Tag: Dharmasthala SIT

  • ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ತಿರುವು – ಸೌಜನ್ಯ ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಪಡೆದವರಿಗೆ SIT ಬುಲಾವ್‌

    ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ತಿರುವು – ಸೌಜನ್ಯ ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಪಡೆದವರಿಗೆ SIT ಬುಲಾವ್‌

    – ಬುರುಡೆ ಪ್ರಕರಣ ದಿಕ್ಕು ತಪ್ಪಿಸುವ ಹುನ್ನಾರ, ಯಾವ್ದೇ ತನಿಖೆಗೆ ಸಿದ್ಧ: ಉದಯ್‌ ಕುಮಾರ್‌ ಜೈನ್‌
    – ಸೌಜನ್ಯ ಮನೆ ಮೇಲೆ ಇಡಿ ರೇಡ್‌ ಆಗಲಿ ಅಂತ ಒತ್ತಾಯ

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ (Dharmasthala Case) ಈಗ ಬಹುದೊಡ್ಡ ತಿರುವು ಸಿಕ್ಕಿದೆ. ಸೌಜನ್ಯ ಪ್ರಕರಣದ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿತಾ ಅನ್ನೋ ಕುತೂಹಲ ಶುರುವಾಗಿದೆ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ (Soujanya Case) ಆರೋಪ ಹೊತ್ತು ಕ್ಲೀನ್‌ಚಿಟ್‌ ಪಡೆದವರಿಗೆ ವಿಶೇಷ ತನಿಖಾ ತಂಡ ಬುಲಾವ್‌ ನೀಡಿರುವುದು ಇದಕ್ಕೆ ಕಾರಣವಾಗಿದೆ.

    ಕರ್ನಾಟಕ ಪೊಲೀಸ್‌, ಸಿಬಿಐ ತನಿಖೆ ಬಳಿಕವೂ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ಪಡೆದುಕೊಂಡಿದ್ದ ಉದಯ್ ಕುಮಾರ್ ಜೈನ್ ಸೇರಿದಂತೆ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್‌ಗೆ ಎಸ್‌ಐಟಿ ಬುಲಾವ್‌ ನೀಡಿದೆ. ಹೀಗಾಗಿ ಆರೋಪ ಹೊತ್ತ ಉದಯ್‌ ಕುಮಾರ್ ಜೈನ್ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶಿ ಫಂಡಿಂಗ್‌ – ತನಿಖೆಗೆ ಇಡಿ ಎಂಟ್ರಿ

    ಎಸ್‌ಐಟಿ ಕಚೇರಿಗೆ ಭೇಟಿ ನೀಡುವ ಮುನ್ನ ʻಪಬ್ಲಿಕ್ ಟಿವಿʼ ಜೊತೆಗೆ ಉದಯ್ ಕುಮಾರ್ ಜೈನ್ ಮಾತನಾಡಿದ್ದಾರೆ. ಸೌಜನ್ಯ ತಾಯಿ ಎಸ್‌ಐಟಿಗೆ ಕೊಟ್ಟ ದೂರಿನ ಮೇರೆಗೆ ಅಥವಾ ಚಿನ್ನಯ್ಯ ನೀಡಿದ ಕೇಳಿಕೆಯ ಕಾರಣದಿಂದಲೂ ನನ್ನನ್ನ ಎಸ್‌ಐಟಿ ಕರೆದಿರಬಹುದು. ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುಡಾನ್‌ನಲ್ಲಿ ಭೂಕುಸಿತಕ್ಕೆ ಇಡೀ ಗ್ರಾಮವೇ ಭೂಸಮಾಧಿ – 1,000 ಜನ ಬಲಿ; ಬದುಕುಳಿದಿದ್ದು ಒಬ್ಬ ಮಾತ್ರ

    ಮುಂದುವರಿದು.. ಇದು ಬುರುಡೆ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ. ಒಂದು ವಿಡಿಯೋನಲ್ಲಿ ಸೌಜನ್ಯ ಕೊಲೆಯಾದ ಸಂದರ್ಭದಲ್ಲಿ ನಾನು ಇರಲಿಲ್ಲ ಅಂತ ಒಂದು ವಿಡಿಯೋನಲ್ಲಿ ಹೇಳಿದ್ದಾನೆ. ಮತ್ತೊಂದು ವಿಡಿಯೋನಲ್ಲಿ ನಾನೇ ಆಕೆಯನ್ನ ಹೊತ್ಕೊಂಡು ಹೋಗೋದು ನೋಡಿದ್ದೇನೆ ಅಂತ ಹೇಳಿದ್ದಾನೆ. ಸಿನಿಮೀಯ ರೀತಿಯಲ್ಲಿ ಕಥೆ ಕಟ್ಟಿದ್ದಾನೆ. ಈಗ ಸೌಜನ್ಯ ಪ್ರಕರಣದಲ್ಲಿ ನನ್ನ ಬಗ್ಗೆ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಈಗಾಗಲೇ ಗುಂಡಿ ಎಲ್ಲಾ ತೋಡಿಯಾಗಿದೆ, ಈಗ ವಿಷಯಾಂತರ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಬುರುಡೆ ಪ್ರಕರಣ ಮುಚ್ಚಿ ಹಾಕಲು ಈ ಪ್ರಕರಣವನ್ನ ಮತ್ತೆ ಮುನ್ನಲೆಗೆ ತರುತ್ತಿದ್ದಾರೆ. ಸಿಐಡಿ, ಸಿಬಿಐ ನನ್ನನೂ ತನಿಖೆ ನಡೆಸಿದ್ದಾರೆ. ಬ್ರೈನ್ ಮ್ಯಾಪಿಂಗ್ ಕೂಡ ಮಾಡಿದ್ದಾರೆ, ಇವತ್ತು ಮತ್ತೆ ಎಸ್‌ಐಟಿ ಕರೆದಿದ್ದಾರೆ. ನಾವು ಯಾವುದೇ ವಿಚಾರಣೆಗೂ ಸಿದ್ಧ ಎಂದು ಉದಯ್‌ ಕುಮಾರ್‌ ಜೈನ್‌ ಹೇಳಿದ್ದಾರೆ. ಇದನ್ನೂ ಓದಿ: ಕಾನ್‌ಸ್ಟೆಬಲ್‌, ಸಹೋದರ ಸೇರಿ 7 ವರ್ಷಗಳಿಂದ ಚಿಕ್ಕಮ್ಮನ ಮೇಲೆ ಅತ್ಯಾಚಾರ ಆರೋಪ

    ಸೌಜನ್ಯ ಮನೆ ಮೇಲೆ ಇಡಿ ದಾಳಿಯಾಗಲಿ
    ಸೌಜನ್ಯ ಸತ್ತು ಒಂದು ವರ್ಷದ ನಂತರ ನಮ್ಮ ಹೆಸರು ಸೇರಿಸುವ ಕುತಂತ್ರ ನಡೆಯಿತು. ಆದ್ರೆ ಲೋಕಲ್‌ ಪೊಲೀಸ್‌ ತನಿಖೆ ವೇಳೆ ಎಫ್‌ಐಆರ್‌ನಲ್ಲಿ ನನ್ನ ಹೆಸರೇ ಇರಲಿಲ್ಲ. ಗೌರ್ಮೆಂಟ್‌ ವಕೀಲನನ್ನ ಕ್ಯಾಚ್‌ ಮಾಡಿ ಕುತಂತ್ರ ನಡೆಸಿದ್ರು. ಈಗ ನಮ್ಮನ್ನೆಲ್ಲಾ ದಿಕ್ಕಾಪಾಲು ಮಾಡಿ ಸೌಜ್ಯ ತಾಯಿ ದೊಡ್ಡ ಮನೆಯಲ್ಲಿ ಆರಾಮಾಗಿದ್ದಾರೆ. ಅವರ ಮನೆ ಮೇಲೂ ಇಡಿ ರೇಡ್‌ ಆಗಬೇಕು ಅಂತ ಒತ್ತಾಯಿಸಿದ್ದಾರೆ.

  • ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್‌ ಯಾತ್ರೆ

    ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್‌ ಯಾತ್ರೆ

    – ನಾಳೆ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗ ಧರ್ಮಸ್ಥಳ ಭೇಟಿ

    ಬೆಂಗಳೂರು: ಧರ್ಮಸ್ಥಳದಲ್ಲಿ ಎಸ್‌ಐಟಿ (Dharmasthala SIT) ತನಿಖೆಯಲ್ಲಿ ಕಳೇಬರ ಸಿಗದ ಬೆನ್ನಲ್ಲೆ ದೇಗುಲಕ್ಕೆ ಅಪಪ್ರಚಾರ ಎಸಗಲಾಗುತ್ತಿದೆ ಅಂತಾ ದೇಗುಲದ ಭಕ್ತರ ಆಕ್ರೋಶ ಹೆಚ್ಚಾಗಿದೆ. ಮತ್ತೊಂದು ಕಡೆ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ರೆ ಇನ್ನೊಂದು ಕಡೆ ಹಿಂದೂ ಸಂಘಟನೆಗಳು ಬೆಂಗಳೂರಿನಲ್ಲಿ (Bengaluru) ಹೋರಾಟಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.

    ಈ ನಡುವೆ ಶಾಸಕ ಎಸ್.ಆರ್ ವಿಶ್ವನಾಥ್ (S.R Vishwanath) ನೇತೃತ್ವದಲ್ಲಿ ಇಂದು (ಆ.16) ಧರ್ಮಸ್ಥಳಕ್ಕೆ (Dharmasthala) 500 ಕಾರುಗಳಲ್ಲಿ ಬಿಜೆಪಿ (BJP) ಕಾರ್ಯಕರ್ತರು ಹೊರಡಲಿದ್ದಾರೆ. ಈಗಾಗಲೇ ಕಾರುಗಳು ಜಮಾವಣೆಗೊಂಡಿದ್ದು, ನೆಲಮಂಗಲ-ಕುಣಿಗಲ್ ರಸ್ತೆಯ ಕುಣಿಗಲ್ ಟೋಲ್‌ಗೇಟ್‌ನಿಂದ ಯಾತ್ರೆ ಹೊರಡಲಿವೆ. ಇದನ್ನೂ ಓದಿ: ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್‌ ಪಾಸ್‌ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಯಲಹಂಕದಿಂದ (Yelahanka) ಕಾರ್ಯಕರ್ತರು ಹೊರಡಲಿದ್ದಾರೆ. ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ, ಧರ್ಮಸ್ಥಳಕ್ಕೆ ಹೊರಡಲಿದ್ದಾರೆ. ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ ಸುಮಾರು 3 ಗಂಟೆಗೆ ವಿಶ್ವನಾಥ್ ತಂಡ ಧರ್ಮಸ್ಥಳ ತಲುಪಲಿದೆ. ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಹೆಸರು ಕೆಡಿಸಲು ಕಮ್ಯುನಿಸ್ಟರು, ಬುದ್ಧಿಜೀವಿಗಳು, ಕಾಂಗ್ರೆಸ್‌ನ ಕೆಲ ಹಿಂದೂ ವಿರೋಧಿಗಳಿಂದ ಷಡ್ಯಂತ್ರ: ಯತ್ನಾಳ್

    ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗವೂ ಭಾನುವಾರ (ಆ.17) ಧರ್ಮಸ್ಥಳಕ್ಕೆ ಭೇಟಿ ಮಾಡಲಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದಲ್ಲಿರಲಿದ್ದಾರೆ. ಬಿಜೆಪಿ ನಾಯಕರು ಧರ್ಮಾಧಿಕಾರಿಗಳನ್ನೂ ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ – ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಜಪಿಸಲು VHP ಕರೆ

  • ಧರ್ಮಸ್ಥಳ ಕೇಸ್‌ | ತೀವ್ರ ಕುತೂಹಲ ಕೆರಳಿಸಿದ್ದ 13ನೇ ಸ್ಪಾಟ್‌ನಲ್ಲಿ GPR ಮೂಲಕ ಶೋಧ

    ಧರ್ಮಸ್ಥಳ ಕೇಸ್‌ | ತೀವ್ರ ಕುತೂಹಲ ಕೆರಳಿಸಿದ್ದ 13ನೇ ಸ್ಪಾಟ್‌ನಲ್ಲಿ GPR ಮೂಲಕ ಶೋಧ

    – ತನಿಖೆಗಿಳಿದ ಮಾನವ ಹಕ್ಕುಗಳ ಆಯೋಗ

    ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ (Dharmasthala Burials Case) ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಯ ವಿಚಾರಣೆ ನಡೆಯುತ್ತಿದೆ. ಎಸ್‌ಐಟಿ ಈಗಾಗಲೇ ಅರ್ಧ ತಿಂಗಳು ಕೆಲಸ ಮಾಡಿದೆ. ಕಳೆದೆರಡು ವಾರಗಳಿಂದ ಎಸ್‌ಐಟಿ (SIT) ಕಾಲಿಗೆ ಚಕ್ರ ಕಟ್ಟಿಕೊಂಡು ಸಮಾಧಿ ಅಗೆದು ಶೋಧ ನಡೆಸಲಾಗುತ್ತಿದೆ.

    ಅನಾಮಿಕ ಕೊಟ್ಟ ದೂರು ಸತ್ಯನಾ ಸುಳ್ಳಾ? ಎಂದು ವಿಚಾರಣೆ ಜೊತೆ ತನಿಖೆ ನಡೆಸುತ್ತಿದೆ. ಇಂದು ತೀವ್ರ ಕುತೂಹಲ ಕೆರಳಿದ್ದ ಪಾಯಿಂಟ್‌ ನಂ.13ರಲ್ಲಿ ಶೋಧ ನಡೆಸುತ್ತಿದೆ. ಮೊದಲಿಗೆ ಮೌಂಡೆಟ್‌ ಜಿಪಿಆರ್‌ ಡ್ರೋನ್‌ನಲ್ಲಿ (GPR Drone) ಶೋಧ ನಡೆಸಿದ ಬಳಿಕ ಏಕಕಾಲಕ್ಕೆ ಎರಡು ಹಿಟಾಚಿ ಬಳಸಿ ಗುಂಡಿ ಅಗೆಯಲಾಗುತ್ತಿದೆ. 20 ವರ್ಷಗಳಲ್ಲಿ ಹಿಂದೆ ಭೌಗೋಳಿಕವಾಗಿ ಬದಲಾವಣೆ ಆಗಿರುವ ಹಿನ್ನೆಲೆ, ಗುರುತು ಮಾಡಿರುವ ಪ್ರದೇಶವನ್ನ ಸಮತಟ್ಟುಗೊಳಿಸಲಾಗುತ್ತದೆ. ಬಳಿಕ ಮತ್ತೊಮ್ಮೆ ಡ್ರೋನ್‌ ಜಿಪಿಆರ್‌ ಮೂಲಕ ತಪಾಸಣೆ ನಡೆಸಿ ಶವಕ್ಕಾಗಿ ಶೋಧಿಸಲು ಎಸ್‌ಐಟಿ ಮುಂದಾಗಲಿದೆ. ಇದನ್ನೂ ಓದಿ: ವಿಧಾನಸಭೆಯಲ್ಲೂ ಧರ್ಮಸ್ಥಳ ಪ್ರಕರಣ ಸದ್ದು – ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರ ಪಟ್ಟು

    ಎಸ್‌ಐಟಿ ಅಧಿಕಾರಿಗಳು ಬಹಳ ಮುತುವರ್ಜಿಯಿಂದ ಎಲ್ಲಾ ತನಿಖೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು ಮತ್ತು ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಪಂಚಾಯತ್, ಠಾಣೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಆ ಕಾಲಮಾನದಲ್ಲಿ ಕೆಲಸ ಮಾಡಿದ ಎಲ್ಲರ ಸಾಕ್ಷಿಗಳ ಸಂಗ್ರಹ ನಡೆಸಲಾಗುತ್ತಿದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | SIT ಭೇಟಿಯಾದ ಪದ್ಮಲತಾ ಕುಟುಂಬ – 38 ವರ್ಷಗಳ ಹಳೆಯ ಕೇಸ್ ತನಿಖೆಗೆ ಒತ್ತಾಯ

