಿನಿಮಾಗಳಲ್ಲಿ ನಟಿ ಅಭಿನಯಿಸಿದ್ದಾರೆ.

  • ಧ್ರುವ ಸರ್ಜಾ ಜೊತೆ ಸದ್ದಿಲ್ಲದೇ ನಟಿಸಿ ಹೋದ ಶಿಲ್ಪಾ ಶೆಟ್ಟಿ

    ಧ್ರುವ ಸರ್ಜಾ ಜೊತೆ ಸದ್ದಿಲ್ಲದೇ ನಟಿಸಿ ಹೋದ ಶಿಲ್ಪಾ ಶೆಟ್ಟಿ

    ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) 17 ವರ್ಷಗಳ ನಂತರ ಮತ್ತೆ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರೆ ಎಂದು ಸುದ್ದಿ ಆಗಿತ್ತು. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಇದೀಗ ಸದ್ದಿಲ್ಲದೇ ಶಿಲ್ಪಾ ಶೂಟಿಂಗ್ ಗೆ ಬಂದು ಹೋಗಿದ್ದಾರೆ. ಅವರ ಮೊದಲ ಹಂತದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.

    ಧ್ರುವ ಸರ್ಜಾ (Dhruva Sarja)  ನಟನೆಯ ‘ಕೆಡಿ’ (KD) ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಚಿತ್ರತಂಡ ಅಧಿಕೃತ ಮಾಹಿತಿಯನ್ನು ಕೊಡದೇ ಇದ್ದರೂ, ಶಿಲ್ಪಾ ವಾಪಸ್ಸು ಸ್ಯಾಂಡಲ್ ವುಡ್ ಗೆ ಬರುವ ವಿಚಾರವಂತೂ ನಿಜವಾಗಿತ್ತು. ಈಗದು ಪಕ್ಕಾ ಆಗಿದೆ. ಆಗಲೇ ಶಿಲ್ಪಾ ಶೆಟ್ಟಿ ತಮ್ಮ ಭಾಗದ, ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅವರು ಯಾವ ರೀತಿಯ ಪಾತ್ರವನ್ನು ಮಾಡಿದ್ದಾರೆ ಎನ್ನುವುದು ತಿಳಿಯಬೇಕಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಂಗೊಳಿಸಿದ ರಾಗಿಣಿ

    ಜೋಗಿ ಪ್ರೇಮ್ (Prem) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಾಲಿವುಡ್ ಮತ್ತೋರ್ವ ಹೆಸರಾಂತ ನಟ ಸಂಜಯ್ ದತ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಶೂಟಿಂಗ್ ನಲ್ಲಿ ಸಂಜಯ್ ಭಾಗಿಯಾಗಿದ್ದರು. ಆ ವಿಡಿಯೋವನ್ನು ಸ್ವತಃ ಚಿತ್ರತಂಡದವರೇ ಲೀಕ್ ಮಾಡಿದ್ದರು. ಆದರೆ, ಶಿಲ್ಪಾ ಕುರಿತಾದ ಯಾವುದೇ ಮಾಹಿತಿಯನ್ನು ನೀಡಿಲ್ಲ.

    ಈಗಾಗಲೇ ಕೆಡಿ ಸಿನಿಮಾದ ಮೂರು ಹಂತದ ಚಿತ್ರೀಕರಣವನ್ನು ಪ್ರೇಮ್ ಮುಗಿಸಿದ್ದಾರೆ. ಇದೊಂದು ಭಾರಿ ಬಜೆಟ್ ಸಿನಿಮಾವಾಗಿದ್ದರಿಂದ ಒಂದಷ್ಟು ಸೆಟ್ ಗಳನ್ನು ಹಾಕಲಾಗುತ್ತಿದೆ. ಅಲ್ಲದೇ, ಭಾರತೀಯ ಸಿನಿಮಾ ರಂಗದ ಹೆಸರಾಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಂಜಯ್ ದತ್ ನಂತರ ಶಿಲ್ಪಾ ಶೆಟ್ಟಿ ಹೆಸರು ಹೊರ ಬಿದ್ದಿತ್ತು. ಮತ್ತಷ್ಟು ಅಚ್ಚರಿಯ ಹೆಸರುಗಳು ಕೇಳಿ ಬರುತ್ತಿವೆ.

  • ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ಧ್ರುವ ಸರ್ಜಾ

    ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ (Sandalwood) ನಟ ಧ್ರುವ ಸರ್ಜಾ (Dhruva Sarja) ಅವರ ಮಗಳನ್ನ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮುದ್ದು ಮಗಳ ಫೋಟೋವನ್ನ ಮೊದಲ ಬಾರಿಗೆ ಧ್ರುವ ಹಂಚಿಕೊಳ್ಳುವ ಮೂಲಕ ಗುಡ್‌ ನ್ಯೂಸ್‌ ನೀಡಿದ್ದಾರೆ.

