Tag: Dhanveer Gowda

  • ಆರೋಗ್ಯ ತಪಾಸಣೆಗೆ ಬಂದ ದರ್ಶನ್- ನಟನನ್ನು ನೋಡಲು ಮುಗಿಬಿದ್ದ ಫ್ಯಾನ್ಸ್‌

    ಆರೋಗ್ಯ ತಪಾಸಣೆಗೆ ಬಂದ ದರ್ಶನ್- ನಟನನ್ನು ನೋಡಲು ಮುಗಿಬಿದ್ದ ಫ್ಯಾನ್ಸ್‌

    ರೇಣುಕಾಸ್ವಾಮಿ ಕೊಲೆ (Renukaswamu Murder Case) ಆರೋಪಿ ದರ್ಶನ್ (Darshan) ಅವರು ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಬಂದಿದ್ದಾರೆ. ಬೆನ್ನು ನೋವಿನ ಸಂಬಂಧ ವೈದ್ಯರನ್ನು ನಟ ಭೇಟಿಯಾಗಿದ್ದಾರೆ. ಇದನ್ನೂ ಓದಿ:ಭಗವಂತ ನನ್ನಷ್ಟೂ ಆಯಸ್ಸನ್ನ ಶಿವಣ್ಣನಿಗೇ ಕೊಡಲಿ: ಧ್ರುವ ಸರ್ಜಾ

    ಇಂದು (ಡಿ.24) ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ದರ್ಶನ್ ಆರೋಗ್ಯ ತಪಾಸಣೆ ಆಗಮಿಸಿದ್ದಾರೆ. ಬೆನ್ನು ನೋವಿನ ಹಿನ್ನೆಲೆ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ, ದರ್ಶನ್‌ಗೆ ಧನ್ವೀರ್ ಸಾಥ್ ನೀಡಿದ್ದಾರೆ. ಈ ವೇಳೆ, ದರ್ಶನ್‌ ನೋಡಲು ಅಪಾರ ಸಂಖ್ಯೆಯಲ್ಲಿ ಫ್ಯಾನ್ಸ್‌ ಜಮಾಯಿಸಿದ್ದಾರೆ.

    ಅಂದಹಾಗೆ, ನಿನ್ನೆ (ಡಿ.23) ವಿಜಯಲಕ್ಷ್ಮಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ದರ್ಶನ್‌ಗೆ ಬೇಲ್ ಸಿಕ್ಕ ಹಿನ್ನೆಲೆ ಹರಕೆ ತೀರಿಸಿದರು.

  • ಉಸಿರಿರೋವರೆಗೂ ಇರುತ್ತೀವಿ ನಿಮ್ಮ ಮುಂದೆ: ದರ್ಶನ್‌ಗೆ ಬೇಲ್‌ಗೆ ಧನ್ವೀರ್‌ ರಿಯಾಕ್ಷನ್

    ಉಸಿರಿರೋವರೆಗೂ ಇರುತ್ತೀವಿ ನಿಮ್ಮ ಮುಂದೆ: ದರ್ಶನ್‌ಗೆ ಬೇಲ್‌ಗೆ ಧನ್ವೀರ್‌ ರಿಯಾಕ್ಷನ್

    ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ. ಈ ಬೆನ್ನಲ್ಲೇ ನಟ ಧನ್ವೀರ್ ಗೌಡ ‌(Dhanveerah Gowda) ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:It’s Too Much, ಬೆಡ್‌ ರೂಮ್‌ವರೆಗೆ ಬಂದಿದ್ದು ಸರಿಯಲ್ಲ – ಪೊಲೀಸರ ವಿರುದ್ಧ ಅಲ್ಲು ಅರ್ಜುನ್‌ ಗರಂ

    ದರ್ಶನ್‌ಗೆ ಜಾಮೀನು ಸಿಕ್ಕಿರೋದು ಆಪ್ತ ಧನ್ವೀರ್‌ಗೆ ಖುಷಿ ಕೊಟ್ಟಿದೆ. ಉಸಿರಿರೋವರೆಗೂ ಇರುತ್ತೀವಿ ನಿಮ್ಮ ಮುಂದೆ ಎಂದು ಇನ್ಸ್ಟಾಗ್ರಾಂ ನಟ ಪೋಸ್ಟ್ ಮಾಡಿದ್ದಾರೆ.

  • ತಪ್ಪಾಗಿದ್ರೆ ಶಿಕ್ಷೆಯಾಗುತ್ತದೆ, ಕಾನೂನಿಗಿಂತ ಯಾರು ದೊಡ್ಡವರಿಲ್ಲ: ಧನ್ವೀರ್‌ ಗೌಡ

    ತಪ್ಪಾಗಿದ್ರೆ ಶಿಕ್ಷೆಯಾಗುತ್ತದೆ, ಕಾನೂನಿಗಿಂತ ಯಾರು ದೊಡ್ಡವರಿಲ್ಲ: ಧನ್ವೀರ್‌ ಗೌಡ

    ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ಅರೆಸ್ಟ್‌ ಆಗಿರುವ ದರ್ಶನ್‌ರನ್ನು (Darshan) ಇತ್ತೀಚೆಗೆ ರಕ್ಷಿತಾ ಪ್ರೇಮ್ ದಂಪತಿ, ವಿನೋದ್ ಪ್ರಭಾಕರ್ ಭೇಟಿಯಾದ ಬೆನ್ನಲ್ಲೇ ಈಗ ನಟ ಧನ್ವೀರ್ ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿ ಭೇಟಿಯಾಗಿದ್ದಾರೆ. ಬಳಿಕ ‘ಕೈವ’ ನಟ ಧನ್ವೀರ್ (Dhanveer Gowda) ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಮಾಲಿಕನಾದ ಶಿವಣ್ಣ- ‘ಉತ್ತರಕಾಂಡ’ ಚಿತ್ರದ ಫಸ್ಟ್‌ ಲುಕ್‌ ಔಟ್‌

