Tag: Dharmasthala Temple

  • ಧರ್ಮಸ್ಥಳಕ್ಕೆ ಕಳಂಕ ಅಂಟಿದೆ ಅಂತ ಹೋಗ್ತಿದ್ದಾರೋ, ತಮ್ಮ ಕಳಂಕ ಕಳೆಯಲು ಹೋಗ್ತಿದ್ದಾರೋ ಗೊತ್ತಿಲ್ಲ: ʻಕೈʼ ಶಾಸಕರಿಗೆ ಪರಮೇಶ್ವರ್‌ ಟಾಂಗ್‌

    ಧರ್ಮಸ್ಥಳಕ್ಕೆ ಕಳಂಕ ಅಂಟಿದೆ ಅಂತ ಹೋಗ್ತಿದ್ದಾರೋ, ತಮ್ಮ ಕಳಂಕ ಕಳೆಯಲು ಹೋಗ್ತಿದ್ದಾರೋ ಗೊತ್ತಿಲ್ಲ: ʻಕೈʼ ಶಾಸಕರಿಗೆ ಪರಮೇಶ್ವರ್‌ ಟಾಂಗ್‌

    – ಕಾಂಗ್ರೆಸ್‌ ಶಾಸಕರು ಕೂಡ ಪ್ರಕರಣದ ನಂತ್ರ ಧರ್ಮಸ್ಥಳಕ್ಕೆ ಹೋಗ್ತಿರೋದು ಏಕೆ?
    – ವಿದೇಶಿ ಫಂಡಿಂಗ್‌ ಇದ್ರೆ ಕೇಂದ್ರ ಸರ್ಕಾರವೇ ನೋಡಬೇಕು ಎಂದ ಗೃಹಸಚಿವ

    ಬೆಂಗಳೂರು: ಮಂಜುನಾಥ ಸ್ವಾಮಿ ಯಾರೋ ಒಬ್ಬರಿಗೆ ಸೇರಿಲ್ಲ, ಎಲ್ಲರನ್ನೂ ಕರೆಸಿಕೊಳ್ತಾನೆ. ಯಾರು ಬೇಕಾದರೂ ಹೋಗಿ ಮಂಜುನಾಥನ ದರ್ಶನ ಮಾಡಬಹುದು. ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದ್ರೆ ಧರ್ಮಸ್ಥಳ ಪ್ರಕರಣಗಳ (Dharmasthala Case) ನಂತರ ಹೋಗ್ತಿರೋದು ಏಕೆ? ಧರ್ಮಸ್ಥಳಕ್ಕೆ ಕಳಂಕ ಅಂಟಿದೆ ಅಂತ ಹೋಗ್ತಿದ್ದಾರೋ ಅಥವಾ ತಮ್ಮ ಕಳಂಕ ಕಳೆದುಕೊಳ್ಳಲು ಹೋಗ್ತಿದ್ದಾರೋ ಗೊತ್ತಿಲ್ಲ ಅಂತ ಗೃಹಸಚಿವ ಜಿ. ಪರಮೇಶ್ವರ್‌ (G Parameshwar), ಧರ್ಮಸ್ಥಳ ಯಾತ್ರೆ ಕೈಗೊಂಡ ಕಾಂಗ್ರೆಸ್‌ ಶಾಸಕರಿಗೆ ಕುಟುಕಿದರು.

    ಕಾಂಗ್ರೆಸ್‌ ಶಾಸಕರಿಂದ (Congress MLAs) ಧರ್ಮಸ್ಥಳ ಚಲೋ ಆರಂಭವಾಗಿರುವ ಕುರಿತು ಮಾತನಾಡಿದ ಸಚಿವರು, ಮಂಜುನಾಥ ಯಾರೋ ಒಬ್ಬರಿಗೆ ಸೇರಿಲ್ಲ. ಮಂಜುನಾಥ ಎಲ್ಲರನ್ನೂ ಕರೆಸಿಕೊಳ್ತಾನೆ. ಯಾರು ಬೇಕಾದರೂ ಹೋಗಿ ಮಂಜುನಾಥನ ದರ್ಶನ ಮಾಡಿ ಬರಬಹುದು. ಮಂಜುನಾಥನ ದರ್ಶನಕ್ಕೆ ಹೋಗಿ ಬರೋದಿಕ್ಕೆ ಯಾರ ಆಕ್ಷೇಪವೂ ಇಲ್ಲ. ಆದ್ರೆ ಧರ್ಮಸ್ಥಳ ಪ್ರಕರಣಗಳ ನಂತರ ಹೋಗ್ತಿರೋದು ಏಕೆ ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ತಿರುವು – ಸೌಜನ್ಯ ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಪಡೆದವರಿಗೆ SIT ಬುಲಾವ್‌

    Dharmasthala Chinnayya

    ಬಿಜೆಪಿ, ಜೆಡಿಎಸ್ (BJP – JDS) ನವ್ರೇ ಇರಲಿ, ಈಗ ಕಾಂಗ್ರೆಸ್‌ನವ್ರು ಯಾಕೆ ಈಗ ಹೋಗ್ತಿರೋದು. ಈ ಮೊದಲೇ ಯಾಕೆ ಹೋಗಲಿಲ್ಲ? ಸಹಜವಾಗಿ ಇದು ರಾಜಕೀಯ ಅನಿಸಿಕೊಳ್ಳುತ್ತೆ. ಅವರು ಹೋದ್ರು ಅಂತ ಇವ್ರೂ ಹೋಗ್ತಿದ್ದಾರೆ. ಧರ್ಮಸ್ಥಳಕ್ಕೆ ಕಳಂಕ ಅಂಟಿದೆ ಅಂತ ಹೋಗ್ತಿದ್ದಾರೋ ಅಥವಾ ತಮ್ಮ ಕಳಂಕ ಕಳೆದುಕೊಳ್ಳಲು ಹೋಗ್ತಿದ್ದಾರೋ ಗೊತ್ತಿಲ್ಲ. ಅವರು ದೇವರ ಮುಂದೆ ಏನು ಕೇಳಿಕೊಂಡಿರ್ತಾರೆ ಅಂತ ಯಾರಿಗೆ ಗೊತ್ತು? ಅಂತ ಟಾಂಗ್‌ ಕೊಟ್ಟರು. ಇದನ್ನೂ ಓದಿ: ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್

