Tag: dhanush babu

  • ಬೆಂಗಳೂರಿನ ಧನುಷ್ ಬಾಬುಗೆ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ

    ಬೆಂಗಳೂರಿನ ಧನುಷ್ ಬಾಬುಗೆ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ

    ಬೆಂಗಳೂರು: ಕೊರಿಯಾದಲ್ಲಿ ನಡೆದ 20ನೇ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಧನುಷ್ ಬಾಬು ಬೆಳ್ಳಿ ಪದಕ ಜಯಿಸಿದ್ದಾರೆ.

    200 ಮೀಟರ್ ಟೈಮ್ ಟ್ರಯಲ್ ರೇಸ್‌ನಲ್ಲಿ ಅವರು ಪ್ರಬಲ ಪೈಪೋಟಿ ನೀಡುವ ಮೂಲಕ ಬೆಳ್ಳಿ ಪದಕ ವಿಜೇತರಾದರು. ಧನುಷ್ ಬೆಂಗಳೂರಿನ ಕರ್ನಾಟಕ ಸಿಟಿ ಸ್ಕೇಟರ್ಸ್ ತಂಡದ ಸದಸ್ಯರಾಗಿದ್ದಾರೆ.

    ಬಸವೇಶ್ವರನಗರದ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿರೋ ಅವರು, ಸ್ವತಃ ಕೋಚ್ ಆಗಿರುವ ಬಾಲಾಜಿ ಬಾಬು ಹಾಗೂ ಸುಧಾ ಅವರ ಪುತ್ರನಾಗಿದ್ದಾರೆ. ಇವರ ಸಹೋದರಿ ಮೌನ ಬಾಬು ಕೂಡಾ ರಾಷ್ಟ್ರೀಯ ಮಟ್ಟದ ಸ್ಕೇಟರ್ ಆಗಿದ್ದಾರೆ.

  • ರಾಷ್ಟಮಟ್ಟದ ಸ್ಕೇಟಿಂಗ್ – 4 ಚಿನ್ನದ ಪದಕದ ಜೊತೆ ಬೆಂಗ್ಳೂರಿನ ಧನುಷ್ ಬಾಬು ಹೊಸ ದಾಖಲೆ

    ರಾಷ್ಟಮಟ್ಟದ ಸ್ಕೇಟಿಂಗ್ – 4 ಚಿನ್ನದ ಪದಕದ ಜೊತೆ ಬೆಂಗ್ಳೂರಿನ ಧನುಷ್ ಬಾಬು ಹೊಸ ದಾಖಲೆ

    ಬೆಂಗಳೂರು: ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ಡಿ.15 ರಿಂದ 22 ರವರೆಗೆ ದೆಹಲಿಯಲ್ಲಿ ಆಯೋಜಿಸಿದ 59 ನೇ ರಾಷ್ಟಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಧನುಷ್ ಬಾಬು ನಾಲ್ಕು ಚಿನ್ನದ ಪದಕದ ಜೊತೆಗೆ ದೇಶದ ಅತ್ಯಂತ ವೇಗದ ಸ್ಕೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    17 ವರ್ಷಕ್ಕಿಂತ ಮೇಲ್ಪಟ್ಟ ಇನ್ ಲೈನ್ ಸ್ಕೇಟಿಂಗ್ ನ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿದ್ದ ಧನುಷ್ ಬಾಬು 200 ಮೀಟರ್ ಟೈಂಟ್ರಯಲ್ಸ್ ನಲ್ಲಿ 18.10 ಸೆಕೆಂಡ್ ನಲ್ಲಿ ಗುರಿಮುಟ್ಟಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ವೇಗದಲ್ಲಿ ಗುರಿಮುಟ್ಟಿದ್ದ ಏಕೈಕ ಸ್ಕೇಟರ್ ಎಂಬ ಹೆಗ್ಗಳಿಕೆಗೆ ಧನುಷ್ ಬಾಬು ಪಾತ್ರರಾಗಿದ್ದಾರೆ. 200 ಮೀಟರ್ ರಿಂಕ್ ರೇಸ್ ನಲ್ಲಿ ಚಿನ್ನದ ಪದಕ, ವನ್ ಲ್ಯಾಪ್ ರೋಡ್ ರೇಸ್ ನಲ್ಲಿ ಚಿನ್ನದ ಪದಕ, 100 ಮೀಟರ್ ರೋಡ್ ರೇಸ್ ನಲ್ಲಿ ಚಿನ್ನದ ಪದಕ ಹಾಗೂ ರಿಲೇಯಲ್ಲಿ ಚಿನ್ನದ ಪದಕ ಪಡೆಯುವುದರ ಮೂಲಕ ತಾನು ಭಾಗವಹಿಸಿದ ಎಲ್ಲಾ ನಾಲ್ಕು ಪಂದ್ಯದಲ್ಲೂ ನಾಲ್ಕೂ ಚಿನ್ನದ ಪದಕ ಪಡೆದು ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಇದನ್ನೂ ಓದಿ: ಕಾಗವಾಡ ಮತಕ್ಷೇತ್ರದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‍ಗೆ ಕೊರೊನಾ

    2022ರ ಜುಲೈನಲ್ಲಿ ಯುಎಸ್ ಎ ನಲ್ಲಿ ನಡೆಯಲಿರುವ ವಲ್ರ್ಡ್ ಗೇಮ್ಸ್ ನಲ್ಲೂ ಭಾಗವಹಿಸಲು ಅರ್ಹತೆ ಪಡೆದಿದ್ದು, ವಲ್ರ್ಡ್ ಗೇಮ್ಸ್ ಗೆ 17 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಭಾರತದಿಂದ ಆಯ್ಕೆಯಾದ ಮೊದಲ ಬಾಲಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬೆಂಗಳೂರಿನ ನಿವಾಸಿಯಾದ ಬಾಲಾಜಿ ಬಾಬು ಹಾಗೂ ಸುಧಾ ಬಾಬು ದಂಪತಿಯ ಪುತ್ರನಾಗಿರುವ ಧನುಷ್ ಬಾಬು, ಸಿಟಿ ಸ್ಕೇಟರ್ಸ್ ಕ್ಲಬ್ ನಿಂದ ತನ್ನ ತಂದೆ ಬಾಲಾಜಿ ಬಾಬು ಅವರಿಂದಲೇ ತರಬೇತಿ ಪಡೆಯುತ್ತಿದ್ದಾರೆ.