    ಧ್ರುವ ಸರ್ಜಾ (Dhruva Sarja) ಅವರು ಫ್ಯಾಮಿಲಿ ಮ್ಯಾನ್ (Family Man) ಎಂಬುದು ತಿಳಿದಿರುವ ವಿಚಾರ. ತಾವು ಎಷ್ಟೇ ಬ್ಯುಸಿಯಿದ್ದರು ಕೂಡ ಕುಟುಂಬಕ್ಕೆ ಆದ್ಯತೆ ಕೊಡುತ್ತಾರೆ. ಸದ್ಯ ಮುದ್ದು ಮಗಳ ಆಗಮನದಿಂದ ಖುಷಿಯಲ್ಲಿರುವ ಧ್ರುವ, ಮಗಳು ಜನಿಸಿ 6 ತಿಂಗಳ ಬಳಿಕ ಇದೀಗ ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Dhruva Sarja (@dhruva_sarjaa)

    ಮಗಳ ಕೈಗೆ ಮುತ್ತು ಕೊಡುತ್ತಿರುವ ಫೋಟೋ ಶೇರ್ ಮಾಡಿ ನನ್ನ ಮಗಳು, ಲವ್ ಯೂ ಮಗಳೇ ಎಂದು ಧ್ರುವ ಸರ್ಜಾ ಅಡುಬರಹ ನೀಡಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ಫ್ಯಾನ್ಸ್ ಮೆಚ್ಚುಗೆ ಸೂಚಿದ್ದಾರೆ. ಬೇಗ ಮಗಳ ಮುಖ ಫೋಟೋ ಶೇರ್ ಮಾಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ‌ʻಜೋಶ್ʼ ನಟಿ ಸ್ನೇಹಾ ಆಚಾರ್ಯ

    `ಮಾರ್ಟಿನ್’ (Martin Film) ಚಿತ್ರದ ಟೀಸರ್ ಮೂಲಕ ಧ್ರುವ ಸರ್ಜಾ ಸಂಚಲನ ಸೃಷ್ಟಿಸಿದ್ದಾರೆ. ಸಿನಿಮಾ ಸದ್ಯದಲ್ಲೇ ತೆರೆಗೆ ಅಬ್ಬರಿಸಲಿದೆ.

  • ‘KD’ ಅಡ್ಡಾದಲ್ಲಿ ಸಿಗ್ತಾರಂತೆ ಗುಳಿಕೆನ್ನೆ ಚೆಲುವೆ ಶಿಲ್ಪಾ ಶೆಟ್ಟಿ

    ‘KD’ ಅಡ್ಡಾದಲ್ಲಿ ಸಿಗ್ತಾರಂತೆ ಗುಳಿಕೆನ್ನೆ ಚೆಲುವೆ ಶಿಲ್ಪಾ ಶೆಟ್ಟಿ

    ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ರವಿಚಂದ್ರನ್ (Ravichandran) ನಟನೆಯ  ಪ್ರೀತ್ಸೋದು ತಪ್ಪಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ನಟಿ. ಮಂಗಳೂರು ಮೂಲದವರು. 1998ರಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾ ರಂಗಕ್ಕೆ ಬಂದರು. ಆನಂತರ ಮತ್ತೆ ರವಿಮಾಮ ಜೊತೆ ಒಂದಾಗೋಣ ಬಾ ಚಿತ್ರದಲ್ಲಿ ನಟಿಸಿದರು. 2005ರಲ್ಲಿ ಉಪೇಂದ್ರ ಜೊತೆ ಆಟೋ ಶಂಕರ್ ಚಿತ್ರದಲ್ಲಿ ನಟಿಸಿದರು. ಅಲ್ಲಿಂದ ಈವರೆಗೂ ಶಿಲ್ಪಾ ಮತ್ತೆ ಕನ್ನಡದತ್ತ ಮುಖ ಮಾಡಿಲ್ಲ.

    ಹದಿನೇಳು ವರ್ಷಗಳ ತರುವಾಯ ಮತ್ತೆ ಶಿಲ್ಪಾ ಹೆಸರು ಚಂದನವನದಲ್ಲಿ ಕೇಳಿ ಬರುತ್ತಿದೆ. ಗುಳಿಕೆನ್ನೆ ಚೆಲುವೆ ಶಿಲ್ಪಾ ಸ್ಯಾಂಡಲ್ ವುಡ್ ಗೆ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ ಎನ್ನುವ ವರ್ತಮಾನ ‘ಕೆಡಿ’ (KD) ಅಡ್ಡಾದಿಂದ ಬಂದಿದೆ. ಧ್ರುವ ಸರ್ಜಾ (Dhruva Sarja) ಮತ್ತು ಪ್ರೇಮ್ (Prem) ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಶಿಲ್ಪಾ ವಿಶೇಷ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಶಿಲ್ಪಾ ಜೊತೆ ಮಾತುಕತೆ ಕೂಡ ಆಡಿದ್ದಾರಂತೆ. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    ಈಗಾಗಲೇ ‘ಕೆಡಿ’ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಎರಡು ಹಂತದ ಚಿತ್ರೀಕರಣಕ್ಕೂ ಅವರು ಬಂದಿದ್ದಾರೆ. ಇದೀಗ ಬಾಲಿವುಡ್ ನಿಂದ ಮತ್ತೋರ್ವ ಕಲಾವಿದರನ್ನು ಪ್ರೇಮ್ ಕರೆತರುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಎಲ್ಲ ಭಾಷೆಗೂ ಸಲ್ಲುವಂತಹ ಕಲಾವಿದರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ ಪ್ರೇಮ್.

