Tag: Dhanveer

  • `ವಾಮನ’ ಧನ್ವೀರ್‌ಗೆ ಜೊತೆಯಾದ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯ

    `ವಾಮನ’ ಧನ್ವೀರ್‌ಗೆ ಜೊತೆಯಾದ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯ

    ʻಏಕ್ ಲವ್ ಯಾʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ನಟಿಸಿದ ಮೊದಲ ಚಿತ್ರದಲ್ಲೇ ಗಮನ ಸೆಳೆದ ನಟಿ ರೀಷ್ಮಾ ವಾಮನ ಧನ್ವೀರ್‌ಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.

    ಶೋಕ್ದಾರ್ ಖ್ಯಾತಿಯ ಧ್ವನೀರ್ ಗೌಡ ನಟಿಸ್ತಿರುವ `ವಾಮನ’ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನಿಗೆ ನಾಯಕಿ ಸಿಕ್ಕಿದ್ದಾಳೆ. `ಏಕ್ ಲವ್ ಯಾ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ರೀಷ್ಮಾ ನಾಣಯ್ಯ ಧ್ವನೀರ್‌ಗೆ ಜೋಡಿಯಾಗಿ ಅಭಿನಯಿಸ್ತಿದ್ದು, ಈಗಾಗಲೇ ರೀಷ್ಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

    ರೀಷ್ಮಾ, ಸದಾ ಹಸನ್ಮುಖಿಯಾಗಿರುವ ಪಾತ್ರದಲ್ಲಿ ನಟಿಸ್ತಿದ್ದು, ನಾಯಕನ ಪಯಣದಲ್ಲಿ ನಾಯಕಿ ಹೇಗೆ ಬೆಂಬಲವಾಗಿ ನಿಲ್ಲುತ್ತಾಳೆ ಅನ್ನೋದನ್ನು ಸಿನಿಮಾದಲ್ಲಿ ನೋಡಬಹುದು. ಪಕ್ಕ ಔಟ್ ಆ್ಯಂಡ್ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾವಾಗಿರುವ `ವಾಮನ’ ಚಿತ್ರದಲ್ಲಿ ಒಂದೊಳ್ಳೆ ಲವ್ ಸ್ಟೋರಿ ಕೂಡ ಇದೆ.

    ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ಸಿನಿಮಾವನ್ನು ಚೇತನ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರುವ ಧನ್ವೀರ್ ಫಸ್ಟ್ ಲುಕ್ ಹಾಗೂ ಮೇಕಿಂಗ್ ಝಲಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಖತ್ ಮಾಸ್ ಅವತಾರದಲ್ಲಿ ಶೋಕ್ದಾರ್ ಮಿಂಚಿದ್ದು, ಶೀಘ್ರದಲ್ಲಿ ಚಿತ್ರತಂಡ ಮತ್ತೊಂದು ಅಪ್‌ಡೇಟ್ ಗೆ ಸಜ್ಜಾಗ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ- ಸ್ಪೂರ್ತಿ ಗೌಡ ಲವ್ವಿ ಡವ್ವಿ

    ಇನ್ನೂ ರೀಷ್ಮಾ ನಾಣಯ್ಯ ನಟನೆಯ ಮುಂಬರುವ ಚಿತ್ರ, ಶ್ರೇಯಸ್ ಜತೆ `ರಾಣಾ’, ಗೋಲ್ಡನ್ ಸ್ಟಾರ್ ಜತೆ `ಬಾನದಾರಿಯಲ್ಲಿ’ ಇದೀಗ ವಾಮನ ಸಿನಿಮಾಗಳಿದ್ದು, ಒಂದಿಷ್ಟು ಸಿನಿಮಾಗಳು ಮಾತುಕತೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಕೊಡಗಿನ ಬ್ಯೂಟಿ ರೀಷ್ಮಾ ತಮ್ಮ ಸಿನಿಮಾಗಳ ಮೂಲಕ ಎಷ್ಟರ ಮಟ್ಟಿಗೆ ಸೌಂಡ್ ಮಾಡ್ತಾರೆ ಅಂತಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವಾಮನ ಸಿನಿಮಾಗೆ ಎಂಟ್ರಿ ಕೊಟ್ಟ ಸಂಪತ್: ಮೂರು ಶೇಡ್ ಪಾತ್ರದಲ್ಲಿ ಖಳನಟ

    ವಾಮನ ಸಿನಿಮಾಗೆ ಎಂಟ್ರಿ ಕೊಟ್ಟ ಸಂಪತ್: ಮೂರು ಶೇಡ್ ಪಾತ್ರದಲ್ಲಿ ಖಳನಟ

    ನ್ವೀರ್ ಗೌಡ ನಟಿಸ್ತಿರುವ ಬಹುನಿರೀಕ್ಷಿತ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗ್ಲೇ ಎರಡು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ಮೂರನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಇದೀಗ ವಾಮನ ಬಳಗಕ್ಕೆ ಮತ್ತೊಬ್ಬ ಸದಸ್ಯ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷಾ ನಟ, ಖಳನಾಯಕನ ಪಾತ್ರಧಾರಿ ಸಂಪತ್ ವಾಮನ ತಂಡ ಸೇರಿಕೊಂಡಿದ್ದಾರೆ.

