Tag: Dharawada

  • ನಾಳೆ ಮುಂಬೈನಿಂದ ಧಾರವಾಡಕ್ಕೆ 1,600 ವಲಸೆ ಕಾರ್ಮಿಕರು- ಜಿಲ್ಲಾಡಳಿತಕ್ಕೆ ಹೊಸ ಸವಾಲು

    ನಾಳೆ ಮುಂಬೈನಿಂದ ಧಾರವಾಡಕ್ಕೆ 1,600 ವಲಸೆ ಕಾರ್ಮಿಕರು- ಜಿಲ್ಲಾಡಳಿತಕ್ಕೆ ಹೊಸ ಸವಾಲು

    ಧಾರವಾಡ: ಜಿಲ್ಲೆಗೆ ಅಹಮದಾಬಾದ್‍ನಿಂದ ಆಗಮಿಸಿರುವ 9 ಜನರಿಗೆ ಏಕಕಾಲಕ್ಕೆ ಕೊರೊನಾ ಪಾಸಿಟಿವ್ ವರದಿ ಬಂದ ಬೆನ್ನಲ್ಲಿಯೇ ಅನ್ಯ ರಾಜ್ಯದಿಂದ 1,600 ಕಾರ್ಮಿಕರು ಏಕಕಾಲಕ್ಕೆ ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೆ ಈಗ ಹೊಸ ಸವಾಲಾಗಿದೆ.

    ಈಗಾಗಲೇ ವಿವಿಧ ಬಸ್‍ಗಳ ಮೂಲಕ ಒಟ್ಟು 768 ಜನ ಬೇರೆ ಬೇರೆ ದಿನಗಳಲ್ಲಿ ಧಾರವಾಡಕ್ಕೆ ಆಗಮಿಸಿದ್ದಾರೆ. ಆದರೆ ಈಗ ಒಂದೇ ಸಮಯಕ್ಕೆ 1,600 ಜನ ಮುಂಬೈದಿಂದ ಆಗಮಿಸುತ್ತಿರುವ ಹಿನ್ನೆಲೆ ಇವರನ್ನೆಲ್ಲ ತಪಾಸಣೆ ಮಾಡುವುದೇ ಈಗ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

    ಮುಂಬೈನಿಂದ ಬರಲಿರುವ ಶ್ರಮಿಕ ಎಕ್ಸ್ ಪ್ರೆಸ್ ರೈಲಿನಲ್ಲಿ ಇವರೆಲ್ಲ ನಾಳೆ ಸಂಜೆಗೆ ಧಾರವಾಡ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ರೈಲಿನಲ್ಲಿ ಬರುವವರೆಲ್ಲಾ ಧಾರವಾಡ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯವರೂ ಸಹ ಇದ್ದಾರೆ. ಬೇರೆ ಜಿಲ್ಲೆಯವರನ್ನು ಇಲ್ಲಿಯೇ ತಪಾಸಣೆ ಮಾಡಬೇಕಾ ಅಥವಾ ನೇರವಾಗಿ ಆಯಾ ಜಿಲ್ಲೆಗೆ ಕಳುಹಿಸಿ ಕೊಡಬೇಕಾ? ಎನ್ನುವ ಬಗ್ಗೆ ಗೊಂದಲಗಳಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ಸಭೆಯ ಬಳಿಕ ಸ್ಪಷ್ಟತೆ ದೊರೆಯಲಿದೆ.

  • ಅಹಮದಾಬಾದ್‍ನಿಂದ ಆಗಮಿಸಿರುವ 09 ಮಂದಿ ಸೋಂಕಿತರ ಟ್ರಾವೆಲ್ ಹಿಸ್ಟರಿ

    ಅಹಮದಾಬಾದ್‍ನಿಂದ ಆಗಮಿಸಿರುವ 09 ಮಂದಿ ಸೋಂಕಿತರ ಟ್ರಾವೆಲ್ ಹಿಸ್ಟರಿ

    ಧಾರವಾಡ: ಗುಜರಾತಿನ ಅಹಮದಾಬಾದಿನಿಂದ ಜಿಲ್ಲೆಗೆ ಆಗಮಿಸಿ ಕೊರೊನಾ ಪಾಸಿಟಿವ್ ದೃಢಪಟ್ಟಿರುವ 09 ಮಂದಿಯ ಪ್ರಯಾಣ ಮಾಹಿತಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಸಾರ್ವಜನಿಕ ತಿಳುವಳಿಕೆಗಾಗಿ ಪ್ರಕಟಿಸಿದ್ದಾರೆ.

