Tag: Dhruva Narayan

  • ರಾಜಕೀಯ ಭವಿಷ್ಯವೇ ಬದಲಿಸಿದ ಒಂದೇ ಒಂದು ಮತ!

    ರಾಜಕೀಯ ಭವಿಷ್ಯವೇ ಬದಲಿಸಿದ ಒಂದೇ ಒಂದು ಮತ!

    ಮೈಸೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದೊಂದು ಮತವೂ ಮುಖ್ಯ. ಒಂದೇ ಒಂದು ಮತ ಗೆದ್ದ ವ್ಯಕ್ತಿಯ ರಾಜಕೀಯ ದಿಕ್ಕನ್ನೇ ಬದಲಿಸಿದರೆ! ಸೋತ ವ್ಯಕ್ತಿ ಈವರೆಗೆ ರಾಜಕೀಯವಾಗಿ ಮೇಲೆಳಲು ಆಗಿಲ್ಲ ಎಂದರೆ ನಂಬುತ್ತಿರಾ? ನೀವು ನಂಬಲೇಬೇಕು. ಇಂತಹ ಪ್ರಕರಣ ಅವಿಭಜಿತ ಮೈಸೂರು ಜಿಲ್ಲೆಯ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರ (Vidhanasabha Constituency) ದಲ್ಲಿ 2004 ರಲ್ಲಿ ಜರುಗಿದೆ.

    ಸಂತೇಮರಹಳ್ಳಿ ಪ. ಜಾತಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮೈಸೂರು ಭಾಗದ ಹಿರಿಯ ರಾಜಕಾರಣಿ ಬಿ. ರಾಚಯ್ಯ ಅವರು ಸತತವಾಗಿ ಆಯ್ಕೆಯಾಗುತ್ತಿದ್ದರು. 1989ರ ಚುನಾವಣೆಯಲ್ಲಿ ತಮ್ಮ ಮಗ ಎ.ಆರ್. ಕೃಷ್ಣಮೂರ್ತಿ (A R Krishna Murthy) ಗೆ ಜನತಾದಳ ಟಿಕೆಟ್ ಕೊಡಿಸಿದರು. ಆದರೆ ಆ ಚುನಾವಣೆಯಲ್ಲಿ ಗೆದ್ದಿದ್ದು ಮಾತ್ರ ಕಾಂಗ್ರೆಸ್‍ನ ಕೆ. ಸಿದ್ದಯ್ಯ, ನಂತರ 1994 ರಲ್ಲಿ ಜನತಾದಳ, 1999 ರಲ್ಲಿ ಜೆಡಿಯು (JDU) ಟಿಕೆಟ್ ಮೇಲೆ ಕೃಷ್ಣಮೂರ್ತಿ ಸತತ ಎರಡು ಬಾರಿ ಆ ಕ್ಷೇತ್ರದಿಂದ ಆಯ್ಕೆಯಾದರು. 1999 ರಲ್ಲಿ ಜೆಡಿಯು ಹಾಗೂ ಬಿಜೆಪಿ (BJP) ನಡುವೆ ಸ್ಥಾನ ಹೊಂದಾಣಿಕೆಯಾಗಿತ್ತು. ಆದರೂ ಈ ಕ್ಷೇತ್ರದಲ್ಲಿ ಜೆಡಿಯುನಿಂದ ಎ.ಆರ್. ಕೃಷ್ಣಮೂರ್ತಿ, ಬಿಜೆಪಿಯಿಂದ ಧ್ರುವನಾರಾಯಣ ಅಭ್ಯರ್ಥಿಗಳಾಗಿದ್ದರು. ಕೃಷ್ಣಮೂರ್ತಿ ಅವರು 33,977 ಮತಗಳನ್ನು ಪಡೆದು, 28,071 ಮತಗಳನ್ನು ಪಡೆದ ಧ್ರುವನಾರಾಯಣ ಅವರನ್ನು ಸೋಲಿಸಿದರು. ಇದನ್ನೂ ಓದಿ: ರಾಷ್ಟ್ರ ರಾಜಕಾರಣಕ್ಕೆ ಹೋಗಲು ಯತ್ನಿಸಿ ಸೋತರು; ರಾಜ್ಯ ರಾಜಕಾರಣದಲ್ಲೇ ಗೆಲುವು ಕಂಡರು!

