ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ವಿರುದ್ಧ ಬನಶಂಕರಿ ಪೊಲೀಸ್ (Banshankari) ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೋಜ್ ಎಂಬುವವರು ನಟ ಧ್ರುವ ಸರ್ಜಾ, ಅವರ ಮ್ಯಾನೇಜರ್, ಚಾಲಕ ಹಾಗು ಫಾನ್ಸ್‌ಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಇವರುಗಳಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ನಮ್ಮ ಮನೆ ಮುಂದೆ ಫ್ಯಾನ್ಸ್‌ಗಳು ಬೈಕ್ ಪಾರ್ಕ್ ಮಾಡುತ್ತಾರೆ. ಅಲ್ಲದೇ ಮನೆಯ ಮುಂದೆಯೇ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಯ ಮೇಲೆ ಉಗಿಯುತ್ತಾರೆ. ಇದ್ದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ:1.85 ಲಕ್ಷ ರೂ. ಫೋನ್ ಬುಕ್ ಮಾಡಿದ್ದ ಟೆಕ್ಕಿಗೆ ಶಾಕ್ – ಡೆಲಿವರಿ ಬಾಕ್ಸಲ್ಲಿ ಟೈಲ್ಸ್ ಪೀಸ್ ಇಟ್ಟು ವಂಚನೆ
ನಟನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ದೂರಿನನ್ವಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.
– ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ ಇಂದು ತೆರೆ – ನಾಳೆ ಗರ್ಭಗುಡಿ ಬಾಗಿಲು ಬಂದ್
ಹಾಸನ: ಗೋಲ್ಡನ್ ಪಾಸ್ (Golden Pass) ಪಡೆದು, ಸರತಿ ಸಾಲಿನಲ್ಲಿ ನಿಂತು ನಟ ಧ್ರುವ ಸರ್ಜಾ (Dhruva Sarja) ಹಾಸನಾಂಬೆ ದರ್ಶನ ಪಡೆದಿದ್ದಾರೆ.
ತಂದೆ ಹಾಗೂ ಸ್ನೇಹಿತರ ಜೊತೆ ಹಾಸನಾಂಬ ದೇವಾಲಯಕ್ಕೆ (Hasanamba Temple) ಆಗಮಿಸಿದ ಧ್ರುವ ಸರ್ಜಾ, ಸರತಿ ಸಾಲಿನಲ್ಲಿ ಬಂದು ದೇವಸ್ಥಾನದ ಬಳಿ ಬರುತ್ತಿದ್ದಂತೆ ಸರತಿ ಸಾಲಿನಿಂದ ಹೊರಬಂದು ನಂತರ ಮುಖ್ಯದ್ವಾರದ ಮೂಲಕ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ರಷ್ಯಾದ ತೈಲ ಆಮದು ಕಡಿಮೆಯಾಗಲಿದೆ, ದೀಪಾವಳಿಯಂದು ಮೋದಿ ಜೊತೆ ಮಾತನಾಡಿದ್ದೇನೆ: ಟ್ರಂಪ್
ಇನ್ನು ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಇಂದು ಹದಿಮೂರು ಹಾಗೂ ಕಡೆಯ ದಿನವಾಗಿದ್ದು, ಹಿಂದೆಂದೂ ಕಾಣದಷ್ಟು ಭಕ್ತಗಣ ಆಗಮಿಸಿದೆ. ಬೆಳಗ್ಗೆ 6 ಗಂಟೆಯಿಂದ ದೇವಿ ದರ್ಶನ ಆರಂಭವಾಗಿದ್ದು, ಸರತಿ ಸಾಲುಗಳಲ್ಲಿ ನಿಂತು ಸಹಸ್ರಾರು ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ. ಧರ್ಮ ದರ್ಶನ, 1000 ರೂ., 300 ರೂ. ಹಾಗೂ ವಿಶೇಷ ದರ್ಶನದ ಸರತಿ ಸಾಲುಗಳಲ್ಲಿ ಜನಜಂಗುಳಿ ಉಂಟಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆ – ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಇಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ನಿರಂತರವಾಗಿ ದೇವಿಯ ದರ್ಶನ ಪಡೆದಿದ್ದಾರೆ. ಇಂದು ರಾತ್ರಿ 7ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಗರ್ಭಗುಡಿಯ ಬಾಗಿಲು ಬಂದ್ ಆಗಿರಲಿದೆ. ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದೇವಿ ದರ್ಶನ ಇರುವುದಿಲ್ಲ. ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಬೆಳಗ್ಗೆ 5 ಗಂಟೆಯವರೆಗೆ ಸ್ಥಳೀಯರಿಗೆ ಹಾಗೂ ಸಾರ್ವಜನಿಕರಿಗೆ ದರ್ಶನವಿರಲಿದೆ. ನಾಳೆ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಇದನ್ನೂ ಓದಿ: ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿ ಅಮಾನತುಗೊಂಡಿರುವ ಪಿಡಿಒಗೆ ಮತ್ತೊಂದು ಸಂಕಷ್ಟ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೆಆರ್ ರಸ್ತೆಯ ತಮ್ಮ ನಿವಾಸದ ಮುಂದೆ ನಟ ಧ್ರುವ ಸರ್ಜಾ ಅದ್ಧೂರಿಯಾಗಿ ಬರ್ತ್‌ಡೇ (Dhruva Sarja Birthday) ಆಚರಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು (Dhruva Sarja Fans) ರಕ್ತದಾನ, ಅನ್ನದಾನ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ದಾನದಂತಹ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದರು.
ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ದೂರದ ಊರಿನಿಂದ ಅಭಿಮಾನಿಗಳು, ಆಪ್ತರು ಹಾಗೂ ಕುಟುಂಬಸ್ಥರು ಆಗಮಿಸಿ ಶುಭ ಹಾರೈಸಿದ್ದಾರೆ. ಇದೇ ವೇಳೆ ಆಗಮಿಸಿದ ನಿರ್ಮಾಪಕ ಉಮಾಪತಿ ಗೌಡ (Umapathy) ಧ್ರುವ ಸರ್ಜಾಗೆ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ಬಳಿಕ ಮಾತನಾಡಿದ ಅವರು. ಧ್ರುವ ಸರ್ಜಾ ಅವರು ನಾಯಕರಾಗಿ ತಮ್ಮ ಬ್ಯಾನರ್ ನಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಈ ಮಾತು ಕೇಳಿದ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿ ಕುಣಿದಾಡಿದ್ದಾರೆ. ಇದನ್ನೂ ಓದಿ: ನಂಬಿಕೆ, ಜಾನಪದದ ಮಿಶ್ರಣವೇ ಕಾಂತಾರ ಚಾಪ್ಟರ್-1: ಅಣ್ಣಾಮಲೈ ಶ್ಲಾಘನೆ
ನಿರ್ಮಾಪಕ ಉಮಾಪತಿ ಗೌಡ ಈ ಹಿಂದೆ ಸುದೀಪ್ ಹಾಗೂ ದರ್ಶನ್ ಅವರಿಗೆ ಸಿನಿಮಾ ಮಾಡಿರುವ ನಿರ್ಮಾಪಕರು. ಇದೀಗ ಧ್ರುವ ಸರ್ಜಾ ಅವರ ಜೊತೆಗೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸದ್ಯ ಧ್ರುವ ಕೆಡಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ಪಯಣ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಬಳಿಕ ಉಮಾಪತಿಗೌಡ ಅವರ ಚಿತ್ರದಲ್ಲಿ ನಟಿಸುವ ಪ್ಲ್ಯಾನ್ ಕೂಡಾ ನಡೆಯುತ್ತಿದೆ. ಇದನ್ನೂ ಓದಿ: ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಆದ್ರೆ ಜನರಿಗೆ ಆತನ ಮೇಲಿರುವ ಪ್ರೀತಿಯನ್ನ ನೋಡ್ತಿದ್ದೀನಿ: ಗುಲ್ಶನ್ ದೇವಯ್ಯ
ಉದಯ ಟಿವಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 27 ಶನಿವಾರ ಸಂಜೆ 6 ಗಂಟೆಗೆ ಧ್ರುವ ಸರ್ಜಾ (Dhruva Sarja) ಜೊತೆ ವಿಶೇಷ ಕಾರ್ಯಕ್ರಮ ʻಧ್ರುವ ದಸರಾʼ (Dhruva Dasara) ಪ್ರಸಾರವಾಗಲಿದೆ. ಭರ್ಜರಿ ಸೆಟ್‌ನಲ್ಲಿ ಚಿತ್ರರಂಗದ ಪ್ರಮುಖ ತಾರೆಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಚಿತ್ರೀಕರಣಗೊಂಡಿರುವ ʻಧ್ರುವ ದಸರಾʼ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಪಯಣ ಮತ್ತು ಬಾಲ್ಯದಿಂದ ಇಲ್ಲಿಯವರೆಗಿನ ಜೀವನದ ಝಲಕ್ ಕೂಡ ಹೌದು.
