Tag: Dharmasthala Temple

  • ಬಿಜೆಪಿಗರ ರ‍್ಯಾಲಿ ಧರ್ಮಸ್ಥಳದ ಪರ, ನ್ಯಾಯದ ಪರ ಅಲ್ಲ – ಡಿಕೆಶಿ

    ಬಿಜೆಪಿಗರ ರ‍್ಯಾಲಿ ಧರ್ಮಸ್ಥಳದ ಪರ, ನ್ಯಾಯದ ಪರ ಅಲ್ಲ – ಡಿಕೆಶಿ

    ಬೆಂಗಳೂರು: ಬಿಜೆಪಿಗರು ರ‍್ಯಾಲಿ (BJP Rally) ಮಾಡ್ತಿರೋದು ಧರ್ಮಸ್ಥಳದ ಪರವಾಗಿಯೇ ಹೊರತು ನ್ಯಾಯದ ಪರ ಅಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಧರ್ಮಸ್ಥಳದ ಮೇಲೆ ಬಂದಿರುವ ಆರೋಪಗಳಿಗೆ ಮುಕ್ತಿ ಸಿಗಲಿ, ಅದು ಸತ್ಯನಾ ಅಥವಾ ಸುಳ್ಳಾ ಅನ್ನೋದು ಜನಕ್ಕೆ ಗೊತ್ತಾಗಲಿ ಅಂತಾ ಎಸ್‌ಐಟಿ ರಚನೆ ಮಾಡಿದ್ದೇವೆ. ಅದರಲ್ಲಿ ಈಗ ಏನು ಸಿಕ್ತಿಲ್ಲ ಅಂತ ಗೊತ್ತಾದ ಮೇಲೆ ಬಿಜೆಪಿಗರು ಧರ್ಮಸ್ಥಳದ (Dharmasthala) ಪರವಾಗಿ ರ‍್ಯಾಲಿ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ:  ಎಡಪಂಥೀಯರನ್ನ ಕೇಳಿ ತನಿಖೆಗೆ ಕೊಟ್ಟಿದ್ದಾರೆ, ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು: ವಿಜಯೇಂದ್ರ ಕಿಡಿ

    ಇಷ್ಟು ದಿನ ರ‍್ಯಾಲಿ ಯಾಕೆ ಮಾಡಲಿಲ್ಲ? ಎಸ್‌ಐಟಿ ರಚನೆ ಆದಾಗ ಯಾಕೆ ಅವರು ಮಾತಾಡಲಿಲ್ಲ. ಈಗ ರಾಜಕೀಯ ಮಾಡೋಕೆ ಬಂದಿದ್ದಾರೆ. ಇದು ಧರ್ಮಸ್ಥಳ ಪರ ರ‍್ಯಾಲಿ ಅನ್ನೋದಕ್ಕಿಂತ ಬಿಜೆಪಿಯ ರಾಜಕೀಯ ರ‍್ಯಾಲಿ ಎನ್ನಬಹುದು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಇದೊಂದು ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ

    ದೊಡ್ಡ ಷಡ್ಯಂತ್ರ ನಡೆದಿದೆ ಎಂದಿದ್ದ ಡಿಸಿಎಂ
    ಮೂರು ದಿನಗಳ ಹಿಂದಷ್ಟೇ ಡಿಕೆಶಿ ಮಾತನಾಡುವಾಗ, ಇದೊಂದು ಖಾಲಿ ಡಬ್ಬ ಏನು ಇಲ್ಲ. ಅಲ್ಲಿ ಕೇವಲ ಸದ್ದು ಜಾಸ್ತಿ ಆಗುತ್ತಿದೆ. ಈ ಪ್ರಕರಣದಲ್ಲಿ ಬಹಳ ಷಡ್ಯಂತ್ರ (Conspiracy) ನಡೆದಿದೆ. ಯಾರದ್ದು ಷಡ್ಯಂತ್ರ ಎಂದು ಈಗ ನಾನು ಹೇಳಲ್ಲ. ಬಹಳ ಪ್ಲ್ಯಾನ್‌ ಮಾಡಿ ಅವರ ಮೇಲೆ ಕಪ್ಪು ಚುಕ್ಕೆ ತರಲು ನೋಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ಹಿಂದೆ ಮತಾಂತರ ಮಾಫಿಯಾ: ಸಿ.ಟಿ ರವಿ