    ಸೌಜನ್ಯ ಪ್ರಕರಣದ ಮರು ತನಿಖೆ ಅಂತ ಹೇಳಲ್ಲ:
    ಟರ್ಮ್ಸ್ ಆಫ್ ರೆಫರೆನ್ಸ್‌ನಲ್ಲಿ ಉಲ್ಲೇಖವಾಗದಿದ್ದರೂ ಸೌಜನ್ಯ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಸ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಸ್‌ಐಟಿ ಅಧಿಕಾರಿಗಳು ಯಾವ ಆಧಾರದಲ್ಲಿ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಏನು ಮಾಹಿತಿ ಸಿಕ್ಕಿದೆಯೋ ನನಗೆ ಗೊತ್ತಿಲ್ಲ. ತನಿಖೆಯಲ್ಲಿ ಬೇಕಾದಷ್ಟು ವಿಚಾರ ಕಲೆ ಹಾಕಿರ್ತಾರೆ. ಎಸ್‌ಐಟಿಯವ್ರಿಗೆ ಮಾಹಿತಿ ಕೊಡೋರು ಏನೋ ಮಾಹಿತಿ ಕೊಟ್ಟಿರಬಹುದು, ಅದಕ್ಕಾಗಿ ಉದಯ್ ಜೈನ್‌ರನ್ನ ಕರೆಸಿರಬೇಕು. ಟರ್ಮ್ಸ್ ಆಫ್ ರೆಫರೆನ್ಸ್ ನಲ್ಲಿ ಇಲ್ಲದಿದ್ರೂ ಲಿಂಕ್ ಇರುತ್ತಲ್ವಾ? ಲಿಂಕ್ ಗಳ ಪರಿಶೀಲನೆ ಮಾಡಬೇಕಲ್ವಾ? ಇಲ್ಲದಿದ್ರೆ ತನಿಖೆ ಪೂರ್ಣ ಆಗೋದಿಲ್ಲ. ಕ್ರಾಸ್ ರೆಫರೆನ್ಸ್ ನಲ್ಲಿ ಯಾರು ಏನು ಮಾಹಿತಿ ಕೊಟ್ಟಿದ್ದಾರೋ, ಧರ್ಮಸ್ಥಳ ಪ್ರಕರಣಗಳ ಸಂಬಂಧ ಏನೋ ಲಿಂಕ್ ಸಿಕ್ಕಿರಬೇಕು. ಇದು ಸೌಜನ್ಯ ಪ್ರಕರಣದ ಮರು ತನಿಖೆ ಅಂತ ನಾನು ಹೇಳೋದಿಲ್ಲ. ಯಾವ ಲಿಂಕ್, ಯಾವ ಉದ್ದೇಶದಿಂದ ತನಿಖೆ ಮಾಡ್ತಿದ್ದಾರೆ ಅಂತ ಆಮೇಲೆ ಗೊತ್ತಾಗುತ್ತೆ. ಇದರ ಬಗ್ಗೆ ನಾವು ಈಗಲೇ ಏನೂ ಹೇಳೋದಿಕ್ಕೆ ಆಗೋದಿಲ್ಲ ಅಂತ ಸ್ಪಷ್ಟಪಡಿಸಿದ್ರು.

    ಇದೇ ವೇಳೆ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ತನಿಖೆ ಎನ್‌ಐಎಗೆ ಕೊಡಿ ಎಂದು ಅಮಿತ್ ಶಾಗೆ ಹೆಚ್‌ಡಿಕೆ ಮನವಿ ವಿಚಾರ ಕುರಿತು ಮಾತನಾಡಿ, ಅವರು ಮನವಿ ಮಾಡಿರಬಹುದು, ಎಸ್‌ಐಟಿ ಸರಿಯಿಲ್ಲ ಅಂದಿದ್ರು. ತನಿಖೆಯೇ ಸರಿಯಲ್ಲ ಅಂತಿದ್ದವರು ಈಗ ಎನ್‌ಐಎ ತನಿಖೆ ಮಾಡಲಿ ಅಂತಿದ್ದಾರೆ, ಅದೂ ಕೂಡಾ ತನಿಖೆಯೇ ಅಲ್ವಾ? ವಿದೇಶದಿಂದ ಹಣ ಬಂದಿದೆ ಅಂತ ಆರೋಪ ಬಂದಾಗ ಅದನ್ನು ಕೇಂದ್ರ ಸರ್ಕಾರವೇ ನೋಡಬೇಕು, ರಾಜ್ಯ ಸರ್ಕಾರ ನೋಡೋಕ್ಕಾಗಲ್ಲ. ಎಸ್‌ಐಟಿ ತನಿಖೆ ಮಾಡ್ತಿರೋದು ಹೆಣಗಳನ್ನು ಹೂಳಿರುವ ಬಗ್ಗೆ. ಇದರಲ್ಲಿ ಏನಾದ್ರೂ ನ್ಯೂನತೆಗಳಿದ್ರೆ ಬೇರೆ ಆಕ್ಷನ್ ನೋಡಬಹುದು. ಎನ್‌ಐಎ ಮಧ್ಯಪ್ರವೇಶ ಮಾಡುವ ಮುನ್ನ ಜಸ್ಟಿಫಿಕೇಷನ್ ಮಾಡಬೇಕು. ಅದು ಆದರೆ ರಾಜ್ಯ ಸರ್ಕಾರಕ್ಕೆ ಆಪ್ಷನ್ ಇರೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶಿ ಫಂಡಿಂಗ್‌ – ತನಿಖೆಗೆ ಇಡಿ ಎಂಟ್ರಿ

  • ಷಡ್ಯಂತ್ರ ಬಯಲಾದ ಬೆನ್ನಲ್ಲೇ ತಿಮರೋಡಿ ಮನೆಗೆ ಸುಜಾತ ಭಟ್‌ಗೆ ಇಲ್ಲ ಪ್ರವೇಶ

    ಷಡ್ಯಂತ್ರ ಬಯಲಾದ ಬೆನ್ನಲ್ಲೇ ತಿಮರೋಡಿ ಮನೆಗೆ ಸುಜಾತ ಭಟ್‌ಗೆ ಇಲ್ಲ ಪ್ರವೇಶ

    ಮಂಗಳೂರು: ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಹೂಡಿದ ಷಡ್ಯಂತ್ರ ಬಯಲಾಗುತ್ತಿದ್ದಂತೆ ದೂರುದಾರೆ ಸುಜಾತ ಭಟ್‌ಗೆ (Sujatha Bhat) ಗೇಟ್‌ಪಾಸ್‌ ನೀಡಲಾಗಿದ್ದು ಮಹೇಶ್‌ ಶೆಟ್ಟಿ ತಿಮರೋಡಿ (Mahesh Shetty Thimarodi) ಗ್ಯಾಂಗ್‌ ಅಂತರ ಕಾಯ್ದುಕೊಂಡಿದೆ.

    ತಾವೇ ಸೃಷ್ಟಿಸಿದ ಅನನ್ಯಾ ಭಟ್‌ (Ananya Bhat) ಕಟ್ಟು ಕಥೆಯ ವಿಚಾರ ಬಯಲಾಗುತ್ತಿದ್ದಂತೆ ತಿಮರೋಡಿ ಮನೆಯಲ್ಲಿ ಸುಜಾತ ಭಟ್‌ಗೆ ಅವಕಾಶ ನಿರಾಕರಿಸಲಾಗಿದೆ.