    ದರ್ಶನ್ ನನಗೆ ಯಾವಾಗಲೂ ಅಣ್ಣ ಅಂತಾನೇ ಹೇಳ್ತೀನಿ. ಅವರ ಅಭಿಮಾನಿಗಳು ಯಾರು ಆತಂಕಕ್ಕೆ ಒಳಗಾಗಬಾರದು. ನಾನು ಎಲ್ಲಿಯೂ ಕೂಡ ಮಾತನಾಡುತ್ತಿಲ್ಲ ಅಂತ ಎಲ್ಲರೂ ಹೇಳ್ತಿದ್ದರು. ಆದರೆ ಇದು ಮಾತನಾಡುವ ಸಂದರ್ಭವಲ್ಲ. ತನಿಖೆ ನಡೆಯುತ್ತಿರುವ ವೇಳೆ, ನಾವು ಮಾತನಾಡುವುದರಿಂದ ಎಲ್ಲವೂ ಸರಿ ಹೋಗೋದಿಲ್ಲ ಅಂತ ಗೊತ್ತಿತ್ತು ಎಂದು ಧನ್ವೀರ್ ಗೌಡ ಮಾತನಾಡಿದ್ದಾರೆ.

    ಎಂದಿಗೂ ಕೂಡ ದರ್ಶನ್ ಅಣ್ಣನನ್ನು ನಾನು ಅಣ್ಣ ಅಂತ ಹೇಳಲು ಹೆದರಿಕೆಯಿಲ್ಲ ಹಿಂಜರಿಯೋದಿಲ್ಲ ಎಂದಿದ್ದಾರೆ. ಚಾಮುಂಡೇಶ್ವರಿ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದಾಗಲಿದೆ ಎಂದು ಮಾತನಾಡಿದ್ದಾರೆ. ಕಾನೂನಿಗಿಂತ ಯಾರು ದೊಡ್ಡವರಿಲ್ಲ. ತಪ್ಪಾಗಿದ್ರೆ ಶಿಕ್ಷೆ ಆಗೇ ಆಗುತ್ತದೆ ಎಂದು ಪ್ರಕರಣದ ಬಗ್ಗೆ ಧನ್ವೀರ್ ಮಾತನಾಡಿದ್ದಾರೆ. ಇದನ್ನೂ ಓದಿ:ಜು.16ರಂದು ಸಿಗಲಿದೆ ‌’ಮ್ಯಾಕ್ಸ್‌’ ಚಿತ್ರದ ಅಪ್‌ಡೇಟ್‌- ಕಿಚ್ಚ ಕೊಟ್ರು ಗುಡ್‌ ನ್ಯೂಸ್

    ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಡಿ. ಸಿನಿಮಾ ಮಾಡು ಶೂಟಿಂಗ್ ಕಡೆ ನೋಡು ಅಂತ ದರ್ಶನ್ ನನಗೆ ಹೇಳಿದರು. ಅಭಿಮಾನಿಗಳಿಗೆ ಧೈರ್ಯ ಹೇಳು ಅಂತ ನನಗೆ ತಿಳಿಸಿದರು. ಅವರನ್ನು ಇಂತಹ ಜಾಗದಲ್ಲಿ ನೋಡುತ್ತೇವೆ ಅಂತ ಅಂದುಕೊಂಡಿರಲಿಲ್ಲ ಬೇಜಾರಾಗುತ್ತೆ ಎಂದು ಧನ್ವೀರ್ ಮಾತನಾಡಿದ್ದಾರೆ.

    ಅಂದಹಾಗೆ, ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಕಳೆದ ವಾರ ಧನ್ವೀರ್‌ಗೆ ದರ್ಶನ್‌ರನ್ನು ಭೇಟಿಯಾಗುವ ಅವಕಾಶ ಸಿಕ್ಕಿರಲಿಲ್ಲ.

  • ದರ್ಶನ್‌ ಭೇಟಿಗೆ ಅವಕಾಶ ಸಿಗದೇ ವಾಪಸ್‌ ಆದ ಧನ್ವೀರ್‌

    ದರ್ಶನ್‌ ಭೇಟಿಗೆ ಅವಕಾಶ ಸಿಗದೇ ವಾಪಸ್‌ ಆದ ಧನ್ವೀರ್‌

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ದರ್ಶನ್‌ ಅರೆಸ್ಟ್‌ ಆಗಿದ್ದಾರೆ. ಈ ಬೆನ್ನಲ್ಲೇ ನಟನನ್ನು ನೋಡಲು ಇದೀಗ ಒಬ್ಬೊಬ್ಬರೇ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಿರುವಾಗ ಇಂದು (ಜು.2) ದರ್ಶನ್‌ ಭೇಟಿಗೆ ಅವಕಾಶ ಸಿಗದೇ ಧನ್ವೀರ್‌ ವಾಪಸ್‌ ಆಗಿದ್ದಾರೆ.

    ಇಂದು ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟ ಧನ್ವೀರ್‌ ಅವರು ದರ್ಶನ್‌ರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು. ನಟ ಬಂದಿರುವ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗಾಗಲೇ ಎರಡು ವಿಸಿಟ್‌ ಆಗಿರುವ ಹಿನ್ನಲೆ ಧನ್ವೀರ್‌ಗೆ ಸೋಮವಾರ ಬರಲು ಜೈಲಿನ ಸಿಬ್ಬಂದಿಗಳ ಮೂಲಕ ದರ್ಶನ್ ಸೂಚಿಸಿದ್ದಾರೆ. ಭೇಟಿಗೆ ಅವಕಾಶ ಸಿಗದೇ ನಟ ವಾಪಸ್‌ ಆಗಿದ್ದಾರೆ.