    ಪಿ- 879, ಪಿ-880, ಪಿ-881, ಪಿ-882, ಪಿ-883, ಪಿ-884, ಪಿ-885, ಪಿ-886, ಪಿ-887 ರವರು ಕೊರೊನಾ ಸೋಂಕಿತರಾಗಿದ್ದಾರೆ. ಹುಬ್ಬಳ್ಳಿ ನಗರದ 06, ಕುಂದಗೋಳದ ಇಬ್ಬರು ಮತ್ತು ಕಲಘಟಗಿಯ ಒಬ್ಬರು ಸೇರಿ ಧಾರವಾಡ ಜಿಲ್ಲೆಯ ಒಟ್ಟು 9 ಜನ ಹಾಗೂ ಗದಗ ಜಿಲ್ಲೆಯ ನರಗುಂದ ತಾಲೂಕಿನ 2 ಜನ ಸೇರಿಕೊಂಡು ಅಹಮದಾಬಾದ್‍ನ ಸರಕೆಜ್ ಹಾಲಿ ಮಹಮದ್ ಮಸೀದಿಯಿಂದ ಮೇ 5ರ ಬೆಳಿಗ್ಗೆ 7 ಗಂಟೆಗೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯವರು ವ್ಯವಸ್ಥೆ ಮಾಡಿದ ಜಿಜೆ 01 – ಬಿಯು 9986 ಸಂಖ್ಯೆಯ ವಾಹನದ ಮೂಲಕ ಹೊರಟು ಮುಂಬೈ ಮೂಲಕ ಮೇ.5 ರಂದು ಸಾಯಂಕಾಲ 07 ಗಂಟೆಗೆ ನಿಪ್ಪಾಣಿಗೆ ತಲುಪಿದ್ದರು.

    ಕರ್ನಾಟಕ ರಾಜ್ಯವನ್ನು ಪ್ರವೇಶ ಮಾಡಲು ಸರ್ಕಾರದಿಂದ ಅನುಮತಿ ಸಿಗುವವರೆಗೂ 3 ದಿವಸಗಳ ಕಾಲ ಚೆಕ್‍ಪೋಸ್ಟಿನಲ್ಲಿ ವಾಸ್ತವ್ಯ ಮಾಡಿದ್ದರು. ನಂತರ ಮೇ.8 ರಂದು ಸಾಯಂಕಾಲ 5 ಗಂಟೆಗೆ ಸ್ಥಳೀಯರು ವ್ಯವಸ್ಥೆ ಮಾಡಿದ ಕೆಎ 09 – ಸಿ 2579 ಸಂಖ್ಯೆಯ ಟಾಟಾ 407 ಮ್ಯಾಕ್ಸಿ ಕ್ಯಾಬ್ ವಾಹನದ ಮುಖಾಂತರ ನಿಪ್ಪಾಣಿಯಿಂದ ಧಾರವಾಡ ಕೃಷಿ ವಿ.ವಿ.ಆವರಣಕ್ಕೆ ರಾತ್ರಿ 8.30 ಗಂಟೆಗೆ ಆಗಮಿಸಿದ್ದರು.

    ಅಂದು ಅವರನ್ನು ಕ್ವಾರಂಟೈನ್ ಮಾಡಿ, ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿತ್ತು. ಮೇ.12 ರಂದು 9 ಜನರಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿರುವ ಕಾರಣ ಈ ಎಲ್ಲಾ ಜನರನ್ನು ಹುಬ್ಬಳ್ಳಿಯ ಕಿಮ್ಸ್ ಕೋವಿಡ್ ಹಾಸ್ಪಿಟಲ್‍ಗೆ ಸ್ಥಳಾಂತರಿಸಲಾಗಿದೆ.

  • ಬೆಂಗ್ಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆ

    ಬೆಂಗ್ಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆ

    ಬೆಂಗಳೂರು: ಮುಂಗಾರು ಕೊರತೆ ಎದುರಿಸುತ್ತಿದ್ದ ರಾಜ್ಯದ ಹಲವು ಭಾಗಗಳಲ್ಲಿ ಇಂದು ಸಂಜೆ ವೇಳೆಗೆ ಬೀರುಸಿನ ಮಳೆಯಾಗಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಾವೇರಿ, ಧಾರಾವಾಡ, ರಾಯಚೂರು ಜಿಲ್ಲೆಯಗಳ ಕೆಲ ಭಾಗಗಳಲ್ಲಿ ಮಳೆಯಾಗಿದೆ.

