Tag: Dharmasthala Case

  • Exclusive | ಧರ್ಮಸ್ಥಳ ಪ್ರಕರಣದ‌ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್‌ ಟಿವಿʼ – ಒಂದೂವರೆ ಲಕ್ಷ ಸಾಲ ಪಡೆದು ಎಸ್ಕೇಪ್‌ ಆಗಿದ್ದ ಮಾಸ್ಕ್‌ ಮ್ಯಾನ್‌

    Exclusive | ಧರ್ಮಸ್ಥಳ ಪ್ರಕರಣದ‌ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್‌ ಟಿವಿʼ – ಒಂದೂವರೆ ಲಕ್ಷ ಸಾಲ ಪಡೆದು ಎಸ್ಕೇಪ್‌ ಆಗಿದ್ದ ಮಾಸ್ಕ್‌ ಮ್ಯಾನ್‌

    – ಮಂಡ್ಯದ ಈ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೂ ಕಿರಿಕ್‌ ಮಾಡ್ಕೊಂಡಿದ್ದ ಮಾಸ್ಕ್‌ ಮ್ಯಾನ್‌
    – ಚಿಕ್ಕ ವಯಸ್ಸಿನಲ್ಲೇ ಮದ್ವೆ, ಕೆಲಸವಿಲ್ಲದೇ ಉಂಡಾಣಿ ಗುಂಡನಂತಿದ್ದ ದೂರುದಾರ

    ಮಂಡ್ಯ: ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿದಂತೆ ಸ್ಫೋಟಕ ವಿಚಾರಗಳನ್ನು ಬಯಲಿಗೆಳೆಯುತ್ತಿರುವ ನಿಮ್ಮ ʻಪಬ್ಲಿಕ್‌ ಟಿವಿʼ ಬುರುಡೆ ಪ್ರಕರಣದ ಮಾಸ್ಕ್‌ ಮ್ಯಾನ್‌ ಕುರಿತು ಇನ್ನಷ್ಟು ಎಕ್ಸ್‌ಕ್ಲೂಸಿವ್‌ ಮಾಹಿತಿಗಳನ್ನ ಬಯಲಿಗೆಳೆದಿದೆ. ಮಾಸ್ಕ್‌ ಮ್ಯಾನ್‌ನ ಹುಟ್ಟೂರು ಯಾವುದು? ಆತ ಓದಿದ್ದೇನು? ಊರಲ್ಲಿ ಏನು ಕೆಲಸ ಮಾಡಿಕೊಂಡಿದ್ದ? ಎಂಬೆಲ್ಲ ಮಾಹಿತಿಗಳನ್ನ ಬಹಿರಂಗಪಡಿಸಿದೆ.

    ಹೌದು. ಬುರುಡೆ ಪ್ರಕರಣದ ಮಾಸ್ಕ್‌ ಮ್ಯಾನ್‌ (Mask Man) ಮೂಲತಃ ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳದವನಂತೆ. 1ನೇ ತರಗತಿಯಿಂದ 3ನೇ ತರಗತಿವರೆಗೆ ಇದೇ ಗ್ರಾಮದಲ್ಲಿ ವಿದ್ಯಾಭ್ಯಾಸ ಕೂಡ ಮಾಡಿಕೊಂಡಿದ್ದ. ಈತನ ತಂದೆ-ತಾಯಿಗೂ ಒಳ್ಳೆಯ ಹೆಸರಿದೆ. 1994ರ ವರೆಗೆ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದಲ್ಲಿಲ್ಲೇ ಇದ್ದ. ಇಲ್ಲಿದ್ದಾಗ ಉಂಡಾಣಿ ಗುಂಡನ ರೀತಿ ಇದ್ದ. ಏನು ಕೆಲಸ ಮಾಡದೇ ಬೀದಿ ಬೀದಿ ತಿರುಗುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದ ಅಂತ ಖುದ್ದು ಅಲ್ಲಿನ ಗ್ರಾಮಸ್ಥರೇ ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು: ಮಾಸ್ಕ್‌ಮ್ಯಾನ್‌ ಜೊತೆ ಕೆಲಸ ಮಾಡಿದ್ದ ಕೆಲಸಗಾರ

    ಸರ್ಕಾರಿ ಜಾಗ ಬರೆದುಕೊಡುವಂತೆ ಕೇಳಿದ್ದ
    ಮೊದಲು ಮುಸುಕುದಾರಿ ಅಣ್ಣ ತನ್ಯಾಸಿ ಧರ್ಮಸ್ಥಳಕ್ಕೆ ಹೋಗಿದ್ದ. ಬಳಿಕ ಈ ಅನಾಮಿಕ ಕೂಡ 1994ರಲ್ಲಿ ಧರ್ಮಸ್ಥಳಕ್ಕೆ ಹೋದ. 2014ರಲ್ಲಿ ಇದೇ ಗ್ರಾಮಕ್ಕೆ ಅನಾಮಿಕ ಮೂರನೇ ಹೆಂಡತಿಯ ಜೊತೆ ಗ್ರಾಮಕ್ಕೆ ವಾಪಸ್ಸಾಗಿದ್ದ. ಈ ವೇಳೆ ಒಂದು ವರ್ಷ ಇದೇ ಗ್ರಾಮದಲ್ಲಿ ವಾಸವಿದ್ದ. ಈ ವೇಳೆ ಸರ್ಕಾರಿ ಜಾಗದಲ್ಲಿ ಗ್ರಾ.ಪಂ ನಿಂದ ಮಾಸ್ಕ್‌ ಮ್ಯಾನ್‌ಗೆ ಶೆಡ್‌ ಕೂಡ ಹಾಕಿಕೊಡಲಾಗಿತ್ತು. ಕೆಲ ದಿನಗಳ ನಂತರ ಗ್ರಾಮಸ್ಥರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಶೆಡ್ ಜಾಗವನ್ನು ನನ್ನ ಹೆಸರಿಗೆ ಬರೆದುಕೊಡಿ ಎಂದು ಗಲಾಟೆ ಕೂಡ ಮಾಡಿಕೊಂಡಿದ್ದ. ಆಗ ಗ್ರಾಮಸ್ಥರೊಂದಿಗೆ ಗಲಾಟೆ ಮಾಡಿಕೊಂಡು ಊರಿಂದ ಹೋರಟುಹೋಗಿದ್ದ. ಕಳೆದ ವರ್ಷದ ಪಿತೃಪಕ್ಷದ ವೇಳೆ ಇದೇ ಗ್ರಾಮಕ್ಕೆ ಮತ್ತೆ ಬಂದಿದ್ದ. ಈಗ ಧರ್ಮಸ್ಥಳದಲ್ಲಿ ಪ್ರತ್ಯಕ್ಷವಾಗಿ ಈ ರೀತಿ ಮಾತನಾಡ್ತಿರೋದು ತಪ್ಪು ಅಂತ ಗ್ರಾಮಸ್ಥರು ಎಳೆಎಳೆಯಾಗಿ ಮಾಸ್ಕ್‌ ಮ್ಯಾನ್‌ ಬಗೆಗಿನ ರಹಸ್ಯಗಳನ್ನ ಬಿಚ್ಚಿಟ್ಟಿದ್ದಾರೆ.

    ಧರ್ಮಸ್ಥಳದ ಬಗ್ಗೆ ಸುಳ್ಳುಗಳನ್ನೇ ಆತ ಹೇಳ್ತಿದ್ದಾನೆ. ದುಡ್ಡಿಗಾಗಿ ಈ ರೀತಿಯ ಕೆಲಸ ಮಾಡ್ತಾ ಇದ್ದಾನೇನೋ ಅನಿಸ್ತಿದೆ ಅಂತ ಅನಾಮಿಕನ ವಿರುದ್ಧ ಗ್ರಾಮಸ್ಥರ ಆಕ್ರೋಶದ ನುಡಿಗಳನ್ನಾಡಿದ್ದಾರೆ. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್‌

    ಗ್ರಾಮದ ಮುಖಂಡನಿಗೆ ಒಂದೂವರೆ ಲಕ್ಷ ಪಂಗನಾಮ
    2014ರಲ್ಲಿ ಗ್ರಾಮಕ್ಕೆ ವಾಪಸ್ಸಾದಾಗ ಹಸು ಸಾಕಬೇಕು ಎಂದಿದ್ದ. ಈ ವೇಳೆ ಬ್ಯಾಂಕ್‌ವೊಂದರಲ್ಲಿ ಗ್ರಾಮದ ಮುಖಂಡರು ಒಂದೂವರೆ ಲಕ್ಷ ಸಾಲ ಕೊಡಿಸಿದ್ದರು. ನಂತರ ಹಸುಗಳನ್ನು ಮಾರಿ ಎಸ್ಕೇಪ್‌ ಆದ. ಸಾಲಕೊಡಿಸಿದವರು ಸಾಲ ಕಟ್ಟುವ ಸ್ಥಿತಿ ಬಂತು. ಕಳೆದ ಒಂದೂವರೆ ವರ್ಷದ ಹಿಂದೆ ಮತ್ತೆ ಗ್ರಾಮದ ಒಬ್ಬರಿಗೆ ಕರೆ ಮಾಡಿ, ಲೋನ್ ತೆಗೆದುಕೊಳ್ಳಲು ಡಾಕ್ಯುಮೆಂಟ್ ಕೇಳಿದ್ದ. ನಂತರ ಡಾಕ್ಯುಮೆಂಟ್ ಕೊಡಲು ಆಗಲ್ಲ ಅಂತ ಗ್ರಾಮಸ್ಥರು ಹೇಳಿದ್ದರು ಎಂದು ಗ್ರಾಮದ ಮುಖಂಡರು ಹೇಳಿದ್ದಾರೆ.

