Tag: DHO

  • ಚಿಕ್ಕಬಳ್ಳಾಪುರ | 3 ವರ್ಷಗಳಲ್ಲಿ 536 ಮಂದಿ ಆತ್ಮಹತ್ಯೆ – ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚು!

    ಚಿಕ್ಕಬಳ್ಳಾಪುರ | 3 ವರ್ಷಗಳಲ್ಲಿ 536 ಮಂದಿ ಆತ್ಮಹತ್ಯೆ – ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚು!

    – ವಿಶ್ವ ಆತ್ಮಹತ್ಯೆ ತಡೆ ದಿನದಂದು ಆತಂಕಕಾರಿ ವರದಿ
    – ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗೆ ಕಾರಣಗಳೇನು?

    ಚಿಕ್ಕಬಳ್ಳಾಪುರ: ಜೀವನ ಎಂಬುದು ಅತ್ಯಮೂಲ್ಯವಾದದ್ದು, ಆದ್ರೆ ಕೆಲವು ಬಾರಿ ಸಮಸ್ಯೆಗಳು ಬಂದಾಗ ಸರಿಯಾಗಿ ಎದುರಿಸಲಾಗದೆಯೋ, ಖಿನ್ನತೆಗೆ ಓಳಗಾಗಿಯೋ, ಇಲ್ಲ ದುಡುಕಿಯೋ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯೊಂದರಲ್ಲೇ ಮೂರು ವರ್ಷಗಳಲ್ಲಿ ಕಳೆಯೋದ್ರಳೋಗೆ 536 ಮಂದಿ ಆತ್ಮಹತ್ಯೆ ಮಾಡಿಕೊಂಡಿರುರುವುದು ವಿಶ್ವ ಆತ್ಮಹತ್ಯೆ ತಡೆ ದಿನದಂದು (World Suicide Prevention Day) ಹೊರಬಿದ್ದಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

    ಮಹಿಳೆಯರಿಗಿಂತ ಪುರುಷರ ಸಂಖ್ಯೆಯ ಹೆಚ್ಚು?
    ಇತ್ತೀಚಿನ ದಿನಮಾನಗಳಲ್ಲಿ ಆತ್ಮಹತ್ಯೆ ಎಂಬುದು ಜಾಗತಿಕವಾಗಿ ಗಂಭೀರ ಸಮಸ್ಯೆಯಾಗಿದೆ. ಮಕ್ಕಳು, ಯುವಕ-ಯುವತಿಯರು, ಅದ್ರಲ್ಲೂ ಗೃಹಿಣಿಯರು ಸಣ್ಣ ಪುಟ್ಟ ಕಾರಣಗಳಿಗೂ ಬದುಕಿನ ಪಯಣವನ್ನೇ ಮುಗಿಸುವ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಜೀವನ ಅಂದ ಮೇಲೆ ನೋವು ನಲಿವು ಕಷ್ಟ ಸುಖ ದುಃಖ ದುಮ್ಮಾನಗಳೆಲ್ಲವೂ ಸಾಮಾನ್ಯ ಎಂಬಂತೆ ಸ್ವೀಕರಿಸಲಾಗದೆ ಕೆಲವರು ತಮ್ಮನ್ನೇ ತಾವೇ ಸಾವಿನ ಮನೆಗೆ ಕರೆದೊಯ್ದುಕೊಳ್ಳುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಕಳೆದ ಮೂರೇ ವರ್ಷಗಳಲ್ಲೇ 536 ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿನ ಮನೆ ಸೇರಿದ್ದಾರೆ. ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೊ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, ಇತ್ತಿಚಿಗೆ ಆತ್ಮಹತ್ಯೆ ಮಾಡಿಕೊಳ್ಳೊವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 3 ವರ್ಷಗಳಲ್ಲಿ ಪೊಲೀಸ್‌ ದಾಖಲೆಗಳ ಪ್ರಕಾರ ಅಧಿಕೃತವಾಗಿ 536 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಲ್ಲಿ 404 ಜನ ಪುರುಷರು ವಿಷ ಸೇವಿಸಿ, ನೇಣು, ಬಿಗಿದುಕೊಂಡು, ಬೆಂಕಿ ಹಚ್ಚಿಕೊಂಡು, ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾರೆ. 132 ಜನ ಮಹಿಳೆಯರು ಸಹ ಸಾವನ್ನಪ್ಪಿದ್ದಾರೆ.

    ಆತ್ಮಹತ್ಯೆಗೆ ಕಾರಣಗಳೇನು?
    ಬಹುತೇಕ ಮಂದಿ ವಿಷ ಸೇವನೆ, ನೇಣು, ಬೆಂಕಿ ಹಚ್ಚಿಕೊಳ್ಳುವುದು, ಕೀಟನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬ ಕಲಹ, ವಿದ್ಯಾಭ್ಯಾಸದ ಒತ್ತಡ, ಪ್ರೇಮ ವೈಫಲ್ಯ, ಉದ್ಯೋಗದ ಒತ್ತಡ, ಉದ್ಯೋಗ ಇಲ್ಲದಿರುವುದು, ಖಿನ್ನತೆ, ನಿರಾಶೆ ಆತ್ಮಹತ್ಯೆಗೆ ಕಾರಣವಾಗಿದೆ. ಇದನ್ನೂ ಓದಿ: ಗದಗ | ಕಾರಿನ ಮೇಲೆ ಪಾಕ್ ಧ್ವಜ ಪ್ರದರ್ಶನ – ಅಪ್ರಾಪ್ತನ ವಿರುದ್ಧ ಕೇಸ್

