Tag: Dharmashala

  • ಜನಸೇವೆಗಾಗಿ 30-40 ವರ್ಷಗಳ ಕಾಲ ಬದುಕುವ ಆಶಯವಿದೆ – ಉತ್ತರಾಧಿಕಾರಿ ವದಂತಿಗೆ ತೆರೆ ಎಳೆದ ದಲೈ ಲಾಮಾ

    ಜನಸೇವೆಗಾಗಿ 30-40 ವರ್ಷಗಳ ಕಾಲ ಬದುಕುವ ಆಶಯವಿದೆ – ಉತ್ತರಾಧಿಕಾರಿ ವದಂತಿಗೆ ತೆರೆ ಎಳೆದ ದಲೈ ಲಾಮಾ

    ನವದೆಹಲಿ: ಮುಂದಿನ 30-40 ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸಲು ಬದುಕುವ ಆಶಯ ಹೊಂದಿದ್ದೇನೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ (Tibetan spiritual leader) ದಲೈ ಲಾಮಾ (Dalai Lama) ಹೇಳಿದ್ದಾರೆ. ಅವರ 90ನೇ ಜನ್ಮದಿನವಾದ ಇಂದು ಉತ್ತರಾಧಿಕಾರಿಯ ಘೋಷಣೆಯ ಕುರಿತಾದ ವದಂತಿಗಳ ನಡುವೆ ಈ ಹೇಳಿಕೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.

    ಮೆಕ್ಲಿಯೋಡ್ಗಂಜ್‌ನ ತ್ಸುಗ್ಲಾಗ್‌ಖಾಂಗ್‌ನ ಮುಖ್ಯ ದಲೈ ಲಾಮಾ ದೇವಸ್ಥಾನದಲ್ಲಿ ತಮ್ಮ 90ನೇ ಹುಟ್ಟುಹಬ್ಬಕ್ಕೂ ಮುನ್ನ ನಡೆದ ದೀರ್ಘಾಯುಷ್ಯದ ಪ್ರಾರ್ಥನಾ ಸಮಾರಂಭದಲ್ಲಿ ದಲೈ ಲಾಮಾ ಟೆನ್ಜಿನ್ ಗ್ಯಾಟ್ಸೊ ಅವರು ಮಾತನಾಡಿದರು. ಅವಲೋಕಿತೇಶ್ವರನ ಆಶೀರ್ವಾದ ತಮ್ಮೊಂದಿಗಿದೆ ಎಂಬ ಸ್ಪಷ್ಟ ಚಿಹ್ನೆಗಳು ಸಿಗುತ್ತಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮರಾಠಿ ಕಲಿಯಲ್ಲ ಎಂದಿದ್ದಕ್ಕೆ ಉದ್ಯಮಿ ಕಚೇರಿಯೇ ಧ್ವಂಸ

    ನಾನು ಇಲ್ಲಿಯವರೆಗೆ ನನ್ನ ಕೈಲಾದಷ್ಟು ಜನರ ಸೇವೆ ಮಾಡಲು ಪ್ರಯತ್ನಿಸಿದ್ದೇನೆ. ನಾನು ಇನ್ನೂ 30-40 ವರ್ಷಗಳ ಕಾಲ ಬದುಕುತ್ತೇನೆ ಎಂದು ಭಾವಿಸುತ್ತೇನೆ. ಇಲ್ಲಿಯವರೆಗೆ ನಿಮ್ಮ ಪ್ರಾರ್ಥನೆಗಳು ಫಲ ನೀಡಿವೆ. ನಾವು ನಮ್ಮ ದೇಶವನ್ನು ಕಳೆದುಕೊಂಡು ಭಾರತದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿದ್ದರೂ, ಇಲ್ಲಿ ನಾನು ಬಹಳಷ್ಟು ಜನರಿಗೆ ಸೇವೆ ಮಾಡಲು ಸಾಧ್ಯವಾಗಿದೆ. ನಾನು ಇನ್ನಷ್ಟು ಜನರ ಸೇವೆ ಮಾಡಲು ಬಯಸುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಹೇಳಿಕೆ ವಿವಾದ | ಕೊಡವ ಸಮುದಾಯ ಎಲ್ಲರನ್ನೂ ಬೆಂಬಲಿಸಿದೆ: ನಟಿ ಪ್ರೇಮ