    ವಾಮನ ಪಾತ್ರದಲ್ಲಿ ಸಂಪತ್ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇಡೀ ಮಾಫಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಕ್ರೂರಿಯಾಗಿ ಬದುಕುವ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂರು ಶೇಡ್ ನಲ್ಲಿ ಸಂಪತ್ ಅಬ್ಬರಿ ಬೊಬ್ಬಿರಿಯಲಿದ್ದು, ಅವರ ಪಾತ್ರಕ್ಕಾಗಿಯೇ ಪ್ರತ್ತೇಕ್ಷವಾಗಿ ಕಾಸ್ಟ್ಯೂಮ್ ಡಿಸೈನ್ ಎನ್ನುತ್ತಾರೆ ನಿರ್ದೇಶಕ ಶಂಕರ್. ಇದನ್ನೂ ಓದಿ: ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

    ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಬರಹಗಾರನಾಗಿ, ಸಂಭಾಷಣೆಗಾರನಾಗಿ ಗುರುತಿಸಿಕೊಂಡಿರುವ ಶಂಕರ್ ರಾಮನ್ ಎಸ್ ವಾಮನ ಸಿನಿಮಾ ಮೂಲಕ ನಿರ್ದೇಶನದ ಮೊದಲ ಹೆಜ್ಜೆ ಇಟ್ಟಿದ್ದು, ಶಂಕರ್ ಕನಸಿಗೆ ಫ್ಯಾಷನೇಟೇಡ್ ಪ್ರೊಡ್ಯೂಸರ್ ಚೇತನ್ ಗೌಡ ಸಾಥ್ ಕೊಟ್ಟಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ ನಡಿ ಮೂಡಿ ಬರ್ತಿರುವ ಮಾಸ್ ಆಕ್ಷನ್ ಎಂಟರ್ಟೇನರ್ ವಾಮನ ಸಿನಿಮಾದಲ್ಲಿ ಧನ್ವೀರ್ ಗೆ ಜೋಡಿಯಾಗಿ ರಚನಾ ರೈ ನಟಿಸ್ತಿದ್ದು, ಮಹೇನ್ ಸಿಂಹ ಛಾಯಾಗ್ರಾಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಃ ಸಂಕಲನ, ಅರ್ಜುನ್ ರಾಜ್, ಜಾಲಿ ಬಾಸ್ಟಿನ್ ಸಾಹಸಸಿನಿಮಾಕ್ಕಿದೆ.

    ಲೈವ್ ಲೋಕೇಷನ್ ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ಸ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ವಾಮನ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಚೇತನ್ ಗೌಡ, ದೊಡ್ಡ ಮಟ್ಟದ ಸಿನಿಮಾ ಮಾಡುವ ಆಸಕ್ತಿ-ಶಕ್ತಿ ಎರಡು ಅವರಲಿದೆ ಎನ್ನುತ್ತಾರೆ ನಿರ್ದೇಶಕ ಶಂಕರ್.

  • ಶೂಟಿಂಗ್ ವೇಳೆ ಅವಘಡ, ನಟ ಧನ್ವೀರ್ ಗೌಡ ಕೈಗೆ ಪೆಟ್ಟು

    ಶೂಟಿಂಗ್ ವೇಳೆ ಅವಘಡ, ನಟ ಧನ್ವೀರ್ ಗೌಡ ಕೈಗೆ ಪೆಟ್ಟು

    ಶೋಕ್ದಾರ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ  ಶೂಟಿಂಗ್ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ‘ವಾಮನ’ ಸಿನಿಮಾದ ಫೈಟಿಂಗ್ ದೃಶ್ಯಗಳನ್ನು ಬೆಂಗಳೂರಿನ ಯಲಹಂಕದಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ವೇಳೆ ಅವಘಡ ಸಂಭವಿಸಿದ್ದು, ರೋಪ್ ನಿಂದ ಕೆಳಗೆ ಬಿದ್ದ ಧನ್ವೀರ್ ಕೈಗೆ ಪೆಟ್ಟಾಗಿದೆ. ತಕ್ಷಣ ಆಸ್ಪತ್ರೆಗೆ ತೆರಳಿ ಧನ್ವೀರ್ ಚಿಕಿತ್ಸೆ ಪಡೆದುಕೊಂಡಿದ್ದಾರೆ .ಇದನ್ನೂ ಓದಿ : ಪ್ಲಾಸ್ಟಿಕ್ ಸುತ್ತಿಕೊಂಡು ಬಂದ ಉರ್ಫಿ ಜಾವೇದ್ : ಕಾಸ್ಟ್ಯೂಮ್ ಡಿಸೈನರ್ ಹುಡುಕುತ್ತಿದ್ದಾರೆ ನೆಟ್ಟಿಗರು