    ಧ್ರುವನಾರಾಯಣ (DhruvaNarayan) ಮೂಲತಃ ಕಾಂಗ್ರೆಸ್ಸಿಗರು. ರಾಜ್ಯ ಹಾಗೂ ಕೇಂದ್ರದಲ್ಲಿಯ ಇತಿಹಾಸ ಸಚಿವರಾಗಿದ್ದ ದಿವಂಗತ ಎಂ. ರಾಜಶೇಖರಮೂರ್ತಿ ಅವರ ಕಟ್ಟಾ ಬೆಂಬಲಿಗರು, ಹೀಗಾಗಿ ಅವರು ಮೂರ್ತಿ ಅವರೊಂದಿಗೆ ಬಿಜೆಪಿಗೆ ಹೋಗಿದ್ದರು. 2004ರ ಚುನಾವಣೆ ವೇಳೆಗೆ ಧ್ರುವನಾರಾಯಣ ಕಾಂಗ್ರೆಸ್ಸಿಗೆ ಮರಳಿದ್ದರು. ಆ ಚುನಾವಣೆಯಲ್ಲಿ ಅವರು ಸಂತೇಮರಹಳ್ಳಿಯಿಂದ ಕಾಂಗ್ರೆಸ್ ಅಭ್ಯರ್ಥಿ. ಎ.ಆರ್. ಕೃಷ್ಣಮೂರ್ತಿ ಜೆಡಿಎಸ್ (JDS) ಅಭ್ಯರ್ಥಿ. ಮತದಾನಕ್ಕೆ ಎಲೆಕ್ಟ್ರಾನಿಕ್ ಮತಯಂತ್ರ ಬಳಕೆಯಾಗಿತ್ತು. ಮತ ಎಣಿಕೆ ನಡೆದಾಗ ಧ್ರುವನಾರಾಯಣ ಅವರಿಗೆ 19,752 ಮತ್ತು ಕೃಷ್ಣಮೂರ್ತಿ ಅವರಿಗೆ 19,751 ಮತಗಳು ಬಂದವು. ಇದನ್ನೂ ಓದಿ: ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ – ಈಗ ನಿವೃತ್ತರಿಗೇ ಇಲ್ಲ ಅಧಿಕಾರ!

    ಮರು ಎಣಿಕೆ ಮಾಡಿದರೂ ಅಷ್ಟೇ. ಕೇವಲ ಒಂದೇ ಒಂದು ಮತದಿಂದ ಧ್ರುವನಾರಾಯಣ ಗೆದ್ದರು. ಕೃಷ್ಣಮೂರ್ತಿ ಸೋತರು. ಒಂದೇ ಒಂದು ಮತದಿಂದ ಗೆದ್ದ ಧೃವನಾರಾಯಣ ಎರಡು ಬಾರಿ ಶಾಸಕರು ಎರಡು ಬಾರಿ ಸಂಸದರು ಆಗಿದ್ದರು. ಆದರೆ ಒಂದು ಮತದಿಂದ ಸೋತಿದ್ದ ಎ.ಆರ್. ಕೃಷ್ಣಮೂರ್ತಿ ರಾಜಕೀಯವಾಗಿ ಮೇಲೆ ಏಳುವುದಕ್ಕೆ ಆಗದಷ್ಟು ಸಾಲು ಸಾಲು ಸೋಲು ಕಂಡರು. ಇದನ್ನೂ ಓದಿ: 12 ಚುನಾವಣೆಗಳಲ್ಲಿ ಒಂದೇ ಕುಟುಂಬದವರ ಆಯ್ಕೆ – ಎನ್.ಆರ್‌. ಕ್ಷೇತ್ರದಲ್ಲಿ ಸೇಠ್ ಫ್ಯಾಮಿಲಿ ಅಧಿಪತ್ಯ!