    ಸದ್ಯ ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತಿರುವ ಸುಜಾತ ಭಟ್‌ ಈಗ ಉಜಿರೆಯ ಲಾಡ್ಜ್‌ನಲ್ಲಿ ತಂಗಿದ್ದು ಅಲ್ಲಿಂದ ರಿಕ್ಷಾದ ಮೂಲಕ ಬೆಳ್ತಂಗಡಿ ಠಾಣೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಬುರುಡೆ ಗ್ಯಾಂಗ್‌ ಹೇಳಿದಂತೆ ನಾನು ಮಾಡಿದ್ದೇನೆ ಎಸ್‌ಐಟಿ ಪ್ರಶ್ನೆಗಳಿಗೆ ಸುಜಾತ ಥಂಡಾ

     

    ಬುರುಡೆ ರಹಸ್ಯ ಬಯಲಾಗುವ ಮೊದಲು ಮಹೇಶ್‌ ಶೆಟ್ಟಿ ತಿಮರೋಡಿ ಕಡೆಯವರಿಗೆ ಸಂಬಂಧಿಸಿದ ಕಾರಿನಲ್ಲಿ ಸುಜಾತ ಭಟ್‌ ಆಗಮಿಸುತ್ತಿದ್ದರು. ಅಷ್ಟೇ ಅಲ್ಲದೇ ತಿಮರೋಡಿ ಮನೆಯಲ್ಲಿ ಉಳಿದುಕೊಂಡಿದ್ದರು ಮತ್ತು ಅಲ್ಲಿಯೇ ಕೆಲ ಯೂಟ್ಯೂಬ್‌ ವಾಹಿನಿಗಳಿಗೆ ಸಂದರ್ಶನ ನೀಡಿದ್ದರು. ಈಗ ಸುಳ್ಳಿನ ಕಥೆ ಬಯಲಾಗುತ್ತಿದ್ದಂತೆ ಮನೆಯಿಂದ ತಿಮರೋಡಿ ಸುಜಾತ ಭಟ್‌ಗೆ ಗೇಟ್‌ಪಾಸ್‌ ನೀಡಿದ್ದಾರೆ.

    ಉಡುಪಿ ಕೋರ್ಟ್‌ ಜಾಮೀನು ನೀಡಿದ ಬಳಿಕ ಪ್ರತಿಕ್ರಿಯಿಸಿದ್ದ ತಿಮರೋಡಿ, ಸುಜಾತ ಭಟ್‌ಗ್‌ ನಮಗೂ ಯಾವುದೇ ಸಂಬಂಧ ಇಲ್ಲ. ಅವರು ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು ಅಷ್ಟೇ. ನಮ್ಮದು ಸೌಜನ್ಯ ಪರವಾದ ಹೋರಾಟ ಎಂದು ಹೇಳಿದ್ದರು.

     

  • ಗಿರೀಶ್ ಮಟ್ಟಣ್ಣವರ್ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

    ಗಿರೀಶ್ ಮಟ್ಟಣ್ಣವರ್ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

    ಬೆಂಗಳೂರು: ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಷ್ಯಡಂತ್ರದ ಆರೋಪ ಹೊತ್ತಿರುವ ಗಿರೀಶ್ ಮಟ್ಟಣ್ಣನವರ್ (Girish Mattannavar) ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.

    ಹುಬ್ಬಳ್ಳಿ ಮೂಲದ ರೌಡಿಶೀಟರ್ ಮದನ್ ಬುಗಾಡಿ ಎಂಬಾಂತನನ್ನ ಮಾನವಹಕ್ಕುಗಳ ಆಯೋಗದವರೆಂದು (Human Rights Commission) ಧರ್ಮಸ್ಥಳ ಪೊಲೀಸರಿಗೆ ಪರಿಚಯಿಸಿದ್ದಾರೆ ಎಂದು ಹಿಂದೂ ಮುಖಂಡ ಸುರೇಶ್ ಗೌಡ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬುರುಡೆ ಗ್ಯಾಂಗ್ಷಡ್ಯಂತ್ರ ಬಯಲು | ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ಸತ್ಯ ಹೇಳ್ತೀನಿ ಚಿನ್ನಯ್ಯ ಕಣ್ಣೀರು

     

    ಗಿರೀಶ್‌ ಮಟ್ಟಣ್ಣನವರ್‌ ಇಲಾಖೆಯ ಹೆಸರನ್ನು ಸುಳ್ಳು ಹೇಳಲು ಬಳಸಿಕೊಂಡಿದ್ದಾರೆಂದು ಆರೋಪಿಸಿ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ದೂರು ಪಡೆದಿರುವ ಅಧಿಕಾರಿಗಳು ಈ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದೂರುದಾರ ಸುರೇಶ್ ಗೌಡ, ಸುಳ್ಳು ಹೇಳಿ ಮಾನವ ಹಕ್ಕುಗಳ ಆಯೋಗವನ್ನ ಬಳಕೆ ಮಾಡಿಕೊಂಡಿದ್ದಾರೆ. ಇದು ಸರಿ ಅಲ್ಲ. ಅಧಿಕಾರಿಗಳು ಕೂಡ ಶೀಘ್ರ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಪೊಲೀಸ್ ಠಾಣೆಗೂ ಈ ಸಂಬಂಧ ಶೀಘ್ರ ದೂರು ನೀಡುತ್ತೇವೆ ಎಂದರು.

  • ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರಾದ ʻಬುರುಡೆʼ ಸಮೀರ್‌ – ವಿಚಾರಣೆ ಶುರು

    ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರಾದ ʻಬುರುಡೆʼ ಸಮೀರ್‌ – ವಿಚಾರಣೆ ಶುರು

    ಮಂಗಳೂರು: ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಎಐ ವಿಡಿಯೋ ಮಾಡಿ ಕಲರ್‌ ಕಲರ್‌ ಕಾಗೆ ಹಾರಿಸಿದ್ದ ಯೂಟ್ಯೂಬರ್‌ ಸಮೀರ್‌ (Youtuber Sameer) ಕೊನೆಗೂ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ.

    ಬೆಳಗ್ಗೆ 10:30ರ ವೇಳೆಗೆ ವಿಚಾರಣೆಗೆ ಬರುವುದಾಗಿ ಹೇಳಿದ್ದ ಸಮೀರ್‌ ವಕೀಲರೊಂದಿಗೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಹಾಜರಾಗಿದ್ದಾನೆ. ಕೂಲಿಂಗ್‌ ಗ್ಲಾಸ್‌ ಧರಿಸಿದ್ದ ಸಮೀರ್‌ ಮುಗುಳು ನಗೆ ಬೀರುತ್ತಲೇ ವಿಚಾರಣೆಗೆ ಹಾಜರಾಗಿದ್ದಾನೆ. ಇನ್ನೂ ಸಕಲ ತಯಾರಿ ಮಾಡಿಕೊಂಡಿದ್ದ ಎಸ್‌ಐಟಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

    ಧರ್ಮಸ್ಥಳ ದೇಗುಲ ವಿರುದ್ಧ ಅಪಪ್ರಚಾರ ಆರೋಪದಲ್ಲಿ `ದೂತ’ ಯೂಟ್ಯೂಬ್ ವಾಹಿನಿಯ ಸಮೀರ್‌ಗೆ ಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವು ಪ್ರಕರಣಗಳ ಅಡಿಯಲ್ಲಿ ಕೇಸ್‌ಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

    ಕೋರ್ಟ್ ಜಾಮೀನು ಬಳಿಕ ಧರ್ಮಸ್ಥಳದಲ್ಲಿ ತನಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆ ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು.

