Tag: Dharmendra

  • ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಿವುಡ್ ನಟ ಧರ್ಮೇಂದ್ರ

    ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಿವುಡ್ ನಟ ಧರ್ಮೇಂದ್ರ

    ಬಾಲಿವುಡ್‌ನ (Bollywood) ಹಿರಿಯ ನಟ ಧರ್ಮೇಂದ್ರ (Dharmendra) ಕಣ್ಣಿಗೆ ಶಸ್ತ್ರಚಿಕಿತ್ಸೆಗೆ ಮಾಡಲಾಗಿದ್ದು, ಇಂದು (ಏ.1) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ, ನಾನು ಇನ್ನೂ ಗಟ್ಟಿಯಾಗಿದ್ದೇನೆ ಎಂದು ಪಾಪರಾಜಿಗಳ ಕ್ಯಾಮೆರಾಗೆ ಹೇಳಿ ನಟ ಆಸ್ಪತ್ರೆಯಿಂದ ತೆರಳಿದ್ದಾರೆ. ಧರ್ಮೇಂದ್ರ ಕಣ್ಣಿಗೆ ಬ್ಯಾಂಡೇಜ್ ಹಾಕಿರೋದನ್ನು ನೋಡಿ ಫ್ಯಾನ್ಸ್ ಆತಂಕಗೊಂಡಿದ್ದಾರೆ. ಇದನ್ನೂ ಓದಿ:ಕಣ್ಣಿನಲ್ಲಿ ಪೊರೆ ಬೆಳೆದ ಮಗುವಿನ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ ಧ್ರುವ ಸರ್ಜಾ

    ಧರ್ಮೇಂದ್ರ ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ (Eye Surgery) ಮಾಡಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆಸ್ಪತ್ರೆಯಿಂದ ನಿರ್ಗಮಿಸುವಾಗ ಧರ್ಮೇಂದ್ರ ಮಾತನಾಡಿ, ನನಗಿನ್ನೂ ಶಕ್ತಿಯಿದೆ, ನನಗೆ ಇನ್ನೂ ಜೀವನವಿದೆ. ಕಣ್ಣಿನ ಚಿಕಿತ್ಸೆ ಪಡೆದು ಬಂದಿದ್ದೇನೆ. ಲವ್ ಯೂ ಮೈ ಆಡಿಯನ್ಸ್, ಲವ್ ಯೂ ಫ್ಯಾನ್ಸ್, ನಾನು ಸ್ಟ್ರಾಂಗ್‌ ಆಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಮತ್ತೆ ಪ್ರಭಾಸ್‌ಗೆ ಜೊತೆಯಾದ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ

     

    View this post on Instagram

     

    A post shared by Manav Manglani (@manav.manglani)

    89ರ ವಯಸ್ಸಿನಲ್ಲೂ ಇಷ್ಟು ಉತ್ಸಾಹದಿಂದ ನಟ ಮಾತನಾಡಿದನ್ನು ಕೇಳಿ ಫ್ಯಾನ್ಸ್ ಭೇಷ್‌ ಎಂದಿದ್ದಾರೆ. ಇನ್ನೂ ತನ್ನ ಕಣ್ಣಿಗೆ ಏನಾಯಿತು ಎಂಬುದರ ಕುರಿತು ಹೆಚ್ಚಿನ ವಿವರವನ್ನು ನಟ ನೀಡಿಲ್ಲ. ಆದರೆ ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

  • ಖ್ಯಾತ ನಟ ಧರ್ಮೇಂದ್ರಗೆ ಅನಾರೋಗ್ಯ: ಅಮೆರಿಕಾದಲ್ಲಿ ಚಿಕಿತ್ಸೆ

    ಖ್ಯಾತ ನಟ ಧರ್ಮೇಂದ್ರಗೆ ಅನಾರೋಗ್ಯ: ಅಮೆರಿಕಾದಲ್ಲಿ ಚಿಕಿತ್ಸೆ

    ಬಾಲಿವುಡ್ ಖ್ಯಾತ ನಟ ಧರ್ಮೇಂದ್ರಗೆ (Dharmendra) ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ಅಮೆರಿಕಾಗೆ (America) ಕರೆದುಕೊಂಡು ಹೋಗಲಾಗಿದೆ. ಸ್ವತಃ ಧರ್ಮೇಂದ್ರ ಅವರ ಪುತ್ರ ಸನ್ನಿ ಡಿಯೋಲ್ ಅವರೇ ತಂದೆಯನ್ನು ಅಮೆರಿಕಾಗೆ ಕರೆದುಕೊಂಡು ಹೋಗಿ ಚಿಕಿತ್ಸೆ (Treatment) ಕೊಡಿಸುತ್ತಿದ್ದಾರೆ. 87ರ ವಯಸ್ಸಿನ ಧರ್ಮೆಂದ್ರ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

