Tag: Dharmasthala Mass Burial

  • ಧರ್ಮಸ್ಥಳ ಕೇಸ್; 16 ಸ್ಪಾಟ್‌ಗಳಲ್ಲಿ ಸಿಗದ ಕುರುಹು – ದೂರುದಾರನ ಮಂಪರು ಪರೀಕ್ಷೆಗೆ ಎಸ್‌ಐಟಿ ಚಿಂತನೆ

    ಧರ್ಮಸ್ಥಳ ಕೇಸ್; 16 ಸ್ಪಾಟ್‌ಗಳಲ್ಲಿ ಸಿಗದ ಕುರುಹು – ದೂರುದಾರನ ಮಂಪರು ಪರೀಕ್ಷೆಗೆ ಎಸ್‌ಐಟಿ ಚಿಂತನೆ

    ಮಂಗಳೂರು: ಧರ್ಮಸ್ಥಳ ಶವ ಹೂತಿಟ್ಟ (Dharmasthala Mass Burial) ಆರೋಪ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಹೇಳಿದಂತೆ ಉತ್ಖನನದಲ್ಲಿ ಯಾವುದೇ ಕುರುಹು ಸಿಕ್ಕಿಲ್ಲ. ಹೀಗಾಗಿ, ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್‌ಐಟಿ (SIT) ಚಿಂತನೆ ನಡೆಸಿದೆ.

    16 ಪಾಯಿಂಟ್‌ಗಳಲ್ಲಿ ಉತ್ಖನನ ವೈಫಲ್ಯದ ಬೆನ್ನಲ್ಲೇ ಮಂಪರು ಪರೀಕ್ಷೆಗೆ ಎಸ್‌ಐಟಿ ಮುಂದಾಗಿದೆ. ಮಂಪರು ಪರೀಕ್ಷೆಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಎಸ್‌ಐಟಿ ಚಿಂತನೆ ನಡೆಸಿದೆ. ತನಿಖೆಯ ಮುಂದುವರಿದ ಭಾಗವಾಗಿ ಈ ಕ್ರಮ ಅಗತ್ಯ ಎನ್ನಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ – 13ನೇ ಸ್ಥಳದಲ್ಲಿ ಮೂಳೆ ಸಿಗದೇ ಇದ್ರೆ ತನಿಖೆ ಸ್ಥಗಿತ?

    ಉತ್ಖನನ ವೈಫಲ್ಯದ ಜೊತೆ ಇತರೆ ತನಿಖೆಗಳ ಆಧಾರದಲ್ಲಿ ಅರ್ಜಿ ಸಲ್ಲಿಕೆಗೆ ಚಿಂತನೆ ನಡೆದಿದೆ. ದೂರುದಾರನ ಪ್ರಾರಂಭಿಕ ಹೇಳಿಕೆ ಹಾಗೂ ನಂತರ ನೀಡಿದ ಹೇಳಿಕೆಗಳಲ್ಲಿ ಗೊಂದಲವಿದೆಯಾ ಎಂದು ಪರಿಶೀಲನೆಗೆ ಮುಂದಾಗಿದೆ.

    ಜಾಗಗಳ ಸ್ಥಳ ವಿವರಣೆಗಳಲ್ಲಿ ಸಮಯ, ದಿನಾಂಕ ಮತ್ತು ಭಾಗವಹಿಸಿದವರ ಹೆಸರುಗಳಲ್ಲಿ ಗೊಂದಲವಿದೆಯಾ ಎಂದು ಪರಿಶೀಲಿಸಲಿದೆ. ತನಿಖೆಯಲ್ಲಿ ದೊರೆತ ತಾಂತ್ರಿಕ ಮಾಹಿತಿ, ದಾಖಲೆಗಳು, ದೂರುದಾರ ನೀಡಿದ ಮೌಖಿಕ ಹೇಳಿಕೆಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಅರ್ಜಿ ಸಲ್ಲಿಸಲಿದೆ. ಗೊಂದಲವಿದ್ದರೆ ತನಿಖೆಗೆ ಅಗತ್ಯವಾದ ನಿಖರ ಮಾಹಿತಿಯನ್ನು ಪಡೆಯಲು ಮಂಪರು ಪರೀಕ್ಷೆಗೆ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ಇದನ್ನೂ ಓದಿ: 6 ಗಂಟೆ ಕಾರ್ಯಾಚರಣೆ – 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದರೂ ಸಿಗದ ಮೂಳೆ