    ದೂತನ ಬಂಡವಾಳ ಬಯಲು
    ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಸೃಷ್ಟಿಸಿ ಎಲ್ಲರನ್ನೂ ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೋ ಕೋಣೇಲಿ ಕೂತ್ಕೊಂಡು ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ. ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ, ಶಿವತಾಂಡವ ಶುರುವಾಗುತ್ತೆ. ನೋಡಿ ಸತ್ಯ ಹೇಗೆ ಹೊರಬರುತ್ತದೆ? ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರನಿಗೆ ʻಭೀಮ’ ಎಂದು ಹೆಸರಿಟ್ಟಿದ್ದೇ ಸುಳ್ಳುಕೋರ ಸಮೀರ್. ಅನನ್ಯಾ ಭಟ್ ಅನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಅಂತಾನೂ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಅನ್ನೋ ಆರೋಪವೂ ಇದೆ.

  • ಸಮೀರ್‌ನ ಸುಳ್ಳಿನ ಕಂತೆ ಬಯಲು – ಇಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ʻದೂತʼನ ವಿಚಾರಣೆ

    ಸಮೀರ್‌ನ ಸುಳ್ಳಿನ ಕಂತೆ ಬಯಲು – ಇಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ʻದೂತʼನ ವಿಚಾರಣೆ

    ಮಂಗಳೂರು: ಬುರುಡೆ ಚಿನ್ನಯ್ಯನ ಬಂಧನದ ಬೆನ್ನಲ್ಲೇ ದೂತ ಸಮೀರ್‌ನ ಸುಳ್ಳಿನ ಕಂತೆ ಕಳಚಿ ಬಿದ್ದಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ (Dharmasthala Police Station) ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗಲಿದ್ದಾನೆ.

    ಧರ್ಮಸ್ಥಳ ದೇಗುಲ ವಿರುದ್ಧ ಅಪಪ್ರಚಾರ ಆರೋಪದಲ್ಲಿ `ದೂತ’ ಯೂಟ್ಯೂಬ್‌ ವಾಹಿನಿಯ ಸಮೀರ್‌ಗೆ ಕೋರ್ಟ್‌ (Cour) ಇತ್ತೀಚೆಗೆ ನಿರೀಕ್ಷಣಾ ಜಾಮೀನು (Bail) ಮಂಜೂರು ಮಾಡಿತ್ತು. ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವರು ಕೇಸ್‌ಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಕೋರ್ಟ್‌ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇದನ್ನೂ ಓದಿ: ವರ್ಷಾಂತ್ಯದಲ್ಲಿ ಭಾರತಕ್ಕೆ ಪುಟಿನ್‌, ಝೆಲೆನ್ಸ್ಕಿ ಭೇಟಿ – ಅಮೆರಿಕ ತೈಲ ವಾರ್‌ ನಡ್ವೆ ಹೆಚ್ಚಾಯ್ತು ಭಾರತದ ಪ್ರಾಬಲ್ಯ

    ಕೋರ್ಟ್‌ ಜಾಮೀನು ಬಳಿಕ ಧರ್ಮಸ್ಥಳದಲ್ಲಿ ತನಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆ ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು. ಅದರಂತೆ ಸಮೀರ್‌ ಇಂದು ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾನೆ. ಆದ್ರೆ ಬೆಳಗ್ಗೆ 10:30ಕ್ಕೆ ವಿಚಾರಣೆಗೆ ಬರೋದಾಗಿ ತಿಳಿಸಿದ್ದ ಸಮೀರ್‌ 11 ಗಂಟೆಯಾದ್ರೂ ಸುಳಿವಿಲ್ಲ. ಒಂದು ವೇಳೆ ಸಮೀರ್‌ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವ ಸಾಧ್ಯತೆಗಳೂ ಇವೆ. ಇದನ್ನೂ ಓದಿ: ಅನನ್ಯಾ ಭಟ್ ನಾಪತ್ತೆ ಪ್ರಕರಣ – ಎಸ್‌ಐಟಿ 2ನೇ ನೋಟಿಸ್‌ಗೂ ಉತ್ತರಿಸದ ಸುಜಾತ ಭಟ್

    ದೂತನ ಬಂಡವಾಳ ಬಯಲು
    ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಸೃಷ್ಟಿಸಿ ಎಲ್ಲರನ್ನೂ ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೋ ಕೋಣೇಲಿ ಕೂತ್ಕೊಂಡು ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ. ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ, ಶಿವತಾಂಡವ ಶುರುವಾಗುತ್ತೆ.. ನೋಡಿ ಸತ್ಯ ಹೇಗೆ ಹೊರಬರುತ್ತದೆ.. ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರನಿಗೆ ʻಭೀಮʼ ಎಂದು ಹೆಸರಿಟ್ಟಿದ್ದೇ ಸುಳ್ಳುಕೋರ ಸಮೀರ್. ಅನನ್ಯಾ ಭಟ್ ಅನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಅಂತಾನೂ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಅನ್ನೋ ಆರೋಪವೂ ಇದೆ.

    ಎಐ ಕಟ್ಟುಕತೆಗಳ ಅಸಲಿಯತ್ತು ಬಟಾಬಯಲಾಗ್ತಿದ್ದಂತೆ ಬಿಲ ಸೇರಿಕೊಂಡಿದ್ದಾನೆ. ಬಳ್ಳಾರಿ ಹಾಗೂ ಬನ್ನೇರುಘಟ್ಟದ ಹುಲ್ಲಳ್ಳಿ ಮನೆಗೆ ಪೊಲೀಸರು ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿದ್ದಾರೆ. ಇತ್ತ ನಿಂದನೆ ಕೇಸಲ್ಲಿ ಮಹೇಶ್ ಶೆಟ್ಟಿ ತಿಮರೋಡಿಗೆ ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌

  • ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಂದು ʻಧರ್ಮ ಸಂರಕ್ಷಣಾʼ ಸಮಾವೇಶ

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಂದು ʻಧರ್ಮ ಸಂರಕ್ಷಣಾʼ ಸಮಾವೇಶ

    – ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಧರ್ಮಸ್ಥಳ ದೇಗುಲಕ್ಕೆ ಭಕ್ತರ ದಂಡು

    ಬೆಂಗಳೂರು: ಧರ್ಮಸ್ಥಳದ (Dharmasthala) ವಿರುದ್ಧ ಪಿತೂರಿ ನಡೆಸಿ ಕಂಡ ಕಂಡಲೆಲ್ಲ ಕೈ ತೋರಿಸಿ ಗುಂಡಿ ಅಗೆಸಿದ್ದ ಮುಸುಕುಧಾರಿಯನ್ನ ಎಸ್‌ಐಟಿ ಬಂಧಿಸಿದೆ. ಸದ್ಯ ಎಸ್‌ಐಟಿ ವಶದಲ್ಲಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯಗೆ ಫುಲ್ ಗ್ರಿಲ್ ಮಾಡಲಾಗ್ತಿದೆ. ಪಾತ್ರಧಾರಿ ಅರೆಸ್ಟ್ ಆಗಿದ್ದು ಸೂತ್ರಧಾರಿಗಳಿಗೂ ಢವಢವ ಶುರುವಾಗಿದೆ.

