Tag: dhruva sarja

  • ಗಂಡು ಮಗುವಿಗೆ ತಂದೆಯಾದ ನಟ ಧ್ರುವ ಸರ್ಜಾ

    ಗಂಡು ಮಗುವಿಗೆ ತಂದೆಯಾದ ನಟ ಧ್ರುವ ಸರ್ಜಾ

    ನ್ನಡದ ಹೆಸರಾಂತ ನಟ ಧ್ರುವ ಸರ್ಜಾ  (Dhruva Sarja) ಪತ್ನಿ ಪ್ರೇರಣಾ ಗಂಡು ಮಗುವಿಗೆ (Baby boy)ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಮೊನ್ನೆಯಷ್ಟೇ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು ಧ್ರುವ ಸರ್ಜಾ. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ.

    ಮೊನ್ನೆಯಷ್ಟೇ ನಡೆದಿತ್ತು ಸೀಮಂತ

    ಸಿಹಿಸುದ್ದಿ ಜೊತೆ ಇತ್ತೀಚೆಗೆ ಧ್ರುವ ಪತ್ನಿ ಪ್ರೇರಣಾಗೆ (Prerana) ಸೀಮಂತ (Baby Shower) ಕಾರ್ಯಕ್ರಮ ನೆರವೇರಿತ್ತು, ಈ ಕುರಿತ ವಿಡಿಯೋವೊಂದನ್ನ ನಟ ಶೇರ್ ಮಾಡಿದ್ದರು. ಪತ್ನಿ ಪ್ರೇರಣಾ ಸೀಮಂತ ಸಂಭ್ರಮ ವಿಡಿಯೋವನ್ನ ನಟ ಹಂಚಿಕೊಂಡಿದ್ದು, ಹಸಿರು ಬಣ್ಣದ ಸೀರೆಯಲ್ಲಿ ಪ್ರೇರಣಾ ಕಂಗೊಳಿಸಿದ್ದರು. ಲೈಟ್ ಬಣ್ಣದ ಉಡುಗೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದರು.

    ಕನಕಪುರ ರಸ್ತೆಯ ಫಾರ್ಮ್ ಹೌಸ್‌ನಲ್ಲಿ ಪ್ರೇರಣಾ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆಯಿತು. ಚಿರು ಸರ್ಜಾ (Chiru) ಫೋಟೋವನ್ನ ಫೋನ್‌ನಲ್ಲಿ ಧ್ರುವ ಪುತ್ರಿ ನೋಡ್ತಿರುವ ತುಣುಕು ಗಮನ ಸೆಳೆಯುತ್ತಿದೆ. ಧ್ರುವ ದಂಪತಿ, ಮಗಳಿಗೆ ಚಿರು ಅಂತ ಹೆಸರು ಹೇಳಿ ಕೊಡುತ್ತಿರೋದು ಮುದ್ದಾಗಿದೆ.

    ಮನೆಗೆ ಕಳೆದ ವರ್ಷ ಮುದ್ದು ಮಗಳ ಆಗಮನವಾಗಿದೆ. 2ನೇ ಮಗುವಿನ ನಿರೀಕ್ಷೆಯಲ್ಲಿರುವ ಪ್ರೇರಣಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ.  ಸೀಮಂತ ಶಾಸ್ತ್ರ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಆಪ್ತರು, ಅಭಿಮಾನಿಗಳು ವಿಶ್‌ ಮಾಡಿದ್ದಾರೆ.  ಆಗಸ್ಟ್ 25ರಂದು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧ್ರುವ ಸರ್ಜಾ 2ನೇ ಮಗುವಿನ ಬಗ್ಗೆ ಗುಡ್ ನ್ಯೂಸ್ ಹೇಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧ್ರುವ ಸರ್ಜಾ ಹುಟ್ಟು ಹಬ್ಬ: ಅಭಿಮಾನಿಗಳಿಗೆ ವಿಶೇಷ ಮನವಿ