ಧ್ರುವ ದಸಾರದ ಒಂದು ವಿಶೇಷ ಅಂದ್ರೆ, ಧ್ರುವ ಅವರಿಗೆ ಗೊತ್ತಿರದೇ ಹಲವು ವಿಶೇಷ ವ್ಯಕ್ತಿಗಳು ಆಗಮಿಸಿ ಅವರಿಗೆ ಅಚ್ಚರಿ ಮೂಡಿಸಿದರು. ಆಗ ಧ್ರುವ ಸರ್ಜಾ ಇವರ ಜೊತೆ ಕಳೆದ ಬಹಳ ಅಪರೂಪದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಹಳಷ್ಟು ಕುತೂಹಲಕರ ಘಟನೆಗಳು, ಭಾವನಾತ್ಮಕ ವಿಷಯಗಳು ಇಲ್ಲಿವೆ. ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳ ಜೈಕಾರದ ನಡುವೆ ತಮ್ಮ ʻಕೆಡಿʼ ಚಿತ್ರದ (KD Film) ಹಾಡಿನೊಂದಿಗೆ ಧ್ರುವ ಎಂಟ್ರಿ ಕೊಟ್ಟಿದ್ದು ವಿಶೇಷ. ತಾನು ಸುಪರ್ ಸ್ಟಾರ್ ಎನ್ನಿಸಿಕೊಳ್ಳಲು ಇಷ್ಟಪಡುವುದಿಲ್ಲ. ತಾನೊಬ್ಬ ನಟ ಮಾತ್ರ ಎಂದು ವಿನಯದಿಂದ ಹೇಳಿದ ಧ್ರುವ ಸರ್ಜಾ ಅಭಿಮಾನಿಗಳಿಗಾಗಿ ಇನ್ನು ಮುಂದೆ ಪ್ರತಿವರ್ಷ ಕನಿಷ್ಟ ಎರಡು ಚಿತ್ರಗಳಲ್ಲಿ ನಟಿಸುವುದಾಗಿ ಘೋಷಿಸಿದರು. ಇದನ್ನೂ ಓದಿ: ರಾಮಾಯಣ ಆಧರಿತ ʻರಾಮಲೀಲಾʼದಲ್ಲಿ ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಆಯ್ಕೆ
ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ (Meghana Raj) ಆಕಸ್ಮಿಕವಾಗಿ ವೇದಿಕೆಗೆ ಆಗಮಿಸಿ ಧ್ರುವ ಅವರಿಗೆ ಅಚ್ಚರಿ ಮೂಡಿಸಿದರು. ಅತ್ತಿಗೆಯನ್ನು ತಾಯಿಯಂತೆ ಕಾಣುವ ಧ್ರುವ ಅಣ್ಣನನ್ನು ನೆನೆದು ಭಾವುಕರಾದರು. ಮನೆಗೆ ಬಂದಾಗ ತಮ್ಮ ಮಗ ರಾಯನ್ ಜೊತೆ ಧ್ರುವ ಮಗುವಾಗಿ ಇರುವ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು ಮೇಘನಾ ರಾಜ್. ಧ್ರುವ ಸರ್ಜಾ ತಮ್ಮ ಪತ್ನಿ ಪ್ರೇರಣಾ ಬಗೆಗೆ ಹೇಳಬೇಕಾದ್ರೆ ಹಿಂದಿನಿಂದ ವೇದಿಕೆಗೆ ಅವರೇ ಸ್ವತಃ ಬಂದಿದ್ದು ಇವರಿಗೆ ಆಶ್ಚರ್ಯ ಉಂಟುಮಾಡಿತು. ಪ್ರೇರಣಾ, ಟಿವಿ ಕಾರ್ಯಕ್ರಮವೊಂದರಲ್ಲಿ ಮೊಟ್ಟಮೊದಲ ಬಾರಿ ಕಾಣಿಸಿಕೊಂಡಿದ್ದು ʻಧ್ರುವ ದಸರಾʼ ವಿಶೇಷಗಳಲ್ಲೊಂದು. ಇದೇ ಸಂದರ್ಭದಲ್ಲಿ ತಮ್ಮ ಹಾಗೂ ಧ್ರುವ ನಡುವಿನ ಪ್ರೇಮಲೋಕದ ದಿನಗಳನ್ನು ಮೆಲುಕು ಹಾಕಿದರು. ಅವರು ಧ್ರುವರಿಗೆ ಪ್ರೇಮ ಪ್ರಸ್ತಾಪ ಮಾಡಿದ್ದನ್ನು ಮರುಸೃಷ್ಟಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ಮುಂಗಡವಾಗಿ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಲಾಯಿತು. ಮಕ್ಕಳಾದ ರುದ್ರಾಕ್ಷಿ ಹಾಗೂ ಹಯವದನ ಕೂಡ ಉಪಸ್ಥಿತರಿದ್ದುದು ವಿಶೇಷವಾಗಿತ್ತು.
