Tag: Dharmendra Pradhan

  • ರಾಜ್ಯಸಭೆಯಲ್ಲಿ ಕ್ಷಮೆ ಕೇಳಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ

    ರಾಜ್ಯಸಭೆಯಲ್ಲಿ ಕ್ಷಮೆ ಕೇಳಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ

    ನವದೆಹಲಿ: ವಿವಾದಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನೀಡಿದ ಹೇಳಿಕೆ ರಾಜ್ಯಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಉಪ ಸಭಾಧ್ಯಕ್ಷರಿಗೆ ಅಸಂಸದೀಯ ಭಾಷೆ ಬಳಸಿದ್ದಕ್ಕಾಗಿ ಬಿಜೆಪಿ ಸಂಸದರು (BJP MP) ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡ ಹಿನ್ನಲೆ ಅವರು ಕ್ಷಮೆ ಕೇಳುವ ಸನ್ನಿವೇಶ ನಿರ್ಮಾಣವಾಯಿತು.

    ಯಾರನ್ನೋ ಹೊಡೆದುರುಳಿಸು ಎಂಬ ಅರ್ಥ ಬರುವ ಈ ಹೇಳಿಕೆಗೆ ಖರ್ಗೆ ಅವರು ಕ್ಷಮೆಯಾಚಿಸಿದರು. ನಂತರ ಅ ಪದವನ್ನು ರಾಜ್ಯಸಭೆಯ ದಾಖಲೆಗಳಿಂದ ತೆಗೆದುಹಾಕಲಾಯಿತು. ಇದನ್ನೂ ಓದಿ: ರಾಯಚೂರು| ಎರಡು ಬೈಕ್‌ಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – ಐವರು ದುರ್ಮರಣ

    ರಾಜ್ಯಸಭೆಯಲ್ಲಿ (Rajya Sabha) ಶಿಕ್ಷಣ ಸಚಿವಾಲಯದ ಕಾರ್ಯವೈಖರಿಯ ಕುರಿತು ಚರ್ಚೆ ನಡೆಯುತ್ತಿತ್ತು, ಈ ವೇಳೆ ಡಿಎಂಕೆ ಸಂಸದರನ್ನು ಅನಾಗರಿಕರು ಎಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲು ಪ್ರತಿಪಕ್ಷಗಳು ಗದ್ದಲ ಮಾಡಿದವು. ಇದನ್ನೂ ಓದಿ: ಕಾಂಗ್ರೆಸ್‌ನಿಂದ SCSP, TSP ಹಣ ಗ್ಯಾರಂಟಿಗೆ ಬಳಕೆ – ಕೋಲಾರ ಬಿಜೆಪಿ ಮುಖಂಡರಿಂದ ಖಂಡನೆ

    ಗದ್ದಲದ ನಡುವೆಯೇ ಉಪ ಸಭಾಪತಿ ಹರಿವಂಶ್ ಅವರು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಮಾತನಾಡಲು ಸೂಚಿಸಿದರು. ಸಿಂಗ್ ಮಾತನಾಡುವ ಮೊದಲು ಎದ್ದು ನಿಂತ ಮಲ್ಲಿಕಾರ್ಜುನ್ ಖರ್ಗೆ ತಮ್ಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆದರೆ ಉಪ ಸಭಾಪತಿ ಹರಿವಂಶ್ ಇದಕ್ಕೆ ನಿರಾಕರಿಸಿದರು. ಇದರಿಂದ ಕುಪಿತಗೊಂಡ ಖರ್ಗೆ ಪೀಠದತ್ತ ಕೈ ಮಾಡಿ ಇದು ಸರ್ವಾಧಿಕಾರ ಎಂದು ಹೇಳಿದರು‌. ಅಲ್ಲದೇ ನೀವು ಬೇರೆ ಏನೋ ಹೊಡೆಯಲು ಬಯಸುತ್ತೀರಿ, ನಾವೇ ಅದನ್ನು ಸರಿಯಾಗಿ ಹೊಡೆಯುತ್ತೇವೆ ಎಂದರು. ಖರ್ಗೆ ಅವರ ಈ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ನಡೆಸಿದರು.

    ಗದ್ದಲ ಮುಂದುವರಿದಂತೆ ಮಲ್ಲಿಕಾರ್ಜುನ್ ಖರ್ಗೆ ಉಪಸಭಾಪತಿಯವರಿಗೆ ಕ್ಷಮೆಯಾಚಿಸಿದರು. ನಾನು ಅಧ್ಯಕ್ಷರ ಬಗ್ಗೆ ಅಂತಹ ಪದಗಳನ್ನು ಬಳಸಿಲ್ಲ. ನನ್ನ ಮಾತುಗಳಿಂದ ಉಪಸಭಾಪತಿಯವರಿಗೆ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ಆದರೆ ನಾನು ಸರ್ಕಾರದ ನೀತಿಗಳನ್ನು ಟೀಕಿಸುತ್ತಿದ್ದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕದ ಹೆಸರೇ ಇರಲಿಲ್ಲ: ರೇವಣ್ಣಗೆ ಶ್ರೇಯಸ್ ಪಟೇಲ್ ತಿರುಗೇಟು

    ನಂತರ, X ನಲ್ಲಿ ಪೋಸ್ಟ್ ಮಾಡಿದ ಖರ್ಗೆ, ಧರ್ಮೇಂದ್ರ ಪ್ರಧಾನ್ ಅವರು ಈ ದೇಶದ ಒಂದು ಭಾಗದ, ಆದ್ರೆ ಜನರ ಒಂದು ಭಾಗದ ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ಉಲ್ಲೇಖಿಸುತ್ತಿರುವುದಾಗಿ ಹೇಳಿದರು. ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ | ಮಿನಿಸ್ಟರ್ ಕೈವಾಡವಿದೆ ಅನ್ನೋದು ಊಹಾಪೋಹ ಎಂದ ಜಮೀರ್

  • ಡಿಎಂಕೆ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡ್ತಿದೆ – ತ್ರಿಭಾಷಾ ಸೂತ್ರಕ್ಕೆ ವಿರೋಧಕ್ಕೆ ಧರ್ಮೇಂದ್ರ ಪ್ರಧಾನ್ ಟೀಕೆ