  • ನಾನು ಹಣಕ್ಕಾಗಿ ಹೀಗೆ ಮಾಡಿಲ್ಲ, ಮಗಳು ಇಲ್ಲ ಅಂತ ಕೊರಗುತ್ತಿದ್ದೀನಿ: ಸುಜಾತಾ ಭಟ್ ಕಣ್ಣೀರು

    ನಾನು ಹಣಕ್ಕಾಗಿ ಹೀಗೆ ಮಾಡಿಲ್ಲ, ಮಗಳು ಇಲ್ಲ ಅಂತ ಕೊರಗುತ್ತಿದ್ದೀನಿ: ಸುಜಾತಾ ಭಟ್ ಕಣ್ಣೀರು

    – ಮನೆ ಖಾಲಿ ಮಾಡೋಕೆ ಹೇಳ್ತಿದ್ದಾರೆ, ನಾನು ಏನ್ ತಪ್ಪು ಮಾಡಿದ್ದೀನಿ?

    ಬೆಂಗಳೂರು: ನಾನು ಯಾರ ಹಣಕ್ಕಾಗಿಯೂ ಹೀಗೆ ಮಾಡಿಲ್ಲ. ನನ್ನ ಮಗಳು ಇಲ್ಲ ಅಂತಾ ಕೊರಗುತ್ತಿದ್ದೀನಿ. ಇದ್ದಿದ್ರೆ ನನ್ನ ನೋಡಿಕೊಳ್ಳುತ್ತಿದ್ದಳು ಎಂದು ಸುಜಾತಾ ಭಟ್ (Sujatha Bhat) ಕಣ್ಣೀರು ಹಾಕಿದ್ದಾರೆ.

    ‘ಪಬ್ಲಿಕ್ ಟಿವಿ’ ಜೊತೆ ಮಾತನಾಡುವಾಗ, ತಮ್ಮ ಬಗ್ಗೆ ಹೊರಗಡೆ ಕೇಳಿಬರುತ್ತಿರುವ ಮಾತುಗಳನ್ನು ನೆನೆದು ಕಣ್ಣೀರಿಟ್ಟರು. ಯಾವ ಹಣಕ್ಕಾಗಿ ಮಾಡಿಲ್ಲ. ಏನಕ್ಕೆ ಹಣ ತೆಗೆದುಕೊಳ್ಳಬೇಕು? ಯಾರ ಹತ್ತಿರ ಯಾಕೆ ತೆಗೆದುಕೊಳ್ಳಬೇಕು? ಯಾರ ಹತ್ತಿರ ಭಿಕ್ಷೆ ಬೇಡಿದ್ದೇನೆ. ಯಾರು ಕೊಡ್ತಾರೆ ಹಣ ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ಇದನ್ನೂ ಓದಿ: ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್

    ಪಾರ್ಕ್ನಲ್ಲಿ ಜ್ಯೂಸ್ ಮಾರಾಟದ ಬಗ್ಗೆ ಮಾತನಾಡಿ, ಬೆಳಗ್ಗೆ 2:30 ಕ್ಕೆ ಎದ್ದೇಳುತ್ತೇನೆ. ಎಲ್ಲಾ ರೆಡಿ ಮಾಡಿಕೊಂಡು ಹೋಗ್ತೀನಿ. ಸ್ವಾಭಿಮಾನಿಯಾಗಿ ಬದುಕಿದ್ದೀನಿ. ಕಾಲ್ಪನಿಕ ಆಗಿದ್ರೆ ನಿಮ್ಹಾನ್ಸ್‌ಗೆ ಕರೆದುಕೊಂಡು ಹಾಕಬೇಕಿತ್ತು. ನಕ್ಸಲೆಟ್ ಅಂತಾರೆ. ವಯಸ್ಸಾಗಿದೆ ಅನ್ನೋದಕ್ಕಾದ್ರು ಮರ್ಯಾದೆ ಕೊಡಬೇಕಲ್ಲ. ನನ್ನ ಮಗಳು ಇದ್ದಿದ್ದು ನಿಜ. 9 ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡಿದ್ದೀನಿ. ಒಂದು ತಿಂಗಳ ಮಗುವನ್ನ ನದಿಯಲ್ಲಿ ಹಾಕ್ತಿದ್ರು. ನೋವಾಗುತ್ತೆ ಅಲ್ವಾ. ನಾನು ಸತ್ತು ಹೋಗಿದ್ದಾಳೆ ಅಂದ್ಮೇಲೆ ಡೆತ್ ಸರ್ಟಿಫಿಕೇಟ್ ಡಿಕ್ಲೇರ್ ಮಾಡೋಕೆ ಹೇಳಲಿ. ಅವರ ಮನೆ ಬಾಗಿಲಿಗೆ ಹೋಗಿಲ್ಲ. ಮನೆ ಕೆಲಸ ಮಾಡಿದ್ದೀನಿ. ನನ್ನನ್ನ ಸಾಕಿದ್ರೆ ಅವರು ನನ್ನ ಬಗ್ಗೆ ಮಾತನಾಡಬೇಕು ಎಂದು ಟೀಕೆಗಳಿಗೆ ನೊಂದು ನುಡಿದರು.

    ರಂಗಪ್ರಸಾದ್‌ರನ್ನ ನಾನು ನೋಡಿಕೊಂಡಿದ್ದೇನೆ. ನನಗೆ ಬಟ್ಟೆ ಇಲ್ಲದಿದ್ದರೂ ಪರವಾಗಿಲ್ಲ, ಅವರಿಗೆ ಎಲ್ಲಾ ಮಾಡಿದ್ದೇನೆ. ನನ್ನ ಕಣ್ಣೆದುರಲ್ಲೇ ಸತ್ತು ಹೋಗಿದ್ದಾರೆ. ನನ್ನ ಮಗಳು ಕಣ್ಣೆದುರು ಇದ್ರೆ ಹೇಗಿರುತ್ತಿದ್ದಳು. ನಾನು ಯಾರ ದುಡ್ಡಿಗಾಗಿ ಮಾಡುತ್ತಿಲ್ಲ. ನನಗೆ ದುಡ್ಡಿನ ಅವಶ್ಯಕತೆ ಇಲ್ಲ. ಯಾರೋ ಪುಣ್ಯಾತ್ಮರು ಊಟ ಹಾಕ್ತಾರೆ. ಮಕ್ಕಳಿದ್ರೂ ತಂದೆಯನ್ನ ನೋಡಿಕೊಳ್ಳಲಿಲ್ಲ. ಇನ್ಸುಲಿನ್ ಕೊಡಿಸಲು ಆಗಿಲ್ಲ ಅಂದ್ರೆ ತಂದೆ ಎಷ್ಟು ನೋವನ್ನ ಅನುಭವಿಸರಬೇಕು. ಸಾಯೋ ಹಿಂದಿನ ದಿನವೂ ಎಷ್ಟು ಕಷ್ಟ ಪಡುತ್ತಿದ್ದೀಯ ಅಂತಿದ್ರು ಎಂದು ನೆನೆದು ಕಣ್ಣೀರಿಟ್ಟರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್‌!

