Tag: Dharawada

  • ವಿನಯ್ ಕುಲಕರ್ಣಿ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ನಡೆದಿದೆ: ಏಗನಗೌಡರ

    ವಿನಯ್ ಕುಲಕರ್ಣಿ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ನಡೆದಿದೆ: ಏಗನಗೌಡರ

    ಧಾರವಾಡ: 2022ರ ಕೇಸ್‌ನ್ನು ಈಗ ತೆಗೆದು ಆ ಮೂಲಕ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ಏಗನಗೌಡರ (Aravind Eganagoudara) ಹೇಳಿದರು.

    ಈ ಬಗ್ಗೆ ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಅವರು ಧಾರವಾಡ (Dharawada) ಗ್ರಾಮೀಣ ಕ್ಷೇತ್ರದಲ್ಲಿ ಚಕ್ಕಡಿ ರಸ್ತೆ ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ. ಅವರು ಕ್ಷೇತ್ರದಲ್ಲಿ ಇಲ್ಲದೇ ಹೋದರೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಹೀಗಾಗಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ನಡೆದಿದೆ ಎಂದರು. ಇದನ್ನೂ ಓದಿ: Valmiki Scam | ನಾಗೇಂದ್ರಗೆ ಬಿಗ್‌ ರಿಲೀಫ್‌ – ಜಾಮೀನು ಮಂಜೂರು

    ಮುನಿರತ್ನ ಹಾಗೂ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಬೇರೆ ಬೇರೆಯಾಗಿದೆ. ವಿನಯ್ ಕುಲಕರ್ಣಿ ಅವರ ಅತ್ಯಾಚಾರ ಕೇಸ್ ಬೇರೆಯಾಗಿದೆ. ಇಲ್ಲಿ ಮೊದಲು ವಿನಯ್ ಅವರೇ ತಮಗೆ ಸಾಕಷ್ಟು ತೊಂದರೆ ಕೊಡಲಾಗುತ್ತಿದೆ ಎಂದು ದೂರು ದಾಖಲಿಸಿದ್ದಾರೆ. ಈಗಾಗಲೇ ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಶಾಸಕ ಅರವಿಂದ ಬೆಲ್ಲದ ಮತ್ತು ಮಾಜಿ ಶಾಸಕ ಅಮೃತ ದೇಸಾಯಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ನಮ್ಮ ನಾಡಿನ ಕಾನೂನಿನ ಬಗ್ಗೆ ಅವರಿಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ದೆಹಲಿ ಸಿಎಂ ಅತಿಶಿ

    ಬಿಜೆಪಿಯವರು(BJP) ಸಣ್ಣ ಮಕ್ಕಳು ಜಗಳವಾಡಿದರೂ ಅದನ್ನು ಸಿಬಿಐಗೆ ಕೊಡಿ ಎನ್ನುವ ಹಂತಕ್ಕೆ ಬಂದು ನಿಂತಿದ್ದಾರೆ. ಈಗ ವಿನಯ್ ವಿರುದ್ಧ ಜೀವ ಬೆದರಿಕೆ, ಅತ್ಯಾಚಾರ ಆರೋಪದಡಿ ಪ್ರಕರಣ ರೈತ ಮಹಿಳೆ ನೀಡಿರುವ ದೂರು ದಾಖಲಾಗಿದ್ದು, ಅದರ ಬಗ್ಗೆ ಸಿಐಡಿ ತನಿಖೆ ನಡೆಸುತ್ತದೆ. ಪದೇ ಪದೇ ಈ ರೀತಿಯ ಆರೋಪಗಳನ್ನು ವಿನಯ್ ಕುಲಕರ್ಣಿ ಅವರ ಮೇಲೆ ಮಾಡುತ್ತಲೇ ಬರಲಾಗುತ್ತಿದೆ. ಇದೊಂದು ವ್ಯವಸ್ಥಿತ ಹುನ್ನಾರ. ವಿನಯ್ ಅವರ ಜೊತೆ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಇದ್ದಾರೆ. ಅವರು ಈ ಎಲ್ಲ ಪ್ರಕರಣಗಳಿಂದ ಆರೋಪ ಮುಕ್ತರಾಗಿ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ದರ್ಶನ್‌, ಪವಿತ್ರಾಗೆ ಜೈಲೇಗತಿ – ಜಾಮೀನು ಅರ್ಜಿ ವಜಾ

  • ಗದಗ, ಧಾರವಾಡದಲ್ಲಿ ಧಾರಾಕಾರ ಮಳೆ- ರಸ್ತೆ ಸಂಪರ್ಕ ಸಂಪೂರ್ಣ ಬಂದ್

    ಗದಗ, ಧಾರವಾಡದಲ್ಲಿ ಧಾರಾಕಾರ ಮಳೆ- ರಸ್ತೆ ಸಂಪರ್ಕ ಸಂಪೂರ್ಣ ಬಂದ್

    – ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ನಾಶ

    ಗದಗ/ಧಾರವಾಡ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಣ್ಣೆಹಳ್ಳ (Bennehalla) ಭೋರ್ಗರೆಯುತ್ತಿದೆ. ರೋಣ ತಾಲೂಕಿನ ಯಾವಗಲ್ ಬಳಿ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಪ್ರವಾಹದಿಂದ (Flood) ಬೆಳೆ ಕಳೆದುಕೊಂಡ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