    ಡಿಎಂಕೆ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡ್ತಿದೆ – ತ್ರಿಭಾಷಾ ಸೂತ್ರಕ್ಕೆ ವಿರೋಧಕ್ಕೆ ಧರ್ಮೇಂದ್ರ ಪ್ರಧಾನ್ ಟೀಕೆ

    – ಸಭಾತ್ಯಾಗ, ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಿದ ಡಿಎಂಕೆ ಸಂಸದರು

    ನವದೆಹಲಿ: ಹೊಸ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಸೂತ್ರಕ್ಕೆ ವಿರೋಧ (language war) ವ್ಯಕ್ತಪಡಿಸುತ್ತಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ವಿರೋಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಲೋಕಸಭೆಯಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ (Tamil Nadu) ವಿದ್ಯಾರ್ಥಿಗಳ ಅಭಿವೃದ್ಧಿ ಬಗ್ಗೆ ಡಿಎಂಕೆ ಪಕ್ಷವು ಅಪ್ರಾಮಾಣಿಕ ಮತ್ತು ಅಸಡ್ಡೆ ಹೊಂದಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಹಾರದಲ್ಲಿ ಸೀತಾ ಮಾತೆಯ ಭವ್ಯ ಮಂದಿರ ನಿರ್ಮಾಣಕ್ಕೆ ಬಿಜೆಪಿ ಪ್ಲ್ಯಾನ್‌

    ಡಿಎಂಕೆ ನಾಯಕರು ತಮಿಳುನಾಡಿನ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ, ಅವರ ಏಕೈಕ ಕಾರ್ಯಸೂಚಿ ಭಾಷಾ ಆಧಾರಿತ ವಿಭಜನೆಗಳನ್ನು ಹುಟ್ಟುಹಾಕುವುದು. ಅವರು ರಾಜಕೀಯ ಕಿಡಿಗೇಡಿತನ ಮಾಡುತ್ತಿದ್ದಾರೆ. ಅವರು ಪ್ರಜಾಪ್ರಭುತ್ವ ವಿರೋಧಿ ಮತ್ತು ಅನಾಗರಿಕರು ಎಂದು ಅವರು ಟೀಕಿಸಿದರು.

    ಪ್ರಧಾನ್ ಅವರು ಡಿಎಂಕೆ ಪಕ್ಷದ ವಿರುದ್ಧ ಮಾಡಿದ ಕಟು ಟೀಕೆ ಕೋಲಾಹಲಕ್ಕೆ ಕಾರಣವಾಯಿತು, ಇದು ಡಿಎಂಕೆ ಸಂಸದರ ಪ್ರತಿಭಟನೆಗೆ ಕಾರಣವಾಯಿತು ಮತ್ತು ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಲಾಯಿತು. ರಾಜ್ಯಸಭೆಯಲ್ಲೂ ತ್ರಿಭಾಷಾ ನೀತಿ ಮತ್ತು ಗಡಿ ರಚನಾ ವಿಷಯಗಳ ವಿಷಯವನ್ನು ಎತ್ತಿದ್ದ ನಂತರ ಡಿಎಂಕೆ ಸಭಾತ್ಯಾಗ ಮಾಡಿತು.

    ಸಭಾತ್ಯಾಗದ ಬಗ್ಗೆ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಇದು ಬೇಜವಾಬ್ದಾರಿ ವರ್ತನೆ, ಅವರು ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು. ಇದು ಸಂಸತ್ತಿನ ಅವಮಾನಿಸುವ ದುಷ್ಟ ಸಂಚು, ನಮ್ಮ ಸರ್ಕಾರ ನಿಯಮಗಳ ಅಡಿಯಲ್ಲಿ ಎಲ್ಲವನ್ನೂ ಚರ್ಚಿಸಲು ಸಿದ್ಧವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ: ಶರಣು ಪ್ರಕಾಶ್ ಪಾಟೀಲ್

  • ಕಾನೂನು ವಿದ್ಯಾರ್ಥಿಗಳ ಪಠ್ಯದಲ್ಲಿ ಮನಸ್ಮೃತಿ ಇಲ್ಲ: ಕೇಂದ್ರ ಶಿಕ್ಷಣ ಸಚಿವ ಸ್ಪಷ್ಟನೆ

    ಕಾನೂನು ವಿದ್ಯಾರ್ಥಿಗಳ ಪಠ್ಯದಲ್ಲಿ ಮನಸ್ಮೃತಿ ಇಲ್ಲ: ಕೇಂದ್ರ ಶಿಕ್ಷಣ ಸಚಿವ ಸ್ಪಷ್ಟನೆ

    ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತೀಯ ಪಠ್ಯ ಮನುಸ್ಮೃತಿಯನ್ನು ಕಲಿಸುವ ಪ್ರಸ್ತಾಪದ ವಿವಾದಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತೆರೆ ಎಳೆದಿದ್ದಾರೆ.

    ಮನುಸ್ಮೃತಿಯು ಕಾನೂನು ಫ್ಯಾಕಲ್ಟಿ ಕೋರ್ಸ್‌ನ (ಡಿಯುನಲ್ಲಿ) ಭಾಗವಾಗಲಿದೆ ಎಂದು ಕೆಲವು ಮಾಹಿತಿ ನಮಗೆ ಬಂದಿತು. ನಾನು ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ವಿಚಾರಿಸಿ ಮಾತನಾಡಿದೆ. ಕೆಲವು ಕಾನೂನು ಅಧ್ಯಾಪಕರು ನ್ಯಾಯಶಾಸ್ತ್ರದ ಅಧ್ಯಾಯದಲ್ಲಿ ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಅವರು ನನಗೆ ತಿಳಿಸಿದರು. ಅಕಾಡೆಮಿಕ್ ಕೌನ್ಸಿಲ್‌ನಲ್ಲಿ ಅಂತಹ ಯಾವುದೇ ಪ್ರಸ್ತಾವನೆಗೆ ಅನುಮೋದನೆ ಇಲ್ಲ. ನಿನ್ನೆ ಸ್ವತಃ ಉಪಕುಲಪತಿಗಳೇ ಆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ನಾವೆಲ್ಲರೂ ನಮ್ಮ ಸಂವಿಧಾನಕ್ಕೆ ಮತ್ತು ಭವಿಷ್ಯದ ವಿಧಾನಕ್ಕೆ ಬದ್ಧರಾಗಿದ್ದೇವೆ. ಸಂವಿಧಾನದ ನಿಜವಾದ ಚೇತನ ಮತ್ತು ಅಕ್ಷರವನ್ನು ಎತ್ತಿ ಹಿಡಿಯಲು ಸರ್ಕಾರ ಬದ್ಧವಾಗಿದೆ. ಯಾವುದೇ ಸ್ಕ್ರಿಪ್ಟ್‌ನ ಯಾವುದೇ ವಿವಾದಾತ್ಮಕ ಭಾಗವನ್ನು ಸೇರಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟನೆ ನೀಡಿದ್ದಾರೆ.

