Tag: Dhoti

  • ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!

    ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!

    – ಕಲಾಪವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು ಪಂಚೆ ಪ್ರಸಂಗ

    ಬೆಂಗಳೂರು: ಇಂದು ನಡೆಯುತ್ತಿದ್ದ ವಿಧಾನಸಭಾ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಂಚೆ ಪ್ರಸಂಗ ಕಲಾಪದಲ್ಲಿ ಇರುವವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

    ಸದನದ ಕಲಾಪದ ವೇಳೆ ಸಿದ್ದರಾಮಯ್ಯ ಅವರ ಪಂಚೆ ಬಿಚ್ಚಿರುವುದನ್ನು ಗಮನಿಸಿದ ಡಿಕೆ ಶಿವಕುಮಾರ್, ಪಂಚೆ ಕಳಚಿದೆ ಎಂದು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಹೇಳಿದ್ದಾರೆ. ಆಗ ಸಿದ್ದರಾಮಯ್ಯ ಅವರು ಯಾಕೋ ಇತ್ತೀಚೆಗೆ ಹೊಟ್ಟೆ ಸ್ವಲ್ಪ ದಪ್ಪ ಆಗಿದೆ. ಪಂಚೆ ಬಿಚ್ಚಿ ಹೋಗಿದೆ. ನಾನು ಪಂಚೆ ಕಟ್ಟಿಕೊಂಡು ಬಂದು ಭಾಷಣವನ್ನು ಮಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಆಗ ಕಲಾಪದಲ್ಲಿ ಇದ್ದವರು ನಗೆಗಡಲಲ್ಲಿ ತೇಲಿದ್ದಾರೆ.

    ಆಗ ಮಧ್ಯ ಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನಮ್ಮ ಅಧ್ಯಕ್ಷರು ಬಂದು ಪಕ್ಷದ ಮಾನ ಎಂದು ಕಿವಿಯಲ್ಲಿ ಗುಟ್ಟಾಗಿ ಹೇಳಿದ್ದಾರೆ. ಆದರೆ ನೀವು ಊರಿಗೆಲ್ಲ ಹೇಳಿಬಿಟ್ಟ್ರಿ. ಅವರ ಶ್ರಮ ವ್ಯರ್ಥವಾಯಿತ್ತು ಎಂದಿದ್ದಾರೆ.  ಸದನದಲ್ಲಿ ಇದ್ದವರು ಸಹಾಯಬೇಕಾ ಎಂದು ಕೇಳಿದ್ದಾರೆ. ಆಗ ರಮೇಶ್ ಕುಮಾರ್ ಅವರ ಉದ್ಯೋಗವೇ ನಮ್ಮ ಪಕ್ಷವನ್ನು ಕಳಚೋದು ಆಗಿದೆ. ನೋಡಿ ಹೇಗೆ ಕಾಯುತ್ತಾ ಕುಳಿತ್ತಿದ್ದಾರೆ ಈಶ್ವರಪ್ಪ ಅವರು ಎಂದು ಹಾಸ್ಯ ಚಟಾಕೆ ಹಾರಿಸಿದ್ದಾರೆ.

    ಇಲ್ಲ ಅವರು ಕಳಚಲು ಪ್ರಯತ್ನ ಮಾಡುತ್ತಾರೆ. ಆದರೆ ಸಾಧ್ಯವಾಗಲ್ಲ. ಪಂಚೆ ಕಳಚಿ ಬಿಟ್ಟಿದೆ. ಮೊದಲು ಬಿಚ್ಚು ಹೋಗುತ್ತಿರಲಿಲ್ಲ. ಕೊರೊನಾ ಬಂದ ಮೇಲೆ ಹೊಟ್ಟೆ ಸ್ವಲ್ಪ ದಪ್ಪವಾಯಿತ್ತು, ಹೀಗಾಗಿ ಪಂಚೆ ಬಿಚ್ಚಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಕಲಾಪದಲ್ಲಿ ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಪ್ರವಾಸೋದ್ಯಮದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಸಾಂಸ್ಕೃತಿಕ ನಗರಿ ಎಂಬುದಕ್ಕೆ ಕಳಂಕ ಬರುತ್ತದೆ ಎಂದು ಈ ವಿಚಾರವಾಗಿ ಮಾತನಾಡುತ್ತಿದ್ದರು. ಆಗ ಈ ಘಟನೆ ನಡೆದಿದೆ.