  • ಧ್ರುವನಾರಾಯಣ್ ನಿಧನಕ್ಕೆ ಕಾರಣ ಬಿಚ್ಚಿಟ್ಟ ವೈದ್ಯ ಡಾ. ಮಂಜುನಾಥ್

    ಧ್ರುವನಾರಾಯಣ್ ನಿಧನಕ್ಕೆ ಕಾರಣ ಬಿಚ್ಚಿಟ್ಟ ವೈದ್ಯ ಡಾ. ಮಂಜುನಾಥ್

    ಮೈಸೂರು: ಹಳೇ ಮೈಸೂರು ಭಾಗದ ಪ್ರಬಲ ದಲಿತ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ನಿಧನದ ಹಿಂದಿನ ಕಾರಣವನ್ನು ವೈದ್ಯ ಡಾ. ಮಂಜುನಾಥ್ (Dr. Manjunath) ಚ್ಚಿಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೆಳಗ್ಗೆ ಜಾಗಿಂಗ್ ಮುಗಿಸಿ ವಾಪಸ್ ಬರುತ್ತಿದಂತೆಯೇ ಅವರ ಡ್ರೈವರ್ ಹಾಗೂ ಗಾರ್ಡ್ ಬೇಗ ಬರುವಂತೆ ನನ್ನ ಕೂಗಿದರು. ಕೂಡಲೇ ಅವರ ಮನೆಗೆ ಓಡಿದೆ. ಈ ವೇಳೆ ಮೊದಲನೇ ಮಹಡಿಯಲ್ಲಿ ಧ್ರುವನಾರಾಯನ್ ಅವರು ಮಂಚದಿಂದ ಕೆಳಗೆ ಬಿದ್ದು, ಸುಮಾರು 3 ಲೀಟರ್ ಆಗುವಷ್ಟು ರಕ್ತದ ಮಡುವಿನಲ್ಲಿ ಮಲಗಿದ್ದರು. ಆದರೆ ಅವರಲ್ಲಿ ಹಾರ್ಟ್ ಬೀಟ್, ಚಲನವಲನ ಯಾವುದೂ ಇರಲಿಲ್ಲ. ಅಂದರೆ ಅದಾಗಲೇ ಅವರ ಉಸಿರು ನಿಂತ ಸ್ಥಿತಿಯಲ್ಲಿತ್ತು ಎಂದರು.

    ಕೂಡಲೇ ಆಸ್ಪತ್ರೆಗೆ ಕರೆ ಮಾಡಿ ಅಂಬುಲೆನ್ಸ್ ಮೂಲಕ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಎಲ್ಲಾ ಪ್ರಯತ್ನಗಳನ್ನೂ ಮಾಡಿದರೂ ಅವರನ್ನು ನಮಗೆ ಉಳಿಸಿಕೊಳ್ಳಲು ಆಗಲಿಲ್ಲ. ಹೊಟ್ಟೆಯಲ್ಲಿ ಮ್ಯಾಸಿವ್ ಬ್ಲೀಡಿಂಗ್ ಆಗಿದ್ದೇ ಅವರ ನಿಧನಕ್ಕೆ ಕಾರಣ ಎಂದರು ಹೇಳಿದರು. ಇದನ್ನೂ ಓದಿ: ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

    ಶುಕ್ರವಾರ ರಾತ್ರಿನೇ ಸ್ವಲ್ಪ ಹುಷಾರಿಲ್ಲ ಅಂತ ನನಗೆ ಕರೆ ಮಾಡಿ ಹೇಳಿದ್ದರು. ಆಗ ತಕ್ಷಣ ನಾನು ಬನ್ನಿ ಆಸ್ಪತ್ರೆಗೆ ಅಂದೆ. ಇಲ್ಲ ಬೆಳಗ್ಗೆ ಬರ್ತೀನಿ ಅಂತ ಹೇಳಿದ್ರು. ಆ ಸಂದರ್ಭದಲ್ಲಿಯೇ ಅವರಿಗೆ ಬ್ಲೀಡಿಂಗ್ ಶುರುವಾಗಿದೆ. ಅದಕ್ಕೆ ಅವರಿಗೆ ಸ್ವಲ್ಪ ಆಯಾಸ ಆದಂತೆ ಭಾಸವಾಗಿದೆ. ಅದು ಬೆಳಗ್ಗೆ ಅಷ್ಟೊತ್ತಿಗೆ ಬ್ಲೀಡಿಂಗ್ ಜಾಸ್ತಿ ಆಗಿದೆ ಎಂದು ವಿವರಿಸಿದರು.

