Tag: Dhanashree

  • ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಯಜುವೇಂದ್ರ ಚಾಹಲ್ ದಂಪತಿ

    ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಯಜುವೇಂದ್ರ ಚಾಹಲ್ ದಂಪತಿ

    ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲ ದಿನಗಳಿಂದ ಸೆಲೆಬ್ರಿಟಿ ಜೋಡಿ ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ಡಿವೋರ್ಸ್ ವದಂತಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಈ ಎಲ್ಲಾ ಊಹಾಪೋಹಗಳಿಗೂ ಈ ಜೋಡಿ ಸ್ಪಷ್ಟನೆ ನೀಡಿದೆ.

    ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ಕಳೆದ ಎರಡು ವರ್ಷಗಳಿಂದ ಹಿಂದೆ ಹಸೆಮಣೆ ಏರಿದ್ದರು. ಖುಷಿಯಿಂದ ಜೀವನ ಸಾಗಿಸುತ್ತಿದ್ದ ಈ ಜೋಡಿಯ ಬಗ್ಗೆ ಡಿವೋರ್ಸ್ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡತ್ತು. ಇದಕ್ಕೆಲ್ಲ ಕಾರಣವು ಇದೆ. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

    ಧನಶ್ರೀ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಚಾಹಲ್ ಸರ್‌ನೇಮ್ ತೆಗೆದು ಹಾಕಿದ್ದರು. ಯಜುವೇಂದ್ರ ಕೂಡ ಹೊಸ ಜೀವನ ಆರಂಭ ಎಂದು ಬರೆದುಕೊಂಡಿದ್ದರು. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಡಿವೋರ್ಸ್ ವಿಚಾರ ಸಖತ್ ಸೌಂಡ್ ಮಾಡಿತ್ತು. ಜತೆಗೆ ಟ್ವೀಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು. ಇದೀಗ ದಂಪತಿಗಳಿಬ್ಬರು ವೀಡಿಯೋ ಮೂಲಕ ಡಿವೋರ್ಸ್ ವದಂತಿಗೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

     

    View this post on Instagram

     

    A post shared by Dhanashree Verma (@dhanashree9)

    ವೀಡಿಯೋದಲ್ಲಿ ಧನಶ್ರೀ ಒಂದು ತಿಂಗಳು ನಾನು ಮನೆಗೆ ಹೋಗುತ್ತೇನೆ ಎಂದು ಚಾಹಲ್‌ಗೆ ಹೇಳುತ್ತಾರೆ. ಆಗ ಅವರು ಖುಷಿಯಿಂದ ಡ್ಯಾನ್ಸ್ ಮಾಡುತ್ತಾರೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಇವರಿಬ್ಬರ ಖುಷಿ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಈ ಮೂಲಕ ಡಿವೋರ್ಸ್‌ ವದಂತಿಗೆ ಫುಲ್‌ ಸ್ಟಾಪ್‌ ಬಿದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ಚಾಹಲ್‍ರನ್ನು ಏರ್‌ಪೋರ್ಟ್‌ಗೆ ಡ್ರಾಪ್ ಮಾಡಲು ಬಂದ ಧನಶ್ರೀ

    ಚಾಹಲ್‍ರನ್ನು ಏರ್‌ಪೋರ್ಟ್‌ಗೆ ಡ್ರಾಪ್ ಮಾಡಲು ಬಂದ ಧನಶ್ರೀ

    ಮುಂಬೈ: ಏಷ್ಯಾಕಪ್‍ಗಾಗಿ ದುಬೈಗೆ ಪ್ರಯಾಣ ಬೆಳೆಸಲು ಮುಂಬೈ ಏರ್‌ಪೋರ್ಟ್‌ಗೆ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ಆಗಮಿಸುತ್ತಿದ್ದಂತೆ ಅವರೊಂದಿಗೆ ಪತ್ನಿ ಧನಶ್ರೀ ಕೂಡ ಕಾಣಿಸಿಕೊಂಡಿದ್ದಾರೆ.

    ಕೆಲದಿನಗಳಿಂದ ಚಹಲ್ ಮತ್ತು ಧನಶ್ರೀ ನಡುವೆ ಒಡಕು ಮೂಡಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಹಾಕಿದ್ದ ಪೋಸ್ಟ್‌ಗಳು ಅನುಮಾನ ಮೂಡಿಸಿತ್ತು. ಇದನ್ನೂ ಓದಿ: ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು ರೂಮರ್ಸ್‍ಗೆ ಟ್ವಿಸ್ಟ್

    ಇದೀಗ ಚಾಹಲ್ ಮತ್ತು ಧನಶ್ರೀ ಏರ್‌ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಾಹಲ್ ಜೊತೆ ಕಾಲಿಗೆ ಪ್ಲಾಸ್ಟರ್ ಹಾಕಿಕೊಂಡು ಬಂದ ಧನಶ್ರೀ ಬಳಿಕ ಫೋಟೋಗೆ ಪೋಸ್ ನೀಡಿದ್ದಾರೆ. ಈ ಮೂಲಕ ಅವರಿಬ್ಬರ ದಾಂಪತ್ಯ ಜೀವನದ ಕುರಿತಾಗಿ ಎದ್ದಿದ್ದ ರೂಮರ್ಸ್‍ಗಳಿಗೆ ತೆರೆಎಳೆದಿದ್ದಾರೆ.

