Tag: Dheeren Ramkumar

  • ಡಾ.ರಾಜ್ ಕುಟುಂಬದೊಂದಿಗೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ ಜೇಮ್ಸ್ ನಿರ್ಮಾಪಕ

    ಡಾ.ರಾಜ್ ಕುಟುಂಬದೊಂದಿಗೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ ಜೇಮ್ಸ್ ನಿರ್ಮಾಪಕ

    ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ನಿರ್ಮಾಣ ಮಾಡಿದ್ದ ಕಿಶೋರ್ ಪತ್ತೆಕೊಂಡ ಇದೀಗ ಡಾ.ರಾಜ್ ಕುಟುಂಬದ ಜತೆಯೇ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ರಾಮ್ ಕುಮಾರ್ ಪುತ್ರ ಧಿರೇನ್ ರಾಮ್ ಕುಮಾರ್ ಅವರಿಗಾಗಿ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಂದು ಧೀರೇನ್ ಅವರ ಹುಟ್ಟು ಹಬ್ಬ. ಈ ದಿನದಂದು ಕಿಶೋರ್ ಪ್ರೊಡಕ್ಷನ್‌ ಲಾಂಛನದಲ್ಲಿ ಮೂಡಿ ಬರಲಿರುವ ಎರಡನೇ ಸಿನಿಮಾದ ಘೋಷಣೆ ಮಾಡಲಿದ್ದಾರೆ.

    Dheeren ramkumar,

    ಈಗಾಗಲೇ ಧೀರೇನ್ ‘ಶಿವ 143’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ನಂತರ ಪತ್ತೆಕೊಂಡ ನಿರ್ಮಾಣದ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಈ ಹಿಂದೆ ಧನಂಜಯ್ ಅವರಿಗಾಗಿ ಬಡವ ರಾಸ್ಕಲ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಶಂಕರ್ ಗುರು ಈ ಸಿನಿಮಾದ ನಿರ್ದೇಶಕ. ಧೀರೆನ್‌ಗಾಗಿ ಹೊಸ ಬಗೆಯ ಕಥೆಯನ್ನು ಹೆಣೆದಿದ್ದಾರಂತೆ.  ಇದನ್ನೂ ಓದಿ: ಕೆಜಿಎಫ್-2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್

    ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಧೀರೇನ್ ಹುಟ್ಟು ಹಬ್ಬಕ್ಕಾಗಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಸದ್ಯದಲ್ಲೇ ಈ ಸಿನಿಮಾದ ಇತರ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.

    ಕಿಶೋರ್ ಪತ್ತೆಕೊಂಡ ಡಾ.ರಾಜ್ ಕುಟುಂಬದ ಸಿನಿಮಾದೊಂದಿಗೆ ಚಿತ್ರೋದ್ಯಮಕ್ಕೆ ಕಾಲಿಟ್ಟವರು, ಆ ನಂಟಿನಿಂದಾಗಿ ಎರಡನೇ ಸಿನಿಮಾವನ್ನು ಅದೇ ಕುಟುಂಬದೊಂದಿಗೆ ಮುಂದುವರೆಸಿದ್ದು ವಿಶೇಷ. ಇದನ್ನೂ ಓದಿ: ಒಂದೇ ಪ್ರಾಜೆಕ್ಟ್‌ನಲ್ಲಿ ವಿಕ್ಕಿ ಕೌಶಲ್- ಪೂಜಾ ಹೆಗ್ಡೆ?

  • ಅಪ್ಪು ನೆನಪಿನಲ್ಲಿ ಧೀರೇನ್ ರಾಮ್‌ಕುಮಾರ್: ಅಪ್ಪು ಭಾವಚಿತ್ರವಿರೋ ಹೆಡ್‌ಪೋನ್ ವಿಡಿಯೋ ವೈರಲ್

    ಅಪ್ಪು ನೆನಪಿನಲ್ಲಿ ಧೀರೇನ್ ರಾಮ್‌ಕುಮಾರ್: ಅಪ್ಪು ಭಾವಚಿತ್ರವಿರೋ ಹೆಡ್‌ಪೋನ್ ವಿಡಿಯೋ ವೈರಲ್

    ಸ್ಯಾಂಡಲ್‌ವುಡ್ ನಟ ಧೀರೇನ್ ರಾಮ್‌ಕುಮಾರ್ ಅಭಿನಯದ `ಶಿವ 143′ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರದ ಸಾಂಗ್ಸ್, ಟ್ರೇಲರ್‌ನಿಂದ ಅಣ್ಣಾವ್ರ ಮೊಮ್ಮಗ ಸಿನಿಪ್ರಿಯರನ್ನ ಇಂಪ್ರೈಸ್ ಮಾಡಿದ್ದಾರೆ. ಸದ್ಯ ಅಪ್ಪು ನೆನಪಿನಲ್ಲಿರೋ ಧೀರೇನ್ ರಾಮ್‌ಕುಮಾರ್, ಪುನೀತ್ ಫೋಟೋಯಿರೋ ಹೆಡ್ ಫೋನ್ ಧರಿಸಿರುವ ಫೋಟೋ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ.

