Tag: Dharmasthala Case

  • ಧರ್ಮಸ್ಥಳ ಪ್ರಕರಣವನ್ನು ರಾಜಕೀಯಕ್ಕೆ ಬಳಸಲು ಸಾಧ್ಯವಿಲ್ಲ: ಹೆಚ್.ಕೆ ಪಾಟೀಲ್

    ಧರ್ಮಸ್ಥಳ ಪ್ರಕರಣವನ್ನು ರಾಜಕೀಯಕ್ಕೆ ಬಳಸಲು ಸಾಧ್ಯವಿಲ್ಲ: ಹೆಚ್.ಕೆ ಪಾಟೀಲ್

    ಗದಗ: ಧರ್ಮಸ್ಥಳ ಪ್ರಕರಣವನ್ನು ರಾಜಕೀಯಕ್ಕೆ ಬಳಕೆ ಮಾಡಲು ಸಾಧ್ಯನಾ ಅಂತ ನೋಡಲು ಪ್ರಯತ್ನ ಮಾಡ್ತಿದ್ದಾರೆ. ಅಂತವರಿಗೆ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕಾನೂನು, ನ್ಯಾಯ ಸಚಿವ ಹೆಚ್.ಕೆ ಪಾಟೀಲ್ (H K Patil) ಹೇಳಿದ್ದಾರೆ.

    ಗದಗದಲ್ಲಿ (Gadag) ಮಾಧ್ಯಮಗಳೊಂದಿಗೆ ಮಾತನಾತನಾಡಿದ ಅವರು, ಧರ್ಮಸ್ಥಳದ (Dharmasthala Case) ವಿಷಯ ವಿಧಾನಸಭೆ ಒಳಗೆ ಚರ್ಚೆಗೆ ಬಂದಿದೆ. ಗೃಹ ಸಚಿವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅನಾಮಿಕ ವ್ಯಕ್ತಿ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ನೀಡಿದ್ದ. ಅದರ ಬಗ್ಗೆ ನ್ಯಾಯಯುತವಾಗಿ ತನಿಖೆ ನಡೆಯಬೇಕಾಗಿತ್ತು. ಆ ತನಿಖೆ ನಡೆದಿದೆ. ತನಿಖೆಯು ಯಾವ ಹಂತದಲ್ಲಿದೆ ಎಂಬ ಕೆಲವು ಭಾಗ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಈ ಬಗ್ಗೆ ಬಹುಶಃ ಸೋಮವಾರ ಇನ್ನು ಹೆಚ್ಚಿನ ಮಾಹಿತಿಯನ್ನು ಗೃಹ ಸಚಿವರು ನೀಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಮನೆ ಮೇಲೆ ಇ.ಡಿ ದಾಳಿ; 1.68 ಕೋಟಿ, 6 ಕೆಜಿ ಚಿನ್ನದ ಬಿಸ್ಕೆಟ್‌ ವಶಕ್ಕೆ

    ಶಾಸನ ಸಭೆಯಲ್ಲಿ ಚರ್ಚೆ ಮಾಡಿದ್ದರಿಂದ ಸೋಮವಾರ ಸರ್ಕಾರ ತನ್ನ ಉತ್ತರ ನೀಡಲಿದೆ. ನಾವು ಧರ್ಮಸ್ಥಳ ಮಂಜುನಾಥನ ಸನ್ನಿಧಾನ ಬಗ್ಗೆ ವಿಶೇಷ ಭಕ್ತಿ, ಗೌರವ, ಅಭಿಮಾನ ಹೊಂದಿದವರು. ಆದ್ದರಿಂದ ಸರ್ಕಾರದ ಬಗ್ಗೆ ಯಾರು ಅನುಮಾನದ ಮಾತುಗಳನ್ನಾಡುತ್ತಿದ್ದಾರೆ. ಅವರು ಕೇವಲ ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ. ಇವತ್ತು ಮಾತನಾಡುವವರು 10 ದಿನಗಳ ಹಿಂದೆ ಯಾಕೆ ಮಾತನಾಡಲಿಲ್ಲ.? ಸಮಯದ ಉಪಯೋಗ ಮಾಡಿಕೊಂಡು ಏನಾದ್ರು ಮಾಡುವ ಪ್ರಯತ್ನಿಸಿದರೆ ಅದರಿಂದ ಏನು ಲಾಭ ಆಗುವುದಿಲ್ಲ ಎಂದು ಧರ್ಮಸ್ಥಳ ಪ್ರಕರಣ ರಾಜಕೀಯಕ್ಕೆ ಬಳಸಿಕೊಳ್ಳುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ – ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ, 5050 ವಿಭೂತಿ ಸಿದ್ಧತೆ

