Tag: Dhanya Balakrishna

  • ‘ಉಂಡೆನಾಮ’ ಹಾಕೋಕೆ ಬರ್ತಿದ್ದಾರೆ ನಟ ಕೋಮಲ್

    ‘ಉಂಡೆನಾಮ’ ಹಾಕೋಕೆ ಬರ್ತಿದ್ದಾರೆ ನಟ ಕೋಮಲ್

    ಕೋಮಲ್ (Komal) ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಈಗಾಗಲೇ ಎರಡು ಚಿತ್ರಗಳು ಮುಹೂರ್ತವಾಗಿ ಚಿತ್ರೀಕರಣ ಆರಂಭಿಸಿವೆ. ಮತ್ತೊಂದು ಸಿನಿಮಾ ‘ಉಂಡೆನಾಮ’ ರಿಲೀಸ್ ಗೆ ರೆಡಿಯಾಗಿದೆ. ಖ್ಯಾತ ಸಂಭಾಷಣೆಗಾರ, ರಾಬರ್ಟ್ ಖ್ಯಾತಿಯ ರಾಜಶೇಖರ್ (Rajasekhar) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಪಕ್ಕಾ ಕಾಮಿಡಿ ಚಿತ್ರ ಇದಾಗಿದೆ.

    ತುಂಬಾ ದಿನಗಳ ನಂತರ ನಗುವಿನ ಕಚುಗುಳಿ ಇಡುವುದಕ್ಕೆ ನಟ ಕೋಮಲ್ ಕುಮಾರ್ ಉಂಡೆನಾಮ (Undenaama) ಹಾಕ್ಕೊಂಡು ಬರ್ತಾ ಇದಾರೆ. ಈ ಚಿತ್ರದ ಶೀರ್ಷಿಕೆ ಯನ್ನು ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳು ಚಿತ್ರದ ಶೀರ್ಷಿಕೆ ಹೇಳುವುದರ ಮುಖಾಂತರ ವಿನೂತನವಾಗಿ ಅನಾವರಣ ಮಾಡಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಅಪಾರ ಚಿನ್ನಾಭರಣ ದೋಚಿದ ಕಳ್ಳರು

    ಹೆಸರಿನಲ್ಲೇ ಹಾಸ್ಯ ಹೊಂದಿರುವ ಉಂಡೆನಾಮ ಸಿನಿಮಾ ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮುಖ್ಯ ಭೂಮಿಕೆಯಲ್ಲಿ ಕೋಮಲ್ ಅವರ ಜೊತೆ ಹರೀಶ್ ರಾಜ್ (Harish Raj) , ಧನ್ಯ ಬಾಲಕೃಷ್ಣ (Dhanya Balakrishna), ತಬಲಾನಾಣಿ, ಅಪೂರ್ವ, ವೈಷ್ಣವಿ, ತನಿಷ ಕುಪ್ಪಂಡ, ಬ್ಯಾಕ್ ಜನಾರ್ಧನ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.

    ಈ ಚಿತ್ರವು ಎನ್.ಕೆ. ಸ್ಟುಡಿಯೋಸ್ ನ ಅಡಿಯಲ್ಲಿ ಸಿ.ನಂದ ಕಿಶೋರ್ ಅವರು ನಿರ್ಮಿಸಿದ್ದಾರೆ. ಮಜಾಟಾಕೀಸ್, ರಾಬರ್ಟ, ಖ್ಯಾತಿಯ ಸಂಭಾಷಾಣೆಗಾರ ಕೆ.ಎಲ್.ರಾಜಶೇಖರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ಸಂಭ್ರಮ ಅವರ ಸಂಗೀತ, ನವೀನ್ ಕುಮಾರ್ ಛಾಯಾಗ್ರಾಹಣ ಹಾಗೂ ಕೆ.ಎಮ್.ಪ್ರಕಾಶ್ ಸಂಕಲನದಲ್ಲಿ ಚಿತ್ರ ಮೂಡಿ ಬಂದಿದೆ.