    ಈ ನಡ್ವೆ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ದ ನಿರಾಧಾರ ಆರೋಪ ಮಾಡುತ್ತಾ ವ್ಯವಸ್ಥಿತ ಷಡ್ಯಂತ್ರ ನಡೆದಿರುವುದನ್ನು ಖಂಡಿಸಿ ಇಂದು ಫೀಡಂ ಪಾರ್ಕ್‌ನಲ್ಲಿ (Freedom Park) ಬೆಳಗ್ಗೆ 11 ಗಂಟೆಗೆ ಧರ್ಮ ಸಂರಕ್ಷಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಶ್ರಾವಣ ಕೊನೆ ಶನಿವಾರ – ಅಂಜನಾದ್ರಿಗೆ ಹರಿದು ಬಂದ ಭಕ್ತ ಸಾಗರ

    ಈ ಸಮಾವೇಶವನ್ನು ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ಆಯೋಜಿಸಲಾಗಿದ್ದು, ಬೆಂಗಳೂರಿನ ಧರ್ಮಸ್ಥಳ ಭಕ್ತರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಊರುಗಳ ಭಕ್ತರು ಆಗಮಿಸಲಿದ್ಧಾರೆ.

    ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ಆಗಮನ
    ಇನ್ನೂ ಬುರುಡೆ ರಹಸ್ಯ ಬಯಲಾದ ಬೆನ್ನಲ್ಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ದೇಗುಲಕ್ಕೆ ಭಕ್ತರು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಧರ್ಮ ಉಳಿಯಬೇಕು, ಅಪಪ್ರಚಾರ ನಿಲ್ಲಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬ, ಈದ್ ಮಿಲಾದ್‌ಗೆ ಡಿಜೆ ನಿಷೇಧ; ಪೊಲೀಸರ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು

    ಧರ್ಮಸ್ಥಳ ಭಕ್ತರಿಂದ ಆಕ್ರೋಶ
    ಧರ್ಮಸ್ಥಳ ವಿಚಾರಕ್ಕೆ ನಡೆದ ಬೆಳವಣಿಗೆಗಳ ಬಗ್ಗೆ ಬೆಂಗಳೂರಿಗರಿನಲ್ಲಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ವಿರುದ್ಧವಾಗಿ ದೊಡ್ಡಮಟ್ಟದ ಷಡ್ಯಂತ್ರ ನಡೆದಿದ್ದು ಬಯಲಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಬಂದ ವೀಡಿಯೊಗಳನ್ನೇ ಸತ್ಯ ಎಂದು ಅಂದು ಕೊಡಿದ್ವಿ. ಈಗ ನಮಗೆ ನಾಚಿಕೆಯಾಗುತ್ತಿದೆ. ಚಿಕ್ಕಂದಿನಿಂದ ವರ್ಷಕ್ಕೆ ಒಮ್ಮೆ ಧರ್ಮಸ್ಥಳಕ್ಕೆ ಹೋಗುತ್ತಿದ್ವಿ. ಆದ್ರೆ, ಇನ್ಮೇಲೆ ಇನ್ನೂ ಹೆಚ್ಚಾಗಿ ಧರ್ಮಸ್ಥಳಕ್ಕೆ ಹೋಗಬೇಕು. ತನಿಖೆ ನಡೆಯುತ್ತಿದೆ, ನಡೆಯಲಿ. ಅದನ್ನ ಬಿಟ್ಟು ಈ ರೀತಿ ಇಲ್ಲಸಲ್ಲದ ಆರೋಪ ಮಾಡಬಾರದು. ನಾವೆಲ್ಲ ಧರ್ಮಸ್ಥಳದ ಪರವಾಗಿದ್ದೇವೆ ಎಂದು ಬೆಂಗಳೂರಿನ ಜನ ʻಪಬ್ಲಿಕ್ ಟಿವಿʼಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  • ಸಮೀರ್ ಮುಲ್ಲಾನ ಕುತಂತ್ರಕ್ಕೆ ಕೊನೇ ಮೊಳೆ ಹೊಡೆಯೋಣ – ಚಕ್ರವರ್ತಿ ಸೂಲಿಬೆಲೆ

    ಸಮೀರ್ ಮುಲ್ಲಾನ ಕುತಂತ್ರಕ್ಕೆ ಕೊನೇ ಮೊಳೆ ಹೊಡೆಯೋಣ – ಚಕ್ರವರ್ತಿ ಸೂಲಿಬೆಲೆ

    – ಧರ್ಮಸ್ಥಳ ಪರ ಮಾತಾಡಿದ್ರೇ ಚಕ್ರವರ್ತಿಗೆ ಸೂಟ್ ಕೇಸ್ ಬಂದಿದೆ ಅಂತಾರೆ
    – ಅಣ್ಣಪ್ಪನ ನೆನೆದು ದೀಪ ಹಚ್ಚಿ ಕ್ಷಮೆ‌ ಕೇಳೋಣ ಎಂದ ಚಿಂತಕ

    ಬೆಂಗಳೂರು: ಧರ್ಮಸ್ಥಳ (Dharmasthala) ಉಳಿಸೋಣ ಹೆಸರಿನಲ್ಲಿ ʻಧರ್ಮ ರಕ್ಷಣೆʼ ಕಾರ್ಯಕ್ರಮ ಸಹಕಾರನಗರದ ರಾಘವೇಂದ್ರ ಮಠದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಇಂದು ವಿಜಯೋತ್ಸವದ ದಿನ, ಸುಳ್ಳುಗಳನ್ನೇ ಸತ್ಯ ಎಂದು ಎಲ್ಲರೂ ಅಂದುಕೊಂಡಿದ್ರು. ನಾನು ಈ ಪ್ರಕರಣದಲ್ಲಿ ವಿಚಾರ ಮಾಡದೇ ಬಂದಿಲ್ಲ. ಯಾವುದು ಸತ್ಯ ಅಂತ ತಿಳಿದೇ ಮೇಲೆಯೇ ಹೋರಾಟ ಮಾಡಿದ್ದು. ಸಮೀರ್ ಮುಲ್ಲಾನ (Sameer MD) ವಿಡಿಯೋಗಳನ್ನ ಗೊತ್ತಿಲ್ಲದೇ ಶೇರ್ ಮಾಡಿರ್ತೀರಾ. ಆದ್ದರಿಂದ ಮನೆಗೆ ಹೋಗಿ ಅಣ್ಣಪ್ಪನ ನೆನೆದು ದೀಪ ಹಚ್ಚಿ ಕ್ಷಮೆ‌ ಕೇಳೋಣ ಅಂದ್ರು. ಇದನ್ನೂ ಓದಿ: ʻಬುರುಡೆ ಚಿನ್ನಯ್ಯʼನ ಬಂಡವಾಳ ಬಯಲು – ಮುಸುಕುಧಾರಿಯ ಮುಖವಾಡ ಕಳಚಿದ್ದು ಹೇಗೆ?

