Tag: Dhruva Narayan

  • ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡುತ್ತದೆ: ಧ್ರುವನಾರಾಯಣ್

    ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡುತ್ತದೆ: ಧ್ರುವನಾರಾಯಣ್

    ಮಂಡ್ಯ: ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ನಮ್ಮ ಪಕ್ಷದಿಂದ ಎಲ್ಲಾ ಸಮುದಾಯವರಿಗೆ ಟಿಕೆಟ್ ನೀಡುವ ಮೂಲಕ ಅದು ಸಾಭಿತಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೇಳಿದಂತೆ ನಡೆದುಕೊಳ್ಳುತ್ತ ಬಂದಿದೆಯೇ ಎಂದು ಮಾಜಿ ಸಂಸದ ಧ್ರುವನಾರಾಯಣ್ ಅವರು ಕೇಳಿದರು.

    ಶುಕ್ರವಾರ ಕೃಷ್ಣರಾಜನಗರದ ಶ್ರೀಮತಿ ಜಯಮ್ಮ ಶಿವಲಿಂಗಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ ಟೀಕೆಟ್ ನೀಡುತ್ತಾ ಬೆಳೆಸುತ್ತಾ ಬಂದಿದೆ. ಆದರೆ ಬಿಜೆಪಿ ಅವರು ಹೇಳಿದಂತೆ ನಡೆದುಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ದಿನೇಶ್ ಅವರು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರು ಪಾದರಸದಂತೆ ಕೆಲಸ ಮಾಡುವುದನ್ನು ಕಂಡು ಹಲವಾರು ಸಚಿವರು ವಿಶೇಷ ಕರ್ತವ್ಯಾಧಿಕಾರಿಯಾಗಿ ಕರೆದುಕೊಂಡಿದ್ದಾರೆ. ಹೀಗಾಗಿ ಇಂತಹ ವ್ಯಕ್ತಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.

    ಮಂಡ್ಯದ ಸ್ವಾಭಿಮಾನ ಉಳಿಸಿದ್ದಾರೆಯೇ?: ಜೆಡಿಎಸ್ ನಿಂದ ಗೆದ್ದು ಹೋದವರು ವಿಧಾನ ಪರಿಷತ್ತಿನಲ್ಲಿ ಇಲ್ಲಿನ ಸಮಸ್ಯೆಗಳನ್ನು ಎತ್ತಿ ಹಿಡಿದಿದ್ದಾರೆಯೇ. ಕೇವಲ ಅಧಿಕಾರಕ್ಕಾಗಿ ಬಂದು ಇಲ್ಲಿ ಇಂದು ಮತ ಕೇಳುತ್ತಿದ್ದಾರೆ. ಅವರು ಮಂಡ್ಯದ ಸ್ವಾಭಿಮಾನದ ಜೊತೆಗೆ ಇಲ್ಲಿನ ಜನರ ಸ್ವಾಭಿಮಾನವನ್ನು ಕುಂಠಿತಗೊಳಿಸಿದ್ದಾರೆ ಎಂದು ನರೇಂದ್ರ ಸ್ವಾಮಿ ಕೇಳಿದರು.

    ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇಲ್ಲಿಗೆ ಕೊಟ್ಟಿರುವ ಆಶ್ವಾಸನೆಗಳು, ಅಭಿವೃದ್ಧಿಗಳು ಈಡೇರಿದೆಯೇ ಎಂದು ಆತ್ಮವಲೋಕನ ಮಾಡಿಕೊಳ್ಳಬೇಕು. 15ನೇ ಹಣಕಾಸು ಯೋಜನೆ ಹಣವನ್ನು ಜಲಜೀವನ್ ಮೀಷನ್ ಗೆ ನೀಡಿದ್ದಾರೆ. ಇದರಿಂದ ಯಾರಿಗಾದರೂ ಅನುಕೂಲವಾಗಿದೆಯೇ ಎಂದು ಪ್ರಶ್ನಿಸಿದರು. ಹಾಲಿಗೆ ನೀರು ಬೇರೆಸಿ ಅಕ್ರಮವಾಗಿ ಹಣ ಲೂಟಿ ಮಾಡುತ್ತಿದ್ದವರು ತನಿಖೆಗೆ ಒಪ್ಪಿಕೊಳ್ಳಲಿ. ಇಂದು ರೈತರು ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕು. ರೈತರಿಗೆ ಮೋಸ ಮಾಡುವ ಜನರನ್ನು ಮತ್ತೆ ಅಧಿಕಾರಕ್ಕೆ ತರಬೇಕೆ ಎಂದರು.