    ಎಲ್‌ಎಲ್‌ಬಿ ವಿದ್ಯಾರ್ಥಿಗಳಿಗೆ ಪ್ರಾಚೀನ ಹಿಂದೂ ಕಾನೂನು ಪಠ್ಯವಾದ ‘ಮನುಸ್ಮೃತಿ’ ಬೋಧಿಸುವುದಿಲ್ಲ ಎಂದು ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಯೋಗೇಶ್ ಸಿಂಗ್ ಸ್ಪಷ್ಟಪಡಿಸಿದ್ದರು.

    ಕಾನೂನು ಅಧ್ಯಾಪಕರು ಮನುಸ್ಮೃತಿಯ ಒಂದು ಭಾಗವನ್ನು ‘ನ್ಯಾಯಶಾಸ್ತ್ರ’ ಎಂಬ ಕೋರ್ಸ್‌ನಲ್ಲಿ ಸೇರಿಸಲು ಯೋಚಿಸಿದ್ದಾರೆ. ಈ ಪ್ರಸ್ತಾಪವನ್ನು ಉಪಕುಲಪತಿ ನೇತೃತ್ವದ ಸಮಿತಿಯ ಮುಂದೆ ಮಂಡಿಸಿದಾಗ, ನಾವು ಅದನ್ನು ಸೂಕ್ತವೆಂದು ಪರಿಗಣಿಸಲಿಲ್ಲ ಮತ್ತು ಅದನ್ನು ತಿರಸ್ಕರಿಸಿದ್ದೇವೆ. ಭಾರತೀಯ ಜ್ಞಾನ ಸಂಪ್ರದಾಯಗಳನ್ನು ಕಲಿಸಲು ಇನ್ನೂ ಅನೇಕ ಪಠ್ಯಗಳಿವೆ. ನಾವು ಯಾವುದೇ ಒಂದು ಪಠ್ಯವನ್ನು ಅವಲಂಬಿಸಬಾರದು ಎಂದು ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಯೋಗೇಶ್ ಸಿಂಗ್ ಹೇಳಿದ್ದಾರೆ. ಈ ಬೆಳವಣಿಗೆ ವಿವಾದಕ್ಕೆ ಕಾರಣವಾಗಿತ್ತು.

    ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ವಿವಾದಾತ್ಮಕ ಭಾಗವನ್ನು ಪಠ್ಯಕ್ರಮದಲ್ಲಿ ಸೇರಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

  • ಮಂಡ್ಯ ಕೇಂದ್ರೀಯ ವಿದ್ಯಾಲಯಕ್ಕೆ ಶೀಘ್ರದಲ್ಲೇ ಕಾಯಂ ಶಿಕ್ಷಕರ ನೇಮಕ: ಧರ್ಮೇಂದ್ರ ಪ್ರಧಾನ್ ಭರವಸೆ

    ಮಂಡ್ಯ ಕೇಂದ್ರೀಯ ವಿದ್ಯಾಲಯಕ್ಕೆ ಶೀಘ್ರದಲ್ಲೇ ಕಾಯಂ ಶಿಕ್ಷಕರ ನೇಮಕ: ಧರ್ಮೇಂದ್ರ ಪ್ರಧಾನ್ ಭರವಸೆ

    ನವದೆಹಲಿ: ಮಂಡ್ಯದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ (Mandya Kendriya Vidyalaya) ಕಾಯಂ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ತಿಳಿಸಿದ್ದಾರೆ.

    ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ (H.D Kumaraswamy) ಮನವಿಗೆ ತಕ್ಷಣ ಸ್ಪಂದಿಸಿರುವ ಅವರು ಈ ಭರವಸೆ ನೀಡಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದ ಹೆಚ್‍ಡಿಕೆ, ಬಹಳ ದಿನಗಳಿಂದ ಕಾಯಂ ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗುತ್ತಿದೆ ಎಂದು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿರುವ ಧರ್ಮೇಂದ್ರ ಅವರು ಆದಷ್ಟು ಶೀಘ್ರವೇ ಕಾಯಂ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬರುವ ಬಜೆಟ್‍ನಲ್ಲಿ ಹೆಜ್ಜಾಲ -ಚಾಮರಾಜನಗರ ರೈಲ್ವೆ ಮಾರ್ಗ ಯೋಜನೆ ಸೇರ್ಪಡೆ: ಅಶ್ವಿನಿ ವೈಷ್ಣವ್

    ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮಂಡ್ಯ ಕೇಂದ್ರೀಯ ವಿದ್ಯಾಲಯದಲ್ಲಿ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣದ ಬಗ್ಗೆಯೂ ಅವರು ಭರವಸೆ ನೀಡಿದ್ದಾರೆ. ಕಾಲಮಿತಿಯೊಳಗೆ ನಿರ್ಮಾಣ ಕಾಮಗಾರಿಗಳನ್ನು ಪೂರೈಸಿ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದೇವದಾರಿ ಗಣಿ ಯೋಜನೆ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಸಂಚು: ಹೆಚ್‌ಡಿಕೆ

  • ಎನ್‌ಇಪಿ ರದ್ದು ಮಾಡುವ ಸಿಎಂ ಹೇಳಿಕೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಕ್ಷೇಪ