    ನರಗುಂದನಿಂದ ಯಾವಗಲ್ ಮಾರ್ಗವಾಗಿ ರೋಣ, ಗಜೇಂದ್ರಗಡ, ಕುಷ್ಟಗಿ ಮಾರ್ಗವಾಗಿ ಸಿಂಧನೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ಬಂದ್ ಆಗಿದ್ದು, ಸೇತುವೆ ಮೇಲ್ಭಾಗದಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ. ಇದರಿಂದ ಕಳೆದ ಮೂರು-ನಾಲ್ಕು ದಿನಗಳಿಂದ ಪ್ರಯಾಣಿಕರು, ರೈತರು ಪರದಾಡುವಂತಾಗಿದೆ. ಜನರು ಹಳ್ಳ ದಾಟದಂತೆ ಭದ್ರತಾ ಸಿಬ್ಬಂದಿಗಳನ್ನು ಸಹ ನೇಮಿಸಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ ಆಗಿದೆ: ಸಚಿವ ಪರಮೇಶ್ವರ್‌

    1971-72ರಲ್ಲಿ ನಿರ್ಮಾಣವಾದ ಈ ಕಿರಿದಾದ ಸೇತುವೆ ಮೇಲ್ದರ್ಜೆಗೆ ಏರಿಸಬೇಕು. ಬೆಣ್ಣೆಹಳ್ಳ ಒತ್ತುವರಿ ತೆರವುಗೊಳಿಸಬೇಕು. ಪದೇಪದೆ ಪ್ರವಾಹ ಹಾಗೂ ಬೆಳೆ ಹಾನಿ ಆಗುವುದನ್ನು ತಪ್ಪಿಸಬೇಕು ಎಂಬುದು ಈ ಭಾಗದ ಜನರ ಕೂಗಾಗಿದೆ. ಬೆಣ್ಣೆಹಳ್ಳ ಪ್ರವಾಹದಿಂದ ಬೆಳೆ ಕಳೆದುಕೊಂಡ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ವೈದ್ಯೆಯ ಯಡವಟ್ಟಿಗೆ ಬಾಣಂತಿ ಬಲಿ!

  • ಗೂಂಡಾಗಿರಿ ಮಾಡಿದವರ ಕೇಸ್‌ನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ: ಜಗದೀಶ್ ಶೆಟ್ಟರ್

    ಗೂಂಡಾಗಿರಿ ಮಾಡಿದವರ ಕೇಸ್‌ನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ: ಜಗದೀಶ್ ಶೆಟ್ಟರ್

    ಧಾರವಾಡ: ಯಾವ ಪ್ರಕರಣ ವಾಪಸ್ ಪಡೆಯಬೇಕು, ಯಾವ ಪ್ರಕರಣ ವಾಪಸ್ ಪಡೆಯಬಾರದು ಎಂಬುದು ಸರ್ಕಾರಕ್ಕೆ ತಿಳಿಯಬೇಕಿತ್ತು. ಗೂಂಡಾಗಿರಿ ಮಾಡಿದವರ ಕೇಸನ್ನು ಈ ಸರ್ಕಾರ ವಾಪಸ್ ಪಡೆದಿದೆ ಎಂದು ಸಂಸದ ಜಗದೀಶ್ ಶೆಟ್ಟರ್ (Jagadish Shettar) ವಾಗ್ದಾಳಿ ನಡೆಸಿದರು.

    ಹುಬ್ಬಳ್ಳಿ (Hubballi) ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಕೇಸ್ ವಾಪಸ್ ಪಡೆಯುವುದು ಸಹಜ. ರೈತರ ಹೋರಾಟದ ಕೇಸ್‌ಗಳನ್ನು ವಾಪಸ್ ಪಡೆದರೆ ಸರಿ. ಆದರೆ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದವರ ಕೇಸುಗಳನ್ನು ವಾಪಸ್ ಪಡೆದಿದ್ದು ಸರಿಯಲ್ಲ. ಇದು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಬೆಂಬಲ ನೀಡಿದಂತಾಗುತ್ತದೆ ಎಂದರು. ಇದನ್ನೂ ಓದಿ: PUBLiC TV Impact | ಕತ್ತಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಬೆಳಕಿನ ಭಾಗ್ಯ

    ಈ ಬಗ್ಗೆ ‘ಕೈ’ ಸರ್ಕಾರ ಯೋಚಿಸಬೇಕಿತ್ತು. ಅವರಿಗೆ ಮತ್ತಷ್ಟು ಪ್ರೋತ್ಸಾಹ ಕೊಡಲು ಈ ರೀತಿ ಮಾಡಲಾಗುತ್ತಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ. ಈ ನಿರ್ಧಾರ ಕಾನೂನಿನಡಿ ಎಷ್ಟು ನಿಲ್ಲುತ್ತದೆಯೋ ಗೊತ್ತಿಲ್ಲ. ಕೇಸಿನ ಫೈಲ್ ನೋಡಿದರೆ ಆ ಕೇಸನ್ನು ವಾಪಸ್ ಪಡೆಯಲು ಬರುವುದಿಲ್ಲ. ಆದರೂ ಕ್ಯಾಬಿನೆಟ್‌ನಲ್ಲಿ ಕೇಸ್ ವಾಪಸ್ ಪಡೆಯಲು ಒಪ್ಪಿಗೆ ನೀಡಲಾಗಿದೆ. ಇದು ಕಾನೂನು ಬಾಹಿರ. ಕೋರ್ಟ್‌ನಲ್ಲಿ ಯಾರಾದರೂ ಇದನ್ನು ಪ್ರಶ್ನಿಸಿದರೆ ಸರ್ಕಾರದ ನಿರ್ಧಾರ ಕೋರ್ಟ್‌ನಲ್ಲಿ ನಿಲ್ಲೋದಿಲ್ಲ. ಇದು ಅಲ್ಪಸಂಖ್ಯಾತರ ತುಷ್ಟೀಕರಣ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದ ಎರಡನೇ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ 44ರ ಸಂಭ್ರಮ