    ವಿಧಾನಸಭಾ ಚುನಾವಣೆ (Vidhanasabha Election) ಹತ್ತಿರದಲ್ಲಿದೆ. ಧ್ರುವ ನಾರಾಯಣ್ (Dhruva Narayan) ಅವರು ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಹೀಗಾಗಿ ಅವರು ಸ್ವಲ್ಪ ಒತ್ತಡದಲ್ಲಿದ್ದರು. ಈ ಒತ್ತಡ ಜಾಸ್ತಿ ಆದಾಗ ಅಲ್ಸರ್ಸ್ ಜಾಸ್ತಿ ಆಗಿ ಹೊಟ್ಟೆಯಲ್ಲಿ ಬ್ಲೀಡಿಂಗ್ ಆಗುತ್ತದೆ. ಹಾರ್ಟ್ ಟ್ಯಾಕ್ ಅಂತೀವಿ ಆದರೆ ಅವರ ನಿಧನಕ್ಕೆ ಕಾರಣ ಮ್ಯಾಸೀವ್ ಬ್ಲೀಡಿಂಗ್ ಎಮದು ಅವರು ತಿಳಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

    ಧ್ರುವ ನಾರಾಯಣ್ (62) ಅವರು ಶನಿವಾರ ಹೃದಯಾಘಾತ (Heart Attack) ದಿಂದ ಮೈಸೂರಿನ ಡಿಆರ್‍ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1961 ಜುಲೈ 31ರಂದು ಚಾಮರಾಜನಗರದ ಹಗ್ಗವಾಡಿಯಲ್ಲಿ ಜನಿಸಿದ್ದ ಇವರು ಬೆಂಗಳೂರಿನ ಜಿಕೆವಿಕೆಯಲ್ಲಿ ಪದವಿ ಪಡೆದಿದ್ದರು. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. 2 ಬಾರಿ ಶಾಸಕ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

  • ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

    ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

    ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ (Dhruva Narayan) ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi), ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala), ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)  ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಧ್ರುವನಾರಾಯಣ ನಿಧನದಿಂದ ತೀವ್ರ ದುಃಖ ಮತ್ತು ನೋವಾಗಿದೆ. ಅವರು ಕೇವಲ ತಳಮಟ್ಟದ ರಾಜಕೀಯ ವ್ಯಕ್ತಿಯಾಗಿರಲಿಲ್ಲ, ಅತ್ಯುತ್ತಮ ವ್ಯಕ್ತಿಯಾಗಿದ್ದರು. ಅವರ ನಿಧನವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ನಷ್ಟವಲ್ಲ. ನನಗೂ ವೈಯಕ್ತಿಕವಾಗಿ ದೊಡ್ಡ ನಷ್ಟವಾಗಿದೆ ಎಂದು ಧ್ರುವನಾರಾಯಣ್‌ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದರು.

    ಕಾಂಗ್ರಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಮಾಜಿ ಸಂಸದ ಆರ್. ಧ್ರುವನಾರಾಯಣ್ ಹಠಾತ್ ನಿಧನದಿಂದ ದುಃಖವಾಗಿದೆ. ಕಷ್ಟಪಟ್ಟು ದುಡಿಯುವ ಮತ್ತು ತಳಮಟ್ಟದ ನಾಯಕ, NSUI ಮತ್ತು ಯೂತ್ ಕಾಂಗ್ರೆಸ್ ಮೂಲಕ ಬಂದ ಸಾಮಾಜಿಕ ನ್ಯಾಯದ ನಾಯಕರಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿದ್ದು, ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ.

    ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ಧತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡಿದ್ದು, ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟವಾಗಿದೆ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧ್ರುವನಾರಾಯಣ್‌ ನಿಧನ – ಪ್ರಜಾಧ್ವನಿ ಯಾತ್ರೆ ರದ್ದು

    ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಸದಾ ನಗುಮುಖದ ಗೆಳೆಯ, ಕಾಂಗ್ರೆಸ್‌ ನಾಯಕ ಧ್ರುವನಾರಾಯಣ್ ಅವರ ನಿಧನದ ನಷ್ಟವನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಬಡವರ ಸೇವೆಗಾಗಿ ಸದಾ ದುಡಿಯುತ್ತಿದ್ದ ಅವರನ್ನು  ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

  • ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

    ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

    ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ (Dhruva Narayan) ನನ್ನ ಕಾರ್ಯಾಧ್ಯಕ್ಷ ಅಲ್ಲ. ನನ್ನ ಕುಟುಂಬವಾಗಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಕಂಬನಿ ಮಿಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಬಗ್ಗೆ ನಮ್ಮ ಡಾಕ್ಟರ್ ಮಾಹಿತಿ ನೀಡಿದರು. ಧ್ರುವನಾರಾಯಣ್ ಅವರಿಗೆ ರಕ್ತದ ವಾಂತಿ ಆಗಿದೆ. ಆಮೇಲೆ ಉಸಿರಾಟ ಸಮಸ್ಯೆ ಆಗಿದೆ ಎಂದ ಅವರು, ಧ್ರುವ ನಾರಾಯಣ್ ನಿಧನದಿಂದಾಗಿ ಇಡೀ ಕಾಂಗ್ರೆಸ್ ಕುಟುಂಬಕ್ಕೆ ನಷ್ಟ ಆಗಿದೆ. ಸಂಭಾವಿ ರಾಜಕಾರಣಿ, ಮಾನವೀಯ, ಸ್ನೇಹ, ಪ್ರೀತಿ ಯಾರನ್ನು ನೋವಿಸಬಾರದು ಅಂತ ಗುಣ ಇತ್ತು. ಎಲ್ಲಾ ಸಮಾಜ, ವರ್ಗದವರು ಪ್ರೀತಿಯಿಂದ ನೋಡುತ್ತಿದ್ದರು. ಅನೇಕ ಬಾರಿ ನನಗೆ ಸಮಾಧಾನ ಮಾಡಿದ್ದರು. ನಮಗೆ ದೊಡ್ಡ ಶಕ್ತಿ ಆಗಿದ್ದರು. ಅವರು ನನ್ನ ಕಾರ್ಯಾಧ್ಯಕ್ಷ ಅಲ್ಲ. ನನ್ನ ಕುಟುಂಬವಾಗಿದ್ದರು. ನಮ್ಮ ಪಕ್ಷ ಕಾರ್ಯಕರ್ತರಿಗೆ ದೊಡ್ಡ ಆಸ್ತಿ ಆಗಿದ್ದರು. ಅವರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು ಎಂದು ತಿಳಿಸಿದರು.

    ಸೋನಿಯಾ, ರಾಹುಲ್ ಗಾಂಧಿ (Rahul Gandhi), ಖರ್ಗೆ ಫೋನ್ ಮಾಡಿದ್ದರು. ಅವರಿಗೂ ನಂಬೋದಕ್ಕೆ ಆಗ್ತಿಲ್ಲ. ನಮ್ಮ ಹೃದಯ ಗೆದ್ದವರು. ನನ್ನ ಸ್ನೇಹಿತ, ಸಹೋದರರಾಗಿದ್ದರು. ಕಾಂಗ್ರೆಸ್ ಕಚೇರಿಯಲ್ಲಿ 11 ಗಂಟೆಗೆ ಶ್ರದ್ಧಾಂಜಲಿ ಸಭೆ ಇದೆ. ರಾಮನಗರ ಪ್ರಜಾಧ್ವನಿ ಕ್ಯಾನ್ಸಲ್ ಮಾಡಿದ್ದೇವೆ. ಸಂಜೆ ಒಳಗೆ ಅಂತ್ಯಸಂಸ್ಕಾರ ಮಾಡಿ ಅಂತ ನನ್ನ ಅಭಿಪ್ರಾಯ ಹೇಳಿದ್ದೇವೆ. ಇದರ ಬಗ್ಗೆ ಅ ಕುಟುಂಬದವರು ಮುಂದಿನ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಧ್ರುವನಾರಾಯಣ್‌ ನಿಧನ – ಪ್ರಜಾಧ್ವನಿ ಯಾತ್ರೆ ರದ್ದು