    ಇನ್ನು ಒಳಮೀಸಲಾತಿ ಕುರಿತು ಮಾತನಾಡಿದ ಅವರು, ಒಳಮೀಸಲಾತಿಗೆ ಸಂಬಂಧಪಟ್ಟಂತೆ ಆ.16 ರಂದು ವಿಶೇಷ ಸಚಿವ ಸಂಪುಟ ಕರೆಯಲಾಗಿತ್ತು. ಆದರೆ ಈ ಬಗ್ಗೆ ಕೆಲವು ಸಚಿವರು, ಸಿಎಂ ಅವರನ್ನು ಭೇಟಿಯಾಗಿ ಕೆಲವು ವಿಚಾರಗಳನ್ನು ಚರ್ಚೆ ಮಾಡ್ತಿದ್ದಾರೆ. ಅದಕ್ಕೆ ಒಂದೆರಡು ದಿನ ಹೆಚ್ಚಿಗೆ ಸಮಯ ತೆಗೆದುಕೊಂಡಿದ್ದಾರೆ. ಆದ್ದರಿಂದ ಆ.19ರಂದು ಸಚಿವ ಸಂಪುಟದ ಸಭೆಯನ್ನು ಕರೆಯಲಾಗಿದೆ. ಅದರೊಳಗೆ ನಾಗಮೋಹನ್‌ದಾಸ್ ವರದಿ ಬಗ್ಗೆ ಅಂತಿಮವಾಗಿ ಚರ್ಚೆ ಹಾಗೂ ನಿರ್ಣಯ ಆಗುತ್ತದೆ ಎಂದು ತಿಳಿಸಿದ್ದಾರೆ.

  • ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲೂ ಮತಗಳ್ಳತನ ಮಾಡಿಯೇ ಬಿಜೆಪಿ ಗೆದ್ದಿದೆ – ಎಂ.ಲಕ್ಷ್ಮಣ್‌ ಆರೋಪ

    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲೂ ಮತಗಳ್ಳತನ ಮಾಡಿಯೇ ಬಿಜೆಪಿ ಗೆದ್ದಿದೆ – ಎಂ.ಲಕ್ಷ್ಮಣ್‌ ಆರೋಪ

    – ಧರ್ಮಸ್ಥಳ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತೆ ಎಂದ ಕೆಪಿಸಿಸಿ ವಕ್ತಾರ

    ಮಡಿಕೇರಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲೂ ಮತಗಳ್ಳತನ (Vote Rigging) ನಡೆದಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ (M Lakshman) ಆರೋಪಿಸಿದ್ದಾರೆ.

    ಮಡಿಕೇರಿಯಲ್ಲಿಂದು ಮಾತನಾಡಿದ ಅವರು, ಬೆಂಗಳೂರಿನಲ್ಲಿ (Bengaluru) ರಾಹುಲ್‌ ಗಾಂಧಿ ಅವರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮೈಸೂರು-ಕೊಡಗು (Mysuru Kodagu) ಕ್ಷೇತ್ರದಲ್ಲೂ ಮತಗಳ್ಳತನ ಆಗಿರುವ ಬಗ್ಗೆ ಪ್ರಸ್ತಾಪಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಬರುವ ಮತಗಳು ಬಹುತೇಕ ಕಳವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇನೆಂದು ತಿಳಿಸಿದ್ದೇನೆ. ಇದನ್ನೂ ಓದಿ: ಪ್ರತಾಪ್‌ ಸಿಂಹ ಮೊಬೈಲ್‌ SITಗೆ ಕೊಟ್ರೆ ಪ್ರಜ್ವಲ್‌ ರೇವಣ್ಣನಂತೆ ಜೈಲು ಶಿಕ್ಷೆ ಆಗುತ್ತೆ – ಎಂ.ಲಕ್ಷ್ಮಣ್ ಬಾಂಬ್‌