    ಪಾಯಿಂಟ್ ನಂಬರ್ 13ರಲ್ಲಿ ಇಂದೂ ಉತ್ಖನನ ನಡೆಯಲಿದೆ. ಜಿಪಿಅರ್ ಸ್ಕ್ಯಾನ್‌ನಲ್ಲಿ ಪತ್ತೆಯಾಗದೇ ಇದ್ದರೂ ಉತ್ಖನನಕ್ಕೆ ದೂರುದಾರ ಪಟ್ಟು ಹಿಡಿದಿದ್ದಾನೆ. ವಿಚಾರಣೆ ವೇಳೆ ಕೊಟ್ಟ ಹೇಳಿಕೆ ಆಧಾರದಲ್ಲೇ 30 ಜಾಗ ಅಗೆಯಿರಿ ಅಂತ ಒತ್ತಾಯಿಸಿದ್ದಾನೆ. ಈಗಾಗಲೇ ಅಧಿಕೃತ 16 ಪಾಯಿಂಟ್ ಜೊತೆಗೆ ಅಕ್ಕಪಕ್ಕದ ಜಾಗ ಸೇರಿ 20ಕ್ಕೂ ಹೆಚ್ಚು ಕಡೆ ಅಗೆತ ಆಗಿದೆ. ಹೀಗಾಗಿ, 30 ಸ್ಪಾಟ್ ಉತ್ಖನನ ಆಗಲೇಬೇಕು ಅಂತ ಅನಾಮಿಕ ಪಟ್ಟು ಹಿಡಿದಿದ್ದಾನೆ.

    ಪಾಯಿಂಟ್ ನಂಬರ್ 13ರಲ್ಲಿ ಉಳಿದ 200 ಮೀ. ಜಾಗದಲ್ಲೂ ಉತ್ಖನನಕ್ಕೆ ಆಗ್ರಹ ಕೇಳಿಬಂದಿದೆ. ಜಿಪಿಆರ್‌ನಲ್ಲಿ ಅವಶೇಷ ಪತ್ತೆಯಾಗದೇ ಇದ್ದರೂ ಉತ್ಖನನಕ್ಕೆ ಪಟ್ಟು ಹಿಡಿದಿದ್ದಾನೆ. ಹೀಗಾಗಿ ಇಂದು ಕೂಡ ಉತ್ಖನನ ನಡೆಯಲಿದೆ. ಈಗ ಅಗೆದಿರುವ ಪ್ರದೇಶಕ್ಕೆ ತಾಗಿಕೊಂಡೇ ಇರುವ ಮತ್ತಷ್ಟು ಜಾಗದಲ್ಲಿ ಉತ್ಖನನ ನಡೆಯಲಿದೆ.

