Tag: Dharmastala

  • ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬಸ್‌ ಹಳ್ಳಕ್ಕೆ ಉರುಳಿಬಿದ್ದು ಮಹಿಳೆ ಸಾವು – ಐವರು ಗಂಭೀರ

    ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬಸ್‌ ಹಳ್ಳಕ್ಕೆ ಉರುಳಿಬಿದ್ದು ಮಹಿಳೆ ಸಾವು – ಐವರು ಗಂಭೀರ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್‌ ಹಳ್ಳಕ್ಕೆ ಉರುಳಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು ಐವರು ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ಬೇಲೂರು-ಮೂಡಿಗೆರೆ ತಾಲೂಕಿನ ಗಡಿ ಗ್ರಾಮ ಚೀಕನಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಬೆಂಗಳೂರಿನ (Bengaluru) ಯಲಹಂಕ ನಿವಾಸಿ ಸುರೇಖಾ (45) ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ವಿಷವಾಗುತ್ತಿದೆಯಾ ಉಸಿರಾಡುವ ಗಾಳಿ? – ಪರಿಶೀಲನೆಗೆ 1,119 ಅಧಿಕಾರಿಗಳ 517 ತಂಡ ರಚನೆ

    ಕಳೆದ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ಬಸ್ (Bus) ಶನಿವಾರ (ನ.4) ಬೆಳಗ್ಗಿನ ಜಾವ 4.45ಕ್ಕೆ ಚೀಕನಹಳ್ಳಿ ಬಳಿ ಬರುತ್ತಿದ್ದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಈ ಬಸ್ಸು ಬೆಂಗಳೂರಿನಿಂದ ಧರ್ಮಸ್ಥಳ (Dharmastala), ಸುಬ್ರಹ್ಮಣ್ಯ, ಹೊರನಾಡು, ಶೃಂಗೇರಿಗೆ ಪ್ರವಾಸಕ್ಕೆ ಹೊರಟಿತ್ತು ಎನ್ನಲಾಗಿದೆ. ಇದನ್ನೂ ಓದಿ: ಜನವಸತಿ ಪ್ರದೇಶದಲ್ಲೇ ಅಕ್ರಮ ಗಣಿಗಾರಿಕೆ- ಕಟ್ಟಡಗಳು ಬಿರುಕು, ಬೆಚ್ಚಿದ ಅಂಗನವಾಡಿ ಮಕ್ಕಳು

    ಬಸ್ಸಿನಲ್ಲಿ ರಾಜನಗುಂಟೆ ಹಾಗೂ ಕೆ.ಆರ್.ಪುರಂನ 48ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನ ಹಾಸನ ಜಿಲ್ಲೆಯ ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಸ್ಕೆಬೈಲು-ಚೀಕನಹಳ್ಳಿ ಈ ತಿರುವಿನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಕಳೆದ 10 ತಿಂಗಳಲ್ಲಿ 70ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಚೀಕನಹಳ್ಳಿಯ ಕ್ರಾಸ್‍ಗೆ ತಡೆಗೋಡೆ ನಿರ್ಮಿಸಿ ಎಂದು ಸ್ಥಳಿಯರು ಸರ್ಕಾರಕ್ಕೆ ಮನವಿ ಮಾಡಿದ್ದರೂ ಸರ್ಕಾರ ಕಿವಿಗೊಡುತ್ತಿಲ್ಲ. ಈ ತಿರುವಿನಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು ಅಮಾಯಕ ಜೀವಗಳು ಪ್ರಾಣ ಕಳೆದುಕೊಳ್ಳುತ್ತಿವೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Nepal Earthquake: ಭೀಕರ ಭೂಕಂಪನಕ್ಕೆ ಬೆಚ್ಚಿಬಿದ್ದ ನೇಪಾಳ- 70 ಮಂದಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೀರೇಂದ್ರ ಹೆಗ್ಗಡೆಯವರಿಗೆ ಮಾನಸಿಕ ಹಿಂಸೆ ನೀಡಲಾಗ್ತಿದೆ: ಜೈನಮುನಿ ಗುಣದರನಂದಿ ಶ್ರೀ