    ಅಮೆರಿಕಾದಲ್ಲಿ ಧರ್ಮೆಂದ್ರ ಮತ್ತು ಪುತ್ರ ಸನ್ನಿ ಡಿಯೋಲ್ 20 ದಿನಗಳ ಕಾಲ ಇರಲಿದ್ದಾರಂತೆ. ತಂದೆಯನ್ನು ಗುಣಪಡಿಸಿಕೊಂಡೇ ಸನ್ನಿ ವಾಪಸ್ಸು ಭಾರತಕ್ಕೆ ಆಗಮಿಸಲಿದ್ದಾರೆ ಎಂದು  ಮಾಹಿತಿ ಸಿಕ್ಕಿದೆ. ಹಾಗಂತ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ರಾಜಕಾರಣದ ಬಗ್ಗೆ ಸನ್ನಿ ಬೇಸರ

    ದರ್ 2′ (Gadar 2) ಸಕ್ಸಸ್ ನಂತರ ಸನ್ನಿ ಡಿಯೋಲ್‌ಗೆ (Sunny Deol) ಭರ್ಜರಿ ಆಫರ್ಸ್ ಬರುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ ಮುಂದಿನ 2024ರ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. ರಾಜಕೀಯ ರಂಗದ ವಿಚಾರವಾಗಿ ತಮ್ಮ ನಿಲುವೇನು? ಎಂದು ಮಾತನಾಡಿದ್ದಾರೆ.  ಸಂಸತ್ತಿನಲ್ಲಿ ಹಾಜರಿ ಕಡಿಮೆ ಇರುವುದು ಮತ್ತು 2024ರ ಚುನಾವಣೆ (Politics) ಬಗ್ಗೆ ನಟ ಸನ್ನಿ ಡಿಯೋಲ್‌ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ನೇರವಾಗಿ ಉತ್ತರಿಸಿದ್ದಾರೆ. ಸಂಸತ್ತಿಗೆ ಹೋಗೋದು ನಿಜವಾಗಿಯೂ ಕಡಿಮೆಯಾಗಿದೆ. ನಾನು ರಾಜಕೀಯಕ್ಕೆ ಬಂದಾಗ, ಇದು ನನ್ನ ಪ್ರಪಂಚವಲ್ಲ ಎಂದು ನಾನು ಅರಿತುಕೊಂಡೆ ಎಂದಿದ್ದಾರೆ.

    ನಾನು ನನ್ನ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಅದನ್ನು ಮಾಡುತ್ತೇನೆ. ಒಂದೊಮ್ಮೆ ನಾನು ಸಂಸತ್ತಿಗೆ ಹೋದರೂ, ಹೋಗದಿದ್ದರೂ ಅದು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸದ ಮೇಲೆ ಪರಿಣಾಮ ಬೀರುವುದಿಲ್ಲ. ನಾನು ಸಂಸತ್ತಿಗೆ ಹೋದಾಗ ಸಮಸ್ಯೆಗಳನ್ನು ಎದುರಿಸುತ್ತೇನೆ. ನಟನಾಗಿ ನೀವು ಎಲ್ಲಿಗೆ ಹೋದರೂ ಜನರು ನಿಮ್ಮನ್ನು ಗುರುತಿಸುತ್ತಾರೆ. ಪ್ರೀತಿಯಿಂದ ಮಾತನಾಡಿಸುತ್ತಾರೆ. ನನ್ನ ಕ್ಷೇತ್ರಕ್ಕೆ ನಾನು ಮಾಡಿದ ಕೆಲಸಗಳ ಪಟ್ಟಿ ನನ್ನ ಬಳಿ ಇದೆ. ಮಾಡಿದ ಕೆಲಸವನ್ನು ಪ್ರಚಾರ ಮಾಡುವುದರಲ್ಲಿ ನನಗೆ ಆಸಕ್ತಿ ಇಲ್ಲ. ರಾಜಕೀಯ ನನಗೆ ಸರಿಹೊಂದದ ವೃತ್ತಿ ಎಂದಿದ್ದಾರೆ.