    ತನಿಖೆಗಿಳಿದ ಮಾನವ ಹಕ್ಕುಗಳ ಆಯೋಗ
    ಇನ್ನೂ ಜಿಪಿಆರ್ ಮೂಲಕ ಶೋಧಕಾರ್ಯ ನಡೆಯುತ್ತಿರುವಾಗಲೇ ಪ್ರಕರಣಕ್ಕೆ ಮಾನವ ಹಕ್ಕುಗಳ ಆಯೋಗ ಎಂಟ್ರಿ ಕೊಟ್ಟಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಬೀಡು ಬಿಟ್ಟ ನಾಲ್ವರು ಅಧಿಕಾರಿಗಳ ತಂಡದಲ್ಲಿ ಓರ್ವ ಐಪಿಎಸ್ ಅಧಿಕಾರಿಯಿದ್ದಾರೆ. ವಿವಿಧ ಆಯಾಮಗಳಲ್ಲಿ ದಾಖಲೆ ಮತ್ತು ಮಾಹಿತಿಗಳ ಸಂಗ್ರಹ ಮಾಡುತ್ತಿದ್ದಾರೆ. ಎಸ್‌ಐಟಿ, ಪೊಲೀಸ್ ಸ್ಟೇಷನ್, ದೇವಸ್ಥಾನ, ಗ್ರಾಮ ಪಂಚಾಯಿತಿಯಿಂದ ದಾಖಲೆಗಳನ್ನು ಕೇಳಿದ ಮಾನವ ಹಕ್ಕುಗಳ ಆಯೋಗ, ಸ್ವಚ್ಛತಾ ಕಾರ್ಮಿಕರಿಂದ ಹೇಳಿಕೆಗಳನ್ನ ಸಂಗ್ರಹ ಮಾಡುತ್ತಿದೆ. ಆಯೋಗ ಗೌಪ್ಯವಾಗಿ ಹಲವರ ಭೇಟಿ ಮಾಡಿ ವಿಚಾರಣೆಗೈದಿದೆ. ಮುಂದಿನ ನಾಲ್ಕೈದು ದಿನ ಧರ್ಮಸ್ಥಳದಲ್ಲಿ ಬೀಡು ಬಿಡಲಿರುವ ಮಾನವ ಹಕ್ಕುಗಳ ಆಯೋಗ ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಿ ವರದಿ ಸಿದ್ಧಪಡಿಸಲಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಇಂದು ಪಾಯಿಂಟ್ 17ರಲ್ಲಿ ಉತ್ಖನನ – ಸಿಗುತ್ತಾ ಬುರುಡೆ, ಮೂಳೆ ಕುರುಹು?

    ಸ್ವಯಂಪ್ರೇರಿತ ಪ್ರಕರಣ ದಾಖಲು
    ಧರ್ಮಸ್ಥಳದಲ್ಲಿ ಅನಾಮಿಕ ಶವ ಹೂತ ಕೇಸ್‌ಗೆ ಸಂಬಂಧಿಸಿದಂತೆ ಎನ್‌ಎಚ್‌ಆರ್‌ಸಿ ಸ್ವಯಂಪ್ರೇರಿತ ದಾಖಲಿಸಿಕೊಂಡಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಕಾರ್ಯಾಚರಣೆ ನಡೆಸುತ್ತಿದ್ದು, ಎಸ್‌ಐಟಿ ಪೊಲೀಸ್ ಠಾಣೆ, ಧರ್ಮಸ್ಥಳ ಠಾಣೆಗಳಿಗೂ ಭೇಟಿ ಕೊಟ್ಟಿದೆ. ಕಳೆದ ರಾತ್ರಿ 10 ಗಂಟೆವರೆಗೂ ತನಿಖೆಯ ಅಖಾಡದಲ್ಲಿದ್ದ ಎನ್‌ಎಚ್‌ಆರ್‌ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮಾಡಿದೆ. ಈಗಾಗಲೇ ಶೋಧ ನಡೆಸಿರುವ ಪಾಯಿಂಟ್‌ಗಳಿಗೆ ಭೇಟಿ ಕೊಟ್ಟಿರುವ ತಂಡ, ಒಂದು ವಾರಗಳ ಕಾಲ ತಾಲೂಕಿನಲ್ಲಿದ್ದುಕೊಂಡು ಹಲವು ಆಯಾಮಗಳಲ್ಲಿ ತನಿಖೆ ನಡೆಸಲು ಸಿದ್ಧತೆ ನಡೆಸಿದೆ.

    ಒಟ್ಟಾರೆ, ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ನಿಗೂಢ ಪ್ರಕರಣಕ್ಕೆ ಧುಮುಕಿರುವ ಮಾನವ ಹಕ್ಕುಗಳ ಆಯೋಗ ಗೌಪ್ಯವಾಗಿ ಹಲವರ ವಿಚಾರಣೆ ನಡೆಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ವಿಚಾರಣೆಗೊಳಪಡಿಸಿ ಶವಗಳ ಹೂತಿಟ್ಟ ಕೇಸ್‌ಗೆ ಅಂತ್ಯ ಹಾಡುತ್ತಾ ಕಾದುನೋಡಬೇಕಿದೆ. ಇದನ್ನೂ ಓದಿ: ಧರ್ಮಸ್ಥಳ ನಿಗೂಢ ಶವ ಕೇಸಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ

  • ಗ್ರೌಂಡ್‌ ಪೆನೆಟ್ರೇಟಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್‌

    ಗ್ರೌಂಡ್‌ ಪೆನೆಟ್ರೇಟಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್‌

    – ಎಸ್‌ಐಟಿ ದಿಕ್ಕು ತಪ್ಪಿಸಿದ್ನಾ ದೂರುದಾರ? – ಮಫ್ತಿಯಲ್ಲಿ ಫೀಲ್ಡಿಂಗಿಳಿದ ಖಾಕಿ ಟೀಂ

    ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದ 10 ಪಾಯಿಂಟ್‌ಗಳಲ್ಲಿ ಶೋಧ ನಡೆಸಿದ್ರೂ ಒಂದೂ ಅಸ್ಥಿಪಂಜರ ಸಿಗದ ಹಿನ್ನೆಲೆ ದೂರುದಾರ ಎಸ್‌ಐಟಿ ಅಧಿಕಾರಿಗಳಿಗೆ ಹೊಸ ಮನವಿಯೊಂದನ್ನ ಮಾಡಿದ್ದಾನೆ. ಗ್ರೌಂಡ್‌ ಪೆನೆಟ್ರೇಟಿಂಗ್ ರೇಡಾರ್‌ (Ground Penetrating Radar) ಬಳಸಿ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾನೆ.

    ಪೆನೆಟೇರಿಂಗ್ ರೇಡಾರ್‌ನಲ್ಲಿ ಸರ್ವೆಗೆ ಮನವಿ
    ಇನ್ನೂ 6 ದಿನ ಕಳೆದರೂ ಅಸ್ಥಿಪಂಜರ ಸಿಗದೇ ಬೇಸತ್ತ ಹಿನ್ನೆಲೆ ಅನಾಮಿಕ ಎಸ್‌ಐಟಿಯ (SIT) ಮುಂದೆ ಹೊಸದೊಂದು ಮನವಿ ಇಟ್ಟಿದ್ದಾನೆ. ಶವಗಳನ್ನು ಹೂತಿರೋದು 15-20 ವರ್ಷಗಳ ಹಿಂದೆ ಈ ಸಂದರ್ಭದಲ್ಲಿ ಭೌಗೋಳಿಕವಾಗಿ ಸಾಕಷ್ಟು ಬದಲಾವಣೆ ಆಗಿದೆ. ಹೀಗಾಗಿ ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್‌ ಮೂಲಕ ಸರ್ವೆ ಮಾಡುವಂತೆ ಮನವಿ ಮಾಡಿದ್ದಾನೆ. ಈ ರಡಾರ್ ಭೂಮಿಯ ಒಳಗೆ ಏನಿದೆ ಅನ್ನೋದನ್ನ ಪತ್ತೆ ಹಚ್ಚುತ್ತೆ, ಗುಂಡಿ ತೆಗೆಯದೇ ಸ್ಕ್ಯಾನ್ ಮಾಡಬಹುದಾಗಿದೆ. ಹೀಗಾಗಿ ಆ ಯಂತ್ರವನ್ನು ಬಳಸಿ ಅಸ್ಥಿಪಂಜರ ಪತ್ತೆಗೆ ಮನವಿ ಮಾಡಿದ್ದಾನೆ. ದೂರುದಾರನ ಮನವಿಯನ್ನು ಎಸ್‌ಐಟಿ ಮಾನ್ಯ ಮಾಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