    ವೀರೇಂದ್ರ ಹೆಗ್ಗಡೆಯವರಿಗೆ ಮಾನಸಿಕ ಹಿಂಸೆ ನೀಡಲಾಗ್ತಿದೆ: ಜೈನಮುನಿ ಗುಣದರನಂದಿ ಶ್ರೀ

    – ಧರ್ಮಾಧಿಕಾರಿ ಮೇಲಿನ ಆರೋಪ ಸಹಿಸಲ್ಲ

    ಹುಬ್ಬಳ್ಳಿ: ಕರ್ನಾಟಕ ಶಾಂತಿದೋಟ ಇಂತಹ ಹಿಂಸೆ ನಡೆಯಬಾರದು. ಸೌಜನ್ಯ (Sowjanya Case) ಹತ್ಯೆ ಪ್ರಕರಣ ನನಗೆ ಸಾಕಷ್ಟು ನೋವು ಕೊಟ್ಟಿದೆ. ಇದನ್ನೇ ನೆಪವಾಗಿಟ್ಟುಕೊಂಡು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Veerendra Heggade) ಮೇಲೆ ಆರೋಪ ಮಾಡುವುದನ್ನು ನಾನು ಸಹಿಸುವುದಿಲ್ಲ ಅಂತ ಜೈನ ಮುನಿ ಗುಣದರನಂದಿ ಶ್ರೀ ಹೇಳಿದ್ದಾರೆ.

    ಹುಬ್ಬಳ್ಳಿ ಹೊರ ವಲಯದ ನವಗ್ರಹ ತೀರ್ಥ ಪೀಠದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಣ್ಣಿನ ಮೇಲೆ ಅತ್ಯಾಚಾರ, ಹತ್ಯೆ ಆಗಬಾರದು. ಎಲ್ಲರ ಜೀವ ಒಂದೇ. ಸೌಜನ್ಯ ಹತ್ಯೆಯನ್ನು ನಾನು ಖಂಡನೆ ಮಾಡುತ್ತೇನೆ. ಈ ಹತ್ಯೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಆದರೆ ವೀರೇಂದ್ರ ಹೆಗ್ಗಡೆಯವರ ಮೇಲೆ ಸುಮ್ಮನೆ ಸುಮ್ಮನೆ ಆರೋಪ ಸರಿಯಲ್ಲ ಎಂದರು.

    ಕರ್ನಾಟಕ ರಾಜ್ಯವನ್ನು ದೇಶಕ್ಕೆ ವಿಶ್ವಕ್ಕೆ ಪರಿಚಯ ಮಾಡಿದವರು, ಧರ್ಮಸ್ಥಳಕ್ಕೆ (Dharmasthala) ಅಪವಿತ್ರ ಶಬ್ದಗಳು ಬರಬಾರದು. ಪದೇ ಪದೇ ಅಪ್ರಚಾರ ಮಾಡಿ ಹೆಗ್ಗಡೆಯವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಅವರ ವಿರುದ್ಧ ಈ ರೀತಿ ಅಪ್ರಚಾರ ಬೇಡ. ಯಾವುದೇ ಆಧಾರವಿಲ್ಲದೆ ಟಾರ್ಗೆಟ್ ಮಾಡಿ ಮಾನಸಿಕ ಹಿಂಸೆ ನೀಡುವುದು ಸರಿಯಲ್ಲ. ನಾನು ಅವರ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದೇನೆ. ಅವರು ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಅವರು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆ ನೀಡಲಿ. ಹತ್ಯೆಯ ಬಗ್ಗೆ ಮತ್ತೆ ತನಿಖೆ ಮಾಡಲಿ. ನಮಗೆ ಸಂವಿಧಾನದ ಮತ್ತು ಸರ್ಕಾರದ ಮೇಲೆ ನಂಬಿಕೆಯಿದೆ ಎಂದು ಹೇಳಿದರು.

    ಧರ್ಮಸ್ಥಳಕ್ಕೆ ಹೋಗದಿರುವ ಬಗ್ಗೆ ಶುರುವಾಗಿರುವ ಅಭಿಯಾನದ ಬಗ್ಗೆ ಮಾತನಾಡಿದ ಅವರು, ನ್ಯಾಯ ಮತ್ತು ಧರ್ಮ ಬೇರೆ ವ್ಯವಸ್ಥೆ. ಧರ್ಮ ಪರಮಾತ್ಮ ವ್ಯವಸ್ಥೆ ಮಂಜುನಾಥ ಯಾವುದೇ ಪಾಪ ಮಾಡಿಲ್ಲ. ಯಾರಿಗೂ ಬಾ ಅಂತ ಕರೆಯವುದಿಲ್ಲ. ನಾಸ್ತಿಕರಿಗೆ ಈ ಬಗ್ಗೆ ಏನು ಹೇಳಿದರೂ ಅರ್ಥವಾಗವುದಿಲ್ಲ. ಯಾರಿಗೆ ದೇವರ ಮೇಲೆ ನಂಬಿಕೆಯಿದೆ ಅವರು ಬಂದೆ ಬರುತ್ತಾರೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತಮಿಳು ನಟ ವಿಶಾಲ್ ಭೇಟಿ

    ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತಮಿಳು ನಟ ವಿಶಾಲ್ ಭೇಟಿ

    ಕಾಲಿವುಡ್(Kollywood) ನಟ ವಿಶಾಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ವಿಶಾಲ್ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

    ತಮಿಳಿನ(Tamil Films) ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟ ಇದೀಗ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ(Dharmastala) ಭೇಟಿ ನೀಡಿದ್ದಾರೆ. ವಿಶೇಷ ಪೂಜೆ ಮಾಡಿಸಿ, ಮಂಜುನಾಥಸ್ವಾಮಿ ಆಶೀರ್ವಾದ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ.‌ ಇದನ್ನೂ ಓದಿ:ʻಕಾಂತಾರʼ ಸಿಂಗಾರ ಸಿರಿಯೇ ಲಿರಿಕ್ಸ್ ರೈಟರ್ ಬರೆದಿರುವ `ದೂರದರ್ಶನ’ ಚಿತ್ರದ ನ್ಯೂ ಸಾಂಗ್ ಔಟ್

    ಇನ್ನೂ ವಿಶಾಲ್ `ಲಾಠಿ’ ಚಿತ್ರದ ಮೂಲಕ ಖಡಕ್ ಆಫೀಸರ್ ಆಗಿ ತೆರೆಗೆ ಅಪ್ಪಳಿಸುತ್ತಿದ್ದಾರೆ. ಹೊಸ ಸಿನಿಮಾಗಾಗಿ ನಿರ್ದೇಶನಕ್ಕೂ ಕೈಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುಣಿಗಲ್‍ನಲ್ಲಿ ಭೀಕರ ಅಪಘಾತ- ಬೆಂಗಳೂರಿಗೆ ಹೋಗುತ್ತಿದ್ದ ಇಬ್ಬರು ಸಾವು

    ಕುಣಿಗಲ್‍ನಲ್ಲಿ ಭೀಕರ ಅಪಘಾತ- ಬೆಂಗಳೂರಿಗೆ ಹೋಗುತ್ತಿದ್ದ ಇಬ್ಬರು ಸಾವು

    ತುಮಕೂರು: ಬೆಳ್ಳಂಬೆಳಗ್ಗೆ ಕಾರು ಹಾಗೂ ಟಿಟಿ ವಾಹನದ ನಡುವೆ ಅಪಘಾತವಾಗಿದ್ದು, ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.

    ಕುಣಿಗಲ್ ತಾಲೂಕಿನ ಬೆಗೂರು ಬೈಪಾಸ್ ಬಳಿ ಕಾರು- ಟಿಟಿ ವಾಹನ ಡಿಕ್ಕಿ ಆಗಿದ್ದು ಸ್ಥಳದಲ್ಲೇ ಕಾರಿನಲ್ಲಿದ್ದ ರಘು(27) ಸಂತೋಷ (21) ಮೃತಪಟ್ಟಿದ್ದಾರೆ. ಮೃತರು ಬೆಂಗಳೂರಿನ ಸಂಜಯ್ ನಗರದ ವಾಸಿಗಳಾಗಿದ್ದಾರೆ. ಇನ್ನೂಳಿದಂತೆ ವಿಜಯ್ (30) ಸ್ಥಿತಿ ಗಂಭೀರವಾಗಿದ್ದು, ಟಿಟಿ ವಾಹನದಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಕಾರಿನ ಗಾಜು ಪುಡಿ ಮಾಡಿದ ಕಿಡಿಗೇಡಿಗಳು- ಸಿಸಿ ಕ್ಯಾಮರಾದಲ್ಲಿ ದುಷ್ಕೃತ್ಯ ಸೆರೆ