    ವಾಮನ ಶೂಟಿಂಗ್ ವೇಳೆ ಆದ ಅನಾಹುತದಿಂದ ಧನ್ವೀರ್ ಗೆ ಬೆರಳುಗಳಿಗೆ ಗಾಯ ಆಗಿದೆ. ಕೈಗೆ ಏಟು ಆಗಿದ್ದರೂ ಸಹ ಧನ್ವೀರ್ ಬ್ರೇಕ್ ಪಡೆದುಕೊಂಡು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಜಯತೀರ್ಥ ಆಕ್ಷನ್ ಕಟ್ ಹೇಳಿರುವ ಕೈವ ಸಿನಿಮಾದ ಶೂಟಿಂಗ್ ಗೆ ಡೇಟ್ ಫಿಕ್ಸ್ ಆಗಿದೆ. ಹೀಗಾಗಿ ಈ ಚಿತ್ರೀಕರಣಕ್ಕೆ ಯಾವುದೇ ತೊಂದರೆ ಆಗಬಾರದು ಅಂತಾ ಧನ್ವೀರ್ ಏಟಾದರು ವಾಮನ ಚಿತ್ರೀಕರಣ ಮುಂದುವರೆಸಿದ್ದಾರೆ.

  • ನಟ ಧನ್ವೀರ್ ಮೇಲೆ ನಿಲ್ಲುತ್ತಿಲ್ಲ ದಾಳಿ : ದಾಳಿ ಹಿಂದೆ ಸ್ಟಾರ್ ನಟರ ಕೈವಾಡ?

    ನಟ ಧನ್ವೀರ್ ಮೇಲೆ ನಿಲ್ಲುತ್ತಿಲ್ಲ ದಾಳಿ : ದಾಳಿ ಹಿಂದೆ ಸ್ಟಾರ್ ನಟರ ಕೈವಾಡ?

    ರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಚಿತ್ರಮಂದಿರದ ಮುಂದೆ ಅಭಿಮಾನಿಗೆ ಹೊಡೆದ ಎನ್ನುವ ಕಾರಣಕ್ಕಾಗಿ ಕನ್ನಡದ ಯುವ ನಟ ಧನ್ವೀರ್ ಗೌಡ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಘಟನೆ ನಡೆದು ಇನ್ನೂ 48 ಗಂಟೆ ಕಳೆದಿಲ್ಲ ಅಷ್ಟರಲ್ಲಿ ಹುಬ್ಬಳ್ಳಿಯಲ್ಲಿ ಯುವಕರ ಗುಂಪೊಂದು ಧನ್ವೀರ್ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ : ಶಬ್ದ ಚಿತ್ರದ ವಿಭಿನ್ನ ಪಾತ್ರದಲ್ಲಿ ಮೇಘನಾ ರಾಜ್ : ನಿರ್ದೇಶಕ ಕಾಂತ ಹೇಳಿದ್ದೇನು?


    ಒಂದು ಗುಂಪು ಧನ್ವೀರ್ ವಿರುದ್ಧ ಮಾತಿನ ದಾಳಿಗೆ ಇಳಿದರೆ, ಮತ್ತೊಂದು ಗುಂಪು ಧನ್ವೀರ್ ರಕ್ಷಣೆ ನಿಂತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ತೆರಳಿದ್ದ ಅವರು, ಅನಿರೀಕ್ಷಿತ ದಾಳಿಗೆ ಹೈರಾಣಾಗಿದ್ದಾರೆ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ


    ಇತ್ತ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಅಪಪ್ರಚಾರ ನಡೆಸುತ್ತಿರುವುದು ಮತ್ತೊಂದು ಸುತ್ತಿನ ಚಕಮಕಿಗೆ ಕಾರಣವಾಗಿದೆ. ಧನ್ವೀರ್ ದಾಳಿಯ ಹಿಂದೆ ಇಬ್ಬರು ಸ್ಟಾರ್ ನಟರ ಕೈವಾಡ ಇದೆಯಂದು, ಈ ಯುವ ನಟನ ಗೆಲುವನ್ನು ಸಹಿಸಲಾಗದ ಆ ನಟರು ಈ ರೀತಿಯಲ್ಲಿ ದಾಳಿ ಮಾಡಿಸುತ್ತಿದ್ದಾರೆ ಎಂಬ ಪೋಸ್ಟ್ ಗಳು ಆಯಾ ಅಭಿಮಾನಿಗಳ ಗ್ರೂಪ್ ನಲ್ಲಿ ಹರಿದಾಡುತ್ತಿವೆ. ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಕೂಡ ಈ ವಿಷಯದಲ್ಲಿ ಒಬ್ಬರಿಗೊಬ್ಬರು ಕೆಸರೆರಿಚುವ ಕೆಲಸಕ್ಕೂ ಮುಂದಾಗಿದ್ದಾರೆ.  ಇದನ್ನೂ ಓದಿ : ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive


    ಈ ಎಲ್ಲ ನಡೆಗಳು ಅಭಿಮಾನಿಗಳ ಅತಿರೇಕ ಮತ್ತು ನಟರ ವರ್ತನೆ ಕುರಿತು ಚಿತ್ರೋದ್ಯಮದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ. ಈ ರೀತಿಯ ಅಪಪ್ರಚಾರ ಮಾಡುವವರು ವಿರುದ್ಧ ಕ್ರಮ ತಗೆದುಕೊಳ್ಳಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅನೇಕರು ಸಲಹೆ ನೀಡಿದ್ದಾರೆ.

  • ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ: ನಟ ಧನ್ವೀರ್

    ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ: ನಟ ಧನ್ವೀರ್

    ಹುಬ್ಬಳ್ಳಿ: ಕೆಲವು ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಟ ಧನ್ವೀರ್ ಆರೋಪಿಸಿದ್ದಾರೆ.

    ಅಭಿಮಾನಿಯ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕೆಲವು ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಮಾಡುತ್ತಿದ್ದಾರೆ ಅಂತ ನನಗೆ ಗೊತ್ತು. ಘಟನೆ ಬಗ್ಗೆ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇನೆ. ಎಲ್ಲದಕ್ಕೂ ಬೆಂಗಳೂರಿನಲ್ಲಿ ಉತ್ತರ ನೀಡುತ್ತೇನೆ ಅಂತ ಯುವ ನಟ ಧನ್ವೀರ್ ಹೇಳಿಕೆ ನೀಡಿದ್ದಾರೆ.

    Dhanveer

    ನಾನು ಸದ್ಯ ಬೈಟು ಲವ್ ಚಿತ್ರದ ಪ್ರಚಾರದಲ್ಲಿದ್ದೇನೆ. ಇದರ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಹಲ್ಲೆಯ ಘಟನೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ಇತ್ತೀಚೆಗಷ್ಟೇ ಧನ್ವೀರ್ ಮತ್ತು ಅವರ ಬೌನ್ಸರ್ ಸೇರಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಸ್ಟಾರ್ ಸುವರ್ಣದಲ್ಲಿ ‘ಜೇನುಗೂಡು’ ಪ್ರೇಮಕಾವ್ಯ ಫೆ.21ರಂದು ತೆರೆಗೆ

    ಗುರುವಾರ (ಫೆ.17) ತಡರಾತ್ರಿ ಬೆಂಗಳೂರಿನ ಎಸ್.ಸಿ ರಸ್ತೆಯ ಅನುಪಮಾ ಚಿತ್ರಮಂದಿರದ ಬಳಿ ಧನ್ವೀರ್ ಮತ್ತು ಅವರ ಅಂಗರಕ್ಷರಿದ್ದರು. ತಡರಾತ್ರಿ ಊಟ ಮುಗಿಸಿಕೊಂಡು ಅದೇ ರಸ್ತೆಯಲ್ಲೇ ಹೊರಟಿದ್ದ ಚಂದ್ರಶೇಖರ್, ನೆಚ್ಚಿನ ನಟನನ್ನು ಕಂಡು ಒಂದು ಫೋಟೋ ಕೇಳಿದ್ದಾರೆ. ಸೆಲ್ಫಿ ಕೊಡಲು ಧನ್ವೀರ್ ನಿರಾಕರಿಸಿದರು ಎನ್ನಲಾಗಿದೆ. ಹಾಗಾಗಿ ಕೋಪಗೊಂಡ ಅಭಿಮಾನಿ ಮತ್ತೆ ಮತ್ತೆ ಫೋಟೋಗಾಗಿ ಪೀಡಿಸಿದ್ದಾನೆ. ಯಾವುದೇ ಕಾರಣಕ್ಕೂ ಅಭಿಮಾನಿಯ ಬೇಡಿಕೆಗೆ ಸ್ಪಂದಿಸದೇ ಇರುವ ಕಾರಣಕ್ಕಾಗಿ ಅಭಿಮಾನಿ ಮತ್ತು ಧನ್ವೀರ್ ಅವರ ಅಂಗರಕ್ಷಕರ ನಡುವೆ ಮಾತಿನ ಸಮರವೇ ನಡೆದು, ಆನಂತರ ಅಭಿಮಾನಿ ಮೇಲೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

  • ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ಇಂದು ತೆರೆ ಕಂಡ ‘ಬೈ ಟು ಲವ್’ ಚಿತ್ರದ ಹೀರೋ ಧನ್ವೀರ್ ಮತ್ತು ಅವರ ಬೌನ್ಸರ್ ಸೇರಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಇದನ್ನೂ ಓದಿ : ಅಪ್ಪು ಹುಟ್ಟುಹಬ್ಬಕ್ಕೆ ಬಿರಿಯಾನಿ ಊಟ, ಹೆಲಿಕಾಪ್ಟರ್ ನಿಂದ ಹೂಮಳೆ : ಇನ್ನೇನಿದೆ ವಿಶೇಷ?