    ಎನ್‌ಇಪಿ ರದ್ದು ಮಾಡುವ ಸಿಎಂ ಹೇಳಿಕೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಕ್ಷೇಪ

    – ಕನ್ನಡದಲ್ಲೇ ಟ್ವೀಟ್ ಮಾಡಿ ಖಂಡನೆ

    ಬೆಂಗಳೂರು: ರಾಜ್ಯದಲ್ಲಿ ಎನ್‌ಇಪಿ ರದ್ದು ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆ ಕುರಿತಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಎನ್‌ಇಪಿ (NEP) ರದ್ದು ಕುರಿತ ಸಿಎಂ ಹೇಳಿಕೆಗೆ ಕನ್ನಡದಲ್ಲಿ ಟ್ವೀಟ್ (Tweet) ಮಾಡುವ ಮೂಲಕ ಧರ್ಮೇಂದ್ರ ಪ್ರಧಾನ್ ವಿರೋಧಿಸಿದ್ದಾರೆ. ಶಿಕ್ಷಣವು ಪ್ರಗತಿಯ ದಾರಿದೀಪವಾಗಬೇಕೇ ವಿನಃ ರಾಜಕೀಯದ ದಾಳವಾಗಬಾರದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಬಲಿಗರೇ ಬರುತ್ತೇವೆ ಎಂದ ಮೇಲೆ ಸೋಮಶೇಖರ್‌ ಕಾಂಗ್ರೆಸ್‌ನಲ್ಲಿರಲು ಸಾಧ್ಯವೇ : ಕೈ ಶಾಸಕ ಶ್ರೀನಿವಾಸ್‌

    ಟ್ವೀಟ್‌ನಲ್ಲಿ ಏನಿದೆ?
    ಶಿಕ್ಷಣವು ಪ್ರಗತಿಯ ದಾರಿದೀಪವಾಗಬೇಕೇ ವಿನಃ ರಾಜಕೀಯದ ದಾಳವಾಗಬಾರದು. ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಸ್ಥಗಿತಗೊಳಿಸುವ ಕರ್ನಾಟಕ ರಾಜ್ಯದ ಸಿಎಂ ಅವರ ರಾಜಕೀಯ ಪ್ರೇರಿತ ನಿರ್ಧಾರದ ಬಗ್ಗೆ ತಿಳಿದು ನಿರಾಶೆಯಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ವಿಕಸನದ ಅಗತ್ಯವಿದೆಯೇ ಹೊರತು ಹಿಂಜರಿಕೆಯಲ್ಲ. ಎನ್‌ಇಪಿ ಎಂಬುದು ಹಲವು ವರ್ಷಗಳ ಗಂಭೀರ ಸಮಾಲೋಚನೆಗಳನ್ನು ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುವ ಫಲಿತಾಂಶವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಜಂಪ್ ಆಗ್ತಾರಾ ಬಾಂಬೆ ಫ್ರೆಂಡ್ಸ್? – ಬಿಜೆಪಿ ಸ್ಥಳೀಯ ನಾಯಕರ ವಿರುದ್ಧ ಎಸ್‍ಟಿಎಸ್ ಕೆಂಡ

    ಈ ನಿರ್ಧಾರವು ಕಾಂಗ್ರೆಸ್‌ನ ಸುಧಾರಣೆ-ವಿರೋಧಿ, ಭಾರತೀಯ ಭಾಷಾ ವಿರೋಧಿ ಮತ್ತು ಕರ್ನಾಟಕ ವಿರೋಧಿ ಗುಣಗಳನ್ನು ಬಹಿರಂಗಪಡಿಸುತ್ತದೆ. ಕರ್ನಾಟಕವು ಪ್ರಗತಿ ಶೀಲ ಮತ್ತು ಸರ್ವರನ್ನು ಒಳಗೊಳ್ಳುವಿಕೆಗೆ ಬೆಲೆಕೊಡುವ ನಾಯಕತ್ವವನ್ನು ಬಯಸುತ್ತದೆಯೇ ಹೊರತು ಕ್ಷುಲ್ಲಕ ರಾಜಕಾರಣವನ್ನಲ್ಲ. ವಿದ್ಯಾರ್ಥಿಗಳ ಭವ್ಯ ಭವಿಷ್ಯತ್ತಿಗೆ ಮೊದಲ ಆದ್ಯತೆಯನ್ನು ಕೊಡೋಣ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ನಿಲ್ಲಿಸೋಣ ಎಂದು ಬರೆದು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದ್ರು, ಈಗ ಬರ್ತೀವಿ ಅಂದ್ರೂ ಸೇರಿಸಿಕೊಳ್ಳೋರಿಲ್ಲ: ವಿಶ್ವನಾಥ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುನಾವಣೆಗೆ ಅಣಿಗೊಳಿಸಲು ಮೋದಿ ರಣತಂತ್ರ – 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ

    ಚುನಾವಣೆಗೆ ಅಣಿಗೊಳಿಸಲು ಮೋದಿ ರಣತಂತ್ರ – 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ದಿನಗಣನೆ ಆರಂಭವಾಗಿದ್ದು, ರಾಜ್ಯದ ಮೂರು ಪಕ್ಷಗಳೂ ಭರ್ಜರಿಯಾಗಿ ಚುನಾವಣಾ ಪ್ರಚಾರ ನಡೆಸುತ್ತಿವೆ. ಈ ನಡುವೆಯೇ ತಮ್ಮ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಲು ಬಿಜೆಪಿ (BJP) ಪ್ಲ್ಯಾನ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಸಂವಾದ ಕಾರ್ಯಕ್ರಮ ಆಯೋಜಿಸಿದೆ.