    ಅಣ್ಣಾವ್ರ ಮೊಮ್ಮಗ ಧೀರೇನ್‌ಗೆ ಅಪ್ಪು ಜೊತೆ ಒಡನಾಟವಿತ್ತು. ಈ ಹಿಂದೆ ಪುನೀತ್ ಅಣ್ಣಾವ್ರ ನೆನಪಿಗಾಗಿ ನೀ ಕಂಗಳ ಬಿಸಿಯ ಹನಿಗಳು ಅಂತಾ ಅಪ್ಪಾಜಿಗಾಗಿ ಹಾಡಿದ್ರು. ಆ ಹಾಡಿನಲ್ಲಿ ಅಪ್ಪು ಧರಿಸಿರುವ ಹೆಡ್‌ಫೋನ್ ಅಣ್ಣಾವ್ರ ಭಾವಚಿತ್ರವಿತ್ತು. ಈಗ ಅದೇ ರೀತಿ ನಟ ಧೀರೇನ್ ಧರಿಸಿರುವ ಹೆಡ್‌ಪೋನ್‌ನಲ್ಲಿ ಅಪ್ಪು ಫೋಟೋವಿದ್ದು, ಸಧ್ಯ ಈ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಇದನ್ನೂ ಓದಿ:ಬಣ್ಣದ ಲೋಕದಲ್ಲಿ `ಏಕ್ ಲವ್ ಯಾ’ ನಟಿ ರೀಷ್ಮಾ ಮಿಂಚಿಂಗ್

     

    View this post on Instagram

     

    A post shared by Dheeren Ramkumar (@dheerenrk)

    ಪುನೀತ್ ಫೋಟೋಯಿರೋ ಹೆಡ್ ಫೋನ್ ಧರಿಸಿರುವ ಧೀರೇನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಸೂರ್ಯನೊಬ್ಬ ಚಂದ್ರನೊಬ್ಬ, ಈ ರಾಜನೂ ಒಬ್ಬ ಎಂದು ಬರೆದು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಬಿಮಾನಿಗಳು ಖುಷಿಪಟ್ಟಿದ್ದಾರೆ.

  • ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡ ಅಣ್ಣಾವ್ರ ಮೊಮ್ಮಗ

    ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡ ಅಣ್ಣಾವ್ರ ಮೊಮ್ಮಗ

    ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಮೊಮ್ಮಗ ಹಾಗೂ ಸ್ಯಾಂಡಲ್‍ವುಡ್ ನಟ ರಾಮ್‍ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್ ಚಂದನವನಕ್ಕೆ ಕಾಲಿಟ್ಟಿದ್ದು, ಮೊದಲ ಚಿತ್ರ ಆರಂಭದಲ್ಲಿಯೇ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ದೊಡ್ಮನೆ ಹುಡುಗನ ಮೊದಲ ಚಿತ್ರವೇ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಧೀರೇನ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಸರ್ಪ್ರೈಸ್ ನೀಡಿದೆ.

    ಈ ಹಿಂದೆ ‘ದಾರಿ ತಪ್ಪಿದ ಮಗ’ ಸಿನಿಮಾ ಮೂಲಕ ಧೀರೇನ್ ಕಳೆದ ವರ್ಷವೇ ತಮ್ಮ ಸಿನಿ ಜರ್ನಿ ಆರಂಭಿಸಲಿದ್ದಾರೆ ಎನ್ನಲಾಗಿತ್ತು. ಇದು ಅಣ್ಣಾವ್ರ ಜನಪ್ರಿಯ ಚಿತ್ರವಾಗಿದ್ದು, ಈ ಹೆಸರನ್ನು ಇಡುವುದು ಬೇಡ ಎಂದು ನಿರ್ಧರಿಸಿ, ಬಳಿಕ ಚಿತ್ರದ ಟೈಟಲ್‍ನ್ನು ಶಿವ 143 ಎಂದು ಬದಲಿಸಲಾಗಿದೆ. ಹೆಸರು ಬದಲಾಯಿಸುತ್ತಿದ್ದಂತೆ ಚಿತ್ರೀಕರಣ ಭರದಿಂದ ಸಾಗಿದ್ದು, ಡಬ್ಬಿಂಗ್ ಹಂತ ತಲುಪಿದೆ.