    ನಗರದ ಯಶವಂತಪುರ, ಮಲ್ಲೇಶ್ವರಂ, ಮೆಜೆಸ್ಟಿಕ್, ಹೆಬ್ಬಾಳ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ದಿಢೀರ್ ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡು ಬಂತು. ಆಕಾಲಿಕ ಮಳೆಯಿಂದ ವಾಹನ ಸವಾರರ ಪರದಾಟ ನಡೆಸಿದರು. ರಾಜ್ಯದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಇತ್ತ ಹಾವೇರಿ ಜಿಲ್ಲೆಯ ಜಿಲ್ಲೆಯ ನೆಗಳೂರು, ಹಂದಿಗನೂರು, ಹೊಸರಿತ್ತಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಪರಿಣಾಮ ರೈತರ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆನಸಿನಕಾಯಿ, ಹೆಸರು ಸೇರಿದಂತೆ ವಿವಿಧ ಬೆಳೆಗಳು ಜಲಾವೃತಗೊಂಡಿವೆ. ಪರಿಣಾಮ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ.

    ಧಾರವಾಡದಲ್ಲೂ ವರುಣ ಅಬ್ಬರಿಸಿದ್ದು, ಮಳೆ ನೀರಿನಿಂದಾಗಿ ನಗರದ ಬಿಆರ್ ಟಿಎಸ್ ಬಸ್ ಕಾರಿಡಾರ್ ಜಲಾವೃತಗೊಂಡಿತ್ತು. ಹೀಗಾಗಿ ಧಾರವಾಡ-ಹುಬ್ಬಳ್ಳಿ  ನಡುವೆ ಓಡಾಡುವ ಬಸ್ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಅದರಲ್ಲೂ ಟೋಲ್‍ ನಾಕಾ ಬಳಿಯ ರಸ್ತೆಯು ಹಳ್ಳದ ಸ್ವರೂಪ ಪಡೆದುಕೊಂಡಿತ್ತು. ಪರಿಣಾಮ ವಾಹನ ಸವಾರರು ಪರದಾಟ ನಡೆಸಿದರು.

    ಸದ್ಯ ಮುಂಗಾರು ಮಳೆ ಕೊರತೆ ಅನುಭವಿಸಿದ್ದ ರಾಜ್ಯದ ಜನರಿಗೆ ಭಾರೀ ಮಳೆಯ ಮುನ್ಸೂಚನೆ ಲಭಿಸಿರುವುದರಿಂದ ಕೊಂಚ ಮಂದಹಾಸ ಮೂಡಿದೆ. ಈಗಾಗಲೇ ಮಳೆ ಆಗಿರುವ ಭಾಗದಲ್ಲಿ ಬಿತ್ತನೆ ಮಾಡಿರುವ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಗಾಳಿಯ ಒತ್ತಡ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • ಬಿಎಸ್‍ವೈ ಸೈನಿಕರ ರಕ್ತದ ಮೇಲೆ ರಾಜಕೀಯ ಮಾಡ್ತಿದ್ದಾರೆ: ದಿನೇಶ್ ಗುಂಡೂರಾವ್ ಕಿಡಿ

    ಬಿಎಸ್‍ವೈ ಸೈನಿಕರ ರಕ್ತದ ಮೇಲೆ ರಾಜಕೀಯ ಮಾಡ್ತಿದ್ದಾರೆ: ದಿನೇಶ್ ಗುಂಡೂರಾವ್ ಕಿಡಿ

    ಹುಬ್ಬಳ್ಳಿ: ದೇಶಕ್ಕಾಗಿ ಸೈನಿಕರು ತ್ಯಾಗ, ಹೋರಾಟ ಮಾಡಿದ್ದಾರೆ. ಆದರೆ ಇದನ್ನ ರಾಜಕೀಯ ಲಾಭ ಆಗುತ್ತೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದು, ಸೈನಿಕರ ರಕ್ತದ ಮೇಲೆ ರಾಜಕೀಯ ವ್ಯಾಪಾರ ಮಾಡ್ತಾರಾ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಸೈನಿಕರ ವಿಚಾರದಲ್ಲಿ ಬಿಎಸ್‍ವೈ ಅವರ ಹೇಳಿಕೆಯಲ್ಲಿ ಅವರ ಸ್ವಾರ್ಥ ಎದ್ದು ಕಾಣುತ್ತಿದೆ. ಮೋದಿ ಅಲೆ ಇವತ್ತು ಮಾತ್ರ ಬಂದಿದೆಯಾ, ಮೊದಲು ಇರಲಿಲ್ಲವಾ? ದೇಶದಲ್ಲಿ ಧ್ವೇಷ ನಿರ್ಮಾಣ ಮಾಡುವ ಕಾರ್ಯ ನಡೆಸಲಾಗುತ್ತಿದ್ದು, ಇಡಿ ಹಾಗೂ ಐಟಿ ಇಲಾಖೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇವರು ಬಂದ ಮೇಲೆ ನ್ಯಾಯಾಧೀಶರು ಕೂಡ ಮಾಧ್ಯಮದ ಮುಂದೆ ಬರಬೇಕಾಯಿತು ಎಂದು ಕಿಡಿಕಾರಿದರು.