    ಪಕ್ಷದ 50 ಲಕ್ಷ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಅವರಿಂದು ವರ್ಚುವಲ್ ಮೂಲಕ ಸಭೆ ನಡೆಸಲಿದ್ದು, ಮತ್ತಷ್ಟು ರಣತಂತ್ರಗಳನ್ನ ಹೂಡಲಿದ್ದಾರೆ. ಅದಕ್ಕಾಗಿ ಬಿಜೆಪಿ ರಾಜ್ಯಾದ್ಯಂತ ವಿವಿಧೆಡೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ನಮ್ಮ ಬ್ಲಡ್‌ ಗ್ರೂಪ್‌ RCB ಪಾಸಿಟಿವ್‌ – ಫ್ಯಾನ್ಸ್‌ ಪೋಸ್ಟರ್‌ ವೈರಲ್‌

    ರಾಜ್ಯ ಬಿಜೆಪಿ ಕಚೇರಿ ಹಾಗೂ ಜೆ.ಪಿ ನಗರದ ಖಾಸಗಿ ಕಾಲೇಜು ಸೇರಿದಂತೆ ವಿವಿಧೆಡೆ ಸಂವಾದಕ್ಕಾಗಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಹಾಗೂ ಆಸನಗಳನ್ನ ಸಿದ್ಧಪಡಿಸಲಾಗಿದೆ. ಬಿಜೆಪಿ ಕಚೇರಿಯ 3ನೇ ಮಹಡಿಯಲ್ಲಿ ಎಲ್‌ಇಡಿ ಪರದೆ ಅಳವಡಿಕೆ ಮಾಡಲಾಗಿದೆ. ಸಂವಾದ ಕಾರ್ಯಕ್ರಮ ವೀಕ್ಷಣೆ ಮಾಡಲು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಹ ಆಗಮಿಸಿದ್ದಾರೆ.

    15 ಕ್ಷೇತ್ರಗಳಲ್ಲಿ ನೇರ ಸಂವಾದ: ಗಾಂಧಿನಗರ(ಬಿಜೆಪಿ ಕೇಂದ್ರ ಕಚೇರಿ), ಜಯನಗರ, ಮಹಾದೇವಪುರ, ಹುಬ್ಬಳ್ಳಿ-ಧಾರವಾಡ ಕೇಂದ್ರ, ಮೈಸೂರು, ಕೊಪ್ಪಳ, ಷಹಾಪುರ, ದೊಡ್ಡಬಳ್ಳಾಪುರ, ಮೊಳಕಾಲ್ಮೂರು, ಹೊಸಪೇಟೆ, ಬಾಗೇಪಲ್ಲಿ, ಮಂಗಳೂರು ದಕ್ಷಿಣ, ಬಾಗೇಪಲ್ಲಿ, ಯಮಕನಮರಡಿ, ಶಿವಮೊಗ್ಗ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇರ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: ಕುಡಿಯಲು ಹಣ ಕೊಡದಿದ್ದಕ್ಕೆ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನೇ ಕೊಂದ ಪಾಪಿ ಮಗ

    ನಮೋ ವರ್ಚುವಲ್ ಸಂವಾದ ಎಲ್ಲಿ..? ಹೇಗೆ..?
    * ಪ್ರಧಾನಿ ಮೋದಿ ಪಕ್ಷದ 50 ಲಕ್ಷ ಕಾರ್ಯಕರ್ತರ ಜತೆ ವರ್ಚುವಲ್ ಸಂವಾದ.
    * ರಾಜ್ಯದ 58,112 ಬೂತ್‌ಗಳ ಪಕ್ಷದ ಕಾರ್ಯಕರ್ತರ ಜತೆ ಮೋದಿ ಮನ್ ಕಿ ಬಾತ್.
    * 1,680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ವರ್ಚುವಲ್ ಸಂವಾದಕ್ಕೆ ವ್ಯವಸ್ಥೆ
    * ಮೋದಿ ಸಂವಾದ ವೀಕ್ಷಣೆಗೆ 650 ಕಡೆಗಳಲ್ಲಿ ಎಲ್‌ಇಡಿ ಪರದೆಗಳ ವ್ಯವಸ್ಥೆ.
    * ಬೆಂಗಳೂರಿನ ಜಯನಗರ, ಮಹಾದೇವಪುರ ಸೇರಿ 15 ಕಡೆ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿರೋ ಮೋದಿ.
    * ಮೋದಿ ಸಂವಾದಕ್ಕಾಗಿ 24 ಲಕ್ಷ ಮಂದಿ ನಮೋ ಆಪ್ ಡೌನ್‌ಲೋಡ್
    * ಪ್ರತಿ ವಿಧಾನಸಭಾ ಕ್ಷೆತ್ರದಲ್ಲಿ ನಮೋ ಆಪ್ 5,000 ಮಂದಿ ಡೌನ್‌ಲೋಡ್

  • ರಾಜ್ಯ ವಿಧಾನಸಭೆ ಚುನಾವಣೆ ತಯಾರಿ – ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

    ರಾಜ್ಯ ವಿಧಾನಸಭೆ ಚುನಾವಣೆ ತಯಾರಿ – ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

    ನವದೆಹಲಿ: ರಾಜ್ಯ ಬಿಜೆಪಿ (BJP) ಚುನಾವಣಾ (Election) ಉಸ್ತುವಾರಿಯಾಗಿ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ (Dharmendra Pradhan) ಹಾಗೂ ಸಹ ಉಸ್ತುವಾರಿಯಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಅವರನ್ನು ಹೈಕಮಾಂಡ್ ನೇಮಕ ಮಾಡಿದೆ.

    ಇಂದು ಅಧಿಕೃತ ಆದೇಶ ಪ್ರಕಟವಾಗಿದ್ದು ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election) ಬಿಜೆಪಿ ಅಧಿಕೃತ ತಾಲೀಮು ಆರಂಭಿಸಿದಂತಾಗಿದೆ. ಕಳೆದ ಬಾರಿಯೂ ಉಸ್ತುವಾರಿಯಾಗಿದ್ದ ಧಮೇಂದ್ರ ಪ್ರಧಾನ್ ಅವರನ್ನು ಹೈಕಮಾಂಡ್ ಈ ಬಾರಿಯೂ ಮುಂದುವರಿಸಿದ್ದು, ರಾಜಕೀಯ ನಿರ್ಧಾರಗಳಿಗೆ ಸುಲಭವಾಗಲಿದೆ ಎನ್ನಲಾಗಿದೆ. ರಾಜ್ಯದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈಗೆ ಸ್ಥಳೀಯ ಮಟ್ಟದ ರಾಜಕಾರಣ ಗೊತ್ತಿರುವ ಹಿನ್ನೆಲೆ ಅವರನ್ನು ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ, ಬಿಜೆಪಿ ಬಿಡೋಕೆ ಸಿದ್ಧ – ಹೆಚ್. ವಿಶ್ವನಾಥ್