    ಇದೀಗ ಧೀರೇನ್ ಹುಟ್ಟುಹಬ್ಬದ ಅಂಗವಾಗಿ ಚಿತ್ರ ತಂಡ ಸರ್ಪ್ರೈಸ್ ನೀಡಿದ್ದು, ‘ಶಿವ 143’ ಚಿತ್ರದ ನ್ಯೂ ಲುಕ್ ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ಧೀರೇನ್ ಮಾಸ್ ಲುಕ್ ನೀಡಿದ್ದು, ಚಿತ್ರ ಪ್ರೇಮಿಗಳನ್ನು ಸೆಳೆದಿದೆ. ಈ ಲುಕ್ ನೋಡಿದರೇನೆ ತಿಳಿಯುತ್ತದೆ ಧೀರೇನ್ ಸಿನಿಮಾಗಾಗಿ ಎಷ್ಟು ವರ್ಕೌಟ್ ಮಾಡುತ್ತಾರೆ ಎಂದು. ಸಖತ್ ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಕುರಿತ ನಿರೀಕ್ಷೆ ಹೆಚ್ಚಿಸಿದ್ದಾರೆ.

    ಸ್ಯಾಂಡಲ್‍ವುಡ್ ನಟ ರಾಮ್ ಕುಮಾರ್ ಹಾಗೂ ಅಣ್ಣಾವ್ರ ಮಗಳು ಪೂರ್ಣಿಮಾ ಅವರ ಪುತ್ರ ಧೀರೇನ್ ಅವರ ಮೊದಲ ಚಿತ್ರವೇ ಕಿಕ್ಕೇರಿಸುತ್ತಿದ್ದು, ಟೈಟಲ್ ಮೂಲಕವೇ ಪ್ರೇಕ್ಷಕರ ಮನ ಗಹೆದ್ದಿತ್ತು. ಇದೀಗ ಮಾಸ್ ಲುಕ್ ನೋಡಿ ಮತ್ತಷ್ಟು ಫಿದಾ ಆಗಿದ್ದಾರೆ. ಅಷ್ಟೇ ಸೀರಿಯಸ್ಸಾಗಿ ಧೀರೇನ್ ಅವರು ಈ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿರ್ದೇಶಕರು ಬಯಸಿದ್ದನ್ನು ಚಾಚೂತಪ್ಪದೆ ಮಾಡುತ್ತ ಶಿಸ್ತಿನ ನಟ ಎನಿಸಿಕೊಂಡಿದ್ದಾರಂತೆ.

     

    View this post on Instagram

     

    Happy Birthday Dheeren ????

    A post shared by Puneeth Rajkumar (@puneethrajkumar.official) on

    ಹೆಬ್ಬೆಟ್ಟಿನ ರೇಖೆಗಳಲ್ಲಿಯೇ ಹಾರ್ಟ್ ಆಕೃತಿ ಬಿಡಿಸಿ, ಶಿವ 143 ಎಂದು ಬರೆದಾಗಲೇ ಇದು ಮಾಸ್ ಲವ್ ಸ್ಟೋರಿ ಎಂಬ ಸುಳಿವು ಸಿಕ್ಕಿತ್ತು. ಇದೀಗ ಖಡಕ್, ಖದರ್ ಲುಕ್ ನೋಡಿ ಇದೊಂದು ಪಕ್ಕಾ ಮಾಸ್ ಲವ್ ಸ್ಟೋರಿ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಧೀರೇನ್‍ಗೆ ನಾಯಕಿಯಾಗಿ ‘ಟಗರು’ ಖ್ಯಾತಿಯ ಕೆಂಡ ಸಂಪಿಗೆ ಮಾನ್ವಿತಾ ಹರೀಶ್ ನಟಿಸಿದ್ದಾರೆ. ಚಿತ್ರ ಅಂತಿಮ ಹಂತ ತಲುಪಿದ್ದು, ಲಾಕ್‍ಡೌನ್ ನಂತರ ದೊಡ್ಮನೆ ಹುಡುಗನ ಗ್ರ್ಯಾಂಡ್ ಎಂಟ್ರಿಗೆ ವೇದಿಕೆ ಸಿದ್ಧಪಡಿಸಲು ನಿರ್ಮಾಪಕ ಜಯಣ್ಣ-ಬೋಗೆಂದ್ರ ಸಿದ್ಧತೆ ನಡೆಸಿದ್ದಾರೆ.