    ದಲೈ ಲಾಮಾ ಅವರ 90ನೇ ಹುಟ್ಟುಹಬ್ಬವನ್ನು ಮೆಕ್ಲಿಯೋಡ್ಗಂಜ್‌ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಆಚರಿಸಲಾಗುತ್ತಿದೆ. ಇಂದು ಕೇಂದ್ರ ಸಚಿವ ಕಿರಣ್ ರಿಜಿಜು, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಹಾಲಿವುಡ್ ನಟ ರಿಚರ್ಡ್ ಗೆರೆ ಸೇರಿ ಇತರರು ಮುಖ್ಯ ಟಿಬೆಟಿಯನ್ ದೇವಾಲಯ ಮತ್ತು ದಲೈ ಲಾಮಾ ಅವರ ನಿವಾಸದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿನ ಬೆನ್ನಲ್ಲೇ 1 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಮೋದಿ ಸರ್ಕಾರ ಅಸ್ತು

    ದಲೈ ಲಾಮಾ ಅವರ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಬೆಳಗ್ಗೆ ಬೌದ್ಧ ಮಠದಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 8:00ಗಂಟೆಗೆ ಪ್ರಾರಂಭವಾದ ಈ ಪ್ರಾರ್ಥನಾ ಸಭೆಯಲ್ಲಿ ದಲೈ ಲಾಮಾ ಸ್ವತಃ ಹಾಜರಿದ್ದರು. ಭಾನುವಾರ ದಲೈ ಲಾಮಾ ಅವರು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಿದ್ದಾರೆ. ಈ ವೇಳೆ ತಮ್ಮ ಅನುಯಾಯಿಗಳನ್ನು ಸಹ ಅವರು ಆಶೀರ್ವದಿಸಲಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಬಳಿಕ ಮತ್ತೆ ಒಂದಾದ ಉದ್ಧವ್‌-ರಾಜ್‌ ಠಾಕ್ರೆ

    ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiran Rijiju), ದಲೈ ಲಾಮಾ ಅವರ 90ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಅವರು ದಲೈ ಲಾಮಾ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ, ದಲೈ ಲಾಮಾ ಅವರ ಹುಟ್ಟುಹಬ್ಬದ ಆಚರಣೆಯನ್ನು ಭಾನುವಾರ ಆಚರಿಸಲಾಗುವುದು ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

  • ಸಪ್ತಪದಿ ತುಳಿದ ರಷ್ಯಾ ಯುವಕ, ಉಕ್ರೇನ್‌ ಯುವತಿ – ಹಿಂದೂ ಸಂಪ್ರದಾಯದಂತೆ ಭಾರತದಲ್ಲಿ ವಿವಾಹ

    ಸಪ್ತಪದಿ ತುಳಿದ ರಷ್ಯಾ ಯುವಕ, ಉಕ್ರೇನ್‌ ಯುವತಿ – ಹಿಂದೂ ಸಂಪ್ರದಾಯದಂತೆ ಭಾರತದಲ್ಲಿ ವಿವಾಹ

    ಶಿಮ್ಲಾ: ಅತ್ತ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ನಡೆಸುತ್ತಿದ್ದರೆ, ಇತ್ತ ಭಾರತದಲ್ಲಿ ಉಕ್ರೇನ್‌ ಯುವತಿ ಹಾಗೂ ರಷ್ಯಾ ಯುವಕ ಸಪ್ತಪದಿ ತುಳಿದಿದ್ದಾರೆ. ಹಿಂದೂ ಸಂಪ್ರದಾಯದಂತೆ ಇಬ್ಬರೂ ಮದುವೆಯಾಗಿದ್ದಾರೆ.

    ಇಸ್ರೇಲ್‌ನಲ್ಲಿ ನೆಲೆಸಿರುವ ರಷ್ಯಾದ ಸೆರ್ಗೆಯ್ ನೊವಿಕೋವ್ ಅವರು ತಮ್ಮ ಗೆಳತಿ ಉಕ್ರೇನ್‌ನ ಎಲೋನಾ ಬ್ರಮೋಕಾ ಅವರನ್ನು ಹಿಮಾಚಲ ಪ್ರದೇಶದ ಧರ್ಮಶಾಲಾ ಬಳಿಯ ದಿವ್ಯ ಆಶ್ರಮ ಖರೋಟಾದಲ್ಲಿ ಮಂಗಳವಾರ ಸನಾತನ ಧರ್ಮದ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಇದನ್ನೂ ಓದಿ: 750 ಶಾಲಾ ವಿದ್ಯಾರ್ಥಿನಿಯರಿಂದ ತಯಾರಾಯ್ತು ಆಜಾದಿ ಸ್ಯಾಟಲೈಟ್

    ಈ ಜೋಡಿ ಭಾರತ ಸಂಪ್ರದಾಯದ ಉಡುಗೆ ತೊಟ್ಟು ವಿವಾಹವಾದರು. ಮದುವೆ ಸಂಭ್ರಮಕ್ಕೆ ಸ್ಥಳೀಯ ಜನತೆ ಸಾಕ್ಷಿಯಾದರು. ಅಲ್ಲದೇ ಹಿಮಾಚಲ ಪ್ರದೇಶದ ಜಾನಪದ ಹಾಡುಗಳಿಗೆ ನೃತ್ಯ ಮಾಡಿ ಎಲ್ಲರೂ ಸಂಭ್ರಮಿಸಿದರು.