    ದೇಶದ ಯೋಧರು ನಡೆಸುತ್ತಿರುವ ವೇಳೆ ನಾವು ಅವರ ಸರ್ಕಾರ ಹಾಗೂ ಯೋಧರ ಬೆಂಬಲಕ್ಕೆ ನಿಲ್ಲುತ್ತೇವೆ. ಆದರೆ ಇಂತಹ ವಿಚಾರಗಳನ್ನು ಬಿಜೆಪಿ ರಾಜಕೀಯಕ್ಕೆ ಬಳಕೆ ಮಾಡುತ್ತಿದೆ. ಅಮಿತ್ ಶಾ ಅವರು ಸಹ ಎಲ್ಲಿ ಚುನಾವಣಾ ಪ್ರಚಾರ ನಡೆಸಿದರೂ ಕೂಡ ಸೈನಿಕರ ಹೋರಾಟವನ್ನು ಚುನಾವಣಾ ಅಸ್ತ್ರವಾಗಿ ಬಳಸುವ ಮಾತು ಹೇಳುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡುವುದನ್ನು ಬಿಜೆಪಿ ನಿಲ್ಲಿಸಬೇಕು. ಬಿಜೆಪಿ ಅಥವಾ ಆರ್ ಎಸ್‍ಎಸ್ ಗಡಿಯಲ್ಲಿ ಹೋರಾಟ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು. ಅಲ್ಲದೇ ತಮ್ಮ ಹೇಳಿಕೆಗೆ ಬಿಎಸ್‍ವೈ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ಯಾರಾದರು ಬೇರೆ ರೀತಿ ಮಾತನಾಡಿದರೆ ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ಆದರೆ ರಾಹುಲ್ ಗಾಂಧಿ, ಮೋದಿ, ನಾವು ಸೇರಿದಂತೆ ಎಲ್ಲರೂ ದೇಶ ಭಕ್ತರೆ. ದೇಶ ಭಕ್ತಿ ನಮ್ಮ ಗುತ್ತಿಗೆಯಲ್ಲಿ ಇದೆ ಎನ್ನುವಂತೆ ಮಾತನಾಡುವುದು ಸಾರ್ವಭೌಮತ್ವಕ್ಕೆ ಧಕ್ಕೆ ತಂದಂತೆ. ಆಡಳಿತ ಪಕ್ಷ ಎಲ್ಲರನ್ನೂ ಒಟ್ಟಿಗೆ ಕರೆಸಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.

    ಮಾಚ್ 9ಕ್ಕೆ ರಾಹುಲ್ ಭೇಟಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿದ್ದು, ಸಮಾವೇಶ ನಡೆಸಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಅವರು ಇದೇ ವೇಳೆ ಮಾಹಿತಿ ನೀಡಿದರು. ರಾಹುಲ್ ಗಾಂಧಿ ಆಗಮಿಸುತ್ತಿರುವ ಕಾರಣ ಕಾಂಗ್ರೆಸ್ ಸಮಾವೇಶಕ್ಕೆ ಸ್ಥಳ ವಿಕ್ಷಣೆ ಮಾಡುತ್ತಿದ್ದೇವೆ. ಹಾವೇರಿ, ಗದಗ ಹಾಗೂ ಧಾರವಾಡ ನಡುವೆ ಸ್ಥಳ ನಿಗದಿ ಮಾಡಲಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳಕು ವರದಿ ಫಲಶ್ರತಿ : ರಸ್ತೆ ಇಲ್ಲದೆ ಪರದಾಟ ನಡೆಸಿದ್ದ ಕಾಲೋನಿ ಜನರ ಕನಸು ನನಸು

    ಬೆಳಕು ವರದಿ ಫಲಶ್ರತಿ : ರಸ್ತೆ ಇಲ್ಲದೆ ಪರದಾಟ ನಡೆಸಿದ್ದ ಕಾಲೋನಿ ಜನರ ಕನಸು ನನಸು

    ಧಾರವಾಡ: ಹಲವು ವರ್ಷಗಳಿಂದ ರಸ್ತೆ, ಚರಂಡಿ ಹಾಗೂ ಚರಂಡಿಗೆ ಸೇತುವೆ ಇಲ್ಲದೇ ಶಹರದ ಹೊರವಲಯಲ್ಲಿರುವವ ಜನರ ಕನಸು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಿಂದ ನನಸಾಗಿದೆ.

