Tag: dharamshala

  • ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ

    ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ

    – ಶ್ರೀಲಂಕಾ ಪ್ರಜೆಯ ಮನವಿ ತಿರಸ್ಕರಿಸಿದ ಕೋರ್ಟ್‌

    ನವದೆಹಲಿ: ಭಾರತವು ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ (Dharamshala) ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ (Supreme Court) ಶ್ರೀಲಂಕಾದ ತಮಿಳು ಪ್ರಜೆಯೊಬ್ಬರ ಬಂಧನದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

    ಯುಎಪಿಎ (UAPA) ಪ್ರಕರಣದಲ್ಲಿ ವಿಧಿಸಲಾದ 7 ವರ್ಷಗಳ ಶಿಕ್ಷೆ ಮುಗಿದ ತಕ್ಷಣ ಅರ್ಜಿದಾರ ಶ್ರೀಲಂಕಾ ಪ್ರಜೆಯು (Sri Lankan) ಭಾರತವನ್ನು ತೊರೆಯಬೇಕು ಎಂದು ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್‌ ಅವರಿದ್ದ ದ್ವೀಸದಸ್ಯ ಪೀಠ ವಿಚಾರಣೆ ನಡೆಸಿತು. ಇದನ್ನೂ ಓದಿ: ಬಿಡದಿ ಅಪ್ರಾಪ್ತ ಬಾಲಕಿ ಹತ್ಯೆ ಕೇಸ್‌ಗೆ ಟ್ವಿಸ್ಟ್ – ರೈಲು ಡಿಕ್ಕಿ ಹೊಡೆದು ಸಾವು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಈ ವೇಳೆ ಭಾರತವು ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡಬೇಕೇ? ನಾವು 140 ಕೋಟಿ ಜನಸಂಖ್ಯೆ ಹೊಂದಿದ್ದು ಕಷ್ಟಪಡುತ್ತಿದ್ದೇವೆ. ಇದು ಎಲ್ಲೆಡೆಯಿಂದ ಬಂದ ವಿದೇಶಿ ಪ್ರಜೆಗಳಿಗೆ ಆಶ್ರಯ ನೀಡಬಹುದಾದ ಧರ್ಮ ಛತ್ರವಲ್ಲ ಎಂದು ಕೋರ್ಟ್‌ ಹೇಳಿತು. ಇದನ್ನೂ ಓದಿ: ಕೊನೆ ಕ್ಷಣದವರೆಗೂ ಆಪರೇಷನ್ ಸಿಂಧೂರದ ಟಾರ್ಗೆಟ್ ಟಾಪ್ ಸೀಕ್ರೆಟ್ – ಗೊತ್ತಿದ್ದಿದ್ದು ಅಜಿತ್ ದೋವಲ್‍ಗೆ ಮಾತ್ರ!

    ಏನಿದು ಪ್ರಕರಣ?
    ಈ ಹಿಂದೆ ಶ್ರೀಲಂಕಾದಲ್ಲಿ ಸಕ್ರೀಯವಾಗಿದ್ದ ಭಯೋತ್ಪಾದಕ ಸಂಘಟನೆಯಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ) ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನದ ಮೇಲೆ ವಿದೇಶಿ ಪ್ರಜೆಯನ್ನು 2015 ರಲ್ಲಿ ಬಂಧಿಸಲಾಗಿತ್ತು. 2018 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸೆಕ್ಷನ್-10ರ ಅಡಿಯಲ್ಲಿ ಅಪರಾಧಕ್ಕಾಗಿ ವಿಚಾರಣಾ ನ್ಯಾಯಾಲಯವು ಅರ್ಜಿದಾರನನ್ನ ದೋಷಿ ಎಂದು ಘೋಷಿಸಿತು, 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಕೊನೆಗೆ 2022 ರಲ್ಲಿ, ಮದ್ರಾಸ್ ಹೈಕೋರ್ಟ್ ಆತನ ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಿತು. ಶಿಕ್ಷೆ ಅವಧಿ ಮುಗಿದ ಬಳಿಕ ಅವನು ಭಾರತವನ್ನ ತೊರೆಯಬೇಕು, ಅಲ್ಲಿಯವರೆಗೆ ನಿರಾಶ್ರಿತರ ಶಿಬಿರದಲ್ಲೇ ಇರಬೇಕು ಎಂದು ನಿರ್ದೇಶನ ನೀಡಿತ್ತು.