    ಎಸ್ಪಿ, ಆರೋಗ್ಯಾಧಿಕಾರಿಗಳು ಏನು?
    ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಪೊಲೀಸ್‌ ದಾಖಲೆಗಳ ಪ್ರಕಾರ, ಕಳೆದ 3 ವರ್ಷಗಳಲ್ಲಿ 536 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದೆ. ಇದು ಆತಂಕಕಾರಿ ಬೆಳವಣಿಗೆ. ಅಂತ ಚಿಕ್ಕಬಳ್ಳಾಪುರ ಎಸ್‍ಪಿ ಕುಶಲ್ ಚೌಕ್ಸಿ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ “ವಿದ್ಯಾರ್ಥಿಗಳು, ಯುವಕರು, ವಿವಾಹಿತರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಕುಟುಂಬ ಕಲಹ, ವಿದ್ಯಾಭ್ಯಾಸ ಒತ್ತಡ, ಪ್ರೇಮ ವೈಫಲ್ಯ ಪ್ರಮುಖ ಕಾರಣಗಳಾಗಿದ್ದು ಆತ್ಮಹತ್ಯೆಗಳನ್ನ ತಡೆಗಟ್ಟಲು ಜಾಗೃತಿ ಮೂಡಿಸುವ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್‌ | ಕ್ರಿಕೆಟಿಗ ಪೃಥ್ವಿ ಶಾಗೆ 100 ರೂ. ದಂಡ ವಿಧಿಸಿದ ಮುಂಬೈ ಕೋರ್ಟ್

    ರಾಜ್ಯದಲ್ಲಿ 2ನೇ ಸ್ಥಾನ:
    ಇನ್ನೂ ದೇಶದಲ್ಲೇ ಕರ್ನಾಟಕ ಆತ್ಮಹತ್ಯೆಗಳ ಸಂಖ್ಯೆಯ ಪ್ರಮಾಣದಲ್ಲಿ 2ನೇ ಸ್ಥಾನದಲ್ಲಿದ್ದು, 15 ರಿಂದ 30 ವರ್ಷದೊಳಗಿನ ಯುವಜನರೇ ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಸಾಂಕ್ರಾಮಿಕಕ್ಕಿಂತಲೂ ಬೇಗ ಹರಡುತ್ತಿರುವ ಗಂಭೀರ ಸ್ವರೂಪದ ಸಾಮಾಜಿಕ ಸಮಸ್ಯೆಯಾಗುತ್ತಿದೆ. ಏನೇ ಆದ್ರೂ ಆತ್ಮಹತ್ಯೆಗೆ ಪರಿಹಾರಗಳು ಇಲ್ಲದಿರಬಹುದು. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವ ಸಮಸ್ಯೆಗಳಿಗೆ ಪರಿಹಾರಗಳು ಇದ್ದೇ ಇರಲಿವೆ. ಕೊಂಚ ತಾಳ್ಮೆಯಿಂದ ಯೋಚನೆ ಮಾಡಿ ನಿಮಿಷ ದುಡಕದೆ ಮುಂದೂಡಿ ಸಮಯ ಕಳೆದರೆ ಸಾಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆತ್ಮಹತ್ಯೆ ತಡಗೆಟ್ಟುವ ಸಲುವಾಗಿ ಮತ್ತಷ್ಟು ಮುಂಜಾಗ್ರತಾ ಕಾರ್ಯಕ್ರಮಗಳನ್ನ ರೂಪಿಸಬೇಕಿದೆ. ಇದನ್ನೂ ಓದಿ: ಜೈಲು ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ – ಬಾಂಬೆ ಸಲೀಂ ಚಿಕ್ಕಬಳ್ಳಾಪುರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್

  • ರಾಯಚೂರು | ಒಂದೇ ತಿಂಗಳಲ್ಲಿ 113 ಜನರಿಗೆ ಹೃದಯಾಘಾತ

    ರಾಯಚೂರು | ಒಂದೇ ತಿಂಗಳಲ್ಲಿ 113 ಜನರಿಗೆ ಹೃದಯಾಘಾತ

    ರಾಯಚೂರು: ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯ 113 ಜನರಿಗೆ ಹೃದಯಾಘಾತವಾಗಿದ್ದು (Heart Attack), ಚಿಕಿತ್ಸೆ ಪಡೆದ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರ ಬಾಬು ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲೆಯ ಮಸ್ಕಿಯಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿಲ್ಲ ಎನ್ನುವ ಆರೋಪದ ಹಿನ್ನೆಲೆ ಮಾತನಾಡಿದ ಅವರು, ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆಗಿದ್ದರಿಂದ ಪಗಡದಿನ್ನಿ ಕ್ಯಾಂಪ್‌ನ 35 ವರ್ಷದ ಶರಣಬಸವನನ್ನ ಉಳಿಸಿಕೊಳ್ಳಲು ಆಗಿಲ್ಲ. ಇದರಲ್ಲಿ ನಮ್ಮ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಇಲ್ಲ ಎಂದರು.ಇದನ್ನೂ ಓದಿ: ಭಾರತದಲ್ಲಿ ಪ್ರೆಸ್‌ ಸೆನ್ಸಾರ್‌ಶಿಪ್‌ ಎಂದು ಎಕ್ಸ್‌ ಆರೋಪ – ಖಾತೆಗಳನ್ನು ನಿಷೇಧಿಸಲು ಆದೇಶ ಹೊರಡಿಸಿಲ್ಲ: ಕೇಂದ್ರ ಸ್ಪಷ್ಟನೆ