    ಸೆರ್ಗೆಯ್ ನೊವಿಕೋವ್ ಮತ್ತು ಎಲೋನಾ ಬ್ರಮೋಕಾ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು. ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧದ ನಡುವೆಯೂ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದರು. ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಪ್ಪಿ ಧರ್ಮಶಾಲಾದಲ್ಲಿ ಸಪ್ತಪದಿ ತುಳಿದಿದ್ದಾರೆ. ಇದನ್ನೂ ಓದಿ: ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಉಗ್ರರ ಕರಿ ನೆರಳು – ಕೆಂಪುಕೋಟೆಯ ಸುತ್ತ 1,000 ಅಧಿಕ ಸಿಸಿಟಿವಿ ಕ್ಯಾಮೆರಾ

    ಸೆರ್ಗೆಯ್ ಮತ್ತು ಎಲೋನಾ ಕಳೆದ ಒಂದು ವರ್ಷದಿಂದ ಧರ್ಮಶಾಲಾ ಬಳಿಯ ಧರ್ಮಕೋಟ್‌ನಲ್ಲಿ ತಂಗಿದ್ದರು. ನಮ್ಮ ಪಂಡಿತ್ ರಮಣ್ ಶರ್ಮರು ಇವರ ವಿವಾಹವನ್ನು ನೆರವೇರಿಸಿದರು. ಸನಾತನ ಧರ್ಮದ ಸಂಪ್ರದಾಯಗಳ ಪ್ರಕಾರ ವಿವಾಹ ನಡೆಸಿಕೊಟ್ಟರು ದಿವ್ಯ ಆಶ್ರಮ ಖರೋಟಾದ ಪಂಡಿತ್ ಸಂದೀಪ್ ಶರ್ಮಾ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್..!

    ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್..!

    ಧರ್ಮಶಾಲಾ: ಟೆಸ್ಟ್ ಸರಣಿಯ ಗೆಲುವಿನ ಗುಂಗಿನಲ್ಲಿರುವ ಟೀಮ್ ಇಂಡಿಯಾಗೆ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ತಿರುಗೇಟು ನೀಡಿರುವ ಸಿಂಹಳೀಯರು, ಗೆಲುವಿನ ಮುನ್ನುಡಿ ಬರೆಯಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ದೆಹಲಿಯ ವಾಯು ಮಾಲಿನ್ಯದ ಬಿಸಿಯ ಬಳಿಕ ಪ್ರಕೃತಿ ರಮಣೀಯ ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಪಾಲಿಗೆ ಎಲ್ಲವೂ ತಲೆಕೆಳಗಾದಂತೆ ಕಾಣುತ್ತಿದೆ. ನಾಯಕತ್ವದ ಮೊದಲ ಪಂದ್ಯದಲ್ಲೇ ಟಾಸ್ ಗೆದ್ದ ತಿಸಾರ ಬೌಲಿಂಗ್ ಆಯ್ಕೆ ಮಾಡಿಕೊಂಡರು.

    ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಲಂಕಾ ಬೌಲರ್‍ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಟೀಂ ಇಂಡಿಯಾ ಖಾತೆ ತರೆಯುವ ಮೊದಲೇ ವಿಕೆಟ್ ಕಳೆದುಕೊಂಡಿತು. ಇನ್ನು ಟೀಂ ಇಂಡಿಯಾ 16 ರನ್ ಗಳಿಸುವಷ್ಟರಲ್ಲಿ ಐದು ಪ್ರಮುಖ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿ ನೆಗೆಟಿವ್ ದಾಖಲೆಗೆ ಕಾರಣರಾದರು. ಈ ಹಿಂದೆ 1983ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 17 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಆಶ್ಚರ್ಯವೆಂಬಂತೆ ಆ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತ್ತು.