    ಧರ್ಮಸ್ಥಳಕ್ಕೆ ಹೋಗುತಿದ್ದ ಟಿ.ಟಿ. ವಾಹನ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಚಿಕ್ಕಮಗಳೂರಿನಿಂದ- ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದ ಕಾರೊಂದು ಡಿವೈಡರ್ ದಾಟಿ ಟಿ.ಟಿ. ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಕುಣಿಗಲ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

  • ʻಕೆಜಿಎಫ್‌ 2ʼ ರಿಲೀಸ್‌ ಬೆನ್ನಲ್ಲೇ ಯಶ್‌ ಟೆಂಪಲ್‌ ರನ್‌: ಧರ್ಮಸ್ಥಳದಲ್ಲಿ ರಾಕಿಭಾಯ್‌

    ʻಕೆಜಿಎಫ್‌ 2ʼ ರಿಲೀಸ್‌ ಬೆನ್ನಲ್ಲೇ ಯಶ್‌ ಟೆಂಪಲ್‌ ರನ್‌: ಧರ್ಮಸ್ಥಳದಲ್ಲಿ ರಾಕಿಭಾಯ್‌

    ಪ್ರಶಾಂತ್ ನೀಲ್ ನಿರ್ದೇಶನದ, ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಚಿತ್ರ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಶ್ರೀಕ್ಷೇತ್ರ ಧರ್ಮಸ್ಥಳ ಸನ್ನಿಧಿಗೆ ನಟ ಯಶ್ ಚಿತ್ರತಂಡದೊಂದಿಗೆ ಭೇಟಿ ನೀಡಿದ್ದಾರೆ.

    ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ `ಕೆಜಿಎಫ್ 2′ ಏಪ್ರಿಲ್ 14ಕ್ಕೆ ತೆರೆಗೆ ಅಬ್ಬರಿಸಲಿದೆ. ಈ ಹಿನ್ನಲೆಯಲ್ಲಿ ಯಶ್ ಮತ್ತು ಚಿತ್ರತಂಡ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಮಾತಾನಾಡಿದ ನಟ ಯಶ್, ಸಿನಿಮಾ ರಿಲೀಸ್‌ಗೆ ರೆಡಿಯಿದೆ ಹಾಗಾಗಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿರುವುದಾಗಿ ಯಶ್ ತಿಳಿಸಿದ್ದಾರೆ.

    ನಾನು ಮತ್ತು ನಿರ್ಮಾಪರು ಒಳ್ಳೆಯ ಕೆಲಸ ಶುರು ಮಾಡುವಾಗ ದೇವರ ದರ್ಶನ ಪೆಡೆಯುತ್ತೇವೆ. ನಾವು ಪಟ್ಟ ಶ್ರಮಕ್ಕೆ ದೇವರ ಅನುಗ್ರಹ ಇರಬೇಕು. ಈ ವೇಳೆ ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ದೇವರ ಅನುಗ್ರಹ ಪಡೆದಿದ್ದೇವೆ. ಇದನ್ನು ಓದಿ: ಹಿಜಬ್ ಹಾಕಿ ಅಚ್ಚರಿ ಮೂಡಿಸಿದ ನಟಿ ಶ್ರುತಿ 

    ಈ ಸಂದರ್ಭದಲ್ಲಿ ಹೆಗ್ಗಡೆಯವರ ಜೊತೆ ಮಾತನಾಡಿ ಅವರ ಆಶೀರ್ವಾದ ಪಡೆದಿದ್ದೇವೆ. ಈ ಹಿಂದಿಯೂ ಸಾಕಷ್ಟು ಬಾರಿ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ. ವೀರೇಂದ್ರ ಹೆಗ್ಗಡೆಯವರು ಹಿಂದಿನಿಂದಲೂ ನನ್ನ ಬೆಳವಣಿಗೆ ನೋಡ್ತಾ ಬಂದಿದ್ದಾರೆ. ಇಂದು ಹೆಗ್ಗಡೆಯವರು ಅವರು ಖುಷಿ ಪಟ್ಟು ನಮಗೆ, ನಮ್ಮ ಸಿನಿಮಾಗೆ ಆಶೀರ್ವಾದ ಮಾಡಿದ್ರು ಎಂದು ಯಶ್ ತಿಳಿಸಿದ್ದಾರೆ. ಜತೆಗೆ ಬುಕ್ಕಿಂಗ್ ಟಿಕೆಟ್ ಓಪನ್ ಆಗಿದೆ, ಎಲ್ಲರೂ ಸಿನಿಮಾ ಹರಿಸಿ ಎಂದು ಯಶ್ ಮಾತಾಡಿದ್ದಾರೆ.

  • ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ

    ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ

    ಮಂಗಳೂರು: ಕೆಜಿಎಫ್-2 ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಕ್ಷೇತ್ರ ಭೇಟಿ ಆರಂಭಿಸಿದ್ದಾರೆ. ಇಂದು ನಟ ಕುಕ್ಕೆ ಸುಬ್ರಹ್ಮಣ ಹಾಗೂ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.

    ನಟ ಇಂದು ಕೆ.ಜಿ.ಎಫ್ ನಿರ್ಮಾಪಕ ವಿಜಯ್ ಕಿರಂಗದೂರು ಜೊತೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ತಂಡದ ಜೊತೆ ಕೈ ಜೋಡಿಸಿದ ಹೊಂಬಾಳೆ ಫಿಲ್ಮ್ಸ್

    ಧರ್ಮಸ್ಥಳಕ್ಕೆ ಹೆಲಿಕಾಪ್ಟರ್‍ನಲ್ಲಿ ಆಗಮಿಸಿ ಅಲ್ಲಿಂದ ರಸ್ತೆ ಮಾರ್ಗವಾಗಿ ಕುಕ್ಕೆಗೆ ತೆರಳಿದ್ದಾರೆ. ಕುಕ್ಕೆಯಲ್ಲಿ ದೇವರ ದರ್ಶನ ಪಡೆದು ನಂತರ ಧರ್ಮಸ್ಥಳಕ್ಕೆ ಬಂದು ಮೊದಲು ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಪೂಜ್ಯ ಖಾವಂದರು ಯಶ್ ಬಳಿ ಸಿನಿಮಾದ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಂಜುನಾಥನ ದರ್ಶನ ಪಡೆದು ಪುನೀತರಾದರು.

    ಕುಕ್ಕೆ ಹಾಗೂ ಧರ್ಮಸ್ಥಳ ಭೇಟಿ ಬಳಿಕ ಯಶ್ ಅವರು ಉಜಿರೆಯಲ್ಲಿರುವ ಇತಿಹಾಸ ಪ್ರಸಿದ್ಧ ಸೂರ್ಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ `ಮಾರ್ಟಿನ್’ ಅಬ್ಬರಕ್ಕೆ ಮುಹೂರ್ತ ಫಿಕ್ಸ್

  • ಕಾರು-ಬೈಕ್ ಡಿಕ್ಕಿ, ಧರ್ಮಸ್ಥಳಕ್ಕೆ ಹೊರಟಿದ್ದ ದಂಪತಿ ಸಾವು

    ಕಾರು-ಬೈಕ್ ಡಿಕ್ಕಿ, ಧರ್ಮಸ್ಥಳಕ್ಕೆ ಹೊರಟಿದ್ದ ದಂಪತಿ ಸಾವು

    ಚಿಕ್ಕಮಗಳೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದಂಪತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಏರಿ ಬಳಿ ನಡೆದಿದೆ.

    ಆನಂದ್(35) ಹಾಗೂ ಲಕ್ಷ್ಮಿ(33) ಮೃತ ದುರ್ದೈವಿ. ಮೃತರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಸಮೀಪದ ಕಾರೇಹಳ್ಳಿ ಮೂಲದವರು. ಇಂದು ಬೆಳಗ್ಗೆ ಬೈಕಿನಲ್ಲಿ ಧರ್ಮಸ್ಥಳಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.

    ಬೈಕ್-ಕಾರು ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಬೈಕ್ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ. ಕಂದಕಕ್ಕೆ ಬಿದ್ದ ಬೈಕಿಗೆ ಬೆಂಕಿ ಹೊತ್ತಿದ ಪರಿಣಾಮ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೈಕ್ ಜೊತೆಯೇ ಕಂದಕಕ್ಕೆ ಬಿದ್ದ ಬೈಕ್ ಸವಾರ ಆನಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತೀವ್ರ ಗಾಯವಾಗಿದ್ದ ಮೃತ ಆನಂದ್ ಪತ್ನಿ ಲಕ್ಷ್ಮಿ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಅವರು ಕೂಡ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

    ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುತ್ತಿದೆ. ಹಾಗಾಗಿ, ಹೋಗಿ-ಬರುವ ವಾಹನಗಳನ್ನು ಒಂದೇ ಮಾರ್ಗದಲ್ಲಿ ಓಡಾಡಲು ಅವಕಾಶ ನೀಡಲಾಗಿದೆ. ಎರಡೂ ವಾಹನಗಳು ಒನ್‍ವೇನಲ್ಲಿ ಓಡಾಡುವಾಗ ಈ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಕ್ರೇನ್‍ನನ್ನು ವಶಪಡಿಸಿಕೊಳ್ಳುವಷ್ಟು ಶಕ್ತಿ ರಷ್ಯಾಕ್ಕಿಲ್ಲ: ಝೆಲೆನ್ಸ್ಕಿ

  • ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತಕ್ಕೆ 12 ಬಲಿ -ಡಿಕ್ಕಿಯ ರಭಸಕ್ಕೆ ಬ್ರೀಜಾ ಅಪ್ಪಚ್ಚಿ

    ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತಕ್ಕೆ 12 ಬಲಿ -ಡಿಕ್ಕಿಯ ರಭಸಕ್ಕೆ ಬ್ರೀಜಾ ಅಪ್ಪಚ್ಚಿ

    – ಧರ್ಮಸ್ಥಳ ಪ್ರವಾಸ ಮುಗಿಸಿ ಬರುತ್ತಿದ್ದಾಗ ದುರ್ಘಟನೆ
    – ಬೆಂಗಳೂರು ಮೂಲದ ಯುವಕರಿದ್ದ ಬ್ರೀಜಾ
    – ಹೊಸೂರು ಮೂಲದ ಟವೇರಾಗೆ ಬ್ರೀಜಾ ಡಿಕ್ಕಿ

    ತುಮಕೂರು: ಬೆಳ್ಳಂಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತಕ್ಕೆ 12 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಕುಣಿಗಲ್ ತಾಲೂಕಿನ ಬ್ಯಾಲದಕೆರೆ ಬಳಿ ನಡೆದಿದೆ.

    ಬೆಳಗ್ಗೆ ನಾಲ್ಕು ಗಂಟೆಯ ವೇಳೆಗೆ ಬೆಂಗಳೂರು ಮೂಲದ ಮೂರು ಮಂದಿ ಯುವಕರಿದ್ದ ಬ್ರಿಜಾ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಈ ಕಾರು ಡಿವೈಡರ್ ದಾಟಿ ಮುಂದುಗಡೆ ಬರುತ್ತಿದ್ದ ಟವೇರಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬ್ರಿಜಾ ಕಾರಿನಲ್ಲಿದ್ದ 3 ಮಂದಿ ಮೃತಪಟ್ಟರೆ ಟವೇರಾದಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ.

    ಟವೇರಾದಲ್ಲಿದ್ದ ಮಂಜುನಾಥ್ (35), ತನುಜ (25), ಒಂದು ವರ್ಷದ ಹೆಣ್ಣು ಮಗು, ಗೌರಮ್ಮ (60), ರತ್ನಮ್ಮ (52), ಸುಂದರರಾಜ್ (48), ರಾಜೇಂದ್ರ (27), ಸರಳ (32), ಪ್ರಶನ್ಯಾ (14) ಮೃತಪಟ್ಟರೆ, ಕಾರಿನಲ್ಲಿದ್ದ ಲಕ್ಷ್ಮಿ ಕಾಂತ್ (24), ಸಂದೀಪ (36), ಮಧು (28) ಮೃತಪಟ್ಟಿದ್ದಾರೆ.

    ನಿದ್ದೆಯ ಮಂಪರಿನಲ್ಲಿ ಬ್ರೀಜಾವನ್ನು ಚಾಲಕ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಶ್ವೇತಾ, ಹರ್ಷಿತಾ, ಮಾಲಾಶ್ರೀ, ಗಂಗೋತ್ರಿ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಡಿಕ್ಕಿ ಹೊಡೆದ ರಭಸಕ್ಕೆ ಬ್ರೀಜಾ ಕಾರು ಮುಂದುಗಡೆ ಅಪ್ಪಚ್ಚಿ ಆಗಿ ಹೋಗಿದೆ. ಕಾರಿನಲ್ಲಿದ್ದವರ ತಲೆಯಿಂದ ಚಿಪ್ಪು ಹೊರ ಬಂದಿದೆ.