    ಇನ್ನೂ ಸಮೀರ್ ಮುಲ್ಲಾನಿಂದ ಮಾಸ್ ಮೈಂಡ್ ವಾಷ್ ಆಗಿತ್ತು. ಆನೆ ಮಾವುತನ ಜಾಗ ಎಷ್ಟು? ಅಂತ ಆರೋಪ ಮಾಡೋರಿಗೆ ಗೊತ್ತಿಲ್ಲ. ಎರಡು ಸಾವಿರ ಅಡಿ ಜಾಗಕ್ಕೆ ಖಾವಂದರು ಕೊಲೆ ಮಾಡ್ತಾರಾ? ಚಕ್ರವರ್ತಿ ಸೂಲಿಬೆಲೆ ಉಜಿರೆಗೆ ಬಂದ್ರೇ ಚಪ್ಪಲಿಯಲ್ಲಿ ಹೊಡೀತಿನಿ ಎಂದು ಮಹೇಶ್ ಶೆಟ್ಟಿ ತಿಮರೊಡ್ಡಿ ಹೇಳಿದ್ದ. ಆದ್ರೇ ನಾವು ಉಜಿರೆಯ ತಿಮರೊಡ್ಡಿ ಮನೆ ಬಳಿಯೇ ಸಮಾವೇಶ ಮಾಡಿದ್ವಿ. ಧರ್ಮಸ್ಥಳದ ಆಟೋ ಚಾಲಕರು ನಮ್ಮಬೆಂಬಲಕ್ಕೆ ನಿಂತಿದ್ರು. ಇದನ್ನೂ ಓದಿ: ಧರ್ಮ ವಿಜಯ – ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌

    ಜಡ್ಜ್ ವಿರೇಂದ್ರ ಹೆಗಡೆ ಚೇಲಾ ಅಂತ ಆರೋಪ ಮಾಡಿದ್ರು. ಆದ್ರೆ ಸರ್ಕಾರ ಅಂಥವರ ವಿರುದ್ಧ ಕ್ರಮ ಕೈಗೊಂಡಿಲ್ವಲ್ಲ. ಸೌಜನ್ಯಳಿಗೆ ನ್ಯಾಯ ಕೊಡಿಸೋದು ಇವರಿಗೆ ಬೇಕಿಲ್ಲ. ಜೇಬಲ್ಲಿ ಸಾಕ್ಷಿ ಇಟ್ಟುಕೊಂಡು ಯಾಕೆ ಓಡಾಡ್ತೀರಿ? ಯಾಕೆ ಅಂದ್ರೆ ಸೌಜನ್ಯ ಹೋರಾಟಕ್ಕೆ ನ್ಯಾಯ ಬೇಕಿಲ್ಲ ಇವರಿಗೆ, ಜೈನ ಸಮುದಾಯದವರು ಗೌಡ ಸಮುದಾಯದ ಸೌಜನ್ಯಳ ರೇಪ್ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ರು. ನಿಶ್ಚಲ್ ಜೈನ್ ಅಮೆರಿಕದಿಂದ ರೇಪ್ ಮಾಡೋಕೆ ಧರ್ಮಸ್ಥಳಕ್ಕೆ ಬಂದ್ರು ಅಂದ್ರು. ಆರೋಪ ಸುಳ್ಳು ಅಂತ ಸಾಬೀತಾದ್ರೂ ಓ ಅವ್ರು ದೊಡ್ಡ ಮನುಷ್ಯರು ಅದಕ್ಕೆ ಅಂದ್ರು. ಸಾಕ್ಷ್ಯ ಕೊಟ್ರೂ ಓ ಅವರು ದೊಡ್ಡೋರು ಅಂತಾರೆ. ಇದನ್ನೂ ಓದಿ: ಧರ್ಮಸ್ಥಳ ಷಡ್ಯಂತ್ರ ಕೇಸನ್ನ ರಾಜ್ಯ ಸರ್ಕಾರವೇ NIA ಗೆ ಕೊಡಬೇಕು: ಆರ್‌.ಅಶೋಕ್‌ ಆಗ್ರಹ

    ಇನ್ನೂ ಧರ್ಮಸ್ಥಳ ಪರ ಮಾತಾಡಿದ್ರೇ ಓ ಚಕ್ರವರ್ತಿಗೆ ಸೂಟ್ ಕೇಸ್ ಬಂದಿದೆ ಅಂತಾರೆ. ಸೌಜನ್ಯಳಿಗೆ ನ್ಯಾಯ ಕೊಡಿಸ್ತೀವಿ ಅಂತ ಬೇರೆ ಹೆಣ್ಣು ಮಕ್ಕಳ ಬಗ್ಗೆ ಮಾತಾಡ್ತಾರೆ. ಧರ್ಮಸ್ಥಳ ಪರ‌ ನಿಂತವರ ಮನೆಯ ಹೆಣ್ಣು ಮಕ್ಕಳ ಬಗ್ಗೆ ಮಾತಾಡ್ತಾರೆ. ತಲೆಗಳನ್ನ ತಗೊಂಡು ಹೋಗಿ ಮುಳ್ಳಂದಿ ಗೂಡಲ್ಲಿ ಇಡುತ್ತಂತೆ. ಗಿರೀಶ್ ಮಟ್ಟಣ್ಣ ಹೊಸ ಸಿದ್ಧಾಂತ ತಂದ. SIT ಯವರು ಗುಂಡಿ ತೆಗೆಯೋದು ಬಿಟ್ಟು ಮುಳ್ಳಂದಿ‌ ಗೂಡುಗಳನ್ನ ಅಗೆಯಬೇಕಿತ್ತಂತೆ. ಖಾವಾಂದರನ್ನ ಕಾಮಾಂಧರು ಅಂದ್ರಲ್ಲ ಅದು ಷಡ್ಯಂತ್ರ. ಸುಜಾತ ಭಟ್ ರನ್ನ ವಿರೇಂದ್ರ ಹೆಗಡರ ತಮ್ಮ ರೇಪ್ ಮಾಡಿದ್ರು ಅಂಥ ನಿನ್ನೆ ಹೊಸ ಕಥೆ ಕಟ್ಟಿದ್ರು. ಏನ್ ಹೇಳೋದು ಇಂತವರಿಗೆ. ನಾನು ಅಯೋಗ್ಯ ಅಂತ ಪದ ಬಳಕೆ‌ ಮಾಡಿದ್ದಕ್ಕೆ ನನ್ನನ್ನ ಸುಪ್ರೀಂ ವರೆಗೆ ಎಳೆದ್ರು. ಸುಪ್ರೀಂ ಕೋರ್ಟ್ ಅಯೋಗ್ಯ ಪದ ಜಾತಿ‌ನಿಂದನೆ ಅಲ್ಲ ಅಂತ ಹೇಳಿದೆ. ಇನ್ಮೇಲೆ ನಾನು ಅಯೋಗ್ಯ ಪದ ಬಳಕೆಗೆ ಯಾವುದೇ ಅಡತಡೆಯಿಲ್ಲದೇ ಬಳಸಬಹುದು ಎಂದ್ರು. ಇದನ್ನೂ ಓದಿ: ಒಂದೊಂದೇ ಸತ್ಯಗಳು ಹೊರಗೆ ಬರ್ತಿದೆ: ವೀರೇಂದ್ರ ಹೆಗ್ಗಡೆ