    ಇನ್ನೂ ಈವರೆಗೆ ಶೋಧ ನಡೆಸಿರುವ 10 ಪಾಯಿಂಟ್‌ಗಳಲ್ಲಿ ಎಷ್ಟು ಅಡಿ ಆಳ, ಎಷ್ಟು ಅಡಿ ಅಗಲ ತೆಗೆಯಲಾಯ್ತು? ಏನೆಲ್ಲಾ ಸಾಕ್ಷ್ಯ ಸಿಕ್ತು ಅನ್ನೋ ಮಾಹಿತಿ ನೋಡೊದಾದ್ರೆ…

    * 8ನೇ ಪಾಯಿಂಟ್
    ಆಳ: 6 ಅಡಿ
    ಅಗಲ: 5 ಅಡಿ
    ಕಳೇಬರ ಸಿಕ್ಕಿಲ್ಲ

    * 9ನೇ ಪಾಯಿಂಟ್
    ಆಳ: 6 ಅಡಿ
    ಅಗಲ: 5 ಅಡಿ
    ಕಳೇಬರ ಸಿಕ್ಕಿಲ್ಲ

    * 10ನೇ ಪಾಯಿಂಟ್
    ಆಳ: 6 ಅಡಿ
    ಅಗಲ: 5 ಅಡಿ
    ಕಳೇಬರ ಸಿಕ್ಕಿಲ್ಲ

    ಎಸ್‌ಐಟಿ ದಿಕ್ಕು ತಪ್ಪಿಸಿದ್ನಾ ದೂರುದಾರ?
    ಸಮಾಧಿ ಇದೆ ಎಂದು ತೋರಿಸಲಾದ 10 ಸ್ಥಳದಲ್ಲಿ ಈವರೆಗೆ ಯಾವುದೇ ಮಹತ್ವದ ಅಂಶಗಳು ಲಭ್ಯವಾಗಿಲ್ಲ. ಇನ್ನು ಮೂರು ಪಾಯಿಂಟ್‌ಗಳಲ್ಲಿ ಇಂದು ಶೋಧ ನಡೆಯಲಿದೆ. ಈ ನಡುವೆ ಪೊಲೀಸರು ಒಂದು ಹೊಸ ಟಾಸ್ಕ್‌ಗೆ ಇಳಿದಿದ್ದಾರೆ. ಮಾರುವೇಶದಲ್ಲಿ ಧರ್ಮಸ್ಥಳ ಮತ್ತು ಬೆಳ್ತಂಗಡಿ ಗ್ರಾಮವನ್ನು ಸುತ್ತಾಡುತ್ತಿದ್ದಾರೆ. ದೂರುದಾರ ಹೇಳಿದಂತಹ ಮಾಹಿತಿಗಳಿಗೆ ಮ್ಯಾಚ್ ಆಗುವ ಯಾವುದಾದರೂ ಕುರುಹುಗಳು ಇದೆಯಾ ಎಂದು ಮಾಹಿತಿ ಕಲೆಹಾಕುತ್ತಿದ್ದಾರೆ. ದೂರುದಾರನನ್ನ ಹೊರತುಪಡಿಸಿ ಯಾವುದಾದರೂ ಮಹತ್ವದ ದಾಖಲೆಗಳು ಸಿಗುತ್ತಾ ಎಂದು ಎಸ್‌ಐಟಿ ಪೊಲೀಸರು ಟೊಂಕ ಕಟ್ಟಿ ಹುಡುಕಾಟ ನಡೆಸುತ್ತಿದ್ದಾರೆ.

    ಮಫ್ತಿಯಲ್ಲಿ ಫೀಲ್ಡಿಂಗಿಳಿದ ಖಾಕಿ
    ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂಬ ದೂರುದಾರನ ಕಂಪ್ಲೆಂಟ್‌ ಎಸ್‌ಐಟಿಗೆ ಜಟಿಲವಾಗಿದೆ. ಕಳೆದ ಒಂದು ವಾರದಿಂದ ವಿಚಾರಣೆ ಮತ್ತು ಪರಿಶೀಲನೆ ನಡೆಸುತ್ತಿದ್ದರೂ, ಯಾವುದೇ ಗಟ್ಟಿ ಕುರುಹುಗಳು ಸಿಗುತ್ತಿಲ್ಲ. ಸಿಕ್ಕ ಮೂಳೆ 40 ವರ್ಷ ಹಳೆಯದ್ದು, ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಎಸ್‌ಐಟಿ ಮಾರುವೇಷದಲ್ಲಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಸಾರ್ವಜನಿಕರಿಂದ ಸಿಗುತ್ತಿರುವ ಮಾಹಿತಿ ಅಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ.

  • ಧರ್ಮಸ್ಥಳ ಕೇಸ್‌ | ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್ ಕಾರ್ಡ್‌ ‌ರಹಸ್ಯ ಬಯಲು; ವಾರಸುದಾರರು ಪತ್ತೆ

    ಧರ್ಮಸ್ಥಳ ಕೇಸ್‌ | ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್ ಕಾರ್ಡ್‌ ‌ರಹಸ್ಯ ಬಯಲು; ವಾರಸುದಾರರು ಪತ್ತೆ

    – ಧರ್ಮಸ್ಥಳ ಪ್ರಕರಣಕ್ಕೂ ಇದಕ್ಕೂ ಸಂಬಂಧ ಇಲ್ಲವೆಂದ ಕುಟುಂಬಸ್ಥರು

    ನೆಲಮಂಗಲ: ಧರ್ಮಸ್ಥಳದಲ್ಲಿ (Dharmasthala) ಎಸ್‌ಐಟಿ ತನಿಖೆ ವೇಳೆ ಪಾಯಿಂಟ್‌ ನಂ.1ನಲ್ಲಿ ಸಿಕ್ಕ ಡೆಬಿಟ್‌, ಪ್ಯಾನ್‌ ಕಾ‌ರ್ಡ್‌ನ ವಾರಸುದಾರರ ವಿಳಾಸ ಪತ್ತೆಯಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನ ದಾಬಸ್‌ಪೇಟೆ ನಿವಾಸಿಯಾಗಿದ್ದ ಸುರೇಶ್ ಎಂಬಾತನದ್ದು ಅನ್ನೋದು ಗೊತ್ತಾಗಿದೆ.

    ಗಂಗಮರಿಯಪ್ಪ ಹಾಗೂ ಸಿದ್ದಲಕ್ಷ್ಮಮ್ಮ ಎಂಬುವರ ಪುತ್ರ ಸುರೇಶ್ ಪರ್ಸ್‌ನಲ್ಲಿ ಎರಡು ಪ್ಯಾನ್‌ ಕಾರ್ಡ್‌ಗಳು ಪತ್ತೆಯಾಗಿತ್ತು. ಒಂದು ಸುರೇಶ್‌ ಎಂಬಾತನ ಪ್ಯಾನ್‌ ಕಾರ್ಡ್ (PAN Card), ಮತ್ತೊಂದು ಅವರ ತಾಯಿ ಸಿದ್ದಲಕ್ಷ್ಮಮ್ಮ ಅವರ ಪ್ಯಾನ್ ಕಾರ್ಡ್ ಎಂಬುದು ಬಹಿರಂಗವಾಗಿತ್ತು. 2‌ ವರ್ಷಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ಸುರೇಶ್ ಆಗ ಧರ್ಮಸ್ಥಳಕ್ಕೆ ತೆರಳಿದ್ದ ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಜಾಂಡಿಸ್‌ನಿಂದಾಗಿ (Jandes) ಸುರೇಶ್ ಸಾವನ್ನಪ್ಪಿದ್ದರು. ಇನ್ನು ಸಿದ್ದಲಕ್ಷ್ಮಮ್ಮ ಬದುಕಿದ್ದಾರೆ. ಈ ಕುರಿತು ಸುರೇಶ್‌ ಕುಟುಂಬಸ್ಥರು ʻಪಬ್ಲಿಕ್‌ ಟಿವಿʼಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್‌ – ಸಹಾಯವಾಣಿ ತೆರೆದ ಎಸ್‌ಐಟಿ 