    ಸುಳ್ಳು ಭರವಸೆಗಳ ನಾಯಕರು: ಈ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಹಲವಾರು ಆಸೆ ಆಮಿಷಗಳನ್ನು ಜನರಿಗೆ ತೋರಿಸಿ ಅಧಿಕಾರಕ್ಕೆ ಬಂದರು. 40% ಕಮಿಷನ್ ಅನ್ನು ಬಿಜೆಪಿ ಸರ್ಕಾರ ತೆಗೆದುಕೊಳ್ಳುತ್ತಿದೆ. ಅವರಿಗೆ ಮಾನ ಮರ್ಯಾದೆ ಇದೆಯಾ ಎಂದು ಕೆ.ಬಿ.ಚಂದ್ರಶೇಖರ್ ಹೇಳಿದರು.

    ಜೆಡಿಎಸ್ ಇರೊದು ಅಲ್ಲೊಂದು ಇಲ್ಲೊಂದು. ಕಳೆದ ಬಾರಿ ವಿಧಾನ ಸಭೆಯಲ್ಲಿ ನಿಂತಾಗ ಕುಮಾರಸ್ವಾಮಿ ಅವರು ವಯಸ್ಸಾದವರಿಗೆ 6000 ರೂ ಕೊಡುತ್ತೇನೆ, ಸಾಲ ಮನ್ನಾ ಮಾಡುತ್ತೇನೆ ಎಂದವರು ಮಾಡಿದ್ದಾರೆಯೇ. ಅಧಿಕಾರಕ್ಕೆ ಬರಲು ಕೇವಲ ಇಂತಹ ಟೊಳ್ಳು ಭರವಸೆಗಳನ್ನು ಕೊಡುತ್ತಾರೆ ಎಂದರು.

    ಮತ ಕೇಳುವ ಯಾವ ನೈತಿಕತೆಯೂ ಇಲ್ಲ: ಜೆಡಿಎಸ್ ನಿಂದ ಗೆದ್ದು ಇದೀಗ ಮತ ಕೇಳಲು ಬಂದಿರುವ ಅಪ್ಪಾಜಿ ಗೌಡ ಅವರಿಗೆ ಮತ ಕೇಳುವ ಯಾವ ನೈತಿಕತೆಯೂ ಇಲ್ಲ.ಅವರು ಯಾವುದಾದರೂ ಅಭಿವೃದ್ಧಿ ಕೆಲಸವನ್ನು ಜಿಲ್ಲೆಯಲ್ಲಿ ಮಾಡಿದ್ದಾರೆಯೇ ಎಂದು ಸಿ.ಡಿ.ಗಂಗಾಧರ್ ಪ್ರಶ್ನಿಸಿದರು. ಇದನ್ನೂ ಓದಿ: ಕಮಿಷನ್ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ: ಹೆಚ್.ಡಿ.ರೇವಣ್ಣ ಒತ್ತಾಯ