    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 23 ಲಕ್ಷ ಮತದಾರರಿದ್ದು, 8 ವಿಧಾನಸಭಾ ಕ್ಷೇತ್ರಗಳಲ್ಲಿ 2,202 ಮತಗಟ್ಟೆಗಳಿವೆ. ಬೂತ್‌ ವಾರು ವಿಶ್ಲೇಷಣೆ ಮಾಡಿ ಪಟ್ಟಿ ಮಾಡಲಾಗಿದ್ದು, 292 ಮತಗಟ್ಟೆಗಳಲ್ಲಿ ಇವಿಎಂ ರಿಗ್ಗಿಂಗ್ ನಡೆದಿರುವ ಬಗ್ಗೆ ದಾಖಲೆ ಸಂಗ್ರಹಿಸಲಾಗಿದೆ. ಮೈಸೂರಿನ ಚಾಮರಾಜ, ಕೃಷ್ಣರಾಜ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ 1,45,616 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್‌ 27,522 ಹಾಗೂ ಬಿಜೆಪಿಗೆ 1,18,094 ಮತ ಬಂದಿವೆ. 2018, 2023ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆ ಶೇ 40ಕ್ಕಿಂತ ಹೆಚ್ಚು ಮತಗಳು ಬಂದಿದ್ದವು. ಆದರೆ, 2024ರ ಚುನಾವಣೆಯಲ್ಲಿ ಶೇ 10ಕ್ಕಿಂತಲೂ ಕಡಿಮೆ ಮತಗಳು ಮಾತ್ರ ಬಂದಿರುವುದು ಮತಗಳವು ಆಗಿರೋದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.

    ಗ್ರಾಮವೊಂದರ ಬೂತ್‌ ನಲ್ಲಿ 750 ಮತ ಚಲಾವಣೆಯಾಗಿದ್ದು, 15 ಮನೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಕನಿಷ್ಠ 50 ಮತಗಳಾದರೂ ಬರಬೇಕಿತ್ತು. ಆದ್ರೆ ಬಂದಿದ್ದು 7 ಮತ ಮಾತ್ರ. ನರಸಿಂಹರಾಜ ಕ್ಷೇತ್ರದ ಶಾಂತಿನಗರದಲ್ಲಿ ಒಂದೇ ಸಮುದಾಯ ಮಾತ್ರವೇ ಇದೆ. 700 ಮತಗಳಲ್ಲಿ 500 ಕಾಂಗ್ರೆಸ್‌ಗೆ ಮತ್ತು ಬಿಜೆಪಿಗೆ 200 ಮತ ಸಿಕ್ಕಿವೆ. ಇಲ್ಲಿ ಬಿಜೆಪಿಗೆ ಒಂದೇ ಒಂದೂ ವೋಟು ಸಿಗುವ ಅವಕಾಶ ಇಲ್ಲ. ಜೊತೆಗೆ 700 ಮತದಾರರಿದ್ದರೂ 750 ಮತಗಳು ಚಲಾವಣೆಯಾಗಿವೆ. ಈವೆಲ್ಲವೂ ಮತ ಕಳವು ಆಗಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದು ಅರೋಪಿಸಿದ್ರು. ಇದನ್ನೂ ಓದಿ: ಬೆಂಗಳೂರು-ಬೆಳಗಾವಿ ವಂದೇಭಾರತ್‌ ರೈಲಿಗೆ ಮೋದಿ ಹಸಿರು ನಿಶಾನೆ