     

    2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರೇ ಎಂದು ಎದುರಾದ ಪ್ರಶ್ನೆಗೆ ನಾಜುಕಾಗಿ ನಟ ಉತ್ತರಿಸಿದ್ದಾರೆ. ಅದಕ್ಕೆ ಇಲ್ಲ ಎನ್ನುವ ಉತ್ತರ ಬಂದಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಿಮ್ಮ ಬಳಿ ಸ್ಪರ್ಧೆ ಮಾಡುವಂತೆ ಕೇಳಿದರೆ ಏನು ಮಾಡುತ್ತೀರಿ ಎಂದೂ ಕೇಳಲಾಯಿತು. ಸಿನಿಮಾ ಮೂಲಕ ನಾನು ದೇಶ ಸೇವೆ ಮಾಡುತ್ತಿದ್ದೇನೆ ಎಂಬುದು ಮೋದಿ ಅವರಿಗೂ ತಿಳಿದಿದೆ ಎಂದಿದ್ದಾರೆ. ಈ ಮೂಲಕ ನನಗೆ ರಾಜಕೀಯ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧರ್ಮೇಂದ್ರ, ಅಮಿತಾಭ್, ಅಂಬಾನಿ ಮನೆಯಲ್ಲಿ ಬಾಂಬ್: ಪೊಲೀಸರಿಂದ ಶೋಧ

    ಧರ್ಮೇಂದ್ರ, ಅಮಿತಾಭ್, ಅಂಬಾನಿ ಮನೆಯಲ್ಲಿ ಬಾಂಬ್: ಪೊಲೀಸರಿಂದ ಶೋಧ

    ಬಾಲಿವುಡ್ ಖ್ಯಾತ ನಟರಾದ ಅಮಿತಾಭ್ ಬಚ್ಚನ್, ಧರ್ಮೇಂದ್ರ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಗಳು ನಾಗ್ ಪುರ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕರೆ ಸ್ವೀಕರಿಸಿದ ಪೊಲೀಸರು ಕೂಡಲೇ ಮುಂಬೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ನಾಗ್ಪುರ ಪೊಲೀಸರ ಮಾಹಿತಿಯನ್ನು ಆಧರಿಸಿ ಮುಂಬೈ ಪೊಲೀಸರು ಮೂವರು ಗಣ್ಯ ವ್ಯಕ್ತಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

    ಮಾಹಿತಿ ಸಿಗುತ್ತಿದ್ದಂತೆಯೇ ಅಮಿತಾಭ್, ಧರ್ಮೇಂದ್ರ ಹಾಗೂ ಅಂಬಾನಿ ಮನೆಗೆ ಧಾವಿಸಿದ ಪೊಲೀಸ್ ತಂಡ, ಮನೆಯಲ್ಲಿ ಶೋಧ ಕಾರ್ಯ ನಡೆಸಿದರು. ಆದರೆ, ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಹುಸಿಕರೆ ಎಂದು ಮಾಹಿತಿ ನೀಡಿದ್ದಾರೆ. ಈ ರೀತಿಯ ಕರೆ ಮಾಡಿದ ಕಿಡಿಗೇಡಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ. ಕೂಡಲೇ ಅವರನ್ನು ಪತ್ತೆ ಮಾಡಿ, ಬುದ್ದಿ ಕಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ರೆಡ್ ಗೌನ್ ಧರಿಸಿ ಪಡ್ಡೆಗಳ ನಿದ್ದೆಗೆಡಿಸಿದ ನವವಧು ಕಿಯಾರಾ

    ಪೊಲೀಸ್ ಠಾಣೆಗೆ ಕರೆ ಮಾಡಿದ್ದ ಕಿಡಿಗೇಡಿಗಳು ಆಘಾತಕಾರಿ ಅಂಶವನ್ನು ಹಂಚಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ದಾದರ್ ನಲ್ಲಿ ಶಸ್ತ್ರ ಸಜ್ಜಿತವಾದ 25 ಜನ ಭಯೋತ್ಪಾದಕರು ದಾಳಿಗೆ ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ. ಭಯೋತ್ಪಾದಕರು ಎಂದು ಹೇಳುತ್ತಿದ್ದಂತೆಯೇ ಪೊಲೀಸ್ ಅಲರ್ಟ್ ಆಗಿ ಕೂಡಲೇ ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದಾರೆ.

    ಗಣ್ಯರ ಮನೆಗೆ ಬಾಂಬ್ ಇಟ್ಟಿದ್ದೇವೆ ಎಂದು ಹುಸಿಕರೆ ಮಾಡಿದ ಘಟನೆ ಹೊಸದೇನೂ ಅಲ್ಲ. ಸಲ್ಮಾನ್ ಖಾನ್ ಸೇರಿದಂತೆ ಹಲವರಿಗೆ ಜೀವ ಬೆದರಿಕೆಯನ್ನೂ ಈ ಹಿಂದೆ ಹಾಕಲಾಗಿದೆ. ಅನೇಕ ಗಣ್ಯರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅನೇಕ ಬಾರಿ ಹುಸಿಕರೆಗಳು ಬಂದಿದ್ದೂ ಇದೆ. ಅದಕ್ಕೆ ಇದು ಹೊಸ ಸೇರ್ಪಡೆ ಅಷ್ಟೆ.