    ಧ್ರುವ ಸರ್ಜಾ ಹುಟ್ಟು ಹಬ್ಬ: ಅಭಿಮಾನಿಗಳಿಗೆ ವಿಶೇಷ ಮನವಿ

    ನ್ನಡದ ಹೆಸರಾಂತ ನಟ ಧ್ರುವ ಸರ್ಜಾ ಮೂರು ವರ್ಷಗಳ ನಂತರ ತಮ್ಮ ಹುಟ್ಟು ಹಬ್ಬವನ್ನು (Birthday) ಅಭಿಮಾನಿಗಳ ಜೊತೆ ಆಚರಿಸಲು ರೆಡಿಯಾಗಿದ್ದಾರೆ. ಅಕ್ಟೋಬರ್ 6ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಧ್ರುವ, ಅಭಿಮಾನಿಗಳಿಗಾಗಿ (Fans) ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಹುಟ್ಟು ಹಬ್ಬಕ್ಕೆ ಬರುವವರು ಕೇಕ್, ಹಾರ, ತುರಾಯಿಗಳನ್ನು ತರಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

    ಅಕ್ಟೋಬರ್ 5ರಂದು ಧ್ರುವ ಮನೆಯ ಮುಂದೆಯೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಅಂದು ಅಭಿಮಾನಿಗಳು ಶಾಲಾ ಮಕ್ಕಳಿಗೆ ಬೇಕಾಗುವ ಸಾಮಗ್ರಿಗಳನ್ನು ಉಡುಗೊರೆ ರೂಪದಲ್ಲಿ ಕೊಡುವಂತೆ ಕೇಳಿಕೊಂಡಿದ್ದಾರೆ. ಪುಸ್ತಕ, ಬ್ಯಾಗ್, ಪೆನ್ನು ಹೀಗೆ ಅಗತ್ಯ ವಸ್ತುಗಳನ್ನು ಮಾತ್ರ ತನ್ನಿ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಸಾಯಿ ಪಲ್ಲವಿ- ಸ್ಟಾರ್‌ ನಟನ ಪುತ್ರನಿಗೆ ‘ಫಿದಾ’ ಬ್ಯೂಟಿ ನಾಯಕಿ

    ಹುಟ್ಟು ಹಬ್ಬಕ್ಕೂ ಮುನ್ನ ಅವರು ಮಾರ್ಟಿನ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರಲಿದ್ದಾರೆ.  ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ (Dhruva Sarja) ಕಾಂಬಿನೇಷನ್ ನ ‘ಮಾರ್ಟಿನ್’ ಸಿನಿಮಾದ ಶೂಟಿಂಗ್ (Shooting) ಮುಗಿದಿದೆ ಎಂದು ಅಂದಾಜಿಸಲಾಗಿತ್ತು. ಬಿಡುಗಡೆಗೆ ಚಿತ್ರತಂಡ ಸಿದ್ಧವಾಗುತ್ತಿದೆ ಎಂದು ನಂಬಲಾಗಿತ್ತು. ಆದರೆ, ಅಭಿಮಾನಿಗಳ ಅಂದಾಜು ಸುಳ್ಳಾಗಿದೆ. ಚಿತ್ರತಂಡವೇ ಮಾಹಿತಿ ಕೊಟ್ಟಿರುವಂತೆ ಇನ್ನೂ ಮೂರು ಹಾಡುಗಳ ಶೂಟಿಂಗ್ ಬಾಕಿ ಇದೆಯಂತೆ. ಈ ವಾರ ಒಂದು ಹಾಡಿನ ಚಿತ್ರೀಕರಣಕ್ಕೂ ಚಿತ್ರತಂಡ ಸಿದ್ಧವಾಗಿದೆ.

    ಇತ್ತೀಚೆಗಷ್ಟೇ ಈ ಸಿನಿಮಾದ ಒಂದು ಹಾಡು ಚಿತ್ರೀಕರಣವಾಗಿತ್ತು. ಈ ಹಾಡಿನಲ್ಲಿ ಇಟಾಲಿಯನ್ ಸುಂದರಿ ಜಾರ್ಜಿಯಾ (Giorgia Andriani)  ಜೊತೆ ಧ್ರುವ ಸರ್ಜಾ ಹೆಜ್ಜೆ ಹಾಕಿದ್ದರು. ಈ ಮೂಲಕ ಬಾಲಿವುಡ್‌ ನಟಿ ಜಾರ್ಜಿಯಾ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು.

    ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಬಿಂದಾಸ್ ಹಾಡಿಗೆ ಚಿತ್ರೀಕರಣ ಮಾಡಲಾತ್ತು. ಧ್ರುವ ಜೊತೆ ಜಾರ್ಜಿಯಾ ಆಂಡ್ರಿಯಾನಿ ಸಖತ್ ಸ್ಟೆಪ್ಸ್ ಹಾಕಿದ್ದರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಆಕೆಯ ಮೊದಲ ಸಿನಿಮಾವಾಗಿದೆ. ಮಣಿ ಶರ್ಮಾ ಟ್ಯೂನ್ ಹಾಕಿರುವ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ. 300ಕ್ಕೂ ಹೆಚ್ಚು ಫಾರಿನ್ ಡ್ಯಾನ್ಸರ್ಸ್ ಹಾಡಿನಲ್ಲಿ ಕುಣಿದಿದ್ದಾರೆ. 3.5 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ದೂರಿಯಾಗಿ ಈ ಸಾಂಗ್ ಶೂಟಿಂಗ್ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣನ ಸಮಾಧಿ ಮೇಲೆ ಮಗಳನ್ನು ಆಟವಾಡಿಸಿದ ಧ್ರುವ ಸರ್ಜಾ

    ಅಣ್ಣನ ಸಮಾಧಿ ಮೇಲೆ ಮಗಳನ್ನು ಆಟವಾಡಿಸಿದ ಧ್ರುವ ಸರ್ಜಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರು ಅಣ್ಣ ಚಿರು ಸರ್ಜಾ (Chiru Sarja) ಸಮಾಧಿ ಪಕ್ಕ ಮಲಗಿರುವ ವಿಡಿಯೋವೊಂದು ಇತ್ತೀಚಿಗೆ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮತ್ತೊಂದು ವಿಶೇಷ ವಿಡಿಯೋವೊಂದನ್ನ ಸ್ವತಃ ಧ್ರುವ ಸರ್ಜಾ ಶೇರ್ ಮಾಡಿದ್ದಾರೆ. ಅಣ್ಣನ ಸಮಾಧಿ ಮೇಲೆ ಮಗಳನ್ನು (Daughter) ಆಟವಾಡಿಸುತ್ತಿರುವ ವಿಡಿಯೋವನ್ನ ಸೋಶಿಯಲ್‌ ಮೀಡಿಯಾದಲ್ಲಿ ಶೇರ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಿಚ್ಚನ 50ನೇ ಚಿತ್ರಕ್ಕೆ ‘ಕಾಂತಾರ’ ಹೀರೋ ಆ್ಯಕ್ಷನ್ ಕಟ್

    ಚಿರು ಸರ್ಜಾ ಅಗಲಿ 3 ವರ್ಷಗಳು ಕಳೆದಿದೆ. ಅಣ್ಣ ಅಗಲಿಕೆಯ ನೋವು ಇನ್ನೂ ಧ್ರುವಗೆ ಮಾಸಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅಣ್ಣನ ಸಮಾಧಿ ಮೇಲೆ ಮುದ್ದು ಮಗಳನ್ನ ಧ್ರುವ ಆಟ ಆಡಿಸುತ್ತಾ ಇರುವ ವಿಡಿಯೋ ಮನ ಕಲಕುವಂತಿದೆ. ವಿಡಿಯೋ ನೋಡಿ ಖುಷಿ ಪಡಬೇಕಾ? ವಿಧಿಯಾಟಕ್ಕೆ ಹಿಡಿ ಶಾಪ ಹಾಕಬೇಕಾ ಅಂತಿದ್ದಾರೆ ಅಭಿಮಾನಿಗಳು.

    ಧ್ರುವ ಪತ್ನಿ ಪ್ರೇರಣಾ (Prerana) ಸೀಮಂತ ಶಾಸ್ತ್ರ (Baby Shower) ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ಆಗ ಮಗಳಿಗೆ ಪ್ರೇರಣಾ ಚಿರು ಫೋಟೋವನ್ನ ತೋರಿಸಿ ಮಾತನಾಡುತ್ತಿದ್ದರು. ಅಂದಿನ ಆ ದೃಶ್ಯ ಕೂಡ ಸಖತ್ ವೈರಲ್ ಆಗಿತ್ತು.