    ಯಾವ ಹೋರಾಟಗಾರರು ನನ್ನ ಸಂಪರ್ಕದಲ್ಲಿಲ್ಲ. ನಾನೇ ವಕೀಲರನ್ನ ಸಂಪರ್ಕಿಸಿ ಅಪ್ರೋಚ್ ಮಾಡಿದ್ದೇನೆ. ಒಂದು ಲೆಟರ್ ಕೊಡೋಣ ಅಂದ್ರು ಹೋದ್ವಿ. ನನ್ನ ಮಗಳ ಅಸ್ಥಿ ಕೊಡಿ ಅಂತಾ ಕೇಳಿದ್ದೇನೆ. ನಾನು ತನಿಖೆ ಮಾಡಿ ಅಂತಾ ಹೇಳಿಲ್ಲ. ಧರ್ಮಸ್ಥಳದಲ್ಲಿ ಆಗಿದೆ ಅಂತಾ ಎಲ್ಲೂ ಹೇಳಿಲ್ಲ. ದಾಖಲೆಗಳನ್ನ ನಾನು ಏನು ಕೊಟ್ಟಿಲ್ಲ. ನಾನು ಏನ್ ಕೇಳಿದ್ದೀನಿ ಅದಕ್ಕೆ ಅವರು ಬದ್ಧರಾಗಿದ್ದಾರೆ. ಅಸ್ಥಿ ಸಿಕ್ಕಿದ್ರೆ ಡಿಎನ್‌ಎ ಟೆಸ್ಟ್ ಮಾಡಿ ಕೊಡಿಸಿ. ಹಿಂದೂ ಸನಾತನ ಸಂಪ್ರದಾಯಂತೆ ಅಂತ್ಯಕ್ರಿಯೆ ಮಾಡ್ತೀನಿ. ತನಿಖೆ ಮಾಡಿ ಅಂತಾ ಹೇಳಿಲ್ಲ. ಆಗ ಇಲ್ಲದೇ ಇರೋ ತನಿಖೆ ಈಗ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.

    ನನಗೆ ಯಾರ ಮೇಲೂ ಅನುಮಾನ ಇದೆ ಅಂತಾ ಹೇಳಿಲ್ಲ, ಹೇಳ್ತಾನೆ ಇಲ್ಲ. ಇಷ್ಟು ವರ್ಷ ಇಲ್ಲದೇ ಇರೋದ್ರಿಂದ ನನ್ನ ಮಗಳು ಇಲ್ಲ ಅಂದುಕೊಂಡಿದ್ದೇನೆ. ನನ್ನ ಮಗಳು ಸತ್ತು ಹೋಗಿದ್ದಾಳೆ ಅಂತಾನೆ ಡಿಕ್ಲೇರ್ ಮಾಡಿಕೊಂಡಿದ್ದೇನೆ. ನನ್ನ ಆತ್ಮಕ್ಕೆ ನನ್ನ ಮಗಳು ಇಲ್ಲ ಅಂದುಕೊಂಡಿದ್ದೇನೆ. ಈಗ ಒಂಟಿಯಾಗಿ ಬದುಕುತ್ತಿದ್ದೀನಿ. ದಿನ ಬೆಳಗಾದ್ರೆ ನಾನು ಮಾನಸಿಕವಾಗಿ ಕೊರಗುತ್ತಿದ್ದೇನೆ. ನನ್ನ ಮಗಳು ಇಲ್ಲ ಅಂತಾ ಕೊರಗುತ್ತಿದ್ದೀನಿ. ಇದ್ದಿದ್ರೆ ನನ್ನ ನೋಡಿಕೊಳ್ತಿದ್ದಳು. ನನ್ನ ಮಗಳು ಇದ್ದಿದ್ದು ನಿಜ, ಹುಟ್ಟಿದ್ದು ಸತ್ಯ. ಅನಿಲ್ ಭಟ್‌ಗೆ ಹುಟ್ಟಿದ್ದು ಸತ್ಯ. ಇದು ಕಾಲ್ಪನಿಕವಲ್ಲ… ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಬೇಸರದಿಂದ ನುಡಿದರು.

    ಅರವಿಂದ್, ವಿಮಲಾ ಮಗುವನ್ನ ತೆಗೆದುಕೊಂಡು ಹೋಗಿ ಸಾಕಿದ್ರು. ಲೆಟರ್ ಮೂಲಕ ನನಗೆ ಪತ್ರ ಬರೆಯುತ್ತಿದ್ದರು. ಮಂಗಳೂರಿನಲ್ಲಿ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್‌

    ಅರವಿಂದ್‌ಗೆ ಮಗುವನ್ನ ಕೊಡಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, ನಾನು ಕೊಡೋಕೆ ಕಾರಣ ಇಲ್ಲ. ನನ್ನ ತಂದೆಯ ಫ್ಯಾಮಿಲಿ ಅವರು ಕಾರಣ, ನನ್ನ ಅಕ್ಕಂದಿರು. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನ ನೀರಲ್ಲಿ ಯಾಕೆ ಬಿಡಲಿ. ಅವತ್ತೆ ನಾನು ಕರೆದುಕೊಂಡು ಹೋಗಿ ಸಾಕಬಹುದಾಗಿತ್ತಲ್ಲ. ನನಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಬೇರೆಯವರಿಗೆ ಹಾಕಿದ ಬಟ್ಟೆಯನ್ನ ನನಗೆ ಕೊಡ್ತಿದ್ದರು. ನನಗೆ ಒಳ್ಳೆಯ ಬಟ್ಟೆ ಕೊಡಿಸುತ್ತಿರಲಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಮಾಡಿದ್ದಾರೆ ಎಂದು ಹೇಳಿದರು.

    ಇವತ್ತು ಮಾತನಾಡುತ್ತಿದ್ದನಲ್ಲ. ಅವನ ಹೆಂಡ್ತಿಗೆ ಸೀರೆ ಕೊಡಿಸೋಕೆ 2 ಸಾವಿರ ತೆಗೆದುಕೊಂಡಿದ್ದಾರೆ. ಅವರ ಮದುವೆಯಲ್ಲಿ ನನಗೆ ಯಾರೋ ಹಾಕಿದ ಹಳೆಯ ಸೀರೆ ಕೊಟ್ಟಿದ್ದಾರೆ. ನನಗೆ ತುಂಬ ನೋವಾಗಿದೆ. ನೋವು ಅನುಭವಿಸಿದ್ದೀನಿ. ಯಾರ ಹತ್ತಿರನೂ ಹೇಳಿಕೊಳ್ಳಲಿಕ್ಕೆ ಇಷ್ಟ ಇಲ್ಲ. ದುಡ್ಡು ಯಾವ ದುಡ್ಡು, ನನ್ನ ಬ್ಯಾಂಕ್ ಬ್ಯಾಲೆನ್ಸ್ ತೋರಿಸಲಾ? ದುಡಿದು ತಿನ್ನುತ್ತೀನಿ. ಒಂದೊತ್ತು ಊಟ ಇಲ್ಲ ಅಂದ್ರೂ ಇರ್ತೀನಿ. ಎರಡು ದಿನದಿಂದ ಊಟ ಇಲ್ಲ. ಮನೆಯಿಂದ ಹೊರಗೆ ಹೋಗೋಕೆ ಆಗ್ತಿಲ್ಲ. ಮನೆ ಖಾಲಿ ಮಾಡೋಕೆ ಹೇಳ್ತಿದ್ದಾರೆ. ನಾನು ಏನ್ ತಪ್ಪು ಮಾಡಿದ್ದೀನಿ. ಮಗಳು ಇಲ್ಲ ಅನ್ನೋದನ್ನ ಹೇಳೋದೆ ತಪ್ಪಾ? ಮನೆ ಖಾಲಿ ಮಾಡಿಸೋಕೆ ಯಾರು ಇವರು? ನಾನೇನು ಕ್ರೈಂ ಮಾಡಿದ್ದೀನಿ. ಕಳ್ಳತನನಾ..? ಕೊಲೆನಾ..? ಬದುಕೋದೆ ತಪ್ಪಾ..? ಯಾರ ಕೊಡ್ತಾರೆ ಅಂತೆ ದುಡ್ಡು? ಯಾವ ದುಡ್ಡು? ಇಷ್ಟು ವರ್ಷ ಸಣ್ಣಪುಟ್ಟ ಕೆಲಸ ಮಾಡಿ ಬದುಕಿದ್ದೀನಿ. ನಾನು ಯಾರ ಹತ್ತಿರನು ಕೈ ಚಾಚಿಲ್ಲ. ಮನೆಯಲ್ಲಿ ಅಕ್ಕಿ ಇದ್ಯಾ ಬೆಳೆ ಇದ್ಯಾ ಅಂತಾ ಯಾರು ಕೇಳಿಲ್ಲ. ಭಿಕ್ಷೆ ಎತ್ತಿಲ್ಲ. ಮಗಳು ಇಲ್ಲ ಅನ್ನೋ ನೋವು, ಇದು ಕಾಲ್ಪನಿಕ ಅಲ್ಲ. ಹೇಗೆ ಮಗಳು ಇಲ್ಲ ಅಂತಾ ಹೇಳೋಕೆ ಸಾಧ್ಯ. ಕಾಲ್ಪನಿಕ ಅಂತಾರೆ ಇವರು ಯಾರು ಹೇಳೋಕೆ? 9 ತಿಂಗಳು ಏನ್ ಕಷ್ಟದಲ್ಲಿ ಎತ್ತಿದ್ದೀನಿ ಅನ್ನೋದು ನನಗೆ ಗೊತ್ತು. ತಾಯಿ ಆದವಳಿಗೆ ಗೊತ್ತಿರಲ್ವಾ? ತಪ್ಪಲ್ವಾ ಹೇಳೋದು ಎಂದು ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು.