    ಮೃತ ಸುರೇಶ್ ಅಕ್ಕ ರೂಪಾ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿ, ಸಾಕಷ್ಟು ಬಾರಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಆಗ ಧರ್ಮಸ್ಥಳದಲ್ಲಿ ಮಿಸ್ ಆಗಿರಬೇಕು. ನಮ್ಮ ತಾಯಿಯ ಎಟಿಎಂ ಕಾರ್ಡ್ ಕಳೆದು ಹೋಗಿದೆ ಎಂದು ಹೇಳಿದ್ದ. ಆಗ ನಮ್ಮ ತಾಯಿ ಹೊಸ ಎಟಿಎಂ ಕಾರ್ಡ್ ತೆಗೆದುಕೊಂಡಿದ್ದರು. ಸುರೇಶ್‌ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ, 5 ತಿಂಗಳ ಹಿಂದೆ ಇಲ್ಲೇ ಮೃತಪಟ್ಟಿದ್ದರು. ಧರ್ಮಸ್ಥಳದ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅನಾಮಿಕ ವ್ಯಕ್ತಿ ನಟೋರಿಯಸ್ ಕೆಲಸ ಮಾಡಿ ಕ್ಷೇತ್ರದಿಂದ ಉಚ್ಚಾಟನೆಗೊಂಡಿದ್ದ: ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ

    ಮೃತ ಸುರೇಶ್ ತಾಯಿ ಮಾತನಾಡಿ, ಅಲ್ಲಿ ಸಿಕ್ಕ ದಾಖಲೆಗಳು ನನ್ನದು ಹಾಗೂ ನನ್ನ ಮಗನದ್ದೇ, ಈ ಹಿಂದೆ ಧರ್ಮಸ್ಥಳಕ್ಕೆ ಹೋದಾಗ ಕಳೆದು ಹೋಗಿದೆ ಎಂದು ನನ್ನ ಮಗ ಸುರೇಶ್ ಹೇಳಿದ್ದ. ಸುರೇಶ್ ಅನಾರೋಗ್ಯದಿಂದ ಮೃತ ಪಟ್ಟಿದ್ದಾನೆ. ನನ್ನ ಎಟಿಎಂ ಕಾರ್ಡ್ ಸುರೇಶ್ ಬಳಿ ಇತ್ತು, ಅಲ್ಲಿ ಹೋದಾಗ ಕಳೆದು ಹೋಗಿದೆ. ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಅನಾರೋಗ್ಯದಿಂದ ಮೃತ ಪಟ್ಟಿದ್ದಾನೆ. ಧರ್ಮಸ್ಥಳ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲವೆಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – 6ನೇ ಪಾಯಿಂಟಲ್ಲಿ 12 ಮೂಳೆಗಳು ಪತ್ತೆ, ಇಂದು 7ನೇ ಸಮಾಧಿ ಅಗೆತ

  • ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – 6ನೇ ಪಾಯಿಂಟಲ್ಲಿ 12 ಮೂಳೆಗಳು ಪತ್ತೆ, ಇಂದು 7ನೇ ಸಮಾಧಿ ಅಗೆತ

    ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – 6ನೇ ಪಾಯಿಂಟಲ್ಲಿ 12 ಮೂಳೆಗಳು ಪತ್ತೆ, ಇಂದು 7ನೇ ಸಮಾಧಿ ಅಗೆತ

    – ಇನ್ನೆರಡು ದಿನಗಳಲ್ಲಿ ಎಲ್ಲಾ ಪಾಯಿಂಟ್‌ ಪೂರ್ಣಗೊಳಿಸಲು ಎಸ್‌ಐಟಿ ಸಿದ್ಧತೆ

    ಮಂಗಳೂರು: ಧರ್ಮಸ್ಥಳ ಫೈಲ್ಸ್‌ಗೆ (Dharmasthala Burials Case) ಮಹತ್ವದ ಟ್ವಿಸ್ಟ್ ಸಿಕ್ಕಿದೆ. 6ನೇ ಪಾಯಿಂಟ್‌ನಲ್ಲಿ 12 ಮೂಳೆಗಳು ಪತ್ತೆಯಾಗುವ ಮೂಲಕ ಅನಾಮಿಕನ ದೂರಿಗೆ ಬಲ ಬಂದಿದೆ. ಕತ್ತಲು ಕವಿಯುವವರೆಗೂ ನಡೆದ ಈ ಕಾರ್ಯಾಚರಣೆ ಅನೇಕ ಕುತೂಹಲಗಳನ್ನು ತೆರೆದಿಟ್ಟಿದೆ. ಇಂದು ಮತ್ತೆ ಉತ್ಖನನ ಮುಂದುವರಿಯಲಿದೆ.

    ಧರ್ಮಸ್ಥಳ (Dharmasthala) ಗ್ರಾಮದ ನೇತ್ರಾವತಿ ನದಿಯ ಸುತ್ತ ಶವಗಳನ್ನ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರಂಭಿಕ 5 ಪಾಯಿಂಟ್‌ಗಳಲ್ಲಿ ಯಾವುದೇ ಮೂಳೆಯ ಕುರುಹು ಸಿಗದೇ ಇದ್ದಾಗ, ಅನಾಮಿಕ ದೂರುದಾರನ ಆರೋಪಗಳ ಬಗ್ಗೆನೇ ಸಂಶಯಗಳು ಎದ್ದಿದ್ವು.. ಇದೀಗ ಆರನೇ ಪಾಯಿಂಟ್‌ನಲ್ಲಿ ಮೂಳೆಗಳ ಕುರುಹು ಸಿಕ್ಕಿದೆ. ಸಿಕ್ಕಿರುವ ಮೂಳೆಗಳು ಪುರುಷನದ್ದು ಎನ್ನಲಾಗಿದೆ. ಉತ್ಖನನ ವೇಳೆ ಸಿಕ್ಕ 12 ಮೂಳೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಇದನ್ನೂ ಓದಿ: PublicTV Impact; ಆಗ ಗುತ್ತಿಗೆ ನೌಕರ, ಈಗ ಕೋಟ್ಯಧಿಪತಿ – ಕೆಆರ್‌ಐಡಿಎಲ್ ಮಾಜಿ ಹೊರಗುತ್ತಿಗೆ ನೌಕರನ ಮೇಲೆ ‘ಲೋಕಾ’ ತನಿಖೆ

    ಗುರುವಾರ ನಡೆದ ಕಾರ್ಯಾಚರಣೆ ಸುಲಭದ್ದಾಗಿರಲಿಲ್ಲ. ಅರಣ್ಯ ಪ್ರದೇಶದಲ್ಲಿ ಸಾಗಿ 6ನೇ ಪಾಯಿಂಟ್ ಅಗೆದಿದ್ರು. ನದಿ ತೀರದ ಪಾಯಿಂಟ್ ಬಗ್ಗೆ ದೂರುದಾರಿಗೆ ವಿಶೇಷ ಆತ್ಮವಿಶ್ವಾಸ ಇತ್ತು. ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಂಡು ಮೂರೇ ಅಡಿ ಅಗಿಯುವಾಗ ಎರಡು ಮೂಳೆಗಳು ಪತ್ತೆಯಾಗಿವೆ. ಹಿಟಾಚಿ ಬಳಸಿಕೊಂಡು ಮತ್ತಷ್ಟು ಆಳಕ್ಕಿಳಿದಾಗ ಒಟ್ಟು 12 ಮೂಳೆಗಳು ಕಂಡುಬಂದಿವೆ. ಮೂಳೆಗಳು ಸಿಗುತ್ತಿದ್ದಂತೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸ್ಥಳದಲ್ಲಿದ್ದ ವೈದ್ಯರು ಹಾಗೂ ಎಫ್‌ಎಸ್‌ಎಲ್ ತಜ್ಞರನ್ನು ಬಳಸಿಕೊಂಡು ಎಲ್ಲಾ ಮೂಳೆಗಳನ್ನು ಸಂರಕ್ಷಿಸಲಾಗಿದೆ. ಮೂಳೆ ಸಿಕ್ಕ ಪಾಯಿಂಟ್‌ನಲ್ಲಿ ನೀರಿನ ಒರತೆ ಹೆಚ್ಚಿದ್ದ ಕಾರಣ, ತಗಡಿನ ಸೀಟುಗಳನ್ನು ಬಳಸಿ ಶೆಲ್ಟರ್ ಮಾಡಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್;‌ ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್‌ ಕಾರ್ಡ್‌ ರಹಸ್ಯ ಬಯಲು – ವಾರಸುದಾರ ಮಹಿಳೆ ಇನ್ನೂ ಜೀವಂತ