    ಅಕ್ಟೋಬರ್ 6ರಂದು ಧ್ರುವ ಸರ್ಜಾ ಹುಟ್ಟುಹಬ್ಬದಂದು ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ (Rajamartanda Film) ರಿಲೀಸ್ ಆಗುತ್ತಿದೆ. ಚಿರು- ಮೇಘನಾ ಪುತ್ರ ರಾಯನ್ (Rayan) ಕೂಡ ನಟಿಸಿದ್ದಾರೆ. ಚಿರು ಪಾತ್ರಕ್ಕೆ ಇಡೀ ಸಿನಿಮಾ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೀಮಂತದ ಸಂಭ್ರಮದಲ್ಲಿ ಧ್ರುವ ಸರ್ಜಾ ಪತ್ನಿ ಪ್ರೇರಣಾ

    ಸೀಮಂತದ ಸಂಭ್ರಮದಲ್ಲಿ ಧ್ರುವ ಸರ್ಜಾ ಪತ್ನಿ ಪ್ರೇರಣಾ

  • ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಶೂಟಿಂಗ್ ಇನ್ನೂ ಬಾಕಿ

    ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಶೂಟಿಂಗ್ ಇನ್ನೂ ಬಾಕಿ

    ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ (Dhruva Sarja) ಕಾಂಬಿನೇಷನ್ ನ ‘ಮಾರ್ಟಿನ್’ ಸಿನಿಮಾದ ಶೂಟಿಂಗ್ (Shooting) ಮುಗಿದಿದೆ ಎಂದು ಅಂದಾಜಿಸಲಾಗಿತ್ತು. ಬಿಡುಗಡೆಗೆ ಚಿತ್ರತಂಡ ಸಿದ್ಧವಾಗುತ್ತಿದೆ ಎಂದು ನಂಬಲಾಗಿತ್ತು. ಆದರೆ, ಅಭಿಮಾನಿಗಳ ಅಂದಾಜು ಸುಳ್ಳಾಗಿದೆ. ಚಿತ್ರತಂಡವೇ ಮಾಹಿತಿ ಕೊಟ್ಟಿರುವಂತೆ ಇನ್ನೂ ಮೂರು ಹಾಡುಗಳ ಶೂಟಿಂಗ್ ಬಾಕಿ ಇದೆಯಂತೆ. ಈ ವಾರ ಒಂದು ಹಾಡಿನ ಚಿತ್ರೀಕರಣಕ್ಕೂ ಚಿತ್ರತಂಡ ಸಿದ್ಧವಾಗಿದೆ.

    ಇತ್ತೀಚೆಗಷ್ಟೇ ಈ ಸಿನಿಮಾದ ಒಂದು ಹಾಡು ಚಿತ್ರೀಕರಣವಾಗಿತ್ತು. ಈ ಹಾಡಿನಲ್ಲಿ ಇಟಾಲಿಯನ್ ಸುಂದರಿ ಜಾರ್ಜಿಯಾ (Giorgia Andriani)  ಜೊತೆ ಧ್ರುವ ಸರ್ಜಾ ಹೆಜ್ಜೆ ಹಾಕಿದ್ದರು. ಈ ಮೂಲಕ ಬಾಲಿವುಡ್‌ ನಟಿ ಜಾರ್ಜಿಯಾ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ:ಉಪೇಂದ್ರ ಮನೆಮುಂದೆ ಜಮಾಯಿಸಿದ ಅಭಿಮಾನಿಗಳು: ಉಪ್ಪಿ ಕೊಟ್ಟ ಭರವಸೆ ಏನು?

    ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಬಿಂದಾಸ್ ಹಾಡಿಗೆ ಚಿತ್ರೀಕರಣ ಮಾಡಲಾತ್ತು. ಧ್ರುವ ಜೊತೆ ಜಾರ್ಜಿಯಾ ಆಂಡ್ರಿಯಾನಿ ಸಖತ್ ಸ್ಟೆಪ್ಸ್ ಹಾಕಿದ್ದರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಆಕೆಯ ಮೊದಲ ಸಿನಿಮಾವಾಗಿದೆ. ಮಣಿ ಶರ್ಮಾ ಟ್ಯೂನ್ ಹಾಕಿರುವ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ. 300ಕ್ಕೂ ಹೆಚ್ಚು ಫಾರಿನ್ ಡ್ಯಾನ್ಸರ್ಸ್ ಹಾಡಿನಲ್ಲಿ ಕುಣಿದಿದ್ದಾರೆ. 3.5 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ದೂರಿಯಾಗಿ ಈ ಸಾಂಗ್ ಶೂಟಿಂಗ್ ನಡೆದಿದೆ.