  • ಲಂಚವನ್ನು ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ಈಶ್ವರಪ್ಪಗೆ ಹಿಂದೂ ಮಹಾಸಭಾ ಸವಾಲು

    ಲಂಚವನ್ನು ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ಈಶ್ವರಪ್ಪಗೆ ಹಿಂದೂ ಮಹಾಸಭಾ ಸವಾಲು

    ಮಂಗಳೂರು: ಈಶ್ವರಪ್ಪ ಲಂಚವನ್ನು ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಎಂದು ಅಖಿಲ ಭಾರತ ಹಿಂದೂ ಮಹಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸವಾಲು ಹಾಕಿದ್ದಾರೆ.

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ನಾನು ಕಮೀಷನ್ ತಗೆದುಕೊಂಡಿಲ್ಲ, ಪ್ರಾಮಾಣಿಕ ಇದ್ದೇನೆ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಪ್ರಮಾಣಿಕರಾಗಿದ್ದರೆ ಈಶ್ವರಪ್ಪ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ರಾಜೀನಾಮೆ ನೀಡಿದ ಈಶ್ವರಪ್ಪ ನಿವಾಸಕ್ಕೆ ಸ್ವಾಮೀಜಿಗಳ ಭೇಟಿ

    ಮಂತ್ರಿ ಮಂಡಲದ ಯಾವೊಬ್ಬ ವ್ಯಕ್ತಿಯೂ ಲಂಚ ಪಡೆದಿಲ್ಲ ಎಂದು ಹೇಳಲಿ. ಈ ಪ್ರಕರಣದಲ್ಲಿ 40% ಕಮೀಷನ್ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ. ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದೀರಾ? ಪ್ರಮಾಣ ಮಾಡುವ ಆ ತಾಕತ್ತು ನಿಮಗಿದೆಯಾ? ನೀವು ಧರ್ಮಸ್ಥಳ ದೇವರನ್ನು ಒಪ್ಪುತ್ತೀರಿ ಅಂತಾದರೆ ಅಲ್ಲಿಗೆ ಬನ್ನಿ ಎಂದರು. ಇದನ್ನೂ ಓದಿ: ಸಂತೋಷ್‍ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

    BRIBE

    ಅಲ್ಲಿ ನೀವು ಪ್ರಮಾಣ ಮಾಡಿದ್ರೆ ನೀವು ಪ್ರಾಮಾಣಿಕ ಅಂತಾ ಒಪ್ಪಿಕೊಳ್ಳೊಣ. ಪ್ರಮಾಣ ಮಾಡಿಯೂ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದ್ರೆ ಧರ್ಮದ್ರೋಹಿ ಆಗುತ್ತೀರಿ. ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಈ ದೇಶವನ್ನು ಲೂಟಿ ಮಾಡಿದೆ ಎಂದು ಹೇಳಿದ್ರಿ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕೆ ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ರಿ. ಆದ್ರೆ ಈಗ ನೀವು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

  • ನೀವು ನಮ್ಮನ್ನು ಅಗಲಿದ್ದೀರಿ ಅಂತ ನಂಬಲಾಗುತ್ತಿಲ್ಲ: ಧರ್ಮೇಂದ್ರ

    ನೀವು ನಮ್ಮನ್ನು ಅಗಲಿದ್ದೀರಿ ಅಂತ ನಂಬಲಾಗುತ್ತಿಲ್ಲ: ಧರ್ಮೇಂದ್ರ

    ಮುಂಬೈ: ಲತಾ ಮಂಗೇಶ್ಕರ್ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ ಅಂತ ನಂಬಲಾಗುತ್ತಿಲ್ಲ ಎಂದು ಬಾಲಿವುಡ್ ಖ್ಯಾತ ಹಿರಿಯ ನಟ ಧರ್ಮೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಧರ್ಮೇಂದ್ರ ಅವರು ಲತಾ ಮಂಗೇಶ್ಕರ್ ಅವರ ಜೊತೆ ಪ್ರೀತಿಯಿಂದ ಅಪ್ಪಿಕೊಂಡ ಪೋಸ್ಟ್‌ವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಗಾಯಕಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಇಡೀ ಜಗತ್ತು ನಿಮ್ಮಂತಹ ಧಿಮಂತ ಮಹಿಳೆಯನ್ನು ಕಳೆದುಕೊಂಡ ದುಃಖದಲ್ಲಿದೆ. ನೀವು ನಮ್ಮನ್ನು ತೊರೆದಿದ್ದೀರಿ ಅನ್ನುವದನ್ನೆ ನಂಬಲಾಗುತ್ತಿಲ್ಲ. ಲತಾ ಜೀ, ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ.