  • ಕಲರ್‌ ಕಲರ್‌ ಕಾಗೆ ಹಾರಿಸಿದ್ದ ಸಮೀರ್‌ಗೆ ಈಗ ಬಂಧನ ಭೀತಿ

    ಕಲರ್‌ ಕಲರ್‌ ಕಾಗೆ ಹಾರಿಸಿದ್ದ ಸಮೀರ್‌ಗೆ ಈಗ ಬಂಧನ ಭೀತಿ

    ಬೆಂಗಳೂರು: ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಎಐ ವಿಡಿಯೋ ಮಾಡಿ ಕಲರ್‌ ಕಲರ್‌ ಕಾಗೆ ಹಾರಿಸಿದ್ದ ಯೂಟ್ಯೂಬರ್‌ ಸಮೀರ್‌ (Youtuber Sameer) ಮೇಲೆ ಮತ್ತೆ ಮೂರು ಎಫ್‌ಐಆರ್‌ ದಾಖಲಾಗಿದೆ.

    ಒಂದು ಪ್ರಕರಣದಲ್ಲಿ ಮಂಗಳೂರು (Mangaluru) ನ್ಯಾಯಾಲಯದಿಂದ ಜಾಮೀನು (Bail) ಸಿಕ್ಕ ಬಳಿಕ ಸಮೀರ್‌ಗೆ ಬಲ ಬಂದಿತ್ತು. ಜಾಮೀನು ಸಿಕ್ಕಿದ ಬಳಿಕ ನಾನು ಏನೇ ಮಾಡಿದರೂ ನಾನು ನಡೆಯುತ್ತಿದ್ದೆ ಎಂಬ ಭಂಡ ಧೈರ್ಯದಿಂದ ಲೈವ್‌ಗೆ ಬಂದಿದ್ದ.

    ಈಗ ಸುಜಾತ ಭಟ್‌ (Sujatha Bhat) ನನಗೆ ಮಗಳೇ ಇಲ್ಲ. ಅನನ್ಯಾ ಭಟ್‌ (Ananya Bhat) ಪಾತ್ರವನ್ನು ಗಿರೀಶ್‌ ಮಟ್ಟಣ್ಣನವರ್‌ ಮತ್ತು ಜಯಂತ್‌ ಹೇಳಿದ್ದಂತೆ ನಾನು ಹೇಳಿದ್ದೆ ಎಂದು ಹೇಳಿದ ಬೆನ್ನಲ್ಲೇ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ ಸಿಕ್ಕಿತ್ತು. ಇದನ್ನೂ ಓದಿ: Dharmasthala Case | ಎಸ್‌ಐಟಿಯಿಂದ ಮಾಸ್ಕ್‌ ಮ್ಯಾನ್‌ ಅರೆಸ್ಟ್

     
    ಈಗ ಮುಸುಕುಧಾರಿ ಚಿನ್ನಯ್ಯನನ್ನು ವಿಶೇಷ ತನಿಖಾ ತಂಡ (SIT) ಬಂಧಿಸಿದ ಬೆನ್ನಲ್ಲೇ ಸಮೀರ್‌ಗೆ ಬಂಧನ ಭೀತಿ ಎದುರಾಗಿದೆ. ಇನ್ನೊಂದು ಕಡೆ ಜಾರಿ ನಿರ್ದೇಶನಾಲಯ (ED) ಕೂಡ ದಾಖಲೆಗಳನ್ನು ಕೆದಕಲು ಆರಂಭಿಸಿದೆ.

    ಈಗಾಗಲೇ ಪೊಲೀಸರು ಬಳ್ಳಾರಿಯ ನಿವಾಸಕ್ಕೆ ತೆರಳಿ ನೋಟಿಸ್‌ ಅಂಟಿಸಿದ್ದಾರೆ. ಬಂಧನ ಭೀತಿಯಲ್ಲಿರುವ ಸಮೀರ್‌ ಈಗ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ.

    ಒಂದು ಪ್ರಕರಣದಲ್ಲಿ ಜಾಮೀನು ಪಡೆದಿರುವ ಸಮೀರ್‌ ನಾಳೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಬೇಕಿದೆ. ಒಂದು ವೇಳೆ ನಾಳೆ ವಿಚಾರಣೆಗೆ ಹಾಜರಾಗದೇ ಇದ್ದರೆ ಕೋರ್ಟ್‌ ಆದೇಶ ಉಲ್ಲಂಘನೆಯಾಗಿ ನ್ಯಾಯಾಂಗ ನಿಂದನೆಯಾಗಲಿದೆ.

     

  • ಪೊಲೀಸರು ಬರುತ್ತಿದ್ದಂತೆ ಯೂಟ್ಯೂಬರ್‌ ಸಮೀರ್‌ ನಾಪತ್ತೆ

    ಪೊಲೀಸರು ಬರುತ್ತಿದ್ದಂತೆ ಯೂಟ್ಯೂಬರ್‌ ಸಮೀರ್‌ ನಾಪತ್ತೆ

    ಬೆಂಗಳೂರು: ಧರ್ಮಸ್ಥಳ ಕ್ಷೇತ್ರಕ್ಕೆ (Dharmasthala Temple) ಅವಮಾನ ಎಸಗಿದ ಸಮೀರ್‌ (Youtuber Sameer)  ಬಂಧನಕ್ಕೆ ಹೋದಾಗ ಆತ ನಾಪತ್ತೆಯಾಗಿರುವುದು ವಿಚಾರ ಬೆಳಕಿಗೆ ಬಂದಿದೆ.

    ಸಮೀರ್‌ ವಿರುದ್ಧ ಸರಣಿ ದೂರುಗಳು ರಾಜ್ಯಾದ್ಯಂತ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಗೃಹ ಇಲಾಖೆ ಆತನ ಬಂಧನಕ್ಕೆ ಸೂಚಿಸಿತ್ತು. ಅದರಂತೆ ಆತನ ಮೊಬೈಲ್‌ ಸಂಖ್ಯೆಯ ಮೂಲಕ ಜಾಗ ಪತ್ತೆ ಹಚ್ಚಿದಾಗ ಬನ್ನೇರುಘಟ್ಟದ ನಿವಾಸ ತೋರಿಸಿತ್ತು.