    ಈ ಸರ್ಕಾರ ಇಡೀ ಸಮಾಜವನ್ನು ಒಂದಾಗಿ ನೋಡಬೇಕು. ವ್ಯವಸ್ಥೆ ಹದಗೆಡಿಸುವ ರೀತಿಗೆ ಪ್ರೋತ್ಸಾಹ ಕೊಡಬಾರದು. ಈ ಕೆಲಸವನ್ನು ಕಾಂಗ್ರೆಸ್ (Congress) ಮಾಡುತ್ತಿದೆ. ತನ್ನ ರಾಜಕೀಯ ಲಾಭಕ್ಕಾಗಿ ಸರ್ಕಾರ ಈ ರೀತಿ ಮಾಡುತ್ತಿದೆ. ಇದರಿಂದ ಒಳ್ಳೆಯದಾಗುವುದಿಲ್ಲ. ಈ ಪ್ರಕರಣದಲ್ಲಿ ಎಷ್ಟೋ ರೌಡಿಶೀಟರ್‌ಗಳು ಇದ್ದಾರೆ. ಅಮಾಯಕರ ಮೇಲೆ ಹಾಕಲಾಗಿರುವ ರೌಡಿಶೀಟರ್ ಬೇಕಾದರೆ ತೆಗೆಯಲಿ. ಆದರೆ ಗೂಂಡಾಗಿರಿ ಮಾಡಿದವರ ಕೇಸ್ ವಾಪಸ್ ಪಡೆದಿದ್ದು ಸರಿಯಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: Mysuru Dasara: ಅದ್ದೂರಿ ಜಂಬೂಸವಾರಿಗೆ ಕ್ಷಣಗಣನೆ – ನಾಳೆ ಏನೆಲ್ಲಾ ವಿಶೇಷತೆ ಇರುತ್ತೆ?

  • ಧಾರವಾಡ| 24 ಗಂಟೆಯಾದ್ರೂ ಬೈಪಾಸ್ ರಸ್ತೆಯಲ್ಲಿ ಕಡಿಮೆಯಾಗದ ನೀರಿನ ಹರಿವು- ಪ್ರಯಾಣಿಕರ ಪರದಾಟ

    ಧಾರವಾಡ| 24 ಗಂಟೆಯಾದ್ರೂ ಬೈಪಾಸ್ ರಸ್ತೆಯಲ್ಲಿ ಕಡಿಮೆಯಾಗದ ನೀರಿನ ಹರಿವು- ಪ್ರಯಾಣಿಕರ ಪರದಾಟ

    ಧಾರವಾಡ: ಧಾರವಾಡದಲ್ಲಿ (Dharawada) ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗಿದ್ದು, ಹುಬ್ಬಳ್ಳಿ (Hubballi) ಧಾರವಾಡ ಬೈಪಾಸ್ ರಸ್ತೆಯಲ್ಲಿ 24 ಗಂಟೆಯಾದರೂ ನೀರಿನ ಪ್ರಮಾಣ ಕಡಿಮೆಯಾಗಲಿಲ್ಲ.

    ರಸ್ತೆ ಮೇಲೆ ನೀರು ಹರಿದು ಬಂದ ಹಿನ್ನೆಲೆ ವಾಹನ ಸವಾರರು ಪರದಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ಹುಬ್ಬಳ್ಳಿ-ಧಾರವಾಡ ಯರಿಕೊಪ್ಪ ಗ್ರಾಮದ ಬಳಿಯ ಮನಸೂರ ಹಳ್ಳಕ್ಕೆ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ನೀರು ಬಂದಿದೆ. ಇದನ್ನೂ ಓದಿ: ದಲಿತ ನಾಯಕನನ್ನ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಮಾಡಲಿ- ಕಾಂಗ್ರೆಸ್‌ಗೆ ಜೆಡಿಎಸ್ ಸವಾಲ್

    ರಸ್ತೆ ಮೇಲೆಯೇ ನೀರು ಹರಿಯುತ್ತಿರುವ ಹಿನ್ನೆಲೆ, ರಾತ್ರಿ ಎಲ್ಲಾ ಬೈಪಾಸ್ ರಸ್ತೆ ಸ್ಥಗಿತಗೊಂಡಿತ್ತು. ಬೆಳಿಗ್ಗೆ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಲಾರಿಗಳು ಮಾತ್ರ ದಾಟಲು ಅವಕಾಶ ನೀಡಲಾಗಿದೆ. ಮತ್ತೆ ಮಳೆಯಾದರೆ ರಸ್ತೆ ಕಡಿತ ಆಗುವ ಸಾಧ್ಯತೆ ಇದೆ. ನಗರದ ಬಹುತೇಕ ನೀರು ಬೈಪಾಸ್ ರಸ್ತೆಯಿಂದ ಮನಸೂರ ಹಳ್ಳಕ್ಕೆ ಬರುತ್ತಿರುವುದರಿಂದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಇದನ್ನೂ ಓದಿ: ಟಾಟಾ ಅವರ ಅಂತ್ಯಕ್ರಿಯೆ ವೇಳೆ ಅಂತಿಮ ನಮನ ಸಲ್ಲಿಸಿದ ʻಗೋವಾʼ!

  • ಯಾರ ಸರ್ಕಾರ ಇದ್ರೇನು, ದೇಶ ಸುಭದ್ರವಾಗಿರಬೇಕು: ಜಿ.ಪರಮೇಶ್ವರ್

    ಯಾರ ಸರ್ಕಾರ ಇದ್ರೇನು, ದೇಶ ಸುಭದ್ರವಾಗಿರಬೇಕು: ಜಿ.ಪರಮೇಶ್ವರ್

    ಧಾರವಾಡ: ಯಾರ ಸರ್ಕಾರ ಇದ್ರೇನು, ದೇಶ ಸುಭದ್ರವಾಗಿರಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.