    ಜೆಡಿಎಸ್ ನಿಂದ ಅಂದು ಗೆದ್ದು ಹೋದವರು ಮತ್ತೆ ಆರು ವರ್ಷ ನಂತರ ಬಂದಿದ್ದಾರೆ. ಇವರು ಜಿಲ್ಲೆಯಲ್ಲಿ ಯಾವುದಾದರೂ ಅಭಿವೃದ್ಧಿ ಕಾರ್ಯ ಮಾಡಿದ್ದಾರೆಯೇ ಎಂದು ಅವರಿಗೆ ಇಂದು ಕೇಳಬೇಕಾಗಿದೆ. ಹೀಗಾಗಿ ಮತ್ತೆ ಇಂತವರು ಮತ್ತೆ ಮತ ಕೇಳಲು ಬಂದಿದ್ದಾರೆ. ಇಂತಹವರನ್ನು ನಾವು ಮತ್ತೆ ಗೆಲ್ಲಿಸಬೇಕೆ ಎಂದರು.

    ಜೆಡಿಎಸ್ ಜಿಲ್ಲೆಯಲ್ಲಿ ಯಾವುದಾದರೂ ಒಂದು ಸಭೆಯನ್ನು ಮಾಡಿಲ್ಲ. ಹೀಗಾಗಿ ನಮ್ಮ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರ ಗೆಲುವು ಇಂದು ನಮಗೆ ಅನಿವಾರ್ಯವಾಗಿದೆ. ಅವರನ್ನು ಗೆಲ್ಲಿಸಲು ನಾವು ಒಗ್ಗಟ್ಟಿನಿಂದ ಮುಂದೆ ಸಾಗಬೇಕಾಗಿದೆ ಎಂದು ಹೇಳಿದರು. ಇದೇ ವೇಳೆ ಮಾಜಿ ಶಾಸಕ ಪ್ರಕಾಶ್ ಅವರು ಮಾತನಾಡಿ, ಮುಂದೆ ಬರಲಿರುವ ಚುನಾವಣೆಗೆ ನಮಗೆ ಹಾಗೂ ನಮ್ಮ ಪಕ್ಷಕ್ಕೆ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಅಭ್ಯರ್ಥಿಯಾದ ದಿನೇಶ್ ಗೂಳಿಗೌಡ ಅವರನ್ನು ಗೆಲ್ಲಿಸುವ ಮೂಲಕ ನಾವು ಸಕ್ರಿಯರಾಗಿರುವುದನ್ನು ತೋರಿಸಬೇಕು ಎಂದು ಹೇಳಿದರು.

    ದಿನೇಶ್ ಗೂಳಿಗೌಡ ಅವರನ್ನು ಗೆಲ್ಲಿಸಲು ಮತದಾರರ ಮನವೋಲಿಸಬೇಕು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಓಡಾಡಬೇಕು. ನಿಮ್ಮ ವ್ಯಾಪ್ತಿಯಲ್ಲಿರುವ ಮತದಾರರ ಮನವೋಲಿಸಲು ಶ್ರಮಿಸಿ. ನಿಮಗೆ ನಾವೂ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದರಾಗಿದ್ದೇವೆ ಎಂದರು. ಇದನ್ನೂ ಓದಿ: ಸರ್ಕಾರದ ಕಮಿಷನ್ ಶೇ. 10 ಇದ್ದದ್ದು ಈಗ 30 ಪರ್ಸೆಂಟ್‌ಗೆ ಏರಿದೆ: ಗುತ್ತಿಗೆದಾರ ಕೆಂಪಣ್ಣ ಆರೋಪ

    24*7 ಸೇವೆಗೆ ಸಿದ್ಧ: ಪಕ್ಕದ ಮಾರಸಿಂಗನಹಳ್ಳಿಯವನಾದ ನಾನು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹಂತದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ರೈತ ಕುಟುಂಬದಿಂದ ಬಂದ ನನಗೆ ಇಲ್ಲಿನ ರೈತರ ಹಾಗೂ ಗ್ರಾಮದ ಸಮಸ್ಯೆಗಳ ಬಗ್ಗೆ ಅರಿವಿದೆ ಹೀಗಾಗಿ ನಾನು ನಿಮ್ಮ ಸೇವೆಗೆ ದಿನದ 24ಗಂಟೆಯೂ (24*7) ಸದಾ ಸಿದ್ದನಾಗಿರುತ್ತೇನೆ ಎಂದು ದಿನೇಶ್ ಗೂಳಿಗೌಡ ಹೇಳಿದರು.

