Tag: Dhamaka

  • ತೆಲುಗು ಚಿತ್ರಗಳಿಂದ ಶ್ರೀಲೀಲಾ ಔಟ್- ಕಾಲಿವುಡ್‌ನತ್ತ ‘ಕಿಸ್’ ನಟಿ

    ತೆಲುಗು ಚಿತ್ರಗಳಿಂದ ಶ್ರೀಲೀಲಾ ಔಟ್- ಕಾಲಿವುಡ್‌ನತ್ತ ‘ಕಿಸ್’ ನಟಿ

    ನ್ನಡದ ನಟಿ ಶ್ರೀಲೀಲಾ (Sreeleela) ಟಾಲಿವುಡ್‌ನಲ್ಲಿ (Tollywood) ಮೋಡಿ ಮಾಡ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಗಮನ ಸೆಳೆದಿದ್ದ ಶ್ರೀಲೀಲಾಗೆ ಇದೀಗ ಲಕ್ ಕೈ ಕೊಟ್ಟಂತಿದೆ. ವಿಜಯ್ ದೇವರಕೊಂಡ, ನಿತಿನ್ ಸಿನಿಮಾಗಳು ‘ಕಿಸ್’ ನಟಿಯ ಕೈ ತಪ್ಪಿ ಹೋದ್ಮೇಲೆ ತಮಿಳಿನತ್ತ ನಟಿ ಮುಖ ಮಾಡಿದ್ದಾರೆ.

    ತೆಲುಗಿನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ಶ್ರೀಲೀಲಾ ಮಿಂಚುತ್ತಿದ್ದರು. ಈಗ ಅದೃಷ್ಟ ಕೂಡ ಶ್ರೀಲೀಲಾ ಕಡೆ ತಿರುಗಿ ನೋಡ್ತಿಲ್ಲ. ಈ ಬೆನ್ನಲ್ಲೇ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್‌ಗೆ (Ajith Kumar) ನಾಯಕಿಯಾಗಿ ನಟಿಸುವ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:‘ಉತ್ತರಕಾಂಡ’ ಚಿತ್ರದ ವಿಶೇಷ ಪಾತ್ರದಲ್ಲಿ ಉಮಾಶ್ರೀ

    ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾರನ್ನು ಸಂಪರ್ಕಿಸಿದೆ ಚಿತ್ರತಂಡ. ನಟಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ. ಮೇ 1ರಂದು ಅಜಿತ್ ಹುಟ್ಟುಹಬ್ಬದಂದು ಅಧಿಕೃತ ಮಾಹಿತಿ ಹೊರಬೀಳಲಿದೆ. ಅಜಿತ್ ಕುಮಾರ್ ‘ವಿದಾ ಮುಯಾರ್ಚಿ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

    ಕೆಲದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮಿಳು ಸಿನಿಮಾದಲ್ಲಿ ನಟಿಸುವ ಇಂಗಿತವನ್ನು ಶ್ರೀಲೀಲಾ ವ್ಯಕ್ತಪಡಿಸಿದ್ದರು. ಇದೀಗ ಅಜಿತ್ ಜೊತೆಗಿನ ಸಿನಿಮಾ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ಆಸೆ ವ್ಯಕ್ತಪಡಿಸಿದ ಶ್ರೀಲೀಲಾ

    ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ಆಸೆ ವ್ಯಕ್ತಪಡಿಸಿದ ಶ್ರೀಲೀಲಾ

    ನ್ನಡದ ‘ಕಿಸ್’ (Kiss)  ಬೆಡಗಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್‌ನ (Tollywood) ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ವೃತ್ತಿರಂಗದಲ್ಲಿ ಸತತ ಸೋಲಿನ ನಂತರ ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ನಟಿ ಆಸೆ ವ್ಯಕ್ತಪಡಿಸಿದ್ದಾರೆ.

    ಶ್ರೀಲೀಲಾ ಅಂದಕ್ಕೆ, ಆಕೆಯ ಡ್ಯಾನ್ಸ್‌ಗೆ ಅಪಾರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿಸ್ ಬೆಡಗಿ ನಟಿಸಿದ ಸಿನಿಮಾಗಳು ಹಿಟ್‌ ಆಗಿರಲಿ ಅಥವಾ ಫ್ಲಾಪ್ ಆಗಿರಲಿ ಅವರ ಮೇಲಿನ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಇದೀಗ ತೆಲುಗಿನಲ್ಲಿ ಮಿಂಚುತ್ತಿರುವ ಶ್ರೀಲೀಲಾ ಇತ್ತೀಚೆಗೆ ತಮಿಳುನಾಡಿನಲ್ಲಿ ಮೆಡಿಕಲ್‌ ಕಾಲೇಜು ಕಾರ್ಯಕ್ರಮವೊಂದರಲ್ಲಿ ನಟ ಶಿವಕಾರ್ತಿಕೇಯನ್‌ ಜೊತೆ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ, ತಮಿಳು ಅಭಿಮಾನಿಗಳ ಕ್ರೇಜ್ ನೋಡಿ ನಟಿ ಶಾಕ್ ಆಗಿದ್ದಾರೆ.

    ನನಗೆ ತುಂಬಾ ಖುಷಿಯಾಗಿದೆ. ನನಗೆ ಇಷ್ಟು ದಿನ ನನಗೊಂದು ಅನುಮಾನವಿತ್ತು. ನನಗೆ ತಮಿಳು ಬರುವುದಿಲ್ಲ, ತಮಿಳಿನಲ್ಲಿ ಸಿನಿಮಾ ಮಾಡಿಲ್ಲ. ಇಲ್ಲಿನವರಿಗೆ ನನ್ನ ಪರಿಚಯ ಇರಲ್ಲ ಎಂದುಕೊಂಡಿದ್ದೆ. ನನ್ನನ್ನು ಅತಿಥಿ ಆಗಿ ಕರೆದಾಗ, ನನ್ನ ಹೇಗೆ ಸ್ವಾಗತಿಸುತ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲಿ ನಿಮ್ಮ ಪ್ರೀತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಿಮ್ಮನ್ನು ನೋಡಿದ ಮೇಲೆ ಒಂದು ತಮಿಳು ಚಿತ್ರ (Tamil Films) ಮಾಡಬೇಕು ಅನ್ನಿಸುತ್ತಿದೆ ಎಂದು ನಟಿ ಮಾತನಾಡಿದ್ದಾರೆ.