    ‘ಪೊಗರು’ ಸಿನಿಮಾ ನಂತರ ಮಾರ್ಟಿನ್ ಆಗಿ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ. ಅದ್ದೂರಿ ಚಿತ್ರದ ನಂತರ 2ನೇ ಬಾರಿ ಧ್ರುವಗೆ ಎ.ಪಿ ಅರ್ಜುನ್ (A.p Arjun) ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಟಿನ್‌ಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ.

    ಕಳೆದ ವರ್ಷ ಮಾರ್ಟಿನ್ (Martin) ಟೀಸರ್‌ಗೆ ಬಿಗ್ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೀಮಂತದ ಸಂಭ್ರಮದಲ್ಲಿ ಧ್ರುವ ಸರ್ಜಾ ಪತ್ನಿ ಪ್ರೇರಣಾ

    ಸೀಮಂತದ ಸಂಭ್ರಮದಲ್ಲಿ ಧ್ರುವ ಸರ್ಜಾ ಪತ್ನಿ ಪ್ರೇರಣಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ದಂಪತಿ ಸದ್ಯ 2ನೇ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ. ಸಿಹಿಸುದ್ದಿ ಜೊತೆ ಇತ್ತೀಚಿಗೆ ಧ್ರುವ ಪತ್ನಿ ಪ್ರೇರಣಾಗೆ (Prerana) ಸೀಮಂತ (Baby Shower) ಕಾರ್ಯಕ್ರಮ ನೆರವೇರಿದ್ದು, ಈ ಕುರಿತ ವಿಡಿಯೋವೊಂದನ್ನ ನಟ ಶೇರ್ ಮಾಡಿದ್ದಾರೆ.

    ಪತ್ನಿ ಪ್ರೇರಣಾ ಸೀಮಂತ ಸಂಭ್ರಮ ವಿಡಿಯೋವನ್ನ ನಟ ಹಂಚಿಕೊಂಡಿದ್ದು, ಹಸಿರು ಬಣ್ಣದ ಸೀರೆಯಲ್ಲಿ ಪ್ರೇರಣಾ ಕಂಗೊಳಿಸಿದ್ದಾರೆ. ಲೈಟ್ ಬಣ್ಣದ ಉಡುಗೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ.

    ಕನಕಪುರ ರಸ್ತೆಯ ಫಾರ್ಮ್ ಹೌಸ್‌ನಲ್ಲಿ ಪ್ರೇರಣಾ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆಯಿತು. ಚಿರು ಸರ್ಜಾ (Chiru) ಫೋಟೋವನ್ನ ಫೋನ್‌ನಲ್ಲಿ ಧ್ರುವ ಪುತ್ರಿ ನೋಡ್ತಿರುವ ತುಣುಕು ಗಮನ ಸೆಳೆಯುತ್ತಿದೆ. ಧ್ರುವ ದಂಪತಿ, ಮಗಳಿಗೆ ಚಿರು ಅಂತ ಹೆಸರು ಹೇಳಿ ಕೊಡುತ್ತಿರೋದು ಮುದ್ದಾಗಿದೆ.ಇದನ್ನೂ ಓದಿ:3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಜೆನಿಲಿಯಾ? ವೈರಲ್‌‌ ಆಯ್ತು ಫೋಟೋ

    ಮನೆಗೆ ಕಳೆದ ವರ್ಷ ಮುದ್ದು ಮಗಳ ಆಗಮನವಾಗಿದೆ. 2ನೇ ಮಗುವಿನ ನಿರೀಕ್ಷೆಯಲ್ಲಿರುವ ಪ್ರೇರಣಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ.  ಸೀಮಂತ ಶಾಸ್ತ್ರ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಆಪ್ತರು, ಅಭಿಮಾನಿಗಳು ವಿಶ್‌ ಮಾಡಿದ್ದಾರೆ.

    ಆಗಸ್ಟ್ 25ರಂದು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧ್ರುವ ಸರ್ಜಾ 2ನೇ ಮಗುವಿನ ಬಗ್ಗೆ ಗುಡ್ ನ್ಯೂಸ್ ಹೇಳಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣ ಚಿರು ಸಮಾಧಿ ಬಳಿ ನಿದ್ದೆ ಮಾಡಿದ ಧ್ರುವ ಸರ್ಜಾ