    ಯಾರನ್ನೋ ತೇಜೋವಧೆ ಮಾಡಿ ನೂರಾರು ವರ್ಷದಿಂದ ಬಂದ ಪರಂಪರೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಅವನ್ಯಾರೋ ಒಬ್ಬ ನ್ಯಾಯಾಲಯಕ್ಕೆ ಹೋಗಿ ಹೇಳಿಕೆ ಕೊಟ್ಟಿದ್ದಾನೆ. ಹೇಳಿಕೆ ನೀಡಿದ್ದರಿಂದ ತನಿಖೆ ನಡೆಯುತ್ತಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ, ಅಶೋಕ್ ರೈ ಮಾತಾಡಿದ್ದಾರೆ. ಯಾರು ಷಡ್ಯಂತ್ರ ಮಾಡುತ್ತಿದ್ದಾರೆ? ಸುಳ್ಳು ಆರೋಪ ಮಾಡುತ್ತಾರೆ ಅವರ ವಿರುದ್ಧ ಆಳಕ್ಕೆ ಆಗಿ ಹೋಗಿ ತನಿಖೆ ಮಾಡಿ ಕಾನೂನು ಕ್ರಮಕ್ಕೆ‌ ಕೈಗೊಳ್ಳಲು ಹೇಳಿದ್ದೇವೆ. ಮುಖ್ಯಮಂತ್ರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ ಅಂತ ತಿಳಿಸಿದ್ದರು. ಇದನ್ನೂ ಓದಿ: ಮಂಗಳೂರು-ಬೆಂಗಳೂರು ರೈಲು ಸಂಚಾರ ಮಾರ್ಗದಲ್ಲಿ ಗುಡ್ಡ ಕುಸಿತ – ರಾತ್ರಿಯಿಡೀ ತೆರವು ಕಾರ್ಯ

  • ಧರ್ಮಸ್ಥಳ ಕೇಸ್‌ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ

    ಧರ್ಮಸ್ಥಳ ಕೇಸ್‌ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ

    – ಮತ್ತೊಮ್ಮೆ ವಿಚಾರಣೆ ನಡೆಸಿ 2 ವಾರಗಳಲ್ಲಿ ಅರ್ಜಿ ನಿರ್ಧರಿಸಲು ಸೂಚನೆ

    ನವದೆಹಲಿ: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ (Dharmasthala Mass Burials Case) ಸಂಬಂಧಿಸಿದಂತೆ ಮಾನಹಾನಿಕರ ವರದಿಗಳ ಪ್ರಕಟಣೆ ತಡೆಯುವಂತೆ ಧರ್ಮಸ್ಥಳ ದೇವಾಲಯದ (Dharmasthala Temple) ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ್ದ ಅರ್ಜಿಯನ್ನ ಹೊಸದಾಗಿ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

    ಮಾನಹಾನಿಕರ ವರದಿ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ದ್ವಿ ಪೀಠವು ವಿಚಾರಣೆ ನಡೆಸಿತು. ಆದಾಗ್ಯೂ ಈ ವಿಷಯದಲ್ಲಿ ಮಾಧ್ಯಮಗಳ ನಿರ್ಬಂಧದ ಅಗತ್ಯವಿದೆಯೇ ಎಂಬುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಇದನ್ನೂ ಓದಿ: ಧರ್ಮಸ್ಥಳವನ್ನು ಕಬಳಿಸಲು ಸರ್ಕಾರ ಈಗ ಸಾಕ್ಷಿ ಹುಡುಕುತ್ತಿದೆ: ಪ್ರತಾಪ್‌ ಸಿಂಹ

    ವಿಚಾರಣೆ ವೇಳೆ ದೇವಾಲಯದ ಆಡಳಿತ ಮಂಡಳಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ಮುಕುಲ್ ರೊಹಟಗಿ, ದಿನೇ ದಿನೇ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನ ಪ್ರಕಟಿಸುತ್ತಿವೆ ಎಂದರು. ಇದೇ ವೇಳೆ ಮಾನಹಾನಿಕರ ಎಂದು ಹೇಳಲಾದ ಇಂಟರ್ನೆಟ್ ಮೀಮ್ಸ್‌ಗಳ ಪೋಸ್ಟ್‌ಗಳ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದರು. ಇದನ್ನೂ ಓದಿ: ಟ್ರಾನ್ಸ್‌ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಶಾಕ್ – 20 ಅಡಿ ಎತ್ತರದಿಂದ ಬಿದ್ದ ಲೈನ್ ಮ್ಯಾನ್

    ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋರ್ಟ್‌, ಇಂತಹ ಮಾನಹಾನಿಕರ ಪೋಸ್ಟ್‌ಗಳಿಗೆ ದೇವಾಲಯವು ಯಾವಾಗಲೂ ಪರಿಹಾರ ಪಡೆಯಬಹುದು ಎಂದು ಹೇಳಿತು. ಆದಾಗ್ಯೂ, ಮಾಧ್ಯಮಗಳ ವಿರುದ್ಧ ನಿಗ್ರಹ ಹೇರಬೇಕೇ ಅಂತ ಪ್ರಶ್ನಿಸಿತು. ವಿರಳ ಮತ್ತು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗ್ಯಾಗ್ ಆದೇಶಗಳನ್ನ ಹೊರಡಿಸಲಾಗುತ್ತೆ. ಇಂತಹ ಆದೇಶ ವಾಕ್ ಸ್ವಾತಂತ್ರ್ಯವನ್ನ ಹತ್ತಿಕ್ಕುತ್ತವೆ. ನಾವು ತಡೆಯಾಜ್ಞೆ ನೀಡಿದ್ರೆ ಅನಾಮಿಕ ವ್ಯಕ್ತಿಯ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು. ಈ ವಿಷಯವನ್ನು ರಾಜ್ಯದ ವಿಚಾರಣಾ ನ್ಯಾಯಾಲಯವೇ (Karnataka Trial Court) ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟರು.