    ಮೆಡಿಕಲ್ ಕಾಲೇಜಿನಲ್ಲಿ ಇಷ್ಟು ಎನರ್ಜಿ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ನಾನು ಕೂಡ ಮೆಡಿಕಲ್ ವಿದ್ಯಾರ್ಥಿ. ನಿಮ್ಮನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಸದ್ಯ ಶ್ರೀಲೀಲಾ ಮಾತುಗಳು ವೈರಲ್ ಆಗಿವೆ. ಇದನ್ನೂ ಓದಿ:ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

    ಸದ್ಯ ಪವನ್ ಕಲ್ಯಾಣ್‌ಗೆ (Pawan Kalyan) ನಾಯಕಿಯಾಗಿ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಈ ಸಿನಿಮಾ ಶ್ರೀಲೀಲಾ (Sreeleela) ಕೆರಿಯರ್‌ಗೆ ಬ್ರೇಕ್ ಕೊಡುತ್ತಾ ಕಾದುನೋಡಬೇಕಿದೆ.

  • ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ

    ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ

    ನ್ನಡತಿ, ತೆಲುಗಿನ ಬಹಿಬೇಡಿಕೆಯ ನಟಿ ಶ್ರೀಲೀಲಾ (Sreeleela) ಇದೀಗ ಕೆರಿಯರ್ ಸಕ್ಸಸ್‌ಗಾಗಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕಳೆದ ವರ್ಷ ಶ್ರೀಲೀಲಾ ಭರ್ತಿ ಅರ್ಧ ಡಜನ್ ತೆಲುಗು ಸಿನಿಮಾ ಮಾಡಿದ್ದಾರೆ. ಆದರೆ ಯಾವುದೂ ಹಿಟ್ ಆಗಲಿಲ್ಲ ಅನ್ನೋದೇ ದುರಂತ. ಅದಕ್ಕೀಗ ಶ್ರೀಲೀಲಾ ನಯಾ ಸಂಕಲ್ಪ ಮಾಡಿದ್ದಾರೆ.

    ತೆಲುಗು ಇಂಡಸ್ಟ್ರಿಯಲ್ಲಿ ಸಮಕಾಲಿನ ನಟಿಯರಿಗೆ ಠಕ್ಕರ್ ಕೊಟ್ಟು ಜಾಗ ಮಾಡ್ಕೊಂಡಿರುವವರು ಶ್ರೀಲೀಲಾ. ವರ್ಷವೊಂದಕ್ಕೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದರು. ಬಗೆ ಬಗೆಯ ಪಾತ್ರ, ಸ್ಟಾರ್ ನಟರ ಚಿತ್ರ. ಎಲ್ಲಾ ಭಾಗ್ಯ ಶ್ರೀಲೀಲಾಗೆ ಒದಗಿ ಬಂತು. ಆದರೆ ಅದ್ಯಾವ ಚಿತ್ರಗಳೂ ಆರಕ್ಕೇರಲಿಲ್ಲ. ಬ್ಲಾಕ್‌ಬಸ್ಟರ್ ಎಂದು ಕರೆಸಿಕೊಳ್ಳಲಿಲ್ಲ. ಅದಕ್ಕೀಗ ಮುಂದಿನ ದಿನಗಳಲ್ಲಿ ಶ್ರೀಲೀಲಾ ಬಂದಿರುವ ಎಲ್ಲಾ ಪ್ರಾಜೆಕ್ಟ್ ಒಪ್ಪಿಕೊಳ್ಳದಿರುವ ತೀರ್ಮಾನಕ್ಕೆ ಬಂದಿದ್ದಾರೆ.

    ಕಳೆದ ವರ್ಷ 6 ಸಿನಿಮಾಗಳಲ್ಲಿ ನಟಿಸಿದ್ದರು. ಯಾವುದು ಹೇಳಿಕೊಳ್ಳುವಂತೆ ಹಿಟ್ ಆಗ್ಲಿಲ್ಲ. ಆಫರ್‌ಗಳೇನೂ ಬರುತ್ತಿದೆ. ಆದರೆ ಸೂಕ್ತ ಸಿಗುತ್ತಿಲ್ಲ. ಹೀಗಾಗಿ ಕಾದು ನೋಡ್ತಿದ್ದಾರೆ ಶ್ರೀಲೀಲಾ. ಕ್ವಾಂಟಿಟಿ ಬಿಟ್ಟು ಕ್ವಾಲಿಟಿ ಕಡೆ ಗಮನ ಕೊಡ್ತಿದ್ದಾರಂತೆ. ಹೀಗಾಗಿ ಹಿಂದೆ ಒಪ್ಪಿಕೊಂಡ ಪ್ರಾಜೆಕ್ಟ್ ಕಡೆ ಗಮನ ಕೊಡ್ತಿದ್ದಾರೆ. ಪವನ್ ಕಲ್ಯಾಣ್ (Pawan Kalyan) ಜೊತೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಈ ಚಿತ್ರದ ನಂತರ ‘ಕಿಸ್’ ಬೆಡಗಿಯ ಅದೃಷ್ಟ ಬದಲಾಗುತ್ತಾ? ಕಾಯಬೇಕಿದೆ.

    ಈ ಚಿತ್ರದ ರಿಲೀಸ್ ಆದ್ಮೇಲೆಯೇ ಮುಂದಿನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡೋದು ಶ್ರೀಲೀಲಾ ಪ್ಲ್ಯಾನ್ ಅನ್ನೋದು ಟಾಲಿವುಡ್ ಗಲ್ಲಿಯಿಂದ ಬಂದ ಸಮಾಚಾರ. ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾ ಮೇ ತಿಂಗಳಲ್ಲಿ ರಿಲೀಸ್ ಎಂದ ಸುದೀಪ್

    ಅಂದಹಾಗೆ, ಕನ್ನಡದ ಕಿಸ್, ಭರಾಟೆ, ಬೈಟು ಲವ್ ಚಿತ್ರಗಳಲ್ಲಿ ನಟಿಸಿದ ಮೇಲೆ ತೆಲುಗಿನ ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ಟಾಲಿವುಡ್‌ಗೆ ನಟಿ ಲಗ್ಗೆ ಇಟ್ಟರು.