    ಬೈಕ್‌ನಲ್ಲಿ ರೋಗಿಯನ್ನ ಕರೆತರಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ಕೂಡಲೇ ಸಿಪಿಆರ್ ಮಾಡಲಾಗಿದೆ. ಕೂಡಲೇ ಐವಿ ಲೈನ್ ಹಾಕಿ, ಆಕ್ಸಿಜನ್ ಕೊಡಲಾಗಿದೆ. ರೋಗಿಯ ಸ್ಯಾಚುರೇಷನ್ ಶೇ.20ರಷ್ಟು ಕಡಿಮೆಯಾಗಿತ್ತು. ರಕ್ತದೊತ್ತಡ, ಪಲ್ಸ್ ರೇಟ್ ಹೆಚ್ಚಾಗಿತ್ತು. ಸಂಜೆ 6:30ಕ್ಕೆ ವೈದ್ಯರು ಡೆಲಿವರಿಯೊಂದನ್ನು ಮಾಡಿ ತೆರಳಿದ್ದರು. ಹೀಗಾಗಿ ಎಮರ್ಜೆನ್ಸಿ ಇದ್ದಿದ್ದರಿಂದ ನಮ್ಮದೇ ಅಂಬುಲೆನ್ಸ್ನಲ್ಲಿ ಸಿಂಧನೂರು ತಾಲೂಕು ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದ್ರೆ ತೀವ್ರ ಹೃದಯಾಘಾತದಿಂದ ರೋಗಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

    ಇನ್ನೂ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 113 ಜನರಿಗೆ ಹೃದಯಾಘಾತವಾಗಿದೆ. ಇದರಲ್ಲಿ ನಾಲ್ಕು ಕ್ರಿಟಿಕಲ್ ಪ್ರಕರಣ ದಾಖಲಾಗಿದ್ದವು. ಚಿಕಿತ್ಸೆ ಪಡೆದ ಎಲ್ಲರೂ ಗುಣಮುಖರಾಗಿದ್ದಾರೆ. ಮಸ್ಕಿಯ ಪ್ರಕರಣದಲ್ಲಿ ಮಾತ್ರ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನಯನತಾರಾಗೆ ನೋಟಿಸ್ : 5 ಕೋಟಿ ರೂಪಾಯಿಗೆ ಡಿಮಾಂಡ್

  • ಆಸ್ಪತ್ರೆಗೆ ಜಾಗ ಕೊಟ್ಟ ರೈತರಿಗೆ 60 ವರ್ಷದಿಂದ ಸಿಗದ ಪರಿಹಾರ – ಡಿಹೆಚ್‍ಓ ಕಾರು ಜಪ್ತಿ

    ಆಸ್ಪತ್ರೆಗೆ ಜಾಗ ಕೊಟ್ಟ ರೈತರಿಗೆ 60 ವರ್ಷದಿಂದ ಸಿಗದ ಪರಿಹಾರ – ಡಿಹೆಚ್‍ಓ ಕಾರು ಜಪ್ತಿ

    ಬೆಳಗಾವಿ: ಆಸ್ಪತ್ರೆಗಾಗಿ (Hospital) 60 ವರ್ಷಗಳ ಹಿಂದೆ ಭೂಮಿ ಕಳೆದುಕೊಂಡ ರೈತರಿಗೆ (Farmers) ಇನ್ನೂ ಪರಿಹಾರ ನೀಡದ ಹಿನ್ನೆಲೆ ಬೆಳಗಾವಿ (Belagavi) ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

    ರೈತರಾದ ಫಕ್ಕೀರಪ್ಪ ತಳವಾರ, ಮಲ್ಲಿಕಾರ್ಜುನ ತಳವಾರ ಹಾಗೂ ಅಶೋಕತಾಯಿ ತಳವಾರ ಅವರು ಆಸ್ಪತ್ರೆಗಾಗಿ ಜಮೀನು ಕಳೆದುಕೊಂಡಿದ್ದರು. ಮೂರು ಜನ ರೈತರು, ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ಡಿಹೆಚ್‍ಓ (DHO) ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ (Court) ಆದೇಶಿಸಿದೆ.

    ವಕೀಲರ ಸಮೇತ ರೈತರು ಬಂದು ಕಾರನ್ನು ಜಪ್ತಿ ಮಾಡಿದ್ದಾರೆ. ಜಪ್ತಿಗೆ ಬರುತ್ತಿರುವ ವಿಚಾರ ತಿಳಿದು ಚಾಲಕ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದ. ಈ ವೇಳೆ ಅಧಿಕಾರಿಗಳಿಗೆ ವಕೀಲರು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಸಿಬ್ಬಂದಿ ಕಾರನ್ನು ತಂದುಕೊಟ್ಟಿದ್ದಾರೆ.

  • ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯಾಚರಣೆ – 8 ನಕಲಿ ಕ್ಲಿನಿಕ್ ಮೇಲೆ ದಾಳಿ

    ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯಾಚರಣೆ – 8 ನಕಲಿ ಕ್ಲಿನಿಕ್ ಮೇಲೆ ದಾಳಿ

    ಕೋಲಾರ: ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿಗಳು (DHO) ಜಿಲ್ಲೆಯಾದ್ಯಂತ ಅನಧಿಕೃತವಾಗಿ ತೆರೆದಿದ್ದ 8 ನಕಲಿ ಕ್ಲಿನಿಕ್‌ಗಳ (Fake Clinic) ಮೇಲೆ ದಾಳಿ ನಡೆಸಿದ್ದಾರೆ.