    ಈ ವೇಳೆ ರಂಗಪ್ರಸಾದ್ ಅವರ ಫೋಟೊ ತೋರಿಸಿದರು. ಜೊತೆಗೆ ತನ್ನ ತಾಯಿ ಫೋಟೊವನ್ನು ತೋರಿಸಿ, ನನ್ನ ಅಮ್ಮನಿಗೂ ಅನನ್ಯಾ ಭಟ್‌ಗೂ ಹೋಲಿಕೆ ಇಲ್ವಾ ಎಂದು ಕೇಳಿದರು.

  • ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್‌ಗಳಿಗೆ ಫಾರಿನ್ ಫಂಡ್ – ಪರಿಶೀಲನೆಗೆ ಮುಂದಾದ ಇ.ಡಿ

    ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್‌ಗಳಿಗೆ ಫಾರಿನ್ ಫಂಡ್ – ಪರಿಶೀಲನೆಗೆ ಮುಂದಾದ ಇ.ಡಿ

    ಬೆಂಗಳೂರು/ಮಂಗಳೂರು: ಧರ್ಮಸ್ಥಳ ವಿಷಯದಲ್ಲಿ (Dharmasthala Case) ಅಪಪ್ರಚಾರ ಮಾಡಲು ಯೂಟ್ಯೂಬರ್‌ಗಳಿಗೆ (YouTubers) ವಿದೇಶದಿಂದ ಹಣ (Foreign Fund) ಹರಿದುಬಂದಿದೆ ಅನ್ನೋ ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ಕೇಂದ್ರ ಗೃಹ ಸಚಿವಾಲಯಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದಿರೋ ಬೆನ್ನಲ್ಲೇ ದಾಖಲೆಗಳ ಪರಿಶೀಲನೆ ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ಅಮಿತ್ ಶಾ (Amit Shah) ಸೂಚನೆ ಕೊಟ್ಟಿದ್ದಾರೆ. ಹೀಗಾಗಿ, ಬೆಂಗಳೂರಿನ ಇ.ಡಿ (ED) ಅಧಿಕಾರಿಗಳು ಈಗ ಯೂಟ್ಯೂಬರ್‌ಗಳ ಆದಾಯದ ಮೂಲ ಕೆದಕುತ್ತಿದ್ದಾರೆ.

    ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿ, ದೇವಸ್ಥಾನದ ಪಾವಿತ್ರ್ಯತೆ ಉಳಿಸುವ ಸಲುವಾಗಿ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾವುದೇ ವ್ಯಕ್ತಿಗತವಾಗಿ ನಾನು ಪತ್ರ ಬರೆದಿಲ್ಲ ಅಂದಿದ್ದಾರೆ. ಇನ್ನು, ಶಾಸಕ ಭರತ್ ಶೆಟ್ಟಿ ಮಾತಾಡಿ, ಎನ್‌ಐಎ ಅಥವಾ ಇಡಿ ತನಿಖೆಯಾದ್ರೆ ಯಾರೆಲ್ಲರ ಬ್ಯಾಂಕ್ ಖಾತೆಗಳಿಗೆ ಎಷ್ಟೆಲ್ಲ ಹಣ ಎಲ್ಲೆಲ್ಲಿಂದ ಬಂದಿದೆ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್

    ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಹಾಗೂ ಯೂಟ್ಯೂಬರ್ ಸಮೀರ್ ವಿರುದ್ಧ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಎಸ್‌ಪಿಗೆ ದೂರು ಕೊಟ್ಟಿದ್ದಾರೆ. ಇನ್ನೊಂದೆಡೆ ಭಜರಂಗದಳ ಕಾರ್ಯಕರ್ತ ತೇಜಸ್ ಗೌಡ ಕೂಡ ಡಿಜಿ ಕಚೇರಿಯಲ್ಲಿ ಸಮೀರ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಹಣ ಹಂಚಿಕೆ ಆರೋಪ – ಕಾಂಗ್ರೆಸ್ ನಾಯಕರ ವಿರುದ್ಧ ಆಯೋಗಕ್ಕೆ ದೇವರಾಜೇಗೌಡ ದೂರು

  • ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್

    ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್

    – ತನಿಖೆ ಮಾಡಿ ಅಂತ ಎಲ್ಲೂ ಹೇಳಿಲ್ಲ; ಮಗಳ ಅಸ್ಥಿ ಸಿಕ್ಕರೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡ್ತೀನಿ
    – ಅನಾಮಿಕ ವ್ಯಕ್ತಿ ಧನ್ಯವಾದ ಎಂದ ಸುಜಾತಾ ಭಟ್

    ಬೆಂಗಳೂರು: ನನ್ನ ಮಗಳು ಅನನ್ಯಾ ಭಟ್ (Ananya Bhat) ಇದ್ದಿದ್ದು ಸತ್ಯ. ಅನನ್ಯಾ ಬಗ್ಗೆ ತನಿಖೆ ಮಾಡಿ ಅಂತ ಎಲ್ಲೂ ಹೇಳಿಲ್ಲ. ಮಗಳ ಅಸ್ಥಿ ಸಿಕ್ಕರೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡ್ತೀನಿ ಎಂದು ಸುಜಾತಾ ಭಟ್ (Sujatha Bhat) ಹೇಳಿದರು.

    ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಸುಜಾತಾ ಭಟ್, ನನ್ನ ಮಗಳು ಧರ್ಮಸ್ಥಳದಲ್ಲಿ (Dharmasthala) ಕಾಣೆಯಾಗಿದ್ದಾಳೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯ್ತು. ದೂರು ತೆಗೆದುಕೊಂಡಿಲ್ಲ. ನಿಮ್ಮ ಮಗಳು ಎಲ್ಲಿ ಹೋಗಿದ್ದಾಳೆ ನೋಡಿ, ಹುಡುಕಾಟ ನಡೆಸೋಕೆ ಆಗಲ್ಲ ಅಂದ್ರು. ಈಗ ಅನಾಮಿಕ ಕೋರ್ಟ್‌ಗೆ ಹೋಗಿದ್ದನ್ನ ನಾನು ಟಿವಿಯಲ್ಲಿ ನೋಡಿದೆ. ನನ್ನ ಮಗಳ ಮೃತದೇಹ ಸಿಕ್ಕಿದ್ರೆ ಡಿಎನ್‌ಎ ಟೆಸ್ಟ್ ಮಾಡಿಸಿ ಕೊಡಿ ಅಂತಾ ಕೇಳಿದ್ದೇನೆ. ನಾನು ತನಿಖೆ ಮಾಡಿ ಅಂತಾ ಹೇಳಿಲ್ಲ. ಅನನ್ಯ ಭಟ್ ಇದ್ದಿದ್ದು ಸತ್ಯ. ಅಸ್ತಿ ಸಿಕ್ಕಿದ್ರೆ ಸನಾತನ ಹಿಂದೂ ಸಂಪ್ರಾದಯಂತೆ ಮಾಡ್ತೀನಿ ಅಂತಾ ಹೋಗಿರೋದು. ನಾನು ತನಿಖೆ ಮಾಡಿ ಅಂತಾ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರಪಂಚದಲ್ಲಿ ಒಂದೇ ರೀತಿ 7 ಜನ ಇರ್ತಾರೆ, ಫೋಟೋಗಳಿಗೆ ಸಾಮ್ಯತೆ ಇರಬಹುದು: ಸುಜಾತ ಭಟ್‌

    ಎಂಬಿಬಿಎಸ್ ಓದಿಲ್ಲ ಅನ್ನೋ ರೆಕಾರ್ಡನ್ನೇ ಕಾಣೆ ಮಾಡಿಸಿದ್ದಾರೆ. ಸುರತ್ಕಲ್‌ನಲ್ಲಿರುವ ಮನೆಯನ್ನ ಸುಟ್ಟು ಹಾಕಿದ್ದಾರೆ. ಅರವಿಂದ್, ವಿಮಲಾ ನನ್ನ ಮಗಳನ್ನ ಸಾಕಿದ್ರು. 1983 ರಲ್ಲಿ ನನ್ನ ಮಗಳು ಜನನವಾಗಿದ್ದು. ಅನಿಲ್ ಭಟ್ ಎನ್ನುವವರನ್ನ ಮನೆಯವರಿಗೆ ಗೊತ್ತಿಲ್ಲದಂತೆ ಮದುವೆಯಾಗಿದ್ದೆ. ಇದರಿಂದ ನಮ್ಮ ಕುಟುಂಬದಿಂದ ಬೆದರಿಕೆ ಇತ್ತು ಎಂದು ತಿಳಿಸಿದರು.