    ಗುರುವಾರ (ಫೆ.17) ತಡರಾತ್ರಿ ಬೆಂಗಳೂರಿನ ಎಸ್.ಸಿ ರಸ್ತೆಯ ಅನುಪಮಾ ಚಿತ್ರಮಂದಿರದ ಬಳಿ ಧನ್ವೀರ್ ಮತ್ತು ಅವರ ಅಂಗರಕ್ಷರಿದ್ದರು. ತಡರಾತ್ರಿ ಊಟ ಮುಗಿಸಿಕೊಂಡು ಅದೇ ರಸ್ತೆಯಲ್ಲೇ ಹೊರಟಿದ್ದ ಚಂದ್ರಶೇಖರ್, ನೆಚ್ಚಿನ ನಟನನ್ನು ಕಂಡು ಒಂದು ಫೋಟೋ ಕೇಳಿದ್ದಾರೆ. ಸೆಲ್ಫಿ ಕೊಡಲು ಧನ್ವೀರ್ ನಿರಾಕರಿಸಿದರು ಎನ್ನಲಾಗಿದೆ. ಹಾಗಾಗಿ ಕೋಪಗೊಂಡ ಅಭಿಮಾನಿ ಮತ್ತೆ ಮತ್ತೆ ಫೋಟೋಗಾಗಿ ಪೀಡಿಸಿದ್ದಾನೆ. ಯಾವುದೇ ಕಾರಣಕ್ಕೂ ಅಭಿಮಾನಿಯ ಬೇಡಿಕೆಗೆ ಸ್ಪಂದಿಸದೇ ಇರುವ ಕಾರಣಕ್ಕಾಗಿ ಅಭಿಮಾನಿ ಮತ್ತು ಧನ್ವೀರ್ ಅವರ ಅಂಗರಕ್ಷಕರ ನಡುವೆ ಮಾತಿನ ಸಮರವೇ ನಡೆದು, ಆನಂತರ ಅಭಿಮಾನಿ ಮೇಲೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ದಾಖಲಾಗಿದೆ. ಇದನ್ನೂ ಓದಿ : ವೈರಲ್ ಆಯ್ತು ಕಿಚ್ಚನ ಮನೆಯ ಸ್ಕೂಟಿ ಟೇಬಲ್


    ಈ ಕುರಿತು ಧನ್ವೀರ್ ಈವರೆಗೂ ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ. ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದ್ದರಿಂದ, ಧನ್ವೀರ್ ಪೊಲೀಸ್ ಠಾಣೆಗೆ ಬರುವ ಅನಿವಾರ್ಯತೆ ಎದುರಾಗಿದೆ.

  • ಮಾಸ್ ಆ್ಯಕ್ಷನ್ ಎಂಟರ್‌ಟೈನರ್‌ ಆಗಿ ಮಿಂಚಲು ಸಜ್ಜಾದ ಶೋಕ್ದಾರ್ ಧನ್ವೀರ್

    ಮಾಸ್ ಆ್ಯಕ್ಷನ್ ಎಂಟರ್‌ಟೈನರ್‌ ಆಗಿ ಮಿಂಚಲು ಸಜ್ಜಾದ ಶೋಕ್ದಾರ್ ಧನ್ವೀರ್

    ಜಾರ್ ಸಿನಿಮಾ ಮೂಲಕ ಚಂದನವನದ ಭವಿಷ್ಯದ ಭರವಸೆಯ ನಾಯಕ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಂಡ ನಟ ಧನ್ವೀರ್. ಸಿಂಪಲ್ ಸುನಿ ಅಖಾಡದಿಂದ ಮಾಸ್ ಅಂಡ್ ಕ್ಲಾಸ್ ಹೀರೋ ಆಗಿ ಲಾಂಚ್ ಆದ ಶೋಕ್ದಾರ್ ಧನ್ವೀರ್ ಮೊದಲ ಸಿನಿಮಾ ಗೆದ್ದರೂ ಸ್ಕ್ರಿಪ್ಟ್ ಆಯ್ಕೆಯಲ್ಲಿ ಸಖತ್ ಚ್ಯುಸಿ. ಸದ್ಯ ಹರಿ ಸಂತೋಷ್ ನಿರ್ದೇಶನದ ಬೈ ಟು ಲವ್ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಧನ್ವೀರ್ ಇದೀಗ ಮೂರನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಬೈ ಟು ಲವ್ ಬಿಡುಗಡೆಗೂ ಮುನ್ನವೇ ಮೂರನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಧನ್ವೀರ್. ಮೂರನೇ ಸಿನಿಮಾ ಟೈಟಲ್ ಏನು, ಧನ್ವೀರ್ ಲುಕ್ ಹೇಗಿರುತ್ತದೆ ಎಂಬ ಪ್ರಶ್ನೆಗಳಿಗೆ ಜನವರಿ 14ರಂದು ಉತ್ತರ ಸಿಗಲಿದೆ. ಸಂಕ್ರಾತಿ ಹಬ್ಬದಂದೇ ತಮ್ಮ ಮುಂದಿನ ಚಿತ್ರದ ಬಗ್ಗೆ ತಿಳಿಸಲಿದ್ದು ಅಂದೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಕನ್ನಡ ಹಾಗೂ ತೆಲುಗು ಸಿನಿಮಾಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿ ಗುರುತಿಸಿಕೊಂಡಿದ್ದ ಶಂಕರ್ ರಾಮನ್ ಧನ್ವೀರ್ ಮೂರನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಮ್ಮ 13 ವರ್ಷದ ಸಿನಿಪಯಣದ ಅನುಭವವನ್ನು ಮೊದಲ ಸಿನಿಮಾಗೆ ಶಂಕರ್ ರಾಮನ್ ಧಾರೆ ಎರೆಯಲು ಸಜ್ಜಾಗಿದ್ದಾರೆ. ಅದಕ್ಕೆಂದೇ ಮಾಸ್ ಕಥೆ ಕೂಡ ಮಾಡಿಕೊಂಡಿದ್ದಾರೆ. ಮಾಫಿಯಾ ಮತ್ತು ಮಾಸ್ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಕಥೆ ಕೇಳಿ ಧನ್ವೀರ್ ಕೂಡ ಥ್ರಿಲ್ ಆಗಿದ್ದು ಶಂಕರ್ ರಾಮನ್ ಜೊತೆ ಕೈ ಜೋಡಿಸಿ ಮೂರನೇ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದನ್ನೂ ಓದಿ: 36 ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್

    ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್ಮೆಂಟ್ ಪ್ರೊಡಕ್ಷನ್ ನಡಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಚೇತನ್ ಕುಮಾರ್ ಗೌಡ ಬಂಡವಾಳ ಹಾಕಿ ಅದ್ದೂರಿಯಾಗಿ ಸಿನಿಮಾ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಉಳಿದಂತೆ ಧನ್ವೀರ್ ಲುಕ್ ಹೇಗಿರಲಿದೆ, ಚಿತ್ರದ ನಾಯಕಿ ಯಾರು, ಚಿತ್ರತಂಡದಲ್ಲಿ ಯಾರೆಲ್ಲ ಇರುತ್ತಾರೆ ಎಂಬ ಪ್ರಶ್ನೆಗಳಿಗೆ ಡಿಟೈಲ್ಸ್ ಜನವರಿ 14ಕ್ಕೆ ಉತ್ತರ ಸಿಗಲಿದೆ. ಧನ್ವೀರ್, ಶ್ರೀಲೀಲಾ ಜೋಡಿಯ ಬೈ ಟು ಲವ್ ಸಿನಿಮಾ ಬಿಡುಗಡೆಯಾಗಬೇಕಿದ್ದು, ಕೊರೊನಾ ಕಾರಣದಿಂದ ಚಿತ್ರತಂಡದಿಂದ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಒಟ್ಟಿನಲ್ಲಿ ವರ್ಷದ ಆರಂಭದಲ್ಲಿಯೇ ಹೊಸ ಸಿನಿಮಾಗೆ ಧನ್ವೀರ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಅವರ ಅಭಿಮಾನಿ ಬಳಗಕ್ಕೆ ಸಂತಸ ತಂದಿದೆ. ಇದನ್ನೂ ಓದಿ: KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್

  • ಬಂಪರ್ ಗೂ ಮೊದಲು ‘ಬೈ2ಲವ್’ – ರೊಮ್ಯಾಂಟಿಕ್ ಹೀರೋ ಆದ ನಟ ಧನ್ವೀರ್

    ಬಂಪರ್ ಗೂ ಮೊದಲು ‘ಬೈ2ಲವ್’ – ರೊಮ್ಯಾಂಟಿಕ್ ಹೀರೋ ಆದ ನಟ ಧನ್ವೀರ್

    ಜಾರ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟ ಧನ್ವೀರ್ ಮೊದಲ ಸಿನಿಮಾದಲ್ಲಿಯೇ ಭರವಸೆಯ ನಟ ಎನಿಸಿಕೊಂಡಿದ್ದರು. ಬಜಾರ್ ನಲ್ಲಿ ಮಾಸ್ ಪ್ರೇಕ್ಷಕ ಬಳಗವನ್ನು ರಂಜಿಸಿದ್ದ ಧನ್ವೀರ್ ಮಾಸ್ ಹೀರೋ ಆಗಿ ಹೊರಹೊಮ್ಮಿದ್ರು. ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಈ ನಟ ಬಂಪರ್ ಸಿನಿಮಾ ಮೂಲಕ ಆಕ್ಷನ್ ಹೀರೋ ಆಗಿ ಮಿಂಚಲು ಸಕಲ ತಯಾರಿ ಕೂಡ ನಡೆಸಿದ್ದರು. ಈಗ ಆಕ್ಷನ್ ಸಿನಿಮಾಗೂ ಮುನ್ನ ರೊಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ ಧನ್ವೀರ್.

