ಮಂಗಳೂರು: ಕರಾವಳಿಯಲ್ಲಿ ಮತ್ತೆ ವ್ಯಾಪಾರ ಧರ್ಮ ದಂಗಲ್ ಆರಂಭವಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ದೇವಸ್ಥಾನದಲ್ಲಿ ವ್ಯಾಪಾರ ಧರ್ಮ ದಂಗಲ್ ಮುಂದುವರಿದಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subramanya Temple) ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ ಹಾಕಿದ್ದಾರೆ. ಡಿ.18 ರಂದು ಕುಕ್ಕೆಯಲ್ಲಿ ಚಂಪಾ ಷಷ್ಠಿ ನಡೆಯಲಿದ್ದು, ಈ ಸಂದರ್ಭದಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಒತ್ತಾಯ ಮಾಡಿವೆ. ಅಲ್ಲದೆ ಈ ಸಂಬಂಧ ಹಿಂದೂ ಸಂಘಟನೆ ಮುಖಂಡರು ದೇವಳದ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಕೂಡ ಸಲ್ಲಿಸಿದ್ದಾರೆ.
ಇತ್ತ ಸುಬ್ರಹ್ಮಣ್ಯದ ಕುಮಾರಧಾರ ಬಳಿ ಬ್ಯಾನರ್ ಕೂಡ ಹಾಕಿದ್ದಾರೆ. ಹಿಂದೂ ಹಿತರಕ್ಷಣಾ ವೇದಿಕೆ ಸುಬ್ರಹ್ಮಣ್ಯ ಅನ್ನೋ ಹೆಸರಲ್ಲಿ ಬ್ಯಾನರ್ ಹಾಕಲಾಗಿದೆ. ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯಮತೀಯ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಅಂತ ಬ್ಯಾನರ್ ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸಿಪಿವೈ ಬಾವ ಮಹದೇವಯ್ಯ ಹತ್ಯೆ ಕೇಸ್ – ತಮಿಳುನಾಡು ಮೂಲದ ಓರ್ವ ಅರೆಸ್ಟ್
ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದಾಗಿದೆ.
ಮಂಗಳೂರು: ವ್ಯಾಪಾರಕ್ಕೆ ಯಾರನ್ನೂ ನಿರ್ಬಂಧನೆ ಮಾಡುವುದು ಸರಿಯಲ್ಲ. ಕಾನೂನು ಪ್ರಕಾರ ಮಾಡಲಿ, ಕಾನೂನು ಬಿಟ್ಟು ಏನನ್ನೂ ಮಾಡಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ತಿಳಿಸಿದ್ದಾರೆ.
ಮಂಗಳಾದೇವಿ ದೇವಸ್ಥಾನದಲ್ಲಿ (Mangaladevi Temple) ವ್ಯಾಪಾರ ಧರ್ಮದಂಗಲ್ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ವ್ಯಾಪಾರ ಬಹಿಷ್ಕಾರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಸಂವಿಧಾನದ ಪ್ರಕಾರ ದೇಶ ನಡೆಯಬೇಕು, ಯಾವುದೋ ಧರ್ಮದ ಪ್ರಕಾರ ಅಲ್ಲ. ಎಲ್ಲರಿಗೂ ಸಮಾನ ಹಕ್ಕುಗಳು ಈ ದೇಶದಲ್ಲಿ ಇರಬೇಕು ಎಂದರು. ಇದನ್ನೂ ಓದಿ: ಹಿಂದೂಗಳ ಅಂಗಡಿಗಳಲ್ಲೇ ವ್ಯಾಪಾರ ಮಾಡಿ- ವಿಹಿಂಪ, ಬಜರಂಗದಳ ಮನವಿ
ಅವರು (ವಿಹೆಚ್‍ಪಿ, ಬಜರಂಗದಳ) ಕರೆ ಕೊಡಲಿ, ಅವರ ಕರೆಯನ್ನು ಯಾರೂ ಒಪ್ಪಿಕೊಳ್ಳಬೇಕಿಲ್ಲ. ಆ ಕರೆಗಳಿಗೆ ಯಾವುದೇ ಕಾನೂನಿನ ಹಿನ್ನೆಲೆ ಇಲ್ಲ. ಅವರಿಗೆ ಈ ಥರ ವಿಚಾರ ಇಟ್ಟುಕೊಂಡು ಜನರಲ್ಲಿ ಗೊಂದಲ ಮೂಡಿಸಬೇಕು. ಅವರ ರಾಜಕಾರಣ ಇದರಲ್ಲೇ ಇರೋದು, ಧಾರ್ಮಿಕ ರಾಜಕಾರಣ ಬಿಜೆಪಿ ಮಾಡುತ್ತೆ. ನಾನು ಈ ಬಗ್ಗೆ ಅಧಿಕಾರಿಗಳನ್ನು ಕರೆದು ಮಾತನಾಡ್ತೇನೆ ಎಂದು ಸಚಿವರು ತಿಳಿಸಿದ್ದಾರೆ.