    ನಾನು ಗೆದ್ದ ನಂತರ ನಿಮ್ಮ ಗ್ರಾಮಗಳಲ್ಲೆ ಬಂದು ವಾಸ್ತವ್ಯ ಹೂಡುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವೆ. ನಿಮ್ಮ ಕಷ್ಟಗಳನ್ನು ಹಾಗೂ ಗ್ರಾಮದ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಪರಿಹರಿಸುವ ಕಾರ್ಯ ಮಾಡುವ ಮುಖಾಂತರ ಕೊಂಡಿಯಾಗಿ ಸೇವೆ ನೀಡುವೆ ಎಂದರು.

    ಕಾರ್ಯಕ್ರಮದಲ್ಲಿ ಮಾಜಿ ಸಚಿವ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಅಭ್ಯರ್ಥಿ ದಿನೇಶ್ ಗೂಳಿಗೌಡ, ಮುಖಂಡರಾದ ಸುರೇಶ್, ದೇವರಾಜ, ಅಂಜನಾ ಶ್ರೀಕಾಂತ್, ರಮೇಶ್, ಕೃಷ್ಣ, ಪ್ರಸನ್ನ, ವಿಜಯ್ ಕುಮಾರ್, ಮಂಜ, ಸುದರ್ಶನ್, ಗೌರಿಶಂಕರ್ ಸೇರಿದಂತೆ ಇತರರು ಹಾಜರಿದ್ದರು.

  • ಆರ್‌ಎಸ್‌ಎಸ್‌ ಕೂಡಾ ತಾಲಿಬಾನ್ ಸಂಘಟನೆಯಂತೆ: ಧ್ರುವ ನಾರಾಯಣ್

    ಆರ್‌ಎಸ್‌ಎಸ್‌ ಕೂಡಾ ತಾಲಿಬಾನ್ ಸಂಘಟನೆಯಂತೆ: ಧ್ರುವ ನಾರಾಯಣ್

    ಮೈಸೂರು: ತಾಲಿಬಾನ್ ಮತ್ತು ಆರ್‌ಎಸ್‌ಎಸ್‌ ಸಂಘಟನೆ ನಡುವೆ ಕೆಲವು ಹೋಲಿಕೆ ಇದೆ. ಹೀಗಾಗಿ ಆರ್‌ಎಸ್‌ಎಸ್‌ ಕೂಡಾ ತಾಲಿಬಾನ್ ಸಂಘಟನೆಯಂತೆ’ ಎಂದು ಚಾಮರಾಜ ನಗರ ಮಾಜಿ ಸಂಸದ ಕೆ.ಪಿ.ಸಿ.ಸಿ. ಕಾರ್ಯಧ್ಯಕ್ಷ ಧ್ರುವ ನಾರಾಯಣ್ ಹೇಳಿಕೆ ನೀಡಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, `ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ. ಧರ್ಮ ಇಟ್ಕೊಂಡು ಆರ್‌ಎಸ್‌ಎಸ್‌, ತಾಲಿಬಾನ್ ಕೆಲಸ ಮಾಡುತ್ತಿದೆ. ನನ್ನ ವಿರುದ್ಧ ಆರ್‌ಎಸ್‌ಎಸ್‌, ಬಿಜೆಪಿಯವರು ಏನೇ ಹೋರಾಟ ಮಾಡಿದರೂ ನನ್ನ ಹೇಳಿಕೆಗೆ ನಾನು ಬದ್ಧ’ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಅಂದ್ರು ನನ್ನ ಪದವಿಗೆ ಧಕ್ಕೆ ಆಗಲ್ಲ-ಮುಖ್ಯಮಂತ್ರಿ ಚಂದ್ರು