    ಅಣ್ಣ ಚಿರು ಸಮಾಧಿ ಬಳಿ ನಿದ್ದೆ ಮಾಡಿದ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ (Sandalwood) ನಟ ಧ್ರುವ ಸರ್ಜಾ ಅವರು ಅಣ್ಣ ಚಿರು ಸಮಾಧಿ ಬಳಿ ನಿದ್ದೆ ಮಾಡಿದ್ದು, ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಸಹೋದರ ಚಿರು ಜೊತೆ ಧ್ರುವಗೆ ಉತ್ತಮ ಒಡನಾಟವಿತ್ತು. ಇಬ್ಬರು ಸದಾ ಜೊತೆಯಾಗಿ ಇರುತ್ತಿದ್ದರು. ಚಿರು ಅಗಲಿರುವ ಶಾಕ್‌ನಿಂದ ಸರ್ಜಾ ಕುಟುಂಬ ಇನ್ನೂ ಹೊರಬಂದಿಲ್ಲ.  ಅವರ ಅಗಲಿಕೆಯ ನೋವು ಧ್ರುವ ಇಂದಿಗೂ ಕಾಡುತ್ತಿದೆ ಎಂಬುದಕ್ಕೆ ಚಿರು ಸಮಾಧಿ ಬಳಿ ನಟ ನಿದ್ರೆ ಮಾಡಿರುವ ವಿಡಿಯೋ ಸಾಕ್ಷಿಯಾಗಿದೆ.

    ನೆಲಗುಳಿ ಧ್ರುವ ಸರ್ಜಾ (Dhruva Sarja) ಫಾರ್ಮ್ ಹೌಸ್ ಚಿರು (Chiru Sarja) ಸಮಾಧಿಗೆ ನಟ ಭೇಟಿ ಕೊಟ್ಟಿದ್ದಾರೆ. ದಿಂಬು ಹಿಡಿದುಕೊಂಡು ಬೆಡ್‌ಶೀಟ್ ಹೊದ್ದು ಮಲಗಿದ್ದ ನಟ ಪಕ್ಕದಲ್ಲಿಯೇ ಫೋನ್ ಇದೆ. ಚಿರು ಸಮಾಧಿಗೆ ಹೂವಿನಿಂದ ಅಲಂಕಾರ ಮಾಡಲಾಗಿದೆ. ಇದನ್ನೂ ಓದಿ:Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

    ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’ (Rajamartanda) ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಧ್ರುವ ಹುಟ್ಟುಹಬ್ಬ ಅಕ್ಟೋಬರ್ 6ರಂದು ರಾಜಮಾರ್ತಾಂಡ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಚಿರು ಜ್ಯೂನಿಯರ್‌ ರಾಯನ್‌ ರಾಜ್‌ ಸರ್ಜಾ ಕೂಡ ನಟಿಸಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗೆ ಚಿರು ಪುತ್ರನ ಎಂಟ್ರಿಯಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಮಾರ್ಟಿನ್’ ಧ್ರುವ ಜೊತೆ ಸೊಂಟ ಬಳುಕಿಸಿದ ಜಾರ್ಜಿಯಾ ಆಂಡ್ರಿಯಾನಿ

    ‘ಮಾರ್ಟಿನ್’ ಧ್ರುವ ಜೊತೆ ಸೊಂಟ ಬಳುಕಿಸಿದ ಜಾರ್ಜಿಯಾ ಆಂಡ್ರಿಯಾನಿ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin Film) ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇಟಾಲಿಯನ್ ಸುಂದರಿ ಜಾರ್ಜಿಯಾ (Giorgia Andriani)  ಜೊತೆ ಧ್ರುವ ಸರ್ಜಾ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಬಾಲಿವುಡ್‌ ನಟಿ ಜಾರ್ಜಿಯಾ ಕನ್ನಡ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ.

    ‘ಮಾರ್ಟಿನ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಇದರೊಟ್ಟಿಗೆ ಇತ್ತೀಚೆಗೆ ಚಿತ್ರದ ಸ್ಪೆಷಲ್ ಸಾಂಗ್ ಶೂಟ್ ಕೂಡ ಮುಕ್ತಾಯವಾಗಿದೆ. ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಬಿಂದಾಸ್ ಹಾಡಿಗೆ ಚಿತ್ರೀಕರಣ ಮಾಡಲಾಗಿದೆ. ಧ್ರುವ ಜೊತೆ ಜಾರ್ಜಿಯಾ ಆಂಡ್ರಿಯಾನಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಆಕೆಯ ಮೊದಲ ಸಿನಿಮಾವಾಗಿದೆ. ಮಣಿ ಶರ್ಮಾ ಟ್ಯೂನ್ ಹಾಕಿರುವ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ. 300ಕ್ಕೂ ಹೆಚ್ಚು ಫಾರಿನ್ ಡ್ಯಾನ್ಸರ್ಸ್ ಹಾಡಿನಲ್ಲಿ ಕುಣಿದಿದ್ದಾರೆ. 3.5 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ದೂರಿಯಾಗಿ ಈ ಸಾಂಗ್ ಶೂಟಿಂಗ್ ನಡೆದಿದೆ. ಇನ್ನು 2 ಸಾಂಗ್ ಶೂಟಿಂಗ್ ಬಾಕಿಯಿದೆ.