    ಇಂದು ಬೆಳಗ್ಗೆ 7ನೇ ಪಾಯಿಂಟ್‌ನಿಂದ ಮತ್ತೆ ಅಗೆಯುವ ಕಾರ್ಯ ಆರಂಭವಾಗಲಿದೆ. ಜೊತೆಗೆ 8ನೇ ಪಾಯಿಂಟ್‌ನ ಬಳಿ ಎಲ್ಲಾ ಸಿದ್ಧತಾ ಕಾರ್ಯ ನಡೆದಿದೆ. ಮತ್ತೆ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗಿದ್ದು ಮುಂದಿನ ಎರಡು ದಿನದಲ್ಲಿ ಎಲ್ಲಾ ಪಾಯಿಂಟ್‌ಗಳಲ್ಲಿ ಉತ್ಖನನ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ಇಂದು ನಡೆಸೋ ಉತ್ಖನನದಲ್ಲಿ ಮತ್ತಷ್ಟು ಕಳೇಬರ ಸಿಕ್ರೆ ಈ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್- ವಿಕಾಸ್ ಕುಮಾರ್ ಸಸ್ಪೆಂಡ್ ಆದೇಶ ವಾಪಸ್

  • ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಕೊನೆಗೂ ಅಸ್ಥಿಪಂಜರ ಪತ್ತೆ

    ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಕೊನೆಗೂ ಅಸ್ಥಿಪಂಜರ ಪತ್ತೆ

    ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧಿಸಿದಂತೆ ಕೊನೆಗೂ ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್‌ನಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿದೆ ಎಂದು `ಪಬ್ಲಿಕ್ ಟಿವಿ’ಗೆ ಎಸ್‌ಐಟಿ (SIT) ಮೂಲಗಳು ತಿಳಿಸಿವೆ.

    ದೂರುದಾರ ಗುರುತಿಸಿದ ಸ್ಥಳಗಳ ಪೈಕಿ ಇದೀಗ 6ನೇ ಪಾಯಿಂಟ್‌ನಲ್ಲಿ 15 ಕಾರ್ಮಿಕರಿಂದ ಉತ್ಖನನ ನಡೆಯುತ್ತಿದ್ದು, ಎರಡು ಅಸ್ಥಿಪಂಜರ ಪತ್ತೆಯಾಗಿದೆ. ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ತಲೆ ಬುರುಡೆ ಸೇರಿದಂತೆ 12 ಮೂಳೆಗಳು  ಮಾತ್ರ ಸಿಕ್ಕಿದ್ದು, ಇನ್ನೂ ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ಸಿಕ್ಕಿರುವ ಕಳೇಬರವನ್ನು ಎಸ್‌ಐಟಿ ಅಧಿಕಾರಿಗಳು ಎಫ್‌ಎಸ್‌ಎಲ್‌ಗೆ (FSL) ಕಳುಹಿಸಲಿದ್ದಾರೆ. ಇನ್ನೂ ಇದರ ಬಳಿಕ 7 ಹಾಗೂ 8ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಸುವ ಸಾಧ್ಯತೆಗಳಿವೆ.ಇದನ್ನೂ ಓದಿ: ತಾಯಿಯನ್ನು ಕೊಂದ ಪಾಪಿಯಿಂದ ತಂದೆಯ ಮೇಲೂ ಮೃಗೀಯ ವರ್ತನೆ – ಚರ್ಮ ಸುಲಿಯುವಂತೆ ಹಲ್ಲೆ

    ಇನ್ನೂ ಎಸ್‌ಐಟಿ (SIT) ಅಧಿಕಾರಿಗಳು ಕರ್ನಾಟಕದ ಪ್ರತಿ ಪೊಲೀಸ್ ಠಾಣೆಯಿಂದ ಮಾಹಿತಿ ಕೇಳಿದ್ದು, 1995ರಿಂದ 2005 ಹಾಗೂ 2005ರಿಂದ 2015ವರೆಗೆ ಪತ್ತೆಯಾಗದ ನಾಪತ್ತೆ, ಕೊಲೆ-ಅತ್ಯಾಚಾರ ಪ್ರಕರಣದ ಮಾಹಿತಿ ಒದಗಿಸಲು ತಿಳಿಸಿದೆ. 10 ವರ್ಷಗಳಂತೆ ಎರಡು ಪಟ್ಟಿಯಲ್ಲಿ ಒಟ್ಟು 20 ವರ್ಷದ ದಾಖಲೆ ನೀಡಲು ಎಸ್‌ಐಟಿ ಅಧಿಕಾರಿಗಳು ಪತ್ರದ ಮೂಲಕ ತಿಳಿಸಿದ್ದಾರೆ.

    ಸೋಮವಾರ ದೂರುದಾರ (ಜು.28) 13 ಜಾಗಗಳನ್ನು ಗುರುತಿಸಿದ್ದ. ಅದಾದ ಬಳಿಕ ಎರಡು ದಿನ ಈ ಮೊದಲು 5 ಪಾಯಿಂಟ್‌ಗಳಲ್ಲಿ ನಡೆಸಲಾಗಿದ್ದ ಉತ್ಖನನದ ವೇಳೆ ಯಾವುದೇ ರೀತಿಯ ಕಳೇಬರ ಸಿಕ್ಕಿರಲಿಲ್ಲ. ಆದರೆ ಎರಡನೇ ದಿನದಲ್ಲಿ ಒಂದು ಕೆಂಪು ಬಣ್ಣದ ಹರಿದ ರವಿಕೆ ಹಾಗೂ ಒಂದು ಪ್ಯಾನ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ಸಿಕ್ಕಿತ್ತು. ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ.

    ಎಸ್‌ಐಟಿ ವಿಚಾರಣೆ ವೇಳೆ ದೂರುದಾರ ವ್ಯಕ್ತಿ ಓರ್ವ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರನ್ನು ಬಾಯ್ಬಿಟ್ಟಿದ್ದ. ನಾನು ಹೆಣ ಹೂಳುವಾಗ ಈ ಅಧಿಕಾರಿ ಕೂಡ ನನಗೆ ಸಾಥ್ ನೀಡಿರುವುದಾಗಿ ತಿಳಿಸಿದ್ದ. ದೂರುದಾರನ ಮಾಹಿತಿ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು 1995ರಿಂದ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಲಿಸ್ಟ್ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಮನವಿ ಪತ್ರ ಕಳುಹಿಸಿದ್ದರು.ಇದನ್ನೂ ಓದಿ: ಗಾಳಿ ಆಂಜನೇಯ ದೇಗುಲ ಭಕ್ತರಿಗೆ ಗುಡ್‌ನ್ಯೂಸ್ – ಶೀಘ್ರದಲ್ಲೇ ಹೋಮ, ಹವನ ಮಾಡಿಸೋಕೆ ಆನ್‌ಲೈನ್ ಸೇವೆ ಆರಂಭ

  • ಧರ್ಮಸ್ಥಳ ಫೈಲ್ಸ್‌ | ನಿಗೂಢ ಸತ್ಯದ ಬೆನ್ನತ್ತಿದ SIT – ನೇತ್ರಾವತಿ ಸ್ನಾನಘಟ್ಟ ಬಳಿ ಶವಗಳ ಉತ್ಖನನ ಕಾರ್ಯ ಶುರು

    ಧರ್ಮಸ್ಥಳ ಫೈಲ್ಸ್‌ | ನಿಗೂಢ ಸತ್ಯದ ಬೆನ್ನತ್ತಿದ SIT – ನೇತ್ರಾವತಿ ಸ್ನಾನಘಟ್ಟ ಬಳಿ ಶವಗಳ ಉತ್ಖನನ ಕಾರ್ಯ ಶುರು

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ (Dharmasthala Burials Case) ತನಿಖೆ ನಿರ್ಣಾಯಕ ಹಂತ ತಲುಪಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ದೂರುದಾರ ಇದೀಗ 13 ಸ್ಥಳಗಳನ್ನ ಗುರುತಿಸಿದ್ದು, ಇಂದಿನಿಂದ ಶವಗಳನ್ನು ಹೊರತೆಯುವ ಕಾರ್ಯ ಶುರು ಮಾಡಲಾಗುತ್ತಿದೆ.