  • ಸ್ಟಾರ್ ನಟರಿಗೆ ತಲೆನೋವಾದ ಶ್ರೀಲೀಲಾ- ಅಂತಹದ್ದೇನಾಯ್ತು?

    ಸ್ಟಾರ್ ನಟರಿಗೆ ತಲೆನೋವಾದ ಶ್ರೀಲೀಲಾ- ಅಂತಹದ್ದೇನಾಯ್ತು?

    ನ್ನಡತಿ ಶ್ರೀಲೀಲಾ (Sreeleela) ಇದೀಗ ಟಾಲಿವುಡ್‌ನಲ್ಲಿ (Tollywood) ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಕಿಸ್ ಬೆಡಗಿ ಡಿಮ್ಯಾಂಡ್‌ನಲ್ಲಿದ್ದಾರೆ. ಹೀಗಿರುವಾಗ ಶ್ರೀಲೀಲಾ ಪ್ರತಿಭೆ ಇದೀಗ ಸ್ಟಾರ್ ನಟರ ನಿದ್ದೆಗೆಡಿಸಿದೆ. ಶ್ರೀಲೀಲಾ ಜೊತೆ ನಟಿಸಲು ಸ್ಟಾರ್ ನಟರಿಗೆ ಚಿಂತೆ ಶುರುವಾಗಿದೆ. ಇದನ್ನೂ ಓದಿ:ಜಪಾನ್‌ನಲ್ಲಿ ಮಹೇಶ್ ಬಾಬು ಜೊತೆಗಿನ ಚಿತ್ರದ ಬಗ್ಗೆ ರಾಜಮೌಳಿ ಅಪ್‌ಡೇಟ್

    ತೆಲುಗಿನಲ್ಲಿ 2 ಸಿನಿಮಾ ಮಾಡಿದ್ಮೇಲೆ ಸ್ಟಾರ್ ಹೀರೋಗಳಿಗೆ ನಾಯಕಿಯಾಗುವ ಮೂಲಕ ಲೀಲಾ ಹಿಟ್ ಲಿಸ್ಟ್‌ಗೆ ಸೇರಿಕೊಂಡಿದ್ದಾರೆ. ಸ್ಟಾರ್ ನಟಿಮಣಿಯರ ಲಿಸ್ಟ್‌ಗೆ ಸೇರ್ಪಡೆಯಾದರು. ಇದೀಗ ಪ್ರತಿಭೆಯೇ ಬೇರೆ ಸ್ಟಾರ್ ನಟರಿಗೆ ತಲೆ ನೋವಾಗಿದೆ. ಸೌಂದರ್ಯ, ಡ್ಯಾನ್ಸಿಂದಲೇ ಗಮನ ಸೆಳೆದ ಶ್ರೀಲೀಲಾ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿಗೆ ನಾಯಕಿಯಾಗಿ ಸದ್ದು ಮಾಡಿದ್ದರು. ಆದರೆ ಕಥೆ ಹೆಚ್ಚಿನ ಗಮನ ವಹಿಸದ ಕಾರಣ ಶ್ರೀಲೀಲಾ ಸಿನಿಮಾಗಳು ಮಕಾಡೆ ಮಲಗಿತ್ತು. ಇನ್ನೂ ಶ್ರೀಲೀಲಾರ (Sreeleela) ಎನರ್ಜಿಟಿಕ್ ಡ್ಯಾನ್ಸ್ ಬೇರೇ ನಟರಿಗೆ ಮ್ಯಾಚ್ ಮಾಡೋದು ಕಷ್ಟವಾಗಿದೆ.

    ಶ್ರೀಲೀಲಾ ವೇಗ, ಎನರ್ಜಿಗೆ ಮ್ಯಾಚ್ ಮಾಡಲಾಗದೇ ಅವರ ಜೊತೆ ಕೆಲಸ ಮಾಡಲು ಹಿಂದೇಟು ಹಾಕ್ತಿದ್ದಾರೆ. ಯಾವುದೇ ರೀತಿಯ ಸ್ಟೇಪ್ಸ್ ಇರಲಿ, ಅಲ್ಲಿಯೇ ಕಲಿತು ಸೆಟ್‌ನಲ್ಲಿ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡುತ್ತಾರೆ. ಆದರೆ ಹೀರೋಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಇದೇ ಈಗ ನಟರಿಗೆ ತಲೆ ನೋವಾಗಿದೆ.

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ (Pawan Kalyan) ಹೀರೋಯಿನ್ ಆಗಿ ಶ್ರೀಲೀಲಾ ನಟಿಸಿದ್ದಾರೆ. ಹೊಸ ಬಗೆಯ ಕಥೆಗಳನ್ನು ನಟಿ ಕೇಳ್ತಿದ್ದಾರೆ.

  • ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?

    ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?

    ನ್ನಡದ ಹುಡುಗಿ, ಬೆಂಗಳೂರಿನ ಬೆಡಗಿ ಶ್ರೀಲೀಲಾ (Sreeleela) ಅವರಿಗೆ ಇದೀಗ ಟಾಲಿವುಡ್‌ನಲ್ಲಿ (Tollywood) ಅದೃಷ್ಟ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಸೋಲನ್ನು ಕಂಡ ‘ಕಿಸ್’ ನಟಿಗೆ ಈಗ ‘ಗುಂಟೂರು ಖಾರಂ’ ಸಿನಿಮಾದಿಂದ ಯಶಸ್ಸು ಸಿಕ್ಕಿದೆ.