    ಉಭಯ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದು ಉಸ್ತುವಾರಿ ಅರುಣ್ ಸಿಂಗ್ (Arun Singh) ಜೊತೆಗೂಡಿ ರಾಜಕೀಯ ಪರಿಸ್ಥಿತಿಗಳನ್ನು ಪರಿಶೀಲಿಸಲಿದ್ದು, ಬಳಿಕ ಗೆಲುವಿಗೆ ಅಗತ್ಯವಿರುವ ತಯಾರಿಗಳನ್ನು ಆರಂಭಿಸಲಿದ್ದಾರೆ. ಈ ಬಾರಿ ಪೂರ್ಣ ಪ್ರಮಾಣದ ಬಹುಮತ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಗಳನ್ನು ಆರಂಭಿಸಿದೆ. ಇದನ್ನೂ ಓದಿ: ಟ್ರಾಫಿಕ್‌ ದಂಡಕ್ಕೆ ಶೇ.50 ಡಿಸ್ಕೌಂಟ್‌ – ಯಾವುದಕ್ಕೆ ಎಷ್ಟು?

    ಧಮೇಂದ್ರ ಪ್ರಧಾನ್, ಅಣ್ಣಾಮಲೈ ಆಯ್ಕೆ ಹಿಂದಿನ ಲೆಕ್ಕಾಚಾರ ಏನು?
    ಧಮೇಂದ್ರ ಪ್ರಧಾನ್, ಹಿಂದುಳಿದ ವರ್ಗಗಳ ನಾಯಕರಾಗಿದ್ದು, ರಾಜ್ಯದ ಹಿಂದುಳಿದ ವರ್ಗಗಳ ಮೇಲೆ ಕೇಸರಿ ಕಣ್ಣು ಬಿದ್ದಿದೆ. ಮೇಲ್ವರ್ಗದ ಮತಗಳು ಬಿಜೆಪಿಗೆ ಬಹುತೇಕ ಫಿಕ್ಸ್. ಮೀಸಲಾತಿ ಹೆಚ್ಚಳ ಹಿನ್ನೆಲೆಯಲ್ಲಿ ಎಸ್‍ಸಿ, ಎಸ್‍ಟಿ ವರ್ಗಗಳ ಹೆಚ್ಚಿನ ಮತಗಳೂ ಬಿಜೆಪಿ ಬುಟ್ಟಿಗೆ ಹೀಗಾಗಿ ಈಗ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಲೆಕ್ಕಾಚಾರದಲ್ಲಿ ಧಮೇರ್ಂದ್ರ ಪ್ರಧಾನ್ ನೇಮಕವಾಗಿದೆ. ಈ ಹಿಂದೆಯೂ ರಾಜ್ಯ ಚುನಾವಣಾ ಉಸ್ತುವಾರಿಯಾಗಿದ್ದ ಧಮೇಂದ್ರ ಪ್ರಧಾನ್, ರಾಜ್ಯ ರಾಜಕಾರಣದ ಮೇಲೆ ಹಿಡಿತ ಹೊಂದಿದ್ದಾರೆ. ರಾಜ್ಯದ ನಾಯಕರು, ಸಂಘಟನೆ, ರಾಜ್ಯದ ರಾಜಕೀಯ ಚಿತ್ರಣದ ಜ್ಞಾನ ಇದೆ.

    ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕರ್ನಾಟಕದಲ್ಲೂ ಫೇಮಸ್. ರಾಜ್ಯದ ತಮಿಳು ಭಾಷಿಕರ ಮತಗಳನ್ನು ಸೆಳೆಯಲು ಅಣ್ಣಾಮಲೈಗೆ ಸಹ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ರಾಜ್ಯದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದ ಅಣ್ಣಾಮಲೈ, ಕರ್ನಾಟಕದಲ್ಲೂ ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ ಹಾಗಾಗಿ ಇವರಿಬ್ಬರಿಗೆ ಮಣೆ ಹಾಕಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾತೃಭಾಷೆಯಲ್ಲಿ ವೃತ್ತಿಪರ ಶಿಕ್ಷಣ ಸಿಗಬೇಕು ಹಾಗಾಗಿ ಹಿಂದಿ ಭಾಷೆಯಲ್ಲಿ ಪ್ರಯತ್ನ: ಧರ್ಮೇಂದ್ರ ಪ್ರಧಾನ್

    ಮಾತೃಭಾಷೆಯಲ್ಲಿ ವೃತ್ತಿಪರ ಶಿಕ್ಷಣ ಸಿಗಬೇಕು ಹಾಗಾಗಿ ಹಿಂದಿ ಭಾಷೆಯಲ್ಲಿ ಪ್ರಯತ್ನ: ಧರ್ಮೇಂದ್ರ ಪ್ರಧಾನ್

    ಮಂಗಳೂರು: ಭಾರತೀಯ ಐಐಟಿಗಳು (IIT) ವಿಶ್ವಮಟ್ಟದಲ್ಲಿ ಬ್ರ್ಯಾಂಡ್ ಆಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ವಿದೇಶಗಳಲ್ಲಿಯೂ ಸ್ಥಾಪನೆಯಾಗಲಿವೆ. ಹಿಂದಿ (Hindi) ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಆರಂಭಿಕ ಪ್ರಯತ್ನಗಳನ್ನು ಮಾಡಲಾಗಿದೆ. ಮಾತೃಭಾಷೆಯಲ್ಲಿ ವೃತ್ತಿಪರ ಶಿಕ್ಷಣ ಲಭಿಸಬೇಕು ಎಂಬುದು ಶಿಕ್ಷಣ ನೀತಿಯ ಸಾರವಾಗಿದೆ ಎಂದು ಕೇಂದ್ರದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲ ಸಚಿವರಾದ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ತಿಳಿಸಿದರು.