    ಕೋವಿಡ್ ಸಮಯದಲ್ಲಿ ರಾಜ್ಯ ಸುತ್ತಿ ಕೆಲಸ ಮಾಡಿದ್ದರು. ಆಕ್ಸಿಜನ್ ದುರಂತದಲ್ಲಿ ತೆಗೆದುಕೊಂಡ ಶ್ರಮ ಬದ್ಧತೆ ಅದನ್ನ ಮರೆಯಲು ಸಾಧ್ಯವಿಲ್ಲ. ದೇವರು ಇಂತಹ ಕ್ರೂರಿ ಆಗಿದ್ದಾನೆ. ದೇವರು ಇದ್ದಾನೋ ಇಲ್ಲವೋ ಅಂತ ಅನ್ನಿಸುತ್ತಿದೆ. ಭಗವಂತ ಅವರ ಕುಟುಂಬಕ್ಕೆ ಅವರ ಅಗಲಿಕೆ ಭರಿಸೋ ಶಕ್ತಿ ಕೊಡಲಿ. ಬಂಧನ, ಸ್ನೇಹ ಶಾಶ್ವತವಾಗಿ ಉಳಿಯುತ್ತದೆ. ಅವರ ಕುಟುಂಬದರು ಅಂತ್ಯ ಸಂಸ್ಕಾರದ ಬಗ್ಗೆ ಮಾಹಿತಿ ಕೊಡ್ತಾರೆ. ಶ್ರದ್ಧಾಂಜಲಿ ಸಭೆ ಮುಗಿಸಿ ಮೈಸೂರಿಗೆ ನಾನು ಹೋಗುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಇನ್ನಿಲ್ಲ

  • ಧ್ರುವನಾರಾಯಣ್‌ ನಿಧನ – ಪ್ರಜಾಧ್ವನಿ ಯಾತ್ರೆ ರದ್ದು

    ಧ್ರುವನಾರಾಯಣ್‌ ನಿಧನ – ಪ್ರಜಾಧ್ವನಿ ಯಾತ್ರೆ ರದ್ದು

    ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ (Dhruva Narayan) ಅವರ ನಿಧನದ ಹಿನ್ನೆಲೆಯಲ್ಲಿ ಇಂದು ರಾಮನಗರದಲ್ಲಿ  ನಡೆಯಬೇಕಿದ್ದ ಪ್ರಜಾಧ್ವನಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ತಿಳಿಸಿದ್ದಾರೆ.

    ರಾಮನಗರದಲ್ಲಿ (Ramanagara) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ನೇತೃತ್ವದಲ್ಲಿ ಇಂದು ರಾಮನಗರ ಕ್ಷೇತ್ರದ ಮೂರು ಕಡೆ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ರಾಮನಗರ ತಾಲೂಕಿನ ಮರಳವಾಡಿ, ಹಾರೋಹಳ್ಳಿ ಹಾಗೂ ರಾಮನಗರ ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆದರೆ ಧ್ರುವ ನಾರಾಯಣ್‌ ಅವರ ನಿಧನದಿಂದಾಗಿ ಪ್ರಜಾಧ್ವನಿ ಕಾರ್ಯಕ್ರಮ ಮುಂದೂಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ‌ ಶಿವಕುಮಾರ್, ಸಂಸದ ಡಿಕೆ‌‌ ಸುರೇಶ್‌ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ. ಇದನ್ನೂ ಓದಿ: ಡಿಸ್ಕೌಂಟ್ ಸಮಯ ವಿಸ್ತರಣೆಯಾದ್ರೂ, ಟ್ರಾಫಿಕ್ ಫೈನ್ ಕಟ್ಟೋಕೆ ಆಸಕ್ತಿ ತೋರದ ವಾಹನ ಸವಾರರು

    ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಅವರು ಶನಿವಾರ ಹೃದಯಾಘಾತದಿಂದ (Heart Attack) ಮೈಸೂರಿನ (Mysuru) ಡಿಆರ್‌ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. 2 ಬಾರಿ ಶಾಸಕ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಇನ್ನಿಲ್ಲ

  • ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಇನ್ನಿಲ್ಲ

    ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಇನ್ನಿಲ್ಲ

    ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ (Dhruva Narayan) ಅವರು ಶನಿವಾರ ಮೃತಪಟ್ಟಿದ್ದಾರೆ.