    ಕಿಸ್, ಭರಾಟೆ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ಶ್ರೀಲೀಲಾ ಬಳಿಕ ತೆಲುಗಿಗೆ ಹಾರಿದ್ದರು. ಧಮಾಕಾ’ ಚಿತ್ರದ ಸಕ್ಸಸ್ ಬಳಿಕ ‘ಸ್ಕಂದ’, ‘ಆದಿಕೇಶವ’, ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಸೋಲಿನಿಂದ ಕಂಗೆಟ್ಟ ನಟಿಗೆ ‘ಗುಂಟೂರು ಖಾರಂ’ ಚಿತ್ರದಿಂದ ಯಶಸ್ಸು ಸಿಕ್ಕಿದೆ. ಇದನ್ನೂ ಓದಿ:ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್- 55 ಲಕ್ಷ ಮೊತ್ತದಲ್ಲಿ ಲೀಲಾವತಿ ಸ್ಮಾರಕ

    ಜನವರಿ 12ರಂದು ರಿಲೀಸ್ ಆದ ‘ಗುಂಟೂರು ಖಾರಂ’ (Guntur Kaaram) ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ಶ್ರೀಲೀಲಾ ನಟನೆ ಮತ್ತು ಡ್ಯಾನ್ಸ್, ಚಿತ್ರದ ಕಥೆ ಬಗ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಪ್ರಿನ್ಸ್- ಶ್ರೀಲೀಲಾ ಜೋಡಿ ಮೋಡಿ ಮಾಡುತ್ತಿದೆ.

    ರಶ್ಮಿಕಾ(Rashmika Mandanna), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ (Krithi Shetty) ಠಕ್ಕರ್ ಕೊಟ್ಟು ಮತ್ತೆ ಸಕ್ಸಸ್ ರೇಸ್‌ನಲ್ಲಿದ್ದಾರೆ ಶ್ರೀಲೀಲಾ. ಈಗ ಮತ್ತೆ ಶ್ರೀಲೀಲಾಗೆ ಸ್ಟಾರ್ ನಟರ ಚಿತ್ರಗಳು ಅರಸಿ ಬರುತ್ತಿದೆ. ಇದರ ನಡುವೆ ನಟಿ, ಎಂಬಿಬಿಎಸ್ ಫೈನಲ್ ಇಯರ್ ಓದುತ್ತಿದ್ದಾರೆ. ಎಕ್ಸಾಂ ಹತ್ತಿರವಿರುವ ಕಾರಣ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿಯೂ ಇದೆ.

    ಅದೃಷ್ಟ ಕೈ ಹಿಡಿದಿರೋ ಸಮಯದಲ್ಲಿ ಕನ್ನಡದ ಬ್ಯೂಟಿ ಮತ್ತೆ ಸಿನಿಮಾಗಳನ್ನು ಮಾಡುತ್ತಾರಾ? ಅಥವಾ ಎಜುಕೇಷನ್‌ಗೆ ಒತ್ತು ಕೊಟ್ಟು ವಿರಾಮ ತೆಗೆದುಕೊಳ್ತಾರೆ ಕಾಯಬೇಕಿದೆ. ಡಿಮ್ಯಾಂಡ್‌ ಇರೋವಾಗಲೇ ಹುಡುಕಿ ಬಂದಿರೋ ಅದೃಷ್ಟದ ಕಡೆ ತಿರುಗಿ ನೋಡಬೇಕಲ್ಲವೇ? ಹಾಗಾದ್ರೆ ‘ಕಿಸ್‌’ ನಟಿ ಮುಂದೆ ಏನ್ಮಾಡ್ತಾರೆ ಕಾದುನೋಡೋಣ.

  • ‘ಭಗವಂತ ಕೇಸರಿ’ ಸಕ್ಸಸ್ ಬಳಿಕ ದುಬಾರಿ ನಟಿಯಾದ ಶ್ರೀಲೀಲಾ

    ‘ಭಗವಂತ ಕೇಸರಿ’ ಸಕ್ಸಸ್ ಬಳಿಕ ದುಬಾರಿ ನಟಿಯಾದ ಶ್ರೀಲೀಲಾ

    ನ್ನಡದ ‘ಕಿಸ್’ (Kiss) ಬೆಡಗಿ ಶ್ರೀಲೀಲಾ (Sreeleela) ಈಗ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಸ್ಕಂದ’ ಮತ್ತು ‘ಭಗವಂತ ಕೇಸರಿ’ ಚಿತ್ರ ಹಿಟ್ ಆದ್ಮೇಲೆ ತಮ್ಮ ಸಂಭಾವನೆಯನ್ನ ಶ್ರೀಲೀಲಾ ಏರಿಸಿಕೊಂಡಿದ್ದಾರೆ.

    ‘ಧಮಾಕ’ (Dhamaka) ಬೆಡಗಿ ಟಾಲಿವುಡ್‌ನಲ್ಲಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ. ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ. ಸಾಲು ಸಾಲು ಸಿನಿಮಾಗಳು ಆಫರ್‌ಗಳು ಶ್ರೀಲೀಲಾರನ್ನ ಅರಸಿ ಬರುತ್ತಿವೆ. ಹೀಗಿರುವಾಗ ನಟಿಗೆ ಡಿಮ್ಯಾಂಡ್ ಜಾಸ್ತಿ ಆಗುತ್ತಿದ್ದಂತೆ ಸಂಭಾವನೆ ಏರಿಕೆ ಮಾಡಿದ್ದಾರೆ. ಕೆರಿಯರ್ ಆರಂಭದಲ್ಲಿಯೇ ದುಬಾರಿ ನಟಿಯಾಗಿ ಸದ್ದು ಮಾಡ್ತಿದ್ದಾರೆ.