    ಶ್ರೀನಿವಾಸಪುರದಲ್ಲಿ 6 ಕ್ಲಿನಿಕ್, ಬಂಗಾರಪೇಟೆ, ಕೋಲಾರದಲ್ಲಿ ತಲಾ ಒಂದು ನಕಲಿ ಕ್ಲಿನಿಕ್ ಮೇಲೆ ದಾಳಿ ಮಾಡಲಾಗಿದೆ. ಐದು ತಂಡಗಳಿಂದ ಕೋಲಾರ ಜಿಲ್ಲೆಯಾದ್ಯಂತ ದಾಳಿ ನಡೆಸಿದ್ದಾರೆ. ಈ ವೇಳೆ ವೈದ್ಯಕೀಯ ವಿದ್ಯಾರ್ಹತೆ ಹೊಂದಿಲ್ಲದ ಮತ್ತು ಅನಧಿಕೃತವಾಗಿ ಕ್ಲಿನಿಕ್ ತೆರದು ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಬೆಂಗಳೂರು ಬಯೋಇನ್ನೊವೇಟಿವ್ ಸೆಂಟರ್‌ನಲ್ಲಿ ಅಗ್ನಿ ಅವಘಡ

    ಡಿಎಚ್‌ಓ ಡಾ.ಶ್ರೀನಿವಾಸ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿಯ ವೇಳೆ ಇದ್ದ ಕೆಲ ಔಷಧಿಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. 5 ವೈದ್ಯಾಧಿಕಾರಿಗಳ ತಂಡದಿಂದ ದಾಳಿ ಮಾಡಿ ನಕಲಿ ಕ್ಲಿನಿಕ್‌ಗಳಿಗೆ ಬೀಗ ಜಡಿಯಲಾಗಿದೆ. ಈ ವೇಳೆ ವೈದ್ಯ ಅಧಿಕಾರಿಗಳು ಸ್ಟಿರಾಯಿಡ್ ಹಾಗೂ ಕೆಲ ಔಷಧಗಳನ್ನು ವಶಕ್ಕೆ ಪಡೆದು ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಮಹಾಕುಂಭಮೇಳ: ಸಂಕ್ರಾಂತಿಯಂದು ಸಂಗಮದಲ್ಲಿ ‘ಅಮೃತ ಸ್ನಾನ’ ಮಾಡಿದ 1 ಕೋಟಿ ಭಕ್ತರು

  • ರಾಜ್ಯದಲ್ಲಿ ಭ್ರೂಣಹತ್ಯೆ ಮತ್ತೆ ಬೆಳಕಿಗೆ- ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ 74 ಗರ್ಭಪಾತ

    ರಾಜ್ಯದಲ್ಲಿ ಭ್ರೂಣಹತ್ಯೆ ಮತ್ತೆ ಬೆಳಕಿಗೆ- ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ 74 ಗರ್ಭಪಾತ

    ನೆಲಮಂಗಲ: ಭ್ರೂಣ ಹತ್ಯೆ ಮಾಹಾ ಪಾಪದ ಕೆಲಸ ಈ ನಡುವೆ ರಾಜ್ಯದಲ್ಲಿ ಮತ್ತೆ ಭ್ರೂಣ ಹತ್ಯೆ ಕೇಸ್ ಬೆಳಕಿಗೆ ಬಂದಿದ್ದು, ನಾಗರಿಕ ಸಮಯದಲ್ಲಿ ಆತಂಕ ಪಡುವ ರೀತಿಯಲ್ಲಿ ಪ್ರಕರಣ ಸಂಭವಿಸಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ಆಸರೆ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ನಿಷೇಧ ಕಾಯಿದೆ ಉಲಂಘನೆ ಆರೋಪ ಕೇಳಿ ಬಂದಿದೆ. ಏಕಾಏಕಿ ಜಿಲ್ಲಾ ಕುಟುಂಬ ಕಲ್ಯಾಣ ಆರೋಗ್ಯಧಿಕಾಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯ ರವಿಕುಮಾರ್‍ಗೆ ನೋಟಿಸ್ ನೀಡಲಾಗಿದೆ.

    2021 ನೇ ಸಾಲಿನಿಂದ ಇಲ್ಲಿಯವರೆಗೂ 74 ಗರ್ಭಪಾತ ನಡೆಸಿರುವ ಬಗ್ಗೆ ಮಾಹಿತಿ ಇದ್ದು, 32 ಭ್ರೂಣ ಹತ್ಯೆ ಬಗ್ಗೆ ಸೂಕ್ತ ದಾಖಲಾತಿ ನೀಡದ ಹಿನ್ನೆಲೆ ದೂರು ನೀಡಲಾಗಿದೆ. ರವಿಕುಮಾರ್ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮಿಷನ್ ಇಲ್ಲದೆ ಆಸ್ಪತ್ರೆ ಚಾಲ್ತಿಯಲ್ಲಿತ್ತು ಅನ್ನೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಸ್ಕರಣೆ ಮಾಡಿದ ನೀರು ಮರುಬಳಕೆಗೆ ಶೀಘ್ರವೇ ಆದೇಶ: ಈಶ್ವರ್ ಖಂಡ್ರೆ

    ಫೋನ್ ಸ್ವಿಚ್ಡ್ ಆಫ್: ಈ ಭ್ರೂಣ ಹತ್ಯೆ ಕೇಸ್ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ವೈದ್ಯ ರವಿಕುಮಾರ್ ಫೋನ್ ಸ್ವಿಚ್ ಆಫ್ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಇಂತಹ ಪ್ರಕರಣಗಳನ್ನ ಸೂಕ್ತ ಕಾಲಕಾಲದಲ್ಲಿ ಪತ್ತೆ ಹಚ್ಚುವಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿಗಳು ಕರ್ತವ್ಯ ಪಾಲಿಸಿ ಕೆಲಸ ಮಾಡಿದ್ರೆ ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಬಹುದಿತ್ತು ಅನ್ನೋದು ಸ್ಥಳೀಯರ ಮಾತಾಗಿದೆ.