    ಅಂದುಕೊಂಡಂತೆ ನಡೆದರೆ, ರವಿಚಂದ್ರನ್ ಜೋಡಿಯಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರವಿಚಂದ್ರನ್ ಈ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಅವರ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಈ ಪಾತ್ರಕ್ಕೆ ಜೊತೆಯಾಗಿ ಶಿಲ್ಪಾ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಬಾರದೇ ಇದ್ದರೂ, ಆಪ್ತ ಮೂಲಗಳು ಈ ಸುದ್ದಿಯನ್ನು ಖಚಿತ ಪಡಿಸಿವೆ.

  • ಮಾರ್ಟಿನ್ ಟೀಸರ್ ಟ್ರೆಂಡಿಂಗ್ : ಸ್ಟಾರ್ ಜೊತೆ ಪೈಪೋಟಿ ಇಲ್ಲ ಎಂದ ಧ್ರುವ ಸರ್ಜಾ

    ಮಾರ್ಟಿನ್ ಟೀಸರ್ ಟ್ರೆಂಡಿಂಗ್ : ಸ್ಟಾರ್ ಜೊತೆ ಪೈಪೋಟಿ ಇಲ್ಲ ಎಂದ ಧ್ರುವ ಸರ್ಜಾ

    ನ್ನಡದ ಹೆಸರಾಂತ ನಟ ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin) ಸಿನಿಮಾದ ಟೀಸರ್ (Teaser) ಎರಡ್ಮೂರು ದಿನಗಳಿಂದ ಟ್ರೆಂಡಿಂಗ್ ನಲ್ಲಿದೆ. ಕೋಟಿ ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷೆಗಳಲ್ಲೂ ಸಿನಿಮಾ ಬಗ್ಗೆ ಮಾತನಾಡುವಂತಾಗಿದೆ. ಹಾಗಾಗಿ ಧ್ರುವ ಸರ್ಜಾ ಬೇರೆ ಸ್ಟಾರ್ ನಟರ ಜೊತೆ ಪೈಪೋಟಿಗೆ ಇಳಿದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

    ಈ ಹಿಂದಿ ಕನ್ನಡದ ಚಾರ್ಲಿ 777, ಕೆಜಿಎಫ್ 2, ಕಾಂತಾರ, ಕಬ್ಜ, ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಗಳು ಕೂಡ ಟ್ರೆಂಡಿಂಗ್ ಆಗಿದ್ದವು. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಯಶ್, ಉಪೇಂದ್ರ ಹಾಗೂ ಸುದೀಪ್ ಕೂಡ ಭಾರತೀಯ ಸಿನಿಮಾ ರಂಗದ ಹೆಸರಾಂತ ನಟರ ಜೊತೆ ಪೈಪೋಟಿಗೆ ಇಳಿದಿದ್ದರು. ಕನ್ನಡದ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದ್ದವು. ಇದೀಗ ಮಾರ್ಟಿನ್ ಆ ಸಿನಿಮಾದ ಸಾಲಿಗೆ ಸೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.  ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಮಾರ್ಟಿನ್ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದ್ದಂತೆಯೇ ಧ್ರುವ ಸರ್ಜಾ ಕೂಡ ಭಾರತೀಯ ಸಿನಿಮಾ ರಂಗದ ಸ್ಟಾರ್ ನಟರ ಜೊತೆ ಪೈಪೋಟಿಗೆ ಇಳಿದಿದ್ದಾರೆ ಎನ್ನುವ ಮಾತು ಬಂದಿದ್ದು ಸಹಜ. ಅದಕ್ಕೆ ಸ್ವತಃ ಧ್ರುವ ಅವರೇ ಉತ್ತರ ನೀಡಿದ್ದಾರೆ. ತಾವು ಯಾವುದೇ ಕಾರಣಕ್ಕೂ ಯಾವುದೇ ನಟರ ಜೊತೆ ಪೈಪೋಟಿಗೆ ಇಳಿಯಲಾರೆ. ನನ್ನ ಸಿನಿಮಾ ಮತ್ತು ನಾನು ಅಂದಷ್ಟೇ ಉತ್ತರಿಸಿದ್ದಾರೆ.

    ಎ.ಪಿ ಅರ್ಜುನ್ ಮತ್ತು ಧ್ರುವ ಕಾಂಬಿನೇಷನ್ ನ ಚಿತ್ರಗಳು ಗೆಲ್ಲುತ್ತವೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಹಾಗಾಗಿ ಮಾರ್ಟಿನ್ ಕೂಡ ಭರ್ಜರಿ ಗೆಲ್ಲುತ್ತದೆ ಎಂದು ಸಿನಿ ಪಂಡಿತರ ಲೆಕ್ಕಾಚಾರ. ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ಅದಕ್ಕಾಗಿ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