    ಬೆಂಗಳೂರು-ಮೈಸೂರು ಹೈವೆ ಶ್ರೇಯಸ್ಸು ಎಲ್ಲಾ ಜನಪ್ರತಿನಿಧಿಗಳೂ ಸೇರುತ್ತದೆ. 2013ರಲ್ಲೇ ಅದರ ಪ್ರಾಜೆಕ್ಟ್ ರೆಡಿಯಾಗಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಸೇರಿ ಆಸ್ಕರ್ ಫರ್ನಾಂಡಿಸ್ ಜೊತೆ ಪ್ರಯತ್ನ ಮಾಡಿದ್ದರು. ವಿಶ್ವನಾಥ್ ಅವರ ಜೊತೆಗೂಡಿ ನಾನೂ ಕೂಡಾ ಆ ಪ್ರಯತ್ನದಲ್ಲಿ ಇದ್ದೆ. ನಂತರ ಎನ್‍ಡಿಎ ಸರ್ಕಾರ ಬಂತು. ಪ್ರತಾಪ್ ಸಿಂಹ ಕೂಡಾ ಅದರ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಈ ಹೈವೆಯ ಶ್ರೇಯಸ್ಸು ಎಲ್ಲಾ ಜನಪ್ರತಿನಿಧಿಗಳಿಗೂ ಸೇರುತ್ತದೆ ಎಂದರು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ

    ಆರ್‌ಎಸ್‌ಎಸ್‌-ತಾಲಿಬಾನ್ ಸಂಘಟನೆಯಂತೆ ಎಂದಿದ್ದ ಧ್ರುವ ನಾರಾಯಣ್ ಹೇಳಿಕೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು. ಮೈಸೂರಿನಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

  • ನಮ್ಮ ಹುಲಿ ಯಾವತ್ತು ಹುಲಿಯೇ: ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಧ್ರುವ ನಾರಾಯಣ್

    ನಮ್ಮ ಹುಲಿ ಯಾವತ್ತು ಹುಲಿಯೇ: ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಧ್ರುವ ನಾರಾಯಣ್

    ಚಾಮರಾಜನಗರ: ನಮ್ಮ ಹುಲಿ ಯಾವತ್ತು ಹುಲಿಯೇ, ಸಿದ್ದರಾಮಯ್ಯ ಎಂದಿಗೂ ಹುಲಿಯೇ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ತಿರುಗೇಟು ನೀಡಿದ್ದಾರೆ.

    ಇಂದು ಚಾಮರಾಜನಗರದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೂ ಮೈಸೂರು ಇತಿಹಾಸದಲ್ಲಿಯೇ ಬಿಜೆಪಿಯವರು ಮೇಯರ್ ಆಗಿಲ್ಲ. ನಮ್ಮ ಹುಲಿ ಯಾವತ್ತು ಹುಲಿಯೇ. ಸಿದ್ದರಾಮಯ್ಯ ಎಂದಿಗೂ ಹುಲಿಯೇ. ಪ್ರತಾಪ್ ಸಿಂಹರವರದ್ದು ಹತಾಶೆ ಹೇಳಿಕೆ ಅಷ್ಟೇ ಎಂದು ಹೇಳಿದರು.