  • ಡಾ.ನಟರಾಜ್ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ: ಮಂಡ್ಯ ಡಿಹೆಚ್‌ಒ

    ಡಾ.ನಟರಾಜ್ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ: ಮಂಡ್ಯ ಡಿಹೆಚ್‌ಒ

    ಮಂಡ್ಯ: ಮಂಡ್ಯದಲ್ಲಿ (Mandya) ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಡಾ.ನಟರಾಜ್ (Dr Nataraj) ಬೆಂಗಳೂರಿನಲ್ಲಿ (Bengaluru) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳ ಕಾರಣ ಎಂದು ಆರೋಪ ಮಾಡಲಾಗಿದೆ. ಈ ಆರೋಪವನ್ನು ಮಂಡ್ಯ ಡಿಹೆಚ್‌ಒ (DHO) ಡಾ.ಮೋಹನ್ ತಳ್ಳಿ ಹಾಕಿದ್ದಾರೆ.

    ಡಾ.ನಟರಾಜ್ ಕುಣಿಗಲ್ ತಾಲೂಕಿನ ಚೌಡನಕುಪ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮಂಡ್ಯದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ವರ್ಗಾವಣೆಯಾಗಿತ್ತು. ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಆಗಿದೆ. ಆದರೆ ಇವರು ಕೆಲಸ ಮಾಡಿರುವುದು ಎರಡು ತಿಂಗಳು ಮಾತ್ರ. 30 ದಿನಗಳ ಕಾಲ ಆರೋಗ್ಯ ಸಮಸ್ಯೆ ಎಂದು ರಜೆ ಹಾಕಿದ್ದರು. ಕೌಟುಂಬಿಕ ಕಲಹದಿಂದಾಗಿ ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಹೆಚ್ಚಿನ ಕಾರ್ಯ ಒತ್ತಡವನ್ನು ನೀಡುತ್ತಿರಲಿಲ್ಲ. ಕೌಟುಂಬಿಕ ಕಲಹದಿಂದಾಗಿ ಮಾನಸಿಕ ಕಿರುಕುಳದಿಂದ ಬಳಲುತ್ತಿದ್ದ ನಟರಾಜ್ ಈ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು ಎಂದರು. ಇದನ್ನೂ ಓದಿ: ತೆಲಂಗಾಣ ಶಾಸಕರಿಗೆ ಮಟನ್, ಚಿಕನ್ ಬಿರಿಯಾನಿ ಬೇಕಾ ಅಂತ ವಿಚಾರಿಸಲು ಡಿಕೆಶಿ ತೆರಳಿದ್ದು: ಆರ್.ಅಶೋಕ್

    ಕಳೆದ ನವೆಂಬರ್ 11 ರಂದು ಕೌಟುಂಬಿಕ ಕಲಹ ಹಾಗೂ ಅನಾರೋಗ್ಯದಿಂದ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೊದಲು ಇದ್ದ ಚೌಡನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಯಾಗಿ ನೇಮಕ ಮಾಡುವಂತೆ ಸಚಿವ ಚಲುವರಾಯಸ್ವಾಮಿ ಹಾಗೂ ಡಿಹೆಚ್‌ಒಗೆ ನಟರಾಜ್ ಪತ್ರ ಬರೆದ್ದರು. ಇವರ ಸಾವಿಗೆ ಇವರ ಕೌಟುಂಬಿಕ ಕಲಹದಿಂದ ಉಂಟಾದ ಮಾನಸಿಕ ಖಿನ್ನತೆಯೇ ಕಾರಣ. ಈ ಆತ್ಮಹತ್ಯೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಡಾ.ಮೋಹನ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯ ಒತ್ತಡದ ನಡುವೆ ಕ್ಷೇತ್ರಕ್ಕೆ ಟೈಂ ಕೊಡಲು ಆಗ್ತಿಲ್ಲ: ಡಿಕೆಶಿ

  • ರಾಯಚೂರಿನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆ

    ರಾಯಚೂರಿನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆ

    ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್‌ನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ (Zika Virus) ಪತ್ತೆಯಾಗಿರುವುದಾಗಿ ವೈದ್ಯರು (Doctors) ತಿಳಿಸಿದ್ದಾರೆ.

    ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳ (Health Department) ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದೆ. ಗ್ರಾಮದ ವಾತಾವರಣ ಬಗ್ಗೆ ಅಧ್ಯಯನವನ್ನೂ ನಡೆಸಿದೆ. ಇದನ್ನೂ ಓದಿ: ಸತತ ಎರಡನೇ ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ ಭೂಪೇಂದ್ರ ಪಟೇಲ್

    5 ವರ್ಷದ ಮಗುವಿಗೆ ಜ್ವರ ಹೆಚ್ಚಾಗಿದ್ದರಿಂದ ರಾಯಚೂರಿನಿಂದ ಬಳ್ಳಾರಿಯ ರಿಮ್ಸ್ (RIMS) ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಡೆಂಗ್ಯೂ, ಚಿಕನ್ ಗುನ್ಯಾ ಲಕ್ಷಣಗಳು ಇತ್ತೆಂದು ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದ್ರೆ ಎಲ್ಲವೂ ನೆಗೆಟಿವ್ ಬಂದಿದ್ದರಿಂದ ಮಗುವಿನ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ತಿಳಿದುಬಂದಿತು. ಆದ್ರೆ ಮಗುವಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯೂ ಇರಲಿಲ್ಲ. ವರದಿ ಕೈ ಸೇರುವಷ್ಟರಲ್ಲಿ ಸಂಪೂರ್ಣ ಗುಣಮುಖವಾಗಿತ್ತು. ಆರೋಗ್ಯ ಇಲಾಖೆ ಮತ್ತೊಮ್ಮೆ ಕಳುಹಿಸಿದ್ದ ಬಾಲಕಿ ಹಾಗೂ ಪೋಷಕರ ಮಾದರಿಗಳು ನೆಗೆಟಿವ್ ಬಂದಿದೆ ಎಂದು ಡಿಎಚ್‌ಒ ಡಾ.ಸುರೇಂದ್ರ ಬಾಬು ತಿಳಿಸಿದ್ದಾರೆ.

    ಸದ್ಯ ಮಗು ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ. ಝಿಕಾ ವೈರಸ್ ಪತ್ತೆ ಹಿನ್ನಲೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಹಾಗೂ ಸಾಂಕ್ರಾಮಿಕ ರೋಗ ತಜ್ಞರ ವಿಶೇಷ ತಂಡ ಕೋಲ್ಕತ್ತಾದಿಂದ ಬಂದಿದ್ದು ಪರಿಶೀಲನೆ ನಡೆಸಿದೆ. ಮಗು ವಾಸವಾದ ಸ್ಥಳ ಹಾಗೂ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವಂತೆ ಅಧಿಕಾರಿಗಳು ಸ್ಥಳೀಯರಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪತ್ರಕರ್ತರ 37ನೇ ರಾಜ್ಯ ಸಮ್ಮೇಳನಕ್ಕೆ ಡಾ.ವೀರೇಂದ್ರ ಹೆಗ್ಗಡೆಗೆ ಆಹ್ವಾನ

    ಝಿಕಾ ವೈರಸ್ ಲಕ್ಷಣಗಳು: ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿ ಜ್ವರ, ತಲೆನೋವು, ಕೀಲು ನೋವು, ಕಣ್ಣು ಕೆಂಪಾಗುವುದು ಮತ್ತು ಸ್ನಾಯು ನೋವುಗಳು ಕಂಡುಬರುತ್ತದೆ. ಇದು ಸೊಳ್ಳೆ ಕಡಿತದಿಂದ ಉಂಟಾಗುವ ರೋಗವಾಗಿದೆ. ಗರ್ಭಿಣಿಯರು ಹೆಚ್ಚಾಗಿ ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.

    Live Tv
    [brid partner=56869869 player=32851 video=960834 autoplay=true]

  • ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ – ಆರೋಗ್ಯ ಇಲಾಖೆಗೆ ಪತ್ರ ಬರೆದ ಡಿಹೆಚ್‍ಒ

    ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ – ಆರೋಗ್ಯ ಇಲಾಖೆಗೆ ಪತ್ರ ಬರೆದ ಡಿಹೆಚ್‍ಒ

    ಬೆಳಗಾವಿ: ಡಿಹೆಚ್‍ಒಗೆ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ ಕುರಿತಾಗಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬೆಳಗಾವಿ ಡಿಹೆಚ್‍ಒ ಡಾ.ಮಹೇಶ್ ಕೋಣಿ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪತ್ರದಲ್ಲಿ ಏನಿದೆ?:
    ತಾಲೂಕು ಆಸ್ಪತ್ರೆಯಿಂದ ಬೆಳಗಾವಿಯ ಬಿಮ್ಸ್‌ಗೆ ನಿಯೋಜನೆಗೊಂಡ ತಜ್ಞ ವೈದ್ಯರು ಹಾಗೂ ಇತರ ಸಿಬ್ಬಂದಿ ಪಟ್ಟಿ ಸಮೇತ ಪತ್ರ ಬರೆದಿದ್ದಾರೆ. ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲಾನ್ ಬಿಸ್ವಾಸ್ ಅವರ ಪತ್ರಗಳ ಹಾಗೂ ಮೌಖಿಕ ಆದೇಶಗಳ ಅನ್ವಯ ವೈದ್ಯರು ಹಾಗೂ ಸಿಬ್ಬಂದಿ ಬಿಮ್ಸ್‌ಗೆ ನಿಯೋಜಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆಯಾ ತಾಲೂಕು ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿಯನ್ನು ಬಿಮ್ಸ್‌ಗೆ ನಿಯೋಜನೆ ಮಾಡಿದ್ದರಿಂದ ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ತಾಲೂಕು ಕೇಂದ್ರಗಳಿಂದ ಬಿಮ್ಸ್‌ಗೆ ನಿಯೋಜನೆ ಮಾಡುವುದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಆಗುತ್ತಿಲ್ಲ. ತಮ್ಮದೇನು ತಪ್ಪು ಇಲ್ಲದೇ ಇದ್ದರೂ ಜನಪ್ರತಿನಿಧಿಗಳು ತಮಗೆ ಕರೆ ಮಾಡಿ ತರಾಟೆ ತಗೆದುಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ: ರೇಣುಕಾಚಾರ್ಯ