    ಗೌಡರ ಕಾಲೋನಿಯಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಕುಟುಂಬದ ಸದಸ್ಯರು ರಸ್ತೆಗೆ ಸರಿಯಾಗಿ ಸಂಪರ್ಕ ಇಲ್ಲದೇ ಪರದಾಡುತ್ತಿದ್ದರು. ಮಳೆ ಬಂತೆಂದರೆ ಜನರು ಓಡಾಡಲು ಆಗದೇ ಮನೆ ರಸ್ತೆಗಳಲ್ಲಿ ನೀರು ತುಂಬಿ ಓಡಾಡಲು ಹರಸಾಹಸ ಪಡುತ್ತಿದ್ದರು.

    ಇಲ್ಲಿನ ಸ್ಥಿತಿಯ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಗ್ರಾಮಸ್ಥರು ದಿಕ್ಕುತೋಚದೇ ತಮ್ಮ ಗ್ರಾಮದ ಸಮಸ್ಯೆಯನ್ನು ಪರಿಹರಿಸಿಕೊಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ತಮ್ಮ ಆಳಲನ್ನು ತೊಡಿಕೊಂಡಿದ್ದರು. ಗ್ರಾಮದ ಸಮಸ್ಯೆ ಪ್ರಸಾರಗೊಂಡ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಅರವಿಂದ ಬೆಲ್ಲದ್ ಅವರನ್ನ ಸಂಪರ್ಕಿಸಿದಾಗ ಸಮಸ್ಯೆಯನ್ನು ಬಗೆ ಹರಿಸಿಕೊಡುವುದಾಗಿ ಭರವಸೆ ನೀಡಿದ್ದರು.

    ಅರವಿಂದ ಬೆಲ್ಲದ ನೀಡಿದ ಭರವಸೆಯಂತೆ ತಮ್ಮ ಅನುದಾನದಲ್ಲಿ 16 ಲಕ್ಷ ರೂ. ನೀಡಿ ರಸ್ತೆ ಮಾಡಿಸಿದ್ದಾರೆ. ಸ್ಥಳೀಯ ಪಾಲಿಕೆ ಸದಸ್ಯ ಬಲರಾಮ್ ಅವರು 25 ಲಕ್ಷ ರೂ. ಅನುದಾನದಲ್ಲಿ ಚರಂಡಿ ಮಾಡಿಸಿದ್ದಾರೆ. ಇನ್ನು ದೊಡ್ಡ ಚರಂಡಿ ನಿರ್ಮಾಣಕ್ಕೆ 40 ಲಕ್ಷ ರೂ. ಅನುದಾನ ಬೇಕಿದ್ದು, ಈ ಬಾರಿ ಬರುವ ಅನುದಾನದಲ್ಲಿ ಆ ಕೆಲಸ ಕೂಡ ಮಾಡುವ ಭರವಸೆ ನೀಡಿದ್ದಾರೆ.

    ಈ ಗ್ರಾಮದಲ್ಲಿ ಸುಸಜ್ಜಾತವಾಗಿ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದ್ದು. ಇಲ್ಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಪ್ರತಿಫಲವಾಗಿ ಇಲ್ಲಿನ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಧಾರವಾಡ ಜಿಲ್ಲೆ ಶಹರದ ಹೊರವಲಯಲ್ಲಿರೋ ಗೌಡರ ಕಾಲೋನಿಯ ಸಮಸ್ಯೆಗೆ ಪರಿಹಾರ ಸಿಕ್ಕಿರೋದು ನಮ್ಮ ಪ್ರಯತ್ನಕ್ಕೆ ಪ್ರತಿಫಲ ದೊರೆತಿದೆ.

    https://www.youtube.com/watch?v=er12muixrJ0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಲೋಕಸಭೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲಲು ಉಸ್ತುವಾರಿಗಳನ್ನು ನೇಮಿಸಿದ್ದೇವೆ: ಈಶ್ವರಪ್ಪ

    ಲೋಕಸಭೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲಲು ಉಸ್ತುವಾರಿಗಳನ್ನು ನೇಮಿಸಿದ್ದೇವೆ: ಈಶ್ವರಪ್ಪ

    ಧಾರವಾಡ: ಲೋಕಸಭೆಯ 28 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದ ಉಸ್ತುವಾರಿಗಳನ್ನು ನೇಮಿಸಿದ್ದು, ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.