    ಧರ್ಮಸ್ಥಳ ಕೇಸ್‌; ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ
    ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಲಕ್ಞ್ಮಣ್‌, ದೂರುದಾರ ಕೋರ್ಟ್‌ನಲ್ಲಿ ನೇರವಾಗಿ ಹೇಳಿಕೆ ನೀಡಿದ್ದಾರೆ. ಅದರ ಆಧಾರದ ಮೇಲೆ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸುತ್ತಿದೆ. ತನಿಖೆಯೇ ಮಾಡಬಾರದು ಅಂದ್ರೆ ಹೇಗೆ? ಇಲ್ಲಿ ಧರ್ಮಸ್ಥಳ ದೇವಸ್ಥಾನದ ಬಗ್ಗೆಯಾಗಲಿ, ವೀರೇಂದ್ರ ಹೆಗ್ಗಡೆಯವರ ಬಗ್ಗೆಯಾಗಲಿ ತನಿಖೆ ಮಾಡುತ್ತಿಲ್ಲ. ದೂರುದಾರ 164 ಅಡಿಯಲ್ಲಿ ಹೇಳಿಕೆ ನೀಡಿದ್ದರಿಂದ ಎಸ್‌ಐಟಿ ತನಿಖೆ ನಡೆಯುತ್ತಿದೆ. ಆದಷ್ಟು ಬೇಗ ತನಿಖೆ ಪೂರ್ಣಗೊಳ್ಳಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ಕೆಲಸವನ್ನು ಸರ್ಕಾರ ಮಾಡೇ ಮಾಡುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಬಿಜೆಪಿಯ ಯಾವೊಬ್ಬ ನಾಯಕ 10 ರೂ. ಅನುದಾನ ತಂದಿಲ್ಲ: ಡಿಕೆಶಿ ಆಕ್ರೋಶ

  • Dharmasthala‌ Case | ಇಡೀ ದೇಶದ ಹಿಂದೂಗಳಿಗೆ ನೋವಾಗಿದೆ – ಅನಾಮಿಕನನ್ನು ಬಂಧಿಸಿ: ಈಶ್ವರಪ್ಪ

    Dharmasthala‌ Case | ಇಡೀ ದೇಶದ ಹಿಂದೂಗಳಿಗೆ ನೋವಾಗಿದೆ – ಅನಾಮಿಕನನ್ನು ಬಂಧಿಸಿ: ಈಶ್ವರಪ್ಪ

    ಶಿವಮೊಗ್ಗ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇವೆ (Dharmasthala Case) ಎಂದು ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಇದರಿಂದ ಇಡೀ ದೇಶದ ಹಿಂದೂಗಳಿಗೆ ನೋವಾಗಿದೆ. ಆ ಅನಾಮಿಕನನ್ನು ಬಂಧಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S Eshwarappa) ಆಗ್ರಹಿಸಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ, ಹಿಂದೂ ಸಮಾಜವನ್ನ ಅಪಮಾನ ಮಾಡಲು ಹೊರಟಿದ್ದಾರೆ. ಧರ್ಮಸ್ಥಳದಂತ ಪುಣ್ಯಕ್ಷೇತ್ರದ ಬಗ್ಗೆ ಜನರಲ್ಲಿ ಅನುಮಾನ ಸೃಷ್ಟಿಸಲು ಪ್ರಯತ್ನಿಸುತ್ತಿರುವವರು ಯಾರು? ಇದನ್ನು ರಾಜ್ಯ ಸರ್ಕಾರ ತಕ್ಷಣ ಕಂಡು ಹಿಡಿಯಲಿ. 13 ಕಡೆ ನೂರಾರು ಹೆಣ ಹೂತು ಹಾಕಿದ್ದೇನೆ ಎಂದು ಒಬ್ಬ ವ್ಯಕ್ತಿ ಹೇಳಿದ್ದಾನೆ. ಅವನ ಹಿಂದೆ ಯಾರು ಇದ್ದಾರೆ? ಅವನೊಬ್ಬನೇ ನೂರಾರು ಹೆಣ ಹೂಳಲು ಸಾಧ್ಯವೇ? ಅವನ ಹಿಂದೆ ಯಾವ ರಾಷ್ಟ್ರದ್ರೋಹಿ ಹಾಗೂ ಧರ್ಮ ದ್ರೋಹಿ ಗುಂಪಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸಮಾಧಿ ಶೋಧ ಮ್ಯಾರಥಾನ್ – ಐದು ಅಡಿ ಅಗೆದರೂ ಸಿಕ್ಕಿದ್ದು ಬರೀ ಮಣ್ಣು

    ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಕುತಂತ್ರ ನಡೆದಿದೆ. ಅನಾಮಿಕ ವ್ಯಕ್ತಿ ಸ್ಥಳ ತೋರಿಸಲು ವಿಫಲವಾಗಿದ್ದಾನೆ. ಸರ್ಕಾರ ಮೊದಲು ಅನಾಮಿಕನನ್ನು ಅರೆಸ್ಟ್ ಮಾಡಲಿ. ಮೊದಲು ಅವನಿಂದ ಪೂರ್ಣ ವಿಚಾರ ತಿಳಿದುಕೊಳ್ಳಲಿ. ರಾಜ್ಯ ಸರ್ಕಾರ ಈ ನಡುವೆ ಹೊಸ ಆದೇಶ ಹೊರಡಿಸಿದೆ.
    ಈ ವಿಚಾರಕ್ಕೆ ಯಾರನ್ನ ಬೇಕಾದರೂ ವಿಚಾರಣೆ, ಅರೆಸ್ಟ್ ಮಾಡಬಹುದು. ಅವನನ್ನು ಅರೆಸ್ಟ್ ಮಾಡಿ, ಸತ್ಯವನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

    ಯಾರು ಕೂಡ ಹಿಂದೂ ಧರ್ಮ ಹಾಗೂ ಧರ್ಮಸ್ಥಳವನ್ನು ಹಾಳು ಮಾಡಲು ಸಾಧ್ಯವಿಲ್ಲ. ಈ ಕುತಂತ್ರದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Dharmasthala‌ Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ

  • ಅನಾಮಿಕ ವ್ಯಕ್ತಿ ಗುರುತಿಸಿದ 13‌ ಜಾಗದ ಪೈಕಿ ಮೊದಲ ಜಾಗ ಅಗೆತ – ಎಷ್ಟೇ ಅಗೆದ್ರೂ ಸಿಗದ ಕುರುಹು

    ಅನಾಮಿಕ ವ್ಯಕ್ತಿ ಗುರುತಿಸಿದ 13‌ ಜಾಗದ ಪೈಕಿ ಮೊದಲ ಜಾಗ ಅಗೆತ – ಎಷ್ಟೇ ಅಗೆದ್ರೂ ಸಿಗದ ಕುರುಹು

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳ ಹೂತಿಟ್ಟಿದ್ದೆ ಎಂದು ಅನಾಮಿಕ ವ್ಯಕ್ತಿ ದೂರು ನೀಡಿದಂತೆ, ಭೂಮಿಯನ್ನ ಅಗೆದರೂ ಸಮಾಧಿಯೊಳಗಿನ‌ ಸತ್ಯ ನಿಗೂಢವಾಗಿಯೇ ಉಳಿದಿದೆ. ಅನಾಮಿಕ‌ ವ್ಯಕ್ತಿ ತೋರಿಸಿದ 13 ಜಾಗಗಳ ಪೈಕಿ ಮೊದಲ ಜಾಗದಲ್ಲಿ‌ 15 ಬೈ 8 ಅಡಿ ಅಗೆದ್ರೂ‌ ಏನೂ ಸಿಗದೆ ಎಸ್ಐಟಿ ಸುಸ್ತಾಗಿದೆ.