ಕಲಾವಿದ, ಚಿಕ್ಕಪ್ಪ ಅರ್ಜುನ್ ಸರ್ಜಾ ಅವರು ವಿಡಿಯೋ ಮುಖಾಂತರ ಶುಭ ಕೋರಿದರು. ಧ್ರುವ ಅವರ ನಿಷ್ಠೆ, ಕಠಿಣ ಪರಿಶ್ರಮ, ನಟನಾ ಚಾತುರ್ಯದ ಬಗ್ಗೆ ವಿವರಿಸಿದರು. ಧ್ರುವ ಸರ್ಜಾ ಅವರಿಗೆ ನಟನೆ ಕಲಿಸಿದ ಗೌರಿ ದತ್ತು ಹಾಗೂ ಮಹಾಂತೇಶ್, ನಟನೆಯಲ್ಲಿ ಅವರಿಗಿರುವ ಶ್ರದ್ಧೆ ವಿವರಿಸಿ ನಾಟಕ ಶಾಲೆಗೆ ದೊಡ್ಡ ಪ್ರಮಾಣದ ದೇಣಿಗೆ ನೀಡಿದ್ದನ್ನು ಸ್ಮರಿಸಿದರು. ಎಂದೋ ನಟಿಸಿದ ನಾಟಕದ ಸಂಭಾಷಣೆ ಯಥಾವತ್ ಒಪ್ಪಿಸಿ ಚಪ್ಪಾಳೆ ಗಿಟ್ಟಿಸಿದರು ಧ್ರುವ. ಇದನ್ನೂ ಓದಿ: ಕಾಂತಾರ ಚಾಪ್ಟರ್-1 ಟ್ರೈಲರ್ ರಿಲೀಸ್ – ದೃಶ್ಯ ವೈಭವಕ್ಕೆ ಮನಸೋತ ಫ್ಯಾನ್ಸ್
ಗಾಯಕ, ನಟ ಚಂದನ್ ಶೆಟ್ಟಿ ಕಷ್ಟದ ಸಮಯದಲ್ಲಿ ಧ್ರುವ ಸಹಾಯ ಮಾಡಿದ್ದನ್ನು ನೆನೆದರು. ತಾನು ಬರೆದ ಒಂದು ಹಾಡನ್ನು 8 ವರ್ಷ ಕಾಪಾಡಿಕೊಂಡು ʻಪೊಗರುʼ ಚಿತ್ರದಲ್ಲಿ ಬಳಸಿಕೊಂಡಿದ್ದನ್ನು ಸ್ಮರಿಸಿದರು. ಚಂದನ್ ಶೆಟ್ಟಿ ಜೊತೆ ನಟಿಸಿದ ಆಲ್ಬಂ ಹಾಡೊಂದಕ್ಕೆ ಸಿಕ್ಕ 501 ರುಪಾಯಿ ಮೊದಲ ಸಂಭಾವನೆ ಎಂದು ಅಚ್ಚರಿಸಿಪಡಿಸಿದರು ಧ್ರುವ ಸರ್ಜಾ. ಗೆಳೆಯ, ನಟ ರಾಕೇಶ್ ಅಡಿಗ ಮಾತನಾಡುತ್ತಾ ಧ್ರುವ ಸರ್ಜಾರ ಬಾಲ್ಯದ ತುಂಟಾಟದ ಘಟನೆಗಳನ್ನು ಹಂಚಿಕೊಂಡರು. ಧ್ರುವ ದೈವಭಕ್ತರೂ ಆಗಿದ್ದು ಆಧ್ಯಾತ್ಮ ಆಸಕ್ತರೂ ಹೌದು ಎಂಬ ವಿಷಯ ಬಹಿರಂಗಪಡಿಸಿದರು. ಇದಕ್ಕೆ ತಕ್ಕಂತೆ, ಗರುಡ ಪುರಾಣದ ಕೆಲವು ವಿಷಯಗಳ ಬಗ್ಗೆ ಧ್ರುವ ಸರ್ಜಾ ನಿರರ್ಗಳವಾಗಿ ಮಾತನಾಡಿ ಅಚ್ಚರಿ ಮೂಡಿಸಿದರು. ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಈ ಬಾರಿ ಯಾರು ಹೋಗ್ತಾರೆ? ಹರಿದಾಡುತ್ತಿದೆ ಹಲವು ಹೆಸರುಗಳು
ಧ್ರುವ ಒಬ್ಬ ʻಮೌನದಾನಿʼ ಎಂಬುದನ್ನು ಅವರಿಂದ ಉಪಕೃತರಾದ ಹಲವರು ಬಹಿರಂಗ ಪಡಿಸಿದರು. ಆಟೋ ಖರೀದಿಗೆ, ಆಪರೇಷನ್‌ಗೆ, ಕಾಲೇಜು ಅಡ್ಮಿಷನ್ಗೆ ಹೀಗೆ ಅನೇಕ ಸಂದರ್ಭಗಳಲ್ಲಿ ಧ್ರುವ ಸಹಾಯ ಮಾಡಿದ್ದನ್ನು ಸ್ಮರಿಸಿದರು. ಮೂರು ವರ್ಷದ ದೃಷ್ಟಿಹೀನ ಬಾಲಕನಿಗೆ ಚಿಕಿತ್ಸೆಗೆ ನೆರವಾಗಿ ದೃಷ್ಟಿ ಮರಳಿದ್ದು ಗಮನ ಸೆಳೆಯಿತು. ತಾವು ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವರೋ ಅಂಥ ಗುಣಮಟ್ಟದ ಆಸ್ಪತ್ರೆಗೇ ಸಹಾಯ ಕೇಳಿ ಬಂದವರನ್ನು ಕಳಿಸುವುದು ವಿಶೇಷ. ಕಲಾವಿದರಾದ ಬುಲೆಟ್ ರಕ್ಷಕ್, ಐಶ್ವರ್ಯ ಸಿಂಧೋಗಿ, ಯಶಸ್ವಿನಿ, ರಮೋಲಾ, ಆಸಿಯಾ ಬೇಗಂ, ಧನುಷ್ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದರು. ಚಿಲ್ಲರ್ ಮಂಜು, ಮನೋಹರ್ ಕಾಮಿಡಿ ಎಲ್ಲರನ್ನು ನಗೆಗಡಲಿಗೆ ಕರೆದುಕೊಂಡು ಹೋಯಿತು. ನಿರ್ದೇಶಕ ಚೇತನ್ ಕುಮಾರ, ನೃತ್ಯ ಸಂಯೋಜಕ ಮುರಳಿ ಮಾಸ್ಟರ್, ಛಾಯಾಗ್ರಾಹಕ ಡೇವಿಡ್ ಮತ್ತಿತರರು ಧ್ರುವ ಜೊತೆ ತಮ್ಮ ಸಿನಿ ಪಯಣ ಅನುಭವ ಹಂಚಿಕೊಂಡರು.