    ‘ಪೊಗರು’ ಸಿನಿಮಾ ನಂತರ ಮಾರ್ಟಿನ್ ಆಗಿ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ. ಅದ್ದೂರಿ ಚಿತ್ರದ ನಂತರ 2ನೇ ಬಾರಿ ಧ್ರುವಗೆ ಎ.ಪಿ ಅರ್ಜುನ್ (A.p Arjun) ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಟಿನ್‌ಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ. ಇದನ್ನೂ ಓದಿ:ಇಂಡಿಯಾ ಬದಲು ‘ಭಾರತ್‌’ ಎಂದು ಹೆಸರಿಡಲು ಬಿಗ್ ಬಿ ಬೆಂಬಲ

    ಕಳೆದ ವರ್ಷ ಮಾರ್ಟಿನ್ (Martin) ಟೀಸರ್‌ಗೆ ಬಿಗ್ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ತಿಗೆ ಬಗ್ಗೆ ತುಂಬಾ ಹೆಮ್ಮೆಯಿದೆ: ಧ್ರುವ

    ಅತ್ತಿಗೆ ಬಗ್ಗೆ ತುಂಬಾ ಹೆಮ್ಮೆಯಿದೆ: ಧ್ರುವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆಯಾದ್ಮೇಲೂ ನಟನೆಗೆ ಕಮ್‌ಬ್ಯಾಕ್ ಮಾಡ್ತಿರೋ ಅತ್ತಿಗೆ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯೆ

    ಮದುವೆಯಾದ್ಮೇಲೂ ನಟನೆಗೆ ಕಮ್‌ಬ್ಯಾಕ್ ಮಾಡ್ತಿರೋ ಅತ್ತಿಗೆ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯೆ

    ಸ್ಯಾಂಡಲ್‌ವುಡ್ (Sandalwood) ರಾಜಹುಲಿ (Rajahuli) ಬ್ಯೂಟಿ ಮೇಘನಾ ರಾಜ್ (Meghana Raj) ಸರ್ಜಾ ಅವರು ಮತ್ತೆ ನಟನೆಯತ್ತ ವಾಲಿದ್ದಾರೆ. ಪತಿ ಚಿರು ನಿಧನದ ಬಳಿಕ ಮಗನ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ, ಈಗ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ.

    ಅತ್ತಿಗೆ ಮೇಘನಾ ರಾಜ್, ಮತ್ತೆ ಸಿನಿಮಾ ಮಾಡ್ತಿರೋದು ಖುಷಿ ಕೊಟ್ಟಿದೆ. ಮದುವೆ ಆದ್ಮೇಲೆ ಬಹಳಷ್ಟು ಹೆಣ್ಣು ಮಕ್ಕಳು ಕೆಲಸ ಮಾಡುತ್ತಾರೆ. ನನ್ನ ಅತ್ತಿಗೆ ಕೂಡ ಕೆಲಸ ಮಾಡ್ತಿದ್ದಾರೆ ಅನ್ನೋದು ನಮಗೆ ಹೆಮ್ಮೆಯ ವಿಚಾರ ಎಂದಿದ್ದಾರೆ. ಈ ಮೂಲಕ ಅತ್ತಿಗೆಯ ಕಮ್‌ಬ್ಯಾಕ್ ಸಿನಿಮಾ ಬಗ್ಗೆ ಧ್ರುವ ಸರ್ಜಾ (Dhruva Sarja) ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಚಿರಂಜೀವಿ ಸರ್ಜಾ ಕಳೆದ ಎರಡು ವರ್ಷದ ಹಿಂದೆ ನಿಧನರಾದರು. ಚಿರು ನಿಧನ ಇಡೀ ಸರ್ಜಾ ಕುಟುಂಬದಕ್ಕೆ ಶಾಕ್ ನೀಡಿತ್ತು. ರಾಯನ್ ಆಗಮನದಲ್ಲಿ ಚಿರುನ ಕಾಣುತ್ತಿದ್ದರು. ಹೀಗಿರುವಾಗ ರಾಯನ್ (Rayan) ಪಾಲನೆ ಜವಬ್ದಾರಿ ಜೊತೆ ಮತ್ತೆ ಸಿನಿಮಾಗೆ ಮೇಘನಾ ರಾಜ್ ಕಮ್ ಬ್ಯಾಕ್ ಮಾಡ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ. ಇದನ್ನೂ ಓದಿ:ಹೇ ಹೆಂಡತಿ ಎಂದು ಸಮಂತಾ ಜೊತೆ ಹೆಜ್ಜೆ ಹಾಕಿದ ವಿಜಯ್ ದೇವರಕೊಂಡ