  • ‘ಮಾರ್ಟಿನ್’ ಚಿತ್ರದ ಟೀಸರ್ : ಸಿನಿಮಾ ತಂಡದ ಮೊದಲ ಪ್ರತಿಕ್ರಿಯೆ

    ‘ಮಾರ್ಟಿನ್’ ಚಿತ್ರದ ಟೀಸರ್ : ಸಿನಿಮಾ ತಂಡದ ಮೊದಲ ಪ್ರತಿಕ್ರಿಯೆ

    ಸಾಮಾನ್ಯವಾಗಿ ಚಿತ್ರಗಳ ಪ್ರೀಮಿಯರ್ ಶೋ ನಡೆಯುವುದು ವಾಡಿಕೆ. ಆದರೆ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ “ಮಾರ್ಟಿನ್” ಚಿತ್ರದ  ಟೀಸರ್ ಗೆ ಪ್ರೀಮಿಯರ್‌ ನಡೆದಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವೀರೇಶ ಚಿತ್ರಮಂದಿರದಲ್ಲಿ “ಮಾರ್ಟಿನ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಬೇರೆ ಯಾವ ಚಿತ್ರರಂಗದಲ್ಲೂ ಈ ರೀತಿ ಟೀಸರ್ ಪ್ರೀಮಿಯರ್ ನಡೆದಿರುವುದು ತಿಳಿದಿಲ್ಲ. ಇದೇ ಮೊದಲು ಎನ್ನಬಹುದು.

    ಇತ್ತೀಚೆಗೆ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ “ಮಾರ್ಟಿನ್” ಚಿತ್ರದ ಟೀಸರ್ ವೀರೇಶ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಇದಕ್ಕೂ ಮುನ್ನ ಜಾನಪದ ಕಲಾ ತಂಡಗಳ ಜೊತೆ ವೈಭವದ ಮೆರವಣಿಗೆಯ ಮೂಲಕ ಚಿತ್ರತಂಡದ ಸದಸ್ಯರು ವೀರೇಶ ಚಿತ್ರಮಂದಿರ ಪ್ರವೇಶಿಸಿದರು. ಪ್ರೀಮಿಯರ್ ನಲ್ಲಿ ಟೀಸರ್ ವೀಕ್ಷಿಸಿದ ಧ್ರುವ ಸರ್ಜಾ ಅಭಿಮಾನಿಗಳು ಟೀಸರ್ ಗೆ ಫಿದಾ ಆಗಿದ್ದಾರೆ ಅದೇ ದಿನ ಸಂಜೆ ಚಿತ್ರದ ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಠಿ ಸಹ ನಡೆಯಿತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪತ್ರಕರ್ತರು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಚಿತ್ರತಂಡದ ಸದಸ್ಯರು “ಮಾರ್ಟಿನ್” ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

    ನಾನು ಹಾಗೂ ಧ್ರುವ  ಹೀರೋ ಹಾಗೂ ನಿರ್ದೇಶಕರ ತರಹ ಕೆಲಸ ಮಾಡಲ್ಲ. ಸ್ನೇಹಿತರಾಗಿ ಕೆಲಸ ಮಾಡುತ್ತೇವೆ. ಹತ್ತು ವರ್ಷಗಳ ಹಿಂದೆ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬಂದಿದ್ದ “ಅದ್ದೂರಿ” ಚಿತ್ರ “ಅದ್ದೂರಿ” ಯಶಸ್ಸು ಕಂಡಿದ್ದು ಎಲ್ಲರಿಗೂ ತಿಳಿದ ವಿಷಯ. ಈಗ “ಮಾರ್ಟಿನ್” ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. “ಮಾರ್ಟಿನ್” ಪಕ್ಕಾ ಆಕ್ಷನ್ ಚಿತ್ರ. ಅರ್ಜುನ್ ಸರ್ಜಾ ಅವರು ಕಥೆ ಬರೆದಿದ್ದಾರೆ. ಉದಯ್ ಕೆ ಮೆಹತಾ ಯಾವುದಕ್ಕೂ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ.  ನಾವು ಇಷ್ಟು ದಿನ ಕರ್ನಾಟಕದಲ್ಲಿ ಮಾತ್ರ ಪರೀಕ್ಷೆ ಬರೆಯುತ್ತಿದ್ದೆವು. ಇದು ಪ್ಯಾನ್ ಇಂಡಿಯಾ ಚಿತ್ರ. ಎಲ್ಲರನ್ನು ಮೆಚ್ಚಿಸುವ ಜವಾಬ್ದಾರಿ ನಮಗಿದೆ. ಇಡೀ ನನ್ನ ತಂಡದ ಸಹಕಾರದಿಂದ “ಮಾರ್ಟಿನ್” ಉತ್ತಮವಾಗಿ ಬಂದಿದೆ. ಟೀಸರ್ ಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ತುಂಬಾ ಖುಷಿಯಾಗಿದೆ ಎನ್ನುತ್ತಾರೆ ನಿರ್ದೇಶಕ ಎ.ಪಿ.ಅರ್ಜುನ್.