    ಇದಾದ ಬಳಿಕ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಅರ್ಜಿದಾರ, ಅವರ ತಾಯ್ನಾಡಿನಲ್ಲಿ ಜೀವಕ್ಕೆ ಅಪಾಯವಿದೆ ಎಂದು ಅರ್ಜಿದಾರನ ಪರ ವಕೀಲರು ತಿಳಿಸಿದ್ದರು. ಅಲ್ಲದೇ ಅವರು ಕಳೆದ ಮೂರು ವರ್ಷಗಳಿಂದ ಬಂಧನದಲ್ಲಿದ್ದಾರೆ, ಗಡೀಪಾರು ಪ್ರಕ್ರಿಯೆ ಕೂಡ ಆರಂಭವಾಗಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು. ಅಲ್ಲದೇ ಬಹು ಕಾಯಿಲೆಗಳಿಂದ ಬಳಲುತ್ತಿರುವ ಅರ್ಜಿದಾರನ ಪತ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಅವರ ಮಗ ಭಾರತದಲ್ಲಿ ನೆಲೆಸಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತಂದರು.

    ಇದಕ್ಕೆ ಮಧ್ಯಪ್ರವೇಶಿಸಿದ ನ್ಯಾ. ದತ್ತ ಅವರು, ಇಲ್ಲಿ ನೆಲೆಸಲು ನಿಮಗೆ ಏನು ಹಕ್ಕಿದೆ? ಎಂದು ಪ್ರಶ್ನಿಸಿದರು.. ಜೊತೆಗೆ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ದತ್ತ ಅವರಿದ್ದ ಪೀಠ ಬಂಧನವು ಕಾನೂನಿಗೆ ಅನುಸಾರವಾಗಿರುವುದರಿಂದ ಆರ್ಟಿಕಲ್ 21 ಉಲ್ಲಂಘಿಸಲಾಗಿಲ್ಲ. ಆರ್ಟಿಕಲ್-19ರ ಪ್ರಕಾರ ಭಾರತದಲ್ಲಿ ನೆಲೆಸುವ ಮೂಲಭೂತ ಹಕ್ಕು ನಾಗರಿಕರಿಗೆ ಮಾತ್ರ ಇದೆ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರದಿಂದ 4,195 ಕೋಟಿ ಅನುದಾನ ಬಾಕಿ; ಸಿಎಂ ಬೂಟಾಟಿಕೆ ಪ್ರದರ್ಶನ – ಜೋಶಿ ವಾಗ್ದಾಳಿ

  • ಬಸ್ ಪಲ್ಟಿ – ಇಬ್ಬರ ದುರ್ಮರಣ, 49 ಮಂದಿಗೆ ಗಾಯ

    ಬಸ್ ಪಲ್ಟಿ – ಇಬ್ಬರ ದುರ್ಮರಣ, 49 ಮಂದಿಗೆ ಗಾಯ

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ (Bus Accident) ಪರಿಣಾಮ ಇಬ್ಬರು ಸಾವನ್ನಪ್ಪಿ, 49 ಜನ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ (Honnavar) ಸುಳೆಮುರ್ಕಿ ತಿರುವಿನಲ್ಲಿ ನಡೆದಿದೆ.

