Tag: Dhokla

  • ಸಿಹಿ, ಹುಳಿ ಮಿಶ್ರಿತ ‘ಧೋಕ್ಲಾ’ ಮಾಡುವ ಸಿಂಪಲ್ ವಿಧಾನ

    ಸಿಹಿ, ಹುಳಿ ಮಿಶ್ರಿತ ‘ಧೋಕ್ಲಾ’ ಮಾಡುವ ಸಿಂಪಲ್ ವಿಧಾನ

    ಗುಜರಾತಿನ ಫುಲ್ ಫೇಮಸ್ ಫುಡ್ ಧೋಕ್ಲಾ ಎಂದರೆ ತಿಂಡಿ ಪ್ರಿಯರಿಗೆ ಸಖತ್ ಇಷ್ಟ. ಈ ತಿನಿಸು ಸಿಹಿ ಮತ್ತು ಹುಳಿ ಮಿಶ್ರಣ ಇರುವುದರಿಂದ ಮಕ್ಕಳಿಗೂ ಇದು ಇಷ್ಟವಾಗುತ್ತೆ. ಈ ತಿನಿಸನ್ನು ನೋಡಿದ ಎಷ್ಟೋ ಜನರು ಇದನ್ನು ಮಾಡುವುದು ಕಷ್ಟ ಎಂದೇ ಭಾವಿಸುತ್ತಾರೆ. ಆದರೆ ಈ ರೆಸಿಪಿ ತುಂಬಾ ಸಿಂಪಲ್ ಆಗಿದೆ. ನೀವು ಇದನ್ನು ಮನೆಯಲ್ಲಿ ಟ್ರೈ ಮಾಡಿ.

    ಬೇಕಾಗಿರುವ ಪದಾರ್ಥಗಳು:
    * ಕಡಲೆ ಹಿಟ್ಟು – 1ವರೆ ಕಪ್
    * ರವಾ – 3 ಟೇಬಲ್ಸ್ಪೂನ್
    * ಶುಂಠಿ ಪೇಸ್ಟ್ – ಅರ್ಧ ಟೀಸ್ಪೂನ್
    * ಮೆಣಸಿನಕಾಯಿ – 2
    * ಅರಿಶಿನ – ಅರ್ಧ ಟೀಸ್ಪೂನ್
    * ಸಕ್ಕರೆ – 1 ಟೀಸ್ಪೂನ್
    * ಹಿಂಗು – ಪಿಂಚ್
    * ಉಪ್ಪು – ಅರ್ಧ ಟೀಸ್ಪೂನ್
    * ನಿಂಬೆ ರಸ – 1 ಟೇಬಲ್ಸ್ಪೂನ್
    * ಎಣ್ಣೆ – 1 ಟೇಬಲ್ಸ್ಪೂನ್
    * ನೀರು – 1 ಕಪ್
    * ಸೋಡಾ – ಅರ್ಧ ಟೀಸ್ಪೂನ್

    ಒಗ್ಗರಣೆಗಾಗಿ:
    * ಎಣ್ಣೆ – 3 ಟೀಸ್ಪೂನ್
    * ಸಾಸಿವೆ – ಅರ್ಧ ಟೀಸ್ಪೂನ್
    * ಜೀರಾ – ಅರ್ಧ ಟೀಸ್ಪೂನ್
    * ಎಳ್ಳು – 1 ಟೀಸ್ಪೂನ್
    * ಹಿಂಗು – ಸ್ವಲ್ಪ
    * ಕರಿಬೇವು – 5 ರಿಂದ 10 ಎಲೆಗಳು
    * ಮೆಣಸಿನಕಾಯಿ – 2
    * ನೀರು – ಅರ್ಧ ಕಪ್
    * ಸಕ್ಕರೆ – 1 ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ನಿಂಬೆ ರಸ – 1 ಟೀಸ್ಪೂನ್

    ಅಲಂಕರಿಸಲು:
    * ತೆಂಗಿನಕಾಯಿ ತುರಿ – 2 ಟೇಬಲ್ಸ್ಪೂನ್
    * ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬೌಲ್‍ನಲ್ಲಿ ಕಡಲೆ ಹಿಟ್ಟು ಮತ್ತು ರವಾ ಜರಡಿ ಇಡಿದುಕೊಳ್ಳಿ.
    * ಅದಕ್ಕೆ ಶುಂಠಿ ಪೇಸ್ಟ್, ಮೆಣಸಿನಕಾಯಿ, ಅರಿಶಿನ, ಸಕ್ಕರೆ, ಹಿಂಗ್, ಉಪ್ಪು, ನಿಂಬೆ ರಸ ಮತ್ತು ಎಣ್ಣೆ ಸೇರಿಸಿ ಕಲಸಿ.
    * ಅಗತ್ಯವಿರುವಷ್ಟು 1 ಕಪ್ ನೀರು ಹಾಕಿ ಮೃದುವಾದ ಬ್ಯಾಟರ್ ತಯಾರಿಸಿ. 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದಕ್ಕೆ ಅರ್ಧ ಟೀಸ್ಪೂನ್ ಅಡಿಗೆ ಸೋಡಾವನ್ನು ಹಾಕಿ.
    * ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಧೋಕ್ಲಾ ಮಿಶ್ರಣವನ್ನು ಕೇಕ್ ಪ್ಯಾನ್‍ಗೆ ಹಾಕಿ ಸ್ಟೀಮ್ ಮಾಡಿ. 5 ನಿಮಿಷಗಳ ಕಾಲ ಧೋಕ್ಲಾವನ್ನು ತಣ್ಣಗಾಗಲು ಬಿಡಿ. ಧೋಕ್ಲಾವನ್ನು ಬಯಸಿದ ಆಕಾರಕ್ಕೆ ಕತ್ತರಿಸಿ.

    ಒಗ್ಗರಣೆ ಮಾಡುವ ವಿಧಾನ:
    * ಮಧ್ಯಮ ಉರಿಯಲ್ಲಿ ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಎಳ್ಳಿನ ಬೀಜಗಳು ಮತ್ತು ಹಿಂಗ್ ಸೇರಿಸಿ ಫ್ರೈ ಮಾಡಿ.
    * ನಂತರ ಮೆಣಸಿನಕಾಯಿ, ಕರಿ ಬೇವು ಎಲೆಗಳನ್ನು ಸೇರಿಸಿ. ಅರ್ಧ ಕಪ್ ನೀರು, 1 ಟೀಸ್ಪೂನ್ ಸಕ್ಕರೆ ಮತ್ತು ಉಪ್ಪು ಸೇರಿಸಿ ಕುದಿಸಿ.
    * ಅದಕ್ಕೆ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಧೋಕ್ಲಾ ಮೇಲೆ ಒಗ್ಗರಣೆಯನ್ನು ಸುರಿಯಿರಿ.
    * ಅಲಂಕರಿಸಲು, ಕೊತ್ತಂಬರಿ ಸೊಪ್ಪು ಮತ್ತು ತುರಿದ ತೆಂಗಿನಕಾಯಿಯನ್ನು ಟಾಪ್ ಮೇಲೆ ಹಾಕಿ.

    – ಅಂತಿಮವಾಗಿ, ಹಸಿರು ಚಟ್ನಿ ಮತ್ತು ಹುಣಿಸೇಹಣ್ಣು ಚಟ್ನಿಯೊಂದಿಗೆ ಧೋಕ್ಲಾವನ್ನು ಸೇವಿಸಿ.

    Live Tv
    [brid partner=56869869 player=32851 video=960834 autoplay=true]