    ಆದರೂ ಆತ ಗುರುತಿಸಿರೋ ಎಲ್ಲಾ‌ 13 ಜಾಗಗಳನ್ನ‌ ಅಗೆಯಲು ಎಸ್ಐಟಿ ನಿರ್ಧರಿಸಿದ್ದು, ಬುಧವಾರ ಆ ಕೆಲಸ ಮುಂದುವರಿಯಲಿದೆ. ಈ‌ ನಡುವೆ ಅನಾಮಿಕ‌ ವ್ಯಕ್ತಿಯ‌ ನಡೆ ಅನುಮಾನ‌ ಹುಟ್ಟಿಸಿದ್ದು, ಎಸ್ಐಟಿ ಅಧಿಕಾರಿಗಳೂ ಗೊಂದಲದಲ್ಲಿದ್ದಾರೆ.

    ನೂರಾರು ಶವಗಳನ್ನು ಹೂತಿಟ್ಟಿದ್ದೆ‌ ಎಂದಿದ್ದ ಅನಾಮಿಕ ವ್ಯಕ್ತಿ ದೂರು ನೀಡಿದ್ದ. ಬಳಿಕ ಆತನೇ ಬಂದು ನೇತ್ರಾವತಿ ಸ್ನಾನಘಟ್ಟದ ಪರಿಸರದಲ್ಲಿ ಒಟ್ಟು 13 ಜಾಗಗಳನ್ನ ಗುರುತಿಸಿ ಎಲ್ಲಾ‌ ಕಡೆ ಶವಗಳನ್ನು ಹೂತಾಕಿದ್ದೇನೆ ಎಂದು ಅಧಿಕಾರಿಗಳ ಜೊತೆ ಜಾಗ ಗುರುತು ಮಾಡಿದ್ದಾನೆ. ಹೀಗಾಗಿ, ನಿನ್ನೆ ದಿನ ಪೂರ್ತಿ ಆತ ತೋರಿಸಿದ 13 ಜಾಗಗಳ ಪೈಕಿ ಮೊದಲ ಜಾಗದಲ್ಲಿ ಉತ್ಖನನ ಮಾಡೋ ಕಾರ್ಯ ನಡೆಸಲಾಗಿತ್ತು. ಬರೋಬ್ಬರಿ ಏಳು ಗಂಟೆಗಳ ಕಾಲ ನೇತ್ರಾವತಿ ಸ್ನಾನಘಟ್ಟದ ಬಳಿಯ ಜಾಗದಲ್ಲಿ 12‌ ಸಿಬ್ಬಂದಿ ನಾಲ್ಕೂವರೆ ಅಡಿ ಆಳ ಅಗೆದ್ರೂ ಏನು ಸಿಗಲಿಲ್ಲ. ಬಳಿಕ ಹಿಟಾಚಿ ಯಂತ್ರದ ಮೂಲಕ 15 ಅಡಿ ಅಗಲ ಹಾಗೂ 8 ಅಡಿ ಆಳಕ್ಕೆ ಅಗೆಯಲಾಗಿದೆ. ಸಂಜೆ 6 ಗಂಟೆಯವರೆಗೂ ಅಗೆದಾಗ ಏನೂ ಸಿಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಹೀಗಾಗಿ ಸಮಾಧಿಯೊಳಗಿನ‌ ಸತ್ಯ ಮತ್ತೆ ನಿಗೂಢವಾಗಿಯೇ ಉಳಿಯಿತು.