  • ತಮಿಳು ನಿರ್ದೇಶಕನ ಜೊತೆ ಸದ್ದಿಲ್ಲದೇ ಮದುವೆಯಾದ ಕನ್ನಡದ ನಟಿ ಧನ್ಯಾ ಬಾಲಕೃಷ್ಣ

    ತಮಿಳು ನಿರ್ದೇಶಕನ ಜೊತೆ ಸದ್ದಿಲ್ಲದೇ ಮದುವೆಯಾದ ಕನ್ನಡದ ನಟಿ ಧನ್ಯಾ ಬಾಲಕೃಷ್ಣ

    ನ್ನಡದ `ನೋಡಿ ಸ್ವಾಮಿ ನಾವಿರೋದೆ ಹೀಗೆ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಧನ್ಯಾ ಬಾಲಕೃಷ್ಣ (Dhanya Balakrishna) ಸದ್ದಿಲ್ಲದೇ ತಮಿಳು ನಿರ್ದೇಶಕ ಬಾಲಾಜಿ ಮೋಹನ್ (Balaji Mohan) ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕುರಿತು ಇದೀಗ ಮಾಹಿತಿ ಹೊರಬಿದ್ದಿದೆ.

    ನಟಿ ಧನ್ಯಾ ಮೂಲತಃ ಬೆಂಗಳೂರಿನವರಾಗಿದ್ದು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಈ ವರ್ಷದ ಆರಂಭದಲ್ಲೇ ತಮಿಳಿನ ʻಮಾರಿʼ, ʻಮಾರಿ 2ʼ ಖ್ಯಾತಿಯ ನಿರ್ದೇಶಕ ಬಾಲಾಜಿ ಜೊತೆ ಧನ್ಯಾ ಮದುವೆ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಬಾಲಾಜಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    ಇನ್ನೂ 2023ರಲ್ಲಿ ಅರುಣಾ (Aruna) ಎಂಬುವವರ ಜೊತೆ ಬಾಲಾಜಿ ಮದುವೆ ಆಗಿತ್ತು. ಆದರೆ ಮದುವೆ ಆಗಿ ಒಂದೇ ವರ್ಷಕ್ಕೆ ಈ ಸಂಬಂಧ ಮುರಿದು ಬಿತ್ತು. ಇಬ್ಬರು ಡಿವೋರ್ಸ್ ಪಡೆದರು. ಜನವರಿ 23ರಂದು ಈ ವರ್ಷ ಧನ್ಯಾ ಜೊತೆ ಬಾಲಾಜಿ ಎರಡನೇ ಮದುವೆ ಆಗಿದ್ದಾರೆ. ಇಲ್ಲಿಯವರೆಗೆ ರಿವೀಲ್ ಆಗದ ಈ ಮದುವೆ ಸುದ್ದಿ ಚರ್ಚೆಗೆ ಬಂದಿರುವುದಕ್ಕೆ ಕಾರಣ ನಟಿ ಕಲ್ಪಿಕಾ ಗಣೇಶ್.

    ಇತ್ತೀಚೆಗೆ ನಟಿ ಕಲ್ಪಿಕಾ (Kalpika Ganesh) ತಮ್ಮ ಯೂಟ್ಯೂಬ್‌ನಲ್ಲಿ ಧನ್ಯಾ ಮತ್ತು ಬಾಲಾಜಿ ಮದುವೆ ಆಗಿರುವ ಬಗ್ಗೆ ಮಾತನಾಡಿದ್ದರು. ಬಳಿಕ ಈ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಯಿತು. ಇದನ್ನ ಗಂಭೀರವಾಗಿ ಪರಿಗಣಿಸಿ, ಬಾಲಾಜಿ ಮೋಹನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿ ಕಲ್ಪಿಕಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

    ಈ ಬಗ್ಗೆ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ನ್ಯಾಯಾಧೀಶ ಸೆಂಥಿಲ್ ಕುಮಾರ್ ರಾಮಮೂರ್ತಿ, ನಿರ್ದೇಶಕ ಬಾಲಾಜಿ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡುವುದನ್ನು ಕಲ್ಪಿಕಾ ನಿಲ್ಲಿಸಬೇಕು ಎಂದು ಆದೇಶ ನೀಡಿದ್ದಾರೆ. ಈ ಜೊತೆಗೆ ಈ ಪ್ರಕರಣದ ತೀರ್ಪನ್ನು 2023ರ ಜನವರಿ 23ಕ್ಕೆ ನೀಡುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಅಂತಿದ್ದಾರೆ ನಟ ರಿಷಿ

    ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಅಂತಿದ್ದಾರೆ ನಟ ರಿಷಿ

    ಪರೇಷನ್ ಅಲಮೇಲಮ್ಮ, ಕವಲು ದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಅಭಿನಯದ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ ZEE5ನಲ್ಲಿ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ. ಸದಾ ವಿಭಿನ್ನ ಪಾತ್ರ ಹಾಗೂ ಕಥೆ ಮೂಲಕ ಎದುರುಗೊಳ್ಳುವ ರಿಷಿ ಸಿನಿಮಾ ಆಯ್ಕೆ ವಿಚಾರದಲ್ಲೂ ಸಖತ್ ಚ್ಯುಸಿ. ಹೀಗೆ ಅಳೆದು ತೂಗಿ ಆಯ್ಕೆ ಮಾಡಿಕೊಂಡ ಸಿನಿಮಾಗಳಲ್ಲೊಂದು ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’. ಸದ್ಯ ಈ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆಯುತ್ತಿದೆ. ರಿಷಿ ಚಿತ್ರಕ್ಕೆ  ಕ್ರೇಜಿ ಸ್ಟಾರ್ ಸಾಥ್ ಕೂಡ ಸಿಕ್ಕಿದ್ದು, ಚಿತ್ರದ ಕಚಗುಳಿ ಇಡೋ ಟ್ರೇಲರ್ ರನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

    ಫಸ್ಟ್ ಲುಕ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರ ಪ್ರಯೋಗಾತ್ಮಕ ಸಬ್ಜೆಕ್ಟ್ ಒಳಗೊಂಡಿದೆ. ಡಿಪ್ರೆಷನ್ ಮತ್ತು ಆತ್ಮಹತ್ಯೆ ಕುರಿತ ಕಥಾಹಂದರ ಚಿತ್ರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಡಿಪ್ರೆಷನ್, ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ. ಈ ಎರಡು ಗಂಭೀರ ವಿಚಾರಗಳನ್ನಿಟ್ಟುಕೊಂಡು ಹಾಸ್ಯದೊಂದಿಗೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಕಥೆ ಸೀರಿಯಸ್ ಆಗಿ ಸಾಗುತ್ತಿದ್ರು ನೋಡುಗರಿಗೆ ನಾಯಕನ ಕಷ್ಟ ಕಂಡಾಗ ನಗು ತರಿಸುತ್ತದೆ ಎನ್ನುತ್ತಾರೆ ನಟ ರಿಷಿ.  ಒಟ್ಟಿನಲ್ಲಿ ಯುವಜನತೆಯ ಸಮಸ್ಯೆಗಳ  ಕುರಿತು ಈ ಸಿನಿಮಾ ಬೆಳಕು ಚೆಲ್ಲಲಿದೆ ಎನ್ನುವುದು ಚಿತ್ರತಂಡದ ಮಾತು. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್

    ಚಿತ್ರದಲ್ಲಿ ಧನ್ಯ ಬಾಲಕೃಷ್ಣ, ಗ್ರೀಷ್ಮಾ  ಶ್ರೀಧರ್, ಅಪೂರ್ವ ಎಸ್ ಭಾರಧ್ವಜ್, ಭಾವನಿ ಪ್ರಕಾಶ್, ನಾಗಭೂಷಣ, ಮಹದೇವ್ ಪ್ರಸಾಧ್ ಒಳಗೊಂಡ ತಾರಾಬಳಗವಿದೆ. ಚಿತ್ರಕ್ಕೆ ಇಸ್ಲಾಹುದ್ದೀನ್ ಎನ್ ಎಸ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಮ್ರೇಜ್ ಸೂರ್ಯವಂಶಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಷ್ಣು ಪ್ರಸಾಧ್ ಪಿ, ದುಲೀಪ್ ಕುಮಾರ್ ಎಂ.ಎಸ್ ಕ್ಯಾಮೆರಾ ವರ್ಕ್, ಪ್ರಸನ್ನ ಸಿವರಾಮನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]