    ಆಗಸ್ಟ್ 25ರಂದು ತಮ್ಮ ಎರಡನೇ ಮಗುವಿನ ಆಗಮನದ ಬಗ್ಗೆ ಧ್ರುವ ಸರ್ಜಾ ದಂಪತಿ ಗುಡ್ ನ್ಯೂಸ್ ನೀಡಿದ್ದರು. ಇದೀಗ ಧ್ರುವ ಮನೆಗೆ ಭೇಟಿ ನೀಡಿ, ತಮ್ಮ ಹುಟ್ಟುಹಬ್ಬವನ್ನು ನೆಚ್ಚಿನ ನಟನ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ. ಪ್ರತಿವಾರ ಭಾನುವಾರ ಅಭಿಮಾನಿಗಳಿಗೆ ಮೀಸಲಿಡುವ ಧ್ರುವ, ಕಳೆದ ಎರಡ್ಮೂರು ವಾರಗಳಿಂದ ಫ್ಯಾನ್ಸ್ಗೆ ಭೇಟಿ ನೀಡಿರಲಿಲ್ಲ. ಈಗ ಧ್ರುವ ಮನೆಗೆ ಭೇಟಿ ನೀಡಿ, ಫೋಟೋ ಕ್ಲಿಕ್ಕಿಸಿ, ಧ್ರುವ ನಟನೆಯ ಸಿನಿಮಾದ ಡೈಲಾಗ್ ಹೊಡೆದು ಸಂಭ್ರಮಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಮುಗಿಸಿ ಇಂದು ಅಭಿಮಾನಿಗಳಿಗೆ ಸಮಯ ನೀಡಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ.

    ದೂರ ಊರುಗಳಿಂದ ಬಂದಿರುವ ಅಭಿಮಾನಿಗಳನ್ನು ಭೇಟಿ ಮಾಡಿರೋದು ನನಗೆ ಖುಷಿ ಕೊಟ್ಟಿದೆ. ಅವರ ಹುಟ್ಟುಹಬ್ಬವನ್ನ ನನ್ನ ಜೊತೆ ಆಚರಿಸೋದು ನನಗೆ ಆಶೀರ್ವಾದ. ಎಷ್ಟೋ ತಾಯಂದಿರ ಆಶೀರ್ವಾದ ಸಿಕ್ತಿದೆ ಅನ್ನೋದು ಖುಷಿ. ಈ ಖುಷಿಯ ಜೊತೆಗೆ ಮನೆಗೆ ಮತ್ತೊಂದು ಮಗು ಬರುತ್ತಿದೆ. ಮುಂದಿನ ತಿಂಗಳು ಡೆಲಿವರಿ ಡೇಟ್ ಕೊಟ್ಟಿದ್ದಾರೆ. ಈಗಾಗಲೇ ಒಬ್ಬ ಮಗ ಇದ್ದಾನೆ ಮಗಳು ಇದ್ದಾಳೆ. ಯಾವುದೇ ಮಗು ಆದರೂ ನಮಗೆ ಖುಷಿನೇ ಎಂದು ಧ್ರುವ ಸರ್ಜಾ ಎರಡನೇ ಮಗುವಿನ ಆಗಮನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಅತ್ತಿಗೆ ಕಮ್ ಬ್ಯಾಕ್ ಬಗ್ಗೆ ಧ್ರುವ ಸರ್ಜಾ ಸಂತಸ ವ್ಯಕ್ತಪಡಿಸಿದ್ದಾರೆ.