    ಮುಂದುವರಿದು, ಕರ್ನಾಟಕದ ವಿಚಾರಣಾ ನ್ಯಾಯಾಲಯದ ಮುಂದೆ ಅರ್ಜಿದಾರರು ಮತ್ತೆ ವಾದ ಮಂಡಿಸಲಿ. ನಾವು ಸ್ವತಂತ್ರ ದೇಶದಲ್ಲಿ ವಾಸಿಸುತ್ತಿದ್ದೇವೆ. ವಿಚಾರಣಾ ನ್ಯಾಯಾಲಯವು ಈ ವಿಷಯದ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು. ನಂತರ ಮುಕುಲ್ ರೊಹಟಗಿ ಯಾಲಯವನ್ನ ಮಧ್ಯಂತರ ರಕ್ಷಣೆ ನೀಡುವಂತೆ ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ವಿಚಾರಣಾ ನ್ಯಾಯಾಲಯವು ಮುಂದಿನ ವಿಚಾರಣೆಯ ದಿನದಿಂದ ಎರಡು ವಾರಗಳಲ್ಲಿ ಅರ್ಜಿಯನ್ನ ನಿರ್ಧರಿಸುವಂತೆ ನಾವು ನಿರ್ದೇಶಿಸುತ್ತೇವೆ. ಹೈಕೋರ್ಟ್ ಮಾಡುವ ಯಾವುದೇ ಅವಲೋಕನಗಳು ಹೊಸದಾಗಿ ತಡೆಯಾಜ್ಞೆ ಅರ್ಜಿಯನ್ನು ಪರಿಗಣಿಸುವಾಗ ವಿಚಾರಣಾ ನ್ಯಾಯಾಲಯದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಪೀಠ ಅಂತಿಮವಾಗಿ ತಮ್ಮ ಆದೇಶದಲ್ಲಿ ತಿಳಿಸಿತು. ಇದನ್ನೂ ಓದಿ: ಹೇಗಿತ್ತು.. ಹೇಗಾಯ್ತು!?- ಉತ್ತರಾಖಂಡದಲ್ಲಿ ಭೀಕರ ಪ್ರವಾಹದ ಸ್ಯಾಟಲೈಟ್‌ ದೃಶ್ಯ ಹಂಚಿಕೊಂಡ ಇಸ್ರೋ

    ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಈ ಹಿಂದೆ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಹೈಕೋರ್ಟ್‌ ತಡೆ ನೀಡಲು ನಿರಾಕರಿಸಿತ್ತು. ಬಳಿಕ ಧರ್ಮಸ್ಥಳ ದೇವಾಲಯದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

  • ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ನಾಮ ನಿರ್ದೇಶನ: ಮೋದಿ ಟ್ವೀಟ್

    ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ನಾಮ ನಿರ್ದೇಶನ: ಮೋದಿ ಟ್ವೀಟ್

    ನವದೆಹಲಿ: ಕೇಂದ್ರ ಸರ್ಕಾರವು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ, ಕೇರಳದ ಮಾಜಿ ಅಥ್ಲಿಟ್ ಪಿಟಿ ಉಷಾ, ಆಂಧ್ರಪ್ರದೇಶದ ಕೆ.ವಿ.ವಿಜಯೇಂದ್ರ ಪ್ರಸಾದ್ ಹಾಗೂ ತಮಿಳುನಾಡಿನ ಇಳಯರಾಜ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

    ವೀರೇಂದ್ರ ಹೆಗ್ಗಡೆ ಅವರನ್ನು ಸಮಾಜ ಸೇವೆ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಪಿ.ಟಿ.ಉಷಾ ಅವರನ್ನು ಕ್ರೀಡಾ ಕ್ಷೇತ್ರದಿಂದ, ವಿಜಯೇಂದ್ರ ಪ್ರಸಾದ್ ಅವರನ್ನು ಸಿನಿಮಾ ಕ್ಷೇತ್ರದಿಂದ ಹಾಗೂ ಇಳಯರಾಜಾ ಅವರನ್ನು ಸಂಗೀತ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಯ್ಕೆಯಾದ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ.

    ಅಲ್ಲದೆ, ವೀರೇಂದ್ರ ಹೆಗ್ಗಡೆಯವರು ಅತ್ಯುತ್ತಮ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಅವರು ಮಾಡುತ್ತಿರುವ ಮಹತ್ತರವಾದ ಕಾರ್ಯವನ್ನು ವೀಕ್ಷಿಸಲು ನನಗೆ ಅವಕಾಶವಿದೆ. ಅವರು ಖಂಡಿತವಾಗಿಯೂ ಸಂಸತ್ತಿನ ಕಲಾಪಗಳನ್ನು ಪುಷ್ಟೀಕರಿಸುತ್ತಾರೆ ಎಂಬ ಭರವಸೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]