    ಮೃತರನ್ನು ತುಮಕೂರಿನ ಲೋಕೇಶ್ (26), ಚಿಕ್ಕಬಳ್ಳಾಪುರದ ರುದ್ರೇಶ್ (38) ಎಂದು ಗುರುತಿಸಲಾಗಿದೆ. ಗೌರಿಬಿದನೂರಿನ ರಜನಿ (30) ಎಂಬವರು ಒಂದು ಕೈ ಕಳೆದುಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

    ಬಸ್‍ನಲ್ಲಿ 53 ಮಂದಿ ಗೌರಿ ಬಿದನೂರಿನಿಂದ ಧರ್ಮಸ್ಥಳಕ್ಕೆ (Dharamshala) ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷತನ ಮತ್ತು ಅತೀ ವೇಗವೇ ಕಾರಣ ಎನ್ನಲಾಗಿದೆ.

    ಗಾಯಾಳುಗಳನ್ನು ಉಡುಪಿ, ಶಿವಮೊಗ್ಗದ ಮೆಗ್ಗಾನ್ ಹಾಗೂ ಹೊನ್ನಾವರ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಾನುವಾರ ಭಾರತ-ನ್ಯೂಜಿಲೆಂಡ್ ಮ್ಯಾಚ್; ಮಳೆ ಅಡ್ಡಿ?

    ಭಾನುವಾರ ಭಾರತ-ನ್ಯೂಜಿಲೆಂಡ್ ಮ್ಯಾಚ್; ಮಳೆ ಅಡ್ಡಿ?

    ಧರ್ಮಶಾಲಾ: ಇಲ್ಲಿನ ಹೆಚ್‌ಪಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ಭಾರತ-ನ್ಯೂಜಿಲೆಂಡ್ (IND-NZ) ಹೈವೋಲ್ಟೇಜ್ ಪಂದ್ಯ ನಿಗದಿಯಾಗಿದ್ದು, ಮಳೆಯ ಆತಂಕ ಎದುರಾಗಿದೆ.

    ನಾಳೆ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ ಮಳೆ ಬರುವ ಮುನ್ಸೂಚನೆ ಇದ್ದು, ಪಂದ್ಯ ಶೇ.90ರಷ್ಟು ಅನುಮಾನ ಎನ್ನಲಾಗಿದೆ. ಮಳೆ ಬಿಡುವು ಕೊಡದಿದ್ದರೆ ಪಂದ್ಯ ರದ್ದು ಮಾಡಲಾಗುತ್ತದೆ. ಇದನ್ನೂ ಓದಿ: ಕ್ಲಾಸೆನ್‌ ಅಬ್ಬರದ ಶತಕ – ಇಂಗ್ಲೆಂಡ್‌ ವಿರುದ್ಧ ಆಫ್ರಿಕಾಗೆ 229 ರನ್‌ ಭರ್ಜರಿ ಜಯ

    ಈ ಮಧ್ಯೆ ವಿಶ್ವಕಪ್‌ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಅಂಕಿ ಅಂಶ ಗಮನ ಸೆಳೆಯುತ್ತಿದೆ. ನಾಲ್ಕು ಪಂದ್ಯಗಳಲ್ಲಿ 37.5 ಓವರ್ ಬೌಲಿಂಗ್ ಮಾಡಿದ್ದು, ಅದರಲ್ಲಿ 21.5 ಓವರ್ ಡಾಟ್ ಬಾಲ್ ಎಸೆದಿದ್ದಾರೆ. ಅಂದ್ರೆ 227 ಎಸೆತಗಳಲ್ಲಿ 131 ಎಸೆತಗಳಿಗೆ ಬ್ಯಾಟರ್‌ಗಳು ಉತ್ತರಿಸಿಲ್ಲ. ಬೌಂಡರಿ ಬಾಲ್ಸ್ 11 ಮಾತ್ರ. ಅದರಲ್ಲಿ 9 ಫೋರ್, 2 ಸಿಕ್ಸ್ ಇವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಸೀಸ್‍ಗೆ ಟೀಂ ಇಂಡಿಯಾದಿಂದ ತಿರುಗೇಟು: ಸರಣಿಯಲ್ಲಿ ಟಾಪ್ ಸ್ಕೋರರ್ ಯಾರು?