ಉದಯ ಟಿವಿಯ ಸಿಂಧು ಭೈರವಿ, ಶಾಂತಿನಿವಾಸ, ಶೀಘ್ರದಲ್ಲಿ ಪ್ರಸಾರವಾಗಲಿರುವ ರಥಸಪ್ತಮಿ ಧಾರಾವಾಹಿ ಕಲಾವಿದರ ನೃತ್ಯ ವರ್ಣರಂಜಿತವಾಗಿತ್ತು. ಉದಯ ಟಿವಿಯ ಕಾದಂಬರಿ ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣ ಮಾಡಿದ ಶ್ವೇತಾ ಚಂಗಪ್ಪ ಮತ್ತೆ ಹಲವು ವರ್ಷಗಳ ನಂತರ ಉದಯ ಟಿವಿಯ “ಧ್ರುವ ದಸರಾ” ಕಾರ್ಯಕ್ರಮ ನಿರೂಪಕರಾಗಿ ಬಂದ್ದದ್ದು ವಿಶೇಷ. ʻಧ್ರುವ ದಸರಾʼ ಇದೇ ಸೆಪ್ಟೆಂಬರ್ 27, ಶನಿವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಇದನ್ನೂ ಓದಿ: ನಿತಿನ್ ಶಿವಾಂಶ್ ಜೊತೆ ಪ್ರೀತಿ ಗುಟ್ಟು ರಟ್ಟು ಮಾಡಿದ ಖ್ಯಾತ ಗಾಯಕಿ ಸುಹಾನಾ ಸಯ್ಯದ್
ಕೋಲಾರ: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಕೋಲಾರ (Kolar) ತಾಲೂಕು ಕೋರಗೊಂಡನಹಳ್ಳಿಯಲ್ಲಿರುವ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ (Kashi Vishweshwara Swamy Temple) ನಟ ಧ್ರುವ ಸರ್ಜಾ (Dhruva Sarja) ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹಾಗೂ ಪ್ರೇಮ್ (Orem) ಕಾಂಬಿನೇಷನ್‌ನ `ಕೆಡಿ’ (KD) ಚಿತ್ರತಂಡವು ಫಾನ್ಸ್‌ಗೆ ಗುಡ್‌ನ್ಯೂಸ್ ನೀಡಿದೆ. ದಿಢೀರ್ ಸಿನಿಮಾ ಶೂಟಿಂಗ್ ಮುಕ್ತಾಯವಾಗಿರುವ ಸುದ್ದಿ ಅನೌನ್ಸ್ ಮಾಡಿರುವ ಟೀಮ್ ಶೀಘ್ರದಲ್ಲೇ ತೆರೆಗೆ ಬರ್ತೀವಿ ಎಂಬ ಲೇಟೆಸ್ಟ್ ಸುದ್ದಿಯನ್ನ ವೀಡಿಯೋ ಮಾಡಿ ಘೋಷಣೆ ಮಾಡಿದೆ.
ಶೂಟಿಂಗ್ ಅಡ್ಡದಿಂದ ಸಿನಿಮಾ ತಂತ್ರಜ್ಞರ ಜೊತೆಗೂಡಿ ಧ್ರುವ ಸರ್ಜಾ ವೀಡಿಯೋ ಮೂಲಕ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿರೋದನ್ನ ಘೋಷಿಸಿದ್ದಾರೆ. ಈ ವೀಡಿಯೋವನ್ನ ನಿರ್ದೇಶಕ ಪ್ರೇಮ್ ಇನ್ಸ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಗೋಲ್ಡನ್ ಕ್ವೀನ್ ಅಮೂಲ್ಯ ಕಮ್‌ಬ್ಯಾಕ್
ಶನಿವಾರವಷ್ಟೇ ಕೆಡಿ ಚಿತ್ರತಂಡ ಸುದೀಪ್ ಎಂಟ್ರಿಯನ್ನ ರಿವೀಲ್ ಮಾಡಿತ್ತು. ಅಭಿಮಾನಿಗಳಿಗೆ ಇದು ಸಪ್ರೈಸ್ ಆಗಿತ್ತು. ಈ ವಿಷಯ ಅರಗಿಸಿಕೊಳ್ಳುವಷ್ಟರಲ್ಲೇ ಶೂಟಿಂಗ್ ಕಂಪ್ಲೀಟ್ ಆಗಿರುವ ಮಾಹಿತಿ ಕೊಟ್ಟಿದೆ ಚಿತ್ರತಂಡ. ಇಷ್ಟೇ ಅಲ್ಲದೆ ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ ಅನ್ನೋದಾಗಿ ಘೋಷಿಸಿದೆ.
ಅಂದಹಾಗೆ ಕೆಡಿ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಪ್ರಯತ್ನದಲ್ಲಿದೆ ಎಂಬ ಸುದ್ದಿ ಇತ್ತು. ಅದಕ್ಕೀಗ ರೆಕ್ಕೆಪುಕ್ಕ ಬಂದಿದೆ. ಈಗಾಗ್ಲೇ ಡಿಸೆಂಬರ್‌ನಲ್ಲಿ ಮೂವರು ಬಿಗ್ ಸ್ಟಾರ್‌ಗಳ ಸಿನಿಮಾಗಳು ಸರತಿಯಲ್ಲಿ ನಿಂತಾಗಿದೆ. ಇದೀಗ `ಕೆಡಿ’ ಸಿನಿಮಾ ಎಲ್ಲಿ ಜಾಗ ಮಾಡಿಕೊಳ್ಳುತ್ತೆ ಅನ್ನೋದೇ ಲೆಕ್ಕಾಚಾರಕ್ಕೆ ಸಿಗದ ವಿಷಯ.