    ಲತಾ ಮಂಗೇಶ್ಕರ್‍ರವರು ಧರ್ಮೇಂದ್ರ ಮತ್ತು ಅವರ ಪತ್ನಿ ಹೇಮಾ ಮಾಲಿನಿ ಇಬ್ಬರನ್ನೂ ತುಂಬಾ ಇಷ್ಟಪಡುತ್ತಿದ್ದರು. ಅವರು, ಡಿಯೋಲ್ ಕುಟುಂಬದೊಂದಿಗೆ ಅತ್ಯಂತ ಸೌಹಾರ್ದಯುತ ಮತ್ತು ವಿಶೇಷ ಸಂಬಂಧವನ್ನು ಹೊಂದಿದ್ದರು. ಲತಾ ಅವರು ಹಿರಿಯ ನಟನ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ

    ಧರ್ಮೇಂದ್ರ ಅವರ ಹಲವು ಚಿತ್ರಗಳಿಗೆ ಲತಾ ಮಂಗೇಶ್ಕರ್ ತಮ್ಮ ಧ್ವನಿಯನ್ನು ನೀಡಿದ್ದು, ಅವುಗಳಲ್ಲಿ `ಸಾಥಿಯಾ ನಹಿ ಜಾನಾ ಕೆ ಜೀ ನಾ ಲಗೇ`, `ಕಲ್ ಕಿ ಹಸೀನ್ ಮುಲಾಕತ್ ಕೆ ಲಿಯೇ`, `ಗಿರ್ ಗಯಾ ಜುಮ್ಕಾ ಗಿರ್ನೆ ದೋ`, `ಜಿಲ್ಮಿಲ್ ಸಿತಾರೋನ್ ಕಾ ಅಂಗನ್ ಹೋಗಾ`, ಹೀಗೆ ಅನೇಕ ಹಾಡುಗಳಿಗೆ ತಮ್ಮ ಹಿನ್ನೆಲೆ ಗಾಯನವನ್ನು ನೀಡಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

    ಭಾರತದ ಗಾನ ಕೋಗಿಲೆ ಎಂದೇ ಹೆಸರಾಗಿದ್ದ ಲತಾ ಮಂಗೇಶ್ಕರ್ ಅವರು ಜನವರಿಯಲ್ಲಿ ಕೋವಿಡ್ -19 ಮತ್ತು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 8 ರಂದು, 92 ವರ್ಷ ವಯಸ್ಸಿನ ಗಾಯಕಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಕೋವಿಡ್‍ನಿಂದ ಚೇತರಿಸಿಕೊಂಡ ನಂತರವೂ, ಶನಿವಾರ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಅವರನ್ನು ವೆಂಟಿಲೇಟರ್‍ನಲ್ಲಿ ಇರಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

  • ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ ಹೇಮ ಮಾಲಿನಿ, ಧರ್ಮೇಂದ್ರ

    ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ ಹೇಮ ಮಾಲಿನಿ, ಧರ್ಮೇಂದ್ರ

    ಮುಂಬೈ: ಬಾಲಿವುಡ್ 90ರ ದಶಕದ ಡ್ರೀಮ್ ಗರ್ಲ್ ಹೇಮ ಮಾಲಿನಿ ಮತ್ತು ಧರ್ಮೇಂದ್ರ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

    ಹೇಮ ಮಾಲಿನಿ ಅ.16ರಂದು 73ನೇ ಹುಟ್ಟುಹಬ್ಬವನ್ನು ತನ್ನ ಕುಟುಂಬ ಮತ್ತು ಆಪ್ತರೊಂದಿಗೆ ಆಚರಿಸಿಕೊಂಡಿದ್ದು, ಈಗ ಪತಿ ಧರ್ಮೇಂದ್ರ ಅವರೊಂದಿಗೆ ವಿಶ್ರಾಂತಿಯಲ್ಲಿದ್ದಾರೆ. ಹೇಮ ಅವರು ತಮ್ಮ ಮತ್ತು ಧರ್ಮೇಂದ್ರ ಅವರ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ನನ್ನ ಜನ್ಮದಿನದಂದು ಪ್ರೀತಿಯ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ತನ್ನ ಹಿತೈಷಿಗಳಿಗೆ, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: 26 ಪ್ರಕರಣಗಳಲ್ಲಿ ಸಮೀರ್ ತನಿಖೆ ನಡೆಸುವಾಗ ಸರಿಯಾದ ನಿಯಮಗಳನ್ನು ಅನುಸರಿಸಿಲ್ಲ: ನವಾಬ್ ಮಲಿಕ್

    ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಡಿದ ಅವರು, ನನ್ನ ಜನ್ಮದಿನದಂದು ನನಗೆ ಶುಭ ಹಾರೈಸಿದ ಮತ್ತು ಸುಂದರವಾದ ಸಂದೇಶಗಳನ್ನು ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರಿಂದ ಪ್ರೀತಿಯನ್ನು ಸ್ವೀಕರಿಸಲು ನಾನು ಸಂತೋಷ ಪಡುತ್ತೇನೆ. ಇದಕ್ಕೆ ನಾನು ಕೃತಜ್ಞತೆಯ ಭಾವನೆಯನ್ನು ಹೊಂದಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಹುಟ್ಟುಹಬ್ಬ ಆಚರಣೆ ಮಾಡಿದ ನಂತರ ವಿಶ್ರಾಂತಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಫೋಟೋದಲ್ಲಿ ಹೇಮ ಮಾಲಿನಿ ಮತ್ತು ಧಮೇರ್ಂದ್ರ ಅವರು ಒಟ್ಟಿಗೆ ಮುದ್ದಾಗಿ ಕಾಣಿಸಿಕೊಂಡಿದ್ದು, ಧರ್ಮೇಂದ್ರ ಹೇಮ ಭುಜದ ಮೇಲೆ ಕೈ ಹಾಕಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    ಹೇಮ ಮಾಲಿನಿ ಅವರು ಅವರ ಹುಟ್ಟುಹಬ್ಬದ ಎರಡು-ಮೂರು ದಿನಗಳ ನಂತರ ಸೆಲೆಬ್ರೇಷನ್ ಫೋಟೋಗಳನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಫೋಟೋದಲ್ಲಿ ಮಗಳು ಇಶಾ ಡಿಯೋಲ್, ಧರ್ಮೇಂದ್ರ, ಹೇಮ ಮಾಲಿನಿ, ಹಿರಿಯ ನಟ ಸಂಜಯ್ ಖಾನ್ ಅವರೊಂದಿಗೆ ಕೇಕ್ ಅನ್ನು ಕತ್ತರಿಸಿದ್ದಾರೆ. ಕುಟುಂಬ ಮತ್ತು ಕೆಲವು ಆಪ್ತರೊಂದಿಗೆ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆ ಎಂದು ಬರೆದು ಫೋಟೋ ಫೋಸ್ಟ್ ಮಾಡಿದ್ದರು. ಇದನ್ನೂ ಓದಿ: KFC ತಿರಸ್ಕರಿಸಿ ಅಭಿಯಾನಕ್ಕೆ ತಮಿಳಿಗರ ಬೆಂಬಲ

    ಧರ್ಮೇಂದ್ರ ಮತ್ತು ಹೇಮ ಮಾಲಿನಿ 1979ರಲ್ಲಿ ಮದುವೆಯಾದರು. ಈ ದಂಪತಿಗೆ ಇಶಾ ಮತ್ತು ಅಹಾನಾ ಡಿಯೋಲ್ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಶೋಲೆ, ಸೀತಾ ಔರ್ ಗೀತಾ, ದಿಲಗಿ, ರಾಜಾ ಜಾನಿ, ದೋ ದಿಶಾಯೇನ್, ದಿ ಬರ್ನಿಂಗ್ ಟ್ರೈನ್, ಜುಗ್ನು, ದಿಲ್ ಕಾ ಹೀರಾ ಮತ್ತು ಡ್ರೀಮ್ ಗರ್ಲ್ ಮುಂತಾದ ಚಿತ್ರಗಳಲ್ಲಿ ಧರ್ಮೇಂದ್ರ ಮತ್ತು ಹೇಮ ಮಾಲಿನಿ ಒಟ್ಟಿಗೆ ನಟಿಸಿದ್ದಾರೆ.

  • ಸಿಎಂಗೆ ಕೊಲೆ ಬೆದರಿಕೆ ಹಾಕಿದ್ದ ಧರ್ಮೇಂದ್ರ ಬಂಧನ

    ಸಿಎಂಗೆ ಕೊಲೆ ಬೆದರಿಕೆ ಹಾಕಿದ್ದ ಧರ್ಮೇಂದ್ರ ಬಂಧನ

    ಮಂಗಳೂರು: ಮೈಸೂರು ದೇಗುಲ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಬಂಧಿಸಲಾಗಿದೆ.