    ನಿನ್ನೆ (ಸೋಮವಾರ) ಮೊದಲು ಗುರುತು ಮಾಡಿದ್ದ ಸ್ಥಳದಿಂದಲೇ ಸಮಾಧಿ ಅಗೆಯುವ ಕೆಲಸಕ್ಕೆ ಎಸ್‌ಐಟಿ (SIT) ಮುಂದಾಗಿದೆ. ಅದಕ್ಕಾಗಿ 12 ಕಾರ್ಮಿಕರನ್ನು ನಿಯೋಜನೆ ಮಾಡಿಕೊಂಡಿದೆ ವಿಶೇಷ ತನಿಖಾ ತಂಡ. ಗ್ರಾಮ ಪಂಚಾಯಿತಿಯಿಂದ 12 ಕಾರ್ಮಿಕರನ್ನ ನಿಯೋಜನೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಧರ್ಮಸ್ಥಳ ಗ್ರಾಪಂ ನಿಂದ ಉತ್ಖನನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಸ್ಟೆಲ್ಲಾ ವರ್ಗೀಸ್, ಕಂದಾಯ ಇಲಾಖೆ ಇತರ ಸಿಬ್ಬಂದಿಗಳೂ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಇಂದಿನಿಂದ ಸಮಾಧಿ ಅಗೆಯುವ ಕಾರ್ಯ ಶುರುವಾಗಲಿದೆ.

    ನೇತ್ರಾವತಿ ಸ್ನಾನಘಟ್ಟದ ಬಳಿ ಈಗಾಗಲೇ ಸಿಬ್ಬಂದಿಗಳು ‌ಬಂದಿದ್ದು, 12 ಕಾರ್ಮಿಕರ ತಂಡ ಆರೆ, ಪಿಕಾಸಿ, ಗುದ್ದಲಿ ಜೊತೆಗೆ ಸಮಾಧಿ ಅಗೆಯಲು ಬೇಕಾದ ಎಲ್ಲ ಸಾಮಗ್ರಿಗಳನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೇ ನಾಲ್ವರು ವೈದ್ಯರು, ಸಹಾಯಕ ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಕೆಲವೇ ಕ್ಷಣಗಳಲ್ಲಿ ಇವರೆಲ್ಲರ ಸಮಕ್ಷಮದಲ್ಲಿ ಸಮಾಧಿ ಅಗೆಯುವ ಕೆಲಸ ಶುರುವಾಗಲಿದೆ.

    ಸೋಮವಾರ ಧರ್ಮಸ್ಥಳ ಗ್ರಾಮದ ಬೇರೆ ಬೇರೆ ಕಡೆಗಳಲ್ಲಿ ಶವ ಹೂತಿಟ್ಟ 13 ಜಾಗಗಳನ್ನ ಗುರುತು ಮಾಡಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಆತನನ್ನು ಧರ್ಮಸ್ಥಳದ ನೇತ್ರಾವತಿ ಸ್ಥಾನಘಟ್ಟದ ಬಳಿ ಕರೆ ತಂದು, ಸ್ನಾನಘಟ್ಟದ ಎಡ ಬದಿಯಲ್ಲಿ ಎರಡು ಗಂಟೆಗಳ ಕಾಲ ಒಂದು ಕಿಲೋಮೀಟರ್ ಸಾಗಿ ಒಟ್ಟು 8 ಸ್ಥಳಗಳನ್ನ ಗುರುತಿಸಲಾಗಿತ್ತು. ಬಳಿಕ ನೇತ್ರಾವತಿ ಸ್ನಾನಘಟ್ಟ ಹಾಗೂ ನೇತ್ರಾವತಿ ಸೇತುವೆಯ ಮಧ್ಯಭಾಗದ ಅರಣ್ಯ ಪ್ರದೇಶದಲ್ಲಿ ನಾಲ್ಕು ಜಾಗಗಳನ್ನ ಗುರುತಿಸಲಾಗಿದೆ. ಬಳಿಕ ನೇತ್ರಾವತಿ ಸ್ನಾನಘಟ್ಟದ ಬಲ ಬದಿಯಲ್ಲಿದ್ದ ಅಜಿಕುರಿ ರಸ್ತೆ ಬದಿಯ ಜಾಗದಲ್ಲೂ ಶವ ಹೂತಿಟ್ಟಿರೋದಾಗಿ ಅನಾಮಿಕ ವ್ಯಕ್ತಿ ಗುರುತಿಸಿದ್ದಾರೆ. ಸೋಮವಾರ ಒಟ್ಟು 15 ಸ್ಥಳಗಳನ್ನು ಗುರುತಿಸುವ ತಯಾರಿ ಎಸ್‌ಐಟಿ ನಡೆಸಿದ್ದರೂ ಕತ್ತಲಾದ ಹಿನ್ನೆಲೆಯಲ್ಲಿ 13 ಸ್ಥಳಗಳನ್ನ ಮಾತ್ರ ಗುರುತಿಸಲಾಗಿತ್ತು.

    ಸೋಮವಾರ ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಮಹಜರಿನ ಮೊದಲ ದಿನ 13 ಸ್ಥಳಗಳನ್ನು ಗುರುತಿಸಿದ ಸ್ಥಳಗಳ ದಾಖಲೀಕರಣ ಮಾಡಿದ ಎಸ್‌ಐಟಿ ಟೀಮ್ ಗುರುತಿಸಿದ ಎಲ್ಲಾ ಸ್ಥಳಗಳಲ್ಲಿ ಬಿಗಿ ಭದ್ರತೆ ಮಾಡಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ. ಇಂದು ಮತ್ತೆ ಉಳಿದಿರೋ ಜಾಗಗಳ ಗುರುತಿಸುವ ಕೆಲಸ ನಡೆಯಲಿದ್ದು, ಬಳಿಕ ಎಲ್ಲವನ್ನ ಅಗೆಯುವ ತೀರ್ಮಾನವನ್ನು ಎಸ್‌ಐಟಿ ಮಾಡಿದೆ.

  • ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ನೇತ್ರಾವತಿ ತಟದಲ್ಲಿ ಎಸ್‌ಐಟಿಯಿಂದ ಸ್ಥಳ ಮಹಜರು

    ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ನೇತ್ರಾವತಿ ತಟದಲ್ಲಿ ಎಸ್‌ಐಟಿಯಿಂದ ಸ್ಥಳ ಮಹಜರು

    ಮಂಗಳೂರು: ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಇದೀಗ ಎಸ್‌ಐಟಿ ತಂಡ (SIT) ನೇತ್ರಾವತಿ ನದಿಯ (Netravati) ತಟದಲ್ಲಿ ಸ್ಥಳ ಮಹಜರು ಆರಂಭಿಸಿದೆ.