    ಇತ್ತ ಪಾಯಿಂಟ್ ನಂಬರ್ 6ರಲ್ಲಿ ಸಿಕ್ಕ ಮೂಳೆಗಳಿಂದ ಎಸ್‌ಐಟಿ ಟೀಂಗೆ ಮತ್ತಷ್ಟು ಸವಾಲಾಗಿದೆ. ಮೂಳೆ ತುಂಡುಗಳ ಆಧಾರವಾಗಿ ಇಡೀ ಕೇಸ್‌ನ್ನು ಮುಂದುವರಿಸಿ ತನಿಖೆ ನಡೆಸುವುದೇ ಕಷ್ಟ. ಫಾರೆನ್ಸಿಕ್ ಹಾಗೂ ಕಾನೂನು ದೃಷ್ಟಿಯಿಂದ ಎಸ್‌ಐಟಿಗೆ ತುಂಬಾ ಸವಾಲಾಗಿದೆ. ಸಂಪೂರ್ಣ ಅಸ್ಥಿಪಂಜರ ಸಿಗದೇ ಸಾವಿನ ಕಾರಣ ಪತ್ತೆ ಹಚ್ಚುವುದು ಬಹಳ ಕಷ್ಟ. ನೇರ ಸಾಕ್ಷ್ಯ ಇಲ್ಲದ ಕಾರಣ ಕೋರ್ಟ್ನಲ್ಲಿ ಪ್ರಕರಣ ನಿಲ್ಲಲು ಹಲವು ಸಾಕ್ಷ್ಯಗಳ ಕೊರತೆ ಇದೆ. ಫಾರೆನ್ಸಿಕ್ ಟೀಂಗೂ ಪಾಯಿಂಟ್ ನಂಬರ್ 6ರ ಮೂಳೆ ರಹಸ್ಯ ಪತ್ತೆ ಕಾರ್ಯ ಸವಾಲಾಗಿ ಪರಿಣಮಿಸಿದೆ. ಇದನ್ನೂ ಓದಿ: ಆ.17ಕ್ಕೆ ಬಿಜೆಪಿಯಿಂದ ಧರ್ಮಸ್ಥಳ ಚಲೋ

    ಪಾಯಿಂಟ್ ನಂಬರ್ 13ರ ಮತ್ತೊಂದು ಭಾಗದಲ್ಲಿ ಇಂದು ಉತ್ಖನನ ನಡೆಯಲಿದೆ. ಅದಕ್ಕಾಗಿ ಎಲ್ಲ ತಯಾರಿ ನಡೆದಿದೆ. ಎಸ್‌ಐಟಿ ಹಾಗೂ ಉತ್ಖನನ ತಂಡಕ್ಕೆ ಕುಳಿತುಕೊಳ್ಳಲು ಚೇರು, ಶಾಮಿಯಾನ ಹಾಕಲಾಗಿದೆ. ಗ್ರಾಮ ಪಂಚಾಯಿತಿಯು ಸ್ಥಳದಲ್ಲಿ ದೊಡ್ಡ ಹಿಟಾಚಿ ತಂದು ಇರಿಸಿದೆ.

  • ಧರ್ಮಸ್ಥಳ ಕೇಸ್‌ ಬಗ್ಗೆ ಎಸ್‌ಐಟಿ ತನಿಖೆ ಮುಗಿಯೋವರೆಗೂ ನಾನು ಮಾತನಾಡಲ್ಲ: ಜಿ.ಪರಮೇಶ್ವರ್‌

    ಧರ್ಮಸ್ಥಳ ಕೇಸ್‌ ಬಗ್ಗೆ ಎಸ್‌ಐಟಿ ತನಿಖೆ ಮುಗಿಯೋವರೆಗೂ ನಾನು ಮಾತನಾಡಲ್ಲ: ಜಿ.ಪರಮೇಶ್ವರ್‌

    ಬೆಂಗಳೂರು: ಧರ್ಮಸ್ಥಳ ಪ್ರಕರಣದ (Dharmasthala Mass Burial) ಬಗ್ಗೆ ಎಸ್‌ಐಟಿ ತನಿಖೆ ಮುಗಿಯುವ ವರೆಗೂ ನಾನು ಮಾತನಾಡುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ (G.Parameshwar) ಪ್ರತಿಕ್ರಿಯೆ ನೀಡಿದ್ದಾರೆ.