    Karnataka administered 29.5 Lakh covid vaccine doses in a single day CM Bommai Thanks Modi

    ಮಂಗಳೂರಿನಲ್ಲಿ ನಿನ್ನೆ ಮಾಧ್ಯಮ ಗೋಷ್ಠಿಯಲ್ಲಿ ಧರ್ಮೇಂದ್ರ, ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಬಿಟ್ಟಿಲ್ಲ ನಾವು. ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಹತ್ಯೆ ಮಾಡಲಾಗಿದೆ. ಅಂತಹ ಸಂದರ್ಭದಲ್ಲಿ ನೀವು ಯಾವ ಲೆಕ್ಕ ಬೊಮ್ಮಾಯಿಯವರೇ. ನಿಮ್ಮ ವಿಚಾರದಲ್ಲಿ ಅಲೋಚನೆ ಮಾಡಲು ಸಾಧ್ಯವಿಲ್ಲ ಅಂದುಕೊಳ್ಳಬೇಡಿ ದೇಗುಲ ಧ್ವಂಸ ಮಾಡಿರೋದು ಒಂದು ಕೊಲೆಗೆ ಸಮಾನ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿಗೆ ಕೊಲೆ ಬೆದರಿಕೆ

    ದೇವಾಲಯ ಕೆಡವಿದ ವಿಚಾರದಲ್ಲಿ ಸಿಎಂಗೆ ಕೊಲೆ ಬೆದರಿಕೆ ಹಾಕಿರುವ ತನ್ನ ಹೇಳಿಕೆಗೆ ಧರ್ಮೇಂದ್ರ ಅವರು ಕ್ಷಮೆಯಾಚಿಸಿದ್ದರು. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಲೋಹಿತ್ ಕುಮಾರ್ ಸುವರ್ಣ ಎಂಬವರು ದೂರು ದಾಖಲಿಸಿದ್ದರು. ಈ ಸಂಬಂಧ ಧರ್ಮೇಂದ್ರ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬಾಲಕಿ ಕೆನ್ನೆ ಕಚ್ಚಿದ್ದ ಶಿಕ್ಷಕನಿಗೆ ಪೊಲೀಸರ ಮುಂದೆಯೇ ಥಳಿಸಿದ ಸ್ಥಳೀಯರು

  • ಸಿಎಂ ಬಸವರಾಜ ಬೊಮ್ಮಾಯಿಗೆ ಕೊಲೆ ಬೆದರಿಕೆ

    ಸಿಎಂ ಬಸವರಾಜ ಬೊಮ್ಮಾಯಿಗೆ ಕೊಲೆ ಬೆದರಿಕೆ

    ಮಂಗಳೂರು: ಮೈಸೂರು ದೇಗುಲ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ.

    ಮಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಬಿಟ್ಟಿಲ್ಲ ನಾವು. ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಹತ್ಯೆ ಮಾಡಲಾಗಿದೆ. ಅಂತಹ ಸಂದರ್ಭದಲ್ಲಿ ನೀವು ಯಾವ ಲೆಕ್ಕ ಬೊಮ್ಮಾಯಿಯವರೇ. ನಿಮ್ಮ ವಿಚಾರದಲ್ಲಿ ಅಲೋಚನೆ ಮಾಡಲು ಸಾಧ್ಯವಿಲ್ಲ ಅಂದುಕೊಳ್ಳಬೇಡಿ ದೇಗುಲ ಧ್ವಂಸ ಮಾಡಿರೋದು ಒಂದು ಕೊಲೆಗೆ ಸಮಾನ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮೂರು ಗಂಟೆ ರನ್‍ವೇನಲ್ಲೇ ನಿಂತ ವಿಮಾನ- ಪ್ರಯಾಣಿಕರು ಕಂಗಾಲು

    ದೇವಾಲಯ ಧ್ವಂಸದ ಮೂಲಕ ಅಲ್ಪಸಂಖ್ಯಾತ ಮತಗಳಿಕೆ ಪ್ರಯತ್ನ ಮಾಡುತ್ತಿದ್ದೀರಿ. ಬಿಜೆಪಿಯಿಂದ ಅಲ್ಪಸಂಖ್ಯಾತರ ಓಲೈಕೆಯಾಗುತ್ತಿದೆ. ಬೊಮ್ಮಾಯಿಯವರೇ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಧಾರ್ಮಿಕ ದತ್ತಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಯವರೇ ನೀವು ಮೊಟ್ಟೆ ಕದ್ದು ಹಣಮಾಡಿದ್ದೀರಿ. ಇದೀಗ ದೇವಸ್ಥಾನಗಳನ್ನು ಧ್ವಂಸ ಮಾಡಿ ಯಾಕೆ ದುಡ್ಡು ಮಾಡಲು ಹೊರಟಿದ್ದೀರಿ. ಸಂಘಪರಿವಾರ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡೋದು ಅಲ್ಲ. ಪರಿವಾರ ಸಂಘಟನೆಗಳು ಬಿಜೆಪಿಯನ್ನೇ ಬಹಿಷ್ಕಾರ ಮಾಡಲಿ ಎಂದು ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ದಳ ತೊರೆದು ಕೈ ಹಿಡಿಯಲು ನಿರ್ಧರಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ

  • ಸ್ಯಾಂಡಲ್‍ವುಡ್ ನಟ ಧರ್ಮೇಂದ್ರ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತೆ

    ಸ್ಯಾಂಡಲ್‍ವುಡ್ ನಟ ಧರ್ಮೇಂದ್ರ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತೆ

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟ ಧಮೇಂದ್ರ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಕುಡಿಸಿ, ಆಕೆಯ ಜೊತೆಯಿದ್ದ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಕ್ಕೆ ಧರ್ಮೇಂದ್ರ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.