    ಧ್ರುವ ನಾರಾಯಣ್‌ (61) ಅವರು ಶನಿವಾರ ಹೃದಯಾಘಾತದಿಂದ ಮೈಸೂರಿನ (Mysuru) ಡಿಆರ್‌ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1961 ಜುಲೈ 31ರಂದು ಚಾಮರಾಜನಗರದ ಹಗ್ಗವಾಡಿಯಲ್ಲಿ ಜನಿಸಿದ್ದ ಇವರು ಬೆಂಗಳೂರಿನ (Bengaluru) ಜಿಕೆವಿಕೆಯಲ್ಲಿ ಪದವಿ ಪಡೆದಿದ್ದರು. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. 2 ಬಾರಿ ಶಾಸಕ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

    1983ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಧ್ರುವನಾರಾಯಣ್‌ 1984 ರಲ್ಲಿ ಜಿಕೆವಿಕೆಯ ಎನ್‌ಎಸ್‌ಯುಐ ಅಧ್ಯಕ್ಷನಾಗಿ ಆಯ್ಕೆಯಾದರು. ನಂತರ 1986 ರಲ್ಲಿ ರಾಜ್ಯ ಯುವ ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ 1999ರಲ್ಲಿ ಮೊದಲ ಬಾರಿಗೆ ಸಂತೆಮಾರಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. ಆದರೆ 2004ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ 1 ಮತದ ಅಂತರದ ಗೆಲುವು ಸಾಧಿಸಿ ಇತಿಹಾಸವನ್ನು ಸೃಷ್ಟಿಸಿದ್ದರು. ಇದನ್ನೂ ಓದಿ: ಡಿಸ್ಕೌಂಟ್ ಸಮಯ ವಿಸ್ತರಣೆಯಾದ್ರೂ, ಟ್ರಾಫಿಕ್ ಫೈನ್ ಕಟ್ಟೋಕೆ ಆಸಕ್ತಿ ತೋರದ ವಾಹನ ಸವಾರರು

    ನಂತರ 2008ರಲ್ಲಿ ಕೊಳ್ಳೆಗಾಲ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದಾದ ಬಳಿಕ 2009 ಹಾಗೂ 2014 ರ ಲೋಕಸಭಾ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನನುಭವಿಸಿದ್ದರು. ಆದರೆ ಸೋಲಿನ ಬಳಿಕವೂ ಪಕ್ಷದಲ್ಲಿ ಹಾಗೂ ಕ್ಷೇತ್ರದಲ್ಲಿ ಆ್ಯಕ್ಟೀವ್ ಆಗಿದ್ದರು.

    ಸಂಸದರಾಗಿದ್ದ ವೇಳೆ ಅನುದಾನ ಬಳಕೆ ವಿಚಾರದಲ್ಲೂ ಧ್ರುವನಾರಾಯಣ್ ಉತ್ತಮ ಹೆಸರು ಪಡೆದಿದ್ದರು. ಚಾಮರಾಜನಗರ (Chamarajanagar) ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಹೆಸರು ಪಡೆದಿದ್ದರು. ವಿಧಾನಸಭಾ ಚುನಾವಣೆಗೆ ನಂಜನಗೂಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಈ ಬಾರಿ ಚುನಾವಣೆಯಲ್ಲಿ ನಂಜನಗೂಡು ಕಾಂಗ್ರೆಸ್‌ ಅಭ್ಯಥಿಯಾಗಿ ಸ್ಪರ್ಧಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಇದನ್ನೂ ಓದಿ: ವೋಟಿಗಾಗಿ ಫ್ರೀ ಸ್ಕೀಂಗಳ ಆಮಿಷ- ಉಚಿತ ಸೈಟ್ ನೀಡಲು ಮುಂದಾದ ಬಿಜೆಪಿ ಟಿಕೆಟ್ ಆಕಾಂಕ್ಷಿ

