Tag: DHELI

  • ರೈತರ ಮೇಲೆ ಅಶ್ರುವಾಯು, ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ

    ರೈತರ ಮೇಲೆ ಅಶ್ರುವಾಯು, ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ

    ನವದೆಹಲಿ: ತೀವ್ರಗೊಂಡ ರೈತ ಪ್ರತಿಭಟನೆಯನ್ನು ತಡೆಯಲು ರೈತ ಮೇಲೆ ಅಶ್ರುವಾಯು, ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಕೃಷಿ ಕಾನೂನು ಸುಧಾರಣೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಬ್ಯಾರಿಕೇಡ್‍ಗಳನ್ನು ಉಲ್ಲಂಘಿಸಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ವೇಳೆ ಅವರನ್ನು ತಡೆಯಲು ಅಶ್ರುವಾಯು ಹಾರಿಸಲಾಗಿದೆ. ಉತ್ತರ ದೆಹಲಿಯಲ್ಲಿ ಅನ್ನದಾತರ ಕಿಚ್ಚು ತೀವ್ರಗೊಂಡಿಗೆ. ಕಲ್ಲು ತೂರಾಟವಾಗುತ್ತಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿರುವ ಪೊಲೀಸರ ವಿರುದ್ಧವಾಗಿ ರೈತರು ತಿರುಗಿ ಬಿದ್ದಿದ್ದಾರೆ.

    ದೆಹಲಿಯಲ್ಲಿ ನಡೆಯುತ್ತಿರುವ ರೈತರ ಟ್ರ್ಯಾಕ್ಟರ್ ರ‍್ಯಾಲಿ ಉದ್ವಿಗ್ನ ಪರಿಸ್ಥಿತಿಯನ್ನು ತಲುಪುತ್ತಿದೆ. ಗಾಜಿಪು ಗಡಿಯಲ್ಲಿ ರ‍್ಯಾಲಿಗೆ ತೆರಳಿದ್ದ ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ. ಕಿಸಾನ್ ಟ್ರ್ಯಾಕ್ಟರ್ ಪರೇಡ್ ಗೆ ತೆರಳಿದ್ದ ರೈತರ ಮೇಲೆ ಪೊಲೀಸರು ಮನಬಂದಂತೆ ಲಾಠಿಚಾರ್ಜ್ ಮಾಡಿದ್ದಾರೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತಳ್ಳಿ ರೈತರು ನುಗ್ಗಲು ಯತ್ನಿಸಿದ್ದಾರೆ. ದೆಹಲಿಯ ಸಿಂಘು ಗಡಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಗುತ್ತಿದೆ. ಜಲಫಿರಂಗಿ ಪ್ರಯೋಗವು ಆಗುತ್ತಿದೆ.

    ದೇಶದಾದ್ಯಂತ ಇಂದು ಗಣರಾಜ್ಯೋತ್ಸ ಆಚರಣೆ ಮಾಡಲಾಗುತ್ತಿದೆ. ಆದರೆ ಕೇಂದ್ರದ ಕೃಷಿ ತಿದ್ದುಪಡಿ ವಿರೋಧಿಸಿ ರೈತರು ಬೆಂಗಳೂರು ಮತ್ತು ದೆಹಲಿಯಲ್ಲಿ  ರ‍್ಯಾಲಿ ಮಾಡುತ್ತಿದ್ದಾರೆ. ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದರೆ ರೈತರ ರ‍್ಯಾಲಿ  ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಖಾಕಿ ಕೋಟೆಯನ್ನು ಭೇದಿಸಿ ರೈತರು ಟ್ರ್ಯಾಕ್ಟರ್‍ಗಳಲ್ಲಿ ನುಗ್ಗಿದ್ದಾರೆ. ವಿವಿಧ ರಾಜ್ಯಗಳಿಂದ ರೈತರು ಬಂದು ರ‍್ಯಾಲಿ ಯಲ್ಲಿ ಭಾಗಿಯಗಿದ್ದಾರೆ. ರ‍್ಯಾಲಿ  ಕ್ಷಣ ಕ್ಷಣಕ್ಕೂ ತೀತ್ರಸ್ವರೂಪವನ್ನು ಪಡೆದುಕೊಳ್ಳುತ್ತಿದೆ.