    ಧರ್ಮೇಂದ್ರ ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ಮಹಿಳೆಯನ್ನು ಕರೆಸಿಕೊಂಡಿದ್ದ. ಬಳಿಕ ಧರ್ಮೇಂದ್ರ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿ ಊಟಕ್ಕೆ ಹೋಟೆಲ್‍ಗೆ ಕರೆಸಿಕೊಂಡನು. ಆರ್.ಆರ್ ನಗರದ ಹೋಟೆಲ್‍ಗೆ ಕಾರು ಚಾಲಕ ನವೀನ್ ಮೂಲಕ ಮಹಿಳೆಯನ್ನು ಧರ್ಮೇಂದ್ರ ಕರೆಸಿಕೊಂಡನು. ಊಟದ ಬಳಿಕ ಧರ್ಮೇಂದ್ರ ಕೂಲ್‍ಡ್ರಿಕ್ಸ್ ನಲ್ಲಿ ಮತ್ತು ಬರೋ ಔಷಧಿ ಕುಡಿಸಿದ್ದಾನೆ. ಮಹಿಳೆಯೊಂದಿಗಿದ್ದ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಿಮ್ಮ ಕುಟುಂಬಕ್ಕೆ ಈ ವಿಡಿಯೋ ತೋರಿಸೋದಾಗಿ ಬೆದರಿಕೆ ಹಾಕಿ 14 ಲಕ್ಷ ಹಣ ಸುಲಿಗೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಚಿತ್ರನಟ ಧರ್ಮೇಂದ್ರ ಅಲಿಯಾಸ್ ಧರ್ಮ ನನಗೆ ಪರಿಚಯ. ನಂತರ ರಾಜರಾಜೇಶ್ವರಿ ನಗರದಲ್ಲಿ ಶೂಟಂಗ್ ಇದೆ ಬನ್ನಿ ಎಂದು ಧಮೇಂದ್ರ ಚಾಲಕ ನವೀನ್ ಮೂಲಕ ಕಾರಿನಲ್ಲಿ ನನನ್ನು ಕರೆಸಿಕೊಂಡನು. ಬಳಿಕ ನಾನು ಶೂಟಿಂಗ್ ಎಲ್ಲಿ ನಡೆಯುತ್ತಿದೆ ಎಂದು ಕೇಳಿದ್ದಾಗ ಆಗ ಧರ್ಮೇಂದ್ರ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿ ಊಟ ಮಾಡಿಸಿ ಕೂಲ್ ಡ್ರಿಂಕ್ಸ್ ನೀಡಿದ್ದರು. ಕೂಲ್ ಡ್ರಿಂಕ್ಸ್ ಕುಡಿದ ನಂತರ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿ ಶೂಟಿಂಗ್ ರೂಮಿನಲ್ಲಿ ಒಬ್ಬಳೇ ಇದೆ.

    ನಂತರ ಧರ್ಮೇಂದ್ರ ನನಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟನು. ನನ್ನ ಬಳಿ ಕೆಲವು ವಿಡಿಯೋಗಳಿದ್ದು, ಅವುಗಳನ್ನು ನಿನ್ನ ಕುಟುಂಬಸ್ಥರಿಗೆ ತೋರಿಸುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟನು. ಸುಮಾರು 14 ಲಕ್ಷ ಹಣವನ್ನು ನನ್ನಿಂದ ಸುಲಿಗೆ ಮಾಡಿದ್ದಾನೆ. ಬಳಿಕ ಸದರಿ ಹಣವನ್ನು ನನ್ನ ಪತಿ ವಾಪಾಸ್ ಕೇಳಿದ್ದಾಗ ಧರ್ಮೇಂದ್ರ ಮನೆ ಬಳಿ ಬಂದು ನನ್ನ ಹಾಗೂ ನನ್ನ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸದ್ಯ ಚಿತ್ರನಟ ಧರ್ಮೇಂದ್ರ ಹಾಗೂ ಆತನ ಕಾರು ಚಾಲಕ ನವೀನ್ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.