    ಆಸೀಸ್‍ಗೆ ಟೀಂ ಇಂಡಿಯಾದಿಂದ ತಿರುಗೇಟು: ಸರಣಿಯಲ್ಲಿ ಟಾಪ್ ಸ್ಕೋರರ್ ಯಾರು?

    ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೆಯ ಹಾಗೂ ಕೊನೆಯ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ.

    ಆಸ್ಟ್ರೇಲಿಯಾದ 300 ರನ್ ಗಳಿಗೆ ಜವಾಬು ನೀಡಲು ಆರಂಭಿಸಿದ ಭಾರತ 90 ಓವರ್‍ಗಳಲ್ಲಿ 248 ರನ್‍ಗಳಿಸಿದೆ. ಮುರಳಿ ವಿಜಯ್ ಇಂದು 21 ರನ್‍ಗಳಿಸಿ ಆರಂಭದಲ್ಲೇ ಔಟಾದರೂ, ಕೆಎಲ್ ರಾಹುಲ್ 60 ರನ್(124 ಎಸೆತ, 9 ಬೌಂಡರಿ, 1 ಸಿಕ್ಸರ್), ಚೇತೇಶ್ವರ ಪೂಜಾರ 57 ರನ್(151 ಎಸೆತ, 6 ಬೌಂಡರಿ) ನಾಯಕ ಅಜಿಂಕ್ಯಾ ರೆಹಾನೆ 46 ರನ್(104 ಎಸೆತ, 7 ಬೌಂಡರಿ, 1 ಸಿಕ್ಸರ್), ಆರ್ ಅಶ್ವಿನ್ 30 ರನ್( 49 ಎಸೆತ, 4 ಬೌಂಡರಿ) ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಕ್ರೀಸ್‍ನಲ್ಲಿ ಈಗ ಕೀಪರ್ ವೃದ್ಧಿಮಾನ್ ಸಹಾ 10 ರನ್(43 ಎಸೆತ,1 ಬೌಂಡರಿ) ರವೀಂದ್ರ ಜಡೇಜಾ 16 ರನ್(23 ಎಸೆತ, 2 ಸಿಕ್ಸರ್) ಗಳಿಸಿ ಆಟವಾಡುತ್ತಿದ್ದು, ಸೋಮವಾರ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

    ಸ್ಪಿನ್ನರ್ ನಥನ್ ಲಿಯಾನ್ 4 ವಿಕೆಟ್ ಕಿತ್ತರೆ, ಜೋಷ್ ಹ್ಯಾಜಲ್‍ವುಡ್, ಪ್ಯಾಟ್ ಕುಮ್ಮಿಸ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

    ಈ ಸೀರಿಸ್ ಟಾಪ್ ರನ್ ಸ್ಕೋರರ್?
    ನಾಯಕ ಸ್ಮಿತ್ 7 ಇನ್ನಿಂಗ್ಸ್ ಗಳಿಂದ 482 ರನ್ ಗಳಿಸಿದ್ದರೆ, ಚೇತೇಶ್ವರ ಪೂಜಾರ 6 ಇನ್ನಿಂಗ್ಸ್ ಗಳಿಂದ 405 ರನ್ ಗಳಿಸಿದ್ದಾರೆ. 6 ಇನ್ನಿಂಗ್ಸ್ ಗಳಿಂದ 342 ರನ್‍ಗಳಿಸುವ ಮೂಲಕ ಕೆಎಲ್ ರಾಹುಲ್ ಮೂರನೇ ಸ್ವಾನದಲ್ಲಿದ್ದಾರೆ.

    ವಿರಾಟ್ ಕೊಹ್ಲಿ 2011ರಿಂದ ಇಲ್ಲಿಯವರೆಗೆ ಸತತ 54 ಪಂದ್ಯಗಳನ್ನು ಆಡುತ್ತಾ ಬಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಗಾಯದ ಸಮಸ್ಯೆಯಿಂದಾಗಿ ಈ ಟೆಸ್ಟ್ ಪಂದ್ಯದಿಂದ ಹೊರಗಡೆ ಉಳಿದಿದ್ದಾರೆ.