    ಆದರೆ ಮಾಧ್ಯಮಕ್ಕೆ ಜಾಸ್ತಿ ಹೊತ್ತು ಮಾತನಾಡಲು ಆಗಲಿಲ್ಲ. ದರ್ಶನ್ ಬೇಜಾರಿನಲ್ಲಿದ್ದಾರೆ ಎಂದು ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ದುಬೈ ಮೂಲದ ಯೂಟ್ಯೂಬರ್ ಜೊತೆ ನಟಿ ಸುನೈನಾ ನಿಶ್ಚಿತಾರ್ಥ?

    ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಅದರಂತೆ ಜು.1ರಂದು ದರ್ಶನ್‌ರನ್ನು ಅವರ ಕುಟುಂಬ ಭೇಟಿ ಮಾಡಿದೆ. ಬಳಿಕ ಕುಟುಂಬದ ಆಪ್ತರೊಬ್ಬರು ನಟನನ್ನು ಭೇಟಿಯಾಗಿ ಬಂದಿದ್ದಾರೆ.

  • ದರ್ಶನ್ ಭೇಟಿಗೆ ಜೈಲಿಗೆ ಬಂದ ಧನ್ವೀರ್ ಗೌಡ

    ದರ್ಶನ್ ಭೇಟಿಗೆ ಜೈಲಿಗೆ ಬಂದ ಧನ್ವೀರ್ ಗೌಡ

    ನ್ನಡದ ಖ್ಯಾತ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಅರೆಸ್ಟ್ ಆಗಿದ್ದಾರೆ. ದರ್ಶನ್‌ರನ್ನು ಅವರ ಕುಟುಂಬ ಜೈಲಿಗೆ ಬಂದು ಭೇಟಿ ಮಾಡಿದ ಬೆನ್ನಲ್ಲೇ ಈಗ ನಟ ಧನ್ವೀರ್ ಗೌಡ ಭೇಟಿ ಮಾಡಲು ಬಂದಿದ್ದಾರೆ. ಇದನ್ನೂ ಓದಿ:ಮಾತೃ ಭಾಷೆಯಲ್ಲಿ ಕೊಡಗಿನ ಜನರಿಗೆ ರಶ್ಮಿಕಾ ಮಂದಣ್ಣ ಮನವಿ

    ನಟನನ್ನು ನೋಡೋದಕ್ಕಾಗಿ ಜೈಲಿನ ಬಳಿ ಧನ್ವೀರ್ (Dhanveer Gowda) ಕಾಯ್ತಿದ್ದಾರೆ. ದರ್ಶನ್ ಓಕೆ ಅಂದರೆ ಮಾತ್ರ ಮಾತನಾಡಿಸಲು ಧನ್ವೀರ್‌ಗೆ ಅವಕಾಶ ಸಿಗಲಿದೆ. ನಟನ ಆಗಮನ ಬಗ್ಗೆ ದರ್ಶನ್‌ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ನಟನ ಭೇಟಿಗೆ ಅಧಿಕಾರಿಗಳು ಅನುಮತಿ ನೀಡಿಲ್ಲ.

    ಅಂದಹಾಗೆ, ಜು.1ರಂದು ಬೆಳಗ್ಗೆ ದರ್ಶನ್ ತಾಯಿ ಮೀನಾ, ತಮ್ಮ ದಿನಕರ್, ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಜೈಲಿಗೆ ಮಾಧ್ಯಮಗಳ ಕಣ್ಣು ತಪ್ಪಿಸಲು ಖಾಸಗಿ ವಾಹನದಲ್ಲಿ ಬಂದ ದರ್ಶನ್ ಕುಟುಂಬ ಜೈಲಿನ ಒಳಗೆ ಹೋಗಿ ಭೇಟಿ ಮಾಡಿದೆ. ಮಗನ ಸ್ಥಿತಿ ನೋಡ್ತಿದ್ದಂತೆ ತಾಯಿ ಮೀನಾ ತೂಗುದೀಪ್ ಭಾವುಕರಾಗಿದ್ದಾರೆ. ದರ್ಶನ್‌ಗೆ ಸಹೋದರ ದಿನಕರ್ ಧೈರ್ಯ ತುಂಬಿದ್ದಾರೆ. ಮುಂದಿನ ಕಾನೂನು ಹೋರಾಟಕ್ಕೆ ಕುಟುಂಬಸ್ಥರ ಜೊತೆ ಚರ್ಚಿಸಿದ್ದಾರೆ.

    ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಬೇಟಿ ಮಾಡಲು ಅವಕಾಶ ಇರುತ್ತದೆ. ಕಳೆದ ವಾರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಭೇಟಿ ಮಾಡಿದ್ದರು. ನಂತರ ನಟ ವಿನೋದ್ ಪ್ರಭಾಕರ್, ರಕ್ಷಿತಾ ಪ್ರೇಮ್ ದಂಪತಿ ಭೇಟಿ ಮಾಡಿ ಮಾತನಾಡಿದ್ದರು.

  • ‘ವಾಮನ’ ಇಂಟ್ಯೂಡಕ್ಷನ್ ಸಾಂಗ್‌ನಲ್ಲಿ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ ಶೋಕ್ದಾರ್ ಧನ್ವೀರ್‌

    ‘ವಾಮನ’ ಇಂಟ್ಯೂಡಕ್ಷನ್ ಸಾಂಗ್‌ನಲ್ಲಿ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ ಶೋಕ್ದಾರ್ ಧನ್ವೀರ್‌

    ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ (Dhanveer Gowda) ನಟನೆಯ ಬಹುನಿರೀಕ್ಷಿತ ‘ವಾಮನ’ (Vamana) ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವಾ..ವಾ..ವಾ..ವಾಮನ ಅಂತಾ ಬಜಾರ್ ಹುಡ್ಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಸಾಹಿತ್ಯದ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದು, ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ನಾಯಕನ ಇಂಟ್ಯೂಡಕ್ಷನ್ ಹಾಡಿಗೆ ಧನ್ವೀರ್ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ್ದಾರೆ.

    ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ (Chethan Gowda) ಅದ್ಧೂರಿಯಾಗಿ ನಿರ್ಮಿಸಿರುವ ‘ವಾಮನʼ (Vamana) ಸಿನಿಮಾವನ್ನು ಯುವ ನಿರ್ದೇಶಕ ಶಂಕರ್ ರಾಮನ್ ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ:‘ಜೈಲರ್’ಗೆ ಸೆನ್ಸಾರ್ ಕಟ್, ರಜನಿ-ಶಿವಣ್ಣ ಸೀನ್‌ಗೆ ಬಿತ್ತಾ ಕತ್ತರಿ?

    ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, ಕಥೆಯಲ್ಲಿ ಬರುವ ಪಾತ್ರಗಳಿಗಷ್ಟೇ ಕೌಂಟರ್ ಕೊಡುತ್ತಿರುವುದು. ಬೇರೆ ಯಾರಿಗೂ ಅಲ್ಲ. ನಾಯಕ ಗುಣ ಪಾತ್ರ ನೀರು ಇದ್ದಾಗೆ. ರಾವಣ, ದುರ್ಯೋಧನ ಇಬ್ಬರನ್ನೂ ಆವರಿಸಿಕೊಳ್ಳುತ್ತಾರೆ. ವಾಮನನ್ನು ಆವರಿಸಿಕೊಳ್ಳುತ್ತಾರೆ. ಸಮಯ ಬಂದಾಗ ದಶಾವತಾರದಲ್ಲಿರುವ ಪಾತ್ರವನ್ನು ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ 4 ಆಕ್ಷನ್ ಸೀಕ್ವೆನ್ಸ್ ಇದೆ. ಮಾಸ್ ಆಡಿಯನ್ಸ್‌ಗೆ ಏನ್ ಬೇಕು ಅದು ಇದೆ. ಕ್ಲಾಸ್ ಆಡಿಯನ್ಸ್ ಬೇಕಾದ ಕಥೆಯು ಇದೆ ಎಂದರು.

    ನಾಯಕ ಧನ್ವೀರ್ ಮಾತನಾಡಿ, ವಾಮನ ಇದು ನನ್ನ ಮೂರನೇ ಸಿನಿಮಾ. ಇಂದು ಟೈಟಲ್ ಸಾಂಗ್ ರಿಲೀಸ್ ಮಾಡಿದ್ದೇವೆ. ಈ ತರ ಸಾಂಗ್ ನ್ನ ನನ್ನ ಹಿಂದಿನ ಸಿನಿಮಾಗಳಲ್ಲಿ ಎಕ್ಸ್ ಪೆಕ್ಟ್ ಮಾಡಿದ್ದೆ. ಆದರೆ ಚೇತನ್ ಸರ್ ನನ್ನ ಹಿಂದೆ ಇಟ್ಟುಬಿಟ್ಟಿದ್ದರು. ಹೋದ ಸಿನಿಮಾದಲ್ಲಿಯೇ ಇದು ಆಗಬೇಕಿತ್ತು. ಅವರ ಬರವಣಿಗೆಗೆ ನಾನು ದೊಡ್ಡ ಫ್ಯಾನ್. ಅವರ ಪದ ಜೋಡಣೆ ಎಲ್ಲಾ ಚೆನ್ನಾಗಿರುತ್ತದೆ. ಸಿನಿಮಾದಲ್ಲಿ ಒಳ್ಳೆ ಕಂಟೆಂಟ್ ಇದೆ. ಇವತ್ತಿನಿಂದ ನಮ್ಮ ಸಿನಿಮಾ ಪ್ರಮೋಷನ್ ಶುರುವಾಗಿದೆ. ನಿಮ್ಮ ಸಪೋರ್ಟ್ ಇರಲಿ ಎಂದರು.

    ನಾಯಕಿ ರೀಷ್ಮಾ ನಾಣಯ್ಯ (Reeshma Nanaiah) ಮಾತಾನಾಡಿ, ವಾಮನ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಇದೆಲ್ಲ ಕ್ರೆಡಿಟ್ ನಿರ್ದೇಶಕರು, ಚೇತನ್ ಸರ್ ಸಾಹಿತ್ಯ, ಶಶಾಂಕ್ ವಾಯ್ಸ್, ಅಜನೀಶ್ ಸಂಗೀತಕ್ಕೆ ಸಲ್ಲಬೇಕು. ಈ ಸಿನಿಮಾದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಬಂದಿದೆ. ನನ್ನ ಪಾತ್ರದ ಹೆಸರು ನಂದಿನಿ. ಸಿಂಪಲ್ ಆದ ಮುದ್ದಾದ ಕ್ಯಾರೆಕ್ಟರ್. ಲವ್ ನಲ್ಲಿಯೇ ಫೈಟ್ ಇದೆ ಎಂದರು.

    ನಿರ್ಮಾಪಕ ಚೇತನ್ ಗೌಡ ಮಾತನಾಡಿ, ವಾಮನ ಸಿನಿಮಾದಲ್ಲಿ ನಮ್ಮ ಶ್ರಮ ಕಡಿಮೆ. ನಿರ್ದೇಶಕರು, ಆಕ್ಟರ್ಸ್, ಟೆಕ್ನಿಷಿಯನ್ಸ್ ಎಲ್ಲಿಯೂ ಶ್ರಮ ಕೊಡಲಿಲ್ಲ. ನಾನು ಶೂಟಿಂಗ್ ಸ್ಪಾರ್ಟ್‌ಗೆ ಹೋಗಿರುವುದು ಕೇವಲ ನಾಲ್ಕು ದಿನವಷ್ಟೇ. ಅವರ ಮನೆ ಸಿನಿಮಾ ಎನ್ನುವಂತೆ ಎಲ್ಲರು ಕೆಲಸ ಮಾಡಿದ್ದಾರೆ. ಒಳ್ಳೆಯ ಸಿನಿಮಾ ಮಾಡಬೇಕೆಂದು ಬಂದಿದ್ದೆ. ಒಳ್ಳೆಯ ಸಿನಿಮಾ ಆಗಿದೆ. ಕನ್ನಡ ಸಿನಿಮಾರಂಗಕ್ಕೆ ನಮ್ಮೊಂದು ಕೊಡುಗೆ ಇರಲಿ ಎಂದು ಮಾಡಿದ್ದೇವೆ. ಕೈ ಹಿಡಿದು ಆಶೀರ್ವದಿಸಿ ಎಂದರು.

    ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ (Reeshma Nanaiah) ಅಭಿನಯಿಸಿದ್ದು, ತಾರಾ, ಸಂಪತ್, ಆದಿತ್ಯ ಮೆನನ್, ಶಿವರಾಜ್ ಕೆಆರ್ ಪೇಟೆ, ಅವಿನಾಶ್, ಅಚ್ಯುತ್ ಕುಮಾರ್, ಕಾಕ್ರೊಚ್ ಸುಧಿ, ಭೂಷಣ್ ಮುಂತಾದವು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧನ್ವೀರ್ ಗೌಡ ನಟನೆಯ ‘ವಾಮನ’ ಸಿನಿಮಾದ ಶೂಟಿಂಗ್ ಮುಕ್ತಾಯ

    ಧನ್ವೀರ್ ಗೌಡ ನಟನೆಯ ‘ವಾಮನ’ ಸಿನಿಮಾದ ಶೂಟಿಂಗ್ ಮುಕ್ತಾಯ

    ಶೋಕ್ದಾರ್ ಧನ್ವೀರ್ ಗೌಡ ನಟಿಸುತ್ತಿರುವ ಬಹುನಿರೀಕ್ಷಿತ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ‘ವಾಮನ’. ಟೀಸರ್ ಮೂಲಕ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಈ ಚಿತ್ರಕ್ಕೆ ಶಂಕರ್ ರಾಮನ್ ಆಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ವಾಮನ’ ಸಿನಿಮಾತಂಡ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆದಿದೆ.

    ನಿರ್ದೇಶಕ ಶಂಕರ್ ರಾಮನ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಹಲವು ಸಿನಿಮಾದಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದೇನೆ. ‘ವಾಮನ’ ಸಿನಿಮಾ ಸತತ ಒಂದು ವರ್ಷದ ಜರ್ನಿ. ಇವತ್ತು ಹೀರೋ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯಲಾಗ್ತಿದೆ ಈ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆಯುತ್ತಿದ್ದೇವೆ.  72 ದಿನಗಳ ಕಾಲ ಶೂಟ್ ಮಾಡಿದ್ದೇವೆ. ಕಲಾವಿದರು, ತಾಂತ್ರಿಕ ಬಳಗ ತುಂಬಾ ಸಪೋರ್ಟಿವ್ ಆಗಿದ್ದಾರೆ. ಪಕ್ಕಾ ಕಮರ್ಶಿಯಲ್ ಸಿನಿಮಾವಿದು. ಪ್ರತಿಯೊಬ್ಬನಲ್ಲೂ ಒಬ್ಬ ಒಳ್ಳೆಯವನು ಕೆಟ್ಟವನು ಇರ್ತಾನೆ. ಒಳ್ಳೆಯವನಾಗಬೇಕಾ..? ಕೆಟ್ಟವನಾಗಬೇಕಾ ಎನ್ನೋದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಒಳ್ಳೆಯವನು, ಕೆಟ್ಟದರ ನಡುವಿನಲ್ಲಿ ಭಿನ್ನತೆಯಲ್ಲಿ ಆತ ಯಾರೇ ಆಗಿದ್ರು ಆತನಿಗೆ ಸಲ್ಲಬೇಕಾದ ಶಿಕ್ಷೆ ಅಥವಾ ಸೆಟಲ್ ಮೆಂಟ್ ಸಿಕ್ಕೇ ಸಿಗುತ್ತೆ ಅನ್ನೋದನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಸಿನಿಮಾವನ್ನು ಇಲ್ಲಿವರೆಗೆ ಸುಸೂತ್ರವಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದ್ದು ನಿರ್ಮಾಪಕ ಚೇತನ್ ಗೌಡ ಅವರ ಸಹಕಾರದಿಂದ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಚಿತ್ರದಲ್ಲಿ ನಾಲ್ಕು ಸಾಂಗ್, ನಾಲ್ಕು ಫೈಟ್ ಇದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು. ಇದನ್ನೂ ಓದಿ: ಸಿನಿಮಾ ಸಕ್ಸಸ್ ಸೆಲೆಬ್ರೇಶನ್ ಸಂಭ್ರಮದಲ್ಲಿ `ಕಾಂತಾರ’ ಟೀಮ್

    ನಟ ಧನ್ವೀರ್ ಗೌಡ ಮಾತನಾಡಿ ಇವತ್ತು ಚಿತ್ರೀಕರಣ ಕಂಪ್ಲೀಟ್ ಆಗುತ್ತಿದೆ. ಒಂದೊಳ್ಳೆ ಕಂಟೆಂಟ್, ಕಥೆ ಇಟ್ಕೊಂಡು, ಒಂದೊಳ್ಳೆ ತಂಡದ ಜೊತೆ, ನಿರ್ಮಾಣ ಸಂಸ್ಥೆ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ. ಈ ಕಥೆ ಮೂಲಕ ಕರ್ನಾಟಕ ಜನತೆಯನ್ನು ರಂಜಿಸಲು ಬರ್ತಿದ್ದೇವೆ. ಚಿತ್ರದಲ್ಲಿ ಗುಣ ಪಾತ್ರ ಮಾಡಿದ್ದೇನೆ. ಗ್ರೇ ಶೇಡ್ ಪಾತ್ರ. ಬ್ಯಾಡ್ ಬಾಯ್ ಅಲ್ಲ, ಗುಡ್ ಬಾಯ್ ಕೂಡ ಅಲ್ಲ ಆ ರೀತಿಯ ಪಾತ್ರ. ಇದು ನನ್ನ ಮೂರನೇ ಸಿನಿಮಾ ಎಲ್ಲರ ಆಶೀರ್ವಾದ ಈ ಸಿನಿಮಾ ಮೇಲೆ ಇರಲಿ ಎಂದು ತಿಳಿಸಿದ್ರು.  ನಿರ್ಮಾಪಕ ಚೇತನ್ ಗೌಡ ಮಾತನಾಡಿ ಈದು ಈಕ್ವಿನಾಕ್ಸ್ ಗ್ಲೋಬಲ್ ಸಂಸ್ಥೆ ಮೊದಲ ಸಿನಿಮಾ. ಸತತ 72 ದಿನಗಳ ಚಿತ್ರೀಕರಣ ಇಂದು ಮುಕ್ತಾಯಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ನಡೆಯುತ್ತಿದೆ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಲಿದ್ದೇವೆ ಎಂದು ತಿಳಿಸಿದ್ರು.

    ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಚೇತನ್ ಗೌಡ ‘ವಾಮನ’ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಶಿಯಲ್ ಸಿನಿಮಾವಾಗಿರುವ ವಾಮನದಲ್ಲಿ ಸಂಪತ್, ಆದಿತ್ಯ ಮೆನನ್, ಅಚ್ಯುತ್ ಕುಮಾರ್, ಅವಿನಾಶ್, ತಾರಾ, ಶಿವರಾಜ್. ಕೆ. ಆರ್. ಪೇಟೆ, ಪೆಟ್ರೋಲ್ ಪ್ರಸನ್ನ, ಕಾಕ್ರೋಚ್ ಸುದಿ, ಜ್ಯೂನಿಯರ್ ಸಲಗ ಶ್ರೀಧರ್, ಸಚ್ಚಿತಾನಂದ,  ಅರುಣ್ ಒಳಗೊಂಡ ದೊಡ್ಡ ತಾರಾಬಳಗವಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜು, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ನೃತ್ಯ ನಿರ್ದೇಶಕ ಭೂಷಣ್ ನೃತ್ಯ ಸಂಯೋಜನೆ ಜೊತೆಗೆ ದನ್ವೀರ್ ಸ್ನೇಹಿತನ ಪಾತ್ರದಲ್ಲೂ ಸಹ ಮಿಂಚಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶೂಟಿಂಗ್‌ ಮುಗಿಸಿ ತೆರೆಗೆ ಅಬ್ಬರಿಸಲು ಸಜ್ಜಾದ ಧನ್ವೀರ್‌ ನಟನೆಯ ʻವಾಮನʼ ಸಿನಿಮಾ

    ಶೂಟಿಂಗ್‌ ಮುಗಿಸಿ ತೆರೆಗೆ ಅಬ್ಬರಿಸಲು ಸಜ್ಜಾದ ಧನ್ವೀರ್‌ ನಟನೆಯ ʻವಾಮನʼ ಸಿನಿಮಾ

    ಶೋಕ್ದಾರ್ ಧನ್ವೀರ್ ಗೌಡ (Dhanveer Gowda) ನಟಿಸುತ್ತಿರುವ ಬಹುನಿರೀಕ್ಷಿತ ಮಾಸ್ ಸಿನಿಮಾ ‘ವಾಮನ’ (Vamana Film). ಟೀಸರ್ ಮೂಲಕ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಈ ಚಿತ್ರಕ್ಕೆ ಶಂಕರ್ ರಾಮನ್ ನಿರ್ದೇಶನ ಮಾಡಿದ್ದಾರೆ. ಧನ್ವೀರ್ ಜೋಡಿಯಾಗಿ ರೀಷ್ಮಾ ನಾಣಯ್ಯ (Reeshma Nanaih)ನಟಿಸಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ವಾಮನ’ ಸಿನಿಮಾತಂಡ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆದಿದ್ದಾರೆ. ಇದನ್ನೂ ಓದಿ: ಪೊಲೀಸ್‌ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್‌

    ನಿರ್ದೇಶಕ ಶಂಕರ್ ರಾಮನ್ (Shankar Raman) ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಹಲವು ಸಿನಿಮಾದಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದೇನೆ. ‘ವಾಮನ’ ಸಿನಿಮಾ ಸತತ ಒಂದು ವರ್ಷದ ಜರ್ನಿ. ಇವತ್ತು ಹೀರೋ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯಲಾಗ್ತಿದೆ ಈ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆಯುತ್ತಿದ್ದೇವೆ. 72 ದಿನಗಳ ಕಾಲ ಶೂಟ್ ಮಾಡಿದ್ದೇವೆ. ಕಲಾವಿದರು, ತಾಂತ್ರಿಕ ಬಳಗ ತುಂಬಾ ಸರ್ಪೋಟಿವ್ ಆಗಿದ್ದಾರೆ. ಪ್ರತಿಯೊಬ್ಬನಲ್ಲೂ ಒಬ್ಬ ಒಳ್ಳೆಯವನು ಕೆಟ್ಟವನು ಇರುತ್ತಾನೆ. ಒಳ್ಳೆಯವನಾಗಬೇಕಾ..? ಕೆಟ್ಟವನಾಗಬೇಕಾ ಎನ್ನೋದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಒಳ್ಳೆಯವನು, ಕೆಟ್ಟದರ ನಡುವಿನಲ್ಲಿ ಭಿನ್ನತೆಯಲ್ಲಿ ಆತ ಯಾರೇ ಆಗಿದ್ರು ಆತನಿಗೆ ಸಲ್ಲಬೇಕಾದ ಶಿಕ್ಷೆ ಅಥವಾ ಸೆಟಲ್ ಮೆಂಟ್ ಸಿಕ್ಕೇ ಸಿಗುತ್ತೆ ಅನ್ನೋದನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಸಿನಿಮಾವನ್ನು ಇಲ್ಲಿವರೆಗೆ ಸುಸೂತ್ರವಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದ್ದು ನಿರ್ಮಾಪಕ ಚೇತನ್ ಗೌಡ ಅವರ ಸಹಕಾರದಿಂದ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಚಿತ್ರದಲ್ಲಿ ನಾಲ್ಕು ಸಾಂಗ್, ನಾಲ್ಕು ಫೈಟ್ ಇದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    ನಟ ಧನ್ವೀರ್ ಗೌಡ ಮಾತನಾಡಿ ಇವತ್ತು ಚಿತ್ರೀಕರಣ ಕಂಪ್ಲೀಟ್ ಆಗಿದೆ. ಒಂದೊಳ್ಳೆ ಕಂಟೆಂಟ್, ಕಥೆ ಇಟ್ಕೊಂಡು, ಒಂದೊಳ್ಳೆ ತಂಡದ ಜೊತೆ, ನಿರ್ಮಾಣ ಸಂಸ್ಥೆ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ. ಈ ಕಥೆ ಮೂಲಕ ಕರ್ನಾಟಕ ಜನತೆಯನ್ನು ರಂಜಿಸಲು ಬರುತ್ತಿದ್ದೇವೆ. ಚಿತ್ರದಲ್ಲಿ ಗುಣ ಪಾತ್ರ ಮಾಡಿದ್ದೇನೆ. ಗ್ರೇ ಶೇಡ್ ಪಾತ್ರ. ಬ್ಯಾಡ್ ಬಾಯ್ ಅಲ್ಲ, ಗುಡ್ ಬಾಯ್ ಕೂಡ ಅಲ್ಲ ಆ ರೀತಿಯ ಪಾತ್ರ. ಇದು ನನ್ನ ಮೂರನೇ ಸಿನಿಮಾ ಎಲ್ಲರ ಆಶೀರ್ವಾದ ಈ ಸಿನಿಮಾ ಮೇಲೆ ಇರಲಿ ಎಂದು ತಿಳಿಸಿದ್ದರು.