    ನನ್ನನ್ನು ಮೇಯರ್ ಚುನಾವಣಾ ವೀಕ್ಷಕರಾಗಿ ನೇಮಿಸಲು ಕಾರಣ ಸಿದ್ದರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯ ಆದೇಶದಂತೆ ವೀಕ್ಷಕರಾಗಿ ಕೆಲಸ ಮಾಡಿದ್ದೇವೆ. ಘಟನಾವಳಿ ನಡೆದಿದ್ದು ಆಕಸ್ಮಿಕ. ಜೆಡಿಎಸ್ ಬೆಂಬಲಿಸಲು ಆ ಸಮಯ ಸಂದರ್ಭದಲ್ಲಿ ಕಾರ್ಪೊರೇಟರ್ ಕೈಗೊಂಡ ನಿರ್ಧಾರವಾಗಿದೆ. ಈಗಾಗಲೇ ಘಟನೆ ಕುರಿತಂತೆ ಸಿದ್ದರಾಮಯ್ಯನವರ ಜೊತೆ ಕೂಡ ನಾನು ಮಾತಾನಾಡಿದ್ದೇನೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ವರದಿ ಕೇಳಿದ್ದಾರೆ. ಸೋಮವಾರ ಮೇಯರ್ ಚುನಾವಣೆ ಘಟನಾವಳಿ ಕುರಿತು ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

    ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಒಡಕು ಮೂಡಿರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮದು ದೊಡ್ಡ ಕುಟುಂಬ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ. ಹಾಗೇನಾದರೂ ಇದ್ದಲ್ಲಿ ಇಂದು ಸಂಜೆ ಎರಡು ಬಣಗಳನ್ನು ಸೇರಿಸಿ ಒಂದು ಮಾಡುತ್ತೇವೆ ಭಿನ್ನಾಭಿಪ್ರಾಯ ಇದ್ದರೆ ಬಗ್ಗೆಹರಿಸುತ್ತೇನೆ. ಅಲ್ಲದೆ ಮೇಯರ್ ಚುನಾವಣೆ ಸಂಬಂಧ ಯಾರಿಗೂ ಕೂಡ ನೋಟಿಸ್ ಕೊಟ್ಟಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಿದ್ದು ತಪ್ಪು. ಪಕ್ಷದ ಆಂತರಿಕ ಸಮಸ್ಯೆ, ಪಕ್ಷದ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದರು.

    ಮೊದಲಿನಿಂದಲೂ ವಚನಭ್ರಷ್ಟತೆಗೆ ಹೆಸರಾದವರು, ಕೊಟ್ಟ ಮಾತಿಗೆ ಎಂದು ನಡೆದಿಲ್ಲ. ಪಾಲಿಕೆ ಚುನಾವಣೆ ಒಡಂಬಡಿಕೆಯಂತೆ ನಡೆದುಕೊಂಡಿಲ್ಲ. ಈ ಬಾರಿ ಕಾಂಗ್ರೆಸ್ ಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಡದಂತೆ ಸಿದ್ದರಾಮಯ್ಯನವರು ಎರಡು ಬಾರಿ ದೂರವಾಣಿ ಕರೆ ಮಾಡಿ ಕೂಡ ಹೇಳಿದ್ದರು. ಡಿಕೆಶಿ ಸಹ ಮೇಯರ್ ಸ್ಥಾನ ಉಳಿಸಿಕೊಳ್ಳುವಂತೆ ತಿಳಿಸಿದ್ದರು. ಹೀಗಾಗಿ ಚುನಾವಣೆ ವೇಳೆ 12 ಗಂಟೆಯವರೆಗೂ ಮಾಜಿ ಶಾಸಕ ವಾಸು, ಸೋಮಶೇಖರ್ ಹೀಗೆ ಎಲ್ಲರೂ ಒಟ್ಟಿಗೆ ಕುಳಿತಿದ್ದೇವು. ಆದರೆ ಚುನಾವಣೆ ಪ್ರಕ್ರಿಯೆಗೆ ಕಾರ್ಪೊರೇಟರ್ ಹೋದ ಬಳಿಕ ಅವರ ನಿರ್ಧಾರ ಬದಲಾಗಿದೆ. ಪಾಲಿಕೆಯಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಸವಿವರ ಪಡೆದು ಸೋಮವಾರ ಅಧ್ಯಕ್ಷರ ಕೈಗೆ ವರದಿ ಸಲ್ಲಿಸುತ್ತೇನೆ ಎಂದು ಹೇಳಿದರು.