    ಧರ್ಮಸ್ಥಳದ ಹೆಸರು ಹಾಳಾಗೋದಕ್ಕೆ ಬಿಡೋದಿಲ್ಲ ಅಂತಾ ಮಾಜಿ ಸಂಸದ, ಕಾಂಗ್ರೆಸ್‌ನ ಹಿರಿಯ ಧುರೀಣ ಜನಾರ್ದನ ಪೂಜಾರಿ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್‌ನ ಹಲವು ಶಾಸಕರು ಸಹ ಇದಕ್ಕೆ ದನಿಗೂಡಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಇಂದು ಪಾಯಿಂಟ್ 17ರಲ್ಲಿ ಉತ್ಖನನ – ಸಿಗುತ್ತಾ ಬುರುಡೆ, ಮೂಳೆ ಕುರುಹು?

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್, ಈ ಬಗ್ಗೆ ಸಾಕಷ್ಟು ಹೇಳಿಕೆಗಳನ್ನ ನಾನು ಕೂಡ ಗಮನಿಸಿದ್ದೇನೆ. ಎಸ್‌ಐಟಿ ತನಿಖೆ ಮುಗಿಯೋವರೆಗೂ ನಾವು ಮಾತಾಡೋದು ಸಮಂಜಸವಲ್ಲ. ವಾಸ್ತವಾಂಶ ಏನಿದೆ ಅಂತಾ ಗೊತ್ತಾಗೋದೆ ತನಿಖೆ ಮುಗಿದ ಮೇಲೆ ಎಂದು ತಿಳಿಸಿದ್ದಾರೆ.

    13 ಕಡೆ ಸ್ಥಳ ಗುರುತಿಸಿದ್ದರು. ಈಗ 16, 19 ಆಗಿದೆ. ಎಸ್‌ಐಟಿಯಿಂದ ಅಂತಿಮ ತನಿಖೆ ಮುಗಿಯೋವರೆಗೂ ಏನು ಮಾತಾಡಲ್ಲ. ಸದನದಲ್ಲಿ ಈ ವಿಚಾರ ಪ್ರಸ್ತಾಪವಾಗಬಹುದು. ಅಲ್ಲಿ ಉತ್ತರ ನೀಡಲಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಮಸೀದಿ, ಚರ್ಚ್‌ನಲ್ಲಿ ಶವ ಹೂತಿಡಲಿಲ್ವಾ.. ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ: ಜನಾರ್ದನ ಪೂಜಾರಿ ಪ್ರಶ್ನೆ

  • ಧರ್ಮಸ್ಥಳ ಕೇಸ್; ಇಂದು ಪಾಯಿಂಟ್ 17ರಲ್ಲಿ ಉತ್ಖನನ – ಸಿಗುತ್ತಾ ಬುರುಡೆ, ಮೂಳೆ ಕುರುಹು?

    ಧರ್ಮಸ್ಥಳ ಕೇಸ್; ಇಂದು ಪಾಯಿಂಟ್ 17ರಲ್ಲಿ ಉತ್ಖನನ – ಸಿಗುತ್ತಾ ಬುರುಡೆ, ಮೂಳೆ ಕುರುಹು?

    ಮಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ (Dharmasthala Mass Burial) ಆರೋಪ ಪ್ರಕರಣದಲ್ಲಿ ಎಸ್‌ಐಟಿ ಫೀಲ್ಡಿಗಿಳಿದು ಇಂದಿಗೆ 16 ದಿನ ಕಳೆದಿದೆ. ಸೋಮವಾರ 17ನೇ ಪಾಯಿಂಟ್‌ನಲ್ಲಿ ಉತ್ಖನನ ನಡೆಯಲಿದ್ದು, ಯಾವುದಾದರು ಕುರುಹು ಸಿಗುತ್ತಾ ಎಂಬ ಕುತೂಹಲ ಮನೆ ಮಾಡಿದೆ.