    ಚಹಲ್ ಕೆಲದಿನಗಳ ಹಿಂದೆ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಇವರಿಬ್ಬರ ದಾಂಪತ್ಯ ಜೀವನ ಮುರಿದುಬಿದ್ದಿದೆ ಎಂಬ ವದಂತಿ ಹರಿದಾಡಿತ್ತು. ಇದನ್ನೂ ಓದಿ: ರಾಹುಲ್ ದ್ರಾವಿಡ್‍ಗೆ ಕೊರೊನಾ- ಏಷ್ಯಾ ಕಪ್ ಟೂರ್ನಿಯಿಂದ ಹೊರಕ್ಕೆ

    ಈ ಬಗ್ಗೆ ಕೆಲದಿನಗಳ ಹಿಂದೆ ಇನ್‍ಸ್ಟಾಗ್ರಾಮ್‍ನಲ್ಲಿ ಧನಶ್ರೀ ಬರೆದುಕೊಂಡು ಸ್ಪಷ್ಟನೆ ನೀಡಿದ್ದರು. ಕಳೆದ 14 ದಿನಗಳಿಂದ ತುಂಬಾ ಕಷ್ಟದ ದಿನವನ್ನು ಅನುಭವಿಸುತ್ತಿದ್ದೆ. ಡ್ಯಾನ್ಸ್ ಮಾಡುವಾಗ ಬಿದ್ದು ಕಾಲು ಮುರಿತಕ್ಕೊಳಗಾಗಿತ್ತು. ಆ ಬಳಿಕ ಚಿಕಿತ್ಸೆ ಪಡೆದು ಇದೀಗ ಚೇತರಿಕೆ ಕಾಣುತ್ತಿದೆ. ಈ ಕಷ್ಟದ ಸಮಯದಲ್ಲಿ ನನ್ನೊಂದಿಗೆ ನನ್ನ ಕುಟುಂಬದವರು, ಮನೆಯವರು ಮತ್ತು ನನ್ನ ಗಂಡ ಧೈರ್ಯ ತುಂಬಿದ್ದಾರೆ. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮತ್ತೆ ನೃತ್ಯದತ್ತ ಗಮನ ಹರಿಸಲು ಮುಂದಾಗುತ್ತೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಚಹಲ್ ಕಾಮೆಂಟ್ ಮಾಡಿದ್ದು, ನನ್ನ ಮಹಿಳೆ ಎಂದು ಅಧಿಕೃತ ಖಾತೆಯಿಂದ ಕಾಮೆಂಟ್ ಹಾಕಿದ್ದರು. ಈ ಮೂಲಕ ಕೆಲದಿನಗಳಿಂದ ಹರಿದಾಡುತ್ತಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಸುದ್ದಿಗೆ ಅಂತ್ಯ ಹಾಡಲು ಮುಂದಾಗಿದ್ದರು. ಇದೀಗ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಂತಸ ತರಿಸಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    Live Tv
    [brid partner=56869869 player=32851 video=960834 autoplay=true]

  • ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    ಮುಂಬೈ: ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ನಡುವಿನ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದ್ಯಾ? ಹೀಗೊಂದು ಪ್ರಶ್ನೆಯನ್ನು ಇಟ್ಟುಕೊಂಡು ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.

    ಭಾರತದ ಖ್ಯಾತ ಜೋಡಿಗಳಲ್ಲಿ ಒಬ್ಬರಾಗಿದ್ದ ಚಹಲ್ ಮತ್ತು ಧನಶ್ರೀ, 2020ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು. ಆ ಬಳಿಕ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಬ್ರೇಕ್ ಅಪ್‍ಗೆ ಮುಂದಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪ್ರಮುಖ ಕಾರಣ ಇವರಿಬ್ಬರು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿರುವ ಪೋಸ್ಟ್. ಇದನ್ನೂ ಓದಿ: ನಾನು ರೊನಾಲ್ಡೊ ಆಡುವ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಖರೀದಿಸುತ್ತೇನೆ: ಎಲೋನ್ ಮಸ್ಕ್

    ಹೌದು. ಚಹಲ್ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.

    ಇದನ್ನು ಗಮನಿಸಿದ ಅಭಿಮಾನಿಗಳು ಇವರಿಬ್ಬರ ದಾಂಪತ್ಯ ಜೀವನ ಮುರಿದುಬಿದ್ದಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

    ಇತ್ತ ಚಹಲ್ ಏಷ್ಯಾ ಕಪ್ ಟೂರ್ನಿಗಾಗಿ ಸಿದ್ಧತೆಯಲ್ಲಿದ್ದಾರೆ. ಏಷ್ಯಾಕಪ್ ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗುತ್ತಿದ್ದು, ಆಗಸ್ಟ್ 28 ರಂದು ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]