ವಂಚನೆ ಆರೋಪ ಪ್ರಕರಣದಲ್ಲಿ ನಟ ಧ್ರುವ ಸರ್ಜಾಗೆ (Dhruva Sarja) ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನಟನ ವಿರುದ್ಧ ನ್ಯಾಯಾಲಯದ ಅನುಮತಿಯಿಲ್ಲದೆ ಆರೋಪಪಟ್ಟಿ ಸಲ್ಲಿಸದಂತೆ ಬಾಂಬೆ ಹೈಕೋರ್ಟ್, ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ವಿಭಾಗೀಯ ಪೀಠವು, ನ್ಯಾಯಾಲಯದ ಅನುಮತಿಯಿಲ್ಲದೆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸದಂತೆ ನಿರ್ದೇಶಿಸಿದೆ. ಇದನ್ನೂ ಓದಿ: 3.15 ಕೋಟಿ ವಂಚನೆ ಆರೋಪ; ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್
ನಟನ ವಿರುದ್ಧ ಮುಂಬೈನಲ್ಲಿ ಬಹುಕೋಟಿ ವಂಚನೆ ಪ್ರಕರಣವನ್ನು ಜಗ್ಗುದಾದ ಸಿನಿಮಾದ ನಿರ್ದೇಶಕ ರಾಘವೇಂದ್ರ ಹೆಗಡೆ ದಾಖಲಿಸಿದ್ದರು. ಈ ಸಂಬಂಧ ಮುಂಬೈ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಧ್ರುವ ಸರ್ಜಾಗೆ ನಟಿಸುವುದಕ್ಕಾಗಿ ಮುಂಗಡ ಹಣ ನೀಡಿದ್ದೆ. 3.15 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ, ಸಿನಿಮಾದಲ್ಲಿ ನಟಿಸುವುದಕ್ಕೆ ಸರ್ಜಾ ನಿರಾಕರಿಸಿದ್ದರು. ಮುಂಗಡ ತಗೆದುಕೊಂಡಿರುವ ಹಣವನ್ನು ವಾಪಸ್ಸು ನೀಡುತ್ತಿಲ್ಲ ಎಂದು ಹೆಗಡೆ ದೂರಿನಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ಕೆಜಿಎಫ್ ಖ್ಯಾತಿಯ ಹರೀಶ್ ರಾಯ್ ಸಹಾಯಕ್ಕೆ ನಿಂತ ಧ್ರುವ ಸರ್ಜಾ
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸರ್ಜಾ ಅರ್ಜಿ ಸಲ್ಲಿಸಿದ್ದರು. ನಾನು ಯಾವುದೇ ಚಿತ್ರದಲ್ಲಿ ಕೆಲಸ ಮಾಡುವ ಒಪ್ಪಂದದಿಂದ ಎಂದಿಗೂ ಹಿಂದೆ ಸರಿದಿಲ್ಲ. ಹೆಗಡೆ ಅವರು ಕೆಲಸ ಮಾಡಲು ಯಾವುದೇ ಕಾರ್ಯಸಾಧ್ಯವಾದ ಸ್ಕ್ರಿಪ್ಟ್‌ಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ಸರ್ಜಾ ತಿಳಿಸಿದ್ದರು.
ಇದೇ ಸಪ್ಟೆಂಬರ್ 2ಕ್ಕೆ ಕಿಚ್ಚ ಸುದೀಪ್ (Kichcha Sudeep) 52ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಬಾರಿ ಅಮ್ಮನಿಲ್ಲದ ವರ್ಷ ಆಗಿರೋದ್ರಿಂದ ಅವರಿಗೆ ಸೆಲೆಬ್ರೇಷನ್ ಮಾಡಿಕೊಳ್ಳಲು ಮನಸ್ಸಿಲ್ಲದಿದ್ದರೂ ಅಭಿಮಾನಿಗಳನ್ನ ಭೇಟಿಯಾಗೋಕೆ ಮನಸ್ಸು ಮಾಡಿದ್ದಾರೆ. ಈ ಹೊತ್ತಲ್ಲಿ ಹಲವು ವರ್ಷಗಳಿಂದ ಕಿಚ್ಚನ ಹುಟ್ಟುಹಬ್ಬದ ಸ್ಪೆಷಲ್ ಆಗಿ ಸಿಡಿಪಿ (Sudeep CDP) ರಿಲೀಸ್ ಮಾಡುವ ಟ್ರೆಂಡ್ ಸೃಷ್ಟಿಸಿಕೊಂಡು ಬಂದಿದ್ದಾರೆ ಫ್ಯಾನ್ಸ್. ಈ ವರ್ಷದ ಕಿಚ್ಚನ ಬರ್ತ್‌ಡೇ ಸಿಡಿಪಿಯನ್ನು ಮೂವರು ಬಿಗ್ ಸ್ಟಾರ್ಸ್ ಞಲೀಸ್ ಮಾಡಿರುವುದು ವಿಶೇಷ.
ಹುಟ್ಟು ಹಬ್ಬದ ಶುಭಾಶಯಗಳು @KicchaSudeep ಮುಂದಿನ ಎಲ್ಲಾ ಸಿನಿಮಾಗಳಿಗೂ ಶುಭವಾಗಲಿ, ನೂರು ಕಾಲ ಚೆನ್ನಾಗಿರಿ.