    ಬಿಮ್ಸ್‌ಗೆ ನಿಯೋಜನೆಗೊಂಡ ಸಿಬ್ಬಂದಿಯನ್ನು ಮೂಲ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲು ಸೂಚಿಸಿರುತ್ತಾರೆ. ಹೀಗಾಗಿ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಬಿಮ್ಸ್‌ಗೆ ಕಳುಹಿಸುವುದರಿಂದ ಆಗುತ್ತಿರುವ ತೊಂದರೆ ನಿವಾರಿಸುವಂತೆ ಮನವಿ ಮಾಡಿದ್ದಾರೆ. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ತಜ್ಞ ವೈದ್ಯರ ಕೊರತೆ ಇದೆ. ಈ ಮಧ್ಯೆ ತಾಲೂಕು ಕೇಂದ್ರಗಳಿಗೆ ನೇಮಕಗೊಂಡ ತಜ್ಞ ವೈದ್ಯರನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಿದರೆ ತಾಲೂಕು ಆಸ್ಪತ್ರೆಗಳಿಗೆ ಬರುವ ಹಳ್ಳಿ ಜನರ ಪಾಡೇನು? ಈ ಬಗ್ಗೆ ಸರ್ಕಾರ ಸೂಕ್ತ ಗಮನ ಹರಿಸಲಿ, ಹಳ್ಳಿ ಜನರ ಆರೋಗ್ಯದ ಕಡೆ ಗಮನ ಹರಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ: ರೇಣುಕಾಚಾರ್ಯ

    Live Tv
    [brid partner=56869869 player=32851 video=960834 autoplay=true]

  • 7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO

    7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO

    ಬೆಳಗಾವಿ: ಮೂಡಲಗಿ ಪಟ್ಟಣದ ಹಳ್ಳದಲ್ಲಿ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಎಚ್‍ಒ ಮಹೇಶ್ ಕೋಣಿ, ಮೂಡಲಗಿ  ಪೊಲೀಸರ ನೇತೃತ್ವದಲ್ಲಿ ಸ್ಕ್ಯಾನಿಂಗ್ ಸೆಂಟರ್, ಆರು ಮೆಟರ್ನಿಟಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.

    belgavi

    ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಬೆಳಗಾವಿ ಡಿಎಚ್‍ಒ ನೇತೃತ್ವದ ತಂಡ ನವಜೀವನ ಆಸ್ಪತ್ರೆ ಹಾಗೂ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಹಾಗೂ ನವಜೀವನ ಆಸ್ಪತ್ರೆಗಳ ಕೈವಾಡ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ಆಸ್ಪತ್ರೆಗಳನ್ನು ಡಿಎಚ್‍ಒ ಮಹೇಶ್ ಕೋಣಿ ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ – ನಮ್ಮ ಆಸ್ಪತ್ರೆಯದ್ದು ಎಂದ ವೈದ್ಯೆ

    ಶುಕ್ರವಾರ ದಾಳಿ ನಡೆದಂತಹ ಸಂದರ್ಭದಲ್ಲಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ವೈದ್ಯೆ ಡಾ.ವೀಣಾ ಕಣಕರೆಡ್ಡಿ ಏಳು ಭ್ರೂಣಗಳು ತಾವೇ ಎಸೆದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಯ ಪಾಮೋಲಿನನಲ್ಲಿ ಭ್ರೂಣಗಳನ್ನು ರಕ್ಷಣೆ ಮಾಡಿ ಬಾಟಲ್‍ನಲ್ಲಿ ಇಡಲಾಗಿತ್ತು. ಅಧಿಕಾರಿಗಳ ದಾಳಿಗೆ ಹೆದರಿ ಹಳೆಯ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ ಶಿಫ್ಟ್ ಆಗುವಾಗ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯ ಸಿಬ್ಬಂದಿ ಬಳಿ ಭ್ರೂಣಗಳನ್ನು ಎಸೆಯಲು ಕೊಟ್ಟಿದ್ದಾರೆ. ವೆಂಕಟೇಶ ಆಸ್ಪತ್ರೆ ಸಿಬ್ಬಂದಿ ಅವುಗಳನ್ನು ತೆಗೆದುಕೊಂಡು ಹೋಗಿ ಜೂ.23ರಂದು ಹಳ್ಳದಲ್ಲಿ ಎಸೆದಿರುವುದಾಗಿ ವೈದ್ಯೆ ಡಾ.ವೀಣಾ ಕಣಕರೆಡ್ಡಿ ತಪ್ಪು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ

    ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದ್ದು, ಶುಕ್ರವಾರ ಸಿಕ್ಕಿರುವ ಏಳು ಭ್ರೂಣ ಮೃತದೇಹಗಳು ಮೂರು ವರ್ಷಗಳ ಹಿಂದೆ ಗರ್ಭಪಾತ ಮಾಡಿದ್ದವು ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಪೊಲೀಸರ ದಾಳಿ ಭೀತಿಯಿಂದ ಕಳೆದ ಜೂನ್.23ರಂದು ರಾತ್ರೋರಾತ್ರಿ ಏಳು ಭ್ರೂಣಗಳನ್ನು ಐದು ಬಾಟಲಿಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಹಳ್ಳಕ್ಕೆ ಎಸೆದಿದ್ದರು. ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಬಯಲಾಗಿದ್ದು ಈಗಾಗಲೇ ಆಸ್ಪತ್ರೆ ಸೀಜ್ ಮಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ನಿಯಮ ಗಾಳಿಗೆ ತೂರಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಲಿಂಗ ಪತ್ತೆ ಹಚ್ಚುತ್ತಿದ್ರಾ ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ಗೊತ್ತಿದ್ರೂ ಸುಮ್ಮನೆ ಕುಳಿತಿದ್ದಾರಾ ಎಂಬ ಆರೋಪ ಕೇಳಿಬಂದಿದೆ.