    ಒಂದು ಹುಡುಗಿಯಂತೆ 7 ಜನ ಇರುತ್ತಾರೆ. ಅವರು ಯಾರು ಅಂತಾನೆ ಗೊತ್ತಿಲ್ಲ. ಯಾವ ಅಲ್ಬಂ ಮನೆಯಲ್ಲಿ ಇಲ್ಲ. ನನ್ನ ಬಳಿ ಇದ್ದಿದ್ದು ಪಾಸ್‌ಪೋರ್ಟ್ ಫೋಟೊ. ಅಡ್ಮಿಷನ್ ಮಾಡಿಸಲು ಆ ಫೋಟೊ ಇಟ್ಟುಕೊಂಡಿದ್ದೆ. 2003ರಲ್ಲಿ ನನ್ನ ಮಗಳು ಕಾಣೆಯಾಗಿದ್ದಳು. ನನ್ನ ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯ್ತು. ದೂರು ತೆಗೆದುಕೊಂಡಿಲ್ಲ. ಧರ್ಮಸ್ಥಳ ವ್ಯಕ್ತಿಯೊಬ್ಬರ ಬಳಿ ಕೇಳಿದಾಗ, ನಿನ್ನ ಮಗಳನ್ನ ಹುಡುಕಿಕೊ ಅಂತಾ ಹೇಳಿದ್ರು ಎಂದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್‌!

    ಕೆಲವರು ನಿಮ್ಮ ಮಗಳನ್ನ ಇಲ್ಲಿ ನೋಡಿದ್ದೀನಿ ಅಂತಾ ನನ್ನ ಕರೆದುಕೊಂಡು ಹೋದ್ರು. ಕಣ್ಣಿಗೆ ಬಟ್ಟೆ ಕಟ್ಟಿದ್ರು. ರಾತ್ರಿ ಎಲ್ಲಾ ಕೂಡಿ ಹಾಕಿದ್ರು. ರೂಮಿನಿಂಗ ಹೊರಗೆ ಕರೆದುಕೊಂಡ ಬಂದ್ರು. ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿದ್ರು. ನನ್ನ ಮಗಳನ್ನ ತೋರಿಸಿ ಅಂತಾ ಕೇಳಿದೆ. ಮರಿಯಾದೆಯಾಗಿ ಇಲ್ಲಿಂದ ಹೋಗಿ ಅಂತಾ ಹೇಳಿದ್ರು. ಮತ್ತೊಬ್ಬ ನನ್ನ ತಲೆಗೆ ಹೊಡೆದನು. ಆಗ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಆ ಆನಾಮಿಕ ವ್ಯಕ್ತಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

    ಕಾಂಟ್ರ್ಯಾಕ್ಟ್‌ ಬೇಸಿಕ್‌ನಲ್ಲಿ ಕೆಲಸ ಮಾಡೋಳು. ನನ್ನ ಫ್ಯಾಮಿಲಿಯಲ್ಲಿ ಯಾರೂ ನನ್ನ ಓದಿಸಲಿಲ್ಲ. ನನ್ನ ಫ್ಯಾಮಿಲಿಯಿಂದ ಸಾಕಷ್ಟು ಟಾರ್ಚರ್ ಅನುಭಿಸಿದ್ದೇನೆ. ಮೂರನೇ ಅಕ್ಕನ ಮದುವೆ ಬಳಿಕ ನಾನು ಮನೆ ಬಿಟ್ಟು ಬಂದೆ ಎಂದು ವಿವರಿಸಿದರು. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್‌

    ವಸಂತಿ ಯಾರೆಂದು ಗೊತ್ತಿಲ್ಲ. ಅವರನ್ನ ನೋಡಿಲ್ಲ. ಅವರ ಅಣ್ಣನೂ ಗೊತ್ತಿಲ್ಲ. ನನಗೂ ಅವರಿಗೂ ಸಂಬಂಧವಿಲ್ಲ. ಕೆಂಗೇರಿಯಲ್ಲಿ ರಂಗಪ್ರಸಾದ್ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದೆ. ಅವರ ಮಗನ ಬಗ್ಗೆ ಗೊತ್ತಿಲ್ಲ, ಅವಳು ಸತ್ತಿರುವ ಬಗ್ಗೆ ಗೊತ್ತಿಲ್ಲ. ವಸಂತಿ ಅವರ ಯಾವ ಅಲ್ಬಂ ಕೂಡ ಇಲ್ಲ ಎಂದರು.

  • ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶದಿಂದ ಫಂಡಿಂಗ್‌ – ಭರತ್ ಶೆಟ್ಟಿ ಬಾಂಬ್‌

    ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶದಿಂದ ಫಂಡಿಂಗ್‌ – ಭರತ್ ಶೆಟ್ಟಿ ಬಾಂಬ್‌

    – ಸೌಜನ್ಯ ಪ್ರಕರಣ ಮರು ತನಿಖೆಯಾಗಲಿ ಎಂದ ಬಿಜೆಪಿ ಶಾಸಕ

    ಬೆಂಗಳೂರು: ಧರ್ಮಸ್ಥಳ (Dharmasthala) ವಿರುದ್ಧ ಷಡ್ಯಂತ್ರಕ್ಕೆ ವಿದೇಶಿ ಹಣ ಬಳಕೆ ಆಗಿದೆ ಅನ್ನೋದು ನಮ್ಮ ಗುಮಾನಿ ಎಂದು ಶಾಸಕ ಡಾ.ಭರತ್ ಶೆಟ್ಟಿ (Bharath Shetty) ಹೇಳಿದ್ದಾರೆ.

    ವಿಧಾನಸೌಧ ಆವರಣದಲ್ಲಿ ʻಪಬ್ಲಿಕ್‌ ಟಿವಿʼ (Public TV- ಜೊತೆಗೆ ಮಾತನಾಡಿದ ಅವರು, ಇಡಿ ಅಥವಾ ಎನ್‌ಐಎ ತನಿಖೆಗೆ ಸಾಕಷ್ಟು ಒತ್ತಾಯ ಕೇಳಿಬರ್ತಿದೆ. ನಮ್ಮ ಕೋಟಾ ಶ್ರೀನಿವಾಸ ಪೂಜಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶಿ ಹಣ (Foreign Fund) ಬಳಕೆ ಆಗಿದೆ ಅನ್ನೋದು ನಮ್ಮ ಗುಮಾನಿ. ಕೆಲವು ನಂಬಲರ್ಹ ಮೂಲಗಳಿಂದ ಫಾರಿನ್ ಫಂಡ್ ಬಂದಿದೆ ಅಂತ ನಮಗೆ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್‌ ರಿಯಾಕ್ಷನ್‌

    ಎನ್ಐಎ (NIA) ಅಥವಾ ಇಡಿ ತನಿಖೆಯಾದ್ರೆ ಯಾರೆಲ್ಲರ ಬ್ಯಾಂಕ್ ಖಾತೆಗಳಿಗೆ ಎಷ್ಟೆಲ್ಲ ಹಣ ಎಲ್ಲೆಲ್ಲಿಂದ ಬಂದಿದೆ ಅನ್ನೋದು ಗೊತ್ತಾಗುತ್ತೆ. ಈಗಾಗಲೇ ಷಡ್ಯಂತ್ರ ಇದೆ ಅಂತ ನಾವೂ ಹೇಳ್ತಿದೀವಿ, ಕಾಂಗ್ರೆಸ್‌ನವ್ರೂ ಹೇಳ್ತಿದ್ದಾರೆ. ಆದ್ದರಿಂದ ಇಡಿ ಅಥವಾ ಎನ್‌ಐಎ ತನಿಖೆಗೆ ಕೊಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಬಸ್ಸು ಹತ್ತುವ ವೇಳೆ ಬಾಗಿಲು ಬಂದ್‌- ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು

    ಇನ್ನೂ ಸೌಜನ್ಯ ಪ್ರಕರಣದಲ್ಲೂ ನ್ಯಾಯ ಸಿಗಬೇಕು. ಕೆಲವರು ಸೌಜನ್ಯ ಹತ್ಯೆ ಬಗ್ಗೆ ದಾಖಲೆ ಇದೆ, ಅಂತಾರಲ್ಲ ಅವರು ಎಸ್ಐಟಿಗೆ ಅದನ್ನು ಕೊಡಲಿ. ಎಸ್ಐಟಿ ಅವರಿಗೆ ಸೌಜನ್ಯ ಕೇಸ್ ತನಿಖೆ ಮಾಡಲು ಅವಕಾಶ ಇದ್ರೆ ತನಿಖೆ ಮಾಡಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ಆಗದೇ ತಿಮರೋಡಿ ಬಂಧನವಾಗದೇ ತನಿಖೆ ನಡೆಯಬಾರದು: ಮಾಜಿ ಸಚಿವ ಅಭಯಚಂದ್ರ ಜೈನ್