    ನಗರದ ಮುರುಘಾಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಜಯ ಸಾಧಿಸಬೇಕೆಂಬ ಉದ್ದೇಶದಿಂದ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಆದರೆ ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಯಾರನ್ನು ಯಾವ ಕ್ಷೇತ್ರಕ್ಕೆ ಉಸ್ತುವಾಗಿ ಕೊಟ್ಟರೆ ಲಾಭ ಆಗುತ್ತದೆ ಅನ್ನುವ ಲೆಕ್ಕಾಚಾರ ನಡೆದಿದೆ. ರಾಜ್ಯದ 106 ತಾಲೂಕುಗಳಲ್ಲಿ ಭೀಕರ ಬರಗಾಲವಿದೆ. ರಾಜ್ಯ ಸರ್ಕಾರ ಈ ವಿಚಾರವಾಗಿ ಏನನ್ನೂ ಮಾತನಾಡುತ್ತಿಲ್ಲ. ನೀರಿನ ಸಮಸ್ಯೆ ಬಗ್ಗೆ ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸುತ್ತಿಲ್ಲವೆಂದು ಕಿಡಿಕಾರಿದರು.

     

    ಇದೇ ವಿಚಾರವಾಗಿ ಬಿಜೆಪಿ ಒಟ್ಟು 5 ತಂಡವಾಗಿ ರಾಜ್ಯ ಪ್ರವಾಸ ಮಾಡಿ ಬರ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತದೆ. ಅಲ್ಲದೇ ಇದೇ ಡಿಸೆಂಬರ್ 3,4 ಹಾಗೂ 5ರಂದು ಬರ ಪ್ರವಾಸ ಮಾಡುತ್ತೇವೆಂದು ತಿಳಿಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸಿದ್ಧತೆ – ಬಳ್ಳಾರಿಯಲ್ಲಿ ಸೋತ ಶ್ರೀರಾಮುಲುಗೆ ಬಿಗ್ ಶಾಕ್: ಯಾವ ಜಿಲ್ಲೆಗೆ ಯಾರು ಉಸ್ತುವಾರಿ?

    ಇದೆ ವೇಳೆ ಯಡಿಯೂರಪ್ಪ ಕೇರಳ ಪ್ರವಾಸ ವಿಚಾರಕ್ಕೆ ಮಾತನಾಡಿದ ಅವರು, ಅವರು ವೈಯಕ್ತಿಕ ಪ್ರವಾಸಕ್ಕೆ ತೆರಳಿದ್ದಾರೆ, ಯಡಿಯೂರಪ್ಪ ಹಾಗೂ ಡಿಕೆಶಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅಲ್ಲದೇ ವಿಜಯಪುರದಲ್ಲಿ ಸಚಿವ ಮನಗೂಳಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪುತ್ಥಳಿ ದಹಿಸಿದ್ದ ಖಂಡನಿಯ, ಅದು ಕೆಟ್ಟ ಸಂಸ್ಕೃತಿ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶಕ್ಕೆ ಮಾದರಿಯಾಯ್ತು ಧಾರವಾಡದ ಮುಗದ ರೈಲ್ವೇ ಸ್ಟೇಷನ್! -ವಿಡಿಯೋ ನೋಡಿ

    ದೇಶಕ್ಕೆ ಮಾದರಿಯಾಯ್ತು ಧಾರವಾಡದ ಮುಗದ ರೈಲ್ವೇ ಸ್ಟೇಷನ್! -ವಿಡಿಯೋ ನೋಡಿ

    ಧಾರವಾಡ: ದೇಶದ ಮೊದಲ ಮಾದರಿ ರೈಲ್ವೇ ನಿಲ್ದಾಣವೆಂಬ ಹೆಗ್ಗಳಿಕೆಗೆ ಧಾರವಾಡದ ಮುಗದ ರೈಲ್ವೇ ನಿಲ್ದಾಣ ಪ್ರಖ್ಯಾತಿಯನ್ನು ಪಡೆದುಕೊಂಡಿದೆ.

    ಹೌದು, ಈ ಬಗ್ಗೆ ಸ್ವತಃ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೊಯಲ್ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಹಾಕುವ ಮೂಲಕ ಈ ಮಾದರಿ ರೈಲ್ವೇ ನಿಲ್ದಾಣವನ್ನು ಎಲ್ಲಾ ನಿಲ್ದಾಣಗಳು ಪಾಲಿಸಬೇಕೆಂದು ಹೇಳಿದ್ದಾರೆ.

    ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಚಿವರು, ಕರ್ನಾಟಕದ ಧಾರವಾಡದಲ್ಲಿ ಬರುವ ಮುಗದ ರೈಲ್ವೇ ನಿಲ್ದಾಣವು ದೇಶದಲ್ಲೇ ಮಾದರಿ ನಿಲ್ದಾಣವಾಗಿ ಹೊರಹೊಮ್ಮಿದೆ. ಈ ನಿಲ್ದಾಣವನ್ನು ನೋಡಿ ಇತರೇ ನಿಲ್ದಾಣಗಳು ಇದೇ ರೀತಿ ಅನುಸರಿಸಬೇಕು. ಅಲ್ಲದೇ ಅಚ್ಚುಕಟ್ಟಾದ 10 ಕಿ.ಮೀ ಉದ್ದದ ರೈಲ್ವೇ ಟ್ರಾಕ್ ಗಳಿಗೆ ಕೆಂಪು ಮತ್ತು ಬಿಳಿ ಬಣ್ಣಗಳನ್ನು ಬಳಿಯಲಾಗಿದೆ. ರೈಲ್ವೇ ನಿಲ್ದಾಣದಲ್ಲಿ ಹೊಳೆಯುವ ಉದ್ಯಾನವನ್ನು ಕಾಣಬಹುದು. ಅಲ್ಲದೇ ನಿಲ್ದಾಣದ ಸುತ್ತಲೂ ಲಿಲ್ಲಿ, ರೋಸ್ ಹಾಗೂ ಕಾಕಡ ಹೂವುಗಳ ಗಿಡಗಳನ್ನು ನೋಡಬಹುದು ಎಂದು ಬರೆದು ವಿಡಿಯೋವನ್ನು ಶೇರ್ ಮಾಡಿದ್ದಾರೆ.

    ಧಾರವಾಡ ಮತ್ತು ಅಳ್ನಾವರ ಮಧ್ಯದಲ್ಲಿರುವ ಈ ನಿಲ್ದಾಣವು ಅತೀ ಸಣ್ಣ ರೈಲ್ವೇ ನಿಲ್ದಾಣವಾಗಿದ್ದರೂ, ತನ್ನ ವಿಭಿನ್ನ ವೈಶಿಷ್ಟ್ಯದಿಂದ ಭಾರತವನ್ನೆ ತನ್ನತ್ತ ನೋಡುವಂತೆ ಮಾಡಿದೆ. ನೋಡಲು ಚಿಕ್ಕದಾಗಿದ್ದರೂ, ಅಚ್ಚುಕಟ್ಟಾಗಿ ರೈಲ್ವೇ ನಿಲ್ದಾಣ ನಿರ್ಮಾಣವಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಸನದ ವ್ಯವಸ್ಥೆ, ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಎಲೆಕ್ಟ್ರಾನಿಕ್ ಗಡಿಯಾರ, ಎಲ್‍ಇಡಿ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ನಿಲ್ದಾಣದಲ್ಲಿ ವಿಶೇಷವಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

    10 ಕಿ.ಮೀ. ನಷ್ಟು ಉದ್ದದ ರೈಲ್ವೇ ಟ್ರ್ಯಾಕ್ ಗಳಿಗೆ ಕೆಂಪು ಹಾಗೂ ಬಿಳಿ ಬಣ್ಣಗಳನ್ನು ಬಳಿಯಲಾಗಿದೆ. ಇದರಿಂದಾಗಿ ರೈಲ್ವೇ ಟ್ರ್ಯಾಕ್ ಗಳು ಸುಂದರವಾಗಿ ಕಾಣುತ್ತಿವೆ. ನಿಲ್ದಾಣದ ಮುಂಭಾಗದಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಲಾಗಿದೆ. ನಿಲ್ದಾಣದ ಒಳಗೂ ಹೂವಿನ ಗಿಡಗಳನ್ನು ಬೆಳಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮೋದಿಯ ಸುಳ್ಳಿನ ಕಂತೆ ನಡೆಯಲ್ಲ ಅನ್ನೋದಕ್ಕೆ ಈ ಉಪಚುನಾವಣೆಯೇ ಸಾಕ್ಷಿ: ವಿನಯ್ ಕುಲಕರ್ಣಿ