    ಈಗಾಗಲೇ ಗುಂಡಿ ನಂಬರ್ 16ರಲ್ಲಿ ಉತ್ಖನನ ಮುಗಿದಿದೆ. ಆದರೆ, ಸ್ಪಾಟ್ ನಂಬರ್ 13 ಇನ್ನೂ ಕಗ್ಗಂಟಾಗಿದೆ. ಭಾನುವಾರದ ರಜೆಯ ನಂತರ ಇಂದು ಮತ್ತೆ ಶೋಧಕಾರ್ಯ ನಡೆಯಲಿದೆ. ಒಟ್ಟು 30 ಸ್ಪಾಟ್‌ಗಳಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ತಿಳಿಸಿದ್ದಾನೆ. ಗ್ರಾಮದಲ್ಲಿ ದಿನಕ್ಕೊಂದು ಗುಡ್ಡವನ್ನು ಸುತ್ತಿಸುತ್ತಿದ್ದಾನೆ. ಇದನ್ನೂ ಓದಿ: ಮಸೀದಿ, ಚರ್ಚ್‌ನಲ್ಲಿ ಶವ ಹೂತಿಡಲಿಲ್ವಾ.. ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ: ಜನಾರ್ದನ ಪೂಜಾರಿ ಪ್ರಶ್ನೆ

    ಸಮಾಧಿ ಶೋಧ ಜೊತೆಗೆ ಎಸ್‌ಐಟಿ ವಿಚಾರಣೆಯೂ ತೀವ್ರಗೊಂಡಿದೆ. ಧರ್ಮಸ್ಥಳ, ಬೆಳ್ತಂಗಡಿಯ ನಿವೃತ್ತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಎಸ್‌ಐಟಿ ಹಲವಾರು ಮಾಹಿತಿ ಸಂಗ್ರಹಿಸಿದೆ. ಅನಾಮಿಕ ವ್ಯಕ್ತಿಯ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಧರ್ಮಸ್ಥಳದ ನಿವೃತ್ತ ಠಾಣಾಧಿಕಾರಿಗಳಿಂದಲೂ ಮಾಹಿತಿ ಸಂಗ್ರಹ ಮಾಡಲಾಗಿದೆ. 20 ವರ್ಷ ನೇತ್ರಾವತಿ ಸಮೀಪ ಬಿಡಾರದಲ್ಲಿ ಅನಾಮಿಕ ವಾಸಿಸಿದ್ದ.

    ಎಸ್‌ಐಟಿ ಇದುವರೆಗೂ ನಡೆಸಿದ ಶೋಧದಲ್ಲಿ ಒಂದೇ ಒಂದು ಕುರುಹು ಪತ್ತೆಯಾಗಿಲ್ಲ. ಎಸ್‌ಐಟಿ ಅಧಿಕಾರಿಗಳಿಗೆ ಮಣ್ಣು ಅಗೆಸುವ ಕೆಲಸ ಇನ್ನು ಎಷ್ಟು ದಿನ ಎಂಬ ಪ್ರಶ್ನೆ ಉದ್ಭವಿಸಿದೆ. ಅನಾಮಿಕ ಹೇಳಿದ ರೀತಿ ಒಂದೇ ಒಂದು ಗುಂಡಿಯಲ್ಲೂ ಆರೋಪದ ಕುರುಹುಗಳು ಪತ್ತೆಯಾಗಿಲ್ಲ. ಇದನ್ನೂ ಓದಿ: ಧರ್ಮಸ್ಥಳ ಗುಂಪು ಘರ್ಷಣೆ – 6 ಆರೋಪಿಗಳು ಅರೆಸ್ಟ್‌