    ನ್ನೂ ಧರ್ಮಸ್ಥಳ ಪ್ರಕರಣದಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ಹೆಸರೂ ಇದರಲ್ಲಿ ಕೇಳಿಬರ್ತಿದೆ. ಸೆಂಥಿಲ್, ಸ್ಟಾಲಿನ್ ಅವರಿಗೆ ಮೆಸೇಂಜರ್ ಆಗಿದ್ದಾರೆ. ಅವರು ಹಿಂದೂ ಧರ್ಮದ ವಿರುದ್ಧ ಹಲವು ಕಡೆ ಭಾಷಣ ಮಾಡಿದ್ದಾರೆ. ಧರ್ಮಸ್ಥಳ ವಿಚಾರದಲ್ಲೂ ಅವರ ಪಾತ್ರ ಇರುವ ಅನುಮಾನ ಇದೆ. ಎನ್ಐಎ ತನಿಖೆ ನಡೆದರೆ ಈ ವಿಚಾರವನ್ನೂ ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ.   

  • ಧರ್ಮಸ್ಥಳ ಕೇಸಲ್ಲಿ ಅನನ್ಯಾ ಭಟ್ ಪಾತ್ರ ಕಟ್ಟುಕಥೆನಾ? – ಸುಜಾತಾ ಭಟ್ ಸುಳ್ಳು ಹೇಳಿ ಯಾಮಾರಿಸಿದ್ರಾ?

    ಧರ್ಮಸ್ಥಳ ಕೇಸಲ್ಲಿ ಅನನ್ಯಾ ಭಟ್ ಪಾತ್ರ ಕಟ್ಟುಕಥೆನಾ? – ಸುಜಾತಾ ಭಟ್ ಸುಳ್ಳು ಹೇಳಿ ಯಾಮಾರಿಸಿದ್ರಾ?

    ಬೆಂಗಳೂರು: ಧರ್ಮಸ್ಥಳ ಪ್ರಕರಣ (Dharmasthala Case) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನನ್ನ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಸುಜಾತ ಭಟ್ (Sujatha Bhat) ಆಕೆಯ ಫೋಟೋ ಬಿಡುಗಡೆ ಮಾಡಿದ್ದರು. ಆದ್ರೇ ಈ ಫೋಟೋದ ಮೂಲವನ್ನು ಬೆನ್ನತ್ತಿದಾಗ ಅಸಲಿಯತ್ತು ಬಹಿರಂಗಗೊಂಡಿದೆ.

    ನನ್ನ ಮಗಳು ಅನನ್ಯಾ ಭಟ್ (Ananya Bhat) ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, 2003ರಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಕಾಣೆಯಾಗಿದ್ದಳು. ಈ ಬಗ್ಗೆ ದೂರು ನೀಡಲು ಹೋದಾಗ ಅಂದಿನ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ನನಗೆ ಧರ್ಮಸ್ಥಳದಲ್ಲಿ ಹೊಡೆಯಲಾಗಿತ್ತು ಎಂದೆಲ್ಲ ಸುಜಾತ ಭಟ್ ಆರೋಪ ಮಾಡಿದ್ದರು. ಇದನ್ನೂ ಓದಿ: ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

    ನಾಪತ್ತೆಯಾಗಿದ್ದ ಮಗಳು ಅನನ್ಯಾ ಭಟ್ ಫೋಟೋ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸುಜಾತ ಭಟ್ ಫೋಟೋವೊಂದನ್ನು ಬಿಡುಗಡೆ ಮಾಡಿದ್ದರು. ಆದರೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇವಳೇ ನನ್ನ ಮಗಳು ಅನನ್ಯಾ ಭಟ್ ಅಂತ ಮೊನ್ನೆಯಷ್ಟೇ ವಕೀಲರ ಸಮ್ಮುಖದಲ್ಲಿ ಸುಜಾತ ಭಟ್ ಬಿಡುಗಡೆ ಮಾಡಿದ್ದರು.

    ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿದ್ದ ಸುಜಾತಾ ಭಟ್ ಬೆಂಗಳೂರಿನ ರಂಗಪ್ರಸಾದ್ ಎಂಬುವರ ಮನೆಯಲ್ಲಿ ಕೇರ್ ಟೇಕರ್ ಆಗಿದ್ದರು. ಈ ರಂಗಪ್ರಸಾದ್ ಎಂಬುವವರ ಸೊಸೆಯೇ ವಾಸಂತಿ ಅನ್ನೋ ಸುದ್ದಿ ಈಗ ಹರಿದಾಡುತ್ತಿದೆ. ರಂಗಪ್ರಸಾದ್ ಅವರ ಪುತ್ರ ಶ್ರೀವತ್ಸ ಎಂಬುವವರ ಪತ್ನಿಯಾಗಿದ್ದ ವಾಸಂತಿ 2007ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ರು ಎನ್ನಲಾಗಿದೆ. ಇದೀಗ ರಂಗಪ್ರಸಾದ್ ಹಾಗೂ ಮಗ, ಸೊಸೆ ಎಲ್ಲರೂ ಸಾವನ್ನಪ್ಪಿದ್ದು, ವಾಸಂತಿ ಕಾಲೇಜು ದಿನಗಳ ಫೋಟೋವನ್ನು ಇಟ್ಟುಕೊಂಡಿದ್ದ ಸುಜತಾ ತನ್ನ ಮಗಳು ಎಂದು ಬಿಂಬಿಸೋಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಾಕು ಪ್ರಾಣಿಗಳಿಗಾಗಿ ಬ್ಲಡ್‌ ಬ್ಯಾಂಕ್‌ ನೆಟ್‌ವರ್ಕ್ – ಏನಿದು ಕೇಂದ್ರದ ಹೊಸ ಯೋಜನೆ?


    ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ 1999ರಿಂದ 2007ವರೆಗೆ ಸುಜಾತಭಟ್, ಪ್ರಭಾಕರ್ ಬಾಳಿಗ ಎಂಬುವರ ಜೊತೆಗೆ ಇದ್ದರೆಂದು ಹೇಳಲಾಗಿದೆ. ಆದ್ರೆ, ಇವರನ್ನು ಕಂಡ ನೆರೆ ಹೊರೆಯವರು ಹೇಳೋ ಪ್ರಕಾರ, ಅವರಿಗೆ ಮಕ್ಕಳೇ ಇರಲಿಲ್ಲ. ನಾಯಿಗಳನ್ನೇ ಮಕ್ಕಳಂತೆ ಸಾಕುತ್ತಿದ್ದರು ಅಂತ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಪ್ರಭಾಕರ್ ಬಾಳಿಗ ಸ್ನೇಹಿತರೂ ಕೂಡ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಅವರ ಪ್ರಕಾರವೂ ಸುಜಾತ ಭಟ್‌ಗೆ ಮಕ್ಕಳೇ ಇರಲಿಲ್ಲ.

    ಇನ್ನು, ಈ ಎಲ್ಲಾ ಆರೋಪ ಸಂಬಂಧ ಪಬ್ಲಿಕ್ ಟಿವಿಗೆ ಸುಜಾತಾ ಭಟ್ ಎಕ್ಸ್ಕ್ಲೂಸಿವ್ ರಿಯಾಕ್ಷನ್ ಕೊಟ್ಟಿದ್ದಾರೆ. ನಾನು ಹೇಳಿರುವುದೆಲ್ಲವೂ ಸತ್ಯ. ಅನನ್ಯಾ ಭಟ್ ಫೋಟೋವನ್ನೇ ನಾನು ತೋರಿಸಿದ್ದೇನೆ. ನನಗೆ ಮಕ್ಕಳಿದ್ದಾರೆ. ಅನಿಲ್ ಭಟ್ ಎಂಬುವವರ ಜೊತೆ ನಾನು ವಿವಾಹವಾಗಿದ್ದೆ. ನಮ್ಮಿಬ್ಬರಿಗೆ ಜನಿಸಿದ ಮಗಳೇ ಈ ಅನನ್ಯಾ ಭಟ್. ಇನ್ನು ವಾಸಂತಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

    ಒಟ್ಟಾರೆ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಬೆನ್ನತ್ತಿರುವ ಎಸ್‌ಐಟಿಗೆ ದಾಖಲಾಗ್ತಿರುವ ಪ್ರಕರಣಗಳು ಗೊಂದಲವಾಗಿಯೇ ಇದೆ.