ಕಿಚ್ಚನ ಬರ್ತ್‌ಡೇ ಸಿಡಿಪಿ ರಿಲೀಸ್ ಮಾಡಿರುವ ಮತ್ತೋರ್ವ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸಿಡಿಪಿ ರಿಲೀಸ್ ಮಾಡಿ, “ಹುಟ್ಟುಹಬ್ಬದ ಶುಭಾಶಯಗಳು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸರ್, ಹೀಗೆ ನಮ್ಮನ್ನು ಇನ್ಸ್ಪೈರ್ ಮಾಡ್ತಿರಿʼ ಅಂದಿದ್ದಾರೆ.
ಇನ್ನು ಸುದೀಪ್ ಹುಟ್ಟುಹಬ್ಬಕ್ಕೆ ಸಿಡಿಪಿ ರಿಲೀಸ್ ಮಾಡಿರುವ ಮತ್ತೊಬ್ಬ ಸ್ಟಾರ್ ಡಾಲಿ ಧನಂಜಯ, ಹುಟ್ಟುಹಬ್ಬದ ಶುಭಾಶಯಗಳು ಸರ್, ನಮಗೆ ಇನ್ಸ್ಪೈರ್ ಮಾಡ್ತಿರಿʼ ಎಂದು ಹೇಳಿದ್ದಾರೆ. ಒಟ್ನಲ್ಲಿ ಸಪ್ಟೆಂಬರ್ 2 ರಂದು ನಡೆಯಲಿರುವ ಕಿಚ್ಚನ ಬರ್ತ್‌ಡೇಗೆ ಅಬ್ಬರ ಈಗಿನಿಂದಲೇ ಶುರುವಾಗಿದೆ. ಅಂದೇ ಹಲವು ಸಿನಿಮಾಗಳ ಮಾಹಿತಿ ರಿವೀಲ್ ಆಗಲಿದೆ.
ಹಿರಿಯ ನಟ ಹರೀಶ್ ರಾಯ್ (Harish Roy) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಮ್ಮ ಚಿಕಿತ್ಸೆಗಾಗಿ ಆರ್ಥಿಕ ನೆರವಿಗಾಗಿ ಸಹಾಯವನ್ನ ಕೇಳಿದ್ದರು. ಈ ವಿಡಿಯೋ ವೈರಲ್ ಆ ಬೆನ್ನಲ್ಲೇ ನಟ ಧ್ರುವ ಸರ್ಜಾ (Dhruva Sarja) ನಟ ಹರೀಶ್ ರಾಯ್ ಸಹಾಯಕ್ಕೆ ನಿಂತಿದ್ದಾರೆ. ಅವರ ಆಸ್ಪತ್ರೆಯ ಖರ್ಚನ್ನ ಭರಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ನಟ ಧ್ರುವ ಸರ್ಜಾ ಅವರಿಗೆ ಧನ್ಯವಾದವನ್ನ ಹೇಳಿದ್ದಾರೆ ಹರೀಶ್ ರಾಯ್.
ಹರೀಶ್ ರಾಯ್ ಅವರಿಗೆ ನೀಡಬೇಕಾದ ಚಿಕಿತ್ಸೆ ದುಬಾರಿಯಾಗಿದ್ದು, ಒಂದೊಂದು ಇಂಜೆಕ್ಷನ್ ಬೆಲೆ ಮೂರುವರೆ ಲಕ್ಷ ರೂಪಾಯಿಗಳದ್ದು ಎಂದು ಈ ಹಿಂದೆ ಪಬ್ಲಿಕ್ ಟಿವಿಗೆ ಹೇಳಿಕೊಂಡಿದ್ದರು. ಜೊತೆಗೆ ಹರೀಶ್ ರಾಯ್ ಅವರಿಗೆ ತುರ್ತಾಗಿ ಚಿಕಿತ್ಸೆ ಕೂಡಾ ಪ್ರಾರಂಭಿಸಬೇಕಿದೆ ಎಂದು ವೈದ್ಯರು ಸಲಹೆಯನ್ನ ನೀಡಿದ್ದಾರಂತೆ. ಹೀಗಾಗಿ ಚಿತ್ರರಂಗದವರ ನೆರವನ್ನ ಕೇಳಿದ್ದರು ಹರೀಶ್ ರಾಯ್.
ಹರೀಶ್ ರಾಯ್ ಕಷ್ಟದ ಈ ಸಂದರ್ಭಕ್ಕೆ ನಟ ಧ್ರುವ ಸರ್ಜಾ ಮಿಡಿದಿದ್ದಾರೆ. ಹರೀಶ್ ರಾಯ್ ಅವರ ಆಸ್ಪತ್ರೆ ಖರ್ಚು ಭರಿಸುತ್ತೇನೆ ಎಂದು ಮಾತು ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಕೆಜಿಎಫ್ ಸಿನಿಮಾ ಶೂಟಿಂಗ್ ವೇಳೆ ಅಂದರೆ ಮೂರು ವರ್ಷಗಳ ಹಿಂದೆ ಕ್ಯಾನ್ಸರ್ ಚಿಕಿತ್ಸೆಗಾಗಿ ನಟ ಯಶ್, ದರ್ಶನ್ ಹಾಗೂ ದುನಿಯಾ ವಿಜಯ್ ಸಹಾಯ ಮಾಡಿದ್ದರು ಎಂದು ನಟ ಹರೀಶ್ ರಾಯ್ ತಿಳಿಸಿದ್ದರು.