    ಇತ್ತ, ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಕೇಸ್‌ನಲ್ಲಿ ಹಲವು ವೈದ್ಯರಿಗೆ ನೊಟಿಸ್ ನೀಡುವ ಸಾಧ್ಯತೆ ಇದೆ. ಯುಡಿಆರ್ ಕೇಸ್‌ಗಳ ಮರಣೋತ್ತರ ವರದಿಗಳ ಬಗ್ಗೆ ಮಾಹಿತಿ ಪಡೆಯಲು ಈ ಕ್ರಮಕ್ಕೆ ಎಸ್‌ಐಟಿ ಮುಂದಾಗಿದೆ. 1995 ರಿಂದ 2014ರ ವರೆಗಿನ ಯುಡಿಆರ್ ಕೇಸ್‌ಗಳ ತನಿಖೆಯನ್ನು ಆರಂಭಿಸಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದ ಯುಡಿಆರ್, ಕೊಲೆ, ಅನಾಥ ಶವ ಪತ್ತೆ ಪ್ರಕರಣಗಳ ತನಿಖೆ ಆರಂಭಿಸಲಾಗಿದ್ದು, ಎಲ್ಲಾ ಕೇಸ್‌ಗಳ ಮರಣೋತ್ತರ ಪರೀಕ್ಷೆ ವರದಿಗಳ ಆಳವಾದ ತನಿಖೆಗೆ ಎಸ್‌ಐಟಿ ಮುಂದಾಗಿದೆ. 19 ವರ್ಷಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರ ಲಿಸ್ಟ್ ಸಿದ್ಧವಾಗಿದೆ. ವೈದ್ಯರು ಹಾಗೂ ಡಿ ಗ್ರೂಪ್ ನೌಕರರ ದಾಖಲೆಯನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಫೊರೆನ್ಸಿಕ್ ವೈದ್ಯರ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ. ವೈದ್ಯರು ಹಾಗೂ ಡಿ ಗ್ರೂಪ್ ನೌಕರರರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಿದೆ. ಪೋಸ್ಟ್ ಮಾರ್ಟಂ ವರದಿಗಳಲ್ಲಿ ಅನುಮಾನ ಅಥವಾ ಗೊಂದಲ ಇದ್ದರೆ ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ.

    ಇಂದು ಜಿಪಿಆರ್‌ನಿಂದ ಶೋಧ ನಡೆಯುವುದು ಅನುಮಾನ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಮಂಗಳೂರು ಭೇಟಿ ರದ್ದುಗೊಳಿಸಿದ್ದಾರೆ. ಜಿಪಿಆರ್ ಬಂದ್ರೆ ಭೇಟಿ ನೀಡುವ ಪ್ಲ್ಯಾನ್ ಇದೆ. ಜಿಪಿಆರ್ ಅಲಭ್ಯ ಹಿನ್ನೆಲೆ ಇಂದು ಮೊಹಂತಿ ಭೇಟಿ ರದ್ದು ಮಾಡಿದ್ದಾರೆ.

  • ಧರ್ಮಸ್ಥಳದಲ್ಲಿ ಅಸ್ಥಿ ಉತ್ಖನನ; ಗುಂಡಿ 6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು

    ಧರ್ಮಸ್ಥಳದಲ್ಲಿ ಅಸ್ಥಿ ಉತ್ಖನನ; ಗುಂಡಿ 6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು

    – ಗುರುತಿಸಿದ ಪಾಯಿಂಟ್‌ಗಳಲ್ಲಿ ಗನ್‌ಮ್ಯಾನ್ ನಿಯೋಜನೆ

    ಮಂಗಳೂರು: ಧರ್ಮಸ್ಥಳದಲ್ಲಿ (Dharmasthala Mass Burial Case) ಅಸ್ಥಿ ಉತ್ಖನನದ ವೇಳೆ 6ನೇ ಪಾಯಿಂಟ್‌ನಲ್ಲಿ ಸಿಕ್ಕ ಮೂಳೆ 40-50 ವರ್ಷ ಹಳೆಯದ್ದು ಎಂಬ ಮಾಹಿತಿ ಸಿಕ್ಕಿದೆ.