    ಸತತ 72 ದಿನಗಳ ಚಿತ್ರೀಕರಣ ಇಂದು ಮುಕ್ತಾಯಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ನಡೆಯುತ್ತಿದೆ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಲಿದ್ದೇವೆ ಎಂದು ನಿರ್ಮಾಪಕ ಚೇತನ್‌ ಗೌಡ ತಿಳಿಸಿದ್ದರು.

    ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್ಮೆಂಟ್‌ ಬ್ಯಾನರ್ ಅಡಿ ಚೇತನ್ ಗೌಡ ‘ವಾಮನ’ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಶಿಯಲ್ ಸಿನಿಮಾವಾಗಿರುವ ವಾಮನದಲ್ಲಿ ಸಂಪತ್, ಆದಿತ್ಯ ಮೆನನ್, ಅಚ್ಯುತ್ ಕುಮಾರ್, ಅವಿನಾಶ್, ತಾರಾ, ಶಿವರಾಜ್. ಕೆ. ಆರ್. ಪೇಟೆ, ಪೆಟ್ರೋಲ್ ಪ್ರಸನ್ನ, ಕಾಕ್ರೋಚ್ ಸುದಿ, ಜ್ಯೂನಿಯರ್ ಸಲಗ ಶ್ರೀಧರ್, ಸಚ್ಚಿತಾನಂದ, ಅರುಣ್ ಒಳಗೊಂಡ ದೊಡ್ಡ ತಾರಾಬಳಗವಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜು, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ನೃತ್ಯ ನಿರ್ದೇಶಕ ಭೂಷಣ್ ನೃತ್ಯ ಸಂಯೋಜನೆ ಜೊತೆಗೆ ಧನ್ವೀರ್ ಸ್ನೇಹಿತನ ಪಾತ್ರದಲ್ಲೂ ಸಹ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಯತೀರ್ಥ ನಿರ್ದೇಶನದ `ಕೈವ’ದಲ್ಲಿ ಧನ್ವೀರ್ ನಟನೆ

    ಜಯತೀರ್ಥ ನಿರ್ದೇಶನದ `ಕೈವ’ದಲ್ಲಿ ಧನ್ವೀರ್ ನಟನೆ

    ಸ್ಯಾಂಡಲ್‌ವುಡ್‌ನಲ್ಲಿ `ಬಜಾರ್’, `ಬೈ ಟು ಲವ್’ ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟ ಧನ್ವೀರ್ ಗೌಡ, ಜಯತೀರ್ಥ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ `ಕೈವ’ ಅನ್ನೋ ಟೈಟಲ್ ಫಿಕ್ಸ್ ಆಗಿದ್ದು, ಈ ಚಿತ್ರದ ಮೂಲಕ ಪವರ್‌ಫುಲ್ ಪಾತ್ರದಲ್ಲಿ ಧನ್ವೀರ್ ಕಾಣಿಸಿಕೊಳ್ಳಲಿದ್ದಾರೆ.

    `ಒಲವೇ ಮಂದಾರ’, `ಬ್ಯೂಟಿಫುಲ್ ಮನಸುಗಳು’, `ಬೆಲ್‌ಬಾಟಂ’ ಚಿತ್ರದ ಮೂಲಕ ಈಗಾಗಲೇ ಪರಿಚಿತರಾಗಿರೋ ಜಯತೀರ್ಥ `ಕೈವ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. 1980ರ ಕಾಲಘಟ್ಟದ ನೈಜ ಕಥೆಯಲ್ಲಿ ಪ್ರಮುಖ ಪಾತ್ರದಲ್ಲಿ ಧನ್ವೀರ್ ನಟಿಸಲಿದ್ದಾರೆ. ಡಿಫರೆಂಟ್ ಟೈಟಲ್ ಜೊತೆ ಭಿನ್ನ ಕಥೆಯೊಂದಿಗೆ ಬರುತ್ತಿದ್ದಾರೆ.