    ರಾಹುಲ್ ಗಾಂಧಿಯಂತೆ (Rahul Gandhi) ಮಾತನಾಡಬೇಡಿ ಎಂದು ಪರಮೇಶ್ವರ್‌ರವರಿಗೆ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಅವರು, ಅದು ಚೀಪ್ ಟಾಕ್ ಆಗಿದೆ. ನಾನೇನು ಅವರ ಮೇಲೆ ದೂಷಣೆ ಮಾಡಿಲ್ಲ ಎಂದರು. ನಾವು ಮಾಡಿದ್ದು,ಅವರು ಮಾಡಿದ್ರು ಅಂತಾ ಹೇಳಿಕೊಂಡು ತಿರುಗೋಣ. ಯಾರ ಸರ್ಕಾರ ಇದ್ರೇನು, ದೇಶದ ಭದ್ರತೆ ಮುಖ್ಯ. ಯಾವ ಸರ್ಕಾರ ಇದ್ದರೂ ದೇಶ ಭದ್ರವಾಗಿರಬೇಕು ಎಂದರು.  ಇದನ್ನೂ ಓದಿ: ರಾಜ್ಯದಲ್ಲಿ ಏನೇನಾಗುತ್ತಿದೆ ಎಂಬ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಳ್ಳುತ್ತೆ: ಡಿಕೆಶಿ

    545 ಪಿಎಸ್‌ಐ ನೇಮಕಾತಿ ವಿಚಾರವಾಗಿ ಮಾತನಾಡಿ, ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಶರಣಪ್ರಕಾಶ್ ಅವರ ಬೇಡಿಕೆಯೂ ಒಂದಿದೆ. 371ಜೆ ಗೆ ಶೇ. 8ರಷ್ಟು ಮೀಸಲಾತಿ ಕೇಳಿದ್ದಾರೆ. 2023ರಲ್ಲಿ ಈ ಸಂಬಂಧ ಆದೇಶವಾಗಿದ್ದು, ಈ ಆದೇಶ ಪಾಲಿಸಿ ಎಂದು ಒತ್ತಾಯಿಸುತ್ತಿದ್ದಾರೆ. 545 ಪಿಎಸ್‌ಐ ನೇಮಕ ಪ್ರಾರಂಭವಾಗಿದ್ದು 2020ರಲ್ಲಿ. ನೋಟಿಫಿಕೇಷನ್‌ನಲ್ಲೂ ಅದೇ ಆಗಬೇಕು ಅನ್ನೋದು ಇನ್ನೊಂದು ವಾದ. ಇದನ್ನೇ ಈಗ ಕೋರ್ಟ್ ತೀರ್ಮಾನಿಸಬೇಕಿದೆ. ಕೋರ್ಟ್ ತೀರ್ಪು ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಉಪ್ಪು ತಿಂದವರು ನೀರು ಕುಡಿಯಲೇಬೇಕು: ಸಿಎಂಗೆ ಸಿ.ಟಿ.ರವಿ ಟಾಂಗ್‌

    ಸಿದ್ದರಾಮಯ್ಯ (CM Siddaramaiah) ಪರ ಜಿ.ಟಿ. ದೇವೇಗೌಡರು ಹೇಳಿಕೆ ನೀಡಿದ ಬಗ್ಗೆ ಮಾತನಾಡಿ, ಜಿ.ಟಿ. ದೇವೇಗೌಡರು ವಾಸ್ತವಾಂಶ ಮಾತನಾಡಿದ್ದಾರೆ, ಅವರು ಕಾಂಗ್ರೆಸ್‌ಗೆ ಬಂದ್ರೆ ಶಕ್ತಿ ಬರುತ್ತೆ ಅನೋದಿದ್ರೆ ತಗೋತೀವಿ. ಯಾರೇ ಬಂದ್ರು ಕಾಂಗ್ರೆಸ್‌ಗೆ ತಗೋತೆವಿ ಎಂದರು. ಸಿಎಂ ಸ್ಥಾನಕ್ಕೆ ಪರಮೇಶ್ವರ್ ಹೆಸರು ಕೇಳಿ ಬಂದಿರುವ ವಿಚಾರವಾಗಿ ಮಾತನಾಡಿ, ಅದು ನನಗೆ ಕೇಳಿಸಿಲ್ಲ. ಅದು ಮಾಧ್ಯಮಗಳಿಗೆ ಹೇಗೆ ಕೇಳಿಸುತ್ತೆ? ನನಗೆ ಕೇಳಿಸಿದಾಗ ನೋಡೋಣ ಬಿಡಿ ಎಂದರು. ಇದನ್ನೂ ಓದಿ: ಉತ್ತರ ಲೆಬನಾನ್‌ ಮೇಲೆ ಇಸ್ರೇಲ್‌ ವಾಯುದಾಳಿ – ಹಮಾಸ್‌ ಟಾಪ್‌ ಕಮಾಂಡರ್‌ ಹತ್ಯೆ

  • KIADB ಅಧಿಕಾರಿಗಳ ಮನೆಯಲ್ಲಿ 2 ಕೋಟಿ ಜಪ್ತಿ – ಇಡಿ ದಾಳಿ ನಡೆಸಿದ್ದು ಯಾಕೆ?

    KIADB ಅಧಿಕಾರಿಗಳ ಮನೆಯಲ್ಲಿ 2 ಕೋಟಿ ಜಪ್ತಿ – ಇಡಿ ದಾಳಿ ನಡೆಸಿದ್ದು ಯಾಕೆ?

    ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ (KIADB) ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು 2 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.

    ಶುಕ್ರವಾರ ಬೆಂಗಳೂರು (Bengaluru) ಮತ್ತು ಧಾರವಾಡದ (Dharwada) ಕೆಐಎಡಿಬಿ ಕಚೇರಿ ಮತ್ತು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿತ್ತು. ದಾಳಿ ಮುಂದುವರಿದಿದ್ದು ಅಧಿಕಾರಿಗಳ ಮನೆಯಲ್ಲಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ.

    ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಶೋಧ ಕಾರ್ಯ ನಡೆಯುತ್ತಿದೆ. ಕಚೇರಿಯ ದಾಖಲೆಗಳನ್ನು ತೆಗೆದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್‌ ನ್ಯೂಸ್‌ ಕೊಟ್ಟ ಹಿಂಡನ್‌ಬರ್ಗ್‌

     

    ದಾಳಿ ಮಾಡಿದ್ದು ಯಾಕೆ?
    ಭೂ ಸ್ವಾಧೀನ ಹೆಸರಿನಲ್ಲಿ ಕೋಟ್ಯಂತರ ರೂ. ಹಣವನ್ನು ಕೆಐಎಡಿಬಿ ಅಧಿಕಾರಿಗಳು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಒಂದು ಪ್ರದೇಶಗಳಿಗೆ 2 ಬಾರಿ ಪರಿಹಾರ ಒದಗಿಸುವಂತೆ ದಾಖಲೆ ತೋರಿಸಿ ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆ ತೆರೆಯಲಾಗಿದೆ. ಈ ಅಕ್ರಮ ಎಸಗಲು ಐಡಿಬಿಐ ಬ್ಯಾಂಕ್‌ನಲ್ಲಿ 24 ಖಾತೆ ತೆರೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು. ಈಗ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್‌

     

  • ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್‌ ತಾಯಿ ಕಣ್ಣೀರು

    ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್‌ ತಾಯಿ ಕಣ್ಣೀರು

    – ನೇಹಾ ಬೇರೆಯಲ್ಲ, ನನ್ನ ಮಗಳು ಬೇರೆಯಲ್ಲ
    – ನನ್ನ ಮಗನ ತಪ್ಪಿಗೆ ಕರ್ನಾಟಕದ ಜನತೆ, ನೇಹಾ ತಂದೆ-ತಾಯಿ ಬಳಿ ಕ್ಷಮೆಯಾಚಿಸುತ್ತೇನೆ

    ಧಾರವಾಡ: ನನ್ನ ಮಗ ಮಾಡಿರುವ ತಪ್ಪಿಗೆ ಕರ್ನಾಟಕದ ಸಮಸ್ತ ಜನತೆಗೆ ಕೈಮುಗಿದು ಕ್ಷಮೆ ಯಾಚಿಸುತ್ತೇನೆ ಎಂದು ನೇಹಾ ಹತ್ಯೆಗೈದ ಫಯಾಜ್‌ ತಾಯಿ (Fayaz Mother) ಮುಮ್ತಾಜ್‌ ಕಣ್ಣೀರಿಟ್ಟಿದ್ದಾರೆ.

    ಮಗನ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ನೇಹಾಳ ತಂದೆ-ತಾಯಿಯವರಲ್ಲೂ ನಾನು ಕ್ಷಮೆ ಕೇಳುತ್ತೇನೆ. ನೇಹಾ (Neha Hiremath) ಕೂಡ ನನ್ನ ಮಗಳು ಇದ್ದಂತೆ. ನೇಹಾ ಬೇರೆಯಲ್ಲ, ನನ್ನ ಮಗಳು ಬೇರೆಯಲ್ಲ. ನೇಹಾ ತಂದೆ-ತಾಯಿಗೆ ಆಗಿರುವಷ್ಟೇ ದುಃಖ ಆಗಿದೆ ಎಂದು ಅಳಲು ತೋಡಿಕೊಂಡರು. ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಎಬಿವಿಪಿಯಿಂದ ಗೃಹಸಚಿವರ ಮನೆ ಮುತ್ತಿಗೆಗೆ ಯತ್ನ

    ನನ್ನ ಮಗ ಮಾಡಿರುವುದು ತಪ್ಪು. ಯಾವ ಮಕ್ಕಳು ಮಾಡಿದರು ತಪ್ಪು ತಪ್ಪೇ. ಈ ನೆಲದ ಕಾನೂನು ಏನು ಹೇಳುತ್ತೋ ಅದರ ಪ್ರಕಾರವೇ ಶಿಕ್ಷೆ ಆಗಲಿ ಎಂದು ಹೇಳಿದರು.

    ನನ್ನ ಮಗನನ್ನ ಐಎಎಸ್‌ ಅಧಿಕಾರಿ ಮಾಡುವ ಆಸೆ ಇತ್ತು. ತುಂಬಾ ಬುದ್ಧಿವಂತ ಇದ್ದ. ಎಲ್‌ಕೆಜಿ, ಯುಕೆಜಿ ಯಿಂದ 90% ಜಾಸ್ತಿ ಮಾರ್ಕ್ಸ್‌ ತೆಗೆಯುತ್ತಿದ್ದ ಎಂದು ಮಗನ ಬಗ್ಗೆ ಹೇಳಿಕೊಂಡರು. ಇದನ್ನೂ ಓದಿ: ಕೈ ಮುಗಿದು ಕೇಳಿಕೊಳ್ತೀನಿ, ಸಿಎಂ ಹೇಳಿಕೆ ನೀಡುವುದನ್ನು ನಿಲ್ಲಿಸಿ: ನೇಹಾ ತಂದೆ ನಿರಂಜನ್‌ ಕಿಡಿ

    ಅವನು ತಪ್ಪು ಮಾಡಿದ್ದಾನೆ. ಶಿಕ್ಷೆ ಆಗಲೇಬೇಕು. ನಾನು ಕೂಡ ನೂರಾರು ಮಕ್ಕಳಿಗೆ ಶಿಕ್ಷೆ ಕೊಟ್ಟಿದ್ದೇನೆ. ಈಗ ನನ್ನ ಮಗ ತಪ್ಪು ಮಾಡಿದ್ದಾನೆ ಅಂದ್ಮೇಲೆ ಶಿಕ್ಷೆ ಆಗಬೇಕು. ಶಿಕ್ಷೆಯನ್ನು ಅವನು ಅನುಭವಿಸಲಿ. ಮಗನ ತಪ್ಪಿಗೆ ನಾವು ತಲೆ ತಗ್ಗಿಸುವಂತಾಗಿದೆ ಎಂದು ಕಣ್ಣೀರಿಟ್ಟರು.