    ನಮ್ಮ ಸಂಸ್ಥೆಯಿಂದ ಪ್ಯಾನ್ ಇಂಡಿಯಾ “ಮಾರ್ಟಿನ್” ಚಿತ್ರ ನಿರ್ಮಾಣವಾಗಿರುವುದು ಸಂತೋಷವಾಗಿದೆ‌. ಚಿತ್ರ ಏನು ಕೇಳುತ್ತದೊ ಅದನೆಲ್ಲಾ ನಿರ್ಮಾಪಕನಾಗಿ ಒದಗಿಸಿದ್ದೇನೆ‌. ಧ್ರುವ ಸರ್ಜಾ, ಎ.ಪಿ.ಅರ್ಜುನ್, ಅರ್ಜುನ್ ಸರ್ಜಾ, ಸತ್ಯ ಹೆಗಡೆ, ರವಿ ಬಸ್ರೂರ್ ಸೇರಿದಂತೆ ಇಡೀ ತಂಡದ ಸಹಕಾರಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಉದಯ್ ಕೆ ಮೆಹತಾ. “ಮಾರ್ಟಿನ್” ಚಿತ್ರದ ಟೀಸರ್ ಚೆನ್ನಾಗಿದೆ. ಇದು ಧ್ರುವ ಅಭಿನಯದ ಐದನೇ ಚಿತ್ರ. ನಾನು ಈ ಚಿತ್ರಕ್ಕೆ ಕಥೆ ಬರೆದಿದ್ದೇನೆ.  ಧ್ರುವ ನಿಗೆ ಕಥೆ ಒಪ್ಪಿಸುವುದು ಅಷ್ಟು ಸುಲಭವಲ್ಲ. ಆತ ಚಿತ್ರಕ್ಕಾಗಿ ತುಂಬಾ ಶ್ರಮ ಪಡುತ್ತಾನೆ. ನಿದ್ದೆ ಕೂಡ ಸರಿಯಾಗಿ ಮಾಡಲ್ಲ. ನಮ್ಮ ಕುಟುಂಬದವರಿಗೆ ಧ್ರುವ ಎಂದರೆ ಪ್ರೀತಿ. ಅದರಲ್ಲೂ ನಮ್ಮ ತಾಯಿಗೆ ಧ್ರುವ ಎಂದರೆ ತುಂಬಾ ಪ್ರೀತಿ. ಅವರು ಇವತ್ತು ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ನಿರ್ದೇಶಕ ಎ.ಪಿ.ಅರ್ಜುನ್ , ನಿರ್ಮಾಪಕ ಉದಯ್ ಕೆ ಮೆಹತಾ ಹಾಗೂ ಇಡೀ “ಮಾರ್ಟಿನ್” ಚಿತ್ರತಂಡಕ್ಕೆ ನಟ ಅರ್ಜುನ್ ಸರ್ಜಾ ಶುಭಾಶಯ ತಿಳಿಸಿದರು.

    ನಮ್ಮ ಮಾವ ಅರ್ಜುನ್ ಸರ್ಜಾ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. ಎ.ಪಿ.ಅರ್ಜುನ್ ಸುಂದರವಾಗಿ ನಿರ್ದೇಶಿಸಿದ್ದಾರೆ. ಉದಯ್ ಕೆ ಮೆಹತಾ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ರಾಮ್ – ಲಕ್ಷ್ಮಣ್ ಸೇರಿದಂತೆ ಖ್ಯಾತ ಸಾಹಸ ನಿರ್ದೇಶಕರ ಸಾಹಸ ಸಂಯೋಜನೆಯಲ್ಲಿ ಮೂಡಿ ಬಂದಿರುವ ಸಾಹಸ ದೃಶ್ಯಗಳು ಚೆನ್ನಾಗಿದೆ. ಇಡೀ ತಂಡದ ಕಾರ್ಯವೈಖರಿ ಟೀಸರ್ ನಲ್ಲಿ ಕಾಣುತ್ತಿದೆ. ಟೀಸರ್ ಗೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಹಾಗೂ ಅವರು ಆಡುತ್ತಿರುವ ಮೆಚ್ಚುಗೆಯ ಮಾತುಗಳಿಗೆ ಮನ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು ನಾಯಕ ಧ್ರುವ ಸರ್ಜಾ. ಚಿತ್ರದ ನಾಯಕಿಯರಾದ ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್, ಛಾಯಾಗ್ರಾಹಕ ಸತ್ಯ ಹೆಗಡೆ, ಸಾಹಸ ಸಂಯೋಜಕರಾದ ರಾಮ್ – ಲಕ್ಷ್ಮಣ್ ಮುಂತಾದ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.

  • KCC 2023: ನಿನ್ನೆ ಪಂದ್ಯದಲ್ಲಿ ಸೋತವರು ಯಾರು? ಗೆದ್ದವರು ಯಾರು?

    KCC 2023: ನಿನ್ನೆ ಪಂದ್ಯದಲ್ಲಿ ಸೋತವರು ಯಾರು? ಗೆದ್ದವರು ಯಾರು?

    ನಿನ್ನೆಯಿಂದ ಬೆಂಗಳೂರಿನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (Celebrity Cricket League) ಪಂದ್ಯ ಪ್ರಾರಂಭವಾಗಿದ್ದು, ಮೊದಲ ದಿನ ಮೂರು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಕ್ರಿಕೆಟ್ ಲೀಗ್ ಅನ್ನು ಉದ್ಘಾಟಿಸಿದ ನಂತರ ಮೊದಲ ದಿನದ ಪಂದ್ಯಗಳು ಆರಂಭವಾದವು. ಒಟ್ಟು ಮೂರು ಪಂದ್ಯಗಳನ್ನು ಮೊದಲ ದಿನಕ್ಕಾಗಿ ಆಯೋಜನೆ ಮಾಡಲಾಗಿತ್ತು. ಇವುಗಳಲ್ಲಿ ಮೊದಲ ಪಂದ್ಯವಾಗಿ ನಟ ಧನಂಜಯ (Dhananjay) ಅವರ ಗಂಗಾ ವಾರಿಯರ್ಸ್ ಹಾಗೂ ಸುದೀಪ್ (Sudeep) ನೇತೃತ್ವದ ಹೊಯ್ಸಳ ಈಗಲ್ಸ್ ಮುಖಾಮುಖಿಯಾದವು.