    ಗಂಭೀರವಾಗಿ ಗಾಯಗೊಂಡ 4 ಮಂದಿಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೂರು ಮಂದಿ ಯುವಕರಿದ್ದ ಕಾರು ಧರ್ಮಸ್ಥಳದಿಂದ ಮರಳುತ್ತಿದ್ದರೆ, ತಮಿಳುನಾಡಿನ ಹೊಸೂರು ಮೂಲದ ವ್ಯಕ್ತಿಗಳು ಟವೇರಾದಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು.

  • ಧರ್ಮಸ್ಥಳದ ಭಗವಾನ್ ಬಾಹುಬಲಿಗೆ 216 ಕಲಶಗಳಿಂದ ಪಾದಾಭಿಷೇಕ

    ಧರ್ಮಸ್ಥಳದ ಭಗವಾನ್ ಬಾಹುಬಲಿಗೆ 216 ಕಲಶಗಳಿಂದ ಪಾದಾಭಿಷೇಕ

    ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿನ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿ ಸ್ವಾಮಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು.

    ಮಂಗಲ ಪ್ರವಚನ ನೀಡಿದ ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸಾಮೀಜಿ ಮಾತನಾಡಿ, “ಎಲ್ಲೆಲ್ಲೂ ಅನ್ಯಾಯ, ಕ್ರೋಧ, ದ್ವೇಷ, ವಂಚನೆ ತಾಂಡವವಾಡುತ್ತಿರುವ ಇಂದು ಬಾಹುಬಲಿಯ ತ್ಯಾಗ ಸಂದೇಶ ವಿಶ್ವಮಾನ್ಯವಾಗಿದೆ” ಎಂದು ಹೇಳಿದರು.

    ಭಾರತ ದೇಶವು ಧರ್ಮ, ಸಂಸ್ಕೃತಿಯ ನೆಲೆವೀಡಾಗಿದ್ದು, ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನೆಗೊಂಡ ಭಗವಾನ್ ಬಾಹುಬಲಿ ಮೂರ್ತಿಯ ಆರಾಧನೆಯಿಂದ ತ್ಯಾಗ, ಅಹಿಂಸೆ, ಸಂಯಮ, ಇಂದ್ರಿಯ ನಿಗ್ರಹ ಮೊದಲಾದ ಮಾನವೀಯ ಗುಣಗಳು ಉದ್ದೀಪನಗೊಂಡು, ಪರಸ್ಪರ ಪ್ರೀತಿ-ವಿಶ್ವಾಸದಿಂದ ಶಾಂತಿ, ಸಾಮರಸ್ಯ ಮೂಡಿ ಬರುತ್ತದೆ. ಆರಾಧನೆ ಮೂಲಕ ನಾವು ಭಗವಂತನಲ್ಲಿರುವ ಅಮೂಲ್ಯ ಹಾಗೂ ಅನಂತ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆದುದರಿಂದಲೇ ನಾವು ವಂದೇ ತದ್ಗುಣ ಲಬ್ದಯೇ ಅಂದರೆ ದೇವರಲ್ಲಿರುವ ಅನಂತ ಗುಣಗಳು ನಮ್ಮಲ್ಲಿಯೂ ಮೂಡಿ ಬರಲಿ ಎಂದು ಪ್ರಾರ್ಥಿಸುತ್ತೇವೆ. ಬಾಹುಬಲಿ ತನ್ನ ಜೀವನದಲ್ಲಿ ಸಾಧಿಸಿ ತೋರಿಸಿದ ಅಹಿಂಸೆ, ತ್ಯಾಗ, ವೈರಾಗ್ಯದ ಮೂಲಕ ವಿಶ್ವಶಾಂತಿ ಉಂಟಾಗಲಿ ಎಂದು ಸ್ವಾಮೀಜಿ ಹಾರೈಸಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ.ಬಿ. ಯಶೋವರ್ಮ, ಸೋನಿಯಾವರ್ಮ ಹಾಗೂ ಕುಟುಂಬಸ್ಥರು ಪಾದಾಭಿಷೇಕ ಮಾಡಿದರು. ಪಂಚ ನಮಸ್ಕಾರ ಮಂತ್ರ ಪಠಣ, ಜಿನ ಭಜನೆ ಹಾಗೂ ಭಕ್ತಿಗೀತೆಗಳ ಗಾಯನ ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.