    ಒಂದು ಸಿನಿಮಾಗೆ 3.5 ಕೋಟಿ ಅಥವಾ 3 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದ ನಟಿ ಈಗ 4 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಸದ್ಯ ಸಿನಿಮಾ ಜೊತೆಗೆ ಶ್ರೀಲೀಲಾ ಸಂಭಾವನೆ ಮ್ಯಾಟರ್ ಸಿನಿಪಂಡಿತರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:‘ಬೇಬಿ’ ಬಳಿಕ ಮತ್ತೆ ಡ್ಯುಯೇಟ್ ಹಾಡಲು ಸಜ್ಜಾದ ಆನಂದ್ ದೇವರಕೊಂಡ

    ‘ಆದಿಕೇಶವ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಪವನ್ ಕಲ್ಯಾಣ್, ಅಲ್ಲು ಅರ್ಜುನ್, ನಿತಿನ್ ಜೊತೆಗಿನ ಸಿನಿಮಾ ಕೆಲಸಗಳು ನಡೆಯುತ್ತಿದೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಧಮಾಕಾ’ ಬಳಿಕ ಮತ್ತೆ ಗೆದ್ದು ಬೀಗಿದ ಶ್ರೀಲೀಲಾ

    ‘ಧಮಾಕಾ’ ಬಳಿಕ ಮತ್ತೆ ಗೆದ್ದು ಬೀಗಿದ ಶ್ರೀಲೀಲಾ

    ನ್ನಡದ ಕಿಸ್ ಬ್ಯೂಟಿ ಶ್ರೀಲೀಲಾ (Sreeleela) ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಧಮಾಕಾ (Dhamaka) ಸಕ್ಸಸ್ ಬಳಿಕ ತೆಲುಗಿನ ತಮ್ಮ 3ನೇ ಚಿತ್ರ ‘ಸ್ಕಂದ’ (Skanda Film) ಮೂಲಕ ನಟಿ ಗಮನ ಸೆಳೆಯುತ್ತಿದ್ದಾರೆ. ಧಮಾಕ ಬಳಿಕ ಮತ್ತೆ ಲಕ್ಕಿ ನಟಿ ಶ್ರೀಲೀಲಾ ಗೆದ್ದಿ ಬೀಗುತ್ತಿದ್ದಾರೆ.

    ರಾಮ್ ಪೋತಿನೇನಿಗೆ ಜೊತೆಯಾಗಿ ‘ಸ್ಕಂದ’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಗೆದ್ದಿದ್ದಾರೆ. ಸೆ.28ರಂದು ಬಹುಭಾಷೆಗಳಲ್ಲಿ ರಿಲೀಸ್ ಆದ ಸ್ಕಂದ ಚಿತ್ರ ಈಗ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

    ‘ಸ್ಕಂದ’ ರಿಲೀಸ್ ಆದ ಮೊದಲ ದಿನ ಒಟ್ಟು 18.2 ಕೋಟಿ ರೂಪಾಯಿ ಗಳಿಸಿದೆ. 2 ದಿನಗಳಲ್ಲಿ 27.6 ಕೋಟಿ ಗಳಿಸುವ ಮೂಲಕ ಚಿತ್ರ ಪೀಕ್‌ನಲ್ಲಿದೆ. ವ್ಯಾಕ್ಸಿನ್ ವಾರ್, ಚಂದ್ರಮುಖಿ 2 ನಡುವೆ ಸ್ಕಂದ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ವಾರಾಂತ್ಯ ಶುರುವಾಗುತ್ತಿರೋ ಕಾರಣ, ಚಿತ್ರ ಮತ್ತಷ್ಟು ಕಲೆಕ್ಷನ್‌ ಆಗುವ ಬಗ್ಗೆ ನೀರೀಕ್ಷೆ ಇದೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಬ್ರೇಕ್‌ ಹಾಕಿದ ರಚಿತಾ- ಸೋಶಿಯಲ್‌ ಮೀಡಿಯಾದಲ್ಲಿ ನಟಿ ಮನವಿ

    ರಾಮ್ ಪೋತಿನೇನಿ-ಶ್ರೀಲೀಲಾ ಜೋಡಿಯನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ‘ಸ್ಕಂದ’ ಚಿತ್ರದಿಂದ ಶ್ರೀಲೀಲಾಗೆ ಕೆರಿಯರ್‌ಗೆ ಮತ್ತೆ ಪ್ಲಸ್ ಆಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿಗೆ ಮತ್ತಷ್ಟು ಬಂಪರ್ ಆಫರ್ ಅರಸಿ ಬರೋದು ಗ್ಯಾರಂಟಿ ಅಂತಿದ್ದಾರೆ ಸಿನಿಮಾ ಪ್ರೇಮಿಗಳು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಟೈಗರ್ ನಾಗೇಶ್ವರ್ ರಾವ್’ ಟೀಸರ್ ಔಟ್- ಮಾಸ್ ಆಗಿ ಎಂಟ್ರಿ ಕೊಟ್ಟ ರವಿತೇಜ

    ‘ಟೈಗರ್ ನಾಗೇಶ್ವರ್ ರಾವ್’ ಟೀಸರ್ ಔಟ್- ಮಾಸ್ ಆಗಿ ಎಂಟ್ರಿ ಕೊಟ್ಟ ರವಿತೇಜ

    ಮಾಸ ಮಹಾರಾಜ ರವಿತೇಜ ನಟನೆಯ ‘ಟೈಗರ್ ನಾಗೇಶ್ವರ್ ರಾವ್’ (Tiger Nageshwara Rao) ಟೀಸರ್ ರಿಲೀಸ್ ಆಗಿದೆ. ನಯಾ ಲುಕ್‌ನಲ್ಲಿ ಧಮಾಕ (Dhamaka) ಹೀರೋ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ರಿಲೀಸ್ ಆಗಿದೆ. ಇದನ್ನೂ ಓದಿ:ಪಡ್ಡೆಹುಡುಗರ ರಾಣಿ ಶ್ರೀಲೀಲಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್