    ಅನಾಮಿಕ ವ್ಯಕ್ತಿ ತೋರಿಸಿದ 13 ಜಾಗಗಳ ಪೈಕಿ ಮೊದಲ ಜಾಗವನ್ನು ದಿನಪೂರ್ತಿ ಅಗೆದ್ರೂ ಏನೂ ಸಿಗದೇ ಇರುವುದರಿಂದ ಇನ್ನುಳಿದ ಜಾಗದ ಕಡೆ ಎಸ್ಐಟಿ ಗಮನ ಹರಿಸಿದೆ. ಇನ್ನುಳಿದ 12 ಜಾಗಗಳನ್ನೂ ಅಗೆಯಲು ಎಸ್ಐಟಿ ನಿರ್ಧರಿಸಿದೆ. ಮೊದಲ ಜಾಗದಲ್ಲಿ ಏನೂ ಸಿಗದಿದ್ರೂ ಮುಂದಿನ ಜಾಗದಲ್ಲಾದ್ರೂ ಆತ ಹೂತಿಟ್ಟಿದ್ದಾನೆ ಎನ್ನುವ ಯಾವುದಾದರು ಕುರುಹುಗಳು ಸಿಗಬಹುದು ಎಂದು ಎಸ್ಐಟಿ ಇಂದು ಮತ್ತೆ ಅಗೆಯುವ ಕೆಲಸಕ್ಕೆ ಮುಂದಾಗಿದೆ. ಮೊದಲ ಜಾಗವನ್ನು ಬಿಟ್ಟು ಇಂದು‌ ಎರಡನೇ ಬಳಿಕ ಮೂರನೇ ಜಾಗವನ್ನು ಅಗೆಯಲು ತಯಾರಿ‌ ನಡೆಸಿದೆ. ಇನ್ನುಳಿದ ಜಾಗಗಳು‌ ದುರ್ಗಮ ಕಾಡಿನಲ್ಲಿ ಇರುವ ಕಾರಣ ಅಲ್ಲಿ ಕಾರ್ಮಿಕರೇ ಅಗೆಯುವ ಅನಿವಾರ್ಯ ಇದೆ. ಹಿಟಾಚಿಯಂತ ಯಂತ್ರೋಪಕರಣಗಳು ಅರಣ್ಯದೊಳಗೆ ಹೋಗಲು ಕಷ್ಟಕರವಾಗಿದ್ದು, ಅಗತ್ಯ ಬಿದ್ರೆ ಅದಕ್ಕೂ ಎಸ್ಐಟಿ ಪ್ಲಾನ್ ಮಾಡಿಕೊಂಡಿದೆ. ಮೊದಲ ಜಾಗದಲ್ಲಿ ಯಾವುದೇ ಕಳೇಬರ ಸಿಗದೇ ಇರುವುದರಿಂದ ಕುತೂಹಲದಿಂದ ಇದ್ದ ಎಲ್ಲರಿಗೂ ಅನಾಮಿಕ ವ್ಯಕ್ತಿಯ ಮೇಲೆಯೇ ಇದೀಗ ಅನುಮಾನ ಹುಟ್ಟಿದೆ. ಈತ ಯಾವ ಉದ್ದೇಶ, ಕಾರಣ ಇಟ್ಟುಕೊಂಡು ಈ ರೀತಿ ಮಾಡಿದ್ದಾನೆ ಎನ್ನುವ ಮಾತುಗಳು ಹರಿದಾಡ್ತಿದೆ.

  • ಶೀಘ್ರವೇ ಧರ್ಮಸ್ಥಳ ಪ್ರಕರಣಗಳ ತನಿಖೆ ಆರಂಭ; ಎಸ್‌ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ: ಪರಮೇಶ್ವರ್

    ಶೀಘ್ರವೇ ಧರ್ಮಸ್ಥಳ ಪ್ರಕರಣಗಳ ತನಿಖೆ ಆರಂಭ; ಎಸ್‌ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ: ಪರಮೇಶ್ವರ್