    ಈ ಆಧಾರದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಧರ್ಮಸ್ಥಳ ಠಾಣೆಯ ಸಬ್ ಇನ್ಸ್‌ಪೆಕ್ಟರ್‌, ಇಬ್ಬರು ಪೊಲೀಸ್ ಸಿಬ್ಬಂದಿ ಸಮೀರ್‌ನನ್ನು ಬಂಧಿಸಲು ಜಿಗಣಿಯ ಹುಲ್ಲಳ್ಳಿಯ ಕ್ರೈಸ್ಟ್ ಕಾಲೇಜು ಪಕ್ಕದಲ್ಲಿರುವ ಮನೆಗೆ ಬಂದಿದ್ದಾರೆ. ಧರ್ಮಸ್ಥಳ ಪೊಲೀಸರಿಗೆ ಬನ್ನೇರುಘಟ್ಟ ಪೊಲೀಸರು ಸಾಥ್‌ ನೀಡಿದ್ದಾರೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್, ತಿಮರೋಡಿ, ಸಮೀರ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು

     

    ತಾಯಿ, ಸಹೋದರಿ ಜೊತೆ ನೆಲೆಸಿದ್ದ ಸಮೀರ್‌ ಪೊಲೀಸರು ಮನೆಗೆ ಬಂದಾಗ ಆತ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಇಲ್ಲದ ಕಾರಣ ಸಮೀರ್‌ ಬಂದ ತಕ್ಷಣ ತಿಳಿಸುವಂತೆ ಕುಟುಂಬಸ್ಥರಿಗೆ ತಿಳಿಸಿ ಪೊಲೀಸರು ತೆರಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದ‌ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್‌ ಟಿವಿʼ ಮಾಸ್ಕ್‌ ಮ್ಯಾನ್‌ ಊರು ಯಾವ್ದು? ಓದಿದ್ದೇನು?

    ಈಗಾಗಲೇ ಸಮೀರ್‌ಗೆ ಮೂರು ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ಮೂರು ಬಾರಿ ನೋಟಿಸ್ ನೀಡಿದರೂ ಪ್ರತಿಕ್ರಿಯೆ ನೀಡಿಲ್ಲ.ಹೀಗಾಗಿ ವಾರೆಂಟ್ ಪಡೆದು ಪೊಲೀಸರು ಬಂಧನಕ್ಕೆ ಆಗಮಿಸಿದ್ದರು.

  • ಯಾವುದೇ ಕ್ಷಣದಲ್ಲಿ ಯೂಟ್ಯೂಬರ್‌ ಸಮೀರ್‌ ಅರೆಸ್ಟ್‌ ಸಾಧ್ಯತೆ

    ಯಾವುದೇ ಕ್ಷಣದಲ್ಲಿ ಯೂಟ್ಯೂಬರ್‌ ಸಮೀರ್‌ ಅರೆಸ್ಟ್‌ ಸಾಧ್ಯತೆ

    ಬೆಂಗಳೂರು: ಧರ್ಮಸ್ಥಳ (Dharmasthala Temple) ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸಿದ್ದಕ್ಕೆ ಯೂಟ್ಯೂಬರ್‌ ಸಮೀರ್‌ (Youtber Sameer) ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆಯಿದೆ.

    ಬನ್ನೇರುಘಟ್ಟದಲ್ಲಿರುವ ಸಮೀರ್ ಬಾಡಿಗೆ ಮನೆ‌ಗೆ ಧರ್ಮಸ್ಥಳ ಪೊಲೀಸರು ಆಗಮಿಸಿದ್ದಾರೆ. ಈಗಾಗಲೇ ಸಮೀರ್ ಮನೆಯನ್ನು ಪೊಲೀಸರು ಸುತ್ತುವರೆದಿದ್ದಾರೆ.

    ಇಂದು ಬೆಳಗ್ಗೆ ಧರ್ಮಸ್ಥಳ ಪೊಲೀಸರು ಬನ್ನೇರುಘಟ್ಟಕ್ಕೆ ಆಗಮಿಸಿದ್ದಾರೆ. ಆದರೆ ಖಚಿತವಾಗಿ ವಿಳಾಸ ಸಿಕ್ಕಿರಲಿಲ್ಲ, ಈಗ ಮನೆಯನ್ನು ಸುತ್ತುವರೆದು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

     

    ಧರ್ಮಸ್ಥಳ ಕ್ಷೇತ್ರಕ್ಕೆ ಅಪಪ್ರಚಾರ ನಡೆಸಿದ್ದಕ್ಕೆ ರಾಜ್ಯದ್ಯಂತ ಆತನ ವಿರುದ್ಧ ಹಿಂದೂ ಸಂಘಟನೆಗಳು ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.  ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಮೀರ್‌ ಅನ್ನು ಬಂಧನ ಮಾಡುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದರು. ಇದನ್ನೂ ಓದಿ:ಧರ್ಮಸ್ಥಳ ಪ್ರಕರಣದ‌ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್‌ ಟಿವಿʼ – ಮಾಸ್ಕ್‌ ಮ್ಯಾನ್‌ ಊರು ಯಾವ್ದು? ಓದಿದ್ದೇನು?

    ಒಂದು ಧರ್ಮ, ಧಾರ್ಮಿಕ ಕ್ಷೇತ್ರವನ್ನು ಅವಹೇಳನ ಮಾಡುವಂತಿಲ್ಲ. ಹೀಗಿದ್ದರೂ ಧರ್ಮಸ್ಥಳ ದೇವಸ್ಥಾನದ ವಿರುದ್ಧ ಎಐ ವಿಡಿಯೋ ಪ್ರಕಟಿಸಿ ಅವಹೇಳನ ಮಾಡಿದ್ದರೂ ಯಾಕೆ ಇನ್ನೂ ಆತನ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಜನರು ಸರ್ಕಾರವನ್ನು ಪ್ರಶ್ನಿಸುತ್ತಿದ್ದರು. ಜನರ ಆಗ್ರಹ ಜೋರಾಗುತ್ತಿದ್ದಂತೆ ಈಗ ಗೃಹ ಇಲಾಖೆ  ಎಚ್ಚೆತ್ತುಕೊಂಡಿದೆ.

    ಸಮೀರ್‌ ನಾಪತ್ತೆ: ಪಬ್ಲಿಕ್‌ ಟಿವಿಗೆ ಸಿಕ್ಕಿದ ಮಾಹಿತಿ ಪ್ರಕಾರ ಸಮೀರ್‌ ಈಗ ನಾಪತ್ತೆಯಾಗಿದ್ದಾನೆ. ಪೊಲೀಸರು ಈಗ ಆತನ ಪತ್ತೆಗೆ ಬಲೆ ಬೀಸಿದ್ದಾರೆ.

    ಈಗಾಗಲೇ ಸಮೀರ್ಗೆ ಮೂರು ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ಮೂರು ಬಾರಿ ನೋಟಿಸ್ ನೀಡಿದರೂ ಪ್ರತಿಕ್ರಿಯೆ ನೀಡಿಲ್ಲ.ಹೀಗಾಗಿ ವಾರೆಂಟ್ ಪಡೆದು ಪೊಲೀಸರು ಬಂಧನಕ್ಕೆ ಆಗಮಿಸಿದ್ದರು.