    ಮೋದಿಯ ಸುಳ್ಳಿನ ಕಂತೆ ನಡೆಯಲ್ಲ ಅನ್ನೋದಕ್ಕೆ ಈ ಉಪಚುನಾವಣೆಯೇ ಸಾಕ್ಷಿ: ವಿನಯ್ ಕುಲಕರ್ಣಿ

    ಧಾರವಾಡ: ಜನರಿಗೆ ಸುಳ್ಳು ಹೇಳಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದು, 5 ವರ್ಷದಲ್ಲಿ ಹೇಳಿದ ಮಾತಿನಂತೆ ನಡೆದುಕೊಂಡಿಲ್ಲವೆಂದು ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ್ ಕುಲಕರ್ಣಿ ಕಿಡಿಕಾರಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲದರ ಖಂಡಿಸಿ ಭಾರತ್ ಬಂದ್ ವೇಳೆ ಕೆಲವರು ತಮ್ಮ ಫೇಸ್ ಬುಕ್ ನಲ್ಲಿ ನೂರು ರೂಪಾಯಿ ಆದರೂ ನಾವು ಮೋದಿಗೆ ಓಟ್ ಹಾಕುತ್ತೇವೆ ಎಂದು ಹಾಕಿಕೊಂಡಿದ್ದರು. ಇದನ್ನು ಯಾವುದೇ ಸಾರ್ವಜನಿಕರು ಹಾಕಿಲ್ಲ. ಬಿಜೆಪಿಯವರೇ ಈ ರೀತಿ ಪೋಸ್ಟ್ ಗಳನ್ನು ಫೇಸ್‍ಬುಕ್ ನಲ್ಲಿ ಹಾಕಿದ್ದಾರೆ. ಬಿಜೆಪಿಯವರು ಸಾಮಾನ್ಯ ಜನರಲ್ಲ. ಮೋದಿಯ ಸುಳ್ಳಿನ ಕಂತೆ ಬಹಳ ದಿನ ನಡೆಯುವುದಿಲ್ಲ ಎಂದರು.

    ಜನರಿಗೆ ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಳೆದ 5 ವರ್ಷಗಳಲ್ಲಿ ತಾನು ಹೇಳಿದ್ದ ಮಾತಿನಂತೆ ಎಂದಿಗೂ ನಡೆದುಕೊಂಡಿಲ್ಲ. ಕೆಲವು ದಿನಗಳ ಹಿಂದೆ ರೈತರಿಂದ ಹೆಸರುಕಾಳಿಗೆ ಪ್ರತಿ ಕ್ವಿಂಟಾಲ್‍ಗೆ 6,800 ರೂಪಾಯಿಯಂತೆ ಖರೀದಿ ಮಾಡುತ್ತೇವೆಂದು ಹೇಳಿ, ಕೇವಲ 3 ರಿಂದ 4 ಕ್ವಿಂಟಾಲ್ ಖರೀದಿ ಮಾಡಿದ್ದರು. ಆದರೆ ಖರೀದಿ ಪ್ರಕ್ರಿಯಿಯನ್ನು ಏಕಾಏಕಿ ನಾಲ್ಕೇ ದಿನಕ್ಕೆ ನಿಲ್ಲಿಸಿದ್ದಾರೆ. ಇವರ ಸರ್ಕಾರದ ಅವಧಿಯಲ್ಲಿ ರೈತರ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಈ ವೇಳೆ ಜನಾರ್ದನ ರೆಡ್ಡಿ ಕುರಿತು ಮಾತನಾಡಿದ ಅವರು, ಇಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ಅವರ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತಿದೆ. ಪ್ರಧಾನಿ ಮೋದಿಯವರು ಸಿಬಿಐ ಪ್ರಕರಣದಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಇಂತಹ ಹಲವು ಪ್ರಕರಣಗಳಲ್ಲಿ ರಫೇಲ್ ಕೂಡ ಒಂದು. ಈ ದೇಶದಲ್ಲಿ ಯಾರಿಗೂ ಸ್ವತಂತ್ರವೇ ಇಲ್ಲವೆಂಬುವಂತೆ ಆಗಿದೆ. ರೆಡ್ಡಿ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಗೊತ್ತಿಲ್ಲದೇ ಮಾತನಾಡಲ್ಲ. ಬಿಜೆಪಿ ವಿರೋಧ ಅಲೆಗೆ ಉಪಚುನಾವಣೆಯ ಫಲಿತಾಂಶಗಳೇ ಸಾಕ್ಷಿ. ನಮಗೆ ಉಪಚುನಾವಣೆಯಲ್ಲಿ ಅಭೂತಪೂರ್ವ ಜಯ ತಂದು ಕೊಟ್ಟ ಜನರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv