Tag: Dhanushree

  • ಸ್ನಾನ ಮಾಡುವಾಗ್ಲೂ ಮೇಕಪ್ ಹಾಕ್ತಾರೆ ಈ ನಟಿ- ಧನುಶ್ರೀ ಫೋಟೋ ವೈರಲ್

    ಸ್ನಾನ ಮಾಡುವಾಗ್ಲೂ ಮೇಕಪ್ ಹಾಕ್ತಾರೆ ಈ ನಟಿ- ಧನುಶ್ರೀ ಫೋಟೋ ವೈರಲ್

    ಟಿಕ್ ಟಾಕ್ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಧನುಶ್ರೀ (Dhanushree) ಅವರು ಸದ್ಯ ಕೇರಳಗೆ ಹಾರಿದ್ದಾರೆ. ಬಾತ್ ಟಬ್‌ನಲ್ಲಿರುವ ಹಾಟ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ. ಅಯ್ಯೋ ದೇವರೇ, ಇಲ್ಲೂ ಮೇಕಪ್ ಅಂತಾ ಧನುಶ್ರೀಗೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    ರೀಲ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಚೆಲುವೆ ಧನುಶ್ರೀ ಬಿಗ್ ಬಾಸ್ (Bigg Boss Kannada) ಮನೆಗೆ ಹೋಗುವ ಚಾನ್ಸ್ ಗಿಟ್ಟಿಸಿಕೊಂಡಿದ್ರು. ದೊಡ್ಮನೆಗೆ ಕಾಲಿಟ್ಟ 2 ವಾರಕ್ಕೆ ಹೊರಬಂದಿದ್ರು. ಅಷ್ಟೇ ಅಲ್ಲ, ಅತಿಯಾಗಿ ಮೇಕಪ್ ಬಳಸುತ್ತಾರೆ. ರಾತ್ರಿ ಮಲಗುವಾಗ್ಲೂ ಮೇಕಪ್ ಹಾಕ್ತಾರೆ ಅಂತಾ ನಟಿ ಟ್ರೋಲ್ ಆಗಿದ್ರು. ಈಗ ಮತ್ತೆ ವಿಚಾರ ಚಾಲ್ತಿಗೆ ಬಂದಿದೆ. ಇದನ್ನೂ ಓದಿ:ಫ್ಯಾಷನ್‌ ರೂಲ್ಸ್‌ ಬ್ರೇಕ್‌ ಮಾಡಿ, ನೆಕ್ಲೇಸ್‌ ಧರಿಸಿ ಹಾಡಿದ ಸಂಜಿತ್‌ ಹೆಗ್ಡೆ

    ಬಿಗ್ ಬಾಸ್ ಧನುಶ್ರೀ ಅವರು ತಮ್ಮ ಕುಟುಂಬದ ಜೊತೆ ಕೇರಳಗೆ ಹೋಗಿದ್ದಾರೆ. ಅಲ್ಲಿ ಬಾತ್ ಟಬ್‌ನಲ್ಲಿ ಕುಳಿತಿರುವ ಹಾಟ್ ಫೋಟೋವನ್ನ ಧನುಶ್ರೀ ಶೇರ್ ಮಾಡಿದ್ದಾರೆ. ನಟಿಯ ಲುಕ್ ನೋಡಿ, ಈಗಲ್ಲೂ ಮೇಕಪ್ ಹಾಕಿದ್ದೀರಾ.? ಸ್ನಾನ ಮಾಡೋವಾಗ್ಲೂ ಮೇಕಪ್ ಬೇಕಾ.? ಎಂದು ಕಾಮೆಂಟ್ ಮಾಡಿದ್ದಾರೆ.

    ಕಳೆದ ವರ್ಷ ‘ಒಂದೊಳ್ಳೆ ಲವ್ ಸ್ಟೋರಿ’ ಚಿತ್ರಕ್ಕೆ ಧನುಶ್ರೀ ನಾಯಕಿಯಾಗಿ ಮಿಂಚಿದ್ರು. ಈ ಸಿನಿಮಾ ಅಭಿಮಾನಿಗಳ ಗಮನ ಸೆಳೆದಿತ್ತು. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ.

  • ನಕಲಿ ಕಣ್ರೆಪ್ಪೆ ಹಾಕಿಸಿಕೊಂಡ ಧನುಶ್ರೀಗೆ ತಿರುಪೆ ಶೋಕಿ ಎಂದ ನೆಟ್ಟಿಗರು

    ನಕಲಿ ಕಣ್ರೆಪ್ಪೆ ಹಾಕಿಸಿಕೊಂಡ ಧನುಶ್ರೀಗೆ ತಿರುಪೆ ಶೋಕಿ ಎಂದ ನೆಟ್ಟಿಗರು

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ನಲ್ಲಿ (Bigg Boss Dhanushree) ಧನುಶ್ರೀ ಸ್ಪರ್ಧಿಯಾಗಿ ಮಿಂಚಿದ್ದರು. `ಒಂದೊಳ್ಳೆ ಲವ್ ಸ್ಟೋರಿ’ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ತಮ್ಮ ಯೂಟ್ಯೂಬ್‌ನಲ್ಲಿ ಕಣ್ಣಿಗೆ ರೆಪ್ಪೆ ಹಾಕಿಸಿಕೊಂಡಿರುವ ವೀಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ಧನುಶ್ರೀ ಅವರ ಹೊಸ ಅವತಾರಕ್ಕೆ ನೆಟ್ಟಿಗರು ಕಾಲೆಳೆದಿದ್ದಾರೆ.

    ಸೋಷಿಯಲ್ ಮೀಡಿಯಾ (Influencer) ಆಗಿ ಗುರುತಿಸಿಕೊಂಡಿರುವ ಧನುಶ್ರೀ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾರೆ. ಸಿನಿಮಾ, ಫೋಟೋಶೂಟ್, ಶಾರ್ಟ್ ಫಿಲ್ಮ್ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ಧನುಶ್ರೀ ಮಾಡಿರುವ ಹೊಸ ವೀಡಿಯೋಗೆ ನೆಟ್ಟಿಗರು ತಿರುಪೆ ಶೋಕಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಂಬು ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ನಟಿ ಹನ್ಸಿಕಾ ಮೋಟ್ವಾನಿ

    ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಧನುಶ್ರೀ ಬ್ಯೂಟಿ, ಫ್ಯಾಷನ್, ಸ್ಕಿನ್ ಕೇರ್, ಟ್ರ‍್ಯಾವಲ್ ಹೀಗೆ ಪ್ರತಿಯೊಂದರ ಬಗ್ಗೆ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ. ಇದೀಗ ನಕಲಿ ಕಣ್ರೆಪ್ಪೆ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಮಾಡಿ ಧನುಶ್ರೀ ಟ್ರೋಲ್ ಆಗಿದ್ದಾರೆ. ನಮ್ಮ ಮನೆಯಲ್ಲಿ ಅತಿ ಶೀಘ್ರದಲ್ಲಿ ಶುಭ ಕಾರ್ಯ ನಡೆಯಲಿದೆ. ನಮ್ಮ ಇಡೀ ಕುಟುಂಬ ಖುಷಿಯಾಗಿದೆ. ತುಂಬಾ ದಿನಗಳಿಂದ ನಾವು ಪ್ಲ್ಯಾನ್ ಮಾಡುತ್ತಿದ್ದೀವಿ ಎಂದು ಧನುಶ್ರೀ ವಿಡಿಯೋ ಆರಂಭಿಸಿದ್ದಾರೆ.

    ಸುಮಾರು 3 ಸಲ ನಕಲಿ ಕಣ್ರೆಪ್ಪೆ ಹಾಕಿಸಿಕೊಂಡಿರುವೆ. ಅದು ಕ್ಲಾಸಿಕ್. ಇದಕ್ಕೆ ಕೇವಲ ಎರಡೂವರೆ ಸಾವಿರ ಅಗುತ್ತೆ. ಈ ಸಲ ಡ್ರಮ್ಯಾಟಿಕ್ ಆಗಿರುವ ಕಣ್ರೆಪ್ಪೆ ಹಾಕಿಸಿಕೊಳ್ಳಬೇಕು ಎಂದುಕೊಂಡಿರುವೆ. ಸಿನಿಮಾ ಪ್ರಚಾರ ಮತ್ತು ನಮ್ಮ ಮನೆಯ ಕಾರ್ಯಕ್ರಮಕ್ಕೆ ಸೂಕ್ತವಾಗುವ ರೀತಿಯಲ್ಲಿ ಹಾಕಿಸಿಕೊಳ್ಳಬೇಕು. ಕೈ ಉಗುರು ಕೂಡ ಸ್ಟೈಲ್ ಮಾಡಿಸಬೇಕು. ಡಿಸೈನರ್ ಬೇಕು ಎಂದು ವಿಭಿನ್ನವಾಗಿ ಮಾಡಿಸುತ್ತಿರುವೆ. ಈ ವಿಡಿಯೋ ನೋಡಿ ನೀವು ಯಾಕೆ ಇಷ್ಟೊಂದು ಶೋಕಿ ಎಂದು ಕಾಮೆಂಟ್ ಮಾಡುತ್ತೀರಾ ಅಂತ ಗೊತ್ತಿದೆ. ಹುಡುಗಿಯರಿಗೆ ಶಾಪಿಂಗ್ ಮಾಡಿದರೆ ಖುಷಿಯಾಗುತ್ತದೆ ಹಾಗೂ ದುಃಖ ಕಡಿಮೆಯಾಗುತ್ತದೆ. ನಾವು ಹುಡುಗಿಯರು ತುಂಬಾನೇ ಸಿಂಪಲ್. ಹೀಗೆ ಸಣ್ಣ ಪುಟ್ಟ ವಿಚಾರಗಳಲ್ಲಿ ಖುಷಿ ಕಾಣುತ್ತೀವಿ. ಹುಡುಗರ ಖುಷಿ ಬೇರೆ ರೀತಿ ಇರುತ್ತದೆ’ ಎಂದು ಟ್ರೋಲ್ ಮಾಡುವವರಿಗೂ ಸರಿಯಾಗಿ ಉತ್ತರ ಕೊಟ್ಟಿದ್ದಾರೆ.

    ಕಣ್ಣಿಗೆ ರೆಪ್ಪೆ ಹಾಕಿಸಿಕೊಂಡಿರುವ ವೀಡಿಯೋವನ್ನ ಶೇರ್ ಮಾಡ್ತಿದ್ದಂತೆ ತಿರುಪೆ ಶೋಕಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ವೀಡಿಯೋಗೆ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್‌ಗಳು ಹರಿದು ಬರುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುಮಗಳಾದ ಬಿಗ್‍ಬಾಸ್ ಖ್ಯಾತಿಯ ಧನುಶ್ರೀ

    ಮದುಮಗಳಾದ ಬಿಗ್‍ಬಾಸ್ ಖ್ಯಾತಿಯ ಧನುಶ್ರೀ

    ಬೆಂಗಳೂರು: ಸೋಶಿಯಲ್ ಮೀಡಿಯಾ ಸ್ಟಾರ್ ಧನುಶ್ರೀ ಅವರ ಜನಪ್ರಿಯತೆ ಬಿಗ್‍ಬಾಸ್ ಮನೆಗೆ ಹೋಗಿ ಬಂದ ನಂತರ ಹೆಚ್ಚಿದೆ. ಬಿಗ್‍ಬಾಸ್ ಕನ್ನಡ ಸೀಸನ್8ರ ಸ್ಪರ್ಧಿಯಾಗಿದ್ದ ಧನುಶ್ರೀ ಅವರಿಗೆ ಸಿನಿಮಾದ ಜೊತೆಗೆ ಫೋಟೋಶೂಟ್‍ಗಳಲ್ಲೂ ಅವಕಾಶ ಅರಸಿ ಬರುತ್ತಿವೆ. ಇದೀಗ ಅವರ ಒಂದು ಫೋಟೋಶೂಟ್ ಸಖತ್ ಸುದ್ದಿಯಾಗುತ್ತಿದೆ.

    ಧನುಶ್ರೀ ಇತ್ತೀಚೆಗೆ ಅಯ್ಯಂಗಾರಿ ಮದುಮಗಳ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಐಯ್ಯಂಗಾರಿ ಮಧುಮಗಳಾಗಿ ಪೋಸ್ ಕೊಟ್ಟಿರುವ ಧನುಶ್ರೀ, ಆ ಚಿತ್ರಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಇದನ್ನೂ ಓದಿ:  ಹೊಸ ಕಾರು ಖರೀದಿಸಿದ ಬಿಗ್‍ಬಾಸ್ ಸ್ಪರ್ಧಿ ಧನುಶ್ರೀ

    ರೇಷ್ಮೆ ಸೀರೆಯುಟ್ಟು, ಮ್ಯಾಂಚಿಂಗ್ ಆಭರಣಗಳನ್ನು ಧರಿಸಿ, ಸಖತ್ ಕ್ಲಾಸಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಧನುಶ್ರೀ ಅವರ ಈ ಲುಕ್ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.

     

    View this post on Instagram

     

    A post shared by DHANUSHREE???? (@dhanushree7_)


    ಇತ್ತೀಚೆಗೆ ಧನುಶ್ರೀ ಫೋಟೋಶೂಟ್‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅವರು ವಿಭಿನ್ನವಾದ ಲುಕ್ ಹಾಗೂ ಸ್ಟೈಲ್‍ನಲ್ಲಿ ಮಿಂಚುತ್ತಿದ್ದಾರೆ. ದಿನೇ ದಿನೇ ಅವರಿಗೆ ಸಿಗುತ್ತಿರುವ ಅವಕಾಶಗಳು ಹೆಚ್ಚುತ್ತಿವೆ. ಇದನ್ನೂ ಓದಿ:  ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ

    ಧನುಶ್ರೀ ಅವರು ಆಗಾಗ ತಮ್ಮ ಮೇಕಪ್ ಹಾಗೂ ಡ್ಯಾನ್ಸ್ ಮೂವ್‍ಗಳ ಕಾರಣಕ್ಕೆ ಚರ್ಚೆಯಲ್ಲಿರುತ್ತಾರೆ. ಈ ಹಿಂದೆಯೂ ಬಿಗ್‍ಬಾಸ್ ಮನೆಯಲ್ಲಿ ಮೇಕಪ್ ಕಾರಣಕ್ಕೆ ಸುದ್ದಿಯಾಗಿದ್ದರು. ಕೆಲವು ದಿನಗಳ ಹಿಂದೆ ತಾವು ಹೊಸ ಕಾರು ಖರೀದಿಸಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

  • ಹೊಸ ಕಾರು ಖರೀದಿಸಿದ ಬಿಗ್‍ಬಾಸ್ ಸ್ಪರ್ಧಿ ಧನುಶ್ರೀ

    ಹೊಸ ಕಾರು ಖರೀದಿಸಿದ ಬಿಗ್‍ಬಾಸ್ ಸ್ಪರ್ಧಿ ಧನುಶ್ರೀ

    ಬೆಂಗಳೂರು: ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್‍ಬಾಸ್ ಸ್ಪರ್ಧಿ  ಧನುಶ್ರೀ ಅವರು ದುಬಾರಿ ಬೆಲೆಯ ಕಾರ್ ಖರೀದಿ ಮಾಡಿದ್ದಾರೆ.

    ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಇದು ಮೊದಲ ಹೆಜ್ಜೆ. ಸುಲಭದ ಕೆಲಸ ಅಂತೆಲ್ಲಾ ಜನ ಮಾತನಾಡಿಕೊಳ್ಳಬಹುದು. ಆದರೆ ಯಾವುದೇ ಕೆಲಸವಾಗಲಿ, ಅದಕ್ಕೆ ಅದರದ್ದೇ ಆದ ಸವಾಲುಗಳು ಇರುತ್ತವೆ. ನಾನು ಪಟ್ಟಿರುವ ಕಷ್ಟ, ಹಾಕಿರುವ ಪರಿಶ್ರಮಕ್ಕೆ ನನಗೆ ನಾನೇ ಧನ್ಯವಾದಗಳನ್ನು ಹೇಳಿಕೊಳ್ಳುತ್ತೇನೆ. ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡು ಹೊಸ ಕಾರ್ ಮುಂದೆ ನಿಂತಿರುವ ಮತ್ತು ಶೋರೂಮ್‍ನಲ್ಲಿ ಕಾರ್ ಖರೀದಿ ಮಾಡುತ್ತೀರವ ಫೋಟೋವನ್ನು ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by DHANUSHREE???? (@dhanushree7_)


    ಕನ್ನಡದ ಕೆಲ ಚಿತ್ರಗಳಲ್ಲೂ ಅಭಿನಯಿಸುತ್ತಿರುವ ಧನುಶ್ರೀ ಇದೀಗ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಕಾರು ಖರೀದಿಸಿರುವ ವಿಚಾರವಾಗಿದೆ. ಧನುಶ್ರೀ ಹೊಸ ಕಾರು ಖರೀದಿ ಮಾಡಿದ್ದಾರೆ. ನೀಲಿ ಬಣ್ಣದ ಹೊಸ ಕಾರನ್ನು ಧನುಶ್ರೀ ಕೊಂಡುಕೊಂಡಿದ್ದಾರೆ. ಹೊಸ ಕಾರಿನ ಜೊತೆಗೆ ತಾವು ಕ್ಲಿಕ್ ಮಾಡಿಸಿಕೊಂಡ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಧನುಶ್ರೀ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಚಿನ್ನಿ ಬಾಂಬ್ ಜೊತೆ ಶ್ರೀ ಕ್ಷೇತ್ರಕ್ಕೆ ಭೇಟಿ ಕೊಟ್ಟ ಶುಭಾ ಪೂಂಜಾ

     

    View this post on Instagram

     

    A post shared by DHANUSHREE???? (@dhanushree7_)

    ಸೋಶಿಯಲ್ ಮೀಡಯಾದಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಹೊಂದಿದ್ದ ಧನುಶ್ರೀ ಹೆಚ್ಚು ಖ್ಯಾತಿ ಪಡೆದಿದ್ದು, ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದ ಮೂಲಕ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಧನುಶ್ರೀ ಮೊದಲನೇ ವಾರ ಎಲಿಮಿನೇಟ್ ಆಗ್ಬಿಟ್ಟರು. ಬಿಗ್‍ಬಾಸ್ ಅಭಿಮಾನಿಗಳ ಮನದಲ್ಲಿ ಧನುಶ್ರೀ ನೆಲೆಯೂರಿದ್ದಾರೆ. ಇದನ್ನೂ ಓದಿ: ದಾರಿಯಲ್ಲಿ ಸಿಕ್ಕಿದ್ದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾ.ಪಂ ಸದಸ್ಯ

    ಬಿಗ್‍ಬಾಸ್ ಮನೆಯಿಂದ ಬರುತ್ತಿದ್ದಂತೆ ಸಾಕಷ್ಟು ಸಿನಿಮಾ ಮತ್ತು ಫೋಟೋ ಶೂಟ್‍ನಲ್ಲಿ ಬ್ಯುಸಿಯಾಗಿದ್ದ ಧನುಶ್ರೀ ಇದೀಗ ಹೊಸ ಕಾರ್ ಝರೀದಿ ಮಾಡಿರುವ ಸಂತೋಷದಲ್ಲಿ ಇದ್ದಾರೆ. ಈ ವಿಚಾರವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದು ಮೆಚ್ಚುಗೆ ಸೂಚಿಸುವುದ ಜೊತೆಗೆ ಶುಭ ಹಾರೈಸುತ್ತಿದ್ದಾರೆ.

  • ಒಂದೆ ವಾರಕ್ಕೆ ಮನೆಯಿಂದ ಹೋಗ್ಬೇಕಾ ಅಂದ ಧನುಶ್ರೀ..!

    ಒಂದೆ ವಾರಕ್ಕೆ ಮನೆಯಿಂದ ಹೋಗ್ಬೇಕಾ ಅಂದ ಧನುಶ್ರೀ..!

    ಬೆಂಗಳೂರು: ಬಿಗ್ ಮನೆಯಲ್ಲಿ ರಂಗು ರಂಗಿನ ಆಟ ಮುಂದುವರೆದಿದೆ. ವಾರಾಂತ್ಯದಲ್ಲೊಬ್ಬರು ಮನೆಯಿಂದ ಹೊರ ಹೋಗುತ್ತಾರೆ. ಈ ವಿಚಾರವಾಗಿ ರಘು ಮತ್ತು ಧನುಶ್ರೀ ಮಾತನಾಡಿದ್ದಾರೆ. ಮನೆಯ ರಂಗು ರಂಗಿನ ಆಟದ ಬಿಸಿ ಹೆಚ್ಚಾಗುತ್ತಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ಯಾರು ಹೋಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.
    ಮನೆಯಲ್ಲಿ ಕೆಲವು ದಿನ ಮಾತ್ರ ಇದ್ದು ಹೋಗಬೇಕಾ..? ಹೊಂದಿಕೊಂಡು ಬೆರೆಯಲು ನನಗೆ ಸಮಯ ಬೇಕು ಅಷ್ಟರಲ್ಲಿ ಹೋಗಬೇಕಾ ಎಂದು ನೋವಾಗುತ್ತಿದೆ ಎಂದು ಧನುಶ್ರೀ ರಘು ಜೊತೆ ಹೇಳಿಕೊಂಡಿದ್ದಾರೆ.

    ಭಯಾ ಆಗುತ್ತಿದೆಯಾ.. ಎರಡನೇ ವಾರದ ಕ್ಯಾಪ್ಟನ್ ಆಯ್ಕೆ ಸಂದರ್ಭದಲ್ಲಿ ಕೊನೆಗೆ ನಿರ್ಮಲಾ ಎಸ್ ಎಂದ ಟೀಮ್‍ಗೆ ಯಾರನ್ನೋ ಮೆಚ್ಚಿಸಲು ಹೋಗಿಬಿಟ್ಟರು. ಇವರು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಅವರಿಂದ ತಾನು ಈ ಮನೆಯಲ್ಲಿ ಉಳಿಯಬಹುದು ಎಂದು ಹೀಗೆ ಮಾಡಿದ್ದಾರೆ ಅನ್ನಿಸುತ್ತದೆ ಅಂತ ಇಬ್ಬರೂ ಗುಟ್ಟಾಗಿ ಚರ್ಚೆ ನಡೆಸಿದ್ದಾರೆ.

    ವಾರಾಂತ್ಯದಲ್ಲಿ ಯಾರು ಮನೆಯಿಂದ ಹೋಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ನಾನು ಉಳಿಯಬೇಕು ಎನ್ನುವ ಮನಸ್ಥಿತಿ ಇದೆ. ಆದರೆ ಯಾರು ಅದನ್ನು ಬಾಯಿಬಿಟ್ಟು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ ಇವರೆಲ್ಲ ಕೀ ಕೊಟ್ಟ ಗೊಂಬೆಗಳಂತೆ. ಬಿಗ್ ಬಾಸ್ ಹೇಳಿದಂತೆ ಆಟವಾಡುವ ಗೊಂಬೆಗಳು ಮಾತ್ರ ಇವರು ಎನ್ನುವುದು ಅಷ್ಟೆ ಸತ್ಯವಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ವಾರಾಂತ್ಯದಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ. ಯಾರು ಸೇಫ್ ಆಗಿ ಉಳಿದು ತಮ್ಮ ಆಟ ಮುಂದುವರಿಸ್ತಾರೆ ಎಂದು ಕಾದುನೋಡಬೇಕಿದೆ.

  • ದಿವ್ಯಾ, ಧನುಶ್ರೀ ಟಫ್ ಫೈಟ್ ನೋಡಿ ಬಿಗ್‍ಬಾಸ್ ಮಂದಿ ಶಾಕ್

    ದಿವ್ಯಾ, ಧನುಶ್ರೀ ಟಫ್ ಫೈಟ್ ನೋಡಿ ಬಿಗ್‍ಬಾಸ್ ಮಂದಿ ಶಾಕ್

    ಬೆಂಗಳೂರು: ಬಿಗ್ ಬಾಸ್ ಮನೆಯ 5ನೇ ದಿನದಂದು ಸ್ಪರ್ಧಿಗಳಿಗೆ ಬಿಗ್‍ಬಾಸ್ 6ನೇ ಚಾಲೆಂಜ್ ಟಾಸ್ಕ್ ನೀಡಿದ್ದರು. ಅದರ ಅನುಸಾರ ಗಾರ್ಡನ್ ಏರಿಯಾದಲ್ಲಿ ನಿರ್ಮಿಸಿದ್ದ ಚಟುವಟಿಕೆಯಲ್ಲಿ ಭಾಗವಹಿಸುವ ಸದಸ್ಯರು ಕೋರ್ಟ್‍ನ ಎರಡು ಬದಿಯಲ್ಲಿ ನಿಂತು, ಕೋರ್ಟ್ ಮಧ್ಯಭಾಗದಲ್ಲಿ ಬಾಲ್ ಇರಿಸಲಾಗಿತ್ತು. ಪ್ರತಿ ಸಲ ಬಜರ್ ಆದಾಗ ಸದಸ್ಯರು ಕೋರ್ಟ್ ಬದಿಯಿಂದ ಓಡಿ ಬಂದು ಬಾಲ್ ತೆಗೆದುಕೊಂಡು ತಮ್ಮ ಎದುರುಗಡೆಯಿರುವ ಬಾಸ್ಕೆಟ್‍ನಲ್ಲಿ ಹಾಕಬೇಕಿತ್ತು. ಹೀಗೆ 5 ಪ್ರಯತ್ನಗಳಲ್ಲಿ ಯಾರು ಹೆಚ್ಚು ಬಾಲ್‍ಗಳನ್ನು ಬಾಸ್ಕೆಟ್ ಒಳಗೆ ಹಾಕುತ್ತಾರೋ ಅವರು ಈ ಚಟುವಟಿಕೆಯ ವಿಜೇತರಾಗಿರುತ್ತಾರೆ ಹಾಗೂ ಸೋತವರು ನಾಮಿನೇಟ್ ಆಗುತ್ತಾರೆ ಎಂದು ತಿಳಿಸಿದ್ದರು.

    ಧನುಶ್ರೀ ಈ ಆಟವನ್ನು ದಿವ್ಯಾ ಸುರೇಶ್‍ಗೆ ಚಾಲೆಂಜ್ ಮಾಡಿದ್ದರು. ಅದರಂತೆ ಸ್ಪರ್ಧೆಯಲ್ಲಿ ದಿವ್ಯಾ ಸುರೇಶ್ ಹಾಗೂ ಧನುಶ್ರೀ ಭಾಗವಹಿಸಿದರು. ಟಾಸ್ಕ್‍ನ ಆರಂಭದಲ್ಲಿಯೇ ಫೋಲ್ ಆಯಿತು. ಬಳಿಕ ಮೊದಲನೇ ಬಜರ್‍ನಲ್ಲಿ ಧನು ಶ್ರೀ ಬಾಸ್ಕೆಟ್‍ಗೆ ಬಾಲ್ ಹಾಕಿದರು. ಬಳಿಕ ಸತತವಾಗಿ ನಾಲ್ಕು ಸುತ್ತಿನಲ್ಲಿ ದಿವ್ಯಾ ಬಾಸ್ಕೆಟ್‍ಗೆ ಬಾಲ್ ಹಾಕುವುದರ ಮೂಲಕ ವಿಜೇತರಾದರು ಹಾಗೂ ಧನುಶ್ರೀ ಈ ವಾರ ನೇರವಾಗಿ ನಾಮಿನೆಟ್ ಪಟ್ಟಿಗೆ ಸೇರಿದರು. ಅಲ್ಲದೆ ಆಟ ಇನ್ನೇನೂ ಕೊನೆಯ ಹಂತದಲ್ಲಿರುವಾಗ ದಿವ್ಯಾ ಕಾಲಿಗೆ ಪೆಟ್ಟಾಗಿ ರಕ್ತಸ್ರಾವವಾಗಲೂ ಪ್ರಾರಂಭವಾಯಿತು ಆದರೂ ಅದನ್ನು ಲೆಕ್ಕಿಸದೇ ದಿವ್ಯಾ ಕೊನೆಯ ಬಜರ್‍ನಲ್ಲಿ ಕೂಡ ಆಟ ಆಡಿ ಗೆದ್ದರು.

    ಒಟ್ಟಾರೆ ದಿವ್ಯಾ ಹಾಗೂ ಧನುಶ್ರೀ ಮಧ್ಯೆ ಇದ್ದ ಟಫ್ ಫೈಟ್ ನೋಡಿ ಮನೆಯ ಸದಸ್ಯರು ಇದು ಬಾಸ್ಕೆಟ್ ಬಾಲ್ ಪಂದ್ಯದಂತೆ ಕಾಣಿಸುತ್ತಿಲ್ಲ ಬದಲಾಗಿ ಕಬ್ಬಡ್ಡಿ ಪಂದ್ಯದಂತೆ ಕಾಣಿಸುತ್ತಿದೆ ಎಂದು ಹೇಳುತ್ತಿದ್ದರು.

  • ಇಲ್ಲಿಂದ ಬೋಳಿಸಿಯೇ ಕಳಿಸೋದು: ಧನುಶ್ರೀ

    ಇಲ್ಲಿಂದ ಬೋಳಿಸಿಯೇ ಕಳಿಸೋದು: ಧನುಶ್ರೀ

    ಬೆಂಗಳೂರು: ಬಿಗ್‍ಬಾಸ್ ಆರಂಭದ ಮೊದಲ ದಿನವೇ ಆಟ ಶುರುವಾಗಿದ್ದು, ನಾಲ್ಕು ಜನ ಮನೆಯಿಂದ ಹೊರ ಹೋಗೋಕೆ ನಾಮಿನೇಟ್ ಆಗಿದ್ದಾರೆ. ಈ ನಡುವೆ ಟಿಕ್‍ಟಾಕ್ ಸ್ಟಾರ್ ಧನುಶ್ರೀ ಮತ್ತು ಶಮಂತ್ ಗೌಡ ನಡುವೆ ಫನ್ನಿ ಮಾತು ನಡೆತಯುತ್ತಿದೆ.

    ಧನುಶ್ರೀ ಬಿಗ್‍ಬಾಸ್ ಮನೆಗೆ ಮೊದಲ ಬಂದ ಸ್ಪರ್ಧಿ. ಬಿಗ್‍ಬಾಸ್ ಆರಂಭಕ್ಕೂ ಮುನ್ನ ದೊಡ್ಮನೆಗೆ ಬಂದಿದ್ದ ಸುದೀಪ್ ಬಚ್ಚಿಟ್ಟಿದ್ದ ಚೆಂಡುಗಳನ್ನು ಹುಡುಕುವ ಕೆಲಸವನ್ನ ಧನುಶ್ರೀಗೆ ನೀಡಲಾಗಿತ್ತು. ಬಿಗ್‍ಬಾಸ್ ಸೂಚನೆಯಂತೆ ಮೊದಲ ಸ್ಪರ್ಧಿಯಾಗಿ ಬಂದ ಧನುಶ್ರೀ ಬಚ್ಚಿಟ್ಟಿದ್ದ ಎಲ್ಲ 17 ಚೆಂಡುಗಳನ್ನ ಹುಡುಕಿ ತಮ್ಮ ಬಳಿ ಇರಿಸಿಕೊಂಡಿದ್ದರು. ಆದ್ರೆ ಬೆಳಗ್ಗೆ ದಿವ್ಯಾ 17ರಲ್ಲಿಯ ಒಂದು ಚೆಂಡನ್ನು ಧನುಶ್ರೀಗೆ ಹೇಳದೇ ಎತ್ತಿಟ್ಟುಕೊಂಡರು.

    ಕೆಲವೇ ಕ್ಷಣಗಳಲ್ಲಿ ಚೆಂಡುಗಳನ್ನ ಎಲ್ಲರಿಗೂ ಹಂಚುವಂತೆ ಧನುಶ್ರೀಗೆ ಸೂಚಿಸಿದ್ರು. ಆದ್ರೆ ಒಂದು ಚೆಂಡು ಕಾಣಿಸುತ್ತಿಲ್ಲ ಎಂದು ಹೇಳಿದ ಧನುಶ್ರೀ 16 ಬಾಲ್ ಎಲ್ಲರಿಗೂ ಹಂಚಲು ಮುಂದಾದ್ರು. ಈ ವೇಳೆ ಶಮಂತ್ ಗೌಡ ಮೇಲೆ ಅನುಮಾನ ವ್ಯಕ್ತಪಡಿಸಿದ ಧನುಶ್ರೀ, ಬಾಲ್ ನೀಡಲು ಹಿಂದೇಟು ಹಾಕಿದರು. ಆವಾಗ ನಿಮ್ಮ ಕೂದಲಿನ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ಚೆಂಡು ತೆಗೆದುಕೊಂಡಿಲ್ಲ ಎಂದು ಹೇಳಿದಾಗ ಮುನಿಸಿಕೊಂಡ ಧನುಶ್ರೀ ನನ್ನ ಕೂದಲು ಮೇಲೆ ಯಾಕೆ ಆಣೆ ಮಾಡ್ತೀರಿ. ನಿಮ್ಮ ಕೂದಲಿನ ಮೇಲೆ ಆಣೆ ಮಾಡಿ. ಇಲ್ಲಿಂದ ಹೋಗುವಷ್ಟರಲ್ಲಿ ನಿಮ್ಮ ಕೂದಲು ಬೋಳಿಸಿಯೇ ಕಳಿಸೋದು ಎಂದು ಹೇಳಿ ನಕ್ಕರು.

    ಬಿಗ್‍ಬಾಸ್ ನೀಡಿದ ಮೊದಲ ಟಾಸ್ಕ್ ನಲ್ಲಿ ಗೆದ್ದ ಶಮಂತ್ ಗೌಡ್ ಈ ವಾರದ ವಿನ್ನರ್ ಪಟ್ಟದ ಜೊತೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ನಿರ್ಮಲಾ, ಧನುಶ್ರೀ, ಮಂಜು ಪಾವಗಡ, ನಿಧಿ ಮತ್ತು ಪ್ರಶಾಂತ್ ಸಂಬರಗಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.