    1980ರ ಕಾಲಘಟ್ಟದ ಕಥೆಯಾಗಿರುವುದರಿಂದ ಕಥೆಗೆ ತಕ್ಕಂತೆ ಕೆಲವು ಸನ್ನೀವೇಷದಲ್ಲಿ ನಟ ಧನ್ವೀರ್ ರೆಟ್ರೋ ಸ್ಟೈಲಿನಲ್ಲಿ ಕಾಣಿಸಿಕೊಳ್ತಿದ್ದಾರೆ. ಮಾಸ್ ಆಕ್ಷನ್ ಕಥೆಯ ಜೊತೆ ರೊಮ್ಯಾಂಟಿಕ್ ಲವ್ ಸ್ಟೋರಿಯಿದೆ. ಒಂದೊಳ್ಳೆ ಪಾತ್ರ ವಿಭಿನ್ನ ಕಥೆಯ ಕಾರಣದಿಂದಾಗಿ ನಿರ್ದೇಶಕರಿಗೆ ನಟ ಧನ್ವೀರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನು ಓದಿ:ಶಾರೂಖ್ ಜೊತೆಗಿನ ಸಿನಿಮಾಗೆ ನಯನ ಶೆಡ್ಯೂಲ್ ಮುಗಿಸಿಯೋದು ಯಾವಾಗ? – ಇಲ್ಲಿದೆ ಅಪ್ಡೇಟ್

    ಧನ್ವೀರ್ `ವಾಮನ’ ಚಿತ್ರದಲ್ಲಿ ನಟಿಸುತ್ತಿದ್ದು, `ಕೈವ’ ಧನ್ವೀರ್ ನಟನೆಯ ನಾಲ್ಕನೇ ಚಿತ್ರವಾಗಿದೆ. ಇದೇ ಮೊದಲ ಬಾರಿಗೆ ಜಯತೀರ್ಥ ಮತ್ತು ಧನ್ವೀರ್ ಕಾಂಬಿನೇಷನ್‌ನ ಚಿತ್ರ ಸೆಟ್ಟೇರಿದ್ದು, ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ.ಇನ್ನು ಶೋಕ್ದಾರ್ ಧನ್ವೀರ್ ನಟನೆಯ ನಯಾ ಅವತಾರ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

  • ‘ಬೆಲ್ ಬಾಟಮ್ 2’ ಮೊದಲೇ ಧನ್ವೀರ್​ಗೆ ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕ ಜಯತೀರ್ಥ

    ‘ಬೆಲ್ ಬಾಟಮ್ 2’ ಮೊದಲೇ ಧನ್ವೀರ್​ಗೆ ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕ ಜಯತೀರ್ಥ

    `ಬಜಾರ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಶೋಕ್ದಾರ್ನಾಗಿ ಎಂಟ್ರಿಕೊಟ್ಟ ನಟ ಧನ್ವೀರ್, ಆನಂತರ `ಬೈ ಟೂ ಲವ್’ ಚಿತ್ರದ ಸಕ್ಸಸ್ ಮೂಲಕ ಭರವಸೆಯ ನಾಯಕನಾಗಿ ಗಾಂಧಿನಗರದಲ್ಲಿ ನೆಲೆಕಂಡವರು. ಇದೀಗ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    ಇತ್ತೀಚೆಗಷ್ಟೇ `ವಾಮನ’ ಚಿತ್ರದ ಮೂಲಕ ಸದ್ದು ಮಾಡಿದ್ದ ಧನ್ವೀರ್, ಆ ಚಿತ್ರದ ಬೆನ್ನಲ್ಲೇ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಬಾರಿ ಅವರು `ಬೆಲ್ ಬಾಟಂ’ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಯುಗಾದಿ ಹಬ್ಬದಂದು ಮುಹೂರ್ತ ಆಚರಿಸಿಕೊಂಡು ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಸರಳವಾಗಿ ಮುಹೂರ್ತ ಆಚರಿಸಿಕೊಳ್ಳುವ ಮೂಲಕ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ:  ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ಇದೇ ಮೊದಲ ಬಾರಿಗೆ ನಿರ್ದೇಶಕ ಜಯತೀರ್ಥ ಮತ್ತು ಧನ್ವೀರ್ ಕಾಂಬಿನೇಷನ್ನಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಪಕ್ಕಾ ಮಾಸ್ ಆಕ್ಷನ್ ಕಥೆಯ ಜೊತೆಗೆ ಮುದ್ದಾದ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿ ಇರಲಿದೆಯಂತೆ. ಈ ಚಿತ್ರದಲ್ಲಿ ಈವರೆಗೂ ಮಾಡಿರದೇ ಇರುವಂತಹ ಪಾತ್ರದಲ್ಲಿ ಧನ್ವೀರ್ ಕಾಣಿಸಿಕೊಳ್ಳುತ್ತಿದ್ದು, ಭಿನ್ನ ಪಾತ್ರದ ಜೊತೆಗೆ ಡಿಫರೆಂಟ್ ಗೆಟಪ್ನಲ್ಲೂ ಅವರು ಮಿಂಚಲಿದ್ದಾರೆ. ಒಂದೊಳ್ಳೆ ಪಾತ್ರ, ವಿಭಿನ್ನ ಕಥೆಯ ಕಾರಣದಿಂದಾಗಿ ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ಲ ಕೊಟ್ಟಿದ್ದಾರೆ ಧನ್ವೀರ್. ಬಜಾರ್ ಹುಡುಗನ ಹೊಸ ಗೆಟಪ್ ನೋಡಲು ಫ್ಯಾನ್ಸ್ ಈಗಿನಿಂದಲೇ ಕಾಯ್ತಿದ್ದಾರೆ. ಇದನ್ನೂ ಓದಿ: ಸಿನಿಮಾರಂಗ ಬಿಟ್ಟು ಕೃಷಿಯತ್ತ ಮುಖ ಮಾಡಿದ್ರಾ ಸ್ಟಾರ್ ನಟಿ ಸಾಯಿ ಪಲ್ಲವಿ?