ಉಡುಪಿ: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್‌ನಿಂದ ಕೈಗಾರಿಕೆಗಳಿಗೆ, ಹೊಸ ಉದ್ದಿಮೆಗಳಿಗೆ ಹಾಗೂ ಐಟಿ ಸೆಕ್ಟರ್‌ಗಳಿಗೆ ಹೊಡೆತ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಣಿಪಾಲದಲ್ಲಿ ಮಾತನಾಡಿ, ಪ್ರಸಕ್ತ ವಿದ್ಯಮಾನಗಳಿಂದ ಯಾವುದೇ ತೊಂದರೆ ಆಗಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಧರ್ಮ ಸಂಘರ್ಷದಿಂದ ಉದ್ದಿಮೆಗಳಿಗೆ ಹಿನ್ನಡೆ ಆಗುವುದಿಲ್ಲ. ಕೈಗಾರಿಕೆಗೆ ಸಮಸ್ಯೆಯಾಗುತ್ತದೆ ಎಂಬುದು ಸುಳ್ಳು. ರಾಜ್ಯದ ಪ್ರಸಕ್ತ ಬೆಳವಣಿಗೆಗಳಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಖ್ಯಾತ ಯಕ್ಷಗಾನ ಭಾಗವತ ಬಲಿಪ ಪ್ರಸಾದ ನಿಧನ
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅತಿ ಹೆಚ್ಚು ಎಫ್‌ಡಿಐ ಹೂಡಿಕೆ ನಮ್ಮ ರಾಜ್ಯಕ್ಕೆ ಬರುತ್ತಿದೆ. ಈ ಕ್ವಾರ್ಟರ್‌ನಲ್ಲಿ ದೇಶದ ಶೇ.43 ರಷ್ಟು ಹೂಡಿಕೆ ನಮ್ಮ ರಾಜ್ಯಕ್ಕೆ ಬಂದಿದೆ. ಪ್ರಪಂಚದ ಮೂಲೆಮೂಲೆಗಳಿಂದ ಹೂಡಿಕೆದಾರರು ಬರುತ್ತಿದ್ದಾರೆ. ಕೈಗಾರಿಕೆಗಳು ನಮ್ಮ ರಾಜ್ಯ ತೊರೆಯುವ ಪ್ರಶ್ನೆಯೇ ಇಲ್ಲ. ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಯಥೇಚ್ಛವಾಗಿದೆ. ಮೂಲಸೌಕರ್ಯದ ಗುಣಮಟ್ಟ ಬಹಳ ಚೆನ್ನಾಗಿದೆ. ದೇಶದ ಟಾಪ್ ಸಂಶೋಧನಾ ಮತ್ತು ಅಭಿವೃದ್ಧಿ(ಆರ್‌ಆಂಡ್‌ಡಿ) ಕೇಂದ್ರಗಳು ನಮ್ಮಲ್ಲಿದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ನಾನು ಮಾತನಾಡಲ್ಲ, ನನ್ನ ಆಕ್ಷನ್ ಮಾತನಾಡುತ್ತದೆ: ವಿಪಕ್ಷಗಳಿಗೆ ಬೊಮ್ಮಾಯಿ ತಿರುಗೇಟು
ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳು ಉದ್ಯಮಿಗಳಿಗೆ ಆಫರ್ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಅಂಗಡಿಗಳಲ್ಲಿ ವ್ಯಾಪಾರ ಇಲ್ಲದಾಗ ಆಫರ್ ಕೊಡುವುದಿಲ್ಲವೇ? ಆ ರಾಜ್ಯಗಳಿಗೆ ಯಾವುದೇ ಬೇಡಿಕೆ ಇಲ್ಲ. ಆಫರ್ ಕೊಟ್ಟು ಕರೆಯುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಉದ್ದಿಮೆಗಳನ್ನು, ಕೈಗಾರಿಕೆಗಳನ್ನು ಆರಂಭ ಮಾಡಲು ಹಲವಾರು ಕಂಪನಿಗಳು ಉತ್ಸುಕರಾಗಿದೆ ಎಂದರು.