  • ಸಂಜೆಯೊಳಗೆ ಮಹೇಶ್‌ ಶೆಟ್ಟಿ ತಿಮರೋಡಿ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

    ಸಂಜೆಯೊಳಗೆ ಮಹೇಶ್‌ ಶೆಟ್ಟಿ ತಿಮರೋಡಿ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

    ಬೆಂಗಳೂರು: ಇಂದು ಸಂಜೆಯೊಳಗೆ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarod) ಅವರನ್ನು ಬಂಧಿಸುವಂತೆ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಪೊಲೀಸರಿಗೆ ಸೂಚನೆ ನೀಡಿದ್ದಾರೆ.

    ಮುಖ್ಯಮಂತ್ರಿಗಳು 24 ಕೊಲೆ ಮಾಡಿದ್ದಾರೆಂದು ತಿಮರೋಡಿ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಸೂಚನೆ ನೀಡಿದರು. ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಪರಮೇಶ್ವರ್‌ ಸಂಜೆಯೊಳಗೆ ಅರೆಸ್ಟ್‌ ಮಾಡುವಂತೆ ಸೂಚನೆ ನೀಡಿದರು. ಸಿಎಂ ವಿರುದ್ಧವೇ ಮಾತನಾಡಿದವನನ್ನಾ ಸುಮ್ನೆ ಬಿಡಬೇಕಾ ಅಂತಲೂ ಪ್ರಶ್ನೆ ಮಾಡಿದರು. ಈ ವೇಳೆ ಅಧಿಕಾರಿಗಳು ಅದು 2023ರ ಮೇನಲ್ಲಿ ಮಾತನಾಡಿದ್ದ ವಿಡಿಯೋ ಅಂತ ಗೃಹ ಸಚಿವರ ಗಮನಕ್ಕೆ ತಂದರು. ಇದನ್ನೂ ಓದಿ: 2026ರ ಡಿಸೆಂಬರ್ ಒಳಗೆ 1,80,253 ಮನೆ ಪೂರ್ಣ – ಜಮೀರ್ ಗ್ಯಾರಂಟಿ

    ಸದನದಲ್ಲೂ ಜೋರು ಚರ್ಚೆ
    ಇನ್ನೂ ಮಹೇಶ್‌ ಶೆಟ್ಟಿ ತಿಮರೋಡಿ ಬಂಧನಕ್ಕೆ ವಿಧಾನ ಸಭೆಯಲ್ಲೂ ಆಗ್ರಹ ಕೇಳಿಬಂದಿತು. ವಿಪಕ್ಷ ನಾಯಕ ಆರ್‌. ಅಶೋಕ್‌ ಮಾತನಾಡುತ್ತಾ, ಸಿಎಂ 24 ಕೊಲೆ ಮಾಡಿದ್ದಾರೆಂಬ ಆರೋಪ ಬಗ್ಗೆ ಪ್ರಸ್ತಾಪ ಮಾಡಿದರು. ಏನ್ ನಡೀತಿದೆ ರಾಜ್ಯದಲ್ಲಿ, ಸಿಎಂ ಮೇಲೆಯೇ ಆಪಾದನೆ ಮಾಡಿದ್ದಾರೆ. ಹಾಗಾದರೆ ಸಿಎಂ ಕೊಲೆಗಾರರಾ? ಆರೋಪ ಮಾಡಿದವರ ಮೇಲೆ ಕ್ರಮ ಏನು? ನೀವು ಮೌನವಾಗಿದ್ರೆ ಏನ್ ತಿಳ್ಕೊಳ್ಳೋದು ನಾವು? ಅಂತ‌ ಪ್ರಶ್ನೆ ಮಾಡಿದರು. ಇದನ್ನೂ ಓದಿ: ತುಂಗಭದ್ರಾ ಡ್ಯಾಮ್‌ನ 33 ಕ್ರಸ್ಟ್ ಗೇಟನ್ನೂ ತಕ್ಷಣ ಬದಲಿಸಿ: ವಿಜಯೇಂದ್ರ ಆಗ್ರಹ

    ಇದಕ್ಕೆ ದನಿಗೂಡಿಸಿದ ಶಾಸಕ ಸುರೇಶ್ ಕುಮಾರ್, ಸಿಎಂ ಮೇಲೆ ಧೈರ್ಯವಾಗಿ ಆರೋಪ ಮಾಡಿದ್ದಾನೆ ಆವ್ಯಕ್ತಿ, ಸರ್ಕಾರ ಇದನ್ನು ಹೇಗೆ ಸಹಿಸಿಕೊಳ್ಳುತ್ತೆ? ಸರ್ಕಾರ ಯಾಕೆ ಸುಮ್ಮನಿದೆ? ಅಂತ ಪ್ರಶ್ನಿಸಿದರು.

    ಇದಕ್ಕೆ ಉತ್ತರ ಕೊಟ್ಟ ಪರಮೇಶ್ವರ್‌ ಸರ್ಕಾರ ಅಷ್ಟೊಂದು ಹೆಲ್ಪ್ ಲೆಸ್ ಆಗಿದೆ ಅನ್ಕೊಂಡಿದ್ದೀರಾ? ಅಂತ ತಿರುಗೇಟು ಕೊಟ್ಟರು. ಈ ವೇಳೆ ಸುನೀಲ್‌ ಕುಮಾರ್‌ ದೇಶದ ನಂ.1 ಗೃಹ ಸಚಿವರು ಕ್ರಮ ತಗೊಳ್ಳಿ ಅಂತ ಕಾಲೆಳೆದರು. ನಂತ್ರ ಮಾತು ಮುಂದುವರಿಸಿದ ಪರಂ, ಆ ವ್ಯಕ್ತಿ ವಿರುದ್ಧ ಹಲವು ಕೇಸ್ ಇವೆ, ಆ ವ್ಯಕ್ತಿ ಹೆಸರು ಹೇಳಲ್ಲ. ಇಂಥ ವ್ಯಕ್ತಿಯನ್ನು ಸಮಾಜದಲ್ಲಿ ಹೀಗೇ ಸುಮ್ಮನೆ ಬಿಡಲ್ಲ. ಕಾನೂನು ಚಲಾಯಿಸಿ ಕ್ರಮ ತಗೋತೀವಿ. ಏನು ಕ್ರಮ ತಗೋಬೇಕೋ ತಗೋತೀವಿ. ಈಗಾಗಲೇ ಕ್ರಮ ತಗೊಳ್ಳೋಕ್ಕೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಅಪಪ್ರಚಾರಕರ ವಿರುದ್ಧ ಸ್ವಯಂಪ್ರೇರಿತ ಕೇಸ್ ಹಾಕಿ: ಅಶ್ವಥ್ ನಾರಾಯಣ್ ಆಗ್ರಹ

  • ಧರ್ಮಸ್ಥಳ ಕೇಸ್ | ಅಪಪ್ರಚಾರಕರ ವಿರುದ್ಧ ಸ್ವಯಂಪ್ರೇರಿತ ಕೇಸ್ ಹಾಕಿ: ಅಶ್ವಥ್ ನಾರಾಯಣ್ ಆಗ್ರಹ

    ಧರ್ಮಸ್ಥಳ ಕೇಸ್ | ಅಪಪ್ರಚಾರಕರ ವಿರುದ್ಧ ಸ್ವಯಂಪ್ರೇರಿತ ಕೇಸ್ ಹಾಕಿ: ಅಶ್ವಥ್ ನಾರಾಯಣ್ ಆಗ್ರಹ

    ಬೆಂಗಳೂರು: ಧರ್ಮಸ್ಥಳದ (Dharmasthala) ಬಗ್ಗೆ ಅಪಪ್ರಚಾರ ಮಾಡ್ತಿರುವವರ ಮೇಲೆ ಸ್ವಯಂಪ್ರೇರಿತ ಕೇಸ್ ಹಾಕ್ಬೇಕು ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ (Ashwath Narayan) ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ ಧರ್ಮಸ್ಥಳ ಅಸಹಜ ಸಾವು ಪ್ರಕರಣ (Dharamasthala Case) ಸದನದಲ್ಲಿ ಉತ್ತರ ಕೊಡುವ ವಿಚಾರವಾಗಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇವತ್ತು ಸದನದಲ್ಲಿ ಗೃಹ ಸಚಿವರು, ಸಿಎಂ, ಡಿಸಿಎಂ ಸದನದಲ್ಲಿ ಉತ್ತರ ಕೊಡಬೇಕಿದೆ. ಧರ್ಮಸ್ಥಳ ಪ್ರಕರಣದಲ್ಲಿ ಬಹಳ ಸ್ಪಷ್ಟವಾಗಿ ಉತ್ತರ ಕೊಡಲಿ. ಅನಾಮಿಕ ವ್ಯಕ್ತಿಯ ಬಗ್ಗೆಯು ತನಿಖೆ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