    ಹೌದು, ಬಂಪರ್ ಸಿನಿಮಾ ನಿರ್ದೇಶಕ ಹರಿ ಸಂತೋಷ್ ಧನ್ವೀರ್ ರನ್ನು ರೊಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ತರಲು ಹೊರಟಿದ್ದು, ತಾವೇ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ‘ಬೈ2ಲವ್’ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಆದ್ದರಿಂದ ಬಂಪರ್ ಸಿನಿಮಾಗೂ ಮೊದಲು ಧನ್ವೀರ್ ಬೈ 2 ಲವ್ ಪ್ರೇಮ್ ಕಹಾನಿ ಹೇಳಲು ತೆರೆ ಮೇಲೆ ಬರೋದು ಕನ್ಪರ್ಮ್ ಆಗಿದೆ.

    ಚಿತ್ರದಲ್ಲಿ ಧನ್ವೀರ್ ಜೊತೆ ಕಿಸ್ ಸಿನಿಮಾ ಖ್ಯಾತಿಯ ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಭರಾಟೆ ಚಿತ್ರದಲ್ಲಿ ಶ್ರೀಮುರಳಿ ಜೊತೆ ನಾಯಕಿಯಾಗಿ ನಟಿಸಿದ್ದ ಮುದ್ದು ಮುಖದ ಚೆಲುವೆ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಹೊಸ ಚಿತ್ರ ದುಬಾರಿಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ‘ಬೈ2ಲವ್’ ಸಿನಿಮಾದಲ್ಲಿ ಧನ್ವೀರ್ ಗೆ ಜೊತೆಯಾಗಲಿದ್ದಾರೆ.

    ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಜನವರಿ ಮೊದಲ ವಾರದಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ `ಬೈ2ಲವ್’ ಟೀಂ. ಕೆವಿಎನ್ ಪ್ರೊಡಕ್ಷನ್ ಬೈ2ಲವ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಈ ರೊಮ್ಯಾಂಟಿಕ್ ಲವ್ ಸಬ್ಜೆಕ್ಟ್ ಸಿನಿಮಾಗಿದೆ.

  • ನಟ ಧನ್ವೀರ್ ವಿರುದ್ಧ ಎಫ್‍ಐಆರ್ ದಾಖಲು

    ನಟ ಧನ್ವೀರ್ ವಿರುದ್ಧ ಎಫ್‍ಐಆರ್ ದಾಖಲು

    ಚಾಮರಾಜನಗರ: ಬಜಾರ್ ಸಿನಿಮಾ ಖ್ಯಾತಿಯ ನಟ ಧನ್ವೀರ್ ವಿರುದ್ಧ ಬಂಡೀಪುರದಲ್ಲಿ ಎಫ್‍ಐಆರ್ ದಾಖಲಾಗಿದೆ.

    ಬಂಡೀಪುರದ ಜಿ.ಎಸ್ ಬೆಟ್ಟದಲ್ಲಿ ರಾತ್ರಿ ಸಫಾರಿ ನಡೆಸಿದ ಆರೋಪದ ಮೇಲೆ ಧನ್ವೀರ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಿಷೇದಿತ ಪ್ರದೇಶದೊಳಗೆ ಅತಿಕ್ರಮಣ ಪ್ರವೇಶ ಮಾಡಿದ ಆರೋಪದ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 27/1ಅಡಿ ಪ್ರಕರಣ ದಾಖಲಾಗಿದೆ. ಇಂದು ಮೆಲುಕಾಮನಹಳ್ಳಿ ಆರ್.ಎಫ್.ಓ ಕಛೇರಿಗೆ ಧನ್ವೀರ್ ವಿಚಾರಣೆಗೆ ಹಾಜರಾಗಿದ್ದರು.

    ಇಂದು ವಿಚಾರಣೆಯ ವೇಳೆ ಅರಣ್ಯ ಇಲಾಖೆ ಅಧಿಕಾರಿ ನವೀನ್ ಕುಮಾರ್ ಕೇಳಿದ ರಾತ್ರಿ ಸಫಾರಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಧನ್ವೀರ್, ನಾನು ಸಂಜೆ ಹೊತ್ತಿಗೆ ಕಾಡಿನಿಂದ ಹೊರಗಿದ್ದೆ. ಅರಣ್ಯ ಇಲಾಖೆಯ ವಾಹನದಲ್ಲಿ ಸಫಾರಿ ಟಿಕೆಟ್ ಪಡೆದು ತೆರಳಿದ್ದು, ನೈಟ್ ಸಫಾರಿ ಮಾಡಿಲ್ಲ. ತಪ್ಪಾಗಿ ನೈಟ್ ಸಫಾರಿ ಎಂದು ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ ಎನ್ನಲಾಗಿತ್ತು.