ಬೆಂಗಳೂರು: ರಾಜ್ಯದಲ್ಲಿ ಹಿಂದೂ ಮುಸ್ಲಿಂ ನಡುವಿನ ಧರ್ಮದ ವಾರ್ ಒಂದಿಲ್ಲೊಂದು ರೂಪ ಪಡೆದುಕೊಳ್ಳುತ್ತಿದೆ. ಹಿಜಬ್‍ನಿಂದ ಶುರುವಾದ ಈ ಧರ್ಮದ ದಂಗಲ್ ಈಗ ವ್ಯಾಪಾರ ವಹಿವಾಟಗಳ ಮೇಲೆ ಪ್ರಭಾವ ಬೀರುವುದಕ್ಕೆ ಶುರು ಮಾಡಿದೆ. ಹಿಂದೂ ಸಂಘಟನೆಗಳು ಒಂದೊಂದೇ ಅಭಿಯಾನಕ್ಕೆ ಕೈಹಾಕುತ್ತಿವೆ. ಈಗ ಖಾಸಗಿ ಬಸ್ ಪ್ರಯಾಣದ ಮೇಲೆ ಅಭಿಯಾನ ಶುರುವಾಗಿದೆ.
ನಿನ್ನೆಯಿಂದ ಹಿಂದೂ ಸಂಘಟನೆಗಳು ಹೊಸ ಆಂದೋಲನ ಶುರು ಮಾಡಿವೆ. ಹಿಂದೂಗಳು ತಾವೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಮಾಡುವಾಗ ಮುಸ್ಲಿಂ ಚಾಲಕರ ಮತ್ತು ಮುಸ್ಲಿಂ ಮಾಲೀಕರ ವಾಹನಗಳನ್ನ ಬಳಸಬೇಡಿ ಅಂತಾ ಅಭಿಯಾನ ಶುರು ಮಾಡಿದ್ದಾರೆ. ಅನ್ಯಧರ್ಮೀಯರು ನಮ್ಮ ಧರ್ಮವನ್ನ ನಂಬುವುದಿಲ್ಲ. ಅವರ ಜೊತೆಗೆ ಪ್ರಯಾಣ ಮಾಡುವ ಬದಲು ಹಿಂದೂ ಚಾಲಕರ ಮತ್ತು ಹಿಂದೂ ಮಾಲೀಕರ ವಾಹನಗಳನ್ನೇ ಬಳಸಿ ಅಂತಾ ಹೊಸ ವಾದವನ್ನು ಸೃಷ್ಟಿ ಮಾಡಿದ್ದಾರೆ. ಇದನ್ನೂ ಓದಿ:ಲವ್ ಜಿಹಾದ್‍ಗೆ ಮುಂದಾದವರ ಮನೆ ಹೊಕ್ಕು ಹೊಡೆಯಬೇಕು: EX MLC ನಾರಾಯಣಸಾ ಭಾಂಡಗೆ
ಇದಕ್ಕೆ ಚಾಲಕರ ವರ್ಗದಲ್ಲಿ ಭಾರೀ ವಿರೋಧ ಶುರುವಾಗಿದೆ. ನಮಗೆ ಪ್ರಯಾಣಿಕರೇ ದೇವರು, ಅವರ ಜಾತಿ, ಧರ್ಮ ಯಾವುದಾದರೇ ನಮಗೇನು. ನಮ್ಮ ಬಸ್ ಹತ್ತುವ ಪ್ರಯಾಣಿಕರನ್ನು ಅವರ ಸ್ಥಳಕ್ಕೆ ಬಿಡುವ ಕಾರ್ಯ ಮಾಡುವವರು ನಾವು. ನಮ್ಮಲ್ಲಿ ಎಲ್ಲ ಜಾತಿಯ ಎಲ್ಲ ಧರ್ಮದವರು ಇದ್ದಾರೆ. ನಾವೂ ಕೆಲಸ ಮಾಡುವ ಜಾಗದಲ್ಲಿ ಧರ್ಮವನ್ನು ತರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ: ನಲಪಾಡ್