    – ತನಿಖೆ ಬಗ್ಗೆ ಬಿಜೆಪಿಯಿಂದ ಗೊಂದಲ ಸೃಷ್ಟಿ

    ಬೆಂಗಳೂರು: ಧರ್ಮಸ್ಥಳ ಪ್ರಕರಣಗಳಲ್ಲಿ ಎಸ್‌ಐಟಿ ತಂಡಕ್ಕೆ ತನಿಖೆ ಆರಂಭಿಸಲು ಸೂಚನೆ ಕೊಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ತಿಳಿಸಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೂಡಲೇ ಧರ್ಮಸ್ಥಳಕ್ಕೆ (Dharmasthala) ಹೋಗಿ ತನಿಖಾ ಪ್ರಕ್ರಿಯೆ ಶುರು ಮಾಡಲು ಎಸ್‌ಐಟಿ (SIT) ತಂಡಕ್ಕೆ ತಿಳಿಸಲಾಗಿದೆ. ಇಂದು ಅಥವಾ ನಾಳೆ ಎಸ್‌ಐಟಿ ತಂಡ ಧರ್ಮಸ್ಥಳಕ್ಕೆ ಹೋಗಲಿದೆ. ಇನ್ನು ಧರ್ಮಸ್ಥಳದ ಪೊಲೀಸರಿಗೂ ಪ್ರಕರಣದ ಮಾಹಿತಿ, ದಾಖಲೆ ಕೊಡಲು ಸೂಚನೆ ಕೊಡಲಾಗಿದೆ ಎಂದರು. ಇದನ್ನೂ ಓದಿ: GST ನೋಟಿಸ್‌ ಕೊಟ್ಟ ಕೋತಿ ಕೆಲಸ ರಾಜ್ಯ ಸರ್ಕಾರದ್ದು- ನೋಟಿಸ್ ವಾಪಸ್ ಪಡೆಯಬೇಕು: ಸಿ.ಟಿ.ರವಿ

    ಇನ್ನು ಎಸ್‌ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ. ಯಾರಾದ್ರೂ ಹೊರಗೆ ಉಳಿಯುವುದಾದರೆ ನಮಗೆ ತಿಳಿಸಲಿ. ಆ ಬಗ್ಗೆ ಕ್ರಮ ಆಗಲಿದೆ. ಬದಲಾವಣೆ ಮಾಡಲಾಗುತ್ತದೆ. ಆದರೆ ಈವರೆಗೆ ಯಾರೂ ಈ ವಿಚಾರದಲ್ಲಿ ಮಾಹಿತಿ ಕೊಟ್ಟಿಲ್ಲ. ಇಲಾಖೆಗೂ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಇ-ಖಾತೆದಾರರಿಗೆ ಬಿಗ್ ಶಾಕ್ – ಬಿಬಿಎಂಪಿಯಿಂದ ಶೋಕಾಸ್ ನೋಟಿಸ್ ಜಾರಿ

    ಎಸ್‌ಐಟಿಗೆ ಕೆಲ ಬಿಜೆಪಿರ ಆಕ್ಷೇಪ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಎಸ್‌ಐಟಿಗೆ ಯಾಕೆ ಆಕ್ಷೇಪ ಮಾಡ್ತಿದ್ದಾರೆ? ಈಗಿಂದಲೇ ಯಾಕೆ ಅವರು ಏನೇನೋ ಫ್ರೇಮ್ ಮಾಡ್ತಿದ್ದಾರೆ. ಎಸ್‌ಐಟಿ ರಚನೆಯಲ್ಲಿ ರಾಜಕೀಯ ಉದ್ದೇಶ ಇದೆ ಅಂತ ಈಗಲೇ ಅವರು ಹೇಗೆ ಹೇಳ್ತಾರೆ. ಅವರ ಮನಸಲ್ಲಿ ಏನೋ ಇದೆ ಅಂತ ಆಯ್ತಲ್ಲ. ಸರ್ಕಾರ ಸತ್ಯ ಹೊರಗೆಳೆಯಲು ಎಸ್‌ಐಟಿ ರಚಿಸಿದೆ. ಈಗಲೇ ಬಿಜೆಪಿಯವರು ಅದೂ ಇದೂ ಹೇಳಿದ್ರೆ ಹೇಗೆ? ಸತ್ಯ ಹೊರಗೆ ಬರಲಿ ಅಂತ ಎಸ್‌ಐಟಿ ಮಾಡಿದ್ದೇವೆ. ಅಷ್ಟಕ್ಕೇ ಎಲ್ಲರೂ ಸೀಮಿತ ಆದ್ರೆ ಸಾಕು ಎಂದು ಹೇಳಿದರು.