  • ಧಾರವಾಡದಲ್ಲಿ 18 ಕೋಟಿ ಪತ್ತೆ – ಎಸ್‌ಬಿಐಗೆ ಹಣ ರವಾನೆ

    ಧಾರವಾಡದಲ್ಲಿ 18 ಕೋಟಿ ಪತ್ತೆ – ಎಸ್‌ಬಿಐಗೆ ಹಣ ರವಾನೆ

    ಧಾರವಾಡ: ದಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ನಾ ಅಪಾರ್ಟ್‌ಮೆಂಟ್‌ನಲ್ಲಿರುವ ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಬಸವರಾಜ ದತ್ತುನವರ ಅವರ ಮನೆಯಲ್ಲಿ ಜಪ್ತಿ ಮಾಡಲಾದ 18 ಕೋಟಿ ರೂ. ಹಣವನ್ನು ಐಟಿ (Income Tax) ಅಧಿಕಾರಿಗಳು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ (SBI) ರವಾನಿಸಿದ್ದಾರೆ.

    ಮಂಗಳವಾರ ರಾತ್ರಿ ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಬಸವರಾಜ ದತ್ತುನವರ ಅವರ ಮನೆಯಲ್ಲಿ ಮದ್ಯ (Liquor) ಶೇಖರಿಸಿ ಇಡಲಾಗಿದೆ ಎಂಬ ಶಂಕೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಅವರ ಮನೆಯಲ್ಲಿ 18 ಕೋಟಿ ರೂ. ಬೃಹತ್ ಮೊತ್ತದ ಹಣ ಪತ್ತೆಯಾಗಿತ್ತು.ಕೂಡಲೇ ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಜನತಂತ್ರದ ಹಬ್ಬ – ಚುನಾವಣಾ ಖರ್ಚು ವೆಚ್ಚ ಹೇಗೆ ನಡೆಯುತ್ತೆ? – ಈ ಬಾರಿ ಅಂದಾಜಿಸಿರುವ ವೆಚ್ಚ ಎಷ್ಟು?

     

    20 ಜನ ಅಧಿಕಾರಿಗಳು ದತ್ತುನವರ ಮನೆಯಲ್ಲಿ ನಿನ್ನೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಮಶಿನ್ ಮುಖಾಂತರ ಹಣ ಎಣಿಕೆ ಮಾಡಿದ್ದಾರೆ. ಇಂದು ಮಧ್ಯಾಹ್ನದವರೆಗೂ ಅಧಿಕಾರಿಗಳು ತಪಾಸಣೆ ನಡೆಸಿ 18 ಕೋಟಿ ರೂ. ಹಣವನ್ನು 18 ಬ್ಯಾಗ್‌ಗಳಲ್ಲಿ ತುಂಬಿ ಪೊಲೀಸ್ ಭದ್ರತೆ ಮಧ್ಯೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಸಾಗಿಸಿದ್ದಾರೆ.  ಇದನ್ನೂ ಓದಿ: ದಕ್ಷಿಣ ಭಾರತದ ಏವಿಯೇಷನ್‌ ಹಬ್‌ ಆಗುತ್ತಾ ಬೆಂಗ್ಳೂರು ಏರ್‌ಪೋರ್ಟ್‌?- ಏನಿದು ಏವಿಯೇಷನ್‌ ಹಬ್‌?

    ಬಸವರಾಜ ದತ್ತುನವರ ತಾನು ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಎಂದು ಹೇಳಿಕೊಂಡಿದ್ದರಿಂದ ಐಟಿ ಅಧಿಕಾರಿಗಳು ಶೆಟ್ಟಿ ಅವರ ಕಚೇರಿ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಬುಧವಾರ ಮಧ್ಯಾಹ್ನ 2 ಗಂಟೆವರೆಗೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿ ಎರಡು ಪೊಲೀಸ್ ಎಸ್ಕಾರ್ಟ್ ವಾಹನದ ಸಮೇತ ಭದ್ರತೆಯೊಂದಿಗೆ 18 ಕೋಟಿ ಹಣವನ್ನು 18 ಬ್ಯಾಗ್‌ಗಳಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ರವಾನಿಸಿದ್ದಾರೆ.

  • ಸಿದ್ಧವಾಗಿದೆ 3 ಲಕ್ಷ ರಾಮ ಧ್ವಜ – ದಕ್ಷಿಣದ 4 ರಾಜ್ಯಗಳಿಂದ ಆರ್ಡರ್‌

    ಸಿದ್ಧವಾಗಿದೆ 3 ಲಕ್ಷ ರಾಮ ಧ್ವಜ – ದಕ್ಷಿಣದ 4 ರಾಜ್ಯಗಳಿಂದ ಆರ್ಡರ್‌

    ಧಾರವಾಡ: ಜನವರಿ 22ಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ನಡೆದರೆ ಮನೆ ಮನೆಗಳಲ್ಲಿ ರಾಮನ ಧ್ವಜ (Ram Flag) ಹಾರಲಿದೆ. ಈ ಕಾರಣಕ್ಕೆ ವಿದ್ಯಾನಗರಿ ಧಾರವಾಡದಲ್ಲಿ (Dharawada) ರಾಮನ ಧ್ವಜದ ತಯಾರಿ‌ ಜೋರಾಗಿ ನಡೆಯುತ್ತಿದೆ.

    ನಗರದ ಮರಾಠ ಗಲ್ಲಿಯಲ್ಲಿರುವ ಪ್ರತೀಶ್ ಜಾಧವ್‌ ಅವರಿಗೆ ಈಗಾಗಲೇ ರಾಮ, ಹನುಮಂತನ 3 ಲಕ್ಷ ಧ್ವಜ ಬೇಕೆಂದು ಆರ್ಡರ್‌ ಬಂದಿದೆ. ಕಳೆದ 15 ದಿನಗಳಿಂದ ಈ ಪ್ರತೀಶ್ ಅವರು ಧ್ವಜ ತಯಾರಿ ಮಾಡುತ್ತಿದ್ದಾರೆ. ಈಗಾಗಲೇ 1.5 ಲಕ್ಷ ಧ್ವಜ ರವಾನೆಯಾಗಿದೆ. ಇದನ್ನೂ ಓದಿ: ರಾಮಮಂದಿರಕ್ಕೆ ಹರಿದುಬಂದ ದೇಣಿಗೆ ಎಷ್ಟು? ಅತಿ ಹೆಚ್ಚು ದೇಣಿಗೆ ಕೊಟ್ಟವರ‍್ಯಾರು ಗೊತ್ತಾ?

    ಮೊದಲಿನಿಂದಲೂ ಇದೇ ಕೆಲಸ ಮಾಡುತ್ತಿರುವ ಜಾಧವ್‌ ಅವರಿಗೆ ಈ ಪುಣ್ಯ ಕಾರ್ಯಕ್ರಮದಿಂದ ಈ ಬಾರಿ ಬಂಪರ್‌ ಆರ್ಡರ್ ಬಂದಿವೆ. ಕರ್ನಾಟಕ ಮಾತ್ರವಲ್ಲದೇ ಪಕ್ಕದ ಗೋವಾ, ತೆಲಂಗಾಣ ಹಾಗೂ ಆಂಧ್ರದಿಂದಲೂ ಬಂದಿದೆ. ಇದನ್ನೂ ಓದಿ: ಮಂಗಳೂರಿನ ಸಂಘ ನಿಕೇತನದಿಂದ ಅಯೋಧ್ಯೆಗೆ ಹೊರಟ ನಮ್ಮನ್ನು ಡೈಮಂಡ್ ಗಂಜ್‌ನಲ್ಲಿ ಬಂಧಿಸಿದ್ರು!

    4 ಗಾತ್ರದ ಧ್ವಜ ತಯಾರಿ ನಡೆದಿದ್ದು, ಸಣ್ಣ ಧ್ವಜದಿಂದ ಹಿಡಿದು 5 ಮೀಟರ್‌ವರೆಗೆ ಧ್ವಜ ಇವೆ.  5 ರೂ.ನಿಂದ ಹಿಡಿದು 350 ರೂ.ವರೆಗೆ ಧ್ವಜದ ಬೆಲೆ ಇವೆ.‌ ಸುಮಾರು 80 ಕಾರ್ಮಿಕರು ಕೆಲ ವಾರಗಳಿಂದ ಪ್ರತಿ ದಿನವೂ ಕೆಲಸ ಮಾಡುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್‌ ಮಾಡಿ – ಅಯೋಧ್ಯೆ ರಾಮ ಮಂದಿರ

    ಮಹಿಳೆಯರು ಹಗಲು ಕೆಲಸ ಮಾಡಿದರೆ, ಪುರುಷರು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಒಬ್ಬರು 2 ಸಾವಿರಕ್ಕೂ ಹೆಚ್ಚು ಧ್ವಜ ತಯಾರಿ‌ ಮಾಡುತ್ತಿದ್ದಾರೆ. ಅಯೋಧ್ಯೆ ಕಾರ್ಯಕ್ರಮದಿಂದಾಗಿ ಎಷ್ಟೋ ಬಡವರಿಗೆ ಈಗ ಕೆಲಸ ಸಿಕ್ಕಿದೆ.

  • ಮಠಾಧೀಶರು, ಪಾದ್ರಿ, ಮೌಲ್ವಿಗಳು ರಾಜಕಾರಣ ಮಾಡಬಾರದು: ನಿಜಗುಣಾನಂದ ಶ್ರೀ ‌

    ಮಠಾಧೀಶರು, ಪಾದ್ರಿ, ಮೌಲ್ವಿಗಳು ರಾಜಕಾರಣ ಮಾಡಬಾರದು: ನಿಜಗುಣಾನಂದ ಶ್ರೀ ‌

    ಧಾರವಾಡ: ಮಠಾಧೀಶರು, ಪಾದ್ರಿಗಳು ಮತ್ತು ಮೌಲ್ವಿಗಳು ರಾಜಕಾರಣ ಮಾಡಬಾರದು ಎಂದು ನಿಜಗುಣಾನಂದ ಸ್ವಾಮೀಜಿ (Nijagunananda Swamiji) ಅಭಿಪ್ರಾಯಪಟ್ಟರು.