    ಮೊದಲ ಪಂದ್ಯದಲ್ಲಿ ಗಂಗಾ ವಾರಿಯಸ್ ವಿರುದ್ಧ ಗೆಲ್ಲುವಲ್ಲಿ ಹೊಯ್ಸಳ ಈಗಲ್ಸ್ ವಿಫಲವಾಯಿತು. ಗಂಗಾ ವಾರಿಯರ್ಸ್ ನ ಕರಣ್ ಆರ್ಯನ್ 54 ರನ್ ಗಳನ್ನು ಬಾರಿಸಿ ವಿಜಯಕ್ಕೆ ಕಾರಣರಾದರು. ಹತ್ತು ಓವರ್ ಗಳಲ್ಲಿ ಗಂಗಾ ವಾರಿಯರ್ಸ್ 4 ವಿಕೆಟ್ ನಷ್ಟಕ್ಕೆ 114 ರನ್ ಗಳನ್ನು ಕಲೆಹಾಕಿತ್ತು. ಆದರೆ, ಹೊಯ್ಸಳ ಈಗಲ್ಸ್ ಗುರಿ ತಲುಪುವಲ್ಲಿ ವಿಫಲವಾಗಿ ಸೋಲು ಒಪ್ಪಿಕೊಳ್ಳಬೇಕಾಯಿತು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಎರಡನೇ ಪಂದ್ಯವಾಗಿ ಶಿವರಾಜ್ ಕುಮಾರ್ ನೇತೃತ್ವದ ಒಡೆಯರ್ ಚಾರ್ಜಸ್ ಹಾಗೂ ಸುದೀಪ್ ಅವರ ಹೊಯ್ಸಳ್ ಈಗಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದದ್ದು ಒಡೆಯರ್ ಚಾರ್ಜಸ್. ಹತ್ತು ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 105 ರನ್ ಗಳನ್ನು ಕಲೆಹಾಕಿ, ಹೊಯ್ಸಳ ಈಗಲ್ಸ್ ತಂಡಕ್ಕೆ 106 ರನ್ ಗಳ ಗುರಿ ನೀಡಿತು. ಹೊಯ್ಸಳ ಈಗಲ್ಸ್ ತಂಡದ ಕ್ರಿಸ್ ಗೇಲ್ 23 ಎಸೆತಗಳಲ್ಲಿ 59 ರನ್ ಗಳನ್ನು ಕಲೆ ಹಾಕುವ ಮೂಲಕ ಗೆಲುವಿಗೆ ಸುಲಭ ಹಾದಿ ಹಾಕಿಕೊಟ್ಟರು. ಪರಿಣಾಮ ಶಿವಣ್ಣ ತಂಡವು ಸೋಲನುಭವಿಸಬೇಕಾಯಿತು.

    ಅಂತಿಮ ಪಂದ್ಯವು ಧ್ರುವ ಸರ್ಜಾ ನೇತೃತ್ವದ ರಾಷ್ಟ್ರಕೂಟ ಫ್ಯಾಂಥರ್ಸ್ ಹಾಗೂ ಗಣೇಶ್ ನಾಯಕತ್ವದ ಕದಂಬ ಲಯನ್ಸ್ ನಡುವೆ ನಡೆಯಿತು. ಕದಂಬ ಲಯನ್ಸ್ ತಂಡ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕಲೆ ಹಾಕಿದ್ದು 111 ರನ್ ಗಳನ್ನು. ಎದುರಾಳಿ ರಾಷ್ಟ್ರಕೂಟ ಫ್ಯಾಂಥರ್ಸ್ ಈ ಗುರಿಯನ್ನು ಮುಟ್ಟಲು ಸಾಧ್ಯವಾಗದೇ ಇರುವ ಕಾರಣದಿಂದಾಗಿ ಕದಂಬ ಲಯನ್ಸ್ ಸುಲಭವಾಗಿ ಗೆಲುವು ಸಾಧಿಸಿತು. ಇಂದು ಎರಡನೇ ದಿನ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ.