ಇದು ಕೆಲಸಕ್ಕೆ ಬಾರದವರು ಮಾಡುತ್ತಿರುವ ಕುತಂತ್ರ. ರಾಜ್ಯದಲ್ಲಿ ಏನ್ ಆಗುತ್ತಿದೆ. ಎಲ್ಲ ಬೆಲೆಗಳು ಗಗನಕ್ಕೆ ಏರಿಕೆಯಾಗುತ್ತಿವೆ. ಜನ ಜೀವನ ಮಾಡುವುದೇ ಕಷ್ಟಕರವಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ. ಇತಂಹ ಸಮಯದಲ್ಲಿ ಬೇಡದ ವಿಚಾರವನ್ನು ತಂದು ಜನರ ದಿಕ್ಕು ತಪ್ಪಿಸೋ ಕೆಲಸ ಆಗುತ್ತಿದೆ. ನಾವೆಲ್ಲ ಒಂದೇ ಭಾವನೆಯಿಂದ ಕೆಲಸ ಮಾಡುವ ಜನ. ನಮಗೆ ಕಷ್ಟ ಬಂದಾಗ ಹಿಂದೂಗಳು ಬರ್ತಾರೆ. ನಾವೂ ಅವ್ರ ಕಷ್ಟಕ್ಕೆ ಹೋಗ್ತೀವಿ. ಇಲ್ಲಿ ಧರ್ಮದ ಹೆಸರಿನಲ್ಲಿ ನಮ್ಮ ನಡುವೆ ಬಿರುಕು ತರುವ ಕೆಲಸ ನಡೆಯುತ್ತಿದೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಶಾಂತಿಯನ್ನು ಕೆಡಿಸುವ ಕೆಲಸಕ್ಕೆ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಹಿಂದೂ, ಮುಸ್ಲಿಂ ಅನ್ನುವ ವಿಷ ಬೀಜ ಭಿತ್ತನೆ ಮಾಡಿ ಅದರ ಲಾಭ ಮಾಡಿಕೊಳ್ಳಲು ಒಂದಿಲ್ಲೊಂದು ತಂತ್ರಗಳನ್ನು ಕೆಲವರು ಮಾಡುತ್ತಿದ್ದಾರೆ. ಜನ ಮಾತ್ರ ಇದೆಲ್ಲ ಬೇಕಾ ಅಂತ ತಮ್ಮ ಪಾಡಿಗೆ ತಾವು ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಇನ್ನಾದರೂ ಈ ಅಭಿಯಾನಗಳು ಕೊನೆಯಾಗಿ ಜನ ನೆಮ್ಮದಿಯಿಂದ ಸಹಬಾಳ್ವೆ ಮಾಡುವಂತೆ ಆಗಲಿ.