Tag: DHO Satish

  • ಹಾಸನ ಡಿಎಚ್‍ಒ ಪತ್ನಿಗೂ ಕೊರೊನಾ – ಸರ್ಕಾರಿ ಆಸ್ಪತ್ರೆಗೆ ದಂಪತಿ ದಾಖಲು

    ಹಾಸನ ಡಿಎಚ್‍ಒ ಪತ್ನಿಗೂ ಕೊರೊನಾ – ಸರ್ಕಾರಿ ಆಸ್ಪತ್ರೆಗೆ ದಂಪತಿ ದಾಖಲು

    ಹಾಸನ: ಜಿಲ್ಲೆಯ ಆರೋಗ್ಯಾಧಿಕಾರಿ ಸತೀಶ್‍ಗೌಡ ಅವರ ಪತ್ನಿಗೂ ಇಂದು ಕೊರೊನಾ ಪಾಸಿಟಿವ್ ಬಂದಿದೆ.

    ಕಳೆದ ಬುಧವಾರವಷ್ಟೇ ಹಾನಸದ ಡಿಎಚ್‍ಒ ಸತೀಶ್‍ಗೌಡ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಡಿಎಚ್‍ಒ ಪತ್ನಿಗೂ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಹೀಗಾಗಿ ದಂಪತಿಯೂ ಜನಸಾಮಾನ್ಯರಂತೆ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹಾಸನ ಡಿಎಚ್‍ಒ ಸತೀಶ್ ಕೊರೊನಾ ರೋಗ ಆರಂಭವಾದ ದಿನದಿಂದಲೂ ಜಿಲ್ಲೆಯಾದ್ಯಂತ ಅವಿರತವಾಗಿ ಕೆಲಸ ಮಾಡಿ ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಮಂಗಳವಾರ ಅವರಿಗೆ ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಬುಧವಾರ ಬಂದ ವರದಿಯಲ್ಲಿ ಡಿಎಚ್‍ಒ ಸತೀಶ್‍ಗೆ ಪಾಸಿಟಿವ್ ಕಂಡು ಬಂದಿತ್ತು. ಇಂದು ಅವರ ಪತ್ನಿಯಲ್ಲಿಯೂ ಸೋಂಕು ಕಾಣಿಸಿಕೊಂಡಿದೆ.

  • ಹಾಸನದಲ್ಲಿ ಇಂದು ಕೊರೊನಾಗೆ ಮೂವರು ಬಲಿ – 21 ಹೊಸ ಪಾಸಿಟಿವ್ ಪ್ರಕರಣ

    ಹಾಸನದಲ್ಲಿ ಇಂದು ಕೊರೊನಾಗೆ ಮೂವರು ಬಲಿ – 21 ಹೊಸ ಪಾಸಿಟಿವ್ ಪ್ರಕರಣ

    ಹಾಸನ: ಹಾಸನದಲ್ಲಿ ಕೊರೊನಾಗೆ ಮೂವರು ಬಲಿಯಾಗಿದ್ದು, ಇಂದು ಒಟ್ಟು 21 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

    ಮೃತರಲ್ಲಿ ಇಬ್ಬರು ಪುರುಷರಾಗಿದ್ದು, ಒಬ್ಬರು ಮಹಿಳೆಯಾಗಿದ್ದಾರೆ. ಒಬ್ಬರಿಗೆ 55 ವರ್ಷ ವಯಸ್ಸಾಗಿದ್ದರೆ ಮತ್ತೊಬ್ಬರಿಗೆ 76 ವರ್ಷ ವಯಸ್ಸಾಗಿದೆ. ಮತ್ತೊಬ್ಬರಿಗೆ 75 ವರ್ಷ ವಯಸ್ಸಾಗಿದೆ. ಮೂವರಿಗೂ ಕೊರೊನಾ ಜೊತೆಗೆ ಕಿಡ್ನಿ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಹಾಸನದಲ್ಲಿ ಇದುವರೆಗೂ 615 ಪಾಸಿಟಿವ್ ಕೇಸ್ ಕಂಡು ಬಂದಿದೆ. ಒಟ್ಟು 390 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 210 ಸಕ್ರಿಯ ಪ್ರಕರಣಗಳು ಇದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನದಲ್ಲಿ ಇದುವರೆಗೂ ಕೊರೊನಾದಿಂದ 15 ಜನ ಮೃತಪಟ್ಟಂತಾಗಿದೆ ಎಂದು ಡಿಎಚ್‍ಒ ಸತೀಶ್ ಮಾಹಿತಿ ನೀಡಿದ್ದಾರೆ.