    ಧರ್ಮಸ್ಥಳದ ನೇತ್ರಾವತಿ ತಟದಲ್ಲಿ ಅಸ್ಥಿ ಉತ್ಖನನ ನಡೆಯುತ್ತಿದೆ. ಈವರೆಗಿನ ಉತ್ಖನನದಲ್ಲಿ ಪಾಯಿಂಟ್ 6ರಲ್ಲಿ ಮಾತ್ರ ಅಸ್ಥಿ ಸಿಕ್ಕಿದೆ. ಗುಂಡಿ 6ರಲ್ಲಿ ಸಿಕ್ಕ ಮೂಳೆಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಸಿಕ್ಕಿರುವ ಅಸ್ಥಿ 40-50 ವರ್ಷಗಳ ಹಿಂದಿನದ್ದು ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕಾನೂನು ಪ್ರಕ್ರಿಯೆ ನಡೆಸದೆ ಬಾಲಕಿಯ ಮೃತದೇಹ ದಫನ್ ಆರೋಪ – ಎಸ್‍ಐಟಿ ಕಚೇರಿಗೆ ಬಂದ ಮತ್ತೊಬ್ಬ ದೂರುದಾರ

    40 ವರ್ಷಗಳ ಹಿಂದೆ ಶವ ಹೂತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದು ಪುರುಷನ ಅಸ್ಥಿಪಂಜರ. ಇನ್ನೊಂದು ವಾರದಲ್ಲಿ ಅಧಿಕೃತ ಮಾಹಿತಿ ಹೊರಬರಲಿದೆ.

    ಅಸ್ಥಿ ಉತ್ಖನನಕ್ಕೆ ಭಾನುವಾರ ಬ್ರೇಕ್ ನೀಡಲಾಗಿದೆ. ಇದುವರೆಗೂ 10 ಪಾಯಿಂಟ್‌ಗಳಲ್ಲಿ ಉತ್ಖನನ ನಡೆದಿದೆ. ಆದರೆ, 6ನೇ ಪಾಯಿಂಟ್ ಬಿಟ್ಟರೆ ಯಾವುದರಲ್ಲೂ ಕುರುಹು ಪತ್ತೆಯಾಗಿಲ್ಲ. ಮತ್ತೆ ನಾಳೆ ಪಾಯಿಂಟ್ ನಂ. 11, 12, 13ರಲ್ಲಿ ಶೋಧ ಕಾರ್ಯಾಚರಣೆ ನಡೆಯಲಿದೆ. ಈ ಮೂರು ಸ್ಪಾಟ್‌ಗಳ ಬಗ್ಗೆ ಕುತೂಹಲ ಹೆಚ್ಚಿದೆ. ಇದನ್ನೂ ಓದಿ: ಧಾರಾಕಾರ ಮಳೆ ನಡುವೆ ನಂ.10 ರಲ್ಲಿ ಶೋಧ – ದೂರುದಾರ ವ್ಯಕ್ತಿಗೆ ಮತ್ತೆ ನಿರಾಸೆ

    ಈ 3 ಸ್ಥಳಗಳಲ್ಲಿ ಸಾಕ್ಷ್ಯ ಸಿಗದಿದ್ದರೆ ಅನಾಮಿಕನ ವಿಚಾರಣೆ ಸಾಧ್ಯತೆಯಿದೆ. ಇತ್ತ ನೇತ್ರಾವತಿ ತಟದ ಪಾಯಿಂಟ್‌ಗಳಲ್ಲಿ ಬಿಗಿಭದ್ರತೆ ಹೆಚ್ಚಿಸಲಾಗಿದೆ. ಶೋಧ ನಡೆದ ಸ್ಥಳಗಳಲ್ಲಿ ಗನ್‌ಮ್ಯಾನ್ ನಿಯೋಜನೆ ಮಾಡಲಾಗಿದೆ. ನಾಳಿನ ಶೋಧ ನಡೆಸಲಿರುವ ಸ್ಥಳಗಳಲ್ಲೂ ಭದ್ರತೆ ಕಲ್ಪಿಸಲಾಗಿದೆ.