    ಸುರತ್ಕಲ್‍ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (NITK) ಕೇಂದ್ರೀಯ ಸಂಶೋಧನಾ ಸೌಲಭ್ಯ (CRF) ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ನಂತರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆಯ ಯಾವ ಉದ್ದೇಶವೂ ಇಲ್ಲ. ಎಲ್ಲ ಭಾಷೆಗಳು ಮುಖ್ಯ. ಎಲ್ಲ ಭಾಷೆಗಳಂತೆ ಹಿಂದಿಯೂ ಒಂದಾಗಿದೆ. ಎಲ್ಲ ರಾಜ್ಯಗಳೂ ಆಯಾ ರಾಜ್ಯದ ಸ್ಥಳೀಯ ಹಾಗೂ ಮಾತೃ ಭಾಷೆಗೆ ಆದ್ಯತೆ ನೀಡಲಿವೆ ಎಂದರು. ಇದನ್ನೂ ಓದಿ: ದೇಶದಲ್ಲಿ ಹಿಂದಿ ಶಿಕ್ಷಣ ಜಾರಿ – ನಾಳೆ 13 ಕಾಲೇಜುಗಳಲ್ಲಿ MBBS ಪಠ್ಯ ರಿಲೀಸ್

    ಭಾರತದ ಅಂತಃಸತ್ವವನ್ನು ಹೊಂದಿರುವ ಐಐಟಿ ಮತ್ತು ಐಐಟಿಗಳು ಕೇವಲ ಶಿಕ್ಷಣ ಸಂಸ್ಥೆಗಳಲ್ಲ. ಅವು ಜ್ಞಾನದ ದೇಗುಲಗಳು. ಬರುವ ದಿನಗಳಲ್ಲಿ 10ಕ್ಕೂ ಹೆಚ್ಚಿನ ದೇಶಗಳಲ್ಲಿ ಐಐಟಿಗಳ ಸ್ಥಾಪನೆಯಾಗಲಿವೆ. ಕೇಂದ್ರ ಶಿಕ್ಷಣ ಸಚಿವಾಲಯದ ನೆರವಿನಿಂದ ಹೊರದೇಶಗಳಲ್ಲಿ ಐಐಟಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಆ ಪರಿಣಾಮ ಭವಿಷ್ಯದಲ್ಲಿ ಸಾಗರೋತ್ತರ ಐಐಟಿ ಕ್ಯಾಂಪಸ್‍ಗಳು ತಲೆ ಎತ್ತಲಿವೆ ಎಂದು ತಿಳಿಸಿದರು.


    ಭವಿಷ್ಯದಲ್ಲಿ ಹೈಡ್ರೋಜನ್ ಸುಸ್ಥಿರ ಇಂಧನ ಮೂಲವಾಗಲಿದೆ. ಉತ್ತಮ ಮಾರುಕಟ್ಟೆಯೂ ಇದೆ. ಉತ್ಪಾದನೆಯಿಂದ ವಿತರಣೆಯವರೆಗೆ ಬಹಳಷ್ಟು ಅವಕಾಶಗಳಿವೆ. ಎನ್ಐಟಿಕೆಯಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಸಂತಸದ ವಿಚಾರ ಎಂದ ಅವರು ಇಪ್ಪತ್ತೊಂದನೇ ಶತಮಾನದಲ್ಲಿ ಸಾಮರ್ಥ್ಯವರ್ಧನೆಯ ಜೊತೆ ಜಾಗತಿಕ ಸವಾಲುಗಳನ್ನು ಎದುರಿಸಿ ಬೆಳೆಯಲು ಎನ್ಐಟಿಕೆ ಸಮರ್ಥವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಎತ್ತು ಏರಿಗೆಳೀತು ಕೋಣ ನೀರಿಗಿಳೀತು: ಬಿಜೆಪಿ ವ್ಯಂಗ್ಯ

    ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ಭರತ್ ಶೆಟ್ಟಿ, ವೈ. ಎ. ನಾರಾಯಣ ಸ್ವಾಮಿ, ಎನ್‍ಐಟಿಕೆ ನಿರ್ದೇಶಕ ಪ್ರೊ. ಪ್ರಸಾದ್ ಕೃಷ್ಣ, ಕುಲಸಚಿವ ಪ್ರೊ.ಕೆ.ರವೀಂದ್ರನಾಥ್, ಕೇಂದ್ರೀಯ ಸಂಶೋಧನಾ ಸೌಲಭ್ಯದ ಅಧ್ಯಕ್ಷ ಪ್ರೊ. ಎಂ.ಎನ್. ಸತ್ಯನಾರಾಯಣ ಜೊತೆಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದ ಮಾಡೆಲ್ ದೇಶದ ಮಾಡೆಲ್ ಆಗಲಿದೆ : ಧರ್ಮೇಂದ್ರ ಪ್ರಧಾನ್

    ಕರ್ನಾಟಕದ ಮಾಡೆಲ್ ದೇಶದ ಮಾಡೆಲ್ ಆಗಲಿದೆ : ಧರ್ಮೇಂದ್ರ ಪ್ರಧಾನ್

    ಬೆಂಗಳೂರು : ಶಿಕ್ಷಣ ಕ್ಷೇತ್ರ ಮತ್ತು ಕೌಶಲ್ಯಾಭಿವೃದ್ದಿ ಕ್ಷೇತ್ರದಲ್ಲಿ ಕರ್ನಾಟಕದ ಮಾಡೆಲ್ ಇಡೀ ದೇಶದ ಮಾಡೆಲ್ ಆಗಲಿದೆ ಅಂತ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಶೀಲನಾ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕರ್ನಾಟಕದ ಮಾಡೆಲ್ ಗೆ ಶಬ್ಬಾಶ್ ಗಿರಿ ಕೊಟ್ಟರು.

    ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ದೇಶದಲ್ಲಿ‌‌ ಮೊದಲ ರಾಜ್ಯವಾಗಿ ಕರ್ನಾಟಕ ಅನುಷ್ಠಾನ ಮಾಡಿದೆ. ಅನುಷ್ಠಾನ ‌ಮಾಡಿ ಅತ್ಯುತ್ತಮವಾಗಿ ಜಾರಿ ಮಾಡಿದೆ. ಕರ್ನಾಟಕದ ವ್ಯವಸ್ಥೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಅಂತ ತಿಳಿಸಿದರು. ಕರ್ನಾಟಕದಲ್ಲಿ 1.5 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 3.5 ಲಕ್ಷ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡುವಂತೆ ಸಲಹೆ ನೀಡಿದ್ದೇನೆ ಅಂತ ತಿಳಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಕರ್ನಾಟಕ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ. ಕರ್ನಾಟಕ ಸಾಧನೆ ಸಂತೋಷ ಮತ್ತು ತೃಪ್ತಿ ತಂದಿದೆ ಅಂತ‌ ತಿಳಿಸಿದರು. ಕರ್ನಾಟಕ ಕೇವಲ ರಾಷ್ಟ್ರೀಯ ಶಿಕ್ಷಣ ನೀತಿ ಮಾತ್ರವಲ್ಲ ಕೌಶಲ್ಯಾಭಿವೃದ್ದಿಯಲ್ಲೂ ಅತ್ಯುತ್ತಮ ಕೆಲಸ ಮಾಡಿದೆ. ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲೂ ಮುಂದಿದೆ. ಸ್ಕಿಲ್ ಡೆವಲಪ್ಮೆಂಟ್, ಉದ್ಯೋಗ ಸೃಷ್ಟಿಯಲ್ಲೂ ಉತ್ತಮ ಕೆಲಸ ಮಾಡುತ್ತಿದೆ ಅಂತ ಶ್ಲಾಘಿಸಿದರು. ಕರ್ನಾಟಕ ಸರ್ಕಾರ ಪ್ರಧಾನಿ ಮೋದಿಯವರ ಕನಸು ಸಾಕಾರ ಮಾಡುತ್ತಿದೆ. ಬೊಮ್ಮಾಯಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿಯಲ್ಲಿ ಕರ್ನಾಟಕದ ಮಾಡೆಲ್ ದೇಶದ ಮಾಡೆಲ್ ಆಗಲಿದೆ ಎಂದರು.

    ಕಲಿಕಾ ಚೇತರಿಕೆಗೂ ಶಹಬ್ಬಾಸ್‌ ಗಿರಿ
    ಕೊರೊನಾ ಬಳಿಕ ಮಕ್ಕಳ ಶೈಕ್ಷಣಿಕ ವ್ಯತ್ಯಾಸ ಸರಿ ಮಾಡಲು ರಾಜ್ಯ ಸರ್ಕಾರ ಜಾರಿಗೆ ತರುತ್ತಿರೋ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಶ್ಲಾಘಿಸಿದರು. ಕರ್ನಾಟಕದ ಮಾಡೆಲ್ ಅತ್ಯುತ್ತಮವಾಗಿದೆ. ಈ ಮಾಡೆಲ್ ಅನ್ನ ಎಲ್ಲಾ ರಾಜ್ಯಗಳು ಅನುಸರಿಬೇಕು. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಅಂತ ತಿಳಿಸಿದರು. ರಾಜ್ಯ ಸರ್ಕಾರದ ಕಾರ್ಯವನ್ನು ಹೊಗಳಿದರು.

  • ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ – ಕೇಂದ್ರ ಸಚಿವರೊಂದಿಗೆ ಚರ್ಚಿಸಿದ ಸುನಿಲ್ ಕುಮಾರ್

    ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ – ಕೇಂದ್ರ ಸಚಿವರೊಂದಿಗೆ ಚರ್ಚಿಸಿದ ಸುನಿಲ್ ಕುಮಾರ್

    ನವದೆಹಲಿ: ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವ ಕುರಿತಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ದೆಹಲಿಯಲ್ಲಿ ಕೇಂದ್ರ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

    ಧರ್ಮೇಂದ್ರ ಪ್ರಧಾನ್ ಅವರನ್ನು ಸುನಿಲ್ ಕುಮಾರ್, ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್

    ಬಳಿಕ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸುನಿಲ್ ಕುಮಾರ್, ವಿಶೇಷವಾಗಿ ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವ ಬಗ್ಗೆ ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು. ಸ್ವಾಯತ್ತತೆ ನೀಡಿದರೆ ಮಾತ್ರ ಅದು ರಚನಾತ್ಮಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ಸಾಧ್ಯ ಎಂಬ ಸಂಗತಿಯನ್ನು ಕೇಂದ್ರ ಸಚಿವರಿಗೆ ಮನದಟ್ಟು ಮಾಡಿಕೊಡಲಾಯಿತು. ಕೇಂದ್ರ ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸ್ವಾಯತ್ತತೆ ನೀಡುವ ಬಗ್ಗೆ ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದಿದ್ದಾರೆ.

    ಇದೇ ಸಂದರ್ಭದಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಮನವಿ ಸಲ್ಲಿಸಲಾಯಿತು. ಶಾಸ್ತ್ರೀಯ ಭಾಷೆಗೆ ಸಂಬಂಧಪಟ್ಟಹಾಗೆ ದೊಡ್ಡಮಟ್ಟದಲ್ಲಿ ಕಾರ್ಯಚಟುವಟಿಕೆಗಳನ್ನು ರೂಪಿಸಲು ಅಗತ್ಯ ಅನುದಾನವನ್ನು ಒದಗಿಸುವ ಕುರಿತು ಚರ್ಚಿಸಲಾಯಿತು. ಇದಕ್ಕೂ ಸಹ ಸ್ಪಂದಿಸಿದ ಕೇಂದ್ರ ಸಚಿವರು ಅನುದಾನ ಹೆಚ್ಚಳ ಮಾಡುವ ಬಗ್ಗೆ ಸಂಬಂಧಪಟ್ಟವರೊಂದಿಗೆ, ಚರ್ಚಿಸುವುದಾಗಿ ತಿಳಿಸಿದರು. ಬಹಳ ಮುಖ್ಯವಾಗಿ ಸ್ವತಃ ಧಮೇರ್ಂದ್ರ ಪ್ರಧಾನ್ ಶೀಘ್ರದಲ್ಲಿಯೇ ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನ ಕೇಂದ್ರಕ್ಕೆ ಬೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: 22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