  • ಟೀಸರ್ ನಿಂದ ಬಂದ ಹಣವನ್ನು ಗೋಶಾಲೆಗೆ ನೀಡುವೆವು : ಮಾರ್ಟಿನ್ ನಿರ್ದೇಶಕ ಅರ್ಜುನ್ ಘೋಷಣೆ

    ಟೀಸರ್ ನಿಂದ ಬಂದ ಹಣವನ್ನು ಗೋಶಾಲೆಗೆ ನೀಡುವೆವು : ಮಾರ್ಟಿನ್ ನಿರ್ದೇಶಕ ಅರ್ಜುನ್ ಘೋಷಣೆ

    ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin) ಟೀಸರ್ (Teaser) ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಬಂದಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಟೀಸರ್ ಅನ್ನು ಟಿಕೆಟ್ ಖರೀದಿಸಿ ನೋಡುವಂತಹ ವ್ಯವಸ್ಥೆಯನ್ನು ಚಿತ್ರತಂಡ ಮಾಡಿತ್ತು. ಅದರಿಂದ ಬಂದ ಹಣವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸುವುದಾಗಿ ನಿರ್ದೇಶಕ ಎ.ಪಿ.ಅರ್ಜುನ್ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಟೀಸರ್ ನಿಂದ ಬಂದ ಹಣವನ್ನು ಗೋಶಾಲೆಗಳಿಗೆ ನೀಡುವುದಾಗಿ ತಿಳಿಸಿದ್ದಾರೆ.

    ಕನ್ನಡದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಟೀಸರ್ ನೋಡಿದ ಪರಭಾಷಾ ನಟರು ಹಾಗೂ ತಂತ್ರಜ್ಞರು ಅಭಿನಂದನೆಯ ಸುರಿಮಳೆಗೈದಿದ್ದಾರೆ. ಕನ್ನಡದಲ್ಲಿ ಈ ಮಟ್ಟದ ಚಿತ್ರಗಳು ಬರುತ್ತಿರುವುದಕ್ಕೆ ಅಕ್ಷರಶಃ ಬಾಲಿವುಡ್ ಕಂಗಾಲಾಗಿದೆ. ಈಗಾಗಲೇ ಕೆಜಿಎಫ್, ಕಾಂತಾರ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿವೆ. ಕಬ್ಜ ಸಿನಿಮಾ ಇನ್ನಷ್ಟೇ ರಿಲೀಸ್ ಆಗುತ್ತಿದೆ. ನಂತರ ಮಾರ್ಟಿನ್ ಮತ್ತೆ ಬಾಲಿವುಡ್ ಅನ್ನು ನಿದ್ದೆಗೆಡಿಸಲಿದೆ.

    ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಕಾಂಬಿನೇಷನ್ ನ ಮಾರ್ಟಿನ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆ ಆಗಿದೆ. ಈ ಟೀಸರ್ ನೋಡಲೆಂದೇ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಇದೇ ಮೊದಲ ಬಾರಿಗೆ ಟೀಸರ್ ನೋಡುವುದಕ್ಕಾಗಿ ಟಿಕೆಟ್ ಖರೀದಿಸಬೇಕಿತ್ತು. ಟೀಸರ್ ನೋಡಿದ ನಂತರ ಟಿಕೆಟ್ ಹಣಕ್ಕೆ ಮೋಸವಾಗಿಲ್ಲ ಎಂದಿದ್ದಾರೆ ಅಭಿಮಾನಿಗಳು. ಆ ರೀತಿಯಲ್ಲಿ ಟೀಸರ್ ಅದ್ಭುತವಾಗಿ ಮೂಡಿ ಬಂದಿದೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಮಾರ್ಟಿನ್ ಸಾಹಸ ಪ್ರಧಾನ ಸಿನಿಮಾ ಎನ್ನುವುದು ಟೀಸರ್ ನ ಪ್ರತಿ ಫ್ರೇಮ್ ಹೇಳುತ್ತದೆ. ಅದರಲ್ಲೂ ಅಚ್ಚರಿ ಮೂಡುವಂತಹ ಮೈಕಟ್ಟಿನ ಧ್ರುವ ಸರ್ಜಾ ಎದುರಾಳಿಗಳನ್ನು ಕುಟ್ಟಿ ಪುಡಿ ಮಾಡುವುದನ್ನು ನೋಡುವುದೇ ರೋಮಾಂಚನ. ಆ ಮಟ್ಟಿಗೆ ಚಿತ್ರದಲ್ಲಿ ತಮ್ಮ ಇರುವಿಕೆಯನ್ನು ತೋರಿಸಿದ್ದಾರೆ ಧ್ರುವ ಸರ್ಜಾ. ಟೀಸರ್ ತುಂಬಾ ಹೊಡೆದಾಟ, ಬಂದೂಕು, ಬಾಂಬುಗಳೇ ಘರ್ಜಿಸಿವೆ. ಅದರಲ್ಲೂ ಕಾರ್ ಚೇಸ್ ದೃಶ್ಯ ಮತ್ತಷ್ಟು ಸಿನಿಮಾದ ತೂಕವನ್ನು ಹೆಚ್ಚಿಸಿದೆ.

    ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕ. ಆ ನಾಯಕನ ಸುತ್ತ ಹೆಣೆದಿರುವ ಕಥೆ ಮಾರ್ಟಿನ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಭಾರತಕ್ಕೂ ಮತ್ತು ಪಾಕಿಸ್ತಾನದಲ್ಲಿ ಬಂಧಿಯಾಗಿರುವ ನಾಯಕನಿಗೆ ಕನೆಕ್ಷನ್ ಏನಿರಲಿದೆ ಎನ್ನುವುದು ಕುತೂಹಲದ ಪ್ರಶ್ನೆ. ಒಟ್ಟಿನಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ನಿರ್ದೇಶಕರ ಶ್ರಮವೂ ಎದ್ದು ಕಾಣುತ್ತದೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಮತ್ತೊಂದು ಕನ್ನಡ ಸಿನಿಮಾ ಭಾರತದಾದ್ಯಂತ ಹವಾ ಸೃಷ್ಟಿ ಮಾಡಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಿವುಡ್ ನಿದ್ದೆಗೆಡಿಸಿದ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಟೀಸರ್

    ಬಾಲಿವುಡ್ ನಿದ್ದೆಗೆಡಿಸಿದ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಟೀಸರ್

    ನ್ನಡದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin) ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಟೀಸರ್ (Teaser) ನೋಡಿದ ಪರಭಾಷಾ ನಟರು ಹಾಗೂ ತಂತ್ರಜ್ಞರು ಅಭಿನಂದನೆಯ ಸುರಿಮಳೆಗೈದಿದ್ದಾರೆ. ಕನ್ನಡದಲ್ಲಿ ಈ ಮಟ್ಟದ ಚಿತ್ರಗಳು ಬರುತ್ತಿರುವುದಕ್ಕೆ ಅಕ್ಷರಶಃ ಬಾಲಿವುಡ್ ಕಂಗಾಲಾಗಿದೆ. ಈಗಾಗಲೇ ಕೆಜಿಎಫ್, ಕಾಂತಾರ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿವೆ. ಕಬ್ಜ ಸಿನಿಮಾ ಇನ್ನಷ್ಟೇ ರಿಲೀಸ್ ಆಗುತ್ತಿದೆ. ನಂತರ ಮಾರ್ಟಿನ್ ಮತ್ತೆ ಬಾಲಿವುಡ್ (Bollywood) ಅನ್ನು ನಿದ್ದೆಗೆಡಿಸಲಿದೆ.

    ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಕಾಂಬಿನೇಷನ್ ನ ಮಾರ್ಟಿನ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆ ಆಗಿದೆ. ಈ ಟೀಸರ್ ನೋಡಲೆಂದೇ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಇದೇ ಮೊದಲ ಬಾರಿಗೆ ಟೀಸರ್ ನೋಡುವುದಕ್ಕಾಗಿ ಟಿಕೆಟ್ ಖರೀದಿಸಬೇಕಿತ್ತು. ಟೀಸರ್ ನೋಡಿದ ನಂತರ ಟಿಕೆಟ್ ಹಣಕ್ಕೆ ಮೋಸವಾಗಿಲ್ಲ ಎಂದಿದ್ದಾರೆ ಅಭಿಮಾನಿಗಳು. ಆ ರೀತಿಯಲ್ಲಿ ಟೀಸರ್ ಅದ್ಭುತವಾಗಿ ಮೂಡಿ ಬಂದಿದೆ.

    ಮಾರ್ಟಿನ್ ಸಾಹಸ ಪ್ರಧಾನ ಸಿನಿಮಾ ಎನ್ನುವುದು ಟೀಸರ್ ನ ಪ್ರತಿ ಫ್ರೇಮ್ ಹೇಳುತ್ತದೆ. ಅದರಲ್ಲೂ ಅಚ್ಚರಿ ಮೂಡುವಂತಹ ಮೈಕಟ್ಟಿನ ಧ್ರುವ ಸರ್ಜಾ ಎದುರಾಳಿಗಳನ್ನು ಕುಟ್ಟಿ ಪುಡಿ ಮಾಡುವುದನ್ನು ನೋಡುವುದೇ ರೋಮಾಂಚನ. ಆ ಮಟ್ಟಿಗೆ ಚಿತ್ರದಲ್ಲಿ ತಮ್ಮ ಇರುವಿಕೆಯನ್ನು ತೋರಿಸಿದ್ದಾರೆ ಧ್ರುವ ಸರ್ಜಾ. ಟೀಸರ್ ತುಂಬಾ ಹೊಡೆದಾಟ, ಬಂದೂಕು, ಬಾಂಬುಗಳೇ ಘರ್ಜಿಸಿವೆ. ಅದರಲ್ಲೂ ಕಾರ್ ಚೇಸ್ ದೃಶ್ಯ ಮತ್ತಷ್ಟು ಸಿನಿಮಾದ ತೂಕವನ್ನು ಹೆಚ್ಚಿಸಿದೆ.

    ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕ. ಆ ನಾಯಕನ ಸುತ್ತ ಹೆಣೆದಿರುವ ಕಥೆ ಮಾರ್ಟಿನ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಭಾರತಕ್ಕೂ ಮತ್ತು ಪಾಕಿಸ್ತಾನದಲ್ಲಿ ಬಂಧಿಯಾಗಿರುವ ನಾಯಕನಿಗೆ ಕನೆಕ್ಷನ್ ಏನಿರಲಿದೆ ಎನ್ನುವುದು ಕುತೂಹಲದ ಪ್ರಶ್ನೆ. ಒಟ್ಟಿನಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ನಿರ್ದೇಶಕರ ಶ್ರಮವೂ ಎದ್ದು ಕಾಣುತ್ತದೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಮತ್ತೊಂದು ಕನ್ನಡ ಸಿನಿಮಾ ಭಾರತದಾದ್ಯಂತ ಹವಾ ಸೃಷ್ಟಿ ಮಾಡಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k