    ಸೋಷಿಯಲ್ ಮೀಡಿಯಾದಲ್ಲಿ ಆರೋಪಗಳನ್ನು ಮಾಡ್ತಿದ್ದಾರೆ. ಅವರ ಮೇಲೆ ಸ್ವಯಂಪ್ರೇರಿತ ಕೇಸ್ ಹಾಕಬೇಕು. ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ನವರು ಕಾರಣ ಇಲ್ಲದೇ ಸುಮೋಟೋ ಕೇಸ್ ಹಾಕ್ತಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿರುವವರ ಮೇಲೆ ಕೇಸ್ ಹಾಕಬೇಕು. ಪ್ರಕರಣದಲ್ಲಿ ಷಡ್ಯಂತ್ರ ಏನಾಗಿದೆ ಎಂದು ಹೇಳಬೇಕು. ಗಾಳಿಯಲ್ಲಿ ತೇಲಿಸುವ ಕೆಲಸ ಆಗಬಾರದು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಧರ್ಮಾಧಿಕಾರಿಗಳ ವಿರುದ್ಧ ಯಾರೂ ಇಲ್ಲ: ರಾಮಲಿಂಗಾರೆಡ್ಡಿ

    ಅನಾಮಿಕ ವ್ಯಕ್ತಿಯು ಸುಪ್ರೀಂ ಕೋರ್ಟ್ಗೆ ಲಾಯರ್‌ಗಳನ್ನ ಇಟ್ಟುಕೊಂಡಿದ್ದು, ಇಷ್ಟ ಬಂದ ಹಾಗೆ ಕಥೆಯನ್ನ ಸೃಷ್ಟಿ ಮಾಡ್ತಿದ್ದಾರೆ. ಅನಾಮಿಕ ವ್ಯಕ್ತಿಯ ಮೂಲಕ ಸುಳ್ಳನ್ನೆ ಸತ್ಯವನ್ನಾಗಿ ಮಾಡಲು ಹೊರಟಿದ್ದಾರೆ. ಇದನ್ನ ಪಿಎಫ್‌ಐ, ಎಸ್‌ಡಿಪಿಐ ಮಾಡ್ತಿದೆ. ಅನಾಮಿಕ ವ್ಯಕ್ತಿ ಹಾಗೂ ಆತನ ಹಿಂದಿರುವ ವ್ಯಕ್ತಿಯ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.

    ಈ ಪ್ರಕರಣದಲ್ಲಿ ರಾಜಕೀಯ ಮಾಡುವುದು ಹಾಗೂ ಸಮಾಜ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡ್ತಿದೆ ಎಂದು ಕಿಡಿಕಾರಿದ್ದಾರೆ.

  • ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

    ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

    – ಸರ್ಕಾರವೂ ಧರ್ಮಸ್ಥಳ ಪ್ರಕರಣದಲ್ಲಿ ಶಾಮೀಲಾಗಿದೆ ಅಂತ ಅನುಮಾನ ಪಡಬೇಕಾಗುತ್ತೆ; ಎಂಎಲ್‌ಸಿ

    ಬೆಂಗಳೂರು: 24 ಕೊಲೆಗಳ ಸಿಎಂ ಸಿದ್ದರಾಮಯ್ಯ (Siddaramaiah) ಮಾಡಿಸಿದ್ದಾರೆ ಅಂತ ಮಹೇಶ್‌ ತಿಮರೋಡಿ ಆರೋಪ ಮಾಡಿದ್ದಾರೆ. ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ. ಈ ಬಗ್ಗೆಯೂ ತನಿಖೆಯಾಗಲಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ (CT Ravi) ಒತ್ತಾಯಿಸಿದರು.

    ವಿಧಾನಸೌಧ ಆವರಣದಲ್ಲಿ ಪಬ್ಲಿಕ್‌ ಟಿವಿ ಜೊತೆಗೆ ಮಾತನಾಡಿದ ಅವರು, ಧರ್ಮಸ್ದಳದ (Dharmasthala) ಬಗ್ಗೆ ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸದಿದ್ದರೇ ಸರ್ಕಾರವೂ ಈ ಪ್ರಕರಣದಲ್ಲಿ ಶಾಮೀಲಾಗಿದೆ ಅಂತ ನಾವು ಅನುಮಾನ ಪಡಬೇಕಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

    ಧರ್ಮಸ್ಥಳದ ವಿರದ್ಧ ಅಪಪ್ರಚಾರ ನಡೆಯುತ್ತಿದ್ದು ಅಲ್ಲಿಗೆ ನಾವು ಹೋಗಿ ಹೋರಾಟ ಮಾಡದೇ ಕನ್ವರ್ಟ್‌ ಆದವರು, ಮತಾಂತರಕ್ಕೆ ಬೆಂಬಲ‌ ನೀಡುವವರು ಹೋಗಿ ಹೋರಾಟ ಮಾಡ್ತಾರಾ? ಅಂತ ಪ್ರಶ್ನಿಸಿದರು. ಇದನ್ನೂ ಓದಿ: Rain Alert | ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ – ಮಲೆನಾಡು ಭಾಗದಲ್ಲಿ ರೆಡ್‌ ಅಲರ್ಟ್‌

    ಧರ್ಮಸ್ಥಳಕ್ಕಿಂತ ಮಾಸ್ಕ್ ಮ್ಯಾನ್ ಮೇಲೆ‌ ಶ್ರದ್ದೆನಾ?
    ಅನಾಮಿಕ‌ ತೋರಿಸಿದ 16 ಜಾಗಗಳಲ್ಲಿ ಅಗೆದರೂ ಏನೂ ಸಿಕ್ಕಿಲ್ಲ. ಅವನ‌ ಜೊತೆ ಸೇರಿಕೊಂಡು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಯುಟ್ಯೂಬ್‌, ಸೋಶಿಯಲ್ ಮೀಡಿಯಾದವರೂ (Social Media) ಸೇರಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿಗಳೇ ಷಡ್ಯಂತ್ರ ಆಗಿದೆ ಅಂದಿದ್ದಾರೆ. ನಮಗೂ ಅದೆ ಅನುಮಾನ ಅನಾಮಿಕನನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸೋಷಿಯಲ್‌ ಮೀಡಿಯಾ ಯೂಟ್ಯೂಬ್‌ನಲ್ಲಿ ಮಾತನಾಡಿದವರ ವಿರುದ್ಧವೂ ಕ್ರಮ ತಗೆದುಕೊಳ್ಳಬೇಕು. ಧಾರ್ಮಿಕ ಶ್ರದ್ದಾ ಕೇಂದ್ರವಾದ ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಒಬ್ಬ ಮಾಸ್ಕ್ ಮ್ಯಾನ್ ಮೇಲೆ‌ ಇವರಿಗೆ ಶ್ರದ್ದೆನಾ? ಕೋಟ್ಯಂತರ ಜನರ ಭಕ್ತಿಯ ಧಾರ್ಮಿಕ ಕೇಂದ್ರದ ಮೇಲೆ ಇವರಿಗೆ ಶ್ರದ್ದೆನಾ? ಅಂತ ಪ್ರಶ್ನೆ ಮಾಡಿದರು.

    ಎಡ ಪಂಥೀಯರ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿದ್ದೇವೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅಲ್ಲದೇ ಸಿಎಂ 24 ಕೊಲೆ‌ ಮಾಡಿದ್ದಾರೆ ಅಂತ ಮಹೇಶ್ ತಿಮ್ಮರೋಡಿ ಆರೋಪ ಮಾಡಿದ್ದಾರೆ. ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂತ ನಾನು ನಂಬಲ್ಲ. ಕಾನೂನು ಎಲ್ಲರಿಗೂ ಒಂದೇ ಹಾಗೇನಾದರು ಸಾಕ್ಷ್ಯಗಳಿದ್ದರೆ, ಹೋಗಿ ದೂರು ಕೊಡಲಿ. ಈ ವಿಚಾರದಲ್ಲಿ ಆಧಾರ ಇಲ್ಲದೇ ಆರೋಪ ಮಾಡಲ್ಲ. ಹಿಟ್ ಅಂಡ್ ರನ್ ಮಾಡಲ್ಲ. ಆರೋಪದ ಬಗ್ಗೆ ಸಹಾ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

    ಧರ್ಮಸ್ದಳದ ಬಗ್ಗೆ ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸದಿದ್ದರೇ ಸರ್ಕಾರವೂ ಶಾಮೀಲಾಗಿದೆ ಅಂತ ನಾವು ಅನುಮಾನ ಪಡಬೇಕಾಗಿತ್ತದೆ. ಮುಂದೆ ಭಕ್ತರು ಹಾಗೂ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:  ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