    Live Tv

  • ಶಸ್ತ್ರ ಚಿಕಿತ್ಸೆ ಹೊಲಿಗೆ ಬಿಚ್ಚಿಕೊಂಡು ಬಾಣಂತಿಯರ ಪರದಾಟ ಪ್ರಕರಣ – ವೈದ್ಯಾಧಿಕಾರಿಗಳ ವಿರುದ್ಧ FIR

    ಶಸ್ತ್ರ ಚಿಕಿತ್ಸೆ ಹೊಲಿಗೆ ಬಿಚ್ಚಿಕೊಂಡು ಬಾಣಂತಿಯರ ಪರದಾಟ ಪ್ರಕರಣ – ವೈದ್ಯಾಧಿಕಾರಿಗಳ ವಿರುದ್ಧ FIR

    ವಿಜಯಪುರ: ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯಾದ ಮಹಿಳೆಯರಿಗೆ ಹಾಕಲಾಗಿದ್ದ ಹೊಲಿಗೆ ಬಿಚ್ಚಿ ಸಮಸ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ʼಪಬ್ಲಿಕ್‌ ಟಿವಿʼ ವರದಿಯನ್ನಾಧರಿಸಿ ವೈದ್ಯಾಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಇಲಾಖೆ ಕ್ರಮ ಕೈಗೊಂಡಿದೆ.

    ಪಬ್ಲಿಕ್‌ ಟಿವಿ ವರದಿಯನ್ನಾಧಿರಿಸಿ ಕ್ರಮ ಕೈಗೊಂಡಿರುವ ಉಪಲೋಕಾಯುಕ್ತ ಬಿ.ಎಸ್.ಪಾಟೀಲ್, ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 U/s 7(2) & 9(3)(a) ನೇದರಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ನೋಟಿಸ್ ಜಾರಿಗೊಳಿಸಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ ರಾಜಕುಮಾರ ಯರಗಲ್, ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಸಂಗಣ್ಣ ಲಕ್ಕಣ್ಣವರ, ಜಿಲ್ಲಾಸ್ಪತ್ರೆ ರೆಸಿಡೆಂಟ್ ಮೆಡಿಕಲ್ ಅಧಿಕಾರಿ ಎ.ಜಿ.ಬಿರಾದಾರ ವಿರುದ್ಧ ಪ್ರಕರಣ ದಾಖಲಾಗಿದೆ.

    ಏನಿದು ಪ್ರಕರಣ?: ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರು ದೊಡ್ಡ ಎಡವಟ್ಟು ಮಾಡಿದ್ದರು. 10 – 15 ದಿನಗಳ ಅಂತರದಲ್ಲಿ 40 ಮಹಿಳೆಯರಿಗೆ ಸಿಜೇರಿಯನ್ ಆಗಿದ್ದು, 25ಕ್ಕೂ ಹೆಚ್ಚು ಮಂದಿಯ ಹೊಲಿಗೆಗಳು ಬಿಚ್ಚಿಕೊಂಡಿತ್ತು. ಇದರಿಂದ ಜಿಲ್ಲಾಸ್ಪತ್ರೆ ಅಂದ್ರೆ ಸಾಕು ಜನರು ಬೆಚ್ಚಿ ಬೀಳ್ತಿದ್ದರು. ಅಲ್ಲಿಯ ಅವ್ಯವಸ್ಥೆ, ವೈದ್ಯರ ಎಡವಟ್ಟುಗಳನ್ನು ಕಂಡು ಜಿಲ್ಲಾಸ್ಪತ್ರೆಗಳಿಗೆ ಹೋಗಲು ಜನ ಭಯ ಪಡುವಂತೆ ಮಾಡಿತ್ತು.

    ಶಸ್ತ್ರ ಚಿಕಿತ್ಸೆಯಲ್ಲಿ ಮಾತ್ರವಲ್ಲದೆ ಬಾಣಂತಿಯರಿಗೆ ನೀಡುವ ಇಂಜೆಕ್ಷನ್, ಮಾತ್ರೆ ಸೇರಿದಂತೆ ಸರಿಯಾಗಿ ತಪಾಸಣೆ ಕೂಡ ಮಾಡದೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವಿದ್ದು, ಬಾಣಂತಿಯರಿಗೆ ಹಾಕಿದ ಹೊಲಿಗೆಗಳು ಬಿಚ್ಚಿ ಮೂರ್ನಾಲ್ಕು ದಿನಗಳು ಕಳೆದರು ಇದುವರೆಗೂ ಅವರಿಗೆ ಮರಳಿ ಹೊಲಿಗೆ ಹಾಕದೆ ವೈದ್ಯರು ಅಸಡ್ಡೆ ತೋರಿದ್ದರು. ವೈದ್ಯರ ಈ ಎಡವಟ್ಟಿನಿಂದ ಬಾಣಂತಿಯರು ಕಣ್ಣೀರಿಡುತ್ತಿದ್ದರು. ಈ ಕುರಿತು ಪಬ್ಲಿಕ್‌ ಟಿವಿ ಗ್ರೌಂಡ್‌ ರಿಪೋರ್ಟ್‌ ಮಾಡಿತ್ತು. ಇದೀಗ ಅವರಿಗೆ ಫಲ ಸಿಕ್ಕಂತಾಗಿದೆ.