ಜಗ್ಗುದಾದ ಸಿನಿಮಾದ ನಿರ್ದೇಶಕ ರಾಘವೇಂದ್ರ ಹೆಗಡೆ (Raghavendra Hegde) ಹಾಗೂ ಧ್ರುವ ಸರ್ಜಾ (Dhruva Sarja) ಸಿನಿಮಾ ಮಾಡುವ ವಿಚಾರ ವಿವಾದಕ್ಕೆ ತಿರುಗಿದೆ. ಸುಮಾರು ಎಂಟು ವರ್ಷಗಳ ಹಿಂದೆ ನಡೆದ ಒಪ್ಪಂದದ ಪ್ರಕಾರ ಸಿನಿಮಾ ಇಲ್ಲಿಯವರೆಗೂ ಮಾಡುವುದಕ್ಕೆ ಆಗಿಲ್ಲ. ಒಪ್ಪಂದಕ್ಕೆ ಸಹಿಹಾಕುವ ಮೊದಲೇ ಅಡ್ವಾನ್ಸ್ ರೂಪದಲ್ಲಿ ನಟ ಧ್ರುವ ಸರ್ಜಾ ಹಣ ಪಡೆದಿದ್ದಾರೆ. ಆದ್ರೆ ಸಿನಿಮಾ ಮಾಡೋಕೆ ದಿನಗಳನ್ನ ಮುಂದೂಡುತ್ತಲೇ ಇದ್ದಾರೆ ಎಂದು ನಟ ಧ್ರುವ ಸರ್ಜಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಮುಂಬೈನ (Mumbai) ಆಂಬೋಳಿ (Amboli) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ಧ್ರುವ ಸರ್ಜಾ ವಿರುದ್ಧ ಪ್ರಕರಣ ದಾಖಲಾದ ಬಳಿಕ ಧ್ರುವ ಸರ್ಜಾ ಆಪ್ತ ಬಳಗದಿಂದ ಸ್ಪಷ್ಟನೆ ಸಿಕ್ಕಿತ್ತು. ಅಲ್ಲದೇ ಕನ್ನಡಕ್ಕೆ ನಿರ್ದೇಶಕರು ಆದ್ಯತೆ ನೀಡದೇ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ಮಾಡುವ ಬಗ್ಗೆ ನಿರ್ದೇಶಕ ಕೇಳಿಕೊಂಡಿದ್ದಾರೆ. ಇದಕ್ಕೆ ಧ್ರುವ ಸರ್ಜಾ ಒಪ್ಪದೇ ಇದ್ದಾಗ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು ಎಂದು ಧ್ರುವ ಆಪ್ತಬಳಗದಿಂದ ಸ್ಪಷ್ಟನೆ ಬಂದಿತ್ತು. ರಾಘವೇಂದ್ರ ಹೆಗಡೆಯವರನ್ನ ಕನ್ನಡ ವಿರೋಧಿ ಅಂತ ಬಿಂಬಿಸಿದ್ದಕ್ಕೆ ನಿರ್ದೇಶಕ ರಾಘವೇಂದ್ರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ ಬಳಗದ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ ಜಗ್ಗುದಾದಾ ಡೈರೆಕ್ಟರ್ ರಾಘವೇಂದ್ರ ಹೆಗಡೆ. ‘ನಾನು ಕನ್ನಡದಲ್ಲೇ ಜಗ್ಗುದಾದಾ ಸಿನಿಮಾ, ಶನಿ ಸೀರಿಯಲ್, ಮಹಾಕಾಳಿ ಸೀರಿಯಲ್ ಮಾಡಿದ್ದೆ. 2ನೇ ಸಿನಿಮಾ ಧ್ರುವ ಸರ್ಜಾ ಅವರಿಗೆ ಮಾಡಬೇಕಿತ್ತು. ಕೆಡಿ ಮುಗಿಸಬೇಕು ಅಂತ ಕೇಳಿಕೊಂಡಿದ್ರು, ಆಯ್ತು ಅಂತ 8 ವರ್ಷ ಕಾದೆ. ಒಂದು ಬಾರಿ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಅವರ ಸಮ್ಮುಖದಲ್ಲಿ ಕನ್ನಡ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದೆ. ಅವರು ಪ್ಯಾನ್ ಇಂಡಿಯಾ ಮಾಡ್ತಿದ್ದಿವಿ, ಕೆಲವು ದಿನ ಕಳೆದ ನಂತರ ಮಾಡಿ ಅಂದ್ರು. ಕಾನೂನು ಪ್ರಕಾರ ನನ್ನ ಹಣ ವಾಪಸ್ ಕೊಡಿ ಅಂತ ಕೇಳಿದ್ದೆ, ನಂತರ ನಾನು ನೋಟೀಸ್ ಕಳಿಸಿದೆ. ನಾನು ತಮಿಲಕು ಅತಯವಾ ತೆಲುಗು ಸಿನಿಮಾ ಮಾಡುವುದಾಗಿದ್ದರೆ ತಮಿಳು ಅಥವಾ ತೆಲುಗು ನಟರಿಗೆ ಸಿನಿಮಾ ಮಾಡ್ತಿದ್ದೆ’ ಎಂದು ಹೇಳಿದ್ದಾರೆ. ನಾನು ಕರಾವಳಿಯವನು ನನ್ನ ಮಾತೃ ಭಾಷೆ ಕನ್ನಡ ಎಂದು ತಿರುಗೇಟು ನೀಡಿದ್ದಾರೆ.