    ಎಸ್‌ಐಟಿ ವಿಚಾರಣೆ ವೇಳೆ ದೂರುದಾರ, ತಲೆ ಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಹೊರತೆಗೆದಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆ ಎಸ್‌ಐಟಿ ತಂಡವು ಫೊರೆನ್ಸಿಕ್ ಇಲಾಖೆಯ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸ್ಥಳ ಮಹಜರು ಆರಂಭಿಸಿದ್ದಾರೆ.ಇದನ್ನೂ ಓದಿ: ಪಾಕಿಸ್ತಾನದಿಂದಲೇ ಬಂದರೆಂದು ಏಕೆ ಅನ್ಕೋತೀರಿ, ಉಗ್ರರು ದೇಶದೊಳಗೇ ಬೆಳೆದಿರಬಹುದು – ʻಕೈʼ ನಾಯಕ ಚಿದಂಬರಂ ಹೇಳಿಕೆ ವಿವಾದ

    ಎಸ್‌ಐಟಿ ಎಸ್ಪಿ ಸಿ.ಎ.ಸೈಮನ್ ಅವರ ನೇತೃತ್ವದಲ್ಲಿ ದೂರುದಾರನನ್ನು ಅಧಿಕಾರಿಗಳು ಸ್ಥಳಕ್ಕೆ ಕರೆತಂದಿದ್ದು, ಪೊಲೀಸ್ ಬಿಗಿ ಭದ್ರತೆಯಲ್ಲಿ ಸ್ಥಳ ಮಹಜರು ಕಾರ್ಯ ಆರಂಭವಾಗಿದೆ. ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸಿ.ಎ.ಸೈಮನ್, ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಸೇರಿ ಇನ್ನಿತರರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಯುತ್ತಿದೆ.

    ಕಳೆದ ಎರಡು ದಿನಗಳಿಂದ ಎಸ್‌ಐಟಿ ತಂಡ ದೂರುದಾರನ ವಿಚಾರಣೆ ನಡೆಸಿದ್ದು, ಸುಮಾರು 14 ಗಂಟೆಗಳ ಕಾಲ ವಿಚಾರಣೆ ನಡೆಸಿ ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇಂದಿನಿಂದ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಿಂದ ಕಾರ್ಯಾಚರಣೆ ನಡೆಸಲಿದ್ದು. ದೂರುದಾರನ ಹೇಳಿಕೆ ಆಧಾರದ ಮೇಲೆ ಪ್ರಣವ್ ಮೊಹಂತಿ ತಂಡ ತನಿಖೆ ಚುರುಕುಗೊಳಿಸಲಿದ್ದಾರೆ.

    ಸ್ಥಳ ಮಹಜರು ಬಳಿಕ ದೂರುದಾರನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದ್ದು, ನಂತರ ಆತ ಹೂತ್ತಿದ್ದೇನೆ ಎನ್ನಲಾಗುತ್ತಿರುವ ಪ್ರದೇಶಗಳ ಪರಿಶೀಲನೆ ಮಾಡುವ ಸಾಧ್ಯತೆಯಿದೆ.ಇದನ್ನೂ ಓದಿ: `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ

  • ಧರ್ಮಸ್ಥಳ ಫೈಲ್ಸ್‌ | ತನಿಖೆಗಿಳಿದ ಎಸ್‌ಐಟಿ – 8 ತಾಸು ದೂರುದಾರನ ವಿಚಾರಣೆ

    ಧರ್ಮಸ್ಥಳ ಫೈಲ್ಸ್‌ | ತನಿಖೆಗಿಳಿದ ಎಸ್‌ಐಟಿ – 8 ತಾಸು ದೂರುದಾರನ ವಿಚಾರಣೆ

    – ಶವ ಹೂತಿಟ್ಟ ಜಾಗ ತೋರಿಸಲು ಸಿದ್ಧವೆಂದ ದೂರುದಾರ

    ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ (Dharmasthala Burials Case) ತನಿಖೆ ಶುರುವಾಗಿದೆ. ಅನಾಮಧೇಯ ವ್ಯಕ್ತಿ ಕೊಟ್ಟ ಹೇಳಿಕೆ ಆಧರಿಸಿ ಇವತ್ತಿನಿಂದ ತನಿಖೆ ಆರಂಭಿಸಲಾಗಿದೆ. ಇಬ್ಬರು ವಕೀಲರೊಂದಿಗೆ ಮಂಗಳೂರಿನ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಅನಾಮಧೇಯ ವ್ಯಕ್ತಿ ಸುಮಾರು 8 ತಾಸುಗಳ ಕಾಲ ವಿಚಾರಣೆ ಎದುರಿಸಿದ್ದಾನೆ.

    ಕೋರ್ಟ್ ಮುಂದೆ ಅನಾಮಿಕ ವ್ಯಕ್ತಿ ಕೊಟ್ಟ ಹೇಳಿಕೆ ಆಧರಿಸಿ ಪ್ರಣವ್ ಮೊಹಾಂತಿ ನೇತೃತ್ವದ ಎಸ್‌ಐಟಿ ತಂಡ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಎಸ್‌ಐಟಿ ಕೇಳಿದ ಪ್ರಶ್ನೆಗಳಿಗೆ ಶವ ಹೂತಿಟ್ಟ ವ್ಯಕ್ತಿ ಉತ್ತರ ಕೊಟ್ಟಿದ್ದಾನೆ. ತನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಶವ ಹೂತಿಟ್ಟ ಜಾಗಗಳನ್ನು ತೋರಿಸಲು ಸಿದ್ಧನಿದ್ದೇನೆ ಅಂತ ವಿಚಾರಣೆ ವೇಳೆ ಅನಾಮಿಕ ವ್ಯಕ್ತಿ ಹೇಳಿಕೊಂಡಿದ್ದಾನೆ. ಇದೀಗ ದೂರುದಾರ ಇಬ್ಬರು ವಕೀಲರ ಜೊತೆ ಅಜ್ಞಾತ ಸ್ಥಳಕ್ಕೆ ಹೊರಟಿದ್ದಾನೆ.

    ದೂರುದಾರನಿಗೆ SIT ಪ್ರಶ್ನೆ ಏನು?
    * ಯಾವ್ಯಾವ ವರ್ಷದಲ್ಲಿ ಎಷ್ಟು ಶವ ಹೂತಿದ್ದೀರಾ..?
    * ಯಾವ ಪ್ರದೇಶದಲ್ಲಿ ಶವ ಹೂತು ಹಾಕಿದ್ದೀರಿ..?
    * ಶವ ಹೂತಿರುವ ಜಾಗವನ್ನು ತೋರಿಸುತ್ತೀರಾ..?
    * ನಿಮಗೆ ಯಾರಾದರೂ ಬೆದರಿಕೆ/ಒತ್ತಡ ಹಾಕಿದ್ರಾ..?
    * ನಿಮಗೆ ಶವಗಳನ್ನು ತೋರಿಸಿದ್ದು ಯಾರು..?
    * ಕಾರಿನಲ್ಲಿ ಶವಗಳನ್ನು ತಂದಿದ್ಯಾರು..?
    * ಶವಗಳನ್ನು ತಂದಾಗ ಯಾವ ಸ್ಥಿತಿಯಲ್ಲಿದ್ದವು..?
    * ಹೂತಿಟ್ಟ ಶವಗಳಲ್ಲಿ ಮಹಿಳೆಯ ಶವಗಳೆಷ್ಟು..?
    * ಅಂದೇ ಪೊಲೀಸರ ಗಮನಕ್ಕೆ ಯಾಕೆ ತರಲಿಲ್ಲ..?
    * ನೀವು ಧರ್ಮಸ್ಥಳ ಬಿಟ್ಟು ಹೋಗಿದ್ಯಾಕೆ..?
    * 20 ವರ್ಷಗಳ ಬಳಿಕ ನಿಮಗೆ ಸ್ಥಳ ನೆನಪಿದ್ಯಾ..?
    * ಇದೇ ಸ್ಥಳ ಅಂತ ಹೇಗೆ ಹೇಳಬಲ್ಲಿರಾ..?

    ಎಸ್‌ಐಟಿಗೆ ಅನಾಮಿಕನ ಉತ್ತರವೇನು?
    ಪಾಪಪ್ರಜ್ಞೆ ಕಾಡುತ್ತಿದೆ; ನಾನು ಹೇಳಿದ್ದೆಲ್ಲವೂ ಸತ್ಯ. ನಾನು ಶವ ಹೂತಿಟ್ಟ ಜಾಗ ತೋರಿಸುತ್ತೇನೆ. ನನಗೆ ಎಲ್ಲವೂ ನೆನಪಿದೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು, ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಇವೆಲ್ಲ ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಅನಂತರ ನನಗೆ ಅನುಮಾನ ಬರಲು ಶುರುವಾಯ್ತು. ನನಗೆ ಯಾರ ಭಯವೂ, ಒತ್ತಡವೂ ಇಲ್ಲ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ಹೇಳಿದ್ದಾನೆ.