    ರವಿತೇಜ ನಟನೆಯ ‘ಟೈಗರ್ ನಾಗೇಶ್ವರ್ ರಾವ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಮದ್ರಾಸ್ ಸೆಂಟರ್ ಜೈಲಿನಿಂದ ಎಸ್ಕೇಪ್ ಆಗಿರುವ ಸ್ಟುವರ್ಟ್ ಪುರಂ ಕಳ್ಳನಿಗಾಗಿ ಹುಡುಗಾಟ ನಡೆಸುತ್ತಿರುವ ದೃಶ್ಯಗಳ ಮೂಲಕ ಟೀಸರ್ ತೆರೆದುಕೊಳ್ಳುತ್ತದೆ. ಮುರಳಿ ಶರ್ಮಾ- ಅನುಪಮ್ ಖೇರ್ (Anupam Kher) ಗುಪ್ತಚರ ಇಲಾಖೆಯ ಅಧಿಕಾರಿಗಳಾಗಿ ನಟಿಸಿದ್ದಾರೆ. ನಾಗೇಶ್ವರ್ ರಾವ್ ಕುಖ್ಯಾತ ಕಳ್ಳ ಯಾಕೆ ಆಗ್ತಾನೆ ಅನ್ನೋದನ್ನು ಮುರಳಿ ಶರ್ಮಾ ವಿವರಿಸ್ತಾರೆ. ಸಖತ್ ಮಾಸ್ ಅವತಾರದಲ್ಲಿ ರವಿತೇಜ ದರ್ಶನ ಕೊಟ್ಟಿದ್ದಾರೆ. ಹಿಂದಿನ ಸಿನಿಮಾಗಳಿಂತ ಈ ಚಿತ್ರದಲ್ಲಿ ಮಾಸ್ ಮಹಾರಾಜ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

    70ರ ಕಾಲಘಟ್ಟದ ಹೈದ್ರಾಬಾದ್‌ನ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಕ್ಕಾಗಿ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ನೂಪುರ್ ಸನೋನ್ (Nupur Sanon) ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

    ದಸರಾ ಹಬ್ಬಕ್ಕೆ ‘ಟೈಗರ್ ನಾಗೇಶ್ವರ್ ರಾವ್’ ಬಾಕ್ಸಾಫೀಸ್ ಬೇಟೆಗಿಳಿಯಲಿದ್ದು, ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಮಾಡಲಾಗ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಭರಾಟೆ’ ಬ್ಯೂಟಿಯ ಲೀಲೆಗೆ ಟಾಲಿವುಡ್ ಮಂದಿ ಬೋಲ್ಡ್

    ‘ಭರಾಟೆ’ ಬ್ಯೂಟಿಯ ಲೀಲೆಗೆ ಟಾಲಿವುಡ್ ಮಂದಿ ಬೋಲ್ಡ್

    ಯಾವಾಗ ಶ್ರೀಲೀಲಾ (Sreeleela) ಬಲಗಾಲಿಟ್ಟು ಟಾಲಿವುಡ್ (Tollywood) ಮನೆ ಸೇರಿದರೊ ಮತ್ತೆ ಹಿಂದುರಿಗಿ ನೋಡ್ಲಿಲ್ಲ. ಸಾಲು ಸಾಲು ಸಿನಿಮಾಗಳಿಗೆ ಬುಕ್ ಆಗಿರುವ ಶ್ರೀಲೀಲಾ ಇದೀಗ ಐಟಂ ಡ್ಯಾನ್ಸ್‌ಲ್ಲೂ ಸಹನಟಿಯರಿಗೆ ಠಕ್ಕರ್ ಕೊಡ್ತಿದ್ದಾರೆ. ಶ್ರೀಲೀಲಾ (Sreeleela) ಡಿಮ್ಯಾಂಡ್ ನೋಡಿ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟುಕೊಳ್ತಿದ್ದಾರೆ ಕೋಸ್ಟಾರ್ಸ್.

    ಕಿಸ್ (Kiss) ಬೆಡಗಿಯ ಟಾಲಿವುಡ್ ಸಿನಿಮಾಗಳಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಭರ್ತಿ 10 ಸಿನಿಮಾ ಕೈಲಿಟ್ಟುಕೊಂಡಿರೋ ಶ್ರೀಲೀಲಾ ಈಗಾಗ್ಲೇ ‘ಸ್ಕಂದ’ ಹಗೂ ‘ಆದಿಕೇಶವ’ (Adikeshava) ಸಿನಿಮಾಗಳನ್ನ ಮುಗಿಸಿದ್ದಾರೆ. ಆಲ್‌ರೌಂಡರ್ ಹೀರೋಯಿನ್ ಅನ್ನಿಸ್ಕೊಳ್ಳೋಕೆ ಬೇಕಾದ ಸಕಲ ಗುಣಗಳ ಚೆಲುವೆ ಶ್ರೀಲೀಲಾ ಅದ್ಭುತ ಡ್ಯಾನ್ಸರ್. ಆದಿಕೇಶವ ಹಾಗೂ ಸ್ಕಂದ ಸಿನಿಮಾದಲ್ಲಿ ಶ್ರೀಲೀಲಾ ಪರ್ಫಾಮನ್ಸ್‌ಗೆ ಟಾಲಿವುಡ್ ಸುಸ್ತಾಗಿಹೋಗಿದೆ. ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ಅದಾ ಶರ್ಮಾಗೆ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಪರ್ಫೆಕ್ಟ್ ಡ್ಯಾನ್ಸರ್ ಶ್ರೀಲೀಲಾ ಈಗಾಗ್ಲೇ ‘ಧಮಾಕಾ’ (Dhamaka) ಸಿನಿಮಾದಲ್ಲೇ ಸಾಬೀತು ಮಾಡಿದ್ದಾರೆ. ಅದಕ್ಕೂ ಒಂದ್ ಕೈ ಮಿಗಿಲಾಗಿ ಸ್ಕಂದ ಮತ್ತು ಆದಿಕೇಶವದಲ್ಲಿ ಶ್ರೀಲೀಲಾ ಸೊಂಟ ಕುಣಿಸಿದ್ದಕ್ಕೆ ರಂಭಾ ಹಾಗೂ ನಗ್ಮಾರನ್ನ ನೆನಪಿಸಿಕೊಳ್ಳಲಾಗ್ತಿದೆ. 90ರ ದಶಕದಲ್ಲಿ ನಗ್ಮಾ-ರಂಭಾರದ್ದು ನಟನೆಯ ತೂಕ ಒಂದ್ಕಡೆಯಾದ್ರೆ, ಒಂದೇ ಒಂದು ಐಟಂ ಥರಹದ ಡ್ಯಾನ್ಸ್‌ಗೆ ಹೆಜ್ಜೆ ಹಾಕ್ಬಿಟ್ರೆ ಅದು ಇನ್ನೊಂದು ತೂಕ. ಅದೇ ಹೆಸರನ್ನ ಈಗ ಶ್ರೀಲೀಲಾ ನೆನಪಿಸಿದ್ದಾರೆ. ಅಬ್ಬಾ ಎಂಥಾ ಲೀಲೆ!