    ಡಿ.ಕೆ.ಶಿವಕುಮಾರ್‌ ಸಿಎಂ ಆಗಲಿ ಎಂದು ನೊಣವಿನಕೆರೆ ಸ್ವಾಮೀಜಿ ಹೇಳಿಕೆ ಕೊಟ್ಟ ವಿಚಾರವಾಗಿ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಅವರು, ಸ್ವಾಮೀಜಿಗಳು ರಾಜಕೀಯದಿಂದ ಹೊರತಾಗಿರಬೇಕು. ನಮ್ಮದೇನಿದ್ದರೂ ಧರ್ಮ, ಸಂಸ್ಕತಿ, ಸಂಸ್ಕಾರದ ವಿಚಾರಧಾರೆಗಳಿರಬೇಕು. ಈಗ ಎಲ್ಲ ಸಮುದಾಯಗಳು ಸಂಕೀರ್ಣದಿಂದ ಹೊರಗೆ ಬಂದಿವೆ ಎಂದರು‌. ಇದನ್ನೂ ಓದಿ: ಯತ್ನಾಳ್‍ರಿಂದ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ: ಎಂ.ಬಿ ಪಾಟೀಲ್

    ಮಠಾಧೀಶರು ರಾಜಕಾರಣದಲ್ಲಿದ್ದಾರೆ ಎಂಬ ವಿಚಾರ ಒಂದು ಕಡೆ ಆದರೆ, ಮಾಧ್ಯಮಗಳೂ ಸಹ ರಾಜಕಾರಣದ ವರ್ಗದಲ್ಲಿವೆ. ಅವುಗಳು ಕೂಡ ರಾಜಕಾರಣ ಹೊರತುಪಡಿಸಿ ನಿಂತಿಲ್ಲ. ಒಂದೊಂದು ಚಾನೆಲ್‌ಗಳು ಒಬ್ಬೊಬ್ಬ ರಾಜಕಾರಣಿಯನ್ನು ವೈಭವೀಕರಿಸಿದರೆ, ಕೆಲ ಚಾನೆಲ್‌ಗಳು ಮತ್ತು ರಾಜಕಾರಣಿಗಳನ್ನು ನಿರಾಕರಿಸುತ್ತವೆ. ಈಗ ಮಾಧ್ಯಮ ಮತ್ತು ಸ್ವಾಮೀಜಿಗಳ ಇಬ್ಬರ ಪಾತ್ರವೂ ಸೋಲುತ್ತಿದೆ. ಸಮಾಜದಲ್ಲಿ ಎಲ್ಲವೂ ಸಮತೋಲನ ತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಠಾಧೀಶರು ರಾಜಕಾರಣದಲ್ಲಿ ಬರಬಾರದು ಎನ್ನುವುದು ಸತ್ಯ, ಧರ್ಮ, ರಾಜಕಾರಣದಲ್ಲಿ ಪ್ರವೇಶ ಮಾಡಬಾರದು. ಕೇವಲ ಲಿಂಗಾಯತ ಸ್ವಾಮೀಜಿಗಳು ಮಾತ್ರವಲ್ಲ ಮೌಲ್ವಿ, ಪಾದ್ರಿಗಳೂ ಕೂಡ ರಾಜಕಾರಣದಲ್ಲಿ ಪ್ರವೇಶ ಆಗಬಾರದು. ಯಾವ ಧರ್ಮದ ನೇತಾರರೂ ರಾಜಕಾರಣ ಪ್ರವೇಶ ಮಾಡಬಾರದು. ರಾಜಕಾರಣಿಗಳಿಗೆ ಸ್ವಾಮೀಜಿಗಳು ಬುದ್ಧಿ ಹೇಳಬಹುದು, ಮಾರ್ಗದರ್ಶನ ಮಾಡಬಹುದು, ಒಬ್ಬ ಸ್ವಾಮೀಜಿಯನ್ನು ಬಳಸಿಕೊಳ್ಳುವಾಗ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು. ಅವರನ್ನು ಧಾರ್ಮಿಕ ಕಾರ್ಯಕ್ಕೆ ಮಾತ್ರವೇ ಬಳಸಿಕೊಳ್ಳಬೇಕು. ರಾಜಕಾರಣಿಗಳು ಸ್ವಾಮೀಜಿಗಳನ್ನು ಬೇರೆ ಕೆಲಸಕ್ಕೆ ಬಳಸುವಾಗ ಸ್ವಾಮೀಜಿಗಳೂ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್‌ ಸಿಎಂ ಆಗ್ತಾರೆ – ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ

    ಮಠಗಳಿಗೆ ಅನುದಾನ ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಪೂರ್ವದಲ್ಲಿ ಪ್ರಭು ಪರಂಪರೆ ಇತ್ತು. ಆಗ ಮಹಾರಾಜರು ಎಲ್ಲರನ್ನೂ ಸಲಹುತ್ತಿದ್ದರು. ಮಠಗಳಲ್ಲಿ ಶೈಕ್ಷಣಿಕ ಸಂಸ್ಥೆ, ಉಚಿತ ಪ್ರಸಾದ ನಿಲಯ, ಅನಾಥ ಮಕ್ಕಳು ಇರುತ್ತಾರೆ. ಸಾವಿರಾರೂ ಪುಸ್ತಕ ಪ್ರಕಟಿಸಬೇಕಿರುತ್ತದೆ. ರಾಜಾಶ್ರಯ ಕಳೆದುಕೊಂಡ ಸಂಗೀತಗಾರರಿಗೆ ಮಠಗಳೇ ಆಶ್ರಯ ಆಗಿರುತ್ತವೆ. ಅನೇಕ ಜನರಿಗೆ ಮಠಗಳು ಅವಕಾಶ ಕಲ್ಪಿಸಿಕೊಡಬೇಕಿರುತ್ತದೆ. ಮಠಗಳಿಗೆ ಬರುವ ಅನುದಾನ ಪ್ರಜಾಪ್ರಭುತ್ವದ ತೆರಿಗೆ ಹಣವೇ ಆಗಿರುತ್ತದೆ. ಆದರೂ ಸಹ ಮಠದ ಸೇವೆ ಸಂಪೂರ್ಣ ಪ್ರಜೆಗಳಿಗೆ ಸಲ್ಲುತ್ತದೆ. ಹೀಗಾಗಿ ಸರ್ಕಾರ ಅನುದಾನ ಕೊಡಬೇಕಾಗುತ್ತದೆ ಎಂದು ಹೇಳಿದರು.