    ಶುಕ್ರವಾರ ನಟ ಧನ್ವೀರ್ ನೈಟ್ ಸಫಾರಿ ಮಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಂಡೀಪುರ ಸಿಎಫ್‍ಒ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಧನ್ವೀರ್ ತೆಗೆದ ಫೋಟೋ, ವಿಡಿಯೋಗಳ ಸಮಯವನ್ನು ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ವೈರಲ್ ಆಗಿದ್ದ ವಿಡಿಯೋ, ಸ್ಕ್ರೀನ್ ಶಾಟ್ ಗಳನ್ನು ಅರಣ್ಯ ಇಲಾಖೆಗೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

    ವಿಚಾರಣೆಯ ನಂತರ ಮಾತನಾಡಿದ್ದ ಆರ್.ಎಫ್.ಒ ನವೀನ್ ಕುಮಾರ್ ಧನ್ವೀರ್ ಬಂಡೀಪುರದಲ್ಲಿ ನೈಟ್ ಸಫಾರಿ ಮಾಡಿಲ್ಲ ಅಂತ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಲ್ಲ ಅಂತ ತಿಳಿಸಿದ್ದರು.

  • ತಪ್ಪಾಗಿ ನೈಟ್ ಸಫಾರಿ ಅಂತ ಪೋಸ್ಟ್ ಮಾಡಿದ್ದೆ – ನಟ ಧನ್ವೀರ್ ಸ್ಪಷ್ಟನೆ

    ತಪ್ಪಾಗಿ ನೈಟ್ ಸಫಾರಿ ಅಂತ ಪೋಸ್ಟ್ ಮಾಡಿದ್ದೆ – ನಟ ಧನ್ವೀರ್ ಸ್ಪಷ್ಟನೆ

    ಚಾಮರಾಜನಗರ: ನಾನು ರಾತ್ರಿ ಸಫಾರಿ ಮಾಡಿಲ್ಲ. ತಪ್ಪಾಗಿ ನೈಟ್ ಸಫಾರಿ ಅಂತ ಪೋಸ್ಟ್ ಮಾಡಿದ್ದೆ ಎಂದು ನಟ ಧನ್ವೀರ್ ಸ್ಪಷ್ಟನೆ ನೀಡಿದ್ದಾರೆ.

    ಕಾನೂನು ಬಾಹಿರವಾಗಿ ರಾತ್ರಿ ಸಫಾರಿ ಮಾಡಿದ ಆರೋಪ ಹೊತ್ತಿರುವ ಧನ್ವೀರ್ ಇಂದು ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ವಿಚಾರಣೆಯ ವೇಳೆ ಅರಣ್ಯ ಇಲಾಖೆ ಅಧಿಕಾರಿ ನವೀನ್ ಕುಮಾರ್ ಕೇಳಿದ ರಾತ್ರಿ ಸಫಾರಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಧನ್ವೀರ್, ನಾನು ಸಂಜೆ ಹೊತ್ತಿಗೆ ಕಾಡಿನಿಂದ ಹೊರಗಿದ್ದೆ. ಅರಣ್ಯ ಇಲಾಖೆಯ ವಾಹನದಲ್ಲಿ ಸಫಾರಿ ಟಿಕೆಟ್ ಪಡೆದು ತೆರಳಿದ್ದು, ನೈಟ್ ಸಫಾರಿ ಮಾಡಿಲ್ಲ. ತಪ್ಪಾಗಿ ನೈಟ್ ಸಫಾರಿ ಎಂದು ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ.

    ನಟ ತೆಗೆದ ಫೋಟೋ, ವಿಡಿಯೋಗಳ ಸಮಯವನ್ನು ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ವೈರಲ್ ಆಗಿದ್ದ ವಿಡಿಯೋ, ಸ್ಕ್ರೀನ್ ಶಾಟ್ ಗಳನ್ನು ಅರಣ್ಯ ಇಲಾಖೆಗೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ವಿಚಾರಣೆಯ ವರದಿಯನ್ನು ಸಲ್ಲಿಸಿದ ಬಳಿಕ ಅರಣ್ಯ ಇಲಾಖೆ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಬಂಡೀಪುರದಲ್ಲಿ ನಟ ಧನ್ವೀರ್ ರಾತ್ರಿ ಸಫಾರಿ

    ಶುಕ್ರವಾರ ನಟ ಧನ್ವೀರ್ ನೈಟ್ ಸಫಾರಿ ಮಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಂಡೀಪುರ ಸಿಎಫ್‍ಒ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ವಿಚಾರಣೆಯ ನಂತರ ಧನ್ವೀರ್ ಬಂಡೀಪುರದಲ್ಲಿ ನೈಟ್ ಸಫಾರಿ ಮಾಡಿಲ್ಲ ಅಂತ ಹೇಳಿದ್ದಾರೆ ಎಂದು ಆರ್ ಎಫ್‍ಒ ನವೀನ್ ಕುಮಾರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಲ್ಲ ಅಂತ ತಿಳಿಸಿದ್ದಾರೆ.