    ಒಟ್ನಲ್ಲಿ ಶ್ರೀಲೀಲಾ ಕೈಯಲ್ಲಿರೋ ಸಿನಿಮಾಗಳು ನೋಡಿದ್ರೆ ಆರೇಳು ವರ್ಷ ಆಕೆಯ ಟಚ್ ಮಾಡೋ ಹಾಗಿಲ್ಲ. ಪ್ರತಿಭಾನ್ವಿತ ನಟಿಯ ಹವಾಗೆ ತೆಲುಗಿನ ನಟಿಮಣಿಯರು ಸೈಡ್‌ಲೈನ್ ಆಗೋದು ಗ್ಯಾರೆಂಟಿ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀಲೀಲಾಗೆ ಸೆಡ್ಡು ಹೊಡೆದ ವೈಷ್ಣವಿ- ‘ಬೇಬಿ’ ನಾಯಕಿಗೆ ಬಂಪರ್ ಆಫರ್ಸ್

    ಶ್ರೀಲೀಲಾಗೆ ಸೆಡ್ಡು ಹೊಡೆದ ವೈಷ್ಣವಿ- ‘ಬೇಬಿ’ ನಾಯಕಿಗೆ ಬಂಪರ್ ಆಫರ್ಸ್

    ಟಾಲಿವುಡ್ (Tollywood) ಅಂಗಳದಲ್ಲಿ ತೆಲುಗು ಅಮ್ಮಾಯಿ ನಟಿ ವೈಷ್ಣವಿ ಚೈತನ್ಯ (Vaishnavi Chaitanya) ಹವಾ ಶುರುವಾಗಿದೆ. ‘ಬೇಬಿ’ (Baby Film) ಸಿನಿಮಾದ ಸಕ್ಸಸ್ ನಂತರ ನಾಯಕಿ ವೈಷ್ಣವಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಸಾಲು ಸಾಲು ಸಿನಿಮಾಗಳ ಭರ್ಜರಿ ಆಫರ್ ಬಾಚಿಕೊಳ್ತಿದ್ದ ನಟಿ ಶ್ರೀಲೀಲಾಗೆ ವೈಷ್ಣವಿ ಸೆಡ್ಡು ಹೊಡೆದಿದ್ದಾರೆ. ಇದನ್ನೂ ಓದಿ:ಅಮ್ಮನ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯ ಅಯ್ಯರ್

    ರಶ್ಮಿಕಾ ಮಂದಣ್ಣಗೆ (Rashmika Mandanna) ಪೈಪೋಟಿ ನೀಡಿ ಭರಾಟೆ ಬ್ಯೂಟಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಬಂಪರ್ ಅವಕಾಶಗಳನ್ನ ಬಾಚಿಕೊಳ್ತಿದ್ದರು. ಪೆಳ್ಳಿ ಸಂದಡಿ, ಧಮಾಕ (Dhamaka) ಸಿನಿಮಾದ ನಂತರ ಶ್ರೀಲೀಲಾ ನಟನೆ, ಡ್ಯಾನ್ಸ್ ನೋಡಿ ಫಿದಾ ಆದರು. ರಶ್ಮಿಕಾ ಕೈಬಿಟ್ಟ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗುವ ಮೂಲಕ ಠಕ್ಕರ್ ಕೊಟ್ಟಿದ್ರು. ಈಗ ಶ್ರೀಲೀಲಾ ಆಟಕ್ಕೆಲ್ಲಾ ಬ್ರೇಕ್ ಬೀಳುವ ಸಮಯ ಬಂತಾ ಅಂತಾ ಗುಸು ಗುಸು ಟಾಲಿವುಡ್‌ನಲ್ಲಿ ಶುರುವಾಗಿದೆ.

    ಅದಕ್ಕೆಲ್ಲಾ ಕಾರಣ ‘ಬೇಬಿ’ ಸಿನಿಮಾದ ಸಕ್ಸಸ್. ಹೌದು, ಆನಂದ ದೇವರಕೊಂಡ (Anand Devarakonda) ಮತ್ತು ವಿರಾಜ್‌ಗೆ ನಾಯಕಿಯಾಗುವ ಮೂಲಕ ವೈಷ್ಣವಿ ಚೈತನ್ಯ ಅದ್ಭುತವಾಗಿ ನಟಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ‘ಬೇಬಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿದೆ. ಸಿನಿಮಾ ಕಂಟೆಂಟ್ ಮತ್ತು ಪ್ರಮುಖ ಪಾತ್ರಧಾರಿಗಳ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ಅವರು ಅಂದಿರುವ ಅಂದಿನ ಮಾತು ನಿಜವಾಗುವ ಕಾಲ ಬಂದಿದೆ. ತೆಲುಗು ಸಿನಿಮಾರಂಗದಲ್ಲಿ ಮೊದಲು ತೆಲುಗಿನ ನಟಿಯರು ಸದ್ದು ಮಾಡುವಂತೆ ಆಗಲಿ ಎಂದಿದ್ದರು. ಅದನ್ನ ನಿರ್ಮಾಪಕರು ಕೂಡ ಕೊಂಚ ಸೀರಿಯಸ್ ಆಗಿ ತೆಗೆದುಕೊಂಡಂತಿದೆ.