  • ಧೋತಿ ಧರಿಸಿ ಬಂದ ನಿರ್ದೇಶಕನಿಗೆ ಎಂಟ್ರಿ ನೀಡದ ಮಾಲ್ ಸಿಬ್ಬಂದಿ

    ಧೋತಿ ಧರಿಸಿ ಬಂದ ನಿರ್ದೇಶಕನಿಗೆ ಎಂಟ್ರಿ ನೀಡದ ಮಾಲ್ ಸಿಬ್ಬಂದಿ

    ಕೋಲ್ಕತ್ತಾ: ಬಂಗಾಲಿ ಸಿನಿಮಾ ನಿರ್ದೇಶಕರೊಬ್ಬರು ಧೋತಿ ಧರಿಸಿದ್ದ ಕಾರಣ ಮಾಲ್ ಸಿಬ್ಬಂದಿ ಪ್ರವೇಶ ಕಲ್ಪಿಸಿದೇ ಉದ್ಧಟತನ ತೋರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ನಿರ್ದೇಶಕ ಆಶೀಶ್ ಅವಿಕುಂತ್ ಶನಿವಾರ ಸಂಜೆ ನಗರದ ಕ್ವಿಸ್ಟ್ ಮಾಲ್‍ಗೆ ತೆರಳಿದ್ದರು. ಈ ವೇಳೆ ಮಾಲ್ ಸಿಬ್ಬಂದಿ ಆಶೀಶ್ ಅವರಿಗೆ ಪ್ರವೇಶ ಕೊಡದೇ ಸತಾಯಿಸಿದ್ದಾರೆ. ಮಾಲ್ ಒಳಗಡೆ ಧೋತಿ ಮತ್ತು ಲುಂಗಿ ಧರಿಸಿದ ವ್ಯಕ್ತಿಗಳಿಗೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ. ಇದನ್ನು ವಿರೋಧಿಸಿ ಮಾಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದು, ಆಶೀಶ್ ಮಾಲ್ ಸಿಬ್ಬಂದಿಯೊಂದಿಗೆ ಇಂಗ್ಲಿಷ್ ಮಾತನಾಡಿದಾಗ ಅವ್ರಿಗೆ ಪ್ರವೇಶ ಕಲ್ಪಿಸಲಾಗಿದೆ.

    ಆಶೀಶ್ ಈ ಘಟನೆಯನ್ನು ಖಂಡಿಸಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು, ಮಾಲ್‍ಗಳ ಪ್ರವೇಶಕ್ಕೆ ನಿರಾಕರಿಸುವುದು ಇದೇ ಮೊದಲೇನಲ್ಲ. ಆದರೆ ಮೊಟ್ಟ ಮೊದಲ ಬಾರಿಗೆ ಧೋತಿ ಧರಿಸಿ ಬಂದ ಕಾರಣ ನೀಡಿ ಪ್ರವೇಶ ನಿರಾಕರಿಸಿದ್ದಾರೆ. ನಾನು ಕಳೆದ 26 ವರ್ಷಗಳಿಂದಲೂ ಧೋತಿ ಧರಿಸುತ್ತಾ ಬಂದಿದ್ದೇನೆ. ಭದ್ರತೆಯ ಕಾರಣ ನೀಡಿ, ಧೋತಿ ಮತ್ತು ಲುಂಗಿ ಧರಿಸಿದ್ದವರನ್ನು ಒಳಗಡೆ ಬಿಡಲ್ಲ ಎಂದು ಹೇಳಿದ್ದಾರೆ. ನಂತರ ನಾನು ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ಕಂಡ ಸಿಬ್ಬಂದಿ ಮಾಲ್‍ಗೆ ಪ್ರವೇಶ ನೀಡಿದರು. ಆದರೆ ಈ ಕೃತ್ಯವನ್ನು ಪ್ರತಿಭಟಿಸುವ ಸಲುವಾಗಿ ಮಾಲ್ ಅನ್ನು ಪ್ರವೇಶಿಸದೆ ಹಿಂದಿರುಗಿದೆ ಎಂದು ಹೇಳಿಕೊಂಡಿದ್ದಾರೆ.

     

    ಇದು ಹೊಸ ರೀತಿಯ ನಿಯಮವಾಗಿದ್ದು, ಖಾಸಗಿ ಹೋಟೆಲ್ ಹಾಗೂ ಕ್ಲಬ್‍ಗಳು ಧರಿಸುವ ಬಟ್ಟೆ ಕುರಿತು ಆಕ್ಷೇಪಿಸಿ ಪ್ರವೇಶ ನಿರಾಕರಿಸಿದ್ದು ವರ್ಣಬೇಧ ಮತ್ತು ಭಾರತೀಯ ಸಂಸ್ಕೃತಿ ಬಗೆಗಿನ ಉದಾಸೀನವನ್ನು ತೋರಿಸುತ್ತದೆ ಎಂದು ಹಲವಾರು ಕಿಡಿಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದ್ದು. ಪೋಸ್ಟ್ ಕುರಿತು ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ ಹಾಗು ಮಾಲ್‍ನ ಮ್ಯಾನೇಜ್‍ಮೆಂಟ್ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿವೆ.

     

    https://www.youtube.com/watch?v=JfXmZujzUJk