  • ಹೊಸ ವರ್ಷದಲ್ಲಿ ಸಿಂಗಾರಗೊಂಡ ಧರ್ಮಸ್ಥಳ – ಬೆಂಗ್ಳೂರಿನ ಭಕ್ತರಿಂದ ವಿಶೇಷ ಸೇವೆ

    ಹೊಸ ವರ್ಷದಲ್ಲಿ ಸಿಂಗಾರಗೊಂಡ ಧರ್ಮಸ್ಥಳ – ಬೆಂಗ್ಳೂರಿನ ಭಕ್ತರಿಂದ ವಿಶೇಷ ಸೇವೆ

    ಮಂಗಳೂರು: ಹೊಸ ವರ್ಷದ ಪ್ರಯುಕ್ತ ಎಲ್ಲರು ಪಾರ್ಟಿ, ಸುತ್ತಾಟ ಮಾಡುತ್ತಿದ್ದರೆ, ಬೆಂಗಳೂರಿನ ಕುಟುಂಬವೊಂದು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಮಾಡಿ ಮಂಜುನಾಥನ ಸೇವೆ ಸಲ್ಲಿಸಿದ್ದಾರೆ.

    ಹೊಸ ವರ್ಷಾಚರಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ಈ ಪ್ರಯುಕ್ತ ಬೆಂಗಳೂರಿನ ಕುಟುಂಬವೊಂದು ಕಳೆದ 12 ವರ್ಷಗಳಿಂದ ಸ್ವಾಮಿ ಸನ್ನಿಧಾನದಲ್ಲಿ ಹೂವಿನ ಅಲಂಕಾರ ಸೇವೆ ಮಾಡುತ್ತಿದ್ದು, ಈ ವರ್ಷವೂ ವಿಶೇಷವಾಗಿ ಅಲಂಕಾರ ಮಾಡಿದೆ.

    ಬೆಂಗಳೂರಿನ ಚಂದ್ರಲೇಔಟ್ ನಿವಾಸಿಗಳಾದ ಸಾಯಿ ಶರವಣ, ಎಸ್. ಗೋಪಾಲ್ ರಾವ್, ಮಂಜುನಾಥ ರಾವ್, ಆನಂದ್ ಜೊತೆಗೂಡಿ ಕಳೆದ 20 ವರ್ಷಗಳಿಂದ ಹೊಸ ವರ್ಷಕ್ಕೆ ಮಂಜುನಾಥನ ದರ್ಶನ ಪಡೆಯಲು ಆಗಮಿಸುತ್ತಿದ್ದರು. ಈ ನಡುವೆ ಕಳೆದ 12 ವರ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೂವಿನ ಅಲಂಕಾರ ಮಾಡಿ ಹೊಸ ವರ್ಷವನ್ನು ದೇವರ ಸೇವೆಗಾಗಿ ಮೀಸಲಿಡುತ್ತಿದ್ದಾರೆ.

    ಹಣ್ಣುಗಳಾದ ದಾಳಿಂಬೆ, ಅನಾನಸು ಸೇರಿದಂತೆ ಭತ್ತದ ತೆನೆ, ಕಬ್ಬು, ತೆಂಗಿನ ಗರಿ, ಬಾಳೆ ದಿಂಡು, ತಾವರೆ, ಲಿಲಿಯಂ, ಜಮೈಕಾನ್ ಎಲೆ, ಆಂತೂರಿಯಂ, ಕ್ರಿಸಾಂಟಮೊ ಸಹಿತ 6 ಲೋಡ್ ಅಲಂಕಾರಿಕ ಸಾಮಾಗ್ರಿಗಳನ್ನು ಬಳಸಿ ದೇವಸ್ಥಾನದ ಹೊರಾಂಗಣದ ದ್ವಾರ, ಸುತ್ತು ಪೌಳಿ, ಛಾವಣಿ ಸ್ತಂಭಗಳನ್ನು ವಿಭಿನ್ನವಾಗಿ ಆಕರ್ಷಕವಾಗಿ ಸಿಂಗರಿಸಲಾಗಿದೆ.

    ಹೊಸ ವರ್ಷವನ್ನು ಆಚರಿಸಲು ದೇವರ ಮೊರೆ ಹೋಗಬೇಕೆಂಬ ಸಂಕಲ್ಪದೊಂದಿಗೆ ಕಳೆದ 12 ವರ್ಷಗಳಿಂದ ಮಂಜುನಾಥ ಸ್ವಾಮಿಯ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ ಎಂದು ಸೇವಾಕರ್ತರಾದ ಎಸ್ ಗೋಪಾಲ್ ರಾವ್ ಹೇಳಿದ್ದಾರೆ.