    ಟೀಂ ಇಂಡಿಯಾ ಅನುಭವಿ ಆರಂಭಿಕ ಆಟಗಾರ ಶೇಖರ್ ಧವನ್ ಇನ್ನಿಂಗ್ಸ್‍ನ ಎರಡನೇ ಓವರ್‍ನಲ್ಲಿ ಲಂಕಾ ಬೌಲರ್ ಮ್ಯಾಥ್ಯೂಸ್ ಎಸೆತದಲ್ಲಿ ಎಲ್‍ಬಿಡಬ್ಲ್ಯೂ ಆಗಿ ಪೆವಿಲಿಯನ್ ಪೆವಿಲಿಯನ್ ಸೇರಿದರು. ನಂತರ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ 13 ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿ ಲಕ್ಮಲ್ ಬೌಲಿಂಗ್ ನಲ್ಲಿ ಕೀಪರ್ ಡಿಕ್ವೆಲ್ಲಾ ಕ್ಯಾಚಿತ್ತು ನಿರ್ಗಮಿಸಿದರು. ಮೂರನೇ ಕ್ರಮಂಕದಲ್ಲಿ ಕ್ರೀಸ್‍ಗಿಳಿದ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಲಂಕಾ ಬೌಲರ್ ದಾಳಿಯನ್ನು ಎದುರಿಸಲಾಗದೆ 9 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು.

    ರಹಾನೆ ಜಾಗದಲ್ಲಿ ಆಡಲು ಅವಕಾಶ ಪಡೆದ ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿ, ಬಂದಷ್ಟೇ ವೇಗದಲ್ಲಿ ಮರಳಿದರು. ಇನ್ನು, ಮತ್ತೊಮ್ಮೆ ತನ್ನ ಆಯ್ಕೆಯನ್ನು ಪ್ರಶ್ನಿಸುವಂತೆ ಬ್ಯಾಟ್ ಬೀಸಿದ ಕನ್ನಡಿಗ ಮನೀಶ್ ಪಾಂಡೆ ತಂಡಕ್ಕೆ 2 ರನ್ ಕೊಡುಗೆ ನೀಡಿದರು. ಟೀಂ ಇಂಡಿಯಾ ಸಂಕಷ್ಟದ ಸಮಯದಲ್ಲಿ ಕ್ರೀಸ್ ಗಿಳಿದ ಹಾರ್ದಿಕ್ ಪಾಂಡ್ಯಾ ಬಿರುಸಿನಿಂದ ಬ್ಯಾಟ್ ನಡೆಸಿ 10 ಎಸೆತಗಳಲ್ಲಿ 2 ಬೌಂಡಿರಿಗಳ ನೆರವಿನಿಂದ 10 ರನ್ ಗಳಿಸಿ ಪ್ರದೀಪ್‍ಗೆ ವಿಕೆಟ್ ಒಪ್ಪಿಸಿದರು.

    ನಂತರ ಬ್ಯಾಟ್ ಮಾಡಲು ಬಂದ ಟೀಂ ಇಂಡಿಯಾ ಮಾಜಿ ನಾಯಕ ದೋನಿ ತಂಡಕ್ಕೆ ಆಸರೆಯಾಗಿ 87 ಎಸೆತಗಳಲ್ಲಿ 65 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಟೀಂ ಇಂಡಿಯಾ ಬೌಲರ್ ಗಳಾದ ಭುವನೇಶ್ವರ್ ಕುಮಾರ್, ಬೂಮ್ರ, ಚಹಾಲ್ ಶೂನ್ಯ ಸಂಪಾದಿಸಿದರೆ. ಕುಲ್ದೀಪ್ ಯಾದವ್ 25 ಎಸೆತಗಲ್ಲಿ 19 ರನ್ ಗಳಿಸಿ ಟೀಂ ಇಂಡಿಯಾ ಮೊತ್ತ ಮೂರಂಕಿ ಗಡಿದಾಟಲು ನೆರವಾದರು.

    ಶ್ರೀಲಂಕಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಲಕ್ಮಲ್ 10 ಓವರ್ 13 ರನ್ ಮಾತ್ರ ನೀಡಿ. ನಾಲ್ಕು ಮೆಡಿನ್ ಓವರ್‍ಗಳೊಂದಿಗೆ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಪಡೆದರು.

    ಇನ್ನೂಳಿದಂತೆ ಲಂಕಾದ ಫರ್ನಾಂಡೋ 2 ವಿಕೆಟ್ ಹಾಗೂ ಮ್ಯಾಥ್ಯೂಸ್, ಪೆರೇರಾ, ಧನುಂಜಯ್, ಪತಿರಾಣಾ ತಲಾ ಒಂದು ವಿಕೆಟ್ ಪಡೆದು ಟೀಂ ಇಂಡಿಯಾ ಅಲ್ಪ ಮೊತ್ತ ಪಡೆಯಲು ಕಾರಣರಾದರು.

    ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್ :
    0/1
    2/2
    8/3
    16/4
    16/5
    28/6
    29/7
    70/8
    87/9
    112/10