  • ಮಧ್ವರಾಜ್ ಅವಕಾಶವಾದಿ ರಾಜಕಾರಣಿ, ಡಿಕೆಶಿ ನಿರೀಕ್ಷೆ ಹುಸಿಯಾಗಿದೆ: ಧ್ರುವನಾರಾಯಣ್

    ಮಧ್ವರಾಜ್ ಅವಕಾಶವಾದಿ ರಾಜಕಾರಣಿ, ಡಿಕೆಶಿ ನಿರೀಕ್ಷೆ ಹುಸಿಯಾಗಿದೆ: ಧ್ರುವನಾರಾಯಣ್

    ಉಡುಪಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಪ್ರಮೋದ್ ಮಧ್ವರಾಜ್ ಅವಕಾಶವಾದಿ ರಾಜಕಾರಣಿ. ಡಿ.ಕೆ ಶಿವಕುಮಾರ್ ಪ್ರಮೋದ್ ಮಧ್ವರಾಜ್ ಮೇಲಿಟ್ಟ ನಿರೀಕ್ಷೆಗಳೆಲ್ಲ ಹುಸಿಯಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ ಉಡುಪಿ ಜಿಲ್ಲಾ ಕಾಂಗ್ರೆಸ್ ತನ್ನ ತನ್ನ ಫಸ್ಟ್ ರಿಯಾಕ್ಷನ್ ಕೊಟ್ಟಿದೆ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲ ಬಾರಿ ಗೆದ್ದವನಿಗೆ ಪಕ್ಷ ಎಲ್ಲಾ ಅವಕಾಶ ಕೊಟ್ಟಿತ್ತು. ಪ್ರಮೋದ್ ಜಿಲ್ಲಾ ಕಾಂಗ್ರೆಸ್ ವಿರುದ್ಧ ಮಾತನಾಡುವುದು ಶೋಭೆ ತರಲ್ಲ. ಪ್ರಮೋದ್ ಹೇಳಿದವರಿಗೆ ಜಿಲ್ಲಾ ಕಾಂಗ್ರೆಸ್‍ನಲ್ಲಿ ಅವಕಾಶ ಕೊಟ್ಟಿದ್ದೇವೆ. ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್‍ನಲ್ಲಿ ಪ್ರಮೋದ್ ಸೂಚಿಸಿದ ವ್ಯಕ್ತಿಗಳಿಗೆ ಸ್ಥಾನಮಾನ ಕೊಡಲಾಗಿದೆ ಎಂದರು. ಇದನ್ನೂ ಓದಿ: ಉಗುರಿನಲ್ಲಿದ್ದ ರಕ್ತದ ಕಲೆಯಿಂದಾಗಿ ಕೊಲೆ ಮಾಡಿದ್ದ ವ್ಯಕ್ತಿ ಸಿಕ್ಕಿಬಿದ್ದ!

    ಜಿಲ್ಲಾ ಕಾಂಗ್ರೆಸ್ ಮೇಲೆ ಆರೋಪ ಮಾಡಿ ಪ್ರಮೋದ್ ಕಾಂಗ್ರೆಸ್ ಬಿಟ್ಟು ಹೋಗಿರುವುದು ದುರಾದೃಷ್ಟಕರ. ಪ್ರಮೋದ್‍ಗೆ ಸಣ್ಣ ವಯಸ್ಸಿನಲ್ಲಿ ಎಲ್ಲಾ ಹುದ್ದೆ ಕೊಟ್ಟಿದ್ದೇವೆ. ಡಿಕೆಶಿ ಪ್ರಮೋದ್ ಮೇಲೆ ಬಹಳ ನಿರೀಕ್ಷೆ ಇಟ್ಟಿದ್ದರು. ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‍ಗೆ, ಮತದಾರರಿಗೆ ದ್ರೋಹ ಮಾಡಿದ್ದಾರೆ. ಮಧ್ವರಾಜ್ ವೈಯಕ್ತಿಕ ಆಸೆ ಏನಿದೆ ಗೊತ್ತಿಲ್ಲ. ನಾವು ಜಿಲ್ಲೆಯಲ್ಲಿ ಕಾಂಗ್ರೆಸ್‍ನ್ನು ತಳಮಟ್ಟದಿಂದ ಕಟ್ಟುತ್ತೇವೆ. ರಾಜಕಾರಣ ನಿಂತ ನೀರಲ್ಲ, ಉಡುಪಿಯಲ್ಲಿ ಮತ್ತೆ ಪಕ್ಷ ಕಟ್ಟುತ್ತೇವೆ ಎಂದರು. ಇದನ್ನೂ ಓದಿ: ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