    ಇತ್ತೀಚಿಗೆ ‘ಬೇಬಿ’ ಸಿನಿಮಾ ಸಕ್ಸಸ್ ಸಮಾರಂಭದಲ್ಲಿ ಅಲ್ಲು ಅರ್ಜುನ್ (Allu Arjun) ಸತ್ಯವನ್ನೇ ಹೇಳಿದ್ದಾರೆ. ಒಬ್ಬ ತೆಲುಗು ಸ್ಟಾರ್ ತೆಲುಗು ನೆಲದಲ್ಲಿ ನಿಂತು ಏನು ಮಾತಾಡಬೇಕೊ ಅದನ್ನೇ ನುಡಿದಿದ್ದಾರೆ. ಕನ್ನಡ ನಟಿಯರನ್ನು ಕಂಡರೆ ಅವರಿಗೆ ಹೊಟ್ಟೆ ಉರಿ ಇದೆ ಎನ್ನುವುದು ಸತ್ಯ. ಅದು ಈಗ ಅವರಿಗೆ ಮಾತ್ರ ಅಲ್ಲ ಇಡೀ ಟಾಲಿವುಡ್ ಸಿನಿಮಾರಂಗಕ್ಕೆ ನುಂಗಲಾರದ ತುಪ್ಪ. ಬೇರೆ ಸ್ಟಾರ್ಸ್, ನಿರ್ಮಾಪಕರು, ನಿರ್ದೇಶಕರು ಈ ಬಗ್ಗೆ ಮಾತನಾಡಿಲ್ಲ. ಅಲ್ಲು ಅರ್ಜುನ್ ಕೆಂಡದ ಮೇಲಿನ ಬೂದಿಯನ್ನು ಸರಿಸಿದ್ದಾರೆ ಅಷ್ಟೇ. ಅದೇ ಸತ್ಯ. ಈಗ ಅವರು ಹೇಳಿರುವುದು ಏನು? ನಮ್ಮ ನೆಲದಲ್ಲಿ ಕನ್ನಡದ ನಟಿಯರು, ಪರಭಾಷಾ ನಾಯಕಿಯರು ಬೆಳೆಯುತ್ತಿದ್ದಾರೆ. ಅದರ ಬದಲು ನಮ್ಮ ತೆಲುಗು ಹುಡುಗಿಯರು ಬಣ್ಣದ ಲೋಕಕ್ಕೆ ಬರಬೇಕು ಮಿಂಚಬೇಕು ಎಂದು ಮಾತನಾಡಿದ್ದರು.

    ನಮ್ಮ ಭಾಷೆ ನಮ್ಮ ನೆಲದ ಹೆಣ್ಣು ಮಕ್ಕಳು ಬೆಳೆಯಬೇಕು. ಉಳಿಯಬೇಕು. ಕನ್ನಡ ನಟಿಯರ ದರ್ಬಾರ್ ಇದೇ ರೀತಿ ಮುಂದುವರೆದರೆ ನಮ್ಮ ಹುಡುಗಿಯರಿಗೆ ಉಳಿಗಾಲ ಇಲ್ಲ ಎನ್ನುವ ಕಾಳಜಿಯೂ ಇದರಲ್ಲಿ ಸೇರಿದೆ. ಫೈನಲಿ ಇಷ್ಟೆಲ್ಲ ಕಾರಣ ಇಟ್ಟುಕೊಂಡು ಅಲ್ಲು ಅರ್ಜುನ್ ಬಾಯಿ ಬಿಟ್ಟಿದ್ದರು.

    ಶ್ರೀಲೀಲಾ ಹತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಡೇಟ್ಸ್ ಸಿಗದೇ ಕೆಲ ನಿರ್ಮಾಪಕರು ವೈಷ್ಣವಿ ಚೈತನ್ಯ ಅವರತ್ತ ಮುಖ ಮಾಡಿದ್ದಾರೆ. ಬೇಬಿ ಸಿನಿಮಾದಲ್ಲಿ ವೈಷ್ಣವಿ ಅವರನ್ನ ನೋಡಿ ಪಡ್ಡೆಹುಡುಗರು ಬೋಲ್ಡ್ ಆಗಿದ್ದಾರೆ. ಬೇಬಿ ನಾಯಕಿಗೆ ಈಗ ಭರ್ಜರಿ ಅವಕಾಶ ಸಿಕ್ತಿದೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ವೈಷ್ಣವಿ ಕಿರುಚಿತ್ರಗಳ ಮೂಲಕ ಮೊದಲಿಗೆ ಕ್ಯಾಮೆರಾ ಫೇಸ್ ಮಾಡಿದ್ದರು. ಕಿರುಚಿತ್ರದಿಂದ ದೊಡ್ಡ ಚಿತ್ರಕ್ಕೆ ಕೆಲಸ ಮಾಡಲು ಎಂಟು ವರ್ಷ ಬೇಕಾಯಿತು. ವೈಷ್ಣವಿ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಂನಲ್ಲಿ’ ಅಲ್ಲು ಅರ್ಜುನ್ ಅವರ ತಂಗಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಅಭಿನಯಕ್ಕೆ ಮೆಚ್ಚುಗೆ ಬಂದಿತ್ತು.

    ‘ಬೇಬಿ’ ಸಿನಿಮಾದ ಯಶಸ್ಸಿನ ನಂತರ ವೈಷ್ಣವಿ ಚೈತನ್ಯ ಅವರು ರಾಮ್ ಪೊತಿನೇನಿ-ಪುರಿ ಜಗನ್ನಾಥ್ ಕಾಂಬೋ ಸಿನಿಮಾಗೆ ನಾಯಕಿಯಾಗಿದ್ದಾರೆ. ಯುವ ನಟರ ಸಿನಿಮಾಗಳಿಗೆ ಬೇಬಿ ನಾಯಕಿ ಬುಕ್ ಆಗ್ತಿದ್ದಾರೆ. ಈ ಮೂಲಕ ಶ್ರೀಲೀಲಾಗೆ ವೈಷ್ಣವಿ ಸೆಡ್ಡು ಹೊಡೆದಿದ್ದಾರೆ. ಇನ್ಮುಂದೆ ಶ್ರೀಲೀಲಾ- ವೈಷ್ಣವಿ ಜಟಾಪಟಿ